Oppanna.com

ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 57

ಬರದೋರು :   ಚೆನ್ನೈ ಬಾವ°    on   23/04/2015    5 ಒಪ್ಪಂಗೊ

ಚೆನ್ನೈ ಬಾವ°

1.
ಅಡಿಗೆ ಸತ್ಯಣ್ಣಂಗೆ ಅಂದು ಅನುಪ್ಪತ್ಯ ಇಲ್ಲದ್ದ ಕಾರಣ ಅಂದೊಂದು ಎಡೆ.
ಅಂದದ ಮೀಸೆಬೈಲ ಮಾಣಿಯ ಉಪ್ನಾನಕ್ಕೆ ಅಡಿಗೆ ಸಾಮಾನು ಪಟ್ಟಿ ಆಗ್ಬೇಕು ಹೇದು ಮೀಸೆಬೈಲ ಮಾವನೂ, ಮೀಸೆಬೈಲ ಬಾವನೂ ಅಡಿಗೆ ಸತ್ಯಣ್ಣನ ಮನಗೆ ಬಂದ್ಸು
ಅದು ಎಡೆ ಇತ್ತಿದ್ದ ಕಾರಣ ಸಕಾಯಿ ರಂಗಣ್ಣನೂ ಅಲ್ಲೇ ಇತ್ತಿದ್ದ ನೇರಂಪೋಕು ಮಾತಾಡ್ಳೆ ಬಂದೋನು ರಮ್ಯನ ಮೊಬೈಲು ಗುರುಟ್ಯೊಂಡು, ಲಾಪುಟಾಪು ಕುಟ್ಳೆ ಕಲ್ತೊಂಡು
ಬಂದೋರು ಜೀಪತ್ತಿ ಹೋದಪ್ಪದ್ದೆ ಅಡಿಗೆ ಸತ್ಯಣ್ಣ° ರಂಗಣ್ಣನತ್ರೆ ಹೇದ° ಉಪ್ನಾನಕ್ಕೆ ಹೋಳಿಗೆಯಡೋ°
ಮೊಬೈಲು ಗುರುಟ್ಯೊಂಡಿತ್ತಿದ್ದ ರಂಗಣ್ಣ ಕೂಡ್ಳೆ ಕೇಟ° – ಎಷ್ಟು ಜಿ.ಬಿ ದು ಮಾಂವ?! 😀
ಸತ್ಯಣ್ಣಂಗೆ ಒಂದರಿ ಕಣ್ಣು ಹೊರಳಿಸಿ ಹೋತು – ಈ ಮೊಬೈಲು ಗುರುಟಿಯೊಂಡು ಕೂರ್ತರ್ಲಿ ಇವಂಗೆ ಸೇರು, ಕುಡ್ತೆ ಎಲ್ಲ ಮರವಲೆ ಸುರುವಾಯಿದೀಗ ಹೇದು 😀adige satyanna
~~
2.
ಮೀಸೆಬೈಲಿಂದ ಬಂದೋರು ಜೀಪತ್ತಿ ಹೋಗ್ಯಪ್ಪದ್ದೆ ಅಡಿಗೆ ಸತ್ಯಣ್ಣ° ಬೀಸಾಳೆ ಮಾಡ್ಳೆ ಎದುರಾಣ ಪದ್ಯಂಬಟ್ಟನ ತೋಟಂದ ಎರಡು ಹಾಲೆ ಕೇಟು ಹೆರ್ಕ್ಯೊಂಡು ಬತ್ತೆ  ಹೇದು ಹೋದ°
ವಾಪಾಸು ಬರೆಕ್ಕಾರ್ರೆ ಅಡಿಗೆ ಸತ್ಯಣ್ಣ ಮೊಬೈಲು ರಿಂಗಾದ್ದರ ತೆಗದ್ಸು ರಂಗಣ್ಣ ಆಯಿದು
ಆಚಿಗಂದ ಮಾತಾಡಿದೋನು ಅಡಿಗೆ ಸತ್ಯಣ್ಣನ ಮೊಬೈಲಿಂಗೇ ಫೋನು ಮಾಡಿದಕಾರಣ ಸತ್ಯಣ್ಣನೋ, ಸತ್ಯಣ್ಣ ಇದ್ದನೋ ಕೇಳದ್ದೆ – ‘ಅಂಬಗ ನಾಳಂಗೆ ಎಲ್ಲೋರು ಬನ್ನಿ’ ಹೇದಿಕ್ಕಿ ಮಡಗಿದ°.
