Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 1

ಬರದೋರು :   ಚೆನ್ನೈ ಬಾವ°    on   16/03/2013    7 ಒಪ್ಪಂಗೊ

ಚೆನ್ನೈ ಬಾವ°

ಶುದ್ದಿ ಬರವಲೆ ಒಪ್ಪ ವಿಷಯ ಸಿಕ್ಕಿದ್ದಿಲ್ಲೇಲಿ ಶುದ್ದಿ ಬರೆಯದ್ದೆ  ಬಾಕಿ ಅಪ್ಪಲಾಗಡ. ನಮ್ಮ ಸುತ್ತ ಮುತ್ತ ಇಪ್ಪ ಶುದ್ದಿಯನ್ನೇ ಒಪ್ಪಕ್ಕೆ ಹೆಣದು ಆಯ್ತ ಮಾಡಿ ಬರದರೆ ಒಪ್ಪ ಶುದ್ದಿಯೇ ಆಗಿ ಹೋವ್ತು ಹೇಳ್ವದು ಇಲ್ಲಿ ಇಪ್ಪ ಶುದ್ದಿ. ಅದು ಅಶುದ್ಧಿ ಆಗದ್ದಾಂಗೆ ನೋಡಿಗೊಂಡ್ರೆ ಆತು. ಅಷ್ಟೆ. ಆ ಪಾಕಲ್ಲಿ ತಯಾರಾದ್ದು ಈ ಶುದ್ದಿ ಇದು ಹೇದು ಮದಾಲು ಒಪ್ಪಿಕ್ಕುತ್ತೆ. ಇನ್ನು ಇಲ್ಲಿ ಇಪ್ಪ ಶುದ್ದಿಗೆ ಹೋಪ° –

 

‘ಹಾಸ್ಯ’ಹೇಳಿರೆ ‘ನವರಸ’ಲ್ಲಿ ಒಂದು.  ಹೀಂಗೆ ನಿಂಗಳತ್ರೆ ಆನು ಹೇಳಿರೆ, ‘ಅದು ಇನ್ನು ನೀನು ಹೇಳಿಯೇ ಗೊಂತಾಯೇಕ್ಕಾಷ್ಟೆಯೋ’ ಹೇದು ಬೋಚಬಾವನೂ ನೆಗೆಮಾಣಿಯೂ ಜತೆಸೇರಿ ಕೈ ತಟ್ಟಿ ನೆಗೆಮಾಡುಗು. ಬೇಕಾರೆ ಪೆಂಗಣ್ಣನೂ ಸೇರುಗು. ಟೀಕೆ ಮಾಡುವವು ಸುಮ್ಮನೆ ಕೂರವು. ಪದ್ಯ ಬರವವು ಭಾಮಿನಿ ಬರದೇ ಹೇಳಿ ಬಿಟ್ಟಿಕ್ಕುಗು. ಚಿತ್ರ ಬರವವೂ ವ್ಯಂಗ್ಯ ಚಿತ್ರ ಬರದು ಎತ್ತಿ ತೋರ್ಸುಗು. ಅಂದರೂ ಸುಭಗರು ಮಾಂತ್ರ ಅಷ್ಟು ಪಕ್ಕಕ್ಕೆ ದೆನಿ ಎತ್ತವು. ಸದ್ಯಕ್ಕೆ ಇದು ನಮ್ಮ ಬೈಲು ಆದ ಕಾರಣ ಪೇಪರ್ನೋರ ಉಪದ್ರ ಇರ. ಮತ್ತಾರರು ಚೆಂಡೆಕುಟ್ಟುತ್ತರೆ ನವಗೆ ಹೆದರಿಕೆ ಇಲ್ಲೆ. ಗುರಿಕ್ಕಾರ್ರಿದ್ದವದಾ.. ಅವರ ಎದುರು ನಿಲ್ಸಿ ನಾವು ಹಿಂದೆ ನಿಂದರಾತು.  😀

ಹಾಸ್ಯ ನಮ್ಮ ಜೀವನಲ್ಲಿ ಒಂದು ಅವಿಭಾಜ್ಯ ಅಂಗ. ಹಾಸ್ಯ ಪ್ರಜ್ಞೆ ಇಲ್ಲದ್ದಂವ° ಆರು?! 🙁

ಸಿನೇಮಲ್ಲಿ ಹಾಸ್ಯ ಇದ್ದು, ನಾಟಕಲ್ಲಿ ಹಾಸ್ಯ ಇದ್ದು, ನಾಟ್ಯಲ್ಲಿಯೂ ಹಾಸ್ಯ ಭಾವ ಇದ್ದು, ಯಕ್ಷಗಾನಲ್ಲಿಯೂ ಹಾಸ್ಯ ಇದ್ದು. 😀 😀

ಹಲವು ಮಹನೀಯರು ಹಾಸ್ಯಲ್ಲಿ ಉನ್ನತ ಸ್ಥಾನವ ಪಡದವು ಇದ್ದವು.  ಕೆಲವೊಂದರಿ ಹಾಸ್ಯ ಮಿತಿಮೀರಿ ಹೋಪಗ ಹಾಸ್ಯಮಾಡಿದವನೇ ಅಪಖ್ಯಾತಿ ಆದ್ದೂ ಇದ್ದು. 🙁

ಹಾಸ್ಯ ಮನುಷ್ಯನ ಆಯುಷ್ಯವ ಹೆಚ್ಚಿಸುತ್ತಡ, ಆರೋಗ್ಯವ ಹೆಚ್ಚಿಸುತ್ತಡ. (ಕೆಲವರಿಂಗೆ ಆರ್ಥಿಕವನ್ನೂ ಹೆಚ್ಚುಸುತ್ತು ಬಿಡಿ).

ಹಾಸ್ಯ ಹೇಳಿರೆ ನೆಗೆ ಮಾಡ್ಳೆ ಇಪ್ಪದು ಅಪ್ಪು ಹಾಂಗೇಳಿ ಅದು ವ್ಯಂಗ್ಯ ಮಾಡ್ಳೆ ಇಪ್ಪದು ಅಲ್ಲ. ಹಾಸ್ಯ, ಮನುಷ್ಯಂಗೆ ಚಿಂತನೆಗೆ ಎಡೆಮಾಡಿಕ್ಕೊಡೆಕು.

ವ್ಯಂಗ್ಯ ಮಾಡಿಗೊಂಡು ಹಾಸ್ಯ ಮಾಡಿರೆ ಅದು ಹಾಸ್ಯವೂ ಅಲ್ಲ ಬಿಡಿ.

ಹಾಸ್ಯಲ್ಲಿ ಹೆಸರು ಮಾಡಿದ ಮಹನೀಯರು ಅನೇಕ. ಅದರ ಇಲ್ಲಿ ಹೆಸರಿಸಿಗೊಂಡು ಕೂಬಲೆ ಇದೆಂತ ಹಾಸ್ಯ ಸಂಶೋಧನೆ ಮಾಡ್ತದೂ ಅಲ್ಲ ಬಿಡಿ. 🙁

ಹಾಸ್ಯಂಗಳನ್ನೇ ‘ಜೋಕುಗಳು’ ಹೇಳಿ ಹೇಳುಸ್ಸಪ್ಪೋ. ಸರ್ದಾರು ಜೋಕುಗಳು, ರಾಂಪನ ಜೋಕುಗಳು, ಕುಂಟಾಂಗಿಲ ಬಾವನ ಊರ್ಲಿ ‘ಅಶ್ರಫ್ ಜೋಕು’ಗಳೂ ಇದ್ದಡಪ್ಪ. ಇನ್ನು ಸಂತ ಬಂಟ ಜೋಕು, ಚೈನೀಸ್ ಜೋಕು.. ಉಮ್ಮ ಎಷ್ಟು ವಗೈರೆಗೊ ಇದ್ದೋ ಏನೋ. ಎಂತಕೆ! ವೆಂಕು ಪಣಂಬೂರಿಂಗೆ ಹೋದ್ದೂ ಒಂದು ‘ಜೋಕೇ’ ಆಯ್ದು. 😀

ಇನ್ನು, ಕೆಲವು ಜೆನ ಮಾತಾಡಿರೇ ಜೋಕು, ಅಲ್ಲ.. ಮಾತಾಡ್ತದೇ ಜೋಕೋ! 😀

ಇರ್ಲಿ, ಜೀವನಕ್ಕೆ ಜೋಕ್ಸ್ ಯಾನೆ ಹಾಸ್ಯ ಅತೀ ಅಗತ್ಯ ಹೇಳ್ವ ಹಂತಕ್ಕೆ ಬಂದು ನಿಂಬೊ ಈಗ.

