Oppanna.com

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 13

ಬರದೋರು :   ಚೆನ್ನೈ ಬಾವ°    on   06/06/2013    7 ಒಪ್ಪಂಗೊ

ಚೆನ್ನೈ ಬಾವ°

ಅಡಿಗೆ ಸತ್ಯಣ್ಣಂಗೆ ತುಂಬ ತೆರಕ್ಕು. ಸರಿ ಕಂಡುಮುಟ್ಟಿಗೊಂಬಲೆ ಎಡಿಗಾಯ್ದಿಲ್ಲೆ ಈ ಸರ್ತಿ

ಓ ಮನ್ನೆ ಓ ಅಲ್ಲಿಗೆ ಹೋವ್ತ ದಾರ್ಲಿ ಕಂಡಿಪ್ಪಗ ಮಾತಾಡ್ಸಿದ್ದರ್ಲಿ ಓ ಇಷ್ಟು ಶುದ್ದಿ ಸಿಕ್ಕಿತಷ್ಟೆ-

 

1.

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

 

ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯದ ತೆರಕ್ಕು. ರಮ್ಯಂಗೆ ಕೋಳೇಜು ಸುರುವಾದ ತೆರಕ್ಕು..

ರಮ್ಯಂಗೆ ಕೋಲೇಜು ಹೊಸತ್ತು., ಜೆನಂಗೊ ಹೊಸತ್ತು..

ಆರೋ ಹೇಳಿತ್ತವು “ಕೋಲೋಜಿಲ್ಲಿ ರೇಗಿಂಗು ಮಾಡ್ತವು” ಹೇದೆಲ್ಲ..

ರಮ್ಯಂಗೆ ಹಾಂಗೇಳಿರೆ ಎಂತರ ಹೇಳಿಯೇ ಗೊಂತಿಲ್ಲೆ ಪಾಪ..

ಸುರುವಾಣ ದಿನ ಧೈರ್ಯಮಾಡಿಗೊಂಡು ಕೋಲೇಜಿಂಗೆ ಹೋದ್ದಾತು.. ಪಾಠ ಆತು.. ಮಧ್ಯಾಹ್ನ ಆತು

ಊಟದ ಸಮಯಲ್ಲಿ ಒಂದು ಗೇಂಗು ಜೆಗುಲಿಲಿ ಬಂದವು ನೇರ ಕ್ಲಾಸು ರೂಮಿನೊಳ ಬಂದು ಹೊಸ ಮಕ್ಕಳ ಹತ್ರೆ ಬಂದು ಒಂದೊಂದು ಚೇಷ್ಟೆ ಮಾಡ್ಸಿ ನೆಗೆ ಮಾಡಿ ಕುಶಾಲು ಮಾಡ್ಳೆ ಸುರುಮಾಡಿದವು..

ರಮ್ಯನ ಸರದಿ ಬಂತು.. ಕೈ ಕಾಲು ನಡುಗಿತ್ತು..

ಕ್ಲಾಸು ಬೋರ್ಡಿನತ್ರೆ ಹೋಗಿ ಒಂದು ಲಾಯಕ ಪದ್ಯ ಹೇಳ್ಳೆ ಹೇದವು..

ದೊಡ್ಡಮಕ್ಕಳ ಆಜ್ಞೆ., ಎಡಿಯ, ಗೊಂತಿಲ್ಲೆ . ಹೇಳಿರೆ ಎಂತ ಮಾಡಿಕ್ಕುಗೋ..! ಹೆದರಿಕೆಯೂ ಆವ್ತು..

ರಮ್ಯ ಸೀದ ಹೋತು.. ಬೋರ್ಡಿನತ್ರೆ ಚಕ್ಕನಾಟಿ ಕೂದತ್ತು..

ಕಣ್ಣಮುಚ್ಚಿ ತೊಡಗೆ ತಾಳ ಹಾಕ್ಯೊಂಡು ಗಟ್ಟಿಗೆ ಹಾಡಿತ್ತು.. “ಸ್ವಾಮಿ ದೇವನೆ ಲೋಕ ಪಾಲನೆ…..” 

ಎಂತ ಎಲ್ಲ ನಿಶ್ಯಬ್ದ ಆಗಿದ್ದನ್ನೇಳಿ ಎಡೇಲಿ ಕಣ್ಣ ಬಿಡ್ಸಿ ನೋಡಿತ್ತು.. – ತರಗತಿಯೊಳ ಆರೊಬ್ಬನೂ ಇಲ್ಲೆ !  😀

 

~~

2.

 

ಅಡಿಗೆ ಸತ್ಯಣ್ಣಂಗೆ ತೆಂಕ್ಲಾಗಿ ಅನುಪ್ಪತ್ಯ..