ಅಷ್ಟೊತ್ತಿಂಗೆ ಅಡಿಗೆ ಸತ್ಯಣ್ಣನೂ ಹಾಳೆ ಕಂಕುಳೆಡಕ್ಕಿಲ್ಲಿ ಮಡಿಕ್ಕೊಂಡು ಎತ್ತಿದ°
“ಆರದ್ದೋ ಫೋನು?” – ಕೇಟ ಅಡಿಗೆ ಸತ್ಯಣ್ಣ°
ರಂಗಣ್ಣ° ಹೇದ° – ಉಮ್ಮ ಗೊಂತಿಲ್ಲೆ, ನಾಳಂಗೆ ಎಲ್ಲೋರು ಹೋಯೆಕ್ಕಡ
ಸತ್ಯಣ್ಣ: – ಎಲ್ಲಿಗೆ??
‘ಎಲ್ಲಿಗೆ ಕೇಟ್ರೆ ಆ ಫೋನು ಮಾಡಿದೋನಲ್ಲಿಗೆ’ – ರಂಗಣ್ಣಂಗೆ ಬೇರೆ ಎಂತ ಹೇಳ್ಳೆಡಿಗು! 😀
~~
3.
ಮನ್ನೆ ಬಾಜಲ್ಲಿ 108ರ ಗ್ರಾಶಾಂತಿ.
ಈ ಸೆಕಗೆ ಒಲೆಬುಡಲ್ಲಿ ನಿಂದೊಂಡು ಅಡಿಗೆ ಮಾಡ್ತ ಭಂಙ ಆ ಅಡಿಗೆ ಸತ್ಯಣ್ಣಂಗೇ ಗೊಂತು.
ಬಟ್ಟಮಾಂವ ಹೋಮಂದ ಏಳ್ವಾಗ ಸತ್ಯಣ್ಣಂಗೆ ಅಡಿಗೆ ಕೆಲಸ ಪೂರ್ತಿ ಆಯಿದು.
ಬಾಳೆ ಹಾಕಲೆ ಒಳ ಶಿವಪೂಜೆ ಮಂಗಳಾರತಿ, ಪ್ರಸಾದ ವಿತರಣೆ ಎಲ್ಲ ಆಗಿ ಆಯೇಕ್ಕಟ್ಟೆನ್ನೆ.
ಕಂಡಾವಟ್ಟೆ ಹಳುಗುತ್ತು , ಮೈ ಬೆಶಿ ಬೆಶಿ ಬೇಯ್ತು ಹೇದೊಂಡು ಅಡಿಗೆ ಸತ್ಯಣ್ಣ° ಒಂದಾರಿ ಮಿಂದಿಕ್ಕಿ ಬತ್ತೇದು ಅಬ್ಬಿಕೊಟ್ಟಗ್ಗೆ ಹೋಗಿ ಮಿಂದಿಕ್ಕಿ ಬಂದ°
ಮಿಂದಿಕ್ಕಿ ಬಪ್ಪಗ ಅಡಿಗೆ ಕೊಟ್ಟಗ್ಗೆ ಮೆಟ್ಳು ಹತ್ತುತ್ತಲ್ಲಿ ಆಚೀಚೆ ಹೊಡೆಲಿ ನಿಂದೊಂಡು ನೆರೆಕರೆ ಭಾವಂದ್ರು ಇಬ್ರು ನಿಂದೊಂಡು ಮಾತಾಡ್ಯೊಂಡಿತ್ತವು. ಅವಿಬ್ರ ಎಡಕ್ಕಿಲ್ಲಿ ನುರುಪ್ಪ್ಯೊಂಡು ಹೋಪಗ –
ಒಬ್ಬ° ಹೇದ° – ಒಟ್ಟಾರೆ ತಲೆಬೆಶಿ ಭಾವ! ತಡವಲೆಮಣ್ಣ ಎಡಿತ್ತಿಲ್ಲೆ.
ಅಂಬಗಷ್ಟೆ ಮೈ ಬೆಶಿ ಹೇದು ಮಿಂದಿಕ್ಕಿ ಬಂದ ಅಡಿಗೆ ಸತ್ಯಣ್ಣ° ಹೇದ° – ಇದ ಭಾವ, ಅಬ್ಬಿಕೊಟ್ಟಗೆಲಿ ಲಾಯಕ ತಣ್ಣಂಗೆ ಟೇಂಕಿ ನೀರು ಬತ್ತು. ಬೇಕಾರೆ ಶವರೂ ಇದ್ದು. ಶವರು ಬಿಡುಸಿ ತಲೆ ಒಡ್ಡಿ ಐದು ನಿಮಿಷ ನಿಂದರೆ ತಲೆಲಿ ಬಿಡಿ, ಮೈಲಿ ಇಪ್ಪ ಬೆಶಿಯೂ ಕಾಲಿಂಗೆ ಇಳುದು ಹೋಕು. ಆನಿದಾ ಈಗ ಹಾಂಗೆ ಮಾಡಿಕ್ಕಿ ಬಂದ್ಸು. ತಣ್ಣಂಗೆ ಆತಿದಾ 😀
