Oppanna.com

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 56 (ಬೊಳುಂಬು ಮದುವೆ ಸಟ್ಟುಮುಡಿ ವಿಶೇಷಾಂಕ)

ಬರದೋರು :   ಚೆನ್ನೈ ಬಾವ°    on   16/04/2015    4 ಒಪ್ಪಂಗೊ

ಚೆನ್ನೈ ಬಾವ°

1

ಅಡಿಗೆ ಸತ್ಯಣ್ಣಂಗೆ ಬೊಳುಂಬು ಮದುವೆ ಅನುಪ್ಪತ್ಯ ಓ ಮನ್ನೆ ಇತ್ತಿದ್ದದು ಗೊಂತಿದ್ದನ್ನೆ.

ದಿಬ್ಬಾಣ ಎದುರುಗೊಂಡಾತು, ಬೊಂಡ ಒಡದಾತು, ತೆರೆಸೀರೆ ತೆಗದಪ್ಪದ್ದೆ ಮಾಲೆ ಹಾಕಿಯಾತು, ಧಾರೆಯೂ ಆತು, ಕರಿಮಣಿ ಕಟ್ಟಿಯಾತು, ಸಪ್ತಪದಿ ತುಳುದಾತು, ವಧೂವರರಿಂಗೆ ಆಶೀರ್ವಾದ ಮಾಡಿಯೂ ಆತು.

ಇನ್ನೆಂತರ..

ಒಂದೊಡೆಲಿ ಊಟ, ಮತ್ತೊಂದೆಡೆಲಿ ಲಾಜ ಹೋಮ

ಭಟ್ಟಮಾವ° ಹೊಗೆ ಹಾಕಿಯಪ್ಪದ್ದೆ ವೀಡಿಯೋದಣ್ಣ ಬಳ್ಳಿ ಎಳಕ್ಕೊಂಡು ಬಂದ°, ಅಂಬೇರ್ಪಿನ ಪೇಂಟು ಭಾವಂದ್ರು ಕೈಕುಲುಕ್ಕುಸೆ ಸುರುಮಾಡಿದವು

ವೀಡೀಯೋದಣ್ಣ ಅತ್ತಿಂದಿತ್ತೆ ಇತ್ತಂದತ್ತೆ ಬಳ್ಳಿ ಎಳಕ್ಕೊಂಡೇ ಇತ್ತಿದ್ದ°

ಒಟ್ಟಾರೆ ಬಟ್ಟಮಾವಂಗೆ ಸರೀ ಲಾಜ ಹೋಮ ಮಾಡ್ಳೆ ಬಿಟ್ಟಿದವೇ ಇಲ್ಲೆ

ಇದರೆಲ್ಲ ನೋಡಿಯೊಂಡಿತ್ತಿದ್ದ ರಂಗಣ್ಣ ಹೇದ° – ಮತ್ತೆಂತಕೆ ಲಾಜ ಹೋಮ ಈಗಳೇ ಮಾಡ್ಳೆ ಅಂಬೇರ್ಪು ಈ ಬಟ್ಟಮಾವಂಗೆ?!2.10.2013

ಸತ್ಯಣ್ಣ° ಹೇದ° – ಅಪ್ಪು, ನಿನ್ನದು ಬೇಕಾರೆ ಮತ್ತೆ ಅವೆಲ್ಲ ಹೋದಮತ್ತೇ ಮಾಡುವೊ° 😀

~~

2

ಅಡಿಗೆ ಸತ್ಯಣ್ಣ° ಹೋದ ಬೊಳುಂಬು ಮದುವಗೆ ಉದಿಯಪ್ಪಂಗೆ ಕಾಪಿಗೆ ಇಡ್ಳಿ ಚಟ್ನಿ ವಡೆ ಸಾಂಬಾರು

ರಜಾ ಹೊತ್ತಪ್ಪಗ ಅಕ್ಕಿ ಹಾಕಲೆ ಸಭೆ ಹೇಂಗಿದ್ದು ನೋಡ್ಳೆ ಸಭಗೆ ಬಂದ ಅಡಿಗೆ ಸತ್ಯಣ್ಣನತ್ರೆ ಆರೊಬ್ಬ ದಿಬ್ಬಾಣ ಕಡೆಯವ° ಹೇದವು – ಉದಿಯಪ್ಪಾಣ ಕಾಪಿ ಲಾಯಕ ಆಯಿದು ಸತ್ಯಣ್ಣೋ.