ಆದರೆ, ಈ ಮೇಲೆ ಹೇಳಿದ ಹಾಸ್ಯ/ ಜೋಕುಗಳಲ್ಲಿ ರಾಂಪನೋ, ಸರ್ದಾರನೋ, ವೆಂಕು, ಅಶ್ರಫ್… ಇವೆಲ್ಲ ಪೆದ್ದ° ಹೇಳಿ ಗ್ರೇಶಿ ಹೋವ್ತು ಒಂದಂದರಿ, ಆದರೆ ನಿಜವಾಗಿ ಹಾಂಗೆ ಇಲ್ಲೆ. ಅವರಷ್ಟು ನಿಪುಣರು ನಾವು ಕೂಡ ಅಲ್ಲ. ಹಾಂಗಾಗಿ ಸರ್ದಾರು ಜೋಕುಗಳ ಹೇಳುಸ್ಸು / ವಿನಿಮಯ ಮಾಡಿಗೊಂಬದು ತಪ್ಪು, ಅನ್ಯಾಯ… ಹೇಳಿಯೆಲ್ಲ ಕೆಲವು ದಿಕ್ಕಿ ಚಳುವಳಿ ಆದ್ದೂ ಇದ್ದಡಪ್ಪ! – ಇದೂ ಒಂದು ‘ಜೋಕು’ ಅಪ್ಪು ಅಲ್ಲದೋ. 😀

ಎಂತಕೆ ಹೇಳಿರೆ ಜೋಕುಗಳಲ್ಲಿ ಪ್ರತಿಪಾದ್ಯರಾದ ಸರ್ದಾರ್, ರಾಂಪ .. ಇದೆಲ್ಲ ನಿಜ ಕೇರಕ್ಟರ್ ಅಲ್ಲ. ಅದು ಸಮಾಜದ ಒಂದು ‘ವ್ಯಕ್ತಿತ್ವ’ ಹೇಳಿ ತೆಕ್ಕೊಳ್ಳೆಕ್ಕೇ ವಿನಾ ಇದಾರೋ ಸರ್ದಾರನ ನೆಗೆ ಮಾಡುಸ್ಸು ಹೇಳಿರೆ ಇದರಿಂದ ದೊಡ್ಡ ಬೋಸು ಪಂಚಾತಿಗೆ ಇನ್ನೊಂದಿದ್ದೋ!. ಹಾಂಗೇಳಿ., ಯಾವ ಜಾತಿಯನ್ನೋ, ಸ್ಥಾನವನ್ನೋ, ವ್ಯಕ್ತಿಯನ್ನೋ ಆ ಜೋಕುಗಳ ಮೂಲಕ ಅಪಹಾಸ್ಯ ಮಾಡಿರೆ ತಪ್ಪು. – ಒಪ್ಪುವೋ°. ಅದಕ್ಕಾಗಿ ಏನೂ ಸಿಕ್ಕದ್ರೆ ‘ಭಟ್ರುಗೊ’ ಸಿಕ್ಕುತ್ತವು ಬಾಯಿಗೆ ಬಂದಾಂಗೆ ಹಾಸ್ಯ ಮಾಡ್ಳೆ. ಎಂತಕೆ ಭಟ್ರುಗೊ ಪ್ರತಿಭಟನಗೆ ಇಳಿತ್ತವಿಲ್ಲೆ ಹೇಳಿ ಧಾರಳ ಗೊಂತಿದ್ದು ಮನುಷ್ಯರಿಂಗೆ!. ಹಾಂಗಾಗಿ ಆಟಲ್ಲಿಯೂ ಭಟ್ರುಗಳ ಗುರಿಹಿಡ್ಕೋಂಕು ಬೇಕಾಬೇಕಿ ಹಾಸ್ಯಂಗೊ ನಡೆತ್ತು. ಸ್ವಾಮೀಜಿ, ಮಠ ಹೇಳಿ ಬೀದಿ ಮಾತು ಆಗಿ ಬಿಡ್ತದು ಖೇದಕರ. ಹಾಂಗೇಳಿ ಏವ ಇಂಗ್ರೋಜಿಯನ್ನೋ, ಪಳ್ಳಿಯನ್ನೋ ಸಾರ್ವಜಿನಿಕ ಹಾಸ್ಯವಾಗಿ ಹೇಳಿರೆ!! ದಂ ಇದ್ದೋ ಅವಕ್ಕೇ?! 🙁

ಇಷ್ಟೆಲ್ಲ ಪೀಠಿಕೆ ಹಾಕಿದ್ದು ಎಂತಕೆ ಹೇಳಿರೆ, ಹಾಸ್ಯ / ಜೋಕುಗೊ ತಿಳಿಹಾಸ್ಯವಾಗಿ ಇರೆಕು, ಆರೊಬ್ಬನ ಮನನೋಯಿಸಲೆ ಇಪ್ಪದು ಅಲ್ಲ ಹೇಳಿ ನಾವು ಒಪ್ಪಿಗೊಳ್ತು ಹೇಳಿ ಸ್ಪಷ್ಟಪಡುಸಲೆ. 😀

ಇನ್ನು ಈ ಹಾಸ್ಯಕ್ಕೂ ಒಂದು ‘ಎಲ್ಲೆ’ ಇದ್ದು. ಅದು ಆ ‘ಮಿತಿ’ ಮೀರ್ಲಾಗ. ಇನ್ನು ‘ಮಿತಿಮೀರಿದ’ ಹಾಸ್ಯಂಗೊ ಕೆಲವು ಇದ್ದು, ಅದಕ್ಕೂ ಸಾನ ಒಂದು ‘ಮಿತಿ’ ಇದ್ದು. ಅದು ಮತ್ತೊಂದು ವರ್ಗಂಗೆ ಇಪ್ಪಂತಾದ್ದು. ಆಯಾ ಗ್ರೂಪಿಲ್ಲಿ ಆಯಾ ‘ಜೋಕು’.

~~~~~~~~

ಮತ್ತೆ.. ನಮ್ಮ ಬೈಲಿಲಿ ವಾರ ವಾರ ಶುದ್ದಿ ಬರವ ‘ಒಪ್ಪಣ್ಣ°’, ಮತ್ತೆ ಅಪರೂಪಲ್ಲಿ ಬೈಲಿಲಿ ಕಾಂಬ ‘ಪೆಂಗಣ್ಣ°’, ‘ಕೆಪ್ಪಣ್ಣ°’ ‘ನೆಗೆಮಾಣಿ’ ‘ಬೋಸಬಾವ°’..  ಹೇಳಿರೆ ಆರು ಹೇದು ಕೇಳಿರೆ ನಿಂಗೊ ಓ ಆ ಜೆನ ಹೇದು ಬೆರಳೆತ್ತಿ ತೋರ್ಸುವಿ. ಆದರೆ ವಾಸ್ತವ ಹಾಂಗಲ್ಲ. ಅದು ನಮ್ಮ ಬೈಲಿಲ್ಲಿ ಇಪ್ಪ ಒಂದು ವ್ಯಕ್ತಿತ್ವ ಅಷ್ಟೇ. ಆರೋ ಒಬ್ಬ ಆ ವ್ಯಕ್ತಿತ್ವವ ಇಲ್ಲಿ ಚಿತ್ರೀಕರುಸುತ್ತ° ಹೇಳ್ವದು ನಾವು ತಿಳ್ಕೊಳ್ಳೆಕ್ಕಾದ ಖಂಡಿತಾ ಸತ್ಯ.