~~
4.
ಎಂತ ಅನುಪ್ಪತ್ಯ ಇದ್ದರೂ ಬೈಲ ಕಾರ್ಯಕ್ರಮ ಇಪ್ಪಗ ಅಡಿಗೆ ಸತ್ಯಣ್ಣ ಒಂದು ಗಳಿಗ್ಗೆ ಆದರೂ ಬಾರದ್ದೆ ಇರ್ತ ಕ್ರಮ ಇಲ್ಲೆ.
ಆಚೊರಿಶವೂ ಬಯಿಂದ , ಕಳುದೊರಿಶವೂ ಬಯಿಂದ.
ಮನ್ನೆ ನೀರ್ಚಾಲ್ಲಿ ಆದ ಕಾರ್ಯಕ್ರಮಕ್ಕೂ ಬೇರೊಂದು ಕಾರ್ಯಕ್ರಮ ಮುಗ್ಶಿ ರಂಗಣ್ಣ ಸಹಿತ ಸಮಯಕ್ಕಪ್ಪಗ ಬಯಿಂದ°
ಬೈಲ ಕಾರ್ಯಕ್ರಮ ಭಾರೀ ಗಮ್ಮತಿಗೆ ಕಳುತ್ತು, ದೂರಂದ ಬಂದೋರು ಕೂಡ್ಳೆ ಹೆರಟವು, ಹತ್ರಾಣೋರು ಸಮಾಧಾನಕ್ಕೆ ಹೆರಟವು. ಸಂಘಟಕರು ವಿಲೇವಾರಿ ಮುಗಿಶಿಕ್ಕಿ ಹೆರಟವು ಅಕೇರಿಯಾಣ ಬಸ್ಸಿಂಗೆ
ದೇವರಿಂಗೆ ಮೆಚ್ಚುಗೆ ಆದ್ದೋ.. ಕಾಕತಾಳೀಯವೋ, ಮದಲಿಂಗೆಲ್ಲ ಪುಷ್ಪ ವೃಷ್ಟಿ ಆವುತ್ತಾಂಗೆ ಕಳುದ ಮೂರು ವೊರಿಶವೂ ಬೈಲ ಕಾರ್ಯಕ್ರಮದ ದಿನ ಜಲವೃಷ್ಟಿ ಆದ್ದು ಅಪ್ಪು.
ಅಡಿಗೆ ಸತ್ಯಣ್ಣನೊಟ್ಟಿಂಗೆ ಬಂದ ರಂಗಣ್ಣಂಗೆ ಅಷ್ಟಪ್ಪಗ ಅದು ನೆಂಪಾತು.. ಪ್ರತಿವೊರಿಶವೂ ಬೈಲ ಕಾರ್ಯಕ್ರಮದ ದಿನ ಮಳೆ ಬತ್ತು. ವರ್ಷ ವರ್ಷ ಹೀಂಗೇ ಮಾಡೇಕ್ಕಪ್ಪೋ ಹೇದು ಸಣ್ಣಕ್ಕೆ ಅಡಿಗೆ ಸತ್ಯಣ್ಣನೈಲಿ ಹೇದ°
ಒಟ್ಟಿಂಗೆ ಬಲದೊಡೆಲಿ ಮುಳಿಯ ಬಾವ, ತೆಕ್ಕುಂಜೆ ಮಾಂವ, ಡೈಮಂಡು ಭಾವ, ಅಜ್ಜಕ್ಕಾನ ಭಾವ.. ಎಲ್ಲೋರು ಇತ್ತಿದ್ದವೋ ದೊಡ್ಡಭಾವ ಕೇಟವು ಬಪ್ಪೊರಿಶವೂ ಆಟವೇ ಮಾಡುವನೋ ರಂಗಣ್ಣ°
ಅಡಿಗೆ ಸತ್ಯಣ್ಣ° – ನಿಂಗೊ ಬೇರೆ!, ಬಿಟ್ರೆ.. ಬಪ್ಪೊರಿಶವೂ ಪ್ರಮೀಳೆಯೇ ಆಯೇಕ್ಕು ಹೇಳುಗು ಇಂದ್ರಾಣ ಪ್ರಮೀಳೆಯ ಅಕೇರಿವರೇಗೆ ನೋಡಿದ ಇಂವ 😀
