Oppanna.com

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 10

ಬರದೋರು :   ಚೆನ್ನೈ ಬಾವ°    on   16/05/2013    11 ಒಪ್ಪಂಗೊ

ಚೆನ್ನೈ ಬಾವ°

ಅಂತೂ ರಮ್ಯಂಗೆ ಕೊಲೆಂಜಿಲಿ ಸೀಟು ಸಿಕ್ಕಿತ್ತಡೋ..

ನಮ್ಮ ರಾಮಜ್ಜನ ಕೋಲೇಜಿಂಗೇ ಹೋವ್ಸಡೋ..

ಕಂಪ್ಯೂಟ್ರು ಸೈಂಸ್ ಕಲಿಸ್ಸಡೋ..

ದಿನಾ ಬಸ್ಸಿಲ್ಲಿ ಹೋಗಿ ಬತ್ಸಡೋ..

ಓಯ್., ಅಲ್ಲಿ ನಮ್ಮ ಬೈಲಿಂದ ಆರಾರು ಇದ್ದವೋ..?

 

ಇದ್ದರೆ… ರಮ್ಯ ಪಷ್ಟು ಈಯರು ಇದಾ. ರಜಾ ನೋಡಿಗೊಳ್ಳೆಕ್ಕೆಡಾ..   ಸತ್ಯಣ್ಣ ಹೈದಾ°.

 

~~

ಇನ್ನು ಸತ್ಯಣ್ಣನ ಈ ವಾರದ ಶುದ್ದಿ ಎಂತರ ನೋಡುವೋ° –

 

1.

ಅಡಿಗೆ ಸತ್ಯಣ್ಣಂಗೆ ಆಲಂಗಾರ ಹೊಡೆಲಿ ಅನುಪ್ಪತ್ಯ..

ಹೋಳಿಗೆಯೂ ಆಯೇಕು ಹೇದು ಮುನ್ನಾಣ ದಿನ ಉದಿಯಪ್ಪಗಳೇ ಹೆರಟು ಮಜ್ಜಾನಕ್ಕೆ ಎತ್ತಿ ಮಧ್ಯಾಹ್ನಂತ್ರಿಗಿ ಕೆಲಸವೂ ಸುರುವಾತು..

ಕೆಲಸದ ಹೆಣ್ಣು ಸುಂದರಿ ಮನೆಯೊಳ ಚಾವಡಿ ಜಗುಲಿ ಜಾಲಿಂಗೆಲ್ಲ ಸಗಣ ಬಳುಗಿಯೊಂಡಿತ್ತು..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

ಮನೆ ಯಜಮಾಂತಿ ಹೊನ್ನಕ್ಕತ್ತೆ ಅಡಿಗೆ ಕೊಟ್ಟಗೆಲಿ ಸತ್ಯಣ್ಣನತ್ರೆ ಸವಾಕಾಶ ತೊಳಚ್ಯೊಂಡಿತ್ತಿದ್ದು..

ಹೊನ್ನಕ್ಕತ್ತೆ ಹೇಳಿರೆ ಸಮಾನ್ಯ ತೊಳಚ್ಚಟೆ ಮಣ್ಣ ಅಲ್ಲ.., ಈಚವನ ಹುಟ್ಟಿಂದಲೇ ತೊಳಚ್ಚುಗು..

ಎಡೇಲಿ ಸತ್ಯಣ್ಣನತ್ರೆ ಒಂದು ಸವಾಲು ಹೇತು ಹೊನ್ನಕ್ಕತ್ತೆ- “ಸತ್ಯಣ್ಣಂಗೆ ಕಿಚ್ಚಿಲ್ಲದ್ದೆ, ಬೇಶದ್ದೆ ಅಡಿಗೆ ಮಾಡಿ ಬಳುಸಲೆಡಿಗೊ”?

ಸತ್ಯಣ್ಣಂಗೆ ಅಡಿಗೆ ಹೇದರೆ ಇಂದು ನಿನ್ನಾಣದ್ದಲ್ಲ.. ನೆತ್ತರ್ಲೇ ಬಂದದು ಅಜ್ಜನ ಕಾಲಂದಲೇ..

ಸತ್ಯಣ್ಣ° ಹೇದಾ° – ಏ..ಬೆ! ಏಕೆಡಿಯದ್ದೆ?!!! ಇದಾ.. ಅವಲಕ್ಕಿ ಮೊಸರ್ಲಿ ಅದ್ದಿ ದಾಳಿಂಬೆ, ಮತ್ತೇನಾರು ಸೊಪ್ಪುಗೊ ಇತ್ಯಾದಿ ಹಾಕಿರೆ ಅವಲಕ್ಕಿಮೊಸರನ್ನ ಆತು. ತಂಬುಳಿ ಕಿಚ್ಚಿಲ್ಲದ್ದೆ ಮಾಡ್ಳಾವ್ತು, ಮೊಸರು ಗೊಜ್ಜಿಗೆ ನಿಂಗೊ ಒಲೆ ಹತ್ರೆ ಹೋಯೇಕು ಹೇದಿಲ್ಲೆ., ರಸಾಯನ ಮಾಡಿರೆ ಪಾಚವೂ ಆತು, ಹಸರು ಇತ್ಯಾದಿಲಿ ಕೋಸಂಬರಿ ಆವ್ತು….

ಹೇ…ಹು!! ಅಡಿಗೆ ಸತ್ಯಣ್ಣ ಹೇಳಿರೆ ಅಂತೆಯೋ ಮತ್ತೆ !

“ಎನ್ನಬ್ಬಯೋ!, ನಿನ್ನತ್ರೆ ಎಡಿಯ ಸತ್ಯಣ್ಣ” ಹೇದೊಂಡು ಕೊಡಪ್ಪಾನ ತೆಕ್ಕೊಂಡು ಬಾವಿ ಕಟ್ಟೆ ಹತ್ರೆ ನಡಾತು ಹೊನ್ನಕ್ಕತ್ತೆ. 😀

 

~~

2.

ಓ ಆಚ ವೊರಿಶ ಬಲಪ್ಪನ ಸೆಟ್ಟು ಜಪಾನಿಂಗೆ ತಾಳಮದ್ದಳಗೆ ಹೋದ್ದು ಕೆಲೋರಿಂಗೆ ಕೊಂತಿಕ್ಕು..

ಆದರೆ.. ಬಲಿಪ್ಪನ ಸೆಟ್ಟಿಂಗೆ ಊಟದ ವ್ಯವಸ್ಥೆಗೆ ಅಡಿಗೆ ಸತ್ಯಣ್ಣನೂ ಒಟ್ಟಿಂಗೆ ಇತ್ತಿದ್ದ° ಹೇಳೋದು ಪ್ರಚಾರಕ್ಕೆ ಸಿಕ್ಕಿದ್ದಿಲ್ಲೆ..

ವಿಮಾನಲ್ಲಿ ಹೋಗಿ ಜಪಾನಿಲ್ಲಿ ಇಳುದಾತು..

ಅಲ್ಲಿ ಹೆರಹೋಯೇಕಾರೆ ಚೆಕ್ಕಿಂಗು ಎಲ್ಲ ಆಯೇಕ್ಕು..