~~~~~~~~

ಇನ್ನು ಜೋಕುಗೊ ಹೇಳಿ ಬೇರೆ ಬೇರೆ ಹೆಸರಿಲ್ಲಿ ಪುಸ್ತಕ ರೂಪಲ್ಲಿ, ಧ್ವನಿರೂಪಲ್ಲಿ ಬೇರೆ ಬೇರೆ ಭಾಷೆಲಿ ಧಾರಾಳ ಇದ್ದು. ಅಂತರ್ಜಾಲಲ್ಲಿಯೂ ಇದ್ದು. ಮೊಬೈಲಿಲಿ ಅಂತೂ ದಿನನಿತ್ಯ  ‘ಸಮೋಸ’ ಬಂದುಗೊಂಡೇ ಇರ್ತು. ಕೆಲವರಿಂಗಂತೂ ಅದೊಂದು ಹವ್ಯಾಸವೇ ಆಗಿದ್ದಪ್ಪೋ. ಕೆಲವು ಜೆನ ಎಷ್ಟೊತ್ತಿಂಗೂ ಸಮೋಸ ಕಳ್ಸಿಯೊಂಡೇ ಇಕ್ಕು. ಉಡುವೆಕೋಡಿ ಅಜ್ಜ° ಯಕ್ಷಗಾನಲ್ಲಿ ಅರ್ಥ ಹೇಳುವಾಗ ಹೇಳಿದಾಂಗೆ –  “ಕೆಲವರು ಸುದ್ದಿ ತಯಾರಕರು, ಕೆಲವರು ಸುದ್ದಿ ಪ್ರಚಾರಕು ಅಂತ,  ಇನ್ನು ಕೆಲವರು ತಯಾರಕರೂ ಹೌದು, ಪ್ರಚಾರಕರೂ ಹೌದು”.  ಇನ್ನು ಆರದು  ಕೂದೊಂಡು ಆ ಸಮೋಸಂಗಳ ಸೃಷ್ಟಿ ಮಾಡುತ್ತದೋ, ಸುದ್ದಿ ಎಲ್ಲಿಂದ ಸುರುವಾದ್ದೋ ಆ ದೇವರಿಂಗೇ ಗೊಂತ್ತು. ಭಾಷಾ ಸಾಹಿತ್ಯ ನೋಡಿರೆ,  ‘ನಮ್ಮ ಬೈಲ ಕರೇಲಿಯೇ ಎಲ್ಲ್ಯೋ ಒಂದಿಕ್ಕೆ ಆವ್ತಾ ಇಪ್ಪದು’ – ಅಷ್ಟು ಮಾಂತ್ರ ನವಗೆ ಅಂದಾಜು ಮಾಡ್ಳಕ್ಕು.  ಆಗಲಿ, ಕೆಲವೂ ಮೂಲಂಗಳ ಹುಡ್ಕಲಾಗಡ, ಹಾಂಗೇ ‘ಸಮೋಸ’ ಮೂಲಂಗಳೂ ನವಗೆ ಅಗತ್ಯ ಇಲ್ಲೆ.   ಅಜ್ಜಕಾನ ಬಾವನ ಮೊಬೈಲು ನೆಡು ಇರುಳು ಕಿಣಿ ಕಿಣಿ ಆದರೆ ಡೈಮಂಡು ಭಾವನ ಮೊಬೈಲಿಂಗೆ ಉದಿಗಾಲ ಮೂರು – ನಾಕು ಗಂಟಂಗೂ ಇದಾ ವಿಮಾನ ಹೋತು ಹೇಳಿ ‘ಸಮೋಸ’ ಕಳ್ಸುವವೂ ಇದ್ದವಡ!!.  ಎರಡು ಗಂಟಗೆ ಒರಗಿದಂವ° ಏಳುಗಂಟಗೆ ಎದ್ದು ನೋಡುವಾಗ ಮೊಬೈಲಿಲಿ ಹದಿನೇಳು ‘ಸಮೋಸ’ ಹೇಳಿ ಕೆಲವು ಜೆನ ಹೇಳ್ತದೂ ಇದ್ದು. – ಇರ್ಲಿ., ಎಲ್ಲವೂ ಬೇಕಾದ್ದೆ. ಎಲ್ಲ ಅವರವರ ಅಭಿರುಚಿಗೆ ತಕ್ಕಾಂಗೆ ಪರಸ್ಪರ ವಿನಿಮಯ ಮಾಡಿಗೊಂಡಿರ್ತವು.

ಹೀಂಗೆ.., ಈಗ ಎಂತಾಯ್ದು ಹೇಳಿರೆ, ನಮ್ಮ ಭಾಷಾಭಿಮಾನ ಒಂದೊಡೆಲಿ ಕಮ್ಮಿ ಆವ್ತಾ ಇದ್ದರೂ ಮತ್ತೊಂದೊಡೆಲಿ ಉಳುಶಿ ಬೆಳಶುವ ಪ್ರಯತ್ನಂಗಳೂ ಆವ್ತಾ ಇದ್ದು. ಇದಕ್ಕೆ ನಮ್ಮ ಬೈಲು ಅತ್ಯತ್ತಮ ಉದಾಹರಣೆ. ಇತ್ತೀಚಗೆ ಮೊಬೈಲಿಲ್ಲಿಯೂ ಈ ಭಾಷಾಭಿಮಾನ ಎದ್ದು ಕಾಂಬಲೆ ಸುರುವಾಯ್ದು ಹೇಳ್ವದು ಗಮನಾರ್ಹ ವಿಷಯ. ಎಂತಕೆ ಹೇಳಿರೆ, ಈ ವರೇಂಗೆ ಮೇಗೆ ಹೇಳಿದ ಸರ್ದಾರು, ರಾಂಪ, ತ್ಯಾಂಪಣ್ಣ ಜೋಕುಗೊ ಹೋಗಿ ‘ಹವ್ಯಕ ಜೋಕು’ ಸುರುವಾಯ್ದು ಹೇಳಿ ಬೈಲಿಲಿ ತಿಳುಶಲೆ ಹೆಮ್ಮೆ ಆವ್ತು. ಕೆಲವು ದಿನಂದ ಹವ್ಯಕ ಜೋಕುಗೊ ಪ್ರಚಲಿತ ಆವ್ತಾ ಇದ್ದು. ಅಲ್ಲಿಯೂ ಇತಿ ಮಿತಿ ಹೇದು ಎಲ್ಲೆ ಇದ್ದು. ಅದು ಅವರವರ ಅಭಿರುಚಿಗೆ ತಕ್ಕಂತೆ ಹೇಳಿ ನಾವು ತಿಳ್ಕೊಂಬ.

ಹೀಂಗೆ ಬಂದ ಜೋಕುಗಳ ಕೆಲವು ಇಲ್ಲಿ ಹಾಕುತ್ತ ಇದ್ದೆ.  ಇದಕ್ಕೆ ‘ಅಡಿಗೆ ಸತ್ಯಣ್ಣ’ನ ಜೋಕುಗೊ ಹೇದು ಹೆಸರು. 

ಆರಿದು ಅಡಿಗೆ ಸತ್ಯಣ್ಣ ?  ಇವರ ಪರಿಚಯ ಇಲ್ಲದ್ದೊರು ಈ ರೀತಿಯಾಗಿ ಅವರ ತಿಳ್ಕೊಂಬಲಕ್ಕು – ಅಡಿಗೆ ಸತ್ಯಣ್ಣ. ಪೆರ್ಲ ಹೌಸ್, ಪೆರ್ಲ ಪೋಸ್ಟ್, ಪೆರ್ಲ ಗೇಟಿನ ಹತ್ರೆ, ಕಾಸರಗೋಡು ತಾಲೋಕು. ವಿವಾಹಿತ. ಮಡದಿ- ಶಾರದೆ. ಮಗಳು- ರಾಧೆ, ರಮ್ಯ,  ಮಗ°- ರಾಜ°.  ವೃತ್ತಿ- ಅಡಿಗೆ.  ಬೈಲಿನ ಹಲವು ಮನಗೆ ಅನುಪ್ಪತ್ಯಕ್ಕೆ ಅವನದ್ದೇ ಮೇಲಡಿಗೆ. ಅವನೊಟ್ಟಿಗೆ ಕಾಯಿ ಕಡವಲೆ ಹೋಪದು ನಲ್ಕದ ರಂಗಣ್ಣ. (ಹೇಂಗೆ ಈಗ ಜೆನ ಅಂದಾಜಿ ಆತಿಲ್ಯೋ ಆರಿದು ಹೇದು. ನಿಂಗೊಗೂ ಈಗ ಎಲ್ಯೋ ಇವನ ಕಂಡಾಂಗೆ ಆವ್ತಪ್ಪೋ?!).

