Oppanna.com

2014ನೇ ಸಾಲಿನ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಿತ ಕತೆ “ಪಾರಿಜಾತ”

ಬರದೋರು :   ವಿಜಯತ್ತೆ    on   21/12/2014    3 ಒಪ್ಪಂಗೊ

Sindhu2014 ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಿತ ಕಥೆ.

ಲೇಖಿಕೆಃ-ಶ್ರೀಮತಿ ಸಿಂಧು ರಾವ್, ಬೆಂಗಳೂರು,

ಯಾವತ್ತೂ ಕರಕರೆ ಮಾಡದ, ಗೌಂಜು ಅಂಬದೆ ಗೊತ್ತಿಲ್ದೆ ಇಪ್ಪ ಪಾವನಿಯ ಕಣ್ಣಲ್ಲಿ ನೀರು ಸುರೀತಾನೆ ಇದ್ದು.ಮಲಗಿಪ್ಪ ಅಲ್ಲೆ ಶಣ್ಣಕೆ ಮುಲುಗಾಟ. ಆ ಕಡೆ ಮೂಲ್ಯಾಗೆ ಫಳ್ಳಗೆ ಮಿಂಚ್ವ ಎರಡು ಕಣ್ಗಳಿಗೆ ಈ ನಳ್ಳಾಟದ ಸೂಚನೆ ಸಿಕ್ಕಿದ್ದೇಯ ಹೊಟ್ಯಲ್ಲಾ ತೊಳಸಕ್ಕೆ ಹೊಂಡ್ತು.
ಪಾವನಿಯ ಬೆನ್ಹುರಿಯಾಗೆ ಹರಡ್ತಾ ಇಪ್ಪ ನೊಂವು ಶ್ರಾವಣಿಗೆ ಹಂಗೇ ಗೊತ್ತಾಗೋತು.ಅವಳಿಗ್ ಗೊತ್ತಿದ್ದು.ಇನ್ ಸ್ವಲ್ಪ ಹೊತ್ತಿಗೆ ಅವ್ಳಿಗೆ ಹಿಂಗೆ ಸುಮ್ನೆ ಮಲಗಲಾದಿಲ್ಲೆ.ಹೂಂಕರ್ಸ್ಲೇಬೇಕು.ಎದ್ ನಿಂತ್ರೇ ಅನ್ಕೂಲ. ಆದ್ರೆ ಅದನ್ನ ತಾಂ ಹೇಳದ್ ಹೆಂಗೆ.ಗೊತ್ತಿಲ್ಲೆ.ಅವಳು ಹತ್ರಕ್ಕೂ ಇಲ್ಲೆ.ಆದ್ರೆ ಸುಮ್ನೆ ನೋಡ್ಕ್ಯಂಡು ನಿಂತ್ಗಂಬ ಹಂಗೂ ಇಲ್ಲೆ.ಹೊರ್ಗಡೆ ಭೋರು ಮಳೆ.ಆಕಾಶ್ವೆ ಹರ್ಕಂಡ್ ಬೀಳ್ತನ ಕಾಣ್ತು.ಒಂದೊಂದ್ಸಲ ಜಡಿಯಲೆ ಶುರುವಾದ್ರೆ ಇವತ್ತು ಕಳ್ದು ನಾಳೆ ಬಿಸ್ಲು ಮುಳ್ಗ ತಂಕ ಹೊಯ್ದ್ರೂ ಹೊಯ್ತೆ.ಅವತ್ತೆಲ್ಲ ಎತ್ಲಾಗೂ ಹೋಗಾ ಹಂಗೇ ಇಲ್ಲೆ.ಇಲ್ಲೆ ಮೂಲೆನೇ ಗತಿ.
ನೊಂವ್ವು ಕೆರಳಿ ಅವಳು ಒದ್ದಾಡಿ ಗಲಾಟೆ ಮಾಡಿದ್ ಮ್ಯಾಲಷ್ಟೇ ಒಳ್ಗಡೆ ಮಲ್ಗಿಪ್ಪ ಜನಕ್ಕೆ ಅವಳ ಗತಿ ಗೊತ್ತಾಗದು ಅಂತ ಶ್ರಾವಣಿಗೆ ಗೊತ್ತಿದ್ದು.ಈಗಿನ್ನೂ ಎರಡ್ ತಿಂಗಳಿತ್ಲಾಗೆ ತಂಗಾದ ಅವಸ್ಥೆ ಅವಳಿಗೆ ಮರ್ತೋಗದಿಲ್ಲೆ. ಒಂದರ್ಧ ಗಂಟೆ ಮುಂಚೇ, ಬರೀ ಒಂದರ್ಧ ಗಂಟೆ ಮುಂಚಿಗೆ ಡಾಕ್ಟ್ರು ಬಂದಿದ್ರೆ ಹಿಂಗಾಗ್ತಿರ್ಲೆ ಅಂತ ಮನೇವೆಲ್ಲ ಮಾತಾಡ್ಕ್ಯಂಡಿದ್ದು ಕೇಳಿಸ್ಕಂಡ್ ಮೇಲೆ ಕಳ್ಕಂಡ್ ನೋವು ಇನ್ನೂ ಚೂರು ಹೆಚ್ಚಾಗೆ ನೋಯಿಸ್ತಿತ್ತು. ಅದು ಇವತ್ತು ಪಾವನಿಗೆ ಆಗ್ಲಾಗ. ಎಂತಾರು ಆಗ್ಲಿ ಅಂದ್ಕಂಡವಳೇ ಅಡ್ಗೆ ಮನೆ ಕಡಿಗೆ ಮುಖ ಮಾಡಿ ಜೋರಾಗಿ ಹೂಂಕಾರ ಹಾಕೇ ಬಿಟ್ಟ. ಆ ಶಬುದಕ್ಕೆ ಅವಳ ಮೈಯೆಲ್ಲ ಬಿಗ್ ಕ್ಕಂಡೇ ಹೋತು.