Oppanna.com

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 53

ಬರದೋರು :   ಚೆನ್ನೈ ಬಾವ°    on   09/10/2014    6 ಒಪ್ಪಂಗೊ

ಚೆನ್ನೈ ಬಾವ°

1.
ತೆರಕ್ಕು ಹೇದರೆ ಹಾಂಗೇ ಅಲ್ಲದೋ! ತೆರಕ್ಕು ಹೇದರೆ ತೆರಕ್ಕೇ.
ಪುರುಸೊತ್ತೇ ಇಲ್ಲೆ. ನಿಂಗೊಗೂ ಪುರುಸೊತ್ತಿಲ್ಲೆ, ನವಗೂ ಪುರುಸೊತ್ತಿಲ್ಲೆ, ಅಡಿಗೆ ಸತ್ಯಣ್ಣಂಗೂ ಪುರುಸೊತ್ತಿಲ್ಲೆ. 10661756_528930430571942_8755094992581155966_o
ಎಂತರ ಕೇಟ್ರೆ ಒಟ್ಟಾರೆ ತೆರಕ್ಕು.
ತೊಂದರೆ ಇಲ್ಲೆ. ಎಲ್ಲೋರು ತೆರಕ್ಕಿಲ್ಲಿಯೇ ಇರೆಕ್ಕಾದ್ದು. ಎಡಿಗಾದ ಪ್ರಾಯಲ್ಲಿ ತೆರಕ್ಕಿಲ್ಲಿಯೇ ಇರೇಕ್ಕಪ್ಪ.
ಹಾಂಗೇ ಪುರುಸೊತ್ತಪ್ಪಗ ಏನಾರು ತಿಳಿಹಾಸ್ಯ ತಿಮ್ಮುರ್ಟು ಮಾತಾಡಿರೆ ಒಂದರಿಯಂಗೆ ಉತ್ಸಾಹ ಬತ್ತು ಬಾಯಿಬಿಟ್ಟು ನೆಗೆಮಾಡಿಯಪ್ಪಗ.
ಆದರೆ ಮನಸ್ಸಿಲ್ಲಿ ಅದರ ಪ್ರೋತ್ಸಾಹಕವಾಗಿ ಸಂತೋಷಕ್ಕಾಗಿ ತೆಕ್ಕೊಂಬ ಮನಸ್ಸಿರೆಕ್ಕದಾ! ಹಾಂಗೇ ಹೇಳ್ತರ್ಲಿ ಸಾನ.
ಅಂದು ಎಂತಾದ್ದು ಹೇದರೆ…
ಅಡಿಗೆ ಸತ್ಯಣ್ಣಂಗೆ ಅಂದು ಎಡೆ ಇತ್ತು.
ಆರೋಳಿ ಅತ್ತೆಯಲ್ಲಿ ತೊಳೆ ಮಂಡಗ್ಗೆ ಹಾಕುವ ತೊಳೆ ಹಾಕಲೆ ಹದಾದ ಹಲಸಿನಾಯಿ ಬೆಳದ್ದದು ಇದ್ದು. ಬೇಕಾರೆ ಕೊಂಡೋಪಲಕ್ಕು ಹೇದು ಆರೋಳಿ ಅತ್ತೆ ಮನ್ನೆ ಗೆದ್ದೆಮನೆ ಅನುಪ್ಪತ್ಯಲ್ಲಿ ಕಂಡಿಪ್ಪಗ ಹೇದಿತ್ತವು.
ಸತ್ಯಣ್ಣಂಗೆ ಅಂದು ಎಡೆ ಇದ್ದತ್ತು ಹೇದು ಮಧ್ಯಾಹ್ನತ್ರಿಗಿ ಆರೋಳಿಗೆ ಬೈಕು ಅಟ್ಟಿದವು.
ಬೈಕು ಓಡ್ಸಿದ್ದು ರಂಗಣ್ಣ, ಬೈಕಿನ ಹಿಂದೆ ಕೂದ್ದು ಸತ್ಯಣ್ಣ.
ಆರೋಳಿಗೆ ಎತ್ತಿಯಪ್ಪದ್ದೆ ಆಸರಿಂಗೆ ಕುಡುದಿಕ್ಕಿ ಹಲಸಿನಾಯಿ ಕೊಯ್ವಲೆ ಹೆರಡುವೊ° ಹೇದು ಗ್ರೇಶಿಯಪ್ಪಗ ಆರೋಳಿ ಅತ್ತೆ ಮಗಳು ಅಂದು ಹೊತ್ತೋಪಾಣ ಕಾಪಿಗೆ ಮಾಡಿದ ಬಾಳೆಣ್ಣು ಬನ್ಸುದೆ, ಕಾಪಿ ಗ್ಲಾಸುದೇ ತಂದು ಮಡುಗಿತ್ತು.
ಸತ್ಯಣ್ಣನೂ ರಂಗಣ್ಣನೂ ಬನ್ಸ್ ತಿಂದು ಕಾಪಿ ಕುಡ್ಕೊಂಡಿಪ್ಪಗ ಆರೋಳಿ ಅತ್ತೆ ಮಗಳು ಕೇಟತ್ತು – “ಹೇಂಗಾಯ್ದು ಮಾವ° ಬನ್ಸು?. ಆನು ಮಾಡಿದ್ದು , ಸುರೂ ಸರ್ತಿ ಇದು. ಪುಸ್ತಕ ನೋಡಿ ನೋಡಿ ಮಾಡಿದ್ದು”
ಸತ್ಯಣ್ಣ ಹೇದ°- “ಪಷ್ಟಾಯ್ದು ಅಕ್ಕೊ ಬನ್ಸು. ಎಂಗೊ ಮಾಡ್ತ ಕಾಯಿ ವೊಡೆ ಹಾಂಗೆ ಲಾಯಕ ಆಯ್ದು”
ಮಗಳಿಂಗೆ ಗೊಂತಾಯಿದೋ ಇಲ್ಯೋ, ಅತ್ತಗೆ ಗೊಂತಾಯ್ದು ಶಕ್ಕರೆ ಕಮ್ಮಿ ಆಯ್ದಂಬಗ ಹೇದು 😀
~~