ಕ್ರಮ ಗೊಂತಿಲ್ಲದ್ರೂ ಸಾಲಿಲ್ಲಿ ಒಟ್ಟಿಂಗೆ ನಿಂದರೆ ಎಲ್ಲವೂ ಕ್ರಮಾಗತ ಆವ್ತು ಹೇದು ಪ್ರತ್ಯೇಕ ಹೇದು ಕೊಡೇಕ್ಕಾಗಿಲ್ಲೆ ಆರಿಂಗೂ..

ಬಲಿಪ್ಪನ ಸರದಿ ಬಂತು. ಬೇಗಿಲಿ ಹೊಳೆತ್ತ ಜಾಗಟೆಯೂ ಜಾಗಟೆ ಕೋಲೂ ಕಂಡಪ್ಪಗ ಅಲ್ಯಾಣ ಆಪೀಸರಕ್ಕೊಗೆ ಸಂಶಯ ಬಂತು..

ಇದೆಂತ್ಸರ ಹೊತ್ತೋಂಡು ಹೋವ್ಸು ಹೇದು ಕೇಟವು. ಅವರ ಭಾಷೆ ಅರ್ಥ ಆಗದ್ರು ಅವು ಬಾಯಿಲಿ ಹೇಳ್ವಾಗ ಕೈಲಿ ಆದ ಏಕುಟು ನೋಡಿಯಪ್ಪಗ  ಇವು ಇದೆಂತರ ಹೇದು ಕೇಳ್ತಾ ಇಪ್ಪದು ಹೇದು ಬಲಿಪ್ಪಜ್ಜಂಗೆ ಅಂದಾಜಿ ಆತು..

ಕೈಲಿ ಜಾಗಟೆಯನ್ನು ಕೋಲನ್ನು ತೆಕ್ಕೊಂಡು ಯೈಯೈಯೈಯೈ…. ಹೇದು ಒಂದು ಏರು ಪದ ಹೇಳಿಪ್ಯಗ ಅಲ್ಯಾಣವಕ್ಕೆ ಕೊಶಿಯಾಗಿ ತಡೆಯ!.     ವಾವ್.. ಹೇದು ಬಿಟ್ಟವು.

ಮತ್ತಾಣದ್ದು ಅಡಿಗೆ ಸತ್ಯಣ್ಣನ ಸರದಿ..

ಸತ್ಯಣ್ಣನ ಚೀಲಲ್ಲಿ ಲಟ್ಟಣಿಗೆಯೂ, ಹೋಳಿಗೆ ಕೋಲೂ ಕಂಡಪ್ಪಗ ಸಂಶಯ ಬಂತು. ಎಂತ್ಸರ ಹೇದು ಕೈಭಾಷೆಲಿ ಕೇಳಿಯಪ್ಪಗ..

ಸತ್ಯಣ್ಣ ಹೆಗಲ್ಲಿ ಇದ್ದ ಶಾಲ ಒಂದರಿ ಕುಡಿಗಿ ಕೆಳ ಹಾಕಿ ನೆಲಕ್ಕಲ್ಲಿ ಕೂದು ಹೋಳಿಗೆ ಲಟ್ಟುಸುತ್ಸು, ಎಳಕ್ಕುಸ್ಸು ಏಕುಟು ಮಾಡಿ ತೋರ್ಸಿದ°..

“ಐ..ಸ್ಸಾ.. ನೈಸ್ ಗೇಮ್ “..   ಹೇದಿಕ್ಕಿ ಮುಂದೆ ಹೋಗು ಹೇದು ಕೈಭಾಷೆ ಮಾಡಿತ್ತು ಅಲ್ಯಾಣ ಆಪೀಸರ. 😀
~~

3.

ಅಡಿಗೆ ಸತ್ಯಣ್ಣ ಈಗ ಪ್ರಬುದ್ಧ ಅಡಿಗೆಯಂವ° ಆಗಿದ್ದರೂ ಸಣ್ಣಾಗಿಪ್ಪಗ ನಮ್ಮಾಂಗೆ ದೊಡಾ ಗೆಂಟು ಪುಡ್ಕಾಯಿ..

ಅಂದು ಸತ್ಯಣ್ಣನ ಅಬ್ಬೆ ಮನೆಲಿ ಹೆರಗೆ..

ಅಪ್ಪನದ್ದೆ ಮನೆಲಿ ಅಡಿಗೆ ವಹಿವಾಟು..

ಹೊತ್ತೋಪಗ ಅಡಿಗೆ ಸತ್ಯಣ್ಣನುದೆ, ಅಪ್ಪನುದೇ ನೆಟ್ಟಿಸಾಲಿಂಗೆ ಹೋಗಿ ಹನಿಯ ನೆಟ್ಟಿಕಾಯಿ ಕೊಯಿದವು..

ಅಪ್ಪ° ಹೆಡಗೆಲಿ ಎಡಿಗಾಷ್ಟು ತುಂಬ್ಸಿ ತಲೆಲಿ ಹೊತ್ತೊಂಡ..

ಒಂದು ದೊಡಾ ಕುಂಬಳಕಾಯಿ ಕೊಯ್ದದು ಹೆಡಗೆಲಿ ಮಡಿಗಕ್ಕಲೆ ಎಡಿಗಾತಿಲ್ಲೆ. ಕಂಕುಳ್ಳಿ ಮಡಿಗಿ ತಪ್ಪಾಂತಾದ್ದೂ ಅಲ್ಲ ಕುಂಬಳಕಾಯಿ..

ಅಪ್ಪ° ಮಗನತ್ರೆ ಹೇದ° –  “ಇದ ಕುಂಞಿ ಇದರ ಒಂದರ ನೀ ತಲೆಲಿ ಹೊತ್ತೊಂಡು ಎನ್ನೊಟ್ಟಿಂಗೆ ಬಂದಿಕ್ಕು”..

ಅಡಿಗೆ ಸತ್ಯಣ್ಣ° ಸಣ್ಣ..,  ಕೊಟ್ಟೋ ಪಿಕ್ಕಾಸೋ ಕತ್ತಿಯೋ ಹಿಡ್ಕೊಂಡು ಬೇಡದ್ದಲ್ಲಿ ಒಕ್ಕಲಕ್ಕಷ್ಟೆ.. “ಎನ್ನಂದ ಎಡಿಯಾ” ಹೇದ°.

ಎಡಿತ್ತೋ ಇಲ್ಯೋ.,  ಕುಂಬಳಕಾಯಿಯ ಅಡಿಗೆ ಸತ್ಯಣ್ಣನ ತಲೆಲಿ ಹೊರ್ಸಿಯೇ ಬಿಟ್ಟ° ಅಡಿಗೆ ಸತ್ಯಣ್ಣನ ಅಪ್ಪ°..

ಎದುರಂದ ಅಪ್ಪ° ತಲೆಲಿ ಹೆಡಗೆ ಹೊತ್ತೊಂಡು ಮನೆಯೊಳ ಹೋಗಿ ಜಗುಲಿ ಮೂಲೆಲಿ ತಂದು ಮಡುಗಿದವು..