ಮತ್ತೊಂದರಿ ಇದಾ..ನಿಂಗಳತ್ರೆ ಹೇಳ್ತೆ – ಇದು ಕೇವಲ ಜೋಕಿಗಾಗಿ. ಇದರಲ್ಲಿ ಬಪ್ಪ ಹೆಸರುಗೊ ಕೇವಲ ಒಂದು ‘ವ್ಯಕ್ತಿತ್ವ’. ಪ್ರತ್ಯೇಕವಾಗಿ ಆರನ್ನೂ ಉದ್ದೇಶಿತವಾಗಿ ಅಲ್ಲ. ನಿಂಗಳತ್ರೆಯೂ ಹೀಂಗಿಪ್ಪ ಜೋಕುಗೊ ಇದ್ದರೆ ಧಾರಳ ನಮ್ಮೊಟ್ಟಿಂಗೆ ಹಂಚಿಗೊಳ್ಳಿ. 😀 😀

ಸತ್ಯಣ್ಣನ ಮೋರೆಪುಟ: ಇಲ್ಲಿದ್ದು

ಇವಿಷ್ಟು ಪೀಠಿಕೆಯೊಂದಿಂಗೆ, ಮುಂದೆ – ‘ಅಡುಗೆ ಸತ್ಯಣ್ಣನ ಜೋಕುಗಳ’ ಓದುವೋ°-

~~~~~~  ~~~~~

1.

‘ಅಡಿಗೆ ಸತ್ಯಣ್ಣ°’ ಬಸ್ ಸ್ಟಾಪಿಲ್ಲಿ ಬಸ್ಸಿಂಗೆ ಕಾದುಗೊಂಡಿತ್ತಿದ್ದ°.

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

 

ಮಗಳೂ ಒಟ್ಟಿಂಗೆ ಇತ್ತು.

ನೆರೆಯ ಶಂಕರಣ್ಣನೂ ಬಸ್ ಸ್ಟಾಪಿಂಗೆ ಬಂದವನೇ ಕೇಳಿದ.. “ನೀನು ದೂರ? ಈ ಕೂಸಿಂಗೆ ಮದುವೆ ನಿಶ್ಚಯ ಆತಡ. ಎಲ್ಲಿಗೆ ಕೊಡುಸ್ಸು? ?

ಸತ್ಯಣ್ಣ° ಹೇಳಿದ° – ” ಅಪ್ಪಪ್ಪು ,ಇದರ ಪೆರ್ಲದ ಜವುಳಿ ರಾಮಣ್ಣನ ಮಗಂಗೆ ಕೊಡುದು., ಅಂವ ಬೆಂಗಳೂರಿಲ್ಲಿ ಕಂಪೂಟರ್ . ಆನು ಈಗ ಪುತ್ತೂರಿಂಗೆ ಹೆರಟದು , ಇದಕ್ಕೆ ಜ್ವರ “

ಶಂಕರಣ್ಣ° ಕೇಳಿದ° – “ಜ್ವರಕ್ಕೆ ಮದ್ದಿಂಗೆ ಪುತ್ತೂರಿಂಗೆ…??!”

ಸತ್ಯಣ್ಣ° ಹೇಳಿದ° – “ಈ ಕೂಸು ಹುಟ್ಟಿದ್ದು ಬೋನಂತಾಯನಲ್ಲಿ. , ಡೆಲಿವರಿ ಮಾಡಿದ ಡಾಕುಟ್ರ ಹೇಯ್ದಾ.. ಇನ್ನು ಮುಂದೆ ಈ ಮಗುವಿಂಗೆ ಎಂತ ಸಣ್ಣ ಜ್ವರ ಬಂದರು ಇಲ್ಲಿ ಮಕ್ಕಳ ಡಾಕುಟ್ರಿಂಗೆ ತೋರ್ಸೆಕು ಹೇದು. ಹಾಂಗೆ ಹೆರಟದಿದಾ “ 😀

~~

2.

ಒಂದು ಮಧ್ಯಾಹ್ನ ಮೇಲೆ ಅಡಿಗೆ ಸತ್ಯಣ್ಣನ ಮನಗೆ ಅಡಿಗೆ ಬುಕ್ ಮಾಡ್ಳೆ ಶಂಕ್ರಣ್ಣ° ಬಂದದು.

ಅಲ್ಲಿಗೆ ಹೋದಪ್ಪಗ ಸತ್ಯಣ್ಣ° ಬರೀ ನೆಲಕ್ಕಲ್ಲಿ, ಉದ್ದಾಕೆ, ಕಣ್ಣುಮುಚ್ಚಿ ಮನಿಗಿತ್ತಿದ್ದ°. ಗೊರಕ್ಕೆಯೂ ಜೋರಿತ್ತಿದ್ದು.

ಎದುರೆ ಇತ್ತಿದ್ದ ಅವನ ಯಜಮಾಂತಿ ಹೇಳಿತ್ತು – “ಈಗ ಅವರ ಏಳುಸಲೆ ಗೊಂತಿಲ್ಲೆ, ಅವು ‘ಶವಾಸನ’ಲ್ಲಿ ಇದ್ದವು.

ಶಂಕ್ರಣ್ಣ° ಕೇಳಿದ° – ಅದೆಂತರ?

ಹೆಮ್ಮಕ್ಕ ಹೇಳಿತ್ತು – ಶವಾಸನ ಹೇಳಿರೆ ಒಂದು ಯೋಗಾಸನ. ಅಳಿಯ° ಹೇಳಿಕೊಟ್ಟದು. ಅಂವ° ರವಿಶಂಕ್ರ ಗುರುಜಿಯ ಕ್ಲಾಸಿಂಗೆ ಹೋಯ್ದ°. ಯಜಮಾನ್ರು ಅಡಿಗಗೆ ಹೋಯ್ಕಿ ಬಂದಿಕ್ಕಿ ಶವಾಸನ ಮಾಡ್ತವು. ಅದು ಎಷ್ಟು ಹೊತ್ತಿಂಗೆ ಮುಗಿತ್ತು ಗೊಂತಿಲ್ಲೆ. ನಡುಕೆ ಡಿಸ್ಟರ್ಬ್ ಮಾಡ್ಳಾಗ ಹೇಳಿ ಅಳಿಯ° ಹೇಳಿದ್ದ°. ಅಷ್ಟನ್ನಾರ ನಿಂಗೊ ಕೂರಿ, ಆಸ್ರಿಂಗೆ ಮಾಡಿ ತತ್ತೆ. 😀

~~~

3.

ತುಂಬ ಹೊತ್ತು ಒಂದು ಮೊಬೈಲ್ ಹಿಡ್ಕೊಂಡು ಜಾಲಕರೆಲಿ ನಿಂದು ಮಗಳು ಆರತ್ರೆಯೋ ಮಾತಾಡ್ತಾ ಇಪ್ಪದರ ನೋಡಿ ‘ಅಡಿಗೆ ಸತ್ಯಣ್ಣ°’ ರಹಸ್ಯ ತಿಳ್ಕೊಂಬ ಅಭಿಪ್ರಾಯಕ್ಕೆ ಬಂದ.