ಸತ್ಯಣ್ಣ° ಹೇದ° ಇಡ್ಳಿ ವಡೆ ಸಾಂಬಾರೂ ಲಾಯಕವೇ ಮಾಡಿತ್ತೆನ್ನೆ! 😀

~~

3

ಬೊಳುಂಬು ಮದಿಮ್ಮಾಯ ಹೇದರೆ ಸಕಾಯಿ ರಂಗಣ್ಣಂಗೆ ಹತ್ರಾಣ ದೋಸ್ತಿ ಇದಾ

ಹಾಂಗಾಗಿ ಸಟ್ಟುಮುಡಿ ದಿನ ಮದಿಮ್ಮಾಯಂಗೆ ಒಂದು ಉಡುಗೊರೆಯೂ ಕೊಡೆಕು ಹೇದು ಮಾರಾಪ್ಪಿಲ್ಲಿ ತೆಕ್ಕೊಂಡು ಬಂದಿತ್ತ° ಸಕಾಯಿ ರಂಗಣ್ಣ°

ವಸಗೆ ಸಮಯಲ್ಲಿ ಸುರುವಾಣ ನಾಕು ಜೆನರದ್ದು ಆದಪ್ಪದ್ದೆ ಜೆನಹುಳು ಎದ್ದಾಂಗೆ ಎದ್ದತ್ತದ ಸಭೆ.

ಉದ್ದದ ಸಾಲು ವಸಗೆ ಕೊಡ್ಳೆ…. ರಂಗಣ್ಣನೂ ಸಾಲಿಲ್ಲಿಯೇ ನಿಂದ.

ಹತ್ತರೆ ಹತ್ತರೆ ಎತ್ತಿತ್ತು..

ಇನ್ನಾಣದ್ದು ರಂಗಣ್ಣನ ವಸಗೆ ಹೇದು ಅಪ್ಪಗ ಒಬ್ಬ° ಬೆಳಿಯಂಗಿ ಭಾವಯ್ಯ ಎಡೆಲಿ ನುರ್ಪಿ ಮದಾಲು ಬಗ್ಗಿದ°. ಅವ° ವಸಗೆ ಆದಪ್ಪದ್ದೆ ಮನೆಯೋರು ಅವನ ಕೈಹಿಡುದು ಆಚೊಡೆಂಗೆ ಬಲುಗಿ ಏನು ಭಾವ ಹೇದು ಮಾತಿಂಗೆಳದವು. ಅಷ್ಟಪ್ಪಗ ಕೆಮರದಣ್ಣನ ಕೆಮರವೂ ಅತ್ತಂದಾಗಿ ತಿರುಗಿತ್ತು.

ವಸಗೆ ಕೊಡುವಾಗ ಕೆಮರ ಇತ್ತಂದಾಗಿ ಒಡ್ಡದ ಕಾರಣ ರಂಗಣ್ಣ ಅಲ್ಲಿಂದಲೆ ತಿರುಗಿ ವಾಪಾಸು ಹಿಂದೆ ಬಂದು ಮತ್ತೆ ಸಾಲಿಲ್ಲಿ ನಿಂದೊಂಡ°

ಪುನಃ ಕೊಡಿವರೇಂಗೆ ಹೋಗಿ ಇನ್ನೆಂತ ಅವನೇ ಬಗ್ಗುಲೆ ಹೇದಪ್ಪಗ ಮದಮ್ಮಾಯನ ಅದೆಂಸೋ ವಾಟ್ಸಪ್ಪು ಗ್ರೂಪಡ …ಒಂದು ಏಳೆಂಟು ಜೆನರ ಗುಂಪು ವಸಗೆ ಕೊಡ್ಳೆ ಒಂದು ಪೆಟ್ಟಿಗೆ ಹಿಡ್ಕೊಂಡು ಎದ್ದು ನಿಂದತ್ತು.

ಕೆಮರ ಅತ್ತಂದಾಗಿ ಪೆಟ್ಟಿಗೆ ನೆಗ್ಗಿಯೊಂಡು ಬಪ್ಪದರ ಹಿಡಿವಲೆ ತಿರುಗಿತ್ತು.

ರಂಗಣ್ಣನ ಬೆನ್ನಾರಿಕೇ ಇತ್ತಿದ್ದ ಅಡಿಗೆ ಸತ್ಯಣ್ಣ° ಹೇದ° ಇನ್ನು ವಾಪಾಸು ಹಿಂದೆ ಹೋಗಿ ನಿಲ್ಲೆಡ. ನಿನ್ನ ಮೊಬೈಲು ಇಲ್ಲೆಯೊ, ತೆಗೆ ಅದರ್ಲಿ ಪಟ. ಮೋರೆಪುಟಲ್ಲಿ ಹಾಕಲೆ ಸಾಕು ಅದು. 😀

~~

4

ಅಡಿಗೆ ಸತ್ಯಣ್ಣಂಗೆ ಬೊಳುಂಬು ಸಟ್ಟುಮುಡಿ. ಹೇದರೆ ರಂಗಣ್ಣನೂ ಅಲ್ಲಿ ಇದ್ದ ಹೇಳ್ಸು ಮೇಗಾಣದ್ದರ್ಲೇ ಗೊಂತಾಯಿದು.