~~
5.
ಮದುವಗೆ ಅಡಿಗೆ ಪಟ್ಟಿಮಾಡ್ಳೆ ಅಡಿಗೆ ಸತ್ಯಣ್ಣನ ಮನಗೆ ಬಂದ ಮುಡಿಪ್ಪು ಮದಿಮ್ಮಾಯ ಭಾವ ಹೆರಡ್ಳಪ್ಪಗ ಹೊತ್ತು ಮಜ್ಜಾನ ಆಗಿದ್ದತ್ತು.
ಇನ್ನೆಂತ ಉಂಡಿಕ್ಕಿಯೇ ಹೋಪಲಕ್ಕು, ಕುಜ್ವೆ ತಾಳುದೆ, ಸೌತೆಕ್ಕಾಯಿ ಮೇಲಾರವೂ ರೆಡಿ ಇದ್ದು. ನಿಂಗೊಗೆ ಬೇಕಾರೆ ರಪಕ್ಕನೆ ಒಂದು ಸಾರು ಕೂಡ ಮಾಡಿಕ್ಕುತ್ತೆ ಹೇದ° ಅಡಿಗೆ ಸತ್ಯಣ್ಣ°
ಈ ಸೆಕಗೆ ಎಂತ ಬೆಂದಿಯೂ ಮೆಚ್ಚುತ್ತಿಲ್ಲೆ ಸತ್ಯಣ್ಣ. ಬರೇ ಕೊದ್ಶಕ್ಕಿ ಹೆಜ್ಜೆಯೂ ಮಜ್ಜಿಗೆ ನೀರು ಉಪ್ಪಿನಕ್ಕಾಯಿ ಇದ್ದರೆ ಅದುವೇ ಧಾರಾಳ ಕೊಶಿಯಾವ್ತು – ಹೇದ° ಅದ ಮದಿಮ್ಮಾಯ ಭಾವಯ್ಯ°
ಕೂಡ್ಳೆ ಅಡಿಗೆ ಸತ್ಯಣ್ಣ° – ಅಂಬಗ ಈಗ ನಿಂಗೊ ನಾಡದ್ದಿಂಗೆ ಮದುವಗೆ ಪಟ್ಟಿ ಮಾಡ್ಸಿದ್ದದು…?!!! 😀
ಮದಿಮ್ಮಾಯ ಭಾವಯ್ಯ ತಳಿಯದ್ದೆ ಕೈಕಾಲು ತೊಳಕ್ಕೊಂಡು ಬತ್ತೆದು ಜಾಲಕೊಡಿಲಿ ಇಪ್ಪ ನೀರ ಚೆರಿಗೆ ಹತ್ರಂಗೆ ಹೋದನಡ° 😀
~~
6.
ಪನೆಯಾಲ ತ್ರಿಕಾಲ ಪೂಜಗೆ ಹೋಪಗ ಅಡಿಗೆ ಸತ್ಯಣ್ಣಂಗೆ ಮೊಬೈಲು ಕೊಂಡೋಪಲೆ ಮರದ್ದು
ಅಡಿಗ್ಗೆ ಮುಖ್ಯ ಬೇಕಾದ್ಸು ಮೊಬೈಲು ಅಲ್ಲ ಹೇದು ಅರ್ಧ ದಾರಿಂದ ವಾಪಾಸು ಬಯಿಂದ°ಯಿಲ್ಲೆ ಅಡಿಗೆ ಸತ್ಯಣ್ಣ°
ಅಂದಿಡಿ ಸತ್ಯಣ್ಣನ ಮೊಬೈಲು ರಮ್ಯನ ಕೈಲಿ
ಅನುಪ್ಪತ್ಯ ಕಳಿಶಿಕ್ಕಿ ಮರದಿನ ಬಂದ ಅಡಿಗೆ ಸತ್ಯಣ್ಣನ ಮೊಬೈಲು ರಿಂಗಪ್ಪಗಟ್ಟೇ ಅಡಿಗೆ ಸತ್ಯಣ್ಣಂಗೆ ಮತ್ತೆ ಮೊಬೈಲು ನೆಂಪಾದ್ಸು.
ಮೊಬೈಲು ರಿಂಗಾದಪ್ಪದ್ದೆ ನಿತ್ಯ ಬೇಗ ತೆಗದು ‘ಹರೇ ರಾಮ, ಇದು ಅಡಿಗೆ ಸತ್ಯಣ್ಣ’ – ಹೇದು ಆಚೊಡೆಂದ ದೆನಿಗೊಂಡವನ ಸ್ವಾಗತುಸುವ ಅಡಿಗೆ ಸತ್ಯಣ್ಣ ಅಂದು ಮೊಬೈಲು ತೆಗೆಯದ್ದೆ ಅದು ರಿಂಗಪ್ಪದನ್ನೇ ನೋಡಿಯೋಂಡು ನಿಂದಪ್ಪಗ ರಮ್ಯ ಕೇಟತ್ತು – ಎಂತಪ್ಪ° ಹಾಂಗೊಂದು ನೋಡ್ಸು ಮೊಬೈಲಿನ?!