2.
ಈ ವೊರಿಶಾಣ ಮಳೆ ಹೇದರೆ ಹೇದು ಪ್ರಯೋಜನ ಇಲ್ಲೆ ಅಪ್ಪೋ
ಏವಾಗ ಮಳೆ ಸೊಯ್ಪುತ್ತು , ಏವಗ ಬಿರಿತ್ತು, ಏವಾಗ ಕರೆಂಟು ಹೋವುತ್ತು, ಹೋದ ಕರೆಂಟ ಏವತ್ತು ವಾಪಾಸು ಬತ್ತು ..ಒಂದೂ ಹೇತಿಕ್ಕಲೆ ಎಡಿಯ!
ಅಂದೂ ಆದ್ದು ಅದುವೇ.
ಹೊತ್ತೋಪಗ ಕಪ್ಪರ ಕಟ್ಟಿತ್ತು., ಸಣ್ಣಕೆ ಗಾಳಿ ಬೀಸಿತ್ತು, ಸಮಕ್ಕೆ ಮಳೆ ಸೊಯ್ಪಲೆ ಸುರುವಾತು ಉಸುಲು ಕಟ್ಟ್ಯೊಂಡು.
ಗಾಳಿ ಬೀಸಲೆ ಸುರುವಾತೋ ಇಲ್ಲ್ಯೋ, ಮಳೆ ಸೊಯ್ಪಲೆ ಸುರುವಾತೋ ಇಲ್ಲ್ಯೋ ಕರೆಂಟತ್ತೆ ಮದಾಲು ಹೋತು.
ಕರೆಂಟು ಹೋತು ಹೇದರೆ ಎಲ್ಲಿಯೆಲ್ಲ ಹೋತು ? ಉಮ್ಮಪ್ಪ. ಸತ್ಯಣ್ಣನಲ್ಲಿ ಮಾತ್ರವೇ ಹೋದ್ದೋ, ಇಡೀ ಬಯಲಿಲ್ಲಿ ಹೋತೋ, ಪೇಟೆಲಿ ಹೋತೋ…!
ಎಂತಕೂ ವಿಚಾರ್ಸುವೋ ಹೇದು ಪೆರ್ಲ ಅಂಗುಡಿ ಅಣ್ಣನಲ್ಲಿಗೆ ಅಡಿಗೆ ಸತ್ಯಣ್ಣ° ಫೋನ್ ಮಾಡಿ ಕೇಟ° – ನಿಂಗಳಲ್ಲಿ ಕರೆಂಟು ಇದ್ದ ಅಣ್ಣೋ?!
ಅಂಗುಡಿಯಣ್ಣ ಬೆಲ್ಲ ತೂಗಿಯೊಂಡಿತ್ತನೋ, ಅವಲಕ್ಕಿ ತೂಗಿಯೊಂಡಿತ್ತನೋ.. ಇದ್ದೋ ಕೇಟದಕ್ಕೆ ಹೇದ° – ಇದ್ದು., ಕಳ್ಸೆಕೋ?!
ಸತ್ಯಣ್ಣ ಹೇದ° – ಬೇಡ., ಮಳಗೆ ಚೆಂಡಿ ಅಕ್ಕು 😀
~~