ಅಕ್ಕ ಪಕ್ಕದಾಗೆ ಸುಮ್ನೆ ಮಲ್ಕ್ಯಂಡಿದ್ದವೆಲ್ಲ ಒಂದ್ಸಲ ಗಾಬ್ರಿಯಾಗಿ ಬಾಲ ಬಡ್ದ. ಈ ಕೂಗು ಮಳೆ ದಾಟ್ಕ್ಯಂಡು ಮನೆ ಒಳಕ್ಕೆ ಹೊಗ್ತೋ ಇಲ್ಯೋ ಗೊತ್ತಾಗಲ್ಯಲ ಅಂದಕತ್ತಾ ಇತ್ತು ಶ್ರಾವಣಿ. ಆದ್ರೆ ಪಾವನಿ ಕಡಿಗೆ ನೋಡಿದ್ ಕೂಡ್ಲೇ ಈ ಅಂದಾಜು ಎತ್ಲಾಗಾರು ಹಾಳಾಗ್ ಹೋಗ್ಲಿ ಅಂದ್ ಕಂಡು ಮತ್ತೆ ಮತ್ತೆ ಹೂಂಕರಿಸಕ್ಕೆ ಶುರು ಮಾಡ್ಕ್ಯಂಡ. ಈಗ ಮಳೇಲಿ ಸೊಪ್ಪಿನ ಕಾವಲ್ಲೆ ಬೆಚ್ಚಗೆ ಮಕ್ಕಂಡಿದ್ದ ಪುಟ್ ಪುಟಾಣಿ ಹನುಮ, ತುಳಸಿ, ಅರುಂಧತಿ, ಸುಕನ್ಯ ಎಲ್ಲವೂ ಕೂಗಕ್ಕೆ ಶುರು ಮಾಡ್ಜ. ಈ ಕೂಗಿನ ಆವುಟ ಹೆಚ್ಚಾಗ ಹೊತ್ತಿಗೆ ಅಲ್ಲಿ ಪಾವನಿ ತನ್ನ ನಾಕೂ ಕಾಲೂ ನೀಡ್ಕ್ಯಳಕ್ಕೆ ಶುರು ಮಾಡ್ಚು. ಬೆನ್ನು ಹುರಿಯಾಗೆ ಹರಡ್ಕ್ಯೋತಿದ್ದಿದ್ ನೊಂವ್ವು ಈಗ ಅಲ್ಲೆ ಒಂದೇ ಕಡಿಗೆ ಹಾಕ್ಯಂಡು ಒತ್ತಲೆ ಶುರು ಮಾಡಿದ್ದು.ಕಣ್ಣಾಗ ನೀರು ಸುರಿಯದು ನಿಂತೋಯ್ದು.ಆದ್ರೆ ಮೂಗಾಗೆ ಬಾಯಾಗೆ ಇಳಿತಾ ಇದ್ದು.ಭುಸುಗುಡಕ್ಕೆ ಶುರುವಾಯ್ದು.ಅಷ್ಟೊತ್ತಿಗೆ ಅಡಿಗೆ ಮನೆ ಹಿಂದಿನ್ ಲಾಯದ ಬಾಗ್ಲು ಕಿರ್ರಂತು.ಒಳಾಗಡೆಯಿಂದನೂ ಹಿಂದಿನ್ ತಂಕ್ಲೂ ಲೈಟಿನ ಬೆಳಕು ಹರಕಂಡ್ ಬಂತು.ಕೊಟ್ಗೆ ಮನೆ ಕಿಟಕೀಲಿ ನೋಡಾ ಶ್ರಾವಣಿಗೆ ಲಾಯದ ಬಾಗ್ಲಾಗೆ ಬ್ಯಾಟ್ರಿ ಕಯ್ಯಾಗೆ ಹಿಡ್ಕಂಡು ಸ್ವೆಟರ್ ಹಾಕ್ಯಂಡು ಬೆಚ್ಚಗೆ ನಿಂತ್ಕಂಡ ಶ್ರೀಮತಕ್ಕನ ಆಕಾರ ಕಂಡ್ಚು.ಈಗ ಹೂಂಕಾರದ ಆವುಟ ಕಡ್ಮೆ ಮಾಡಿ ಬೇಡಿಕೆಯ ಕೂ ಹಾಕಕ್ಕೆ ಶುರು ಮಾಡ್ಚು ಶ್ರಾವಣಿ. ಅದ್ ಕೇಳ್ತಿದ್ದಂಗೆ ಶ್ರೀಮತಕ್ಕ ಅಲ್ಲೇ ಬಾಗ್ಲಾಗೆ ನಿಂತ್ಕಂಡೆ..ಕೂಯ್… ಕೇಳ್ಚಾ… ಪಾವ್ನೀಗೆ ಬ್ಯಾನೆ ಶುರ್ವಾದಂಗೆ ಕಾಣ್ತು.ಆ ವೆಟ್ನೀ ಡಾಕ್ಟ್ರ ಮೊಬಾಯಿಲಿಗೊಂದು ಫೋನ್ ಹಚ್ಚಿಕ್ಕಿ ನಿಂಗವು ಬಂದು ಇಲ್ಲಿ ನಿಂತ್ಕಳಿ.ಕೇಳ್ಚಾ… ಅಂತ ಹೇಳಿಕ್ಕೆ ಕೊಟ್ಟಿಗೆ ಮನಿಗ್ ಬಂದು ಪಾವ್ನಿ ಹತ್ರ ಕುಂತ್ಕಂಡು ಗಂಗೆದೊಗ್ಲಿಗೆ ಕೈ ಹಾಕಿ ನೀವಿದ್ದೂ ನೀವಿದ್ದೇ.