2014ನೇ ಸಾಲಿನ ಗೌರಮ್ಮ ಪ್ರಶಸ್ತಿ ಪ್ರದಾನ ಮಾಣಿ ಮಠಲ್ಲಿ

November 16, 2014 ರ 10:05 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

2014ನೇ ಸಾಲಿನ ಗೌರಮ್ಮ ಪ್ರಶಸ್ತಿ ಪ್ರದಾನ

ಈಸರ್ತಿಯ ಕೊಡಗಿನಗೌರಮ್ಮ ಪ್ರಶಸ್ತಿ ಸಮಾರಂಭ ಮೊನ್ನೆ ನವಂಬರ ೪ಕ್ಕೆ ಮಾಣಿಮಠಲ್ಲಿ ಚೆಂದಕೆ ಕಳಾತು.ಮಂಗಳೂರು ಹೋಬಳಿಯ ಮೂರು ಮಂಡಲದ ಮಾತೃಶಾಖೆ ಹಾಂಗೂ ಧರ್ಮಶಾಖೆಯ ಸಹಕಾರಲ್ಲಿ ಶ್ರೀಲಲಿತಾ ಸಹಸ್ರನಾಮದ ಹವನದ ಒಟ್ಟಿಂಗೆ ಹಮ್ಮಿಗೊಂಡ ಕಾರ್ಯಕ್ರಮಯಿದ.೪೮ದಿನಂಗೊ ಹೆಮ್ಮಕ್ಕೊ{ಮೂರು ಮಂಡಲದವು}ಅವರವರ ಮನೆಲಿ ಎಡಿಗಾಷ್ಟು ಲಲಿತಾಸಹಸ್ರನಾಮ ಪಾರಾಯಣ ಮಾಡಿತ್ತಿದ್ದವು.ಅದೆಲ್ಲ ಲೆಕ್ಕ ಹಾಕುವಗ ೧.೭ಲಕ್ಷಆಯಿದಡ!.ಆ ಪ್ರಯುಕ್ತ ಮಾಣಿ ಮಠಲ್ಲಿ ಹವನ. ಉದಿಯಪ್ಪಗ ಈ ಮಹಾಹೋಮದ ಒಟ್ಟಿಂಗೆ ಸುಮಾರು ಐನೂರಕ್ಕೂ ಮೇಲ್ಪಟ್ಟು ಹೆಮ್ಮಕ್ಕೊಸೇರಿ ಲಲಿತಾಸಹಸ್ರನಾಮ ಪಾರಾಯಣ ಮಾಡುವದು ಬಹುಚೆಂದ ಕಂಡತ್ತು.
ಗೌರಮ್ಮ ಪ್ರಶಸ್ತಿ ಕೊಡ್ತ ಸಭೆ ಮಜ್ಜಾನಮೇಗೆ 3ಗಂಟಗೆ ಸರಿಯಾಗಿ ಸುರುವಾತು. ಸುರುವಿಂಗೆ ನಮ್ಮ ಏತಡ್ಕಅಕ್ಕ, ಸಾವಿತ್ರಿ.ಕೆ.ಭಟ್ ಕೊಡಗಿನಗೌರಮ್ಮನ ಬಗ್ಗೆ ಸ್ವರಚಿತ ಕವನವ ಚೆಂದಕೆ ರಾಗಲ್ಲಿ ಹಾಡಿದೊವು. 1996ರಲ್ಲಿ ಈ ಸ್ಪರ್ಧೆ ಸುರುವಾಗಿ;ಇದೀಗ 19ನೇವರ್ಷದ ಪ್ರಥಮ ಪ್ರಶಸ್ತಿ ನಮ್ಮ ಕೂಳಕ್ಕೋಡ್ಳು ಶ್ರೀಮತಿ ಪಾರ್ವತಿಗೆ.ಎರಡ್ನೇದು ಬೆಂಗಳೂರಿಲ್ಲಿ ಇಂಜಿನಿಯರಾಗಿ ಕೆಲಸಲ್ಲಿಪ್ಪ; ಸಾಗರ ಹೊಡೆಯಾಣ ತಂಗೆ ಶ್ರೀಮತಿ ಸಿಂಧುರಾವ್ , ಮೂರ್ನೇದು ನಮ್ಮ ಚೆಕ್ಕೆಮನೆ ತಂಗೆ ಪ್ರಸನ್ನಂಗೆ. ಈ ಬಹುಮಾನಂಗಳ ಪ್ರದಾನ ಮಾಡಿದ ಸನ್ಮಾನ್ಯ ಅತಿಥಿ; ಆರ್.ಎಸ್.ಎಸ್ ದಕ್ಷಿಣ ಪ್ರಾಂತೀಯ ಪ್ರಮುಖ್ ಡಾ|ಕಲ್ಲಡ್ಕ ಪ್ರಭಾಕರ ಭಟ್.