3.
ಅಡಿಗೆ ಸತ್ಯಣ್ಣಂಗೆ ಹೋದಲ್ಲಿ ಕೆಲಸಕ್ಕೆ ಸುರುಮಾಡಿದಾ° ಹೇದು ಆದರೆ ಮತ್ತೆ ಕೆಲಸ ರಪರಪಕ್ಕ ಆಯೇಕು. ಹಾಂಗೇದು ಏವುದೂ ಗಡಿಬಿಡಿ ಅಪ್ಪಲಾಗ.
ಕೆಲಸಕ್ಕೆ ಸುರುಮಾಡಿದ° ಹೇದು ಆದರೆ ಮತ್ತೆ ಕೆಲಸವೇ. ಹೇದರೆ ಅದರ್ಲಿಯೇ ಶ್ರದ್ಧೆ. ಎಡೆಯೆಡೆಲಿ ಆರಾರು ಲಾಯಿಲೋಟು ಹೇದೊಂಡು ಬಂದರೆ ಅಡಿಗೆ ಸತ್ಯಣ್ಣಂದೂ ಲಾಯಿಲೋಟೇ.
ಮನ್ನೆ ಪಾರೆ ಪುಣ್ಯಾಯ ದಿನ ಅಡಿಗೆ ಸತ್ಯಣ್ಣ° ಅಶನ ಬಗ್ಗಿಸಿಯೊಂಡಿಪ್ಪಗ ಆಚಕರೆ ಪೇಪರು ಗೆಣಪ್ಪಣ್ಣ° ಅಡಿಗೆ ಕೊಟ್ಟಗೆ ಹೊಡೆಂಗೆ ಬಂದೋನು ಅಡಿಗೆ ಸತ್ಯಣ್ಣನ ಅಲ್ಲಿಂದಲೇ ದೆನಿಗೊಂಡು ಕೇಟ°- ಸತ್ಯಣ್ಣ°.. ನಿಂಗೊಗೆ ಒಂದು ಗೊಂತಿದ್ದೋ..?!
ಬೆಶಿ ಬೆಶಿ ಅಶನ ಬಗ್ಗುಸುವ ತೆರಕ್ಕಿಲಿ ಇತ್ತಿದ್ದ ಸತ್ಯಣ್ಣ ಹೇದ° – “ಎನ ಒಂದೂ ಗೊಂತಿದ್ದು , ಎರಡೂ ಗೊಂತಿದ್ದು. ಹನ್ನೆರೆಡುವರಗೆ ಬಾಳಗle ಹಾಕುತ್ತಕ್ಕೆ ಎನ್ನದೇನೂ ಅಡ್ಡಿ ಇಲ್ಲೆ. ನಮ್ಮದು ರೆಡಿ. ನೀರುಮಡಿಗಿಯಪ್ಪಗ ಹೇಳಿ, ಹಪ್ಪಳ ಹೊರಿವದೆ”! 😀
~~

