Oppanna.com

ಅಡಿಗೆ ಸತ್ಯಣ್ಣನ ಒಗ್ಗರಣೆ – 59

ಬರದೋರು :   ಚೆನ್ನೈ ಬಾವ°    on   25/06/2015    5 ಒಪ್ಪಂಗೊ

ಚೆನ್ನೈ ಬಾವ°

ಬೈಲಿಲಿ ನಿಂಗಳೆಲ್ಲ ಕಾಣದ್ದೆ  ಸಮಯ ಕೆಲಾವು ಆತಪ್ಪೋ. ಅದು ಹೇದರೆ ಇದಾ… ಬೇಸಗೆ ಕಾಲ ಮಳೆ ಕಾಲ ಎಲ್ಲ ಒಂದೋ ಆಯಿದು ನವಗೆ. ಬೇಸಗೆ ಕಾಲಲ್ಲಿಯೂ ಮಳೆ ಬತ್ತು, ಮಳೆ ಕಾಲಲ್ಲಿಯೂ ಮಳೆ ಬತ್ತು. ಹಾಂಗೇ ನವಗೂ ಅನುಪ್ಪತ್ಯಕ್ಕೆ ಬೇಸಗೆ ಮಳೆ ಹೇದು ಇಲ್ಲೆ. ಆಯೇಕ್ಕಾದ್ದು ಆಯೇಕ್ಕಪ್ಪಗ ಆಗಿಯೇ ಆಯೆಕು. ನವಗೆ ಅಲ್ಲಿಂದಲ್ಲಿಗೆ ಎತ್ತಿಯೂ ಆಯೇಕು. ಹಾಂಗಾಗಿ ಬೈಲ ಒಳ ದಾಂಟುಲೆ ಪೊರುಸೊತ್ತಾವುತ್ತಿಲ್ಲೆ. ಅಡಿಗೆ ಸತ್ಯಣ್ಣಂಗೂ ಪುರುಸೊತ್ತಾವುತ್ತಿಲ್ಲೆ. ಹಾಂಗೇ ಬೇಲಿಕರೇಲಿ ಎಕ್ಕಳ್ಸಿ ನೋಡ್ಯೊಂಡು ಹೋಪದಿದಾ. ಹಾಂಗೆ ಎಕ್ಕಳುಸುವಾಗ ಅಡಿಗೆ ಸತ್ಯಣ್ಣಂಗೆ ನಮ್ಮ ಕಂಡದೋ ನವಗೆ ಅಡಿಗೆ ಸತ್ಯಣ್ಣನ ಕಂಡದೋ ನವಗರಡಿಯ. ಕಂಡಪ್ಪಗ ಹೊಸತ್ತರೊಟ್ಟಿಂಗೆ ಸಿಕ್ಕಿದ ಹಳತ್ತು ಶುದ್ದಿಯನ್ನೂ ಹೊಸತ್ತಾಗಿ ಬೈಲಿಂಗೆ ಎತ್ತುಸಲೆ ಹೆರಟದಂತೂ ನಿಜ.

ಎಂತರಡ ಶುದ್ದಿ?! –

1.