ತೆಂಕ್ಲಾಗಿ ಹೋಪದು ಹೇಳಿರೆ ರೈಲಿಲ್ಲ್ಯೇ ಹೋವ್ತದು ಕ್ರಮ..

ರೈಲಿನೊಳ ದೊಡಾ ಬುಟ್ಟಿಲಿ ದೊಡಾ ಮಾವಿನಣ್ಣು ತುಂಬ್ಸಿಗೊಂಡು ಒಂದು ಆಣು ಮಾರಿಗೊಂಡು ಬಂತು..

ಲಾಯಕ ಅರಶಿನ ಅರಶಿನ ಹಣ್ಣಾದ ಮಾವಿನಣ್ಣು. ನೋಡುವಾಗಳೇ ಬಾಯಿಲಿ ನೀರು ಹರಿತ್ತು..

ಅವ್ವವ್ವು ಬೇಡಿ ತೆಕ್ಕೊಂಡವು ಪೈಸೆಕೊಟ್ಟು..

ತೆಕ್ಕೊಂಡು ಅಲ್ಲೇ ತಿಂತವಕ್ಕೆ ಚೆಂದಕೆ ನಾಕು ಗೀಟು ಹಾಕಿ ಕೆತ್ತೆ ಕೆತ್ತೆ ಎಳಕ್ಕುತ್ತ ನಮೂನೆಲಿ ಅದು ಕೊರವ ಚಂದ ನೋಡ್ಳೇ ಪೈಸೆ ಕೊಡೇಕ್ಕಪ್ಪ – ಸತ್ಯಣ್ಣ ಹೇಳಿದ್ದದು.

ಅವೆಲ್ಲ ಕೆತ್ತೆ ಎಳಕ್ಕಿ ಕಚ್ಚಿ ಬಲುಗುತ್ತದು ಕಂಡತ್ತು ಸತ್ಯಣ್ಣಂಗೆ. ಉಪ್ಫ್ ಚೋಲಿ ವಿಪರೀತ ದಪ್ಪ ಇತ್ತೋ ಏನೋ ಎಲ್ಲ ಚೀಪಿ ಚೀಪಿ ಮಡುಗುತ್ತದು ಕಂಡತ್ತು..

ಹತ್ರಂಗೆ ಎತ್ತಿಯಪ್ಪಗ ಬುಟ್ಟಿ ಅರ್ಧ ಕಾಲಿಯೂ ಆತು..

ಬಾಯಿಲಿ ಎಸರು ಹರ್ಸಿಗೊಂಡೇ ಕೇಳಿದ ಸತ್ಯಣ್ಣ ಮಾವಿನಣ್ಣಿಂಗೆ ಎಷ್ಟು ಹೇದು.

ಒಂದಕ್ಕೆ ಅರುವತ್ತು ರೂಪಾಯಿ ಭಟ್ರೇ ಹೇಳಿತ್ತು ಆ ಗೆಂಡು..

ಯಬ್ಬೋ! ಅವು ತಿಂಬದು ನೋಡಿಯೇ ಎನ ಹೊಟ್ಟೆ ತುಂಬಿತ್ತು. “ಎನಗೆ ಮಾವಿನಣ್ಣು ಉಷ್ಣ, ಎನ ಬೇಡ” ಹೇದ ಸತ್ಯಣ್ಣ° ಮೋರೆಯತ್ತೆ ತಿರುಗಿಸಿದ°.    😀

 

~~

3.

ಅಡಿಗೆ ಸತ್ಯಣ್ಣ° ಅನುಪ್ಪತ್ಯಕ್ಕೆ ಹೋದ ಒಂದಿಕ್ಕೆ ಸತ್ಯಣ್ಣಂಗೆ ವಿಪರೀತ ತಲೆಬೇನೆ ಸುರುವಾತು..

ಮನೆಯಜ್ಜಿ ಬಂತು ಒಂದು “ಟೀ ಮಾಡಿ ಕುಡುಕ್ಕೋ ಸತ್ಯಣ್ಣ, ಕಮ್ಮಿ ಆವ್ತು ನೋಡು” ಹೇಳಿತ್ತು..

ಅಟ್ಟಿನಳಗೆ ತೊಳಕ್ಕೊಂಡಿದ್ದ ಸುಂದರಿ ಸತ್ಯಣ್ಣನ ಅವಸ್ಥೆ ನೋಡಿಕ್ಕಿ ಹೇಳಿತ್ತು – “ತಲಗೆ ಚಂಡಿತುಂಡು ಗಟ್ಟಿಗೆ ಕಟ್ಟಿಗೊಳ್ಳಿ ಅಣ್ಣೇರೆ”..

ಮನೆಯಕ್ಕ° ಬಂದು ಹೇಳಿತ್ತು – “ತಲಗೆ ಲಿಂಬುಳಿ ಎಸರು ಹಾಕಿ ತಿಕ್ಕಿರೆ ಬೇಗ ಗುಣ ಆವ್ತು”..