ಪಾವ್ನೀ ಮಗ್ಳೇ ಆಗೋತ್ತು.ಡಾಕ್ಟ್ರು ಬಂದೇ ಬಿಟ ಅಕಾ, ಅಳಡ.ನೋಯ್ತನೇ… ಇಲ್ನೋಡು ಆಂ ಇಲ್ಲೆ ಇದ್ದಿ.ಇಕಾ ಚೂರು ನೀರು ಸೊರ್ಗುಡುಸು. ಸೇರದಿಲ್ಲೆ ಗೊತ್ತಿದ್ದು ಆದ್ರೂ ಚೂರ್ ತಗಾ, ಹೇಳಿದ್ ಕೇಳ್ತ್ಯಾ ಇಲ್ಯಾ… ತಗ ಮಗಾ..ನೋವು ಇನ್ ಸ್ವಲ್ಪೊತ್ತಿಗೆ ಹೋಗ್ತು. ಪುಟ್ಟಿ ಕರ ಬತ್ತಲೆ..ಹೇಳಿ ಮಾತಾಡಿಸ್ಕ್ಯೋತ ಪಾವ್ನಿಯ ಹೊಟ್ಟೆ ಸವರಿ ಸವರಿ ತಲೆ ಎಲ್ಲಿದ್ದು, ಕಾಲು ಎಲ್ಲಿದ್ದು, ಎಲ್ಲ ನೋಡ್ಕ್ಯೋತ ಮುಟ್ತಾ ಇದ್ದ. ಅಷ್ಟೊತ್ತಿಗೆ ರಾಘಣ್ಣನೂ ಬಂದಾತು.ಡಾಕ್ಟ್ರು ಬತ್ವಡ. ಮಳೆ ಆದ್ರೂ ಅಡ್ಡಿಲ್ಲೆ ಬತ್ತಿ ಹೇಳ್ದ. ಗನಾ ಡಾಕ್ಟ್ರೇ ಅಂವ. ಶ್ರೀಮ್ತೀ..ನೀ ಹೋಗಿ ಹಂಡೆಲಿಂದ ಒಂದ್ ಬಕೀಟು ಬಿಸಿ ನೀರು ತಗಂಬಾ ನೊಡನ. ಪಾವ್ನೀ..ಎಂತೇ.ಸ್ವಲ್ಪ ಹೊತ್ತೇ ಮಾರಾಯ್ತೀ.ಪುಟ್ಟಿ ಕರ ಬಂದ್ ಮೇಲೆ ನೋವೆಲ್ಲ ಹೋಗೇ ಹೋತು.ಅಂತ ಮುಟ್ಟಿ ಮುಟ್ತಿ ಮಾತಾಡಿಸಕ್ಕೆ ಶುರು ಮಾಡ್ದ. ಶ್ರಾವಣಿಗೆ ಹೊಟ್ಟೆಯೊಳಗೆಲ್ಲ ಗುಡುಗುಡು.ನಿಂತಲ್ಲಿ ನಿಲ್ಲಕ್ಕೆ ಆಗ್ತಾ ಇಲ್ಲೆ.ಒಂದೆರಡ್ ಸಲ ಕೊಂಬನ್ನ ಮುಂದ್ಗಡೆ ಕಟ್ಟೆಗೆ ಸಮದೂ ಸಮ್ದ. ರಾಘಣ್ಣ. ಶ್ರಾವ್ಣೀ ನಿಂದ್ ಎಂತಕೆ ಗಲಾಟೇ?ಒಹೋ ಗೆಳತೀಗೆ ನೊಂವ್ವಾತು ಅಂತ್ಲೋ.ಅದ್ಕೇ ಹೇಳದು ಜಾನ್ವಾರೇ ಅಡ್ಡಿಲ್ಲೆ ಮನ್ಶರಗಿಂತಾ ಅಂತ. ಹೇಳ್ಕ್ಯೋತ ಪಾವ್ನಿಯ ಬೆನ್ನು ಸವರ್ತಾ ನಿಂತಿದ್ದ. ಶ್ರೀಮತಕ್ಕ ನೀರು ತಗಂಡ್ ಬಂತು.ಮಳೇಲಿ ಬಿಸಿಬಿಸಿ ನೀರಿನ ಬಕೆಟ್ಟಿನಿಂದ ಹಬೆ ಮೇಲೇರ್ತಾ ಇದ್ದು.ಶ್ರೀಮತಕ್ಕನೂ ಶ್ರಾವಣಿ ಕಡಿಗೆ ನೋಡಿದ್ದೆ ಹತ್ರ ಬಂದು ಒಂದ್ಸಲ ಅವ್ಳ ಬೆನ್ ಮೇಲೂ ಕೈಯಾಡಿಸ್ಚು.ಅಷ್ಟಲ್ದೆ ಹೆಣ್ಣು ಹೇಳ್ತ್ವನಾ ಹಂಗರೆ, ಅವಳಿಗೆ ಅವಳ ಕರದ್ ನೆನ್ಪಾಗ್ತಾ ಇದ್ದು ಕಾಣ್ಚು.ಎಂತ ಮಾಡದು ಶ್ರಾವ್ಣೀ ನಿನ್ ಕರ ಉಳಸ್ಕ್ಯಳಕ್ಕೇ ಆಗಲ್ಯಲೇ ಮಗಾ.ಹೆಂಗೋ ನೀ ಉಳ್ದಿದ್ದೇ ಹೆಚ್ಚು ಹೇಳಿ ಹೇಳ್ದ ಡಾಕ್ಟ್ರೂ.ಅವು ಹೇಳಿದ್ದ್ಕಿಂತ ಮುಂಚೆ ಆದ್ರೆ ನಂಗನಾರೂ ಎಂತ ಮಾಡದು.