ಬಾರೆತ ಬೈಲ್ಲಿ ಒಂದು ಹೋಮ. ಅಡಿಗೆ ಸತ್ಯಣ್ಣನ ಅಡಿಗೆ.1070105_337852496346404_1008803229_n
ದೊಡ್ಡಕ್ಕೆ ಎಂಸೂ ಅಲ್ಲ. ಹಾಂಗೇದು ಕಟ್ಟುಗಟ್ಳೆಯೂ ಅಲ್ಲ. ಸಾಧಾರಣಕ್ಕೆ ಹೇದು ಮಡಿಕ್ಕೊಳ್ಳಿ.
ಅಡಿಗೆ ಸತ್ಯಣ್ಣಂಗೆ ಅಡಿಗೆ ಆದರೆ ಸಾಕೋ., ಬಟ್ಟಮಾವನ ಮಂತ್ರಾಕ್ಷತೆ ಆಯಿಕ್ಕಿ ಗುರಿಕ್ಕಾರ್ರತ್ರೆ ಚೆಂಬು ಮಡಿಗಿ ಆಗೆಡದ ಹಿಡಿಸೂಡಿ ತೆಗವಲೂ ಬಾಳೆಲೆ ಹಾಕಲೂ.
ಕೆಲಸ ಮುಗಿಶಿಕ್ಕಿ ಕಡವ ಕಲ್ಲಿಗೆ ಬೆನ್ನ ಉದ್ದಿಗೊಂಡಿತ್ತಿದ್ದ° ಅಡಿಗೆ ಸತ್ಯಣ್ಣ°.
ರಂಗಣ್ಣ ಬಾವಿಂದ ಒಂದು ಕೊಡಪ್ಪಾನ ನೀರೆಳೊಕ್ಕೊಂಡು ಬಪ್ಪಗ ಚಪ್ಪರಲ್ಲಿ ಭಾಗ ಭಾಗ ಆಗ ಹೇದು ಹೇಳ್ಸು ದೊಡಾಕೆ ಕೇಟತ್ತು.
ರಂಗಣ್ಣ ಬೀಸ ಬಂದವನೇ ಅದಾ ಮಾವ° ಬಟ್ಟಮಾವಂಗೆ ಭಾಗ ಆಗಡ!, ಇಂದು ಕೊದಿಲಿಂಗೆ ದೀಗುಜ್ಜೆ ಬಾಗ ಅಲ್ಲದ. ಬಟ್ಟಮಾವಂಗೆ ಆವುತ್ತಿಲ್ಯೋ ಎಂಸೋ.
ಸತ್ಯಣ್ಣ° ಲಟ್ಟನೆ ಸರೂತ ಕೂದವನೆ ಅದ ಅಲ್ಲಿ ಸೌತೆಕ್ಕಾಯಿ ಇದ್ದು . ಕೊರೆ ಅದರ. ಪಕ್ಕಕ್ಕೆ ನಾಕು ಬಾಗ ಹಾಕಿ ಕೊದಿಲು ಮಾಡಿಕ್ಕುವೊ ಬಟ್ಟಮಾವಂಗೆ ತಕ್ಕಿತ!.
ಸತ್ಯಣ್ಣ° ಚಪ್ಪರದೊಳಂಗೆ ಬಗ್ಗಿ ನೋಡುವಾಗ ಮನೆಯೋರು ಕಾಲುಡಿಕ್ಕೊಂಡು ಹೋವ್ಸು ಕಂಡತ್ತು. ಅಟ್ಟಪ್ಪಗ ಅಂದಾಜಿ ಆತು ಬಟ್ಟ ಮಾವ° ಹೇದ್ಸು ದಿವಿ ಭಾಗ ಜಟೆ ಹೇದು. 😀

~~

2.

ಕಿಡಿಂಜಿಲಿ ಸಂತರ್ಪಣೆ ಅದಾ . ಅಲ್ಲಿಗೂ ಅಡಿಗೆ ಸತ್ಯಣ್ಣನೇ ಹೋದ್ಸು. ಕಿಡಿಂಜಿ ಮಾಲಿಂಗಣ್ಣ ಏಕೆ ಹೋಯಿದಾ°ಯಿಲ್ಲೆ ಹೇಳ್ಸು ನವಗರಡಿಯ.
ಹತ್ತು ಸಮಸ್ತರು ಸೇರಿ ಮಾಡ್ತ ಕಾರ್ಯಕ್ರಮ.
ಮಜ್ಜಾನಕ್ಕೆ ಮಾಯಿನಣ್ಣು ರಸಾಯನವೂ ಮಾಡಿತ್ತಿದ್ದು.
ರಸಾಯನಕ್ಕೆ ಹಾಕುಸ್ಸು ಬೆಲ್ಲವೇ ಆದರೂ ಬಳುಸಲೆ ಕವಂಗ ನೆಗ್ಗಿದ ಶಿಮಡ್ಕ ಭಾವ° ಕೇಟ° – ಇದು ಶುಗರ್ ಪ್ರೀಯೋ?!.
ಅಡಿಗೆ ಸತ್ಯಣ್ಣ° ಇಪ್ಪ ಸತ್ಯವ ಇದ್ದಾಂಗೆ ಹೇದ° – ಅಪ್ಪಪ್ಪು ಇಂದ್ರಾಣ ಶುಗರ್ ಪ್ರೀ. ವಸಂತ ಪೈಯ ಸೇವೆ!. ಪೈಸೆ ಕೊಟ್ಟು ತೆಗೆಕ್ಕಾಗಿ ಬಯಿಂದಿಲ್ಲೆ!! 😀

~~
3.