4.
ಬದನಾಜೆ ಮಾವನಲ್ಲಿ ಶಿವಪೂಜೆ ಅನುಪ್ಪತ್ಯ
ಬದನಾಜೆ ಮಾವಂಗೆ ಮಧ್ಯಾಹ್ನಕ್ಕೆ ತಡವಪ್ಪಲಾಗ. ಅಂದು ಬೇರೆ ಮಾಣಿಗೆ ಮಧ್ಯಾಂತ್ರಿಗಿ ಬೇರಂತದಕ್ಕೋ ಬೇರೆಲ್ಲಿಗೋ ಹೋಪಲೆ ಇತ್ತಿದ್ದುದೇ.
ಬಟ್ಟಮಾವನೂ ಕಾಲಂಟೇ ಎಂಟುವರಗೇ ಬಂದು ಆಸರಿಂಗೆ ಕುಡುದಿಕ್ಕಿ ಎಲೆತಟ್ಟಗೆ ಕೈ ಹಾಕ್ಯೊಂಡಿತ್ತಿದ್ದವು. ಸತ್ಯಣ್ಣನೂ ಅದೇ ಹೊತ್ತಿಂಗಾತು ಎಲೆ ತಟ್ಟಗೆ ಕೈ ಹಾಕಲೆ ಹೋದ್ದು.
ಅಷ್ಟಪ್ಪಗ ಬದನಾಜೆ ಮಾವ° ಅಡಿಗೆ ಸತ್ಯಣ್ಣನತ್ರೆ ಹೇದವು – “ಸತ್ಯಣ್ಣ°, ಹನ್ನೆರಡು ಗಂಟಗೆ ಮಂಗಳಾರತಿಗೆ ಆಯೆಕು”.
ಸತ್ಯಣ್ಣ° ಹೇದ° -“ ನಿಂಗೊಗೆ ಮಂಗಳಾರತಿ ಹನ್ನೆರಡು ಗಂಟಗೆ ಆಯೇಕ್ಕಾರೂ, ಹನ್ನೊಂದುವರಗೇ ಆಯೇಕ್ಕಾರು ಬಟ್ಟಮಾವನತ್ರೇ ಹೇಳಿ, ಎನ್ನತ್ರ ಹೇದು ಗುಣ ಇಲ್ಲೆ. 😀
~~

5.
ಅಡಿಗೆ ಸತ್ಯಣ್ಣನೂ ಅಮೈ ಬಟ್ಟಮಾವನೂ ಸೇರಿದವು ಹೇದು ಆದರೆ ಮತ್ತೆ ಪಟ್ಟಾಂಗೆ ಹೇಂಗೆಲ್ಲ ಹೋಕು ಹೇದು ಹೇತಿಕ್ಕಲೆಡಿಯ.
ಅಷ್ಟೂ ರಸವತ್ತಾಗಿಕ್ಕು ಅವರ ಮಾತುಗೊ. ಇಬ್ರಿಂಗೂ ನೆಗೆ ಬಾರ. ಬಾಕಿದ್ದೋರಿಂಗೆ ಇವು ಹೇಳ್ಸರ ಕೇಟು ನೆಗೆ ತಡವಲೆಡಿಯ!
ಅಂದು ಮುಳಿಯಾಲ ಅನುಪ್ಪತ್ಯಲ್ಲಿ ಹಾಂಗೇ ಆತುದೆ
ಊಟ ಆಗಿ ಚಾಯ ಆಗ್ಯಪ್ಪದ್ದೆ ಒಬ್ಬೊಬ್ಬ° ಎದ್ದು “ಆತು ಕಾಂಬೊ..” ಹೇದು ಮನೆ ಎಜಮಾನನತ್ರೆ ಅತ್ತೆಯತ್ರೆ ಹೇದಿಕ್ಕಿ ಹೆರಡ್ಳೆ ಎಂದು ನಿಂದವು. ಮುಳಿಯಾಲ ಅತ್ತೆ ಅತೀ ಹತ್ರಾಣೋರಿಂಗೆ ಹೋಪಗ ಕೈಲಿ ಇರಳಿ, ಮನೆಯೋರಿಂಗೆ ತಿಂಬಲೆ ಆತು ಹೇದು ನಾಕು ನಾಕು ಹೋಳಿಗೆ ಕಟ್ಟಿ ಕೊಟ್ಟೊಂಡಿತ್ತಿದ್ದವು.
ಬಟ್ಟಮಾವನೂ ಅಂಗಿ ಸುರುದಿಕ್ಕಿ ಎಲೆ ತಿಂದಿಕ್ಕಿ ಹೆರಡ್ಳೆ ಎಂದು ನಿಂದಪ್ಪಗ “ಅಂಬಗ ಬಟ್ಟಮಾವಂಗೆ..” ಹೇದವು ಮುಳಿಯಾಲ ಮಾವ°.
ಸತ್ಯಣ್ಣ° ಹೇದ° – ಬಟ್ಟಮಾವಂಗೆ ಬೇಡ, ಮೌಲ್ಯ ಕೊಟ್ರಾತು 😀
ಮುಳಿಯಾಲ ಮಾವ° ಕೇಟದೆಂತರವೋ?! ಸತ್ಯಣ್ಣ ಹೇದ್ದೆಂತರವೋ !! 😀 😀
~~