ವಸಗೆ ಆತು, ಬೇಕು ಬೇಕಾದರಿಂಗೆ ಬೇಕು ಬೇಕಾದಂಗೆ ಪಟ ತೆಗದೂ ಆತು.

ಬಟ್ಟಮಾವ° ಅದ ಸುರುಮಾಡಿದವು – ಅಥ ವಧೂವರಯೋಃ ಪಿತ್ರಾದಯಸ್ಸರ್ವೇ ಸಭಾಮಧ್ಯೇ ಉಪವಿಶ್ಯ…..

ಅಂಬಗ ಅದಾ ಮದಿಮ್ಮಾಳಬ್ಬೆ ಕಣ್ಣೀರಾಕುತ್ತ ಏಕುಟು ಮಾಡೇಕ್ಕಾದ್ದು..

ಆದರೆ ಅಂದ್ರಾಣ ಮದುಮ್ಮಾಳ ಅಬ್ಬೆ ರಜ ಒಳ್ಳೆತ ಗಟ್ಟಿಗೆತ್ತಿ. ವಿವರ ಗೊಂತಿಪ್ಪೋಳು. ಚೆಂದಕ್ಕೆ ಕೂದು ಕೊಂಗಾಟಲ್ಲಿ ಬಟ್ಟಮಾವ ಹೇಳ್ಸರ ಕೆಮಿಕೊಟ್ಟು ಕೇಟೊಂಡು ಮಗಳ ಮೋರೆಯನ್ನೂ ನೋಡಿಯೊಂಡು ಬಟ್ಟಮಾವ° ಹೇಳ್ಸು ನಿನಗಿದಾ ಹೇಳ್ತಾಂಗೆ ಕೂದೊಂಡಿತ್ತವು

ವೀಡಿಯೋದಣ್ಣ ಸಾಲದ್ದಕ್ಕೆ ಎದುರಂದ ನಾಕು ಜೆವ್ವನಗಿರು ಅದಾ ಮದಿಮ್ಮಾಳಬ್ಬೆ ಕೂಗುತ್ತೀಗ ಕೂಗುತ್ತೀಗ ಹೇದು ಕೆಮರ ಹಿಡ್ಕೊಂಡು ಕಾದೊಂಡಿತ್ತವು.

ಏಯ್… ಉಹ್ಹು… ಗ್ರೇಶಿದಾಂಗೆ ಎಂಸೂ ಆಯಿದಿಲ್ಲೆ.

ಆದರೆ…. ಅಕೇರಿಗದಾ ಇವರ ಕೆಮರ ಹಿಡ್ಕೊಂಡ ಕೋಲವೂ, ಗುಸು ಗುಸು ನೆಗೆಯನ್ನೂ ನೋಡ್ಯೊಂಡಿಪ್ಪಾಂಗೆ ಬಟ್ಟಮಾವ° “ಕಾರ್ಯೇಷು ಮಂತ್ರೀ ಕರುಣೇಶು ದಾಸೀ…. ಹೇದು ಭಾವನಾತ್ಮಕವಾಗಿ ಹೇದಪ್ಪಗ ಮದಿಮ್ಮಾಳ ಅಬ್ಬಗೆ ತಡದ್ದಿಲ್ಲೆ…. ಸೆರಗು ಬಲುಗಿ ಕಣ್ಣುದ್ದಿದ್ದೇ

ಅಲ್ಲೇ ಇತ್ತಿದ್ದ ಅಡಿಗೆ ಸತ್ಯಣ್ಣ° ಹೇದ° – ಇದಾ ಆತಿಲ್ಯ. ಇನ್ನೆಂತಿಲ್ಲೆ. ಸುರುಮಾಡ್ಳಕ್ಕಿನ್ನು ನಿಂಗೊ ಆಚಿಗೋಗಿ ಮೋರೆಪುಟಕ್ಕೆ. 😀

~~

5

ವಸಗೆ ಆತಿಲ್ಯ.

ಇನ್ನೆಂತರ… ಎಜಮಾನ° ಎರಡು ಚೆಂಬು ನೀರು ತಂದು ಗುರಿಕ್ಕಾರತ್ರೆ ಮಡುಗುದೆ

ಹೇದರೆ ಅಡಿಗೆ ಸತ್ಯಣ್ಣಂಗೆ ಬೆಶಿ ಬೆಶಿ ಹಪ್ಪಳ ರೆಡಿ ಆಯೆಕು.