ಸತ್ಯಣ್ಣನೂ ಅಪ್ಪನ ಹಿಂದಂದಲೇ ಗೆದ್ದೆಂದ ಹೆರಟ°..

ಮೆಲ್ಲಂಗೆ ಹೊತ್ತೊಂಡು ಬಂದು ಜಾಲ ಮೆಟ್ಟುಕಲ್ಲು ಹತ್ತುವಾಗ ಕಲ್ಲು ಡಂಕಿ ಕುಂಬಳಕಾಯಿ ತಲೆಂದ ಡಮಾಲನೆ ಕೆಳಬಿದ್ದು ಒಡದು ರಟ್ಟಿತ್ತು..

ಅಪ್ಪಂಗೆ ಪಿಸುರು ಬಂತು “ಎಂಸರ ಮಾಡಿದ್ದೋ° ನೀನು?!, ಇಲ್ಯವರೇಂಗೆ ತಂದವಂಗೆ ಒಳ ತಂದು ಮಡಿಗಿಕ್ಕಲೆ ಎಡಿತ್ತಿಲ್ಯೋ? ಹೇದು ಗೌಜಿ ಮಾಡಿದವು..

ಸತ್ಯಣ್ಣ° ಹೇದ° – “ಆನಾದ ಕಾರಣ ಇಷ್ಟಾರು ಮಾಡಿದೆ” !! 😀

~~

4.

ಅಡಿಗೆ ಸತ್ಯಣ್ಣ ಕೆಂಪು ಜುಬ್ಬ ಹಾಕ್ಯೊಂಡು ಅಷ್ಟಾವಧಾನಕ್ಕೆ ಹೋದ್ದು ರಂಗಣ್ಣಂಗೂ ಗೊಂತಾಗಿ ಹೋತು..

ಇನ್ನಾಣ ಶತವಧಾನ ಎಲ್ಯಾರು ಇದ್ದರೆ ಹೋಯೇಕು ಹೇದು ತೋರ್ಲೆ ಸುರುವಾತು ರಂಗಣ್ಣಂಗೆ..

ಮೆಲ್ಲಂಗೆ ಸತ್ಯಣ್ಣನತ್ರೆ ರಂಗಣ್ಣ ಕೇಟ – “ಸತ್ಯಣ್ಣ, ಒಂದರಿ ನಿನ್ನ ಕೆಂಪು ಜುಬ್ಬ ಎನಗೆ ಕೊಡೆಕು ಆತ. ಹೋಗಿ ಬಂದಿಕ್ಕಿ ವಾಪಾಸು ತೊಳದು ಇಸ್ತ್ರಿ ಹಾಕಿ ಕೊಡುವೆ”

ಸತ್ಯಣ್ಣ° ಹೇದ° – ಅದೆಕ್ಕೆಲ್ಲ ನೀನು ಹೊಣೆಡಾ., ನವಗೆ ಬಗದ್ದದೇ ನವಗೆ ಸಿಕ್ಕುಗಷ್ಟೆ! 😀

~~

5.

ಮೆಡ್ರಾಸು ದೊಡಾ ಆಸುಪತ್ರೆ ಅಪೋಲೋವಿಲ್ಲಿ ಸುದರ್ಶನ ಹೋಮ ಅನುಪ್ಪತ್ಯ..

ಬೈಲ ಬಟ್ಟಮಾವನ ಒಟ್ಟಿಂಗೆ ಅಡಿಗೆ ಸತ್ಯಣ್ಣನ ಸೆಟ್ಟು..

ಮೆಡ್ರಾಸಿಂಗೆ ಹೋದರೆ ಅಲ್ಲಿ ಸೀರೆಗೊ ಧಾರಾಳ ಇಕ್ಕು, ಚೀಪುದೆ ಇಕ್ಕು ಹೇದು ಆರೋ ಕೆಮಿ ಊದಿತ್ತವು ಸತ್ಯಣ್ಣಂಗೆ..

ಸತ್ಯಣ್ಣ° ರೈಲು ಇಳುದು ಬಸ್ಸಿಲ್ಲಿ ಹೋಪಗ ಸುಮಾರು ಕೂಸುಗೊ ಬಸ್ಸಿಲ್ಲಿ ಮಾರ್ಗಲ್ಲಿ ಕಂಡತ್ತು..

..ಕಂಡತ್ತು ಎಂತರ??!… ನೋಡಿರೆ ಹೆಚ್ಚಿನವೂ ಒಂದು ಸೀರೆಯ ಹರುದು ನಾಕು ಜೆನ ಸುತ್ತ್ಯೊಂಡಿದ್ದಾಂಗೆ ಕಂಡತ್ತು ..

ಸತ್ಯಣ್ಣ° ಗ್ರೇಶಿದ… ಇಲ್ಲಿ ಸೀರೆಯೇ ನೇರ್ಪಕ್ಕೆ ಸಿಕ್ಕುತ್ತಿಲ್ಯೋದು !

ಅಪೋಲೊ’ವಿಂಗೆ ಹೋಗಿ ಬಟ್ಟಮಾವ ಸುದರ್ಶನ ಹೋಮ ಸುರುಮಾಡಿದವು.. ಸತ್ಯಣ್ಣ° ಅಡಿಗೆ ಸುರುಮಾಡಿದ°.

ಆಸುಪತ್ರೆ ಬುಡಲ್ಲಿ ಆಚಿಗೆ ಈಚಿಗೆ ಕೆಲಸಲ್ಲಿತ್ತಿದ ಬೆಳಿ ತುಂಡುಲಂಗ ಹಾಕ್ಯೊಂಡಿತ್ತಿದ ನರ್ಸೆತ್ತಿಗಳ ಕಂಡತ್ತು..

ಸತ್ಯಣ್ಣ° ಹೇದ° – ಓಯ್..ಇವಕ್ಕೆ ಸೀರೆ ಸುತ್ತಲೇ ಮರದ್ದೋದು!

ಒಟ್ಟಿಂಗೆ ಇತ್ತಿದ್ದ ರಂಗಣ್ಣ ಹೇಳಿದ° – ಬೆಂಗ್ಳೂರ ಫೋರ್ಟೀಸ್ಂದ ಇಲ್ಯೇ ಒಂದರಿ ಚೆಕ್ ಅಪ್ ಮಾಡ್ಸಿಕ್ಕಲಕ್ಕೋದು ಬಂದರ್ಲಿ !!  😀

~~

6.

ಅಡಿಗೆ ಸತ್ಯಣ್ಣಂಗೆ ಮೆಡ್ರಾಸಿಂಗೆ ಹೋಗಿ ಬಂದ ಬಚ್ಚಲು..

ಆ ದಿನ ಅನುಪ್ಪತ್ಯ ಇತ್ತಿಲ್ಲೆ, ಸತ್ಯಣ್ಣಂಗೆ ಬಿಡುವು..

ಉದಿಯಪ್ಪಾಣ ಒಂದರಿಯಾಣ ಕೆಲಸ ಆಗಿ ಅಂತೇ ಜಗಿಲಿಲಿ ಮನಿಗ್ಯೊಂಡಿತ್ತ ಸತ್ಯಣ್ಣಂಗೆ ಅಲ್ಲಿಗೆ ಕಣ್ಣು ಅಡ್ಡ ಹೋತು..