6.
ಮಂಜಳಗಿರಿ ಅನುಪ್ಪತ್ಯಲ್ಲಿ ಸಾಟು
ಅಡಿಗೆ ಸತ್ಯಣ್ಣ° ಪಟ್ಟಿಲಿ ಶಕ್ಕರೆ ಬರದ್ದಿತ್ತಿದ್ದವು. ಆದರೆ ಮಂಜಳಗಿರಿ ಮಾವಂಗೆ ಶಕ್ಕರೆ ತಪ್ಪಲೆ ಮರದ್ದು.
ಅಡಿಗೆ ಸತ್ಯಣ್ಣ° ಶಕ್ಕರೆ ಹೇದು ಅಡಿಗೆ ಕೊಟ್ಟಗೆಂದ ಕೇಟಪ್ಪಗ ಮಾವ° ಹೇದವು – “ಶಕ್ಕರೆ ಬತ್ತು. ನಿಂಗೊ ಸಾಟು ಮಾಡ್ಳೆ ಸುರುಮಾಡಿ”
ಅಡಿಗೆ ಸತ್ಯಣ್ಣ ಆತು ಹೇದು ಸಾಟು ಮಾಡ್ಳೆ ಸುರುಮಾಡಿದ°.
ಮಾವ° ಗೆಡಿಬಿಡಿಲಿ ಹೋಗಿ ಅಂಗುಡಿಂದ ಶಕ್ಕರೆ ತೆಕ್ಕೊಂಡು ಬಂದು ಅಡಿಗೆ ಸತ್ಯಣ್ಣನತ್ರೆ ಕೊಡುವಾಗ ಒಂದು ಸರ್ತಿಯಾಣದ್ದು ಬೇಶಿ ತೆಗದು ಮಡಿಗಿ ಆಯ್ದು.
ಶಕ್ಕರೆ ತಂದು ಕೊಟ್ಟ° ಮಾವ° ಕೇಟವು ಅಂಬಗ ನಿಂಗೊ ಶಕ್ಕರೆ ಹಾಕದ್ದೆ ಸಾಟು ಮಾಡಿದ್ದು….
ಸತ್ಯಣ್ಣ° ಹೇದ° – ಅದೂ ಚೆಪ್ಪಯವಕ್ಕೆ ಆತು. ಬಳುಸಲೂ ಆತು, ಕಟ್ಟಿ ಕೊಡ್ಳೂ ಆತು 😀
~~