ಅದೇ ಟೈಮಾಗೆ ಶಣ್ಣಮ್ಮಿ ಕೂಶಿಂದು ನಾಮಕರಣ ಬ್ಯಾರೆ ಬಂಧೋಗಿ, ನಿನ್ ಮೇಲೆ ನಿಗಾನೂ ಮಾಡಕ್ಕಾಗಲ್ಲೆ ಎಂಗವಕ್ಕೆ.ಕ್ಷಮುಸ್ ಬುಡೇ ಶ್ರಾವ್ಣಿ ಅಂತ ಹೇಳಾ ಹೊತ್ತಿಗೆ ಶ್ರೀಮತಕ್ಕನ್ ಕಣ್ಣಾಗೆ ನೀರೇ ಬಂತು.ಇದೆಲ್ಲ ಗೊತ್ತಿದ್ದು ಶ್ರಾವಣಿಗೆ.ಮಕ್ಳ ಹಂಗೇ ನೋಡ್ಕ್ಯಳ ಯಜಮಾನ ಯಜಮಾನಿ ಇರದು ಹೌದು.ಆದ್ರೆ ಹೊಟ್ಟೆಲಿ ಹುಟ್ಟಿದ್ ಮಕ್ಳು ಮನ್ಶಾಂಗೆ ಯಾವಗ್ಳು ಮುಂದೆ.ಮನ್ಶಂಗೆಂತು ಜಾನವಾರಕ್ಕೂ ಅಷ್ಟೇಯ ಹಂಗಾಗೆ ಅಲ್ದ. ಪಟ್ರೆ ಒಡ್ಕಂಡು ಹುಟ್ಟಿದ ಕರ ಇವತ್ತಿಗೂ ನೆನಪಾದ್ರೆ ರುಚಿರುಚಿಯಾಗಿ ಮುಂದಿಟ್ಟ ಅಕ್ಕಚ್ಚಿನ ಬಾನಿ ಕಡೆ ಶ್ರಾವಣಿ ತಿರ್ಗದೂ ಇಲ್ಲೆ. ಈಗ್ಲೂ ಪಾವನಿಯ ನೋವು ನೋಡ್ತಾ ಇದ್ರೆ ಶ್ರಾವಣಿಗೆ ತನ್ನ ಹೊಟ್ಟೆಯ ನೋವೇ ಮತ್ತೆ ಮರುಕಳ್ಶಿದಂಗೆ ಆಗಿರದು ಮಾತ್ರ ಮನ್ಶರಿಗೂ ಮೀರಿದ ನಿಜ. ಅವ್ಳ ಗಂಗೆದೊಗಲಲ್ಲಿ ಕೈಯಾಡಿಸ್ತ ನಿಂತ್ಕಂಡ ಶ್ರೀಮತಕ್ಕನ ಕಿವಿಗೆ ಡಾಕ್ಟ್ರ ಬೈಕಿನ ಸದ್ದು ಬಿದ್ದೇ ಬಿತ್ತು. ತರಾತುರಿಲಿ ಓಡ್ಕ್ಯಂಡು ಹೋಗಿ ವಾಸ್ತು ಬಾಗ್ಲು ತೆಗ್ದು, ಚಿಟ್ಟೆ ಬಾಗ್ಲನ್ನ ಕಿರ್ಗುಡಿಸಿ ತೆಗ್ದ. ಅಂಗಳಕ್ಕೆ ಹಾಕಿದ್ ಫ್ಲಡ್ ಲೈಟಲ್ಲಿ ಡಾಕ್ಟ್ರು ಎಲ್ಲೂ ಜಾರ್ ಬೀಳ್ದೆ ಅಡಿಕೆ ಪಟ್ಟೆ ದಾರೀಲಿ ಹುಷಾರಾಗಿ ಬಂದ. ಅವರ ರೈನ್ ಕೋಟ್ ತಾನೇ ಒಂದು ಮೋಡ್ವೇನೋ ಅಂಬಾ ತರ ನೀರು ಸುರುಸ್ತಿತ್ತು. ಅದ್ನ ಅಲ್ಲೆ ಬಾಗ್ಲ ಬದೀಲಿ ಇಪ್ಪ ಗೂಟಕ್ಕೆ ನೇತ್ ಹಾಕಿ ಶ್ರೀಮತಕ್ಕನ ಹಿಂದ್ಕೆ ತಲೆ ತಗ್ಗ್ಸ್ ಕ್ಯಂಡು ಒಳಗ್ ಬಂದ. ಹಿತ್ಲ್ ಬಾಗ್ಲು ದಾಟಾವರೀಗೂ ಡಾಕ್ಟ್ರು ತಲೆ ಎತ್ತಿದ್ರೆ ಕೇಳಿ.ಮುಂಚ್ ಮುಂಚೆ ಬಂದಾಗೆಲ್ಲ ತಲೆ ಎತ್ತಿ ನಡ್ದು ಹೊಡಸ್ಕ್ಯಂಡ ಎಲ್ಲ ಬಾಗ್ಲ ಪಟ್ಟೇನೂ ಡಾಕ್ಟ್ರಿಗೆ ಚೆನಾಗ್ ನೆನ್ಪಿತ್ತು.ಆ ನೋವಂತೂ ಮೂರ್ ಮೂರ್ ದಿನ ಇದ್ದಿತ್ತು. ಈಗೀಗ ಡಾಕ್ಟ್ರು ಈ ದೊಡ್ ದೊಡ್ಡ ಹಳ್ಳೀ ಮನೆಒಳ್ಗೆ ಓಡಾಡಲೆ ಹುಶಾರಾಯ್ದ. ಮುಂದ್ಗಡೆ ಬಾಗ್ಲಾಗೆ ತಗ್ಸಿದ್ ತಲೇನ ಹಿತ್ಲಕಡೆ ಬಾಗ್ಲು ದಾಟಿ ಕೊಟ್ಗೆ ವರಿಗೆ ಬರಾವರಿಗೂ ಎತ್ಲಾಗ ಅನ್ನದು ಅವರು ಕಲ್ತ ಪಾಠ.