ರಮ್ಯಾ ಶಾಲಗೆ ಹೋಗಿತ್ತು.., ಶಾಲಗೆ ಮೊಬೈಲು ಕೊಂಡೋಪ ಕ್ರಮ ಇಲ್ಲೆ..

ರಮ್ಯನ ಮೊಬೈಲ್ ರಿಂಗ್ ಆತು..

ಎಚ್ಚರಿಗೆ ಆದ ಸತ್ಯಣ್ಣ ಎದ್ದು ಕೂದು ಕೆಮೆಗೆಂಡೆಗೆ ಮೊಬೈಲ ಒತ್ತಿ ಹಿಡ್ಕೊಂಡು ‘ಹರೇ ರಾಮ’ ಹೇದ..

“ನಮಸ್ಕಾರ… ನಿಮಗೆ ಕಿರು ಮಾಹಿತಿಯನ್ನೊಗಿಸಲು ಇದೀಗ ಸೂಕ್ತ ಸಮಯವೇ” ಹೇಳಿತ್ತು ಆಚ ಹೊಡೆಂದ.

“ಹಾ°., ಹೇಳು” – ಸತ್ಯಣ್ಣ ಇತ್ಲಾಗಿಂದ.

“ನಾವು ಬಿ.ಎಸ್.ಎನ್.ಎಲ್ ನಿಂದ ಮಾತಾಡ್ತಾ ಇದ್ದೀವಿ” – ಆಚ ಹೊಡೆಂದ.

“ಹಾ° ಆತು. ಮಾಹಿತಿಗಾಗಿ ಧನ್ಯವಾದಂಗೊ” – ಹೇದು ಮೊಬೈಲ್ ಮುಚ್ಚಿ ಮಡಿಗಿದ° ಅಡಿಗೆ ಸತ್ಯಣ್ಣ°.  😀

~~

7.

ಮೆಡ್ರಾಸಿಂಗೆ ಅಪೋಲೋ ಅನುಪ್ಪತ್ಯಕ್ಕೆ ಹೋಗಿತ್ತ ಅಡಿಗೆ ಸತ್ಯಣ್ಣ ವಾಪಾಸು ಬಪ್ಪ ದಾರಿಲಿ ಎಲ್.ಐ.ಸಿ. ಹದಿನೈದು ಮಹಡಿ ಕಟ್ಟಡವ ನೋಡಿ ‘ಯೋಪ!’ ಹೇದು ಒಂದರಿ ಆಶ್ಚರ್ಯ ಆಗಿತ್ತು. ಅಷ್ಟೆತ್ತರದ ಕಟ್ಟಡ ಇನ್ನೂ ಸತ್ಯಣ್ಣನ ಮನಸ್ಸಿಂದ ಅಳುದ್ದಿಲ್ಲೆ.

ಜಗುಲಿಲಿ ಮನಿಗಿದ ಸತ್ಯಣ್ಣಂಗೆ ಮತ್ತೊಂದರಿ ಕಣ್ಣಡ್ಡ ಹೋತು..

ರಜಾ ಹೊತ್ತೋಪಗ ಮತ್ತೊಂದರಿ ಮೊಬೈಲ್ ಕ್ರೀಂ ಕ್ರೀಂ ಆತು..

ಹರೇ ರಾಮ ಹೇಳಿಗೊಂಡೇ ಮೊಬೈಲ ನೆಗ್ಗಿ ಕೆಮಿಗೆ ಒತ್ತಿಗೊಂಡ ಸತ್ಯಣ್ಣ°..

“ಸ್ವಾಮಿ, ನಾವು ಎಲ್.ಐ.ಸಿ ಆಪೀಸಿಂದ ಮಾತಾಡ್ತಾ ಇದ್ದೀವಿ” ಹೇಳಿ ಕೇಳಿತ್ತು ಆಚೊಡೆಂದ.

ಸತ್ಯಣ್ಣ ಕೇಳಿದ° –” ಹೋ!.. ಎಲ್.ಐ.ಸಿ. ಒಂದನೇ ಮಹಡಿ ಆಪೀಸಿಂದಲೋ , ಹದಿನೈದನೇ ಮಹಡಿ ಆಪೀಸಿಂದಲೋ “

ಮತ್ತಾಣದ್ದು ಮಾತಾಡ್ಳೆ  ಬಿ.ಎಸ್.ಎನ್.ಎಲ್ ಸಿಗ್ನಲ್ ಕಟ್ಟಾತು. 😀

~~

8.

ಕಳುದ ಸರ್ತಿ ಮಾಷ್ಟ್ರು ಮಾವನ ಮನೆ ಅನುಪ್ಪತ್ಯ ಅಡಿಗ್ಗೆ ಹೋದ ಸತ್ಯಣ್ಣಂಗೆ ಹೆರಡುವಾಗ ಒಂದು ಹಲಿಸಿನ ಕಾಯಿ ಕೊಟ್ಟಿತ್ತವು ಮಾಷ್ಟೃ ಮನೆ ಅತ್ತೆ..

ಉದಿಯಪ್ಪಗ ಆ ಹಲಸಿನ ಕಾಯಿ ಕೊರದು ಸೊಳೆ ಆದು ಶಾರದೆ ಸೊಳೆಹೊರುದು ತಂದು ಮಡಿಗಿತ್ತು ಹೊತ್ತೋಪಾಗಾಣ ಕಾಪಿ ಹೊತ್ತಿಂಗೆ..

ಸೊಳೆಹೊರುದ್ದು ಲಾಯಕ ಆಯ್ದು.., ಮಾಷ್ಟ್ರುಮಾವನ ಮನೆ ಹಲಸಿನ ಕಾಯಿಯೂ ಲಾಯಕ ಇದ್ದು ಹೇದು ಮಾತಾಡಿಗೊಂಡಿಪ್ಪಗ ಮೊಬೈಲ್ ಶಬ್ದ ಮಾಡಿತ್ತು..

ಏವುತ್ರಾಣಾಂಗೆ ‘ಹರೇ ರಾಮ’ – ಸತ್ಯಣ್ಣ ಉವಾಚ.

“ನಾವು ಸಿಟಿ ಬೇಂಕಿಂದ ಫೋನ್ ಮಾಡ್ತಾ ಇದ್ಯೋ..ನಿಂಗೊಗೆ ‘ಪರ್ಸನಲ್ ಲೋನ್’ ಬೇಕಾರೆ ಕೊಡ್ಳಕ್ಕು” ಹೇಳೊದು ಕೇಳಿತ್ತು ಆಚ ಹೊಡೆಂದ.

ಸತ್ಯಣ್ಣ° ಹೇದ° – “ಎನಗೆ ‘ಪರ್ಸನಲ್ ಲೋನ್’ ಎಲ್ಲ ಬೇಡ.  ಬೇಂಕು ಲೋನ್ ಏನಾರು ಸಿಕ್ಕುಗೋ?” 😀

~~

9.

ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯದ ತೆರಕ್ಕು, ರಮ್ಯಂಗೆ ಕೋಲೇಜಿನ  ತೆರಕ್ಕು..