ಇವು ಭಾಷಣ ಮಾಡುತ್ತಾ “ ಸಾಹಿತ್ಯಿಕ,ಧಾರ್ಮಿಕ ಕಾರ್ಯಂಗಳ ಒಟ್ಟಿಂಗೆ ಕೂಡ್ಸೆಂಡು ಆ ಮಾರ್ಗಲ್ಲಿ ನಮ್ಮ ಸಂಸ್ಕೃತಿ ಒಳುಶಲೆ ಪ್ರೇರಣೆ ಮಾಡಿದ್ದು ಬಹು ಶ್ಲಾಘನೀಯ ಕೆಲಸ. ಹಿಂದೂ ಸಮಾಜ ಸಾವಿರಾರು ವರ್ಷದ ಇತಿಹಾಸ ಇಪ್ಪದು!.ಇದು ಸಾಧು-ಸಂತರ ತಪಸ್ಸಿನ ಫಲ!!.ಅವು ಸಮಾಜದ ಶಕ್ತಿಶಾಲಿಯಾಗಿ ಬೆಳೆಶುಲೆ ಹಗಲಿರುಳು ಶ್ರಮಿಸುತ್ತೊವು.ಸ್ವಾತಂತ್ರ್ಯಾ ನಂತರ ರಾಜಕೀಯ ದೃಷ್ಠಿಕೋನಕ್ಕೆ ಮಹತ್ವ ಬಂದು;ಆಧ್ಯಾತ್ಮಿಕ ಬೆಳವಣಿಗೆ ಕುಂಠಿತ ಆತು.ನಮ್ಮ ಧರ್ಮ-ಸಂಸ್ಕೃತಿ ಬಗ್ಗೆ ಗೌರವಾದರಣೆ ಕಡಮ್ಮೆ ಆತು. ಇದರಿಂದಾಗಿ ಸಮಾಜಲ್ಲಿ ರಾಮಾಯಣ,ಮಹಾಭಾರತ, ಭಗವದ್ಗೀತೆಗಳ ಮಹತ್ವ ಮರದುಹೋತು.ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ಸಂಸ್ಥಾನ ರಾಮಕಥೆ ಸುರುಮಾಡಿ ವಿಶೇಷವಾಗಿ ಮಕ್ಕಳಲ್ಲಿ ತಿಳುವಳಿಕೆ ಬಪ್ಪಲೆ ಪ್ರಯತ್ನಮಾಡುತ್ತಿದ್ದು ಅದರಿಂದ ಮಹತ್ವದ ಪರಿಣಾಮ ಆತು. ಅಂಥವರ ಮೇಗೆ ಹೀನಾಯ ಆರೋಪ ಹೇಳುತ್ತದು ಹೋಗಲಿ; ಒಂದು ಸಾಸಿವೆಯಷ್ಟು ತಪ್ಪು ಹೇಳ್ಲೂ ಆರಿಂಗೂ ಯೋಗ್ಯತೆ ಇಲ್ಲೆ!. ಎನಗೆ ಅವರ ಮೇಗೆ ನೂರಲ್ಲ ಸಾವಿರಪಾಲು ವಿಶ್ವಾಸ ಇದ್ದು.ತಪಸ್ವಿಗಳ,ಸನ್ಯಾಸಿಗಳ ಮೇಗೆ ಆರೋಪ ಮಾಡಿ ಹಿಂದೂ ಸಮಾಜವ ಒಡವಲೆಡಿಯ!!”. ಹೇಳಿದೊವು.ನಮ್ಮ ಈ ಪ್ರಶಸ್ತಿ ಕಾರ್ಯಕ್ರಮಂಗಳ ನಾವು ನಮ್ಮ ಭಾಷೆಲಿ ಮಾತಾಡಿದ್ದಿದ. ಡಾ|ಪ್ರಭಾಕರಣ್ಣನುದೆ ಹವ್ಯಕ ಭಾಷೆಲೇ ಮಾತಾಡಿದ್ದೊಂದು ವಿಶೇಷವೂ ಚೆಂದವೂ ಆಗಿ ಬಂತು!.
ಸಭಾವೇದಿಕೆಲಿ,ಮಾಣಿಮಠದ ಆಡಳಿತ ಸಮಿತಿ ಅಧ್ಯಕ್ಷ ಹಾರೆಕರೆ ನಾರಾಯಣಭಟ್,ಅಧ್ಯಕ್ಷತೆ ವಹಿಸಿತ್ತಿದ್ದೊವು.ದಿಗ್ಧರ್ಶಕ ಮಂಡಳಿ ಅಧ್ಯಕ್ಷ ಬಿ.ಜಿ.ರಾಮಭಟ್, ಮಹಾಮಂಡಲ ಮಾತೃಪ್ರಧಾನ ಈಶ್ವರೀಬೇರ್ಕಡವು,ಉಪ್ಪಿನಂಗಡಿ ಮಂಡಲ ಮಾತೃಪ್ರಧಾನ ದೇವಿಕಾಶಾಸ್ತ್ರಿ,ಮುಳ್ಳೆರಿಯ ಮಂಡಲಮಾತೃಪ್ರಧಾನ ದೇವಕಿಭಟ್ ಪನ್ನೆ,ಇದ್ದಿದ್ದವು.ಕೊಡಗಿನ ಗೌರಮ್ಮ ಸ್ಮಾರಕ ದತ್ತಿಸಮಿತಿ ಕಾರ್ಯದರ್ಶಿ ವಿಜಯಾಸುಬ್ರಹ್ಮಣ್ಯ ಸ್ವಾಗತ,ಪ್ರಸ್ತಾವನೆ ಮಾಡಿ,ಶ್ರೀದೇವಿ ಕಾನಾವು ಕಾರ್ಯಕ್ರಮ ನಿರೂಪಣೆ ಮಾಡೀರೆ,ದೇವಿಕಾಶಾಸ್ತ್ರಿ ಧನ್ಯವಾದ ಮಾಡಿದೊವು.