ಕೊಟ್ಗೆ ಮನೆ ಒಳ್ಗೆ ಇಪ್ಪ ಲೈಟು ಸಾಕಾಗದಿಲ್ಲೆ ಅಂತ ಆಷ್ಟೋತ್ತಿಗೆ ರಾಘಣ್ಣ ಒಂದು ಎಮರ್ಜೆನ್ಸಿ ಲ್ಯಾಂಪ್ನೂ ತಂದಿಟ್ಟಿದ್ದ. ಡಾಕ್ಟ್ರು ಬಂದವ್ರೆ ಪಾವ್ನೀನ ನೋಡಿ ಒಳ್ಳೆ ಕೆಲ್ಸ ಮಾಡಿದ್ರಿ ರಾಘಣ್ಣ, ಇನ್ ಟೈಮಿಗೆ ಕರ್ಸಿದೀರಿ ಅಂದ. ಏಳು ಏಳು ಅಂತಿದ್ ಹಾಂಗೆ ಅಲ್ಲೀವರಿಗೆ ಮಲಕ್ಯಂಡಿದ್ದ ಪಾವನಿ ದೇವ್ರ ಹಾಂಗೆ ಎದ್ ನಿಂತೇಬಿಡ್ಚು. ಡಾಕ್ಟ್ರು ಅವ್ರ ಕೆಲ್ಸ ಅವ್ರು ಶುರು ಮಾಡ್ದ. ಶ್ರೀಮ್ತಕ್ಕ ರಾಘಣ್ಣ ಇಬ್ರೂ ಕೈನೆರ್ವಿಗೆ ಇದ್ದೇ ಇದ್ದ. ಒಂದೆರಡು ನಿಮ್ಶದಾಗೆ ಸುರ್ಳೀತ ಕರ ಹೊರ್ಗೇ ಬಂತು.ಗುಳ್ ಗುಳ್ಳೆಯಾಗಿ ಮಾಸೂ ಬಂತು. ಹಿಡ್ಕಂಡ್ರೆ ಜಾರಿ ಬಿದೋಗ್ತಿದ್ದ ಕರನ ಶ್ರೀಮ್ತಕ್ಕ ಸಂಭ್ರಮದಿಂದ ಬಿಸ್ನೀರಾಗೆ ತೊಳ್ದು ಬೈಹುಲ್ ಹಾಸ್ಗೆ ಮೇಲೆ ಹಾಕ್ದ. ಪಾವ್ನಿ ಸುಸ್ತಾಗಿ ಕೆಳಗೆ ಬಿದ್ಕಂಡು ಕರಾನ ಎರ್ಡ್ ಸಲ ನೆಕ್ಕಿ, ಕಣ್ ಮುಚ್ಚ್ ಕ್ಯಂಡು ಕೂರ್ಚು. ಅದಕ್ಕೆ ಮುಂಚೆ ಶ್ರಾವ್ಣಿ ಕಡಿಗ್ ತಿರ್ಗಿ ಒಂದ್ಸಲ ಅಂಬಾ ಅನ್ನಲೆ ಮರೆಯಲ್ಲೆ. ಶ್ರಾವ್ಣಿಗೆ ಈಗ ಮತ್ತೆ ಗುಡುಗುಡು ಹೊಟ್ಟೇಲೆಲ್ಲ. ಪಾವ್ನಿಗೆ ಕರ ಹುಟ್ಟಾವರಿಗೂ ತಾಯಿ ಮೇಲಿನ್ ನೆದರು ಈಗ ಪುಟ್ಟೀ ಕರದ್ ಮೇಲ್ ಬಿದ್ ಮೇಲೆ ತನ್ ಹೊಟ್ಟೇ ಸಂಕಟ ದುಪ್ಪಟ್ಟಾಗಿ ವಾಪಸ್ಸಾತು. ಪಾವ್ನಿಯ ನೋವೇ ತನ್ನ ನೊಂವ್ವೇನೋ ಅನ್ನ ಹಂಗೆ ದುಸಮುಸ ಮಾಡ್ತಾ ಇದ್ದಿದ್ದ ಶ್ರಾವಣೀನ ಡಾಕ್ಟರೂ ನೋಡಿದ್ದೇ ಹತ್ರ ಬಂದ್ರೆ ಹಾಯಕ್ಕೇ ಹೋತು.ಡಾಕ್ಟ್ರು ಪಾಪ ಒಳ್ಳೇ ಜನ.ತಪ್ಪಾಯ್ತು ಅಮ್ಮಾ.ಆದ್ರೆ ಇನ್ನೊಂದ್ ಸ್ವಲ್ಪ ಮುಂಚೆ ಕರ್ಸಿದ್ರೆ ಹೆಂಗಾರೂ ಕರಿನ ಉಳ್ಸಬೋದಿತ್ತು.ನಿನ್ ಉಳಸ್ಕ್ಯಂಡಿದ್ದೂ ಪವಾಡ ಅಂದವ್ರೇ ಕೊಟ್ಗೆ ಹೊರಗೆ ನೆಡ್ದೇ ಬುಟ. ಅಷ್ಟೊತ್ತಿಗೆ ಕತ್ಲು ಹರಕಂಡು ಬೆಳಕಿನ ಕೋಲು ಬಂದೇ ಬಂತು.