ಶಾರದೆ ಒಬ್ಬಂಗೇ ಉದಾಸನ ಆವ್ತು ಹೇಳಿ 10ದಿನಾಣ ಸಂಸ್ಕೃತ ಸಂಭಾಷಣ ಶಿಬಿರಕ್ಕೆ ಸೇರಿತ್ತು..

ಕ್ಲಾಸು ಮಾಡ್ತವ° ಮನೇಲಿಯೂ ಸಂಸ್ಕೃತವೇ ಮಾತಾಡೇಕು..ಅಂದರಷ್ಟೇ ಬೇಗ ಅಭ್ಯಾಸ ಅಕ್ಕು..

ಮನೆಲಿ ಇವಕ್ಕಿಬ್ರಿಂಗೆ ಪುರುಸೊತ್ತೇ ಇಲ್ಲದ್ದ ಮತ್ತೆ ಶಾರದೆ ಸಂಸ್ಕೃತ ಮಾತಾಡ್ತದಾದರೂ ಆರತ್ರ?!

ಸತ್ಯಣ್ಣನ ಮನೇಲಿ ಒಂದು ಬೆಳಿ ಪುಚ್ಚೆ ಇದ್ದತ್ತು.. ಕಾಂಬಲೂ ಚಂದ.. ಕ್ರಮವೂ ಚಂದ..

ಶಾರದೆ ಆ ಪುಚ್ಚೆಯತ್ರೇ ಸಂಸ್ಕೃತ ಪ್ರಯೋಗ ಸುರುಮಾಡಿತ್ತು..

ಆಗಚ್ಛತು.. ಉಪವಿಶತು.. ಪಶ್ಯತು.. ಖಾದತು… ಪಿಬತು.. ಗಚ್ಛತು

ಸತ್ಯಣ್ಣ ಎಂಟು ದಿನ ಕಳುದು ಒಂದಿನ ಉದಿಯಪ್ಪಗ ದೋಸೆ ತಿಂಬಲೆ ಕೂದೊಂಡು ಓ ಅಲ್ಲಿ ಕಣ್ಣು ಮಿಣಿ ಮಿಣಿ ಮಾಡಿಗೊಂಡು ಅದರಷ್ಟಕ್ಕೇ ಕೂದೊಂಡಿದ್ದ ಆ ಪುಚ್ಚಗೊಂದು ತುಂಡು ದೋಸೆ ಬಟ್ಳ ಹತ್ರೆ ಹಾಕಿ ಬಾ ಪುಚ್ಚೆ ತಿನ್ನು ಹೇದು ದೆನಿಗೊಂಡ°..

ಪುಚ್ಚೆ ಹಂದಿದ್ದೇ ಇಲ್ಲೆ. !! 😀

~~

10.

ಈಗ ಊರ್ಲಿಯಂತೂ ಅನುಪ್ಪತ್ಯದ ಮೇಗೆ ಅನುಪ್ಪತ್ಯ..

ಒಂದೇ ದಿನ ನಾಲ್ಕಾರು ದಿಕ್ಕೆ ಅನುಪ್ಪತ್ಯ..

ಬಟ್ಟಮಾವಂಗೂ ಪುರುಸೊತ್ತಿಲ್ಲೆ ಅಡಿಗೆ ಸತ್ಯಣ್ಣಂಗೂ ಪುರುಸೊತ್ತಿಲ್ಲೆ..

ಅದರೆಡಕ್ಕಿಲ್ಲಿ ಅಲ್ಲಲ್ಲಿ ಬ್ರಹ್ಮಕಲಶ, ಪ್ರತಿಷ್ಠೆ, ಜಾತ್ರೆ ಇತ್ಯಾದಿ ಇತ್ಯಾದಿ..

ಮನ್ನೆ  ಪುತ್ತೂರು ಮಾಲಿಂಗೇಶ್ವರನ ಬ್ರಹ್ಮಕಲಶಕ್ಕೆ ಅಡಿಗೆ ಸತ್ಯಣ್ಣನೂ  ಒಂದಿನಕ್ಕೆ ಪುರುಸೊತ್ತು ಮಾಡಿಗೊಂಡು ಹೋಗಿತ್ತಿದ್ದ ಬೈಕಿಲ್ಲಿ..

ಬೈಲ ಹತ್ತು ಸಮಸ್ತರೂ ಊರ ಪರವೂರ ಸಾವಿರಾರು ಭಕ್ತರೂ ಸೇರಿ ಮಣ್ಣ ಗರ್ಪಿ ಸಮಮಾಡಿ ಚರಳು ಹೊಯಿಗೆ ತುಂಬಿಸಿ ವಿಶಾಲ ಜಾಗೆ ಮಾಡಿದ್ದರ, ಜೀರ್ಣೋದ್ಧಾರ ಮಾಡಿ ನೂತನವಾಗಿ ಕಾಂಬ ದೇವಳವ, ಸಭಾಭವನ, ಅಚ್ಚುಕಟ್ಟು ವ್ಯವಸ್ಥೆ ಎಲ್ಲ ನೋಡಿಕ್ಕಿ ಕ್ಯೂಲಿ ನಿಂದು ದೇವರ ದರ್ಶನ ಮಾಡಿಕ್ಕಿ, ಪ್ರಸಾದ ತೆಕ್ಕೊಂಡು, ಬಾಳೆಲಿ ಸಜ್ಜಿ ಮಾಡ್ತದರ…,  ಹೊರೆಕಾಣಿಕೆ ಬಂದು ಸೇರಿದ್ದರ…, ಟೋಮೇಟೋ ಹೇಳಿ ಬೋರ್ಡ್ (ಫಲಕ) ಹಾಕಿ ಹಣ್ಣಡಕ್ಕೆ ಬಂದದರ ಅಲ್ಲಿ ಮಡಿಗಿದ್ದರ ಎಲ್ಲ ನೋಡಿ ಸಂತೋಷ ಆತು ಸತ್ಯಣ್ಣಂಗೆ..

ಅಡಿಗೆ ಸತ್ಯಣ್ಣ° ಪುತ್ತೂರಿಂಗೆ ಬಂದದು ಕಾನಾವಕ್ಕಂಗೂ ಗೊಂತಾತು. “ಹೋಪಂದ ಮದಲೆ ಒಂದರಿ ಮನಗೆ ಬಂದಿಕ್ಕಿ ಹೋಗು ಸತ್ಯಣ್ಣ ಹೇದು ಫೋನು ಮಾಡಿ ಹೇದವು ಕಾನವಕ್ಕ° ಸತ್ಯಣ್ಣಂಗೆ..

ಪ್ರೀತಿಲಿ ದೆನಿಗೊಂಡಿಪ್ಪಗ ಪುರುಸೊತ್ತಿಲ್ಲದ್ರೂ ಒಂದು ಕ್ಷಣಕ್ಕೆ ಹೋಗಿ ಮಾತಾಡಿಕ್ಕಿ ಹೆರಡುಸ್ಸು ಹೇದು ಹೋಗಿ ಆತು ಕಾನಾವಕ್ಕನಲ್ಲ್ಯಂಗೆ ಸತ್ಯಣ್ಣ..