—-0—–

ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ-ತೃತೀಯ ಬಹುಮಾನ ವಿಜೇತೆ ಶ್ರೀಮತಿ ಪ್ರಸನ್ನಾ ಚೆಕ್ಕೆಮನೆಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ-ಪ್ರಥಮ ಬಹುಮಾನ ವಿಜೇತೆ ಶ್ರೀಮತಿ ಪಾರ್ವತಿ ಕೂಳಕ್ಕೋಡ್ಳು
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. parvathimbhat
  parvathimhat

  ಶ್ರೀ ರಾಮ ದೇವರ, ಶ್ರೀ ಆಂಜನೇಯ ಸ್ವಾಮಿ ಎದುರು ಹಾ೦ಗೇ ಮಹಾ ಯಾಗದ ಸ೦ದರ್ಭಲ್ಲಿ ಸಾವಿರ ಸಾವಿರ ಜನರ ಉಪಸ್ಥಿತಿಲಿ ಬಹುಮಾನ ಪಡಕ್ಕೊ೦ಡದು ಎ೦ಗಳ ಭಾಗ್ಯ ಹೇಳೆಕ್ಕು.ಹಾ೦ಗೇ ಇದರ ಕಾರಣಕರ್ತರಿ೦ಗೂ ಈ ವೇದಿಕೆಗಾಗಿ ಶ್ರಮ ಪಡುವ ಎಲ್ಲೋರಿ೦ಗೂ ಎನ್ನ ಅನ೦ತಾನ೦ತ ಧನ್ಯವಾದ೦ಗೊ .ಆದರೆ ಈ ಸ್ಪರ್ಧೆಲಿ ಇನ್ನು ಎನಗೆ ಭಾಗವಹಿಸುವ ಅವಕಾಶ ಇಲ್ಲೆನ್ನೇ ಹೇಳಿ ಬೇಜಾರ ಆವುತ್ತು ,