ಮಗಳು ಮನೆಯೊಳ ಬಂದಪ್ಪದ್ದೆ ಸತ್ಯಣ್ಣ ಮಗಳತ್ರೆ ಕೇಳಿಯೇ ಬಿಟ್ಟ° – ‘ಒಪ್ಪಕ್ಕಾ., ನಿನಗೆ ಮೊಬೈಲ್ ತೆಗದು ಕೊಟ್ಟದಾರು? ಹೈಸ್ಕೂಲಿಂಗೆ ಎತ್ತುವಾಗಳೇ ನಿನಗೆಂತಕೆ ಮೊಬೈಲು? ಸುಮ್ಮನೆ ಪೈಸೆ ಖರ್ಚಿಗೊಂದು ದಾರಿ ಅಲ್ಲದ ? “

ಮಗಳು ಹೇಳಿತ್ತು – “ಅಪ್ಪಾ°, ನಿಂಗೊ ಎಂತಕೆ ಪೈಸಗೆ ತಲೆಬೆಶಿ ಮಾಡೊದು!, ಇದು ನಿಂಗಳ ಬಲಕೈ ರಂಗಣ್ಣ° ಕಳುದವಾರ ನಿಂಗಳೊಟ್ಟಿಂಗೆ ನಮ್ಮ ಮನಗೆ ಎಲ್ಲಿಂದಲೋ ಅಡಿಗೆಂದ ಬಂದು ಇಲ್ಲಿ ಮನುಗಿಕ್ಕಿ ಹೋಗಿತ್ತ ಅಲ್ಲದ, ಅಂದು ಎನಗೆ ಕೊಟ್ಟಿಕ್ಕಿ ಹೋದ್ದು, ಗಿಫ್ಟಡ ಅಪ್ಪ° ಇದು. ಮತ್ತೆ ದಿನಾ ಟಾಕ್ ಟೈಮ್ ಮುಗುದಪ್ಪಗ ಅವಂಗೆ ಹೇಳಿರಾತು. ಅವನೇ ರೀಚಾರ್ಜು ಮಾಡುಸುತ್ತ°. ನಿಂಗೊಗೆ ಖರ್ಚೇ ಇಲ್ಲೆ ಅಪ್ಪ°”.

ಸತ್ಯಣ್ಣ° ಮಗಳ ಕೈಂದ ಮೊಬೈಲ್ ಬಲ್ಗಿ ತೆಗದು ರಂಗಣ್ಣಂಗೆ ಫೋನ್ ಮಾಡಿ ಹೇಳಿದ –

.

.

.. “ರಂಗಣ್ಣೋ, ಟಾಕ್ ಟೈಮ್ ಮುಗಿವಲಾತು. ರೀಚಾರ್ಜು ಮಾಡ್ಸಿಕ್ಕಾತೋ” 😀

~~

4.

ಅಡಿಗೆ ಸತ್ಯಣ್ಣನ ಮನಗೆ ಫೋನ್ ಸಂಪರ್ಕ ಇನ್ನೂ ಸುರುವಾಯ್ದಿಲ್ಲೆ.

ಈಗ ಮತ್ತೆ ಹೇಂಗೂ ಮಗಳಿಂಗೆ ಗಿಫ್ಟ್ ಸಿಕ್ಕಿದ ಅವನ ರೈಟ್ ಹಾಂಡ್ ರಂಗಣ್ಣ° ಕೊಟ್ಟ ಮೊಬೈಲ್ ಇದ್ದನ್ನೆ.

ಒಂದಿನ ಆದಿತ್ಯವಾರ ಸತ್ಯಣ್ಣಂಗೂ ಅನುಪ್ಪತ್ಯ ಇಲ್ಲದ್ದೆ ರಜೆ.

ಮಗಳ ಮೊಬೈಲ್ ತೆಕ್ಕೊಂಡು ತನ್ನ ನೆಂಟರಿಷ್ಟರಿಂಗೆಲ್ಲ ಫೋನ್ ಮಾಡಿ ಮಾತಾಡಿಕ್ಕಿ ಅಕೇರಿಗೆ ರಂಗಣ್ಣಂಗೆ ಫೋನ್ ಮಾಡಿ ಹೇಳಿದ- 

.

.

.

.

 

    … “ರಂಗಣ್ಣೋ, ಮಗಳಿಂಗೆ ಮಾತಾಡ್ಳೆ ಇದ್ದಡ, ರೀ ಚಾರ್ಜ್ ಮಾಡಿಕ್ಕು”.  😀

~~

5.

ಸತ್ಯಣ್ಣನ ಅಡಿಗೆ ಭಾರೀ ಲಾಯಕ ಆವ್ತು ಹೇಳಿ ಊರಿಂಗೆ ಊರೇ ಹೊಗಳೋದು ಅವನ ಯಜಮಾಂತಿಯ ಕೆಮಿಗೆ ಬಿದ್ದತ್ತು.

ಈ ಸೀಸನ್ ಲಿ ಒಂದು ಕಾರು ತೆಕ್ಕೊಳ್ಳೆಕೆ ಹೇಳಿ ಒಮ್ಮತದ ಅಭಿಪ್ರಾಯಕ್ಕೆ ಬಂತು ಫಾಮಿಲಿ.

ಸತ್ಯಣ್ಣಂಗೂ ಒಂದು ಕಾರು ತೆಗೆಕು ಹೇಳಿ ಎರಡು ವರ್ಷಂದ ಆಸೆ ಇದ್ದತ್ತು.

ಒಂದು ಹಳೇಯ ಮಹದಾಸೆ ಹೇಳಿರೆ ಹೆಚ್ಚಾಗ.

ಸತ್ಯಣ್ಣನ ಫಿನಾನ್ಶಿಯಲ್ ಪರಿಸ್ಥಿತಿ ನೋಡಿಗೊಂಡು ಅವನ ರೈಟ್ ಹಾಂಡ್ ರಂಗಣ್ಣ ಒಂದು ವಾರ ಎಲ್ಲ ಮಾಹಿತಿ ತೆಕ್ಕೊಂಡು ಮಾರುತಿ800 1990 ಮೋಡೆಲ್ ಅಕ್ಕು ಹೇಳಿ ಪಾಸ್ ಮಾಡಿದ°.

ಬ್ರೋಕರ್ ಮಮ್ಮದೆಗೆ ಸತ್ಯಣ್ಣ ಕಾರು ತೆಗವ ವಿಷಯ ಎತ್ತಿತ್ತು.

ಹಾಂಗಾರೆ ಅದರ ಹತ್ರೆ ಇದ್ದ 1989 ಮೋಡೆಲ್ ಪೊಳಿಕ್ಕಟೆ ಕಾರು ಅವಂಗೆ ದಾಂಟುಸಿತ್ತು.

ರಂಗಣ್ಣಂಗೂ ಕಲರ್  ಶುಭ್ರ ಬೆಳಿ ಇಷ್ಟ ಆತು.

ಆದರೆ ಕಾರ್ ರೀಬೋರಿಂಗ್ ಆಗಿ ಬಪ್ಪಲೆ ರೆಡಿ ಆದ ಕಾರಣ ಎಷ್ಟು ಎಕ್ಸಿಲರೇಟರ್ ಕೊಟ್ಟರೂ ಕಾರು 35km/hr ಹೆಚ್ಚಿಗೆ ಸ್ಪೀಡಿಲ್ಲಿ ಹೋವ್ತಿಲ್ಲೆ.

ಅಂತೂ ಚರ್ಚೆ ಮಾಡಿ 49500/-ಕ್ಕೆ ಕಾರು ಸಿಕ್ಕಿತ್ತು.

ಕಾರಿನ ಬಣ್ಣ ಮಾತ್ರ ನೋಡಿ ಗೊಂತಿದ್ದ ಸತ್ಯಣ್ಣ° ಹೇಳಿದ° – ರಂಗಣ್ಣ°, ಕಾರು ಪಷ್ಟಿದ್ದಡ. ಸ್ಟಾರ್ಟ್ ಮಾಡೊಂದರಿ.

         ರಂಗಣ್ಣ° ಹೇಳಿದ° – ಸತ್ಯಣ್ಣ, ಕೆಳ ಇಳುದು ರಜಾ ನೂಕುತ್ತೆಯ! 😀

~~

6.