ಕಾನಾವು ಡಾಕುಟ್ರು ಬಾವ° ಪೇಶೆಂಟುಗಳೊಟ್ಟಿಂಗೆ ಬೆಶಿಲಿ ಇದ್ದರೂ ನೆಗೆ ನೆಗೆ ಮಾಡ್ಯೊಂಡೇ  ‘ಒಳ ಬನ್ನಿ ಸತ್ಯಣ್ಣ..’ ಹೇದು ಹೆರ ಸ್ವಾಗತಕಾರಿಣಿಯ ನೋಡಿಗೊಂಡು ಕಾವಲೆ ಕೂರ್ಸದ್ದೆ ಒಳ ಕರ್ಕೊಂಡು ಹೋದವು ಅಡಿಗೆ ಸತ್ಯಣ್ಣನ..

ಗಡಿಬಿಡಿ ಚಾಯವೂ , ಬಿಸ್ಕುಟು ಅಂಬಡೆಯೂ ಕೂದಲ್ಯಂಗೆ ಬಂತದಾ ಅಷ್ಟಪ್ಪಗ.. ನಾಲ್ಕೈದು ಲೋಕಾಭಿರಾಮ ಮಾತಾಡಿಕ್ಕಿ ನಿಂಗೊ ನಿಂಗಳ ಕಾರ್ಯ ನೋಡಿಗೊಳ್ಳಿನ್ನು ಹೇದು ಅಡಿಗೆ ಸತ್ಯಣ್ಣ ಒಂದು ಧನ್ಯವಾದ ಹೇದಿಕ್ಕಿ ಹೆರಡ್ಳೆ ಎದ್ದು ನಿಂದ..

ಕಾನಾವಕ್ಕ° ಮದಲೇ ಎರಡು ಬಗೆ ಸ್ವೀಟು ಖಾರ ಅದರೊಟ್ಟಿಂಗೆ ಅದು ಅಪರೂಪದ ಧಾರ್ಮಿಕ ಪುಸ್ತಕ ರಮ್ಯಂಗೊ ಶಾರದೆಗೋ ಓದಲಾತು ಹೇದು ಜೆರೋಕ್ಸ್ ತೆಗದು ಒಂದು ಚೀಲಲ್ಲಿ ಹಾಕಿ ಮಡಿಗಿತ್ತಿದ್ದವು ತೋರ್ತು.. 

ಐದು ಕಿಲೊದಪ್ಪಷ್ಟು ಇತ್ತಿದ್ದ ಆ ಕಟ್ಟವ ಎರಡು ಕಿಲೋ ಚೀಲಲ್ಲಿ ತುಂಬ್ಸಿ ಕೊಟ್ಟದರ ಬೈಕಿನ ಕೊಕ್ಕಿಲಿ ನೇಲ್ಸಿಗೊಂಡು ಬೈಕಿನ ಮೆಟ್ಟಿ ಹೆರಡ್ಸಿದ ಸತ್ಯಣ್ಣ..

ಹೋಪದಾರಿಲಿ ಇನ್ನೊಂದು ಗಟ್ಟಿ ಚೀಲ ತೆಕ್ಕೊಂಡ್ರೆ ಇದೂ ಗಟ್ಟಿಗೆ ನಿಂಗೆ ಮುಂದಂಗೂ ಉಪಯೋಗಕ್ಕೆ ಅಕ್ಕು ಹೇದು ಗ್ರೇಶಿಗೊಂಡು ಗಾಡಿ ಓಡ್ಸಿದ.. ಆದರೆ ಹೋಪ ದಾರಿಲಿ ಬೈಕಿನ ಕರೇಲಿ ನಿಲ್ಸಿಕ್ಕಲೆ ಎಡಿಗಾಯ್ದಿಲ್ಲೆ ಈ ಜಾತ್ರೆ ಜೆನರ ತೆರಕ್ಕು ಟ್ರೇಪಿಕ್ಕು ಗೌಜಿ ಎಡೆಲಿ..

ಅಂಬಗಂಬಗ ಒಂದು ಕೈಲಿ ಚೀಲ ಇದ್ದೋ ಇದ್ದೋ ಹೇದು ಮುಟ್ಟಿನೋಡಿಗೊಂಡೇ ಬೈಕು ಮುಂದೆ ಓಡ್ಸಿಗೊಂಡೇ ಹೋದ..

ನಗರ ದಾಂಟಿತ್ತು ..  ಚೀಲ ಮುಟ್ಟಿಗೊಂಡ°.. , ಕಬಕ ದಾಂಟಿತ್ತು… ಚೀಲ ಮುಟ್ಟಿಗೊಂಡ°  – ಇದ್ದು ಕೊಕ್ಕಿಲಿ ನೇತುಗೊಂಡು.

ಚೀಲ ತೆಗದಿಕ್ಕಲೆ ನೇರ್ಪದ ಅಂಗುಡಿ ಕಂಡತ್ತಿಲ್ಲೆ. ಸರಿ, ಇನ್ನು ವಿಟ್ಲಂದ ತೆಗವೋ° ಹೇದು ಮುಂದುವರ್ಸಿತ್ತು..

ವಿಟ್ಲ ಚೀಲದಂಗುಡಿ ಎದುರು ಬೈಕು ನಿಂದತ್ತು. ಸತ್ಯಣ್ಣ ನೋಡುತ್ತಾ….. ಚೀಲ ಕಾಣೆ. ದಾರಿಲಿ ಎಲ್ಯೋ ಕೈ ಹರುದು ತುಂಡಾಗಿ ಬಿದ್ದಿರೆಕು.

ಬೈಕಿನ ಮೆಟ್ಟಿ ರಫಕ್ಕನೆ ಹಿಂದಂತಾಗಿ ಓಡ್ಸಿದ ಸತ್ಯಣ್ಣ ಕಬಕ ಹೊಡೆಂಗೆ .. ದಾರಿಲಿ ಎಲ್ಯಾರು ಚೀಲ ಬಿದ್ದದು ಸಿಕ್ಕುಗೋದು..

ಕಬಕ್ಕಕ್ಕೆ ಹರುದುಬಿದ್ದು ಓಡಿಗೊಂಡು ಬಂದದು ಮಾಂತ್ರ ಆತು. ಚೀಲವೂ ಕಂಡತ್ತಿಲ್ಲೆ.. ಬಿದ್ದ ಕುರುಹೂ ಕಂಡತ್ತಿಲ್ಲೆ. 🙁

ಅಂತೂ ಹೋದ್ದು ಹೋತನ್ನೆ ಹೇದು ಮೋರೆ ಕುಂಞಿ ಮಾಡಿಗೊಂಡು ಬೈಕಿನ ಮನೆ ಹೊಡೆಂಗೆ ವಾಪಾಸು ಎಬ್ಬಿದ°..

ದಿನ ಎರಡಾತು.. ಸತ್ಯಣ್ಣಂಗೆ ಬೇಜಾರು ತಣುದ್ದಿಲ್ಲೆ..

ತೆಕ್ಕೊಂಡದು ಇಡ್ಕಿ ಹೋದರೂ ಬೇಜಾರಿತ್ತಿಲ್ಲೆ… ಪ್ರೀತಿಲಿ ಕೊಟ್ಟದು ಇಡ್ಕಿ ಹೋತನ್ನೇದು ಸತ್ಯಣ್ಣಂಗೆ ಬೇಜಾರು.