ಜಾರಿ ಜಾರಿ ಬೀಳ್ಕ್ಯೋತ ಪುಟ್ಟಿ ಕರ ಎದ್ ನಿಂತಗಂಡು ತಾಯಿ ಮೊಲೆಹಾಲು ಹುಡುಕ್ತು.ಶ್ರೀಮ್ತಕ್ಕ ಬಂದು ಬಾರೇ ಪುಟ್ಟಕ್ಕಾ ಎಂತ ಹೆಸ್ರಿಡವಾತೇ ಮಾರಾಯ್ತೀ ನಿಂಗೆ.ಇಲ್ನೋಡು, ಇಲ್ಲಿದ್ದು ಮುಕ್ಕು ತಗಾ ಅಂತ ಒಂದು ತೊಟ್ಟಲ್ಲಿ ಸೊರ ಹಿಡ್ದು ಕೊಟ್ರೆ ಪುಟ್ಟಿಕರ ತಿರ್ಗಿ ನೋಡಿದ್ರೆ ಕೇಳಿ.ಹಾಲು ಸೋರಿಸ್ಕ್ಯೋತ ಅದು ಕುಡಿಯಾ ಚಂದ ನೋಡಲೆ ಎರಡು ಕಣ್ಣು ಸಾಲದು.ಪಾವ್ನಿ ಸುಮ್ನೆ ಆ ಕರದ ಹಿಂಬದಿನ ನೆಕ್ಕಿ ನೆಕ್ಕಿ ಚೊಕ್ಕ ಮಾಡ್ತಾ ನಿಂತಿದ್ದು.ಶ್ರಾವಣಿ ಮಾತ್ರಾ ಜೋರಾಗೀ ಹೂಂಕರ್ಸವು ಅನ್ಸಿದ್ರೂ ಹೊಟ್ಟೇಲಿ ಒತ್ತಿ ಹಿಡ್ಕಂಡು ಶಣ್ಣಕೆ ಅಂಬಾ ಅನ್ಕೋತ ನಿತ್ತಿದ್ದು.
ಶ್ರೀಮ್ತಕ್ಕ ಬಾಣಂತಿ ಕೆಲ್ಸ್ ಮುಗ್ಸಿದವ್ಳೇ ಬ್ಯಾರೆ ದನದ್ದು ಹಾಲು ಕರ್ಯೋ ಕೆಲ್ಸಕ್ಕೆ ಶುರು ಮಾಡ್ಕ್ಯಂಡ. ಸುಮ್ಮನೆ ಮಲ್ಗಿದ್ದ ಪುಟ್ ಕರ ರಾಜೀವನ್ನ ಮುದ್ ಮಾಡಿ ಎಬ್ಸಿ ಅವ್ರಮ್ಮನ ಹಿಂದ್ಗಡೆ ಬಿಟ್ಟ. ಒಂದೆರಡು ಸಲ ಮುಕ್ಕಿದ್ನೋ ಇಲ್ಯೋ ಅತ್ತೆ ಅವ್ನ ಕುತ್ತಿಗೆ ಕಣ್ಣಿ ಎಳ್ದು ಆಚೆಕಡೆ ತಾಯಿ ಮುಂದ್ಕೆ ನಿಲ್ಸಿ ತಂಬಿಗೆ ಹಿಡ್ದು ಕೂತೇ ಬುಟ. ತಂಬ್ಗಿಗೆ ಹಚ್ ಕ್ಯಂಡಿದ್ ತುಪ್ಪನ ಹೆಬ್ಬೆಟ್ನಾಗೆ ಮುಟ್ಕ್ಯಂಡು ಸೊರಸೊರನೆ ನೊರೆ ನೊರೆ ಹಾಲು ಕರ್ದು ತಂಬಿಗೆ ಗಟ್ಲೆ ತುಂಬ್ತಾ ಇದ್ರೆ ರಾಜೀವನ ಹೊಟ್ಟೆ ಚುರುಗುಡ್ತಾ ಇದ್ದು. ತಾಯಿ ಎಷ್ಟೇ ನೆಕ್ಕಿ ಸಮಾಧಾನ ಮಾಡಿದ್ರೂ ಅಂವ ಸುಮ್ನಾಗ. ಕೊನೀಗೆ, ಒಂದ್ ಮಲೆ ಹಾಲು ಬಿಟ್ಟಿದ್ನೋ ಮಾರಾಯಾ ಅಷ್ಟ್ನೂ ಕರ್ಯಲ್ಲೆ ಹೇಳ್ಕೋತ ಶ್ರೀಮ್ತಕ್ಕ ಅಂವನ್ನ ಮತ್ತೆ ಅಮ್ಮನ ಮಲಿಗೆ ಕೊಡದೆ ತಡ ಅಂವ ಅಚ್ಚೀಚಿಗೆ ಮಾಡ್ದೆ ಕುಡ್ದ.