  [Reply]

  VA:F [1.9.22_1171]
  Rating: 0 (from 0 votes)
 2. ಲಲಿತಾಲಕ್ಷ್ಮೀ ಎನ್. ಭಟ್ಟ.

  ಹರೇರಾಮ. ಪ್ರೀತಿಯ ವಿಜಯಕ್ಕ ಕಾರ್ಯಕ್ರಮ ಚೊಲೋ ನೆಡತ್ತು ಹೇಳಿ ಗುತ್ತಾಗಿ ಕುಶೀ ಆತು. ಅದ್ರಲ್ಲಿ ನಿಂಗೊ ಮಾಡ್ದ ವಂದು ಚೆಂದದ ಕೆಲಸ ಅಂದ್ರೆ ಶ್ರೀ ಕಲ್ಲಡ್ಕ ಪ್ರಭಾಕರ ಭಟ್ರ ಕರೆಸದ್ದು. ಅವ್ರ ಮಾತುಗಳ ಸಾರಾಂಶ ಮನಸ್ಸಿಗೆ ಬಹಳವೆಂದ್ರೆ ಬಹಳ ಸಮಾಧಾನ ಕೊಡ್ತು. ಗುರುಕರುಣೆಯಿಂದ ಎಲ್ಲ ವೊಳ್ಳೇದಾಗ್ಲಿ ಹೇಳಿ ಬೇಡ್ಕತ್ತೆ…ಬಹುಮಾನ ವಿಜೇತರಿಗೆಲ್ಲ ಮತ್ತೊಂದ್ಸಲ ಶುಭಾಶಯಗಳು…ಕಾರ್ಯಕ್ರಮದ ಸಂಘಟನೆ, ಸಂಯೋಜನೆ ಮಾಡಿ ಯಶ ಕಂಡ ಎಲ್ಲರಿಗೂ ಅಭಿನಂದನೆಗಳು…

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಹರೇರಾಮ, ಲಲಿತಾ . ಧನ್ಯವಾದಂಗೊ ತಂಗಿ. ಕಾರ್ಯಕ್ರಮದ ದಿನ ನಿನ್ನನ್ನ್ನೂ ನೆನಸ್ಕೋಂಡೆ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಸಂಪಾದಕ°ಡೈಮಂಡು ಭಾವಅನಿತಾ ನರೇಶ್, ಮಂಚಿವಾಣಿ ಚಿಕ್ಕಮ್ಮಡಾಗುಟ್ರಕ್ಕ°ಹಳೆಮನೆ ಅಣ್ಣಕೆದೂರು ಡಾಕ್ಟ್ರುಬಾವ°ಬೋಸ ಬಾವರಾಜಣ್ಣಕಜೆವಸಂತ°ಅನು ಉಡುಪುಮೂಲೆಜಯಗೌರಿ ಅಕ್ಕ°ಶೇಡಿಗುಮ್ಮೆ ಪುಳ್ಳಿವೇಣೂರಣ್ಣಪ್ರಕಾಶಪ್ಪಚ್ಚಿಅಜ್ಜಕಾನ ಭಾವವಿಜಯತ್ತೆವೆಂಕಟ್ ಕೋಟೂರುದೀಪಿಕಾಬಟ್ಟಮಾವ°ಶೀಲಾಲಕ್ಷ್ಮೀ ಕಾಸರಗೋಡುಯೇನಂಕೂಡ್ಳು ಅಣ್ಣಶರ್ಮಪ್ಪಚ್ಚಿಅಕ್ಷರದಣ್ಣಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