ಬಹುಶಃ ಮಾಲಿಂಗೇಶ್ವರನ ಜಾತ್ರೆ ಸಮಯಲ್ಲಿ ಜಾತ್ರಗೇ ತಂದು ಕೊಡೆಕೇ ಹೊರತು  ಅಲ್ಲಿಂದ ಹೊತ್ತೊಂಡು ಬಪ್ಪಲಾಗ ಹೇದು ದೇವರಿಂಗೇ ಕಂಡತ್ತೋ ಏನೋ.. 🙁

ಅದರಿಂದ ಹೆಚ್ಚಿಗೆ ಪುಕುಪುಕು ಎಂತ ಹೇಳಿರೆ ಈ ವಿಷಯ ಕಾನಾವಕ್ಕಂಗೆ ಗೊಂತಾರೆ ಅಡಿಗೆ ಸತ್ಯಣ್ಣಂಗೆ ಹಸಿ ಹಸಿ ಅರ್ಚನೆ ಇಲ್ಲದ್ದೆ ಇಕ್ಕೋ  ಹೇದು 😀 

~~

11.

ಕಲ್ಲಾರಿಮೂಲೆ ಪುಳ್ಳಿ ಉಪ್ನಾನ ದಿನವೇ ಪೆರ್ವದ ಮಾಣಿಯ ಉಪ್ನಾನವುದೇ..

ಹಾಂಗಾಗಿ ಮದಾಲು ಒಪ್ಪಿಗೊಂಡಿ ಕಲ್ಲಾರಿಮೂಲೆ ಪುಳ್ಳಿ ಉಪ್ನಾನಕ್ಕೆ ಅಡಿಗೆ ಸತ್ಯಣ್ಣ° ಹೇದೂ ಪೆರ್ವದ ಮಾಣಿ ಉಪ್ನಾನಕ್ಕೆ ಕೊಲ್ಲೂರಣ್ಣನೂ ಹೇದೂ ಎಡ್ಜೆಸ್ಟ್ ಮಾಡಿಗೊಂಡು ಸುಧಾರ್ಸಿದವು..

ಅಡಿಗೆ ಸತ್ಯಣ್ಣಂಗೆ ಅಡಿಗೆ ವಿಷಯಲ್ಲಿ ಎಂತ ಕೇಳಿರೂ ಹೇಳುಗು.. ಚೂರ್ಣಿಕೆ ಹೇಳು ಹೇಳಿರೆ ಅಂವ ಎಲ್ಲಿಗೆ ಹೋಪದು!

ಅಂತೂ ಒಂದು ಚೂರ್ಣಿಕೆ ಹೇಳ್ಳೇ ಬೇಕು ಹೇದು ಬೈಲಿನವರ ಒತ್ತಾಯ ಆತು..

ಚೂರ್ಣಿಕೆ ಹೇದರೆ ಅಂತೇ ಅರ್ಬಾಯಿ ಕೊಡ್ವದಲ್ಲ, ಅದು ಮನರಂಜನೆಗಿಪ್ಪದಲ್ಲ ಹೇಳ್ವದು ಸತ್ಯಣ್ಣಂಗೂ ಗೊಂತಿದ್ದು.

ಸಂತೋಷಕ್ಕಾಗಿ ದೇವತಾಸ್ಮರಣೆ ಹೇಳ್ವದರ್ಲಿ ಸತ್ಯಣ್ಣಂಗೂ ನಂಬಿಕೆ ಇದ್ದು. 

ಚೂರ್ಣಿಕೆಗೆ ಶಾಸ್ತ್ರೀಯ ಸಂಗೀತದ ರಾಗ ತಾಳ ಲಯ ಅಗತ್ಯ ಇಲ್ಲೆ, ಮಂತ್ರದ ಸೊರ ಅಗತ್ಯ ಇಲ್ಲೆ..

ಹಾಂಗಾಗಿ ಆರ್ಬಾಯಿಯೂ ಆಗದ್ದಾಂಗೆ, ಅಪಚಾರವೂ ಆಗದ್ದ ಹಾಂಗೆ ಅಡಿಗೆ ಸತ್ಯಣ್ಣ° ಒಂದು ಲಯ ಹಿಡ್ಕೊಂಡು ಚೂರ್ಣಿಕೆ ಹೇಳಿದ° –

ಹರಿ…….

ಹರ್ರಿ…….

ಹ…ರಿ…..

ಹ..ರ್ರಿ…………

ಇನ್ನು ಕಾದರೆ ಕೈ ಒಣಗುಗು ಹೇದು ಹತ್ರೆ ಕೂದ ಸುಬಾವ°  “ಭೋಜನಾಂತೇ ಗೋವಿಂದ ನಾಮ ಸಂಕಿರ್ತನಂ ಗೋವಿಂದ ಹರಿ ಗೋವಿಂದಾ”  ಹೇದು ಹೇಳ್ಯಪ್ಪದ್ದೆ