ಏನಂಕೋಡ್ಳಿಂದ ಈಚಿಗೆ ವಳಕ್ಕುಂದ ಆಚಿಗೆ ಹೇಳ್ತಲ್ಲಿ ಒಂದು ಉಪ್ಪಿನಾನ ಅನುಪ್ಪತ್ಯ.
ಹಂತಿಲಿ ಸಾರು ಕೊದಿಲು ಮೇಲಾರ ಆಯಿಕ್ಕಿ ಪಾಚ ಜಿಲೇಬಿ (ಹೋಳಿಗೆ ಮಾಡಿದ್ದಿಲ್ಲೆ) ಬಡುಸಿಕ್ಕಿ ಮೇಲಾರ ವಿಚಾರಣಗೆ ಹೆರಟ ಕನಕಪ್ಪಾಡಿ ಮಾಣಿಗೆ … ಚಪ್ಪರಂದ ಹರ ಹರ ಹೇದು ಎಲ್ಲೋರು ಒಟ್ಟಿಂಗೆ ದೊಡ್ಡಕೆ ಹೇಳ್ಸು ಕೇಟತ್ತು.
ಅಲ್ಲಿಂದಲಿ ತಿರುಗಿ ಅಡಿಗೆ ಕೊಟ್ಟಗ್ಗೆ ಓಡಿ ಬಂದವನೆ ಮೇಲಾರ ಕುಟ್ಟುಗಕ್ಕೆ ಮುಚ್ಚಿಮಡಿಕ್ಕೊಂಡಿತ್ತಿದ್ದ ಬಾಳೆ ನೆಗ್ಗಿ ನೋಡಿದ°.
ಸತ್ಯಣ್ಣ° ಹೇದ° – ಹೆದರೆಡ!, ಮುನ್ನೂರಕ್ಕೆ ಅಟ್ಟಣೆ ಮಾಡಿದ್ದು. ಅವ್ವಲ್ಲಿ ಹರ ಹರ ಹೇದ್ದು ಚೂರ್ಣಿಕಗೆ. 😀

~~

4.