ಮನೆಯೆಜಮಾನ ಬಂದ° ಎಂತದೋ ಅವನ ಕರಡಿಗೆಲಿದ್ದ ಒಂದು ಮಾತ್ರೆ ತೆಗದು ಕೊಟ್ಟು – “ಇದರ ತಿಂದು ನೋಡು ಸತ್ಯಣ್ಣ” ಹೇದು ತೆಗದು ಕೊಟ್ಟ°., ಸತ್ಯಣ್ಣ ಮಾತ್ರೆ ತಿಂದ, ನೀರು ಕುಡುದ°.

ರಜಾ ಕಳಿಯೆಕ್ಕಾರೆ ಮನೆಯೆಜಮಾನನ ಸಣ್ಣಮಗ° ಲುಂಗಿ ಮೇಗೆಂತಾಗಿ ಕಟ್ಟಿಗೊಂಡು ಬಂದವ° ಕೇಳಿದ° – ಹೇಂಗೆ ಸತ್ಯಣ್ಣೋ°, ತಲೆಬೇನೆ ಕಮ್ಮಿ ಆತೋ ಈಗ!

ಈ ಇವನ ಕೊಂಗಿಯ ಕಂಡಪ್ಪಗ ಆರಿಂಗಾರು ಪಿಸುರು ಎಳಗದ್ದಿಕ್ಕೋ..!

ಸತ್ಯಣ್ಣ° ಹೇಳಿದ° ಹಾಂಗೆ ಇಷ್ಟು ಬೇಗ ಕಮ್ಮಿ ಅಪ್ಪಲೆ ಎಂತದದು?!! , ನಿನ್ನಪ್ಪ° ಈಗಷ್ಟೆ ಮಾತ್ರೆ ಕೊಟ್ಟಿಕ್ಕಿ ಹೋದ್ದಷ್ಟೆ ನೋಡು ಇದಾ 😀

 

~~

4.

ಅಡಿಗೆ ಸತ್ಯಣ್ಣಂಗೆ ಅಡಿಗೆ ಕಸುಬು ಇಂದು ನಿನ್ನೆಯಾಣದ್ದಲ್ಲ.

ಅವಂಗದು ನೆತ್ತರಿಲ್ಲಿಯೇ ಬಂದ ವಿದ್ಯೆ, ವೃತ್ತಿ..

ಅವನ ಅಪ್ಪ° ಅಡಿಗೆ ಮಾಲಿಂಗಣ್ಣ°, ಸೋದರ ಮಾಂವ° ಅಡಿಗೆ ಸೀತಣ್ಣ°, – ಮಾಯಿಪ್ಪಾಡಿ ಅರಸು ಕಾಲಲ್ಲಿಯೇ ಹೆಸರು ಹೋದವು!.

ಅಡಿಗೆ ಸತ್ಯಣ್ಣನತ್ರೆ ಎಷ್ಟು ಜೆನಕ್ಕೆ ಅಟ್ಟಣೆ ಹೇಳಿರೆ ಆತು. ಪಾಕಾಯ್ತನದ ಹಾಳಿತ ಎಲ್ಲ ಅವನೇ ಹೇಳುಗು., ಮಾಡುಗು..

ಮಾಡಿದ್ದು ಸಾಕಗದ್ದೆ ಬಾರ, ಮಾಡಿದ್ದಲ್ಲಿ ಅಲ್ಪ ಉಳಿಯಲೂ ಉಳಿಯ.. ಎಷ್ಟು ಬೇಕೋ ಅಷ್ಟಕ್ಕೆ ಹಾಳಿತ.

ಪಂಜಲ್ಲಿ ಒಂದು ಉಪ್ನಾನಕ್ಕೆ ಅಡಿಗೆ ಸತ್ಯಣ್ಣನೇ ಹೋದ್ದು.. 350ರ ಅಟ್ಟಣೆ. ಅಂದು ಬೇರೆ ಜೆಂಬ್ರಂಗಳೂ ಅಲ್ಪ..

ಮನೆ ಯಜಮಾನ ಅಡಿಗೆ ಕೊಟ್ಟಗ್ಗೆ ಬಂದವನೇ ಸತ್ಯಣ್ಣಂಗೆ ಸಿಪ್ರಾಸು ಮಾಡಿದ° – ” ಅಕ್ಕಿ ಐದು ಸೇರು ಹೆಚ್ಚಿಗೆಯೇ ಹಾಕು. ಸಮಯಕ್ಕಪ್ಪಗ ಸಾಕಾಗದ್ದೆ ಅಪ್ಪಲೆಡಿಯ, ಮರ್ಯಾದಿ ಹೋಪ ಪಂಚಾತಿಗೆ ಆತಿಲ್ಲೆ, ಹಂತಿಲಿ ಕೂರ್ಸಿ ಕಾಯ್ತ ಹಾಂಗೆ ಅಪ್ಪಲೆಡಿಯ”.