‘ಗೋ…ವಿಂದ’  ಹೇದು  ಅಟ್ಟಾಸು ಹಾಕಿ ಎದ್ದವು ಎಲ್ಲೋರು. 😀

(ಊಟಕ್ಷಿಣೆ ಎಂತಾತು ಹೇದು ಗುರಿಕ್ಕಾರ್ರತ್ರೆ ಕೇಳಿಗೊಳ್ಳಿ ಆತಾ) 😀

[ಆಚಿಗೆ ಪೆರ್ವದ ಉಪ್ನಾನಲ್ಲಿ ಎಂತಾಯ್ದೋ…     ಉಮ್ಮ,  ಹೋದೋರು ಹೇಳೇಕ್ಕಷ್ಟೇ] 😀

  ~~~ 😀 😀 😀 ~~~

 

ಅಡಿಗೆ ಸತ್ಯಣ್ಣನ ಬಗ್ಗೆ ನಿಂಗೊ ಎಷ್ಟು ತಿಳ್ಕೊಂಡಿದಿ ?-

ಕಳುದವಾರದ ಪ್ರಶ್ನಗೆ ಉತ್ತರ  –         ○ರಾಧೆ

ಓದುಗರಿಂಗೆ   ಈ ವಾರದ ಪ್ರಶ್ನೆ –

ಅಡಿಗೆ ಸತ್ಯಣ್ಣಂಗೆ ಮಗ° ?

○ ಶಾಲಗೆ ಹೋವ್ತ°        ○ ಇಲ್ಲೆ        ○ ಉಲ್ಲೇಖ ಆಯ್ದಿಲ್ಲೆ          ○ ಕೋಲೇಜಿಂಗೆ ಹೋವ್ತ°

 

[ಪ್ರಶ್ನೆಯ ಸರಿಯಾಗಿ ಯೋಚಿಸಿ ಉತ್ತರವ ಆಯ್ದು ಬರದು ಕಳ್ಸಿ. ಸರಿಯುತ್ತರ ನೀಡಿ ಪ್ರಥಮ ವಿಜೇತರಿಂಗೆ ರಮ್ಯನ ಮದುವೆ ಸಮಯಲ್ಲಿ ಒಂದು ಕೆರ್ಶಿ ಹೋಳಿಗೆ. ದ್ವೀತೀಯ ಸ್ಥಾನ ಪಡದವಕ್ಕೆ ಒಂದು ಕರಡಿಗೆ ಮಿಕ್ಚರು. ಮೂರು ನಾಕು ಹೇಳಿ ಇನ್ನು ಉದ್ದಕ್ಕೆ ಸ್ಥಾನಂಗೊ ಇಲ್ಲೆ.]

11 thoughts on “‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 10

  1. ಅಡಿಗೆ ಸತ್ಯಣ್ಣ `ಸೂಪಿ ಲೆಕ್ಕ ಅತ್ತ್ ‘ ! ಸರ್ದಾರ್ಜಿಯನ್ನುದೇ ರಾಂಪನನ್ನುದೇ ಅಡ್ಡಡ್ಡ ನುಂಗುಗು ! “ಅಡಿಗೆ ಸತ್ಯಣ್ಣನ ಜೋಕುಗೊ” ಹೇಳಿ ಬರದ್ದಕ್ಕೆ ನೆಗೆಮಾಡೆಕ್ಕಷ್ಟೆ ಹೇಳ್ತ ಪ್ರಸಂಗ ಇಲ್ಲಿ ಬಯಿಂದೇಯಿಲ್ಲೆ. ಓದುವಾಗ ನೆಗೆ ಒಳಂದಲೇ ಪೀಂಕುತ್ತು. ನಮ್ಮ ಆಸುಪಾಸಿಲಿ ದಿನನಿತ್ಯ ನಡೆತ್ತ ಸಂಗತಿಗಳನ್ನೇ ನವುರಾಗಿ ನೇಯ್ದು ಸಹಜವಾದ ಭಾಷೆಲಿ, ಧಾಟಿಲಿ ಹೇಳಿದ ಕ್ರಮಯಿದ್ದನ್ನೆ -ಸೂಪರ್!

  2. ಮಾಹಿತಿಗಾಗಿ ಧನ್ಯವಾದಂಗೊ” – ಹೇದು ಮೊಬೈಲ್ ಮುಚ್ಚಿ ಮಡಿಗಿದ° ಅಡಿಗೆ ಸತ್ಯಣ್ಣ°,ಎಲೆಪೆಟ್ಟಿಗೆ ತೆಗದು ಅಡಕ್ಕೆ ಹೋಳು ಮಾಡಿಕ್ಕು ಅಲ್ಲದೋ?
    ಪುಚ್ಚೆಯ ಕತೆ ಗಮ್ಮತ್ತಾಯಿದು.

  3. ಹೇಯ್ ಇದೆನ್ಸರ ಪೆರಟ್ಟು ಚೋದ್ಯ? ಸತ್ಯಣ್ಣಂಗೆ ಏರಡು ಕೂಸುಗೊ ಮಾತ್ರ ಅಲ್ಲದೊ ಭಾವ

  4. ಒಂದಕ್ಕಿಂತ ಒಂದು ರೈಸಿದ್ದಯ್ಯಾ 🙂

  5. ಪುಚ್ಚೆಯ ವಿಷಯದ ಹಾಸ್ಯ ನೆನೆಸಿದರೆ ನೆಗೆ ಬಪ್ಪ ಹಾಂಗಿದ್ದು.

  6. ಸತ್ಯಣ್ಣಂಗೆ ಮಗ ಇದ್ದನಾ? ಉಮ್ಮಪ್ಪ ನಿಂಗೊಗೇ ಗೊಂತು! ಅದ್ಬುತ ಜೋಕುಗೊ ‘ಭಾವ’ಯ್ಯ. ರಾಮಜ್ಜನ ಕೋಲೇಜು ಹೇದರೆ ಏವದು?

  7. ವೆಂಕಟಣ್ಣನ ಚಿತ್ರ ಬಿಡುಸುವ ಕಲೆ ಅಂತು .. ಅದರ ಹೂಗಳುಲೆ ಪದಂಗಳೆ ಸಾಲಾ… ಭಾರಿ ಲಾಇಕಾ.. ಅನು ಅಡಿಗೆ ಸತ್ಯಣ್ಣ ಮತ್ತೆ ಪಟ ಎರಡರದ್ದು ಪಾನ್.. ತಿರುಗುವ fan ಅಲ್ಲ… 😀 😀
    ಪುಚ್ಚೆ ಒಟ್ಟಿಂಗೆ ಸಂಸ್ಕ್ರಿತ ಸ್ಂಭಾಷಣೆ ಲಾಇಕಾ ಆಯಿದು.
    ನಿನ್ನೆ ಸಥ್ಯಣ್ಣನ ಮನೆಗೆ ಹೋಗಿತ್ತೆ.ಅಲ್ಲಿಯಾಣ ಬೆಳಿ ಪುಚ್ಚೆ ಹತ್ತರೆ ಕೇಳಿದೆ.. ಬವತ್ಯಾಃ ನಾಮ ಕಿಂ ಹೇಳಿ ಕೇಳಿದೆ. ಅದು ಮ್ಯಾಆಆಆಆಆವ್ ಹೇಳೆಕ್ಕಾ.. 😛 😛 😀

  8. ಸತ್ಯಣ್ಣನ ಮಗನ ವಿಷಯ ಇಷ್ಟನ್ನಾರ ಉಲ್ಲೇಖ ಆಯ್ದಿಲ್ಲೆ ಹೇದು ಕಾಣ್ತು.

  9. ಅಡಿಗೆ ಸತ್ಯಣ್ಣಂದು ಬೇರೆ ಬೇರೆ ಭಾವಭಂಗಿಯ ಚಿತ್ರಂಗಳೂ ಬರಲ್ಲಿ…ವೆಂಕಟ್ ಅಣ್ಣಂಗೆ ಅದು ಕ್ಷಣಮಾತ್ರಲ್ಲಿ ಎಡಿಗು.

  10. ಬಲಿಪ್ಪಜ್ಜನ ಒಟ್ಟಿಂಗೆ ಜಪಾನಿಂಗೆ ಹೋಪಗ ಸತ್ಯಣ್ಣನ ಹೋಳಿಗೆ ಮಾಡುವ ಏಕ್ಷನಿಂಗೆ ಬಂದ ಪ್ರತಿಕ್ರಿಯೆ ಸೂಪರ್ ಆಯಿದು. ಕಾನಾವಕ್ಕ ಕೊಟ್ಟ ಗಿಫ್ಟು ಬೈಕಿಂದ ಉದುರಿದ್ದದು ನೈಜವಾಗಿದ್ದು. ಕಾನಾವಕ್ಕನ ಹತ್ರೆ ಆರೂ ಈ ವಿಷಯ ಹೇಳಿಕ್ಕೆಡಿ. ಪುಚ್ಚೆ ಸಂಸ್ಕೃತ ಕಲ್ತದುದೆ ಲಾಯಕಾತು. ಸತ್ಯಣ್ಣಂಗೆ ಮಗ ಇದ್ದನೋ ? ನೆಂಪಾವ್ತಿಲ್ಲೇನೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×