ಸತ್ಯಣ್ಣ ಹೇದ° ಅಲ್ಲ ಮಗಳೋ.. ಮನ್ನೆ ಆನು ಹೋಪಗ ಇದು ಸರೀ ಇತ್ತಿದ್ದು. ಇಂದು ನಿನ್ನಜ್ಜಿ ಅಕೇರಿಯಾಣ ದಿನ ದೆನಿಗೊಂಡಾಂಗೆ ಕೇಳ್ತನ್ನೆ!
ಮತ್ತೆ ನೋಡಿರೆ ಅಡಿಗೆ ಸತ್ಯಣ್ಣನ ಮೊಬೈಲಿನ ಕೋಗಿಲೆಯ ಇಂಪಾದ ಗಾನದ ರಿಂಗು ಟೋನು ಅಜನೆ ಬದಲಿ ಟುಂ ಟುಂ ಹೇದು ಅಜ್ಜಿ ನರಕ್ಕುತ್ತ ಅಜನೆ ಆಗಿತ್ತಿದ್ದು. 😀
ಎಲ್ಲ ಆ ರಮ್ಯ ಗುರುಟಿದ್ದೆ ಆಗದ್ದೆ ಬಂದದು ಆ ಮೊಬೈಲಿಂಗೆ ಅಪ್ಪೋ 😀
~~
7.
ಅಡಿಗೆ ಸತ್ಯಣ್ಣನ ಅಸಿಸ್ಟೆಂಟು ಸಕಾಯಿ ರಂಗಣ್ಣನೂ ಆಚಕರೆ ಸರಸಕ್ಕನ ಮಗ ಪುಟ್ಟನೂ ರಮ್ಯನ ಲಾಪುಟಾಪು ಹಿಡ್ಕೊಂಡು ಅರಟಿಯೊಂಡಿತ್ತಿದ್ದವು
ಹ್ಹ್ಮ್… ಬೈಲಿಲಿ ಏನಾರು ಹೊಸ ವರ್ತಮಾನ ಇದ್ದೋ, ಮುಳಿಯ ಭಾವನ ಗೇಂಗಿನ ಹೊಸ ಪದಂಗೊ ಬಯಿಂದೊ, ವಿಜಯತ್ತೆಯ ನುಡಿಗಟ್ಟು ಏನಾರು ಬಿಚ್ಚಿದ್ದವೋದು ನೋಡ್ಳೆ ಬೈಲ ಪುಟವ ಬಿಡುಸಿದ° ರಂಗಣ್ಣ°
ಅಷ್ಟಪ್ಪಗಲ್ಲಿ ಪುಟ್ಟನ ಕಣ್ಣಿಂಗೆ ಮದಾಲು ಕಂಡದು – ಲಾಗ ಹಾಕಲೆ ಇತ್ತಿದ್ದ ಜಾಗೆ
ಅದೆಂತರ ಅಲ್ಲಿ ಲಾಗ ಹಾಕಿ ಹೇದರೆ ಹೇದು ಪುಟ್ಟ° ಕೇಟ°
ರಂಗಣ್ಣ° ಪುಟ್ಟಂಗೆ ವಿವರುಸಿ ಹೇದ°. ಅದು ಬೈಲಿನ ಹೊಸ ಆಟ. ಅದರ ಒಂದರಿ ಒತ್ತಿ ಒಂದು ಲಾಗ ಹಾಕೆಕು. ಎರಡು ಸರ್ತಿ ಒತ್ತಿರೆ ಎರಡು ಸರ್ತಿ ಲಾಗ ಹಾಕೆಕು.
ಅಲ್ಲೆ ಆಚಿಗೆ ಇದರ ಕೇಟೊಂಡಿತ್ತಿದ್ದ ಅಡಿಗೆ ಸತ್ಯಣ್ಣ ಹೇದ° – ನಿಂಗೊ ಈಗ ಇಬ್ರು ಒಟ್ಟಿಂಗೆ ಅದರ ಒಂದರಿ ಒತ್ತಿ ಇಬ್ರು ಒಟ್ಟಿಂಗೆ ಲಾಗ ಹಾಕಲೆ ಎಡಿತ್ತೊ ನೋಡಿ 😀