ಅಡಿಗೆ ಸತ್ಯಣ್ಣ° ಒಂದರಿ ಯಜಮಾಂತಿಗೆ ಸೀರೆ ತೆಗವಲೆ ಕಾಸರಗೋಡಿಂಗೆ ಹೆರಟ.

ಸೀರೆ ತೆಗವಲೆ ಯಜಮಾಂತಿ ಹೇಂಗೂ ಬೇಕನ್ನೆ. ಮಗಳು ರಮ್ಯ sslc ಬೇರೆ., ಪರೀಕ್ಷೆ ಹತ್ರೆ ಬತ್ತು, ಓದಿ ತಯಾರಿ ಆಯೇಕ್ಕಲ್ಲದ. ಮಗಳು ಮನೇಲಿ ಬಾಕಿ.

ಹೇಂಗೂ ಕಾರು ತೆಗದಾಯ್ದು, ಕಾರು ಡ್ರೈವಿಂಗ್ ಗೆ ರಂಗಣ್ಣ° ಹೇಂಗೂ ಸದಾ ರೆಡಿ ಅದಾ.

ಕಾರು ಬಳ್ಳಂಬೆಟ್ಟು ಕಳುದು ಪಳ್ಳತ್ತಡ್ಕ ದಾಂಟಿ ಕರಿಂಬಿಲ ಹತ್ರೆಂಗೆ ಹೋಗಿಯೊಂಡಿಪ್ಪಗ ಕಾಡಮನೆ ತಿರ್ಗಾಸಿಲ್ಲಿ ಕಾಲೇಜಿಂಗೆ ಹೋಪ ಒಂದು ಕೂಸು ಬಸ್ಸಿಂಗೆ ಕಾದುನಿಂದುಗೊಂಡಿಪ್ಪದರ ನೋಡಿ ಸತ್ಯಣ್ಣ° ಹಿಂದಾಣ ಸೀಟಿಲ್ಲಿ ಕೂದೊಂಡಿದ್ದ ಯಜಮಾಂತಿಯ ಹೊಡೆಂಗೆ ತಿರುಗಿ ಹೇಳಿದ° – “ದೇವಕಿ!, ನೋಡಿದೆಯಾ., ಎಷ್ಟು ಒಪ್ಪಕ್ಕನ ಹಾಂಗೆ ಮಲ್ಲಿಗೆ ಸೂಡ್ಯೊಂಡು ಆ ಕೂಸು ಹೆರಟಿದು. ರಮ್ಯಂಗೂ ಮಲ್ಲಿಗೆ ಮಾಲೆ ಮಾಡಿ ಸೂಡ್ಳೆ ಹೇಳೇಕು ಅಲ್ಲದ”.

ರಂಗಣ್ಣ° ರಮ್ಯನ ಮದುವೆ ಅಪ್ಪಲೆ ಇಪ್ಪ ತನ್ನ ಮಹದಾಸೆಯ ತೋರ್ಪಡುಸಲೆ ಇದುವೇ ಸುಸಂದರ್ಭಲ್ಲಿ ತನ್ನ ಮಾಸ್ಟರ್ ಮೈಂಡ್ ಉಪಾಯವ ಉಪಯೋಗಿಸಿದ°-

ಸತ್ಯಣ್ಣ° ಎದುರಂಗೆ ತಿರುಗುವದೇ ರಂಗಣ್ಣ° ಕಾರಿನ ಓರೆಕ್ಕೋರಿ ಕೊಂಡೋಗಿ ಕರಿಂಬಿಲ ಸಂಕದ ಕರೇಂಗೆ ಬಡಿವಾಂಗೆ ಆತು.

ಸತ್ಯಣ್ಣ° ಕೇಳಿದ° – “ಎಂತಾತು ರಂಗಣ್ಣ”?

ಈಗ ರಂಗಣ್ಣ° ಹೇಳಿದ° – ಮಾಂವ°, ನಿಂಗೊ ಆ ಕೂಸಿನ ಹೇಳಿಯಪ್ಪಗ ಎನಗೆ ರಮ್ಯನ ನೆಂಪಾತು. ರಮ್ಯಂಗೂ ಎನ್ನ ಇಷ್ಟವೇ. ಅತ್ತಗೆ ಗೊಂತಿದ್ದಲ್ಲದ! “

         ಸತ್ಯಣ್ಣ° ಹಿಂದೆ ತಿರುಗಿ ಯಜಮಾಂತಿಯ ಮೋರೆ ನೋಡಿಗೊಂಡ°. 😀

~~

7.

ಅಡಿಗೆ ಸತ್ಯಣ್ಣ° ಯಜಮಾಂತಿಯ ಕರಕ್ಕೊಂಡೋಗಿ ಸೀರೆ ತೆಗದು ಮಧ್ಯಾಹ್ನಪ್ಪಗಳೇ ಮನಗೆ ಎತ್ತಿದ.

ಅಂದು ಆದಿತ್ಯವಾರ, ಮಗಳೂ ಮನೇಲಿದ್ದು. ಅನುಪತ್ಯದ ಸೀಸನೂ ಅಲ್ಲ. ಮನೆಯವಕ್ಕೆ ತಿಂಬಲಾತು ಹೇಳಿ ಹೊತ್ತೋಪಗ ಕೂದು 25 ಸಾಟು ಮಾಡಿದ°.

ರಮ್ಯಂಗೆ ಸ್ವೀಟ್ ಅಷ್ಟು ಇಷ್ಟ ಇಲ್ಲೆ, ಒಂದೇ ತೆಕ್ಕೊಂಡತ್ತಷ್ಟೆ. ಯಜಮಾಂತಿಗೆ ಸ್ವೀಟು ತಿಂದರೆ ಶುಗರ್ ಬಕ್ಕೋಳಿ ಹೆದರಿಕೆ ಎರಡೇ ತೆಕ್ಕೊಂಡತ್ತಷ್ಟೆ. ಸತ್ಯಣ್ಣನೂ ಎರಡು ತಿಂದು ಬಾಕಿದ್ದರ ಕರಡಿಗೆ ಹಾಕಿ ನಾಳಂಗಾತು ಹೇಳಿ ಮುಚ್ಚಿ ಮಡಿಗಿದ°.

ಮರದಿನ ರಮ್ಯ ಶಾಲಗೆ ಹೋತು ಅದರ ಹೊತ್ತಪ್ಪಗ. ಯಜಮಾಂತಿಯ ಅಪ್ಪನ ಮನೇಲಿ ಎಂತದೋ ಸಣ್ಣ ವಿಶೇಷ ಇದ್ದು ಹೇಳಿ 9 ವರೆ ಬಸ್ಸಿಂಗೆ ಅದುದೇ ಹೋತು.

ಸತ್ಯಣ್ಣ° ಒಬ್ಬ°, ಮನೆಕ್ಕಾವಲು.

ಹನ್ನೊಂದು ಗಂಟಗೆ ಚಾ ಮಾಡಿ ಎರಡು ಸಾಟು ತಿಂಬೋ ಹೇಳಿ ಕರಡಿಗೆ ಬಿಡಿಸಿರೆ ಅದರಲ್ಲಿ ಮಡಿಗಿದ ಸಾಟು ಒತ್ತೆ ಒಂದು ಇಲ್ಲೆ.

ಹೊತ್ತೋಪಗ ಮಗಳು ಶಾಲೆಂದ ಬಂತು. ಯಜಮಾಂತಿ ಅಪ್ಪನ ಮನೆಂದ ಬಂತು.

ಸಾಟು ಮಡಿಗಿದ್ದು ಎಂತಾತು ಕೇಳಿರೆ – ಮಗಳು ಎನಗೊಂತಿಲ್ಲೆ ಹೇಳಿ ಪುಸ್ತಕ ಬಿಡಿಸಿತ್ತು. ಯಜಮಾಂತಿಯ ಕೇಳಿರೆ ಎನಗೊಂತಿಲ್ಲೆ ಹೇಳಿಕ್ಕಿ ಆಚಿಗೆ ಬೇರಂತದೋ ಕೆಲಸಕ್ಕೆ ಹೋತು.