ಇದು ಸುಮಾರು ಮುವ್ವತ್ತೇಳೋ ಮುವ್ವತ್ತೆಂಟೋ ವೊರಿಶ ಮದಲಾಣ ಕತೆಡ.
ಪೆರ್ಲ ಶಾಲೆ ಗ್ರೌಂಡಿಲಿ ಅತಿಥಿ ಕಲಾವಿದರ ಕೂಡುವಿಕೆಂದ ಯಕ್ಷಗಾನ ಬಯಲಾಟ. ಕುರುಕ್ಷೇತ್ರ ಪ್ರಸಂಗ . ಈಗಾಣ ಬಲಿಪ್ಪಜ್ಜನ ಪದ. ಇಡೀ ಇರುಳು.
ಅಂಬಗ ಎಲ್ಲ ಈಗಾಣಾಂಗೆ ತಾರೀಕು ಪಟ್ಟಿಲಿ ದಿನ ಬದಲಿಯಪ್ಪಗ ಭಾಗವತ ಬದಲುತ್ತ ಕ್ರಮ ಇತ್ತಿದ್ದೆಲ್ಲೆಡ!
ಕೀರಿಕ್ಕಾಡು ಸುಬ್ರಾಯಜ್ಜನ ಒತ್ತಾಯಕ್ಕೆ ಅಡಿಗೆ ಸತ್ಯಣ್ಣನೂ ಆಟಕ್ಕೆ ಹೋಗಿತ್ತಿದ್ದ°.
ಎದೂರಾಣ ಸಾಲಿಲ್ಲಿ ಈಸಿಚೇರು ಹಾಕಿತ್ತಿದ್ದವು ಗಣ್ಯರಿಂಗೆ ಕೂಬಲೆ. ಗಣ್ಯರೊಟ್ಟಿಂಗೆ ಗಣ್ಯರ ಸಾಲಿಲ್ಲಿ ಅಡಿಗೆ ಸತ್ಯಣ್ಣನೂ ಕೂದಿತ್ತಿದ್ದ°.
ಅಡಿಗೆ ಸತ್ಯಣ್ಣ° ಅಲ್ಲದ್ದೇ ಆಟಕ್ಕೆ ಹೋದರೆ ಒಂದು ಗಂಟೆ ಹೊತ್ತೂ ನಿಲ್ಲದ್ದ ಜನ !
ಅಭಿಮನ್ಯು ಕಾಳಗ ಕಳುದು ಕರ್ಣಾರ್ಜುನರ ಜಟಾಪಟಿ ಸುರುವಾಗಿ ಕರ್ಣಾರ್ಜುನರ ರಥವ ಗಿರ್ರನೆ ತಿರುಗಿಸಿಯಾದಮತ್ತೆ ಪೂತುಮಝರೇ ಕರ್ಣಾ ಹೇಳುವಾಗ ಕೂದಲ್ಯಂಗೇ ಒರಕ್ಕಿಂಗೆ ಜಾರಿದ ಸತ್ಯಣ್ಣಂಗೆ ಎಚ್ಚರಿಕೆ ಆದ್ದು.
ಗದಾಯುದ್ಧದ ಭೀಮ ಕೌರವರ ಆರ್ಭಟೆ ಕೇಳಿಯಪ್ಪಗಳೇ!
ಹೊಸಹಿತ್ಲು ಮಾಲಿಂಗಣ್ಣನ ಕೌರವ!, ಚಂದ್ರಗಿರಿ ಅಂಬುವ ಭೀಮ°!!
ಸತ್ಯಣ್ಣ ಸರೀ ಕಣ್ಣು ಬಿಟ್ಟು ನೋಡುವಾಗ ಬಲಿಪ್ಪಜ್ಜ° ಅರ್ಧ ಕಣ್ಣು ಮುಚ್ಚಿಯೊಂಡು “ಎತ್ತ ಪೋದನೋ ಕುರುಕುಲ ಮಲ್ಲನು ನಿಲ್ಲದೆ ರಣದೊಳು ಜವದಿ… ” ಪದ ಹೇಳ್ವಾಗ ಭೀಮ° ಕೌರವನ ಎಲ್ಲಿದ್ದೆ ಎಲ್ಲಿ ಅಡಗಿದೆ ಹೇದು ಹುಡ್ಕುತ್ತಾ ಇದ್ದಿದ!.
ಅಲ್ಲಿಯೇ ಕೂದೊಂಡಿದ್ದೋರು ಭಾಗವತ ಆಗಲಿ ಚೆಂಡೆ ಮದ್ದಳೆಯವು ಆಗಲಿ ಭೀಮಂಗೆ ಒಂದು ಕಣ್ಣು ಸನ್ನೆ ಕೂಡ ಮಾಡ್ತದು ಕಂಡತ್ತಿಲ್ಲೆ.
ಸತ್ಯಣ್ಣ° ಸೀದ ಎದ್ದವನೆ ಚೆಂಡೆಯವನತ್ರೆ ಕೇಟಾ – ಅಲ್ಲ ನಿಂಗಳ ಕಣ್ಣ ಎದುರವೆ ಕೌರವ ಅಲ್ಲೆ ಎಡದ ಹೊಡೆಲಿ ನುರ್ಕ್ಯೊಂಡು ಹೋದ್ದಲ್ಲದ, ನಿಂಗೊಗಾರು ಅವಂಗೊಂದು ಸೂಚನೆ ಕೊಡ್ಳಾವುತ್ತಿಲ್ಯ!!.
ಬಲಿಪ್ಪಜ್ಜಂಗೆ ಇವ° ಎಂತರ ಹೇಳ್ಸು ಗೊಂತಾಯಿದಿಲ್ಲೆ. ಅಂತೇ ಕಣ್ಣು ಬಿಟ್ಟೊಂಡು ಮುಗ್ಧನೆಗೆ ಬೀರಿಯೊಂಡು ನೋಡಿದಲ್ಲೇ ಬಾಕಿ!!
“ಆಟ ಹೇದರೆ ಹಾಂಗೆಯೋ” – ಹತ್ರೆ ಕೂದ ಕೀರಿಕ್ಕಾಡು ಸುಬ್ರಾಯಜ್ಜ° ಹೇದಮತ್ತೆಯೇ ಅಡಿಗೆ ಸತ್ಯಣ್ಣನೂ ಸಮಾಧಾನ ಆದ್ದು.
ಅದಕ್ಕದ ಅಡಿಗೆ ಸತ್ಯಣ್ಣಂಗೆ ಆಟಕ್ಕೋಪದು ಹೇದರೆ ಅಟ್ಟಕ್ಕಟ್ಟೆ ಆದ್ಸು 😀

~~

5.