ಬಾಣಾಲೆಲಿ ಹಾಕಿದ ಎಣ್ಣೆ ಬೆಶಿ ಅಪ್ಪದ್ದೆ ಹಪ್ಪಳ ಒಂದೊಂದೊ ಬಿಟ್ಟೊಂಡಿತ್ತಿದ್ದ ಅಡಿಗೆ ಸತ್ಯಣ್ಣನತ್ರೆ ಒಬ್ಬ° ಚಾಳಿತ್ತಡ್ಕ ಅಜ್ಜ° ಬಂದು ನಿಂದೊಂಡು ಹೇದವು – ಇದಾ ಸತ್ಯಣ್ಣ°, ಆನೊಂದು ಕತೆ ಹೇಳ್ತೆ. ಆನು ಸಣ್ಣಾಗಿಪ್ಪಗಂದ ಕತೆ ಹೇಂಗೆ ಹೇದರೆ

ಅಡಿಗೆ ಸತ್ಯಣ್ಣ° ಹೇದ° – ಇದಾ ಮಾಂವ°, ನಿಂಗ ಸಣ್ಣಾಗಿಪ್ಪಗಂದ ಕತೆ ಹೇದು ಮುಗಿವಾಗ ಅಲ್ಲಿ ಹಂತಿಲಿ ಕೂದೋರು ಎದ್ದು ಜೀಪತ್ತಿ ಹೋಗ್ಯಕ್ಕು. ಎನ ಹಪ್ಪಳ ಆಯೇಕ್ಕೀಗ. ನಿಂಗೊ ಸುರುವಾಣ ಹಂತಿಲಿ ಜಾಗೆ ಇದ್ದೋ ನೋಡಿ. ವಾಶೆ ಜೀಪು ಒಂದನೆ ಹಂತಿ ಕಳುದಪ್ಪದ್ದೆ ಹೆರಡುತ್ತಡ. ನಿಂಗೊಗೂ ಅದರ್ಲಿ ಹೋಪಲಕ್ಕಲ್ಲದ 😀

~~

4 thoughts on “ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 56 (ಬೊಳುಂಬು ಮದುವೆ ಸಟ್ಟುಮುಡಿ ವಿಶೇಷಾಂಕ)

  1. ಅಂದು ಮಾಭಾರತಲ್ಲಿ ಸಂಜಯ ದ್ರುತರಾಷ್ಟ್ರಂಗೆ ಕತೆ ಹೇಳಿದ್ದ್ಸು ಹೇಂಗೆ.(ಧರ್ಮಕ್ಷೇತ್ರೆ ….ಕುರುಕ್ಷೇತ್ರೆ…ಕಿಮ ಕುರ್ವತ ?) ಹೇದಪ್ಪಗ ಆವಾ ಕೂದಲ್ಲಿಂದಲೇ ಸೀ ..ಸೀ ಟಿವಿಲಿ ಕಂಡಾಂಗೆ ಹೇಳಿದ್ದನಾಡ … ಸತ್ಯಣ್ಣ ಏನು ಚಿಲ್ಲರೆ ಅಲ್ಲ ಮಿನಿಯಾ….

    * ಲಾಯಕ್ಕಾಯಿದು ಚೆನ್ನೈ ಭಾವಾ …..

  2. ಮದುವೆ ಜೆ೦ಬ್ರ ರೈಸಿದ್ದು ಭಾವ.. ಈ ರಂಗಣ್ಣ ವಾಟ್ಸಪ್ ವಿದ್ಯೆ ಕಲ್ತುಗೊಂಡನೋ ಹಾಂಗಾರೆ !
    ವಿಡಿಯೊದಣ್ಣ ಅತ್ತಿಂದಿತ್ತೆ ಬಳ್ಳಿ ಬಲುಗಿದ್ದು ಹಟ್ಟಿಲಿ ಕಂಜಿಯ ಬಳ್ಳಿ ಬಲುಗಿದ ಹಾಂಗೆಯೋ ? ಎಡಿಯಪ್ಪ ..

  3. ಸತ್ಯಣ್ಣಂಗೆ … ಅಡಿಗೆ ಮಾಡುವ ಎಡೆಲಿ …ಇಷ್ಟಕ್ಕೆಲ್ಲಾ ಪುರುಸೊತ್ತು …ಸಿಕ್ಕುದು ಹೇಂಗೇಳಿ ….!!! …ಓ ದೇವರೇ …..ಸತ್ಯಣ್ಣ ಇದ್ದರೆ …ಅದೆಂತದೋ … “ಸೀವು ಸೀವು ಟಿವಿ ” ಬೇರೆ ಬೇಕೂಳಿ ಇಲ್ಲೆ ಅಪ್ಪೋ ….

  4. ತುಂಬಾ ಲಾಯಿಕ ಇದ್ದು ಸತ್ಯಣ್ಣಾ….ಆದರೆ ಅಲ್ಲಿ ಆರೋ ಸೆಲ್ಫಿ ತೆಗವವು ಇತ್ತಿದವಿಲ್ಲೆಯೊ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×