ಒಟ್ಟಾರೆ ಸಾಟು ಎಂತಾತು ಹೇಳಿ ಒಂದು ವಾರ ಆದರೂ ಸತ್ಯಣ್ಣಂಗೆ ಗೊಂತಾಯ್ದೇ ಇಲ್ಲೆ. ಒಂದು ವಾರಂದ ರಂಗಣ್ಣನ ಸುದ್ದಿಯೂ ಇಲ್ಲೆ. ಎಂತ ಆತೋ ಏನೋ ಹೇದು ಸತ್ಯಣ್ಣ° ಸುಮ್ಮನಾದ ಮತ್ತೆ. 😀

~~

8.

ಅಡಿಗೆ ಸತ್ಯಣ್ಣಂಗೆ ಅವನ ಭಾವನೊಟ್ಟಿಂಗೆ ಒಂದರಿ ಕಣ್ಣಾನ್ನೂರಿಂಗೆ ಹೋಪ ಪ್ರಮೇಯ ಬಂತು.

ಉದಿಯಪ್ಪಗ ಎಂಟು ಗಂಟೆಯಪ್ಪಗ ಅಲ್ಲಿಗೆ ಎತ್ತಿಯಪ್ಪಗ ಸತ್ಯಣ್ಣಂಗೆ ಹೋಟ್ಳಿಂಗೆ ಹೋಯೇಕು ಹೇಳಿ ಆತು.

ಇಬ್ರೂ ಹೋಟ್ಳಿನೊಳ ಹೋಗಿ ಕೂದವು.

ಸಪ್ಲೈಯರ್ ಉದ್ದಾಕೆ ಹೇಳಿಗೊಂಡು ಹೋಪಗ ಮುಟ್ಟಕ್ಕರಿ ಪೊರೋಟ ಹೇಳಿದ್ದು ಕೇಳಿತ್ತು.

ಸತ್ಯಣ್ಣನ ಪ್ರೊಫೆಶನ್ ಹೇಂಗೂ ಅಡಿಗೆಯೇನ್ನೆ!

ಒಂದು ಸರ್ಟಿಫಿಕೇಟ್ ಕೊಟ್ಟ° – “ಏ ಭಾವ! ಪರೋಟಕ್ಕೆ ‘ಮುಟ್ಟಕ್ಕರಿ’ ಹೇಳಿ ಮಾಡ್ಸಿದ ಕಾಂಬಿನೇಶನ್., ಅದೂ ತೆಂಕ್ಲಾಗಿಯಾಣದ್ದು! ನಮ್ಮ ತರಕಾರಿ ಕೂರ್ಮ ಅದರೆದುರು ಏವ ಲೆಕ್ಕಕ್ಕೂ ಇಲ್ಲೆ!”. 😀

~~
9.

ಅಡಿಗೆ ಮುಗಿಶಿ ನೆಡು ಇರುಳು ಕಳುದು ಬಂದು ಮನುಗಿದ ಸತ್ಯಣ್ಣ° ಏಳೇಕ್ಕಾರೆ ಮದಲೇ ಯಜಮಾಂತಿ ಪೀಠಿಕೆ ಹಾಕಿತ್ತು.. – “ಮಗಂಗೆ ಕಾಲೇಜಿಂಗೆ ಹೋಪಲೆ ಕರಿಷ್ಮಾ ಆಯೇಕ್ಕಡಾ…., ಅಂವ ಅಷ್ಟು ಬೇಜಾರು ಮಾಡ್ವಾಗ ಅವಂಗೆ ತೆಗದು ಕೊಡ್ಳಾಗದೊ”

ಸತ್ಯಣ್ಣ° ಮಗನ ದೆನಿಗೋಳಿ ಹೇಳಿದ° – “ರಾಜ, ಕರಿಶ್ಮಾ ನಿನ್ನಂದ ತಾಂಗಿಗೊಂಬಲೆ ಎಡಿಯ.., ಹೈಟ್ ವೈಟ್ ಎಲ್ಲ ಭಯಂಕರ.., ಅದು ದೊಡ್ಡ ಗಾಡಿ., ಗಾಡಿ ಮೈಂಟೈನ್ ಮಾಡಿಗೊಂಬಲೂ ಹಾಂಗೇ ಪೈಸೆ ಸೊರುಗೆಕ್ಕಡಾ.. , ನಿನಗೆ ಸವಾರಿಗೆ ಸಣ್ಣ ನಮೂನೆದು ಹಳೆ ಗಾಡಿ ಹುಡ್ಕುವೋ° ಆಗದೊ!” 😀

~~
10

ಹೇಂಗೂ ವೈಶಾಖ

ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯದ ಸೀಸನೇ ಸೀಸನು.

ಗುಡ್ಡೆಲಿ ಆದ ಬೀಜದ ಪೈಸೆ ಬೇರೆ!.

ಹೆಂಡತಿ ಮಕ್ಕಳ ಡಿಮಾಂಡೇ ಡಿಮಾಂಡು – ‘ಒಂದು ಪ್ರಿಡ್ಜು ಬೇಕು’ ಹೇದು. 🙁

ಸಾಲದ್ದಕ್ಕೆ ಹೆಂಡತಿ ಬಸರಿ!.

ಹೆಂಡತಿಗೆ ಪ್ರಿಡ್ಜ್ ತೆಗವ ಜವಾಬ್ದಾರಿಯ ಬಿಟ್ಟ° ಸತ್ಯಣ್ಣ°.

ಅಂಗಡಿಗೆ ಹೋಗಿ ಪ್ರಿಡ್ಜು ಸಿಲೆಕ್ಷನ್ ಮಾಡಿ ಆತು. ಅದೂ ದೊಡಾ ಎಲ್.ಜಿ ಪ್ರಿಡ್ಜು!

ಕ್ಯಾಶ್ ಕೌಂಟರ್ಲಿ ಪೈಸೆ ಕಟ್ಟುವಾಗ ಅಂಗಡಿ ಜೆನಕ್ಕೆ ಭಾರೀ ಕೊಶಿ ಆಗಿ ಸತ್ಯಣ್ಣನತ್ರೆ “ನಿಮಗೆ ಈಗಲೇ ಡೆಲಿವರಿ ಮಾಡಿಸುವ” ಹೇಳಿಗೊಂಡೇ ಫೋನ್ ಕೈಲಿ ತೆಗದತ್ತು!.

ಎದುರೇ ಇದ್ದ ಸತ್ಯಣ್ಣಂಗೆ ಕೋಪ ನೆತ್ತಿಗೇರಿತ್ತು. 🙁

ಹೆಂಡತಿಯ ಕೆಮಿ ಬುಡಕ್ಕೆ ಬಾಯಿ ಮಡುಗಿ ಸತ್ಯಣ್ಣ° ಹೇದ° –

..  “ಶಾರದೇ, ನವಗೆ ಇವರ ಪ್ರಿಡ್ಜೂ ಬೇಡ, ಬೊಜ್ಜವೂ ಬೇಡ. ಹೋಪ° ಮನಗೆ. 7 ತಿಂಗಳೇ ಪೂರ್ತಿ ಆಯ್ದಿಲ್ಲೆ. ಈಗಳೇ ಎಲ್ಲಿಗೆ ಡೆಲಿವರಿ!”  😀
~~

 