ವಿಟ್ಳ ಹೊಡೆಲಿ ಒಂದು ಬೊಜ್ಜ.
ಬೊಜ್ಜ ಹೇದರೆ ನಿಂಗೊಗೇ ಗೊಂತಿದ್ದನ್ನೆ ಹತ್ತರಂದೇ ಸುರುವಾವ್ತು.
ಬೊಜ್ಜದ ಅತ್ತಾಳಕ್ಕೆ ಹೋದೋರಿಂಗೆ ಸುಕ್ರುಂಡೆ ಕಟ್ಟುತ್ತೂ ಒಂದು ಕೆಲಸ ಇರ್ತನ್ನೆ.
ಸುಕ್ರುಂಡೆ ಪಾಕವ ಮೂರು ಮೂರು ಪಾತ್ರಲ್ಲಿ ಹಾಕಿ ಸಭೆಲಿ ತಂದು ಮಡಿಗಿ ಆತು.
ಪೈಸಾರಿ ಭಾವ, ಸರಳಿ ಭಾವ, ತಲೆಂಗಾನ ಭಾವ ಇವು ಸೇರ್ಯೊಂಡಲ್ಲಿ ಇದೆಲ್ಲ ಒಂದು ಕೆಲಸವೋ!
ಅರ್ಧ ಗಂಟೆಲಿ ಸುಕ್ರೆಂಡೆ ಎಲ್ಲ ಕಟ್ಟಿಯಾತು.
ಪಳ್ಳತ್ತಡ್ಕ ಭಾವ ಹೋಗಿ ಸತ್ಯಣ್ಣನತ್ರೆ ಹೇದವು ಸುಕ್ರುಂಡೆ ಕೆಲಸ ಮುಗುತ್ತು.
ಸತ್ಯಣ್ಣ° ಹೇದ° – ಹ್ಹ°, ಪಟ ತೆಗದಾತೋ?! 😀
ಅದು ಅಂಬಗಂಬಗಳೇ ಅವ್ವು ಒಂದು ಕೈಲಿಯೇ ಪಟ ತೆಗೆತ್ತರ್ಲಿ ಉಷಾರಿ ಹೇಳ್ಸು ಅಡಿಗೆ ಸತ್ಯಣ್ಣಂಗೆ ಗೊಂತಿಲ್ಲದ್ದೆ ಅಲ್ಲ, ಅಂದರೂ ಅಕೇರಿಗೆ ಒಂದು ಒತ್ತರೆ ಆದ ಲೆಕ್ಕಲ್ಲಿ ತೆಗದಾತೋ ಹೇಳ್ಸು ಅಡಿಗೆ ಸತ್ಯಣ್ಣಂಗೆ ಈಗ ಅರಡಿಯೆಕ್ಕಾದ್ಸು.
“ಆದರೆ ಎಣುಸಿ ಆ ಕರಿ ಅಳಗೆಲಿ ಹಾಕಿ ಒಳ ಅಟ್ಟಲ್ಲಿ ಮಡಿಗಿಕ್ಕಿ” – ನೆಂಪು ಹೇದ° ಅಡಿಗೆ ಸತ್ಯಣ್ಣ° 😀

~~

6.