ಸತ್ಯಣ್ಣ° ಬೇಡ ಬೇಡ ಹೇಳಿರೂ ಯಜಮಾನ° ಕೇಟನಿಲ್ಲೆ.  ; ಸತ್ಯಣ್ಣ ಯಜಮಾನ ಹೇಳಿದಾಂಗೆ ಅಕ್ಕಿ ತೊಳದು ಕೊಪ್ಪರಿಗ್ಗೆ ಸೊರುಗಿದ°..

ಸ್ವಲ್ಪ ಜೆನ ಸೇರಿತ್ತು .. ಊಟ ಕಳುದತ್ತು.., ಚಪ್ಪರ ಬಿರುದತ್ತು.., ಆಳುಗೊಕ್ಕೂ ವಿಲೆವಾರಿ ಆತು. ಅಂದರೂ  ೬ ಸೇರು ಅಶನ ಉಳುದತ್ತು. ಸತ್ಯಣ್ಣನ ಬಿಲ್ಲು ಕೊಟ್ಟಾಯ್ದಿಲ್ಲೆ.

ಮನೆ ಯೆಜಮಾಂತಿ ಬಂದು ಸತ್ಯಣ್ಣನತ್ರೆ ಪರಂಚಲೆ ಸುರುಮಾಡಿತ್ತು – “ಅವು ಹೇಳಿದವು ಹೇಳಿ ನೀ ಅಕ್ಕಿ ಹಾಕೊದೋ ಸತ್ಯಣ್ಣ?!., ೬ ಸೇರು ಅಶನ ಉಳುದತ್ತನ್ನೇ!, ಎಂತ ಮಾಡುದಿನ್ನು ಈ ಅಶನವ ಸತ್ಯಣ್ಣ!”

ಸತ್ಯಣ್ಣಂಗೆ ಪಿಸುರು ಬಂದರೂ ಹೋದಲ್ಯೆಲ್ಲ ಅದರ ತೋರ್ಸುವ ಕ್ರಮ ಇಲ್ಲೆ..

ಸತ್ಯಣ್ಣ° ಸಮಧಾನಲ್ಲಿ ಹೇದ° – ಅಕ್ಕೋ ., ನೋಡಿ ಒಳ್ಳೆತ ಬೆಶಿಲು ಕಾಯ್ತಾ ಇದ್ದು, ಅಶನವ ಇನ್ನೊಂದರಿ ಬೇಶಿ ಉಪ್ಪು ಮೆಣಸು ಹಾಕಿ ಕಡದು ಕೊಡ್ತೆ. ಲಾಯಕ ಹಪ್ಪಳ ಒತ್ತಿ ಒಣಗಿಸಿ. ಅದಕ್ಕಿನ್ನು ಪ್ರತ್ಯೇಕ ಸಂಬಳ ಕೊಡೆಕು ಹೇದು ಇಲ್ಲೆ”.  😀

 

~~

 

5.

ಅಡಿಗೆ ಸತ್ಯಣ್ಣ° ಒಲೆಬುಡಲ್ಲಿ ಬೆಶಿ..

ಅಡಿಗೆ ಕೊಟ್ಟಗ್ಗೆ ಬಂದ ದೊಡ್ಡಪೇಟೆ ಬಾವ° ಹೇಳಿದ° , ಸತ್ಯಣ್ಣೋ ಎನ್ನ ಮಗ° ಎಸ್ಸೆಲ್ಸಿಲಿ A+ ಗ್ರೇಡಿಲಿ ಪಾಸು..

ಸತ್ಯಣ್ಣ° ಹೇದ° – ಬಾವಾ., ಎಸ್ಸೆಲ್ಸಿಲಿ ಮಾಂತ್ರ ಗ್ರೇಡಿಲಿ ಪಾಸಾದರೆ ಸಾಲ, ಜೆಂಬ್ರಕ್ಕೆ ಬಂದರೆ  ನಾಕು ಹೋಳಿಗೆ ಹೊಡವಲೆ ಅರಡಿಗೋ ಮಾಣಿಗೆ?!

ಪೇಟೆ ಬಾವಂಗೆ ಅರ್ಥ ಆತು – ಇನ್ನು ಮಾತಾಡಿರೆ ವಿಷಯ ಒಂದೊಂದೇ ಹೆರಬಿಕ್ಕುಗು ಹೇದು ಮೆಲ್ಲಂಗಲ್ಲಿಂದ ಜಾಗೆ ಕಾಲಿ ಮಾಡಿದ° 😀

 

~~

 

6.