7.
ಅಡಿಗೆ ಸತ್ಯಣ್ಣಂಗೆ ಬೈಕು ಓಡುಸಲೆ ಬತ್ತು. ಕಾರು ಓಡುಸಲೆ ರಂಗಣ್ಣ° ಬತ್ತ°
ಓ ಮನ್ನೆ ಬೆಂಗುಳೂರಿಂಗೆ ದೊಡ್ಡ ಮಗಳ ಮನಗೆ ಹೋದ ಸತ್ಯಣ್ಣ ಅರ್ಗೆಂಟು ಎಂತಕ್ಕೋ ಒಂದರಿ ಪೇಟಗೆ ಹೋಯೇಕು ಹೇದು ಆತು.
ಅಳಿಯನ ಬೈಕು ತೆಕ್ಕೊಂಡು ಪೇಟಗೆ ಹೋಯಿಕ್ಕಿ ಬಪ್ಪಗ ದಾರಿಲಿ ಪೋಲೀಸುಗೊ ಒಂದಿಕ್ಕೆ ಕೆಲವರ ಅಡ್ಡತಳ್ಪಿ ಚೆಕ್ಕಿಂಗು ಮಾಡ್ತು ಕಂಡತ್ತು.
ಸತ್ಯಣ್ಣನ ಕೈಲಿ ಲೈಸನ್ಸು ಎಲ್ಲಿದ್ದು?! , ಬೈಕಿನ ಪೇಪರು ಎಲ್ಲಿದ್ದು?!
ವಿಟ್ಳ ಪುತ್ತೂರಿಲ್ಲಿ ಆದರೆ ಹೋಳಿಗೆ ಕಟ್ಟ ಕೊಟ್ಟು ನಿವೃತ್ತಿ ಮಾಡ್ಳಕ್ಕು ಪೋಲೀಸುಗೊಕ್ಕೆ. ಆದರೆ ಇಲ್ಲಿ ಆ ಕೆಣಿ ನಡಗೋ?!
ಸತ್ಯಣ್ಣ ಇನ್ನು ತನಗೆ ಕೈ ತೋರ್ಸಿ ಅಡ್ಡ ತಳ್ಪುಸ್ಸು ಬೇಡ ಹೇದು ಬೈಕಿನ ಮೆಲ್ಲಂಗೆ ಓಡುಸಿಯೊಂಡು ಒಂದು ಪೋಲೀಸಿನ ಹತ್ರೆ ಕೇಟ° – ಗಿರಿನಗರಕ್ಕೆ ಹೇಂಗೆ ಹೋಯೆಕು?!
ಹೀಂಗೆ ಮುಂದೆ ಹೋಗಿ ಬಲತ್ತಿಂಗೆ ಹೋಗಿ ಎಡತ್ತಿಂಗೆ ಹೋಗಿ ಮುಂದೆ ಹೋಗಿ ….ಹೇದು ದಾರಿ ಹೇತು.
‘ಆತು ನಮಸ್ಕಾರ’ ಹೇದು ಅಲ್ಲಿಂದ ಬೈಕು ಎಬ್ಬಿದ ಅಡಿಗೆ ಸತ್ಯಣ್ಣ° ಅಲ್ಲಿಂದ ಸೀದಾ ಮಗಳ ಮನಗೆ ಬಂದ° ::D
ಪೋಲೀಸುಗಳ ಕಂಡಪ್ಪಗ ನಿಂಗೊಗೂ ಈ ಕೆಣಿ ಮಾಡಿರೆ ಆವ್ತೋ ನೋಡಿ ಆತ 😀
~~

8.
ಅಡಿಗೆ ಸತ್ಯಣ್ಣಂಗೆ ಗಿಳಿಯಾಲ್ಲಿ ಅನುಪ್ಪತ್ಯ
ಅಡಿಗೆ ಆವುತ್ತ ಇದ್ದು . ಆಚಿಗೆ ಪೂಜೆ ಆವುತ್ತಾ ಇದ್ದು . ಈಚಿಗೆ ಬಂದೋರು ನಿಂದೊಂಡು ಕೂದೊಂಡು ಪಟ್ಟಾಂಗ ಹೊಡೆತ್ತಾ ಇದ್ದವು.
ಅದರ್ಲಿ ಇಬ್ರು ಅಡಿಗೆ ಕೊಟ್ಟಗ್ಗೆ ಹತ್ರೆ ನಿಂದೊಂಡು ಮಾತಾಡಿಯೊಂಡಿತ್ತವು
ಆ ಭಾವ° – “ನಿಂಗೊಗೆ ಗೇಸು ಎಷ್ಟು ದಿನಲ್ಲಿ ಬತ್ತು ?”
ಈ ಭಾವ° – ತಡವಾವುತ್ತಪ್ಪ. ಗ್ರೇಶಿದಾಂಗೆ ಬತ್ತಿಲ್ಲೆ. ಕಾಯೇಕ್ಕಾವುತ್ತು. ಮೊನ್ನೆಯೇ ಬುಕ್ ಮಾಡಿ ಆಯಿದು. ಇನ್ನು ಏವಾಗ ಬತ್ತು ಹೇದು ಗೊಂತಿಲ್ಲೆ! 
ಅಡಿಗೆ ಸತ್ಯಣ್ಣ° ಹೇದಾ° – ಇದಾ ಇಂದು ಕಡ್ಳೆ ಪಾಚವೂ , ಹೋಳಿಗೆಯೂ ಇದ್ದು. ನಿಂಗೊ ನಾಕು ನಾಕು ತಿಂದು ನೋಡಿ. ಮನಗೆ ಎತ್ತೆಕ್ಕಾರೆ ಬಾರದ್ದರೆ ಮತ್ತೆ ಹೇಳಿ. 😀
~~