ಇದ್ನೆಲ್ಲ ಎಂಗೆ ನೋಡಲೆ ಸಿಕ್ಕಿದ್ದು ಈ ಸಲ ದೀಪಾವಳಿ ಹಬ್ಬಕ್ಕೆ ಮೊದ್ಲೆ ಎರಡ್ ದಿನ ರಜ ಜಾಸ್ತಿ ತಗಂಡು ಸಂಪಿಗೆಸರದ ಸ್ವಾದರತ್ತೆ ಮನಿಗೆ ಹೋಗಿದ್ದಕ್ಕೆ.ಈ ಬೆಂಗಳೂರ್ ಪ್ಯಾಟೆ ಸೇರಿದ್ ಮೇಲೆ ಕೂಸೆ, ಅತ್ತೆ ಮನಿಗೆ ಬರದೇ ನಿತ್ತೋತಲೇ ಅಂತ ಯಾವಾಗ್ಲೂ ಬೈಸ್ಕ್ಯಂಡು ಬೈಸ್ಕ್ಯಂಡು ಸಾಕಾಗಿ ಹೋಗಿತ್ತು ಎಂಗೂ.ಆನಾರೂ ಎಂತ ಮಾಡವು.ಶಿಗ ಎರ್ಡ್ ದಿನ ರಜದಾಗೆ ಊರಿಗೆ ಬಂದ್ರೆ ಅಪ್ಪ-ಅಮ್ಮನ್ ಹತ್ರ ಮಾತಾಡಲೆ ತಮ್ಮನ್ ಜೊತಿಗೆ ಪ್ಯಾಟೆ ಸುತ್ತಲೆ, ಅಣ್ಣನ್ ಹಿಂದೆ ಗದ್ದೆತ್ವಾಟ ಅಲ್ಯಲೆ ಟೈಮಿರದಿಲ್ಲೆ.ಈಗೊಂದ್ವರ್ಷದಿಂದ ಅತ್ತಿಗೆ ಬೇರೆ ಇದ್ದು.ಊರಿಗೆ ಬಂದ್ ಕೂಡ್ಲೆ ಎಲ್ರೂ ಎತ್ಲಾಗರೂ ಹೊಂಡಲೆ ಕಾಯ್ತಾ ಇರ್ತ. ಅಬ್ಬಿ, ಬೆಟ್ಟ, ದೇವಸ್ಥಾನ, ಆಶ್ರಮ, ಹಿಂಗೇ ಎಂತಾರೂ ಹೋಗದಿರ್ತು.ಅಷ್ಟರಾಗೆ ರಜ್ವೇ ಮುಗ್ದೋಗ್ತು.ಅತ್ತೆ ಮನೆ ಬೇರೆ ಊರಿಂದ ಐದ್ ಗಂಟೆ ಬಸ್ಸಿನ್ ದಾರಿ.ಹಂಗಾಗಿ ಇಲ್ಲಿಗೆ ಬರ್ದೆ ಮೂರ್ ವರ್ಷಾನೆ ಆಗೋಗಿತ್ತು.ಅದ್ಕೆ ಈ ಸಲ ಭೂರೆ ಹಬ್ಬಕ್ಕೆ ಬೆಂಗಳೂರಿಂದ ನೆಟ್ಟಗೆ ಇಲ್ಲಿಗೇ ಬರಾ ಹಂಗೆ ರಜ ಅಡ್ಜಸ್ಟು ಮಾಡ್ಕ್ಯಂಡು ಬಂದಾತು.ನಾಳಿಗೆ ಭೂರೆ ಮುಗ್ಸಿ ಸಂಜೆ ಬಸ್ಸಿಗೆ ಊರಿನ ದಾರಿ.ಅತ್ತೆ ಮನೆ ಕೊಟ್ಗೆ ನೋಡಲೇ ಚಂದ. ಒಪ್ಪ ಇಟ್ಟಿರ್ತ. ಮಾವ ಅತ್ತೆ ಇಬ್ರಿಗೂ ಜಾನ್ವಾರ್ಗಾ ಅಂದ್ರೆ ಜೀಂವ. ಇಬ್ರೇ ಇಪ್ಪದು.ಹೆಣ್ ಮಕ್ಳಿಬ್ರೂ ಮದ್ವೆ ಆಗಿದ್ ಗಂಡನ್ ಮನೇಲಿದ್ದ. ಮಗಾ ದಿಲ್ಲೀಲಿ ಲೆಕ್ಚರ್ರು.ಹಂಗಾಗಿ ಅವ್ರ ಮಾತುಕತೆ ಎಲ್ಲಾ ಜಾನ್ವಾರು, ನಾಯಿ, ಬೆಕ್ಕಿನ್ ಜೊತಿಗೇ.ಈಗೀಗ ಮಾಂವ ಮಗರಾಯ ತಂದ್ಕೊಟ್ಟಿರೋ ಕ್ಯಾಮರಾ ಸಿಕ್ ಹಾಕ್ಯಂಡು ಹಕ್ಕಿ ಭಾಷೇನೂ ಕಲ್ತಗಂಡು ಎನ್ ಮನೇಲಿ ಒಬ್ಳೇ ಬಿಟ್ಟಿಕ್ ಹೋಗ್ತ ಅನ್ನದು ಅತ್ತೆ ಕಂಪ್ಲೇಂಟು.