 

ಅಡಿಗೆ ಸತ್ಯಣ್ಣಂಗೆ ಬೆಂಗ್ಳೂರ್ಲಿ ಅನುಪ್ಪತ್ಯ..

ಮನೆ ಇದ್ದು ಮೂರ್ನೇ ಮಾಳಿಗೆಲಿ..

ಮುನ್ನಾಣ ದಿನ ಊರ್ಲಿ ಬೇರೆ ಅನುಪ್ಪತ್ಯ ಮುಗ್ಶಿ ಹೆರಟು ಹೋಗಿ ಬೆಂಗ್ಳೂರು ಎತ್ತುವಾಗಳೆ ನೆಡು ಇರುಳು ಆಯ್ದು..

ಉದಿಯಾದರೆ ಅಡಿಗೆ ಸುರುವಾಯೇಕು ಹೇದು ನೆಡು ಇರುಳೇ ಹೋಳಿಗೆ ಕೆಲಸ ಸುರುಮಾಡಿದ್ದು..

ಸೆಕೆ ವಿಪರೀತ ಆಗಿದ್ದ ಕಾರಣ ರಂಗಣ್ಣ ಬಾಲ್ಕನಿಲಿಯೇ ಕೂದೊಂಡು ಲಟ್ಟುಸಿಯೊಂಡಿತ್ತಿದ್ದ°

ಉದಿಗಾಲ ಅಪ್ಪದ್ದೇ ಲಟ್ಟುಸುತ್ತದೆಷ್ಟಿದ್ದಿನ್ನು ಹೇದು ನೋಡ್ಳೆ ಬಾಲ್ಕನಿಗೆ ಬಂದ ಸತ್ಯಣ್ಣಗೆ ಕೆಳಂದ ನೀರು ರಟ್ಟುಸುತ್ತದು ಕೇಳಿತ್ತು..

ಎಂತಪ್ಪ ಹೇದು ನೋಡಿರೆ ಕೆಳಾಣ ಎದುರು ಮನೆ ಅತ್ತೆಯ ದೊಡ್ಡ ಸೊಸೆ ಬಾಗಿಲೆದುರು ನೀರು ಹಾರ್ಸಿ ಉಡಿಗಿ ರಂಗೋಲಿ ಹಾಕ್ಳೆ ಸುರುಮಾಡೋದು ಕಂಡತ್ತು..

ಸತ್ಯಣ್ಣ° ರಂಗಣ್ಣಂಗೆ ಹೇದ° ರಂಗೋ.. ಇನ್ನು ನೀನು ಒಳಕೂರು , ಬೇಗ ಬೇಗ ಕೆಲಸ ಆಗಲಿ. 😀

 

“ಈ ಮನೆಯೋನಿಂಗೆ ಇದು ಗೊಂತಾದರೆ ನಾಳೆಂದ ಆನು ಇಲ್ಯೇ ಚಪಾತಿ ಲಟ್ಟುಸಲೆ ಕೂರ್ತೇ ಹೇಳುಗೋದು”! ರಂಗಣ್ಣ ಮನಸ್ಸಿನೊಳವೇ ಹೇಳಿಗೊಂಡ° 😀 😀 

 

~~

 

7.

ಅಡಿಗೆ ಸತ್ಯಣ್ಣನ ಮನೆಲಿ ಕಂಪ್ಯೂಟರ್ ಇದ್ದು, ಮೊಬೈಲ್ ಇದ್ದು.  ಹಾಂಗೇಳಿ ಟೆಲಿಫೋನ್ ಇನ್ನೂ ಇಲ್ಲೆ.

ಈಗ ಹೇಂಗೂ ರಮ್ಯನ ಮೊಬೈಲ್ ಇದ್ದು. ಸಾಕು ಹೇಳಿ ಸತ್ಯಣ್ಣ°.

ಈಗೀಗ ಮೊಬೈಲ್ ಇರ್ಸು ಸತ್ಯಣ್ಣನ ಕೈಲಿ ಆದರೂ ಅದರ ಒತ್ತಿಯೊಂಡು ಕೂಬಲೆ ಎಲ್ಲ ಸತ್ಯಣ್ಣಂಗೆ ಪುರುಸೊತ್ತಿಲ್ಲೆ.

ಅಂದರೂ ಕೈಲಿ /ಕಿಸೆಲಿ ಬೇಕು ಮೊಬೈಲು..

ಏವತ್ತೂ ಅದರ ಗುರುಟಿಯೊಂಡಿಪ್ಪಲಾಗ, ಅದರ್ಲಿ ಮಾತಾಡಿಗೊಂಡಿಪ್ಪಲಾಗ, ಕೆಲಸ ಮದಾಲು – ಸತ್ಯಣ್ಣನ ಧ್ಯೇಯ

ಮೆಸೇಜು ಒತ್ತಲೆ ಸತ್ಯಣ್ಣಂಗೆ ಅರಡಿಯ, ಮೆಸೇಜು ಬಂದರೆ ಓದಲೆ ಅರಡಿಯ..