ಬೊಜ್ಜದ ಅತ್ತಾಳಲ್ಲಿ ಸುಕ್ರುಂಡೆ ಕಟ್ಟಿಯಾತು. ಕರಿಯಳಗೆಲಿ ಹಾಕಿ ಅಟ್ಟಕ್ಕೇರಿಸಿ ಆತು.
ಬಾಳೆಲೆ ಸಜ್ಜಿ ಮಾಡಿ ಆತು, ಊಟ ಆತು. ಕೊರದೂ ಆತು. ಅವ್ವವ್ವು ಹೆರಡ್ಳೂ ಆತು.
ಅಡಿಗೆ ಕೊಟ್ಟಗ್ಗೆಲಿ ನೋಡಿರೆ ಅಡಿಗೆ ಸತ್ಯಣ್ಣನ ಟೀಮು ಲಾಡು ಕಟ್ಟುತ್ತಾ ಇದ್ದು.
ಅದರ ನೋಡಿಯಪ್ಪಗ ಮಂಗ್ಳೂರ ಮಾಣಿಗೊಂದು ಸಂಶಯ – ಸುಕ್ರುಂಡೆಗಪ್ಪಗ ನೆರೆಕರೆ ಬಂದೋರತ್ರೆ ಸುಕ್ರುಂಡೆ ಕಟ್ಳೆ ಕೊಡ್ತವು…, ಲಾಡಿಗಪ್ಪಗ ಏಕೆ ಹೇಳ್ತವಿಲ್ಲೆ ಈ ಅಡಿಗೆಯೋರು!!
ಅಡಿಗೆ ಸತ್ಯಣ್ಣ° ಹೇದಾ° – ಅದೆಲ್ಲ ಕೈರುಚಿ ಭಾವಾ. ಎಲ್ಲೋರು ಕೈ ಹಾಕಿರೆ ಸಮ ಬಾರ. 😀

~~

7.

ಅಡಿಗೆ ಸತ್ಯಣ್ಣಂಗೊಂದು ಎಲೆ ತಿಂಬ ಮರ್ಳು.
ಉಂಬ ಹೊತ್ತು ಒರಗುವ ಹೊತ್ತು ಬಿಟ್ರೆ ಬಾಯಿಲ್ಲಿ ಜಕ್ಕೊಂಡೇ ಬೇಕು.
ಹಾಂಗೇದು ತಿಂದೊಂಡೇ ಇಪ್ಪದು ಅಲ್ಲ. ಒಂದಾರಿ ತಿಂದರೆ ಮತ್ತೆ ಅದು ಕಡದು ನೊಂಪಾಗಿ ತುಪ್ಪಿ ಬಾಯಿ ತೊಳದಮತ್ತೆಯೇ ಮತ್ತಾಣದ್ದು.
ತಿನ್ನೆಡಿ, ತಿಂಬಲಾಗ ಹೇದು ಬಾಕಿದ್ದೋರು ಹೇದರೆ ಸಾಕೋ., ಅವಕ್ಕವಕ್ಕೆ ತೋರೆಡದೊ!
ಸಿದ್ದನಕರೆ ಅನುಪ್ಪತ್ಯ ಕಳಿಶಿಕ್ಕಿ ಪೇಟೆ ಕೆಲಸ ಮುಗಿಶಿಕ್ಕಿ ಮನಗೆತ್ತುವಾಗ ಹೊತ್ತು ಮೂರ್ಸಂಧಿ ಆಯಿದು.
ಎಜಮಾಂತಿ ಶಾರದಕ್ಕ° ಮಾಡಿ ತಂದುಕೊಟ್ಟ ಸಣ್ಣ ಆಸರಿಂಗೆ ಒಂದ್ಲಾಸು ಬೆಶಿ ಬೆಶಿ ಚಾಯೆ ಊಪಿ ಊಪಿ ಕುಡುದಪ್ಪದ್ದೆ ಅಡಿಗೆ ಸತ್ಯಣ್ಣ° ಎಲೆಪೆಟ್ಟಿಗೆ ಬಿಡುಸಿ ನೋಡಿದ° – ಎಲೆ ಇಲ್ಲೆ ಪೆಟ್ಟಿಗೆಲಿ. ಪೂರ ಖರ್ಚಿಯಾಗಿ ಮುಗುದ್ದು ಮುನ್ನಾಣ ದಿನವೇ ತುಂಬುಸಿ ಕೊಂಡೋದ್ಸು.
“ಇದ ಮೋಳೆ, ನೀ ಉಷಾರಿ ಅಲ್ಲದ., ಒಳಂದ ನಾಕು ಎಲೆ ಇತ್ತೆ ಕೊಂಡ”- ಹೇದು ಅಡಿಗೆ ಸತ್ಯಣ್ಣ° ಪುಸ್ತಕದೊಟ್ಟಿಂಗೆ ಮೊಬೈಲು ಓದಿಗೊಂಡಿತ್ತಿದ್ದ ರಮ್ಯನತ್ತರೆ ಹೇದ°.
ತಂದು ಕೊಡದ್ರೆ ಕೂಪಲೆ ಬಿಡವು ಹೇದು ಮದಲೇ ಗೊಂತಿದ್ದ ರಮ್ಯ, ಹೋಗಿ ಒಳಂದ ಎಣುಸಿ ನಾಕು ಎಲೆ ತಂದು – “ಇದಾ ಇದು ನಾಳ ಹೊತ್ತೋಪಗವರೇಂಗೆ ಬರೆಕು. ಎಡಕ್ಕಿಲ್ಲಿನ್ನು ಕೇಳ್ಳಾಗ” ಹೇದೊಂಡು ಕೊಟ್ಟತ್ತು.
ಸತ್ಯಣ್ಣ° ಹೇದಾ° – ಅಕ್ಕು ಮೋಳೆ., ಇದು ನಾಳಂಗೆ ಕಸ್ತಲಪ್ಪಂಗೇ ಆತು. ಈಗಂಬಗ ತಿಂಬಲೆ ನಾಕು ಇತ್ತೆ ಬೇರೆ ಕೊಂಡ!! 😀
~~