😀 😀 😀

6 thoughts on “ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 53

  1. ಕರೆಂಟ್ ಇಂಗೆ ಕೊಡೆ ಹಿಡುದು ಕಳುಸುಲೇ ಹೇಳುಲೇ ಆವುತ್ತಿತ್ತನ್ನೇ !ಈ ವಿಷಯ ಎಂತಕೆ ಸತ್ಯನ್ನಂಗೆ ತಲೆಗೆ ಹೋತಿಲ್ಲೇ ಹೇಳಿ ಎನಗೆ ಗೊಂತಾಯಿದಿಲ್ಲೇ !ಲಾಯಕ ಆಯಿದು

    1. ರೆ೦ಟಿ0ಗೆ ನೆ೦ಟಿ೦ಗೆ ಕೊಡೆ ಕ್ರಮ ಇಕ್ಕು. ಆದರೆ ಕ-ರೆ೦ಟಿಗೆ ಕೊಡೆ ಉಮ್ಮಪ್ಪ.
      ಅವು ಅ೦ತಾ ಛತ್ರಿ ಹಿಡಿತ್ತವೆ ಇಲ್ಲೇ ಹೇಳಿ ಬಾಯಿ ಲಾ ಪ್ರತೀತಿ.

  2. ಹರೇರಾಮ ಚೆನೈಭಾವ ಲಾಇಕಲ್ಲಿ ಓದುಸೆಂಡು ಹೋವುತ್ತು ಆದರೆ ಇದಲ್ಲಿ ಹಾಸ್ಯವೇ ಉಳ್ಳೊ ತಿಮ್ಮುರುಟು [ಪೆದಂಬು] ಇಲ್ಲೇ ,
    ಎನ್ನ ಕಣ್ಣಿನೊಟ್ಟಿಂಗೆ ಕಂಪ್Yಊಟರುದೆ ಹಾಳಾತು ಕಣ್ಣು ರಿಪೇರಿ ಆದರೂ ಕಂಪೂಟೆರ್ ಸರಿ ಅಯಿದಿಲ್ಲೇ ಬರೆಯಾಣ್ ಅಲ್ಲೇ ಬಾಕಿ

  3. ಗೆದ್ದೆಮನೆ ಅನುಪತ್ಯದ ಜೋಕ್ ಓದಿ ಕುಟ್ಟಿ ಕುಟ್ಟಿ ನೆಗೆ ಬಂತು 🙂 (ಇದು ತಲಗೆ ಬೀಳುವ ಕುಟ್ಟಿ ಅಲ್ಲ ಆತೊ ) ಎಕ್ಕ ಸಕ ,ತಡವಲೆ ಎಡಿಯದ್ದಷ್ಟು ಹೇಳಿ , ಓದುವವು ಸಮಯಕ್ಕೆ ತಕ್ಕ ಸಾರ ತೆಕ್ಕೊಂಡು ಅರ್ಥ ಮಾಡಿಗೊಳ್ಳಿ .

  4. ಏವತ್ರಾಣ ಹಾಂಗೆ ರೈಸಿದ್ದು ಚೆನ್ನೈ ಭಾವ.

  5. ಸತ್ಯಣ್ಣ ಬಂದದು ಬಾರೀ ಒಳ್ಳೆದಾತು. ಇತ್ತೀಚೆಗೆ ಬೈಲಿಂಗೆ ಜೆನಂಗ ಇಳಿವದು ಕಮ್ಮಿ ಆಯಿದು. ಸತ್ಯಣ್ಣನ ಕಾಂಬಲಾದರೂ ಬತ್ತವೋ ನೋಡುವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×