ಕರೆ ಬಂದರೆ, ಕೈಲಿ ಇದ್ದರೆ ‘ಹರೇ ರಾಮ’ ಹೇಳಿರಾತು ..

ಮನಗೆತ್ತಿರೆ ಮೊಬೈಲು ರಮ್ಯಂಗೆ. ಮನೆಯವಕ್ಕೆ ಉಪದ್ರ ಅಪ್ಪಲಾಗ ಹೇದು ರಮ್ಯನ ಮೊಬೈಲು ಏವತ್ತೂ ಸೈಲೆಂಟ್ ಮೋಡ್..

ಒಂದರಿ ರಂಗಣ್ಣಂಗೆ ಅರ್ಗೆಂಟಿಲ್ಲಿ ಸತ್ಯಣ್ಣನತ್ರೆ ಮಾತಾಡೆಕ್ಕಾತು..

ಮೆಸೇಜು ಕಳ್ಸಿದ ಸತ್ಯಣ್ಣಂಗೆ ರಂಗಣ್ಣ°..,   ಉತ್ತರ ಬೈಂದಿಲ್ಲೆ

ಏಳೆಂಟು ಮೆಸೇಜು ಕಳ್ಸಿರೂ ಉತ್ತರ ಇಲ್ಲೆ..

ಕರೆ ಮಾಡಿದ , ರಿಂಗು ಆವ್ತು , ತೆಗೆತ್ತನಿಲ್ಲೆ ಸತ್ಯಣ್ಣ!

ರಮ್ಯನೂ ತೆಗೆತ್ತಿಲ್ಲೆ… ಎಂತಾತಪ್ಪ ಹೇದು ರಂಗಣ್ಣಂಗೆ ತಲೆಬೆಶಿ..

ಮರುದಿನ ರಂಗಣ್ಣ ನೇರವಾಗಿ ಸತ್ಯಣ್ಣನ ಮನಗೇ ಹೋದ°..

ಮೊಬೈಲು ಹುಡ್ಕಿರೆ.. ಸತ್ಯಣ್ಣನ ಚೀಲಲ್ಲಿ ಇದ್ದತ್ತು – ಸೈಲೆಂಟ್ ಮೋಡಿಲ್ಲಿ ! 😀

 

~~

8.

ಅಡಿಗೆ ಸತ್ಯಣ್ಣಂಗೆ ಬಂಟ್ವಾಳ ಸುಬ್ರಾಯಜ್ಜನಲ್ಲಿ ಅನುಪ್ಪತ್ಯ..

ಬಂಟ್ವಾಳ ಸುಬ್ರಾಯಜ್ಜನ ಮನೆ ಇಪ್ಪದು ಬಂಟ್ವಾಳ ಹೈವೇ ಮಾರ್ಗದ ಕರೇಲಿಯೇ..

ಸತ್ಯಣ್ಣ ಹೋದ್ದಂದು ಬೈಕು ಬಿಟ್ಟಿಕ್ಕಿ ಬಸ್ಸಿಲ್ಲಿ..

ಬಸ್ಸು ಇಳುದು ನಡವಲೆ ಸುರುಮಾಡಿಯಪ್ಪಗ ಕಂಡಾಪಟ್ಟೆ ಗಾಳಿ ಮಳೆ..

ಅಂಗಿಕೋಲರ ಹಿಂದಂಗೆ ನೇಲ್ಸಿಗೊಂಡಿತ್ತ ಕೊಡೆಯ ಬಿಡುಸಿ ಗಾಳಿ ಮಳೆಯ ಕೊಡೆಲಿ ಸುಧಾರ್ಸಿಗೊಂಡು ನಡವಲೆ ಸುರುಮಾಡಿದ ಅಡಿಗೆ ಸತ್ಯಣ್ಣ..

ಹೈವೇಲಿ ನಡಕ್ಕೊಂಡು ಹೋಪಗ ಎದುರಂದ ಒಂದು ಅಜ್ಜಿ ಬಂದು ಸತ್ಯಣ್ಣಂಗೆ ಹೆಟ್ಟಿತ್ತು..

ಕೊಡೆ ಗಾಳಿ ಮಳಗೆ ಎದುರಂಗೆ ಅಡ್ಡಹಿಡ್ಕೊಂಡು ನಡಕ್ಕೊಂಡಿತ್ತಿದ್ದ ಸತ್ಯಣ್ಣಂಗೆ ಅಜ್ಜಿ ಎದುರಂದ ಬಂದದು ಕಂಡತ್ತಿಲ್ಲೆ..