~~

8.

ಅಂದು ಅಡಿಗೆ ಸತ್ಯಣ್ಣಂಗೆ ಬೈಲಿನದ್ದೇ ಅನುಪ್ಪತ್ಯ.
ಬೈಲಿನ ಅನುಪ್ಪತ್ಯ ಹೇದರೆ ಕುಂಟಾಂಗಿಲ ಭಾವನೂ ಬಾರದ್ದೆ ಇರ್ತವಿಲ್ಲೆ ಒಂದು ಮಟ್ಟು ಪೋಕುಮುಟ್ಟು ಇಲ್ಲದ್ದರೆ
ಕುಂಟಾಂಗಿಲ ಭಾವ ಹೇದರೆ ಆಚ ಇಂಜಿನೀರು ಭಾವನ ಹಾಂಗೆ ಅಲ್ಲ ಅದಾ
ಹಗಲು ಮದ್ದಿನ ಬೇಗು ಹಿಡ್ಕೊಂಡು ಗಾಳಿ ಮಳೆ ಶೆಡ್ಳು ಮಿಂಚು ಗಣ್ಯ ಮಾಡದ್ದೆ ಬೈಕು ಎಬ್ಬೆಕು, ಬೈಲ ಅನುಪ್ಪತ್ಯಕ್ಕೆ ಊಟಂದ ಮದಲೆ ಎತ್ತಿಯೊಳ್ಳೆಕು ಇರುಳು …ಒರೆವೆನೀ ಕಥಾಮೃತವ ಹೇದು ಕೇಳ್ಳಪ್ಪಗ ಆಟ ಆವ್ತಲ್ಯಂಗೂ ಎತ್ತೆಕು
ಅಂದು ಕುಂಟಾಂಗಿಲ ಭಾವಯ್ಯ ಬೈಲ ಅನುಪ್ಪತ್ಯಕ್ಕೆ ಬಂದೋನೇ ಆಸರಿಂಗೆ ಆಯಿಕ್ಕಿ ಬಂದೋರತ್ರೆ ಏನು ಒಳ್ಳೆದು ಮಾತಾಡಿಕ್ಕಿ ಅಡಿಗೆ ಸತ್ಯಣ್ಣನ ಒಲೆಬುಡಕ್ಕೂ ಎತ್ತಿದ°ಅಡಿಗೆ ಸತ್ಯಣ್ಣಂಗೆ ಕುಂಟಾಂಗಿಲ ಬಾವಯ್ಯನತ್ರೆ ಮಾತಾಡ್ಯೊಂಡೇ ಒಂದೊಂದೇ ಪಾತ್ರ ಮುಚ್ಚಳಿಕೆ ನೆಗ್ಗಿ ಒಗ್ಗರಣೆ ಬಿಡ್ತ ತೆರಕ್ಕಿನೆಡಾಕ್ಕಿಲ್ಲಿಯೂ ಕೇಟ° – ಮತ್ತೆ ಎಂತ ಭಾವಯ್ಯೋ?!
ಕುಂಟಾಂಗಿಲ ಭಾವಯ್ಯಂಗೆ ಬೆಶಿಲಿಂಗೆ ಬಂದು ತಣ್ಣಂಗೆ ಎರಡು ಗ್ಲಾಸು ಲಿಂಬುಳಿ ಸರ್ಬತ್ತು ಕುಡುದ್ಸು ನಾಟಿದ್ದಿಲ್ಯೋ ಏನೋ … ಹೇದ° – ಮತ್ತೆ ಎಂತ ಸತ್ಯಣ್ಣ°! , ಒಂದೂ ಹೇದು ಗುಣ ಇಲ್ಲೆ!
ಅದಕ್ಕೆ ಸತ್ಯಣ್ಣ° ಹೇದ° – ಅಂಬಗ ಹೇಳದ್ರೆ ಗುಣ ಇದ್ದೋ 😀