 

😀 😀 😀

5 thoughts on “ಅಡಿಗೆ ಸತ್ಯಣ್ಣನ ಒಗ್ಗರಣೆ – 59

  1. ಅರ್ಥಾತ್ ಹಾ೦ಗಲ್ಲ ಅದು,
    ಗಣ್ಯರು ಅ೦ಬಗ ಇವರೊಟ್ಟಿ೦ಗ್ಗೆ
    ಎಕ್ಕಳಿಸಿ ನೋಡ್ಯ೦ಡು ಇಪ್ಪಗಾ ಹೇಳಿ ,
    ಶ್ಯಾರ ಬರವ ,
    ಆಗದೋ?

  2. (ಇದು ಸುಮಾರು ಮುವ್ವತ್ತೇಳೋ ಮುವ್ವತ್ತೆಂಟೋ ವೊರಿಶ ಮದಲಾಣ ಕತೆಡ)
    ಅಲ್ಲ ಭಾವ.. ಮುವ್ವತ್ತೇಳೋ ಮುವ್ವತ್ತೆಂಟೋ ವೊರಿಶ ಮದಲಾಣ ಕತೆ ಹೇಳಿ ಆದರೆ ಸತ್ಯಣ್ಣ ಆವಾಗ ಹನ್ನೆರಡು ವರ್ಷದ ಮಾಣಿ ಅಗಿರೆಕ್ಕು. ಅಷ್ಟು ಸಣ್ಣ ಮಾಣಿ ಗಣ್ಯರೊಟ್ಟಿಂಗೆ ಕೂದ್ದಾ?

  3. ಸತ್ಯಣ್ಣನ ಒಗ್ಗರಣೆ ಪರಿಮಳ ಮತ್ತೆ ಬೈಲಿಲ್ಲಿ ಹರಡಿತ್ತು.
    ಮಳೆಗಾಲಕ್ಕೆ ಹೇದು ಹೇಮಾರ್ಸಿ ಮಡುಗಿದ್ದು ಇದ್ದರೆ ಒಂದೊಂದೇ ಹೆರ ಬರಲಿ.
    ಈ ಒಗ್ಗರಣೆ ಇದ್ದರೆ ಚಾಯವ ಊಪಿ ಊಪಿ ಕುಡಿವಗ, ಮಿಕ್ಸ್ಚರ್ ತಿಂದ ಹಾಂಗೆ ಆವ್ತು

  4. ಕೊಶಿಯಾತು.
    ಅಡಿಗೆ ಸತ್ಯಣ್ಣಂಗೆ ಒಂದು ಗುಟ್ಟು ಹೇಳ್ತೆ. ಎಲೆ ತಟ್ಟೆಲಿ ಎಲೆ ಮುಗುದರೆ, ಓ ಅಲ್ಲೇ ಜಾಲಕೆರೆಂಗೆ ಹೋದರಾತು, ಸಿಕ್ಕುಗು. ನಿಂಗಳತ್ರೆ ಕುಣಿಯ ಇಕ್ಕನ್ನೇ….

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×