ಸತ್ಯಣ್ಣಂಗೆ ಹೆಟ್ಟಿದ್ದು ಅಜ್ಜಿಯೇ ಆದರೂ ಅಜ್ಜಿ ಪರಂಚಲೆ ಸುರುಮಾಡಿತ್ತು ಕಣ್ಣು ಕಾಣುತ್ತಿಲ್ಯೋದು..

ಅಡಿಗೆ ಸತ್ಯಣ್ಣ ಹೇಳಿದ° – ನೋಡಜ್ಜಿ.. ಅಲ್ಲಿ ಬರಕ್ಕೊಂಡು ಎಂತ ಇದ್ದು! –

ಅಜ್ಜಿಯೂ ಬರಕ್ಕೊಂಡಿಪ್ಪ ಬೋರ್ಡ್ ಓದಿತ್ತು – “ಎಚ್ಚರಿಕೆ! – ಅಪಘಾತ ವಲಯ”  😀

 

~~

 

9.

 

ಅಡಿಗೆ ವೃತ್ತಿಯೇ ಪರಂಪರೆ ಹೇಳ್ತ ನಮೂನೆಲಿ ಇಪ್ಪದು ಅಡಿಗೆ ಸತ್ಯಣ್ಣ..

ಕವಂಗಂದ ಹಿಡುದು ಕೊಪ್ಪರಿಗೆ ವರೇಗೆ ಅಡಿಗೆ ಸತ್ಯಣ್ಣನ ಮನೆಲಿ ಇಲ್ಲದ್ದ ಪಾತ್ರಂಗಳೇ ಇಲ್ಲೆ..

ಹಾಂಗಾಗಿ ನೆರೆಕರೆಲಿ ಏನಾರು ಅನುಪ್ಪತ್ಯ ಆದರೆ ಅಡಿಗೆ ಸತ್ಯಣ್ಣನಲ್ಲಿಂದ ಪಾತ್ರಂಗಳನ್ನೂ ಕೊಂಡೋಪದು ವಾಡಿಕೆ..

ಅದೆಕ್ಕೇಳಿ ಅದಕ್ಕೆಲ್ಲ ಬಾಡಿಗೆ ಹೇದು ಸತ್ಯಣ್ಣ ತೆಕ್ಕೊಳ್ತನಿಲ್ಲೆ..

ಕೊಂಡೋದ ಪಾತ್ರಂಗಳ ಜಾಗೃತೆಲಿ ಉಪಯೋಗುಸಿ ವಾಪಾಸು ಮನಗೆ ಎತ್ತುಸುವದು ಕೊಂಡೋದವನ ಜವಾಬುದಾರಿಕೆ..

ಹೀಂಗಿಪ್ಪಗ…, ಓ ಮನ್ನೆ ಅಲ್ಲೇ ಹತ್ರದ ಪಡ್ರೆ ಚಂದ್ರಣ್ಣನಲ್ಲಿ ಅನುಪ್ಪತ್ಯ..

ಅಡಿಗೆ ಸತ್ಯಣ್ಣನಲ್ಲಿಂದ ನಾಕಾರು ಪಾತ್ರೆ ಕೊಂಡೋಯ್ದವು.. ಅನುಪ್ಪತ್ಯ ಮುಗ್ಶಿ ಕೆಲಸದಾಣು ಪಾತ್ರೆ ತಂದತ್ತು..

ಅಡಿಗೆ ಸತ್ಯಣ್ಣ ಮನೆಲಿ ಇಲ್ಲದ್ದಕಾರಣ ಶಾರದೆ ಹೇಳಿತ್ತು – “ನೀನೇ ಕೊಂಡೋಗಿ ಅಟ್ಟಲ್ಲಿ ಮಡಿಗಿಕ್ಕು”.

ಅಡಿಗೆ ಸತ್ಯಣ್ಣ ಹೊತ್ತೋಪಗ ಶಾರದೆ ವರ್ತಮಾನ ಹೇಳಿತ್ತು..

ಸರಿ ಆತಪ್ಪ ಒಳ್ಳೆದು ಹೇಳಿಕ್ಕಿ ರಜಾ ಕಳುದು ಅಟ್ಟಕ್ಕತ್ತಿ ಬಂದ ಪಾತ್ರಂಗೊ ಸಮ ಇದ್ದೋದು ನೋಡ್ಳೆ ಹೋದರೆ.. ಸತ್ಯಣ್ಣಂಗೆ ಶಾಕ್ ! .. ಪಾತ್ರಂಗಳಲ್ಲಿ ಮಸಿ, ಬೂದಿ ಹಾಂಗೇ ಇದ್ದತ್ತು.! ನೇರ್ಪಕ್ಕೆ ತೊಳಯದ್ದೆ ತಂದು ಮಡಿಗಿದ್ದವು!