~~

9.

ಮೇಗಾಣದ್ದು ಹೇದ್ದು ಕಾಂಬಗ ಅಡಿಗೆ ಸತ್ಯಣ್ಣ° ಹೇದರೆ ಎಂತ ಪೆದಂಬನೋ ಹೇದು ಗ್ರೇಶಿ ಹೋಕು ಕೆಲೋರಿಂಗೆ
ಆದರೆ ಕಾರ್ಯುಕ್ಕೂ ಹಾಂಗೆ ಅಲ್ಲ., ಆಚಿಗೆ ಸಾಸಮೆ ಒಗ್ಗರಣೆ ಕೊಡ್ತಾಂಗೆ ಈಚಿಗೆ ಮಾತಿನ ಒಗ್ಗರಣೆ ಕೊಡ್ಸು . ಅಟ್ಟೆ
ರುಚಿಗೆ ಪರಿಮ್ಮಳಕ್ಕೆ ಎರಡೂ ಬೇಕು ಅಪ್ಪೋ.
ಹಾಂಗೇದು ಪಾಚಕ್ಕೆ ರಸಾಯನಕ್ಕೆಲ್ಲ ಅಡಿಗೆ ಸತ್ಯಣ್ಣ° ಒಗ್ಗರಣೆ ಹಾಕುತ್ತನಿಲ್ಲೆ , ಗಂಭೀರ ವಿಷಯಕ್ಕೂ ಅಡಿಗೆ ಸತ್ಯಣ್ಣನ ಒಗ್ಗರಣೆ ಇಲ್ಲೆ. 😀

 

 

 

 

😀 😀 😀

5 thoughts on “ಅಡಿಗೆ ಸತ್ಯಣ್ಣನ ಒಗ್ಗರಣೆಗೊ – 57

  1. ಅಡಿಗೆ ಸತ್ಯಣ್ಣನೂ ಮೊಬೈಲು ರಂಗಣ್ಣನೂ ಒಳ್ಳೆ ಜತೆ ,ಅಪ್ಪೋ ..

  2. ಎಷ್ಟು ಜಿಬಿ ಹೋಳಿಗೆ – ಪ್ರಸ್ತುತವಾದ ಮಾತು. ಬಪ್ಪೊರುಷವುದೆ ಪ್ರಮೀಳೆಯೊ ಹಾಂಗಾರೆ ? ಜವ್ವನಿಗರಿಂಗೆ ಕೊಶಿಯಾದ್ದಂತೂ ನಿಜ.
    ಸತ್ಯಣ್ಣಂಗೆ ಸತ್ಯಣ್ಣನೇ ಸಾಟಿ.

  3. ಎಂತಾದರೂ ….ಸತ್ಯಣ್ಣಂಗೆ ….. ಸತ್ಯಣ್ಣನೇ ಸಾಟಿ ,,,,,, …

  4. ಸೂಪರ್ ಸತ್ಯಣ್ಣ…ಸತ್ಯಣ್ಣ ಫಟ ತೆಗವದು ಸೆಲ್ಫಿ ತೆಗವದು ಅಭ್ಯಾಸ ಮಾಡೆಕ್ಕಷ್ಟೆ ಕಾಣುತ್ತು ಅಲ್ಲದೋ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×