   ~~~ 😀 😀 ~~~

 

7 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 1

  1. ಹೆಚ್ಚಾಗಿ ಜೋಕುಗೊ ಹೇಳಿರೆ, ಒಂದರಿ ಹೇಳಿದ್ದನ್ನೇ ಹೆಸರು ಬದಲಿಸಿಯೋ ಇಲ್ಲದ್ದರೆ ಇನ್ನೊಂದು ರೂಪಲ್ಲಿ ಹೇಳ್ತವು.
    ಆದರೆ ಇಲ್ಲಿ ತಾಜಾತನ ಇದ್ದು. ನಿಜ ಜೀವನಲ್ಲಿ ನೆಡೆತ್ತ ಘಟನೆಗಳನ್ನೇ ಮೆಲುಕು ಹಾಕುವಾಗ ಸಿಕ್ಕುವ ಸತ್ಯ ಸಂಗತಿಗಳ ಹಾಂಗೆ ಇದ್ದು.
    ಚೆನ್ನೈ ಭಾವಯ್ಯನ ಬತ್ತಳಿಕೆಂದ ಇನ್ನೂದೆ ಬರಲಿ

  2. ಅಡಿಗೆ ಸತ್ಯಣ್ಣನ ದೊಡ್ಡ ಮಗಳು ಇರ್ಸು ಬೆಂಗ್ಳೂರ್ಲಿ.

    ಮೌಢ್ಯದ ಸಮಯ ಆದ ಕಾರಣ ಸತ್ಯಣ್ಣಂಗೆ ರಜಾ ಪುರ್ಸೊತ್ತೆ ಇದ್ದತ್ತು.

    ನಾಕು ದಿನಕ್ಕೆ ಮಗಳ ಮನಗೆ ಹೋಯ್ಕೊಂಡು ಬಪ್ಪೋ ಹೇದು ಅಡಿಗೆ ಸತ್ಯಣ್ಣ ಹೆಂಡತಿ ಶಾರದೆಯನ್ನೂ ಸಣ್ಣ ಮಗಳು ರಮ್ಯನನ್ನೂ ಕರ್ಕೋಂಡು ಬೆಂಗ್ಳೂರಿಂಗೆ ಹೋದ°. ಬಸ್ಸಿಲ್ಲಿ ಹೋದ ಕಾರಣ ರಂಗಣ್ಣಂಗೆ ಒಟ್ಟಿಂಗೆ ಹೋಪ ಚಾನ್ಸ್ ಸಿಕ್ಕಿತ್ತಿಲ್ಲೆ.

    ಒಂದಿನ ಮಧ್ಯಾಂತಿರ್ಗಿ ಎಜಮಾಂತಿಯೊ‌ಟ್ಟಿಂಗೆ ದಾಸನ ಗೆಡುಗಳೇ ಹೆಚ್ಚಿಪ್ಪ ಲಾಲ್‌ಬಾಗಿಂಗೆ ವಾಕಿಂಗಿಂಗೇಳಿ ಹೆರಟ° ಸತ್ಯಣ್ಣ°.

    ದಾರಿಲಿ ಕೈಗಾಡಿಲಿ ಒಂದು ಜೆನ ಹಲಸಿನ ಹಣ್ಣು ಮಾರಿಗೊಂಡಿದ್ದತ್ತು.

    ೧೫ರೂಪಾಯಿಗೆ ಐದು ಸೊಳೆ ಹೇಳಿ ಜೋರಾಗಿ ಬೊಬ್ಬೆ ಹೊಡಕ್ಕೊಂಡಿತ್ತದು.

    ಶ್ಶೆಲಾ.. ಊರಿಲ್ಲಿ ಈಗ ಗುಜ್ಜೆ ಬಿಡ್ತಷ್ಟೇ.. ಇಲ್ಲಿ ಹಣ್ಣೇ ಆಯಿದೋ..ಹೇಳಿ ಗ್ರೇಶಿಗೊಂಡ ಸತ್ಯಣ್ಣ ಶಾರದೆಯ ಹತ್ತರೆ.

    “ಇದಾ.. ಇಲ್ಲಿ ಹಲಸಿನ ಕಾಯಿ ಇಷ್ಟು ಬೇಗ ಹಣ್ಣಾಯಿದು.. ಎಷ್ಟಾದರೂ ಚೆನ್ನೈಯಷ್ಟು ರೇಟಿಲ್ಲೆ.. ಇದು ಬರಿಕ್ಕನಾ, ತುಳುವ°ನೋ ಅಲ್ಲ ಉಂಡೆ ಜಾತಿಯದ್ದೋ ಹೇಳಿ ನೋಡಿದಾಂಗೂ ಆತು..

    ಒಂದು ಹನ್ನೆರಡು ಸೊಳೆ ತೆಕ್ಕೊಂಬ..” ಸತ್ಯಣ್ಣ° ಹೇಳಿದ°.. ಶಾರದೆಯೂ ಹ್ಞುಂ ಹೇಳಿತ್ತು..

    ಗಾಡಿಯ ಜೆನ ಸೊಳೆ ಎಳಕ್ಕಿಸಿಕೊಟ್ಟಾಂಗೆ .. ಒಂದೊಂದೇ ಸೊಳೆಯ ತಿಂದು ಮುಗಿಶಿದವು ಸತ್ಯಣ್ಣ° ದಂಪತಿ.. ಗಾಡಿಯ ಜೆನ ಕೈ ಪೈಸೆಗೆ ಒಡ್ಡಿದ ಕೂಡ್ಳೆ ಸತ್ಯಣ್ಣ ಕೈಲಿದ್ದ ಚೀಲ ಒಡ್ಡಿದ°…

    ಗಾಡಿಯ ಜೆನಕ್ಕೆ ಆಶ್ಷರ್ಯ.. ‘ಎಂತ?’ ಹೇಳಿ ಕೇಳಿತ್ತು…

    ಸತ್ಯಣ್ಣ ಹೇಳಿದ°….‘ಹನ್ನೆರಡು ಬೇಳೆ ಯಾರಿಗೆ ನಿನಗೆ ಸುಟ್ಟಾಕಿ ತಿನ್ಲಿಕೆಯಾ?!… ಹಾಕು ಚೀಲಕ್ಕೆ..’ 😀

  3. ಒಂದು ದಿನ ಅಡಿಗೆ ಸತ್ಯಣ್ಣನ ಮಗ ಕೇಳಿದಡ : ಅಪ್ಪ.. ಅಪ್ಪ.. ಎನಗೆ ಒಂದು ಚೆಂಡೆ ತೆಗೆದು ಕೊಡಿ.
    ಅಷ್ಟಪ್ಪಗ ಸತ್ಯಣ್ಣ: ಬೇಡ ಮಗಾ… ಎಲ್ಲೋರಿಂಗೆ ತೊಂದರೆ ಅಕ್ಕು.
    ಮಗ: ತೊಂದರೆ ಎಂತ್ಸೂ ಆಗ ಅಪ್ಪ. ಆನು ಎಲ್ಲರೂ ಮನುಗಿದ ಮೇಲೆ ಹೆಟ್ಟುಲೆ ಶುರು ಮಾಡ್ತೆ.

  4. ಹಿಂದಿಲಿ ಸರದಾರ್ಜಿ ಜೋಕ್ಸ್, ತುಳುವಿಲಿ ರಾಂಪನ ಜೋಕ್ಸ್ – ಇನ್ನೀಗ ಹವ್ಯಕಲ್ಲಿ “ಅಡಿಗೆ ಸತ್ಯಣ್ಣ”ನ ಜೋಕ್ಸ್ ಪ್ರಸಿದ್ಧ ಆಗಲಿ.
    { “ಶಾರದೇ, ನವಗೆ ಇವರ ಪ್ರಿಡ್ಜೂ ಬೇಡ, ಬೊಜ್ಜವೂ ಬೇಡ. ಹೋಪ° ಮನಗೆ. 7 ತಿಂಗಳೇ ಪೂರ್ತಿ ಆಯ್ದಿಲ್ಲೆ. ಈಗಳೇ ಎಲ್ಲಿಗೆ ಡೆಲಿವರಿ!” :D}
    ಇದು ಪಷ್ಟಾಯಿದು ಭಾವ. ನೆಗೆ ಮಾಡಿ ಮಾಡಿ ಹೊಟ್ಟೆ ಹುಣ್ಣಾತು.

    ಬತ್ತಾ ಇರಲಿ ಹೀಂಗೆ.

  5. kushaalu, tamaashe, humour ondu namuneya tonic. nityada jeevanava jeevanta madugule olle maddu 🙂 chennai bhaavana kushaalu maatrego ruchi iddu 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×