ಅತ್ತೆ ತಿಂಡಿ ತಿನ್ನರತೀಗೂ ಪಾವ್ನಿ ಶ್ರಾವ್ಣಿ ಕತೆ ಹೇಳಿದ್ದೇ ಹೇಳಿದ್ದು.ಈಗ ಎಂಗೊಂದು ಚೊಲೋ ಹೆಸ್ರು ಹುಡುಕ್ಯೊಡು ಪುಟ್ಟಿಕರಕ್ಕೆ.ಈ ಸಲ ಧಾರ್ವಾಹಿ ಹೆಸ್ರು ಬ್ಯಾಡ. ಎಲ್ರ ಮನೇಲೂ ಅದೇ ನಮ್ನಿ ಹೆಸರಿಡ್ತ. ಎಂಗೆ ಬ್ಯಾರೆ ತರದ್ದು ಬೇಕು ಅಂದ ಅತ್ತೆ. ಆ ಪುಟ್ಟಿ ಕರ ರಾಜೀವನ್ ಅಮ್ಮನ್ ಹೆಸ್ರೆಂತೆ ಅತ್ತೆ ಅಂದ್ರೆ ಮಾವ ಕಿಸಿಕಿಸಿ ನಗ್ತ ಹೇಳ್ತ – ಅಮ್ಮನ ಹೆಸ್ರು ಇಂದ್ರ..ಮಗ ರಾಜೀವ. ನಗ್ಯಾಡಿ ನಗ್ಯಾಡಿ ತಿಂತಾ ಇದ್ದಿದ್ದ್ ಅವಲಕ್ಕಿ ಮೊಸ್ರು ನೆತ್ತಿಗೆ ಹತ್ತ್ ಚು ನಂಗೆ.ಸರೀ ಈ ಸಲ ಪುಟ್ಟೀಕರಕ್ಕೆ ಸೈನಾ ಅಂತ ಹೆಸ್ರಿಡೇ, ನಮ್ ದೇಶದ್ ಮಹಿಳಾ ಬ್ಯಾಡ್ಮಿಂಟನ್ ರಾಣಿ ಅವ್ಳು ಅಂದಿದ್ಕೆ ಅತ್ತಿಗೆ ಖುಶ್ಯೇ ಆತು.ಅಡ್ಡಿಲೆ ತಗ ಅದ್ನೇ ಇಡ್ತೀ.ಇಲ್ದೆ ಇದ್ರೆ ನಿನ್ ಮಾವ ಮಾಯಾವತಿ ಅಂತ ಇಟ್ರೂ ಇಟ್ವೇ.ನೆಡಿ ನೆಡಿ ನೆಗ್ಯಾಡಿದ್ದು ಸಾಕು.ಈಗ ನಾಳಿನ್ ಕೊಟ್ಟೆ ಕಡ್ಬಿಗೆ ಹಿಟ್ಟು ಬೀಸ್ಕ್ಯಳ ಕೆಲ್ಸಿದ್ದು.ಅಂಗ್ಳ ಬಳಿಯವು.ಬಾವಿಕಟ್ಟೆ ಚೊಕ್ ಮಾಡವು. ಶೇಡಿ ಬಳ್ಯವು ಒಂದಾ ಎರ್ಡಾ..ಅಂತ ಗಡಿಬಿಡಿ ಮಾಡ ಅತ್ತೆಯ ಮಲ್ಟಿ ಟಾಸ್ಕಿಂಗ್ ನೋಡಿ ಎಂಗೆ ಒಂತರಾ ವಿಚಿತ್ರ ಖುಶಿ ಮೆಚ್ಗೆ ಅನ್ನುಶ್ಚು.
ಮಧ್ಯಾನ್ನದ್ ಊಟ ಮುಗ್ಸಿ, ಮಾವನ್ ಜೊತಿಗ್ ಒಂದು ಶೀಂಕವ್ಳ ಹಾಕಿ ಹೊರ್ಗಡೆ ಜಗಲಿ ಕಟ್ಟೆ ಮೇಲೆ ಮಲ್ಗಿದ್ದಷ್ಟೇ ನೆನ್ಪು.ಯೋಳಕ್ಕಿದ್ರೆ ಸಂಜ್ಯಾಗೋಜು.ಘಮ್ಮನೆ ಸಾರ್ಸಿದ್ ಅಂಗ್ಳದಾಗೆ ಅತ್ತೆಯ ರಂಗೋಲಿ ಹೂಗೊಂಚ್ಲು. ಹಿಂದ್ಗಡೆ ಕೊಟ್ಗೇಲಿ ಅಂಬಾರಾಗ. ಒಳ್ಗಡೆ ಅಡ್ಗೆ ಮನೇಳಿ ಕಡ್ಬಿನ ಹಿಟ್ಟು ಬೀಸ್ತಾ ಇರ ಒಳ್ಳಿನ ಗಡಗಡ ತಾಳ. ಎದ್ದು ನೋಡಿದ್ರೆ ಮಾಂವ ತ್ವಾಟದಿಂದ ಅರಶ್ಣದ್ ಎಲ್ ಕಿತ್ಗಂಡು ಬರ್ತಾ ಇದ್ದ. ಕೊಟ್ಟೆ ಕಟ್ಟಲೆ. ಎಂಗೆ ಒಂದ್ ಚಂದದ ಕನ್ಸಿಂದ ಇನ್ನೊಂದು ಚಂದದ್ ಕನ್ಸಿಗೆ ಸಾಗಿ ಹೋದ್ ಹಂಗೆ ಅನುಸ್ತಾ ಇದ್ದು.ನಿಂಗಕ್ಕೆ?

3 thoughts on “2014ನೇ ಸಾಲಿನ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನಿತ ಕತೆ “ಪಾರಿಜಾತ”

  1. ನನ್ನ ಈ ಕಥೆಯನ್ನ ಒಪ್ಪಣ್ಣದಲ್ಲಿ ಪ್ರಕಟಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
    ಈ ಕಥೆಯನ್ನು ಆರಿಸಿ ಪ್ರಶಸ್ತಿ ಕೊಡ ಮಾಡಿದ ಕೊಡಗಿನ ಗೌರಮ್ಮ ದತ್ತಿನಿಧಿ ಸಂಸ್ಥೆಗೆ ನನ್ನ ವಂದನೆಗಳು.
    ಹವ್ಯಕ ಭಾಷೆಯ ಸೃಜನಾತ್ಮಕ ಬೆಳವಣಿಗೆಗೆ ಈ ಬಗೆಯ ಪ್ರೋತ್ಸಾಹ ಇಂಬು ಕೊಡುತ್ತದೆ.

    ಪ್ರೀತಿಯಿಂದ,
    ಸಿಂಧು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×