ಅಡಿಗೆ ಸತ್ಯಣ್ಣ ಅಟ್ಟಂದ ಕೆಳ ಇಳುದವನೆ ಶಾರದಗೆ ಹೇದಾ – “ ಪಾತ್ರಂಗೊ ಇಲ್ಯೇ ಮಸಿ ಹಿಡುದು ಹಾಳಾದರೂ ಸರಿ, ಇನ್ನು ಮುಂದೆ ಪಾತ್ರಂಗಳ ಹೆರ ಕೊಡ್ಳಾಗ” 😀

 

~~

10.

ಸತ್ಯಣ್ಣಂಗೆ ಇಂತಿಷ್ಟು ಹೇಳಿ ಕರಾರು ಹೇಳ್ತ ಅಭ್ಯಾಸ ಮದಲಿಂದಲೇ ಇಲ್ಲೆ..

ಗೊಂತಿಲ್ಲದ್ದೋರು ಇಷ್ಟು ಸಾಕೋ ಕೇಳಿರೆ ಒಂದಿಷ್ಟು ಸೇರ್ಸಿಕ್ಕಿ ಹೇಳ್ವ ಕ್ರಮ ಇದ್ದು.. ದೊಡ್ಡ ಸಂಗತಿ ಅಲ್ಲ.

ಅಡಿಗೆ ಸತ್ಯಣ್ಣಂಗೆ ಪುಣ್ಯಾಯ ಅನುಪ್ಪತ್ಯದ ಅಡಿಗೆ..

ಅಡಿಗೆ ಮುಗಿಶಿ ಒತ್ತರೆಗೆ ಬಿಟ್ಟುಕೊಟ್ಟಿಕ್ಕಿ ಹೆರಡ್ಳಪ್ಪಗ ಸತ್ಯಣ್ಣನತ್ರೆ ಮನೆಯೆಜಮಾನ° ಎಷ್ಟು ಪೀಸು ಕೇಟ°..

ಏವುತ್ರಾಣಾಂಗೆ ನಿಂಗೊ ಅಂದಾಜಿ ಮಾಡಿ ಕೊಡಿಪ್ಪ ಹೇಳಿದ°- ಅಡಿಗೆ ಸತ್ಯಣ್ಣ°.

ಮುನ್ನೂರು ಕೊಡಿ ಸಾಕು ಹೇದು ಹೇಳಿಯಪ್ಪಗ ಮನೆ ಯೆಜಮಾನ – “ರಜಾ ಕಮ್ಮಿ ಮಾಡು”- ಹೇದು ಹೇಳಿದ.

ಅಡಿಗೆ ಸತ್ಯಣ್ಣ° ಹೇಳಿದಾ° – “ಭಾವಾ… ಎನಗೆ ಒಂದು ರುಪಾಯಿ ಅಕ್ಕಿ ಸಿಕ್ಕುತ್ತಿಲ್ಲೆ ” 😀

~~

11

ಕುಂಟಾಂಗಿಲ ಬಾವನ ಪೈಕಿ ಆರೋ UKಲಿ ಇದ್ದವು ಹೇಳಿ ಅಷ್ಟೇ ನವಗೂ ಗೊಂತು..

ಆ ಪೈಕಿಯೋರು ಕಳುದ ತಿಂಗಳು ಊರಿಂಗೆ ಬಂದಿಪ್ಪಗ ಅಡಿಗೆ ಸತ್ಯಣ್ಣನತ್ರೆ UKಲಿಪ್ಪ ವುಡ್ ಲಾಂಡ್ಸ್ ಹೋಟ್ಳಿಂಗೆ ದಕ್ಷಿಣ ಕನ್ನಡದ ಬ್ರಾಹ್ಮರು ಅಡಿಗೆಯೋರು ಬೇಕು ಹೇದೂ, ಸತ್ಯಣ್ಣನೇ ಬನ್ನಿ ಹೇದು ಒತ್ತಾಯ ಮಾಡಿಕ್ಕಿ ಹೋಯ್ದವಡಪ್ಪ..

ಹೋಗಿ ನೋಡುವೋ° ಹೇದು ಸತ್ಯಣ್ಣಂಗೂ ತೋರಿ ಹೋಳಿಗೆ ಲಟ್ಟಣಿಗೆ ಸಹಿತ ಓ ಮನ್ನೆ ವಿಮಾನ ಹತ್ತಿಯಾಯ್ದು ಅಡಿಗೆ ಸತ್ಯಣ್ಣ°..

ಅಂಬಗಳೋ°.. ??!

ಎಂತಾರು ಇನ್ನೀಗ ಅಲ್ಲಿಗೆ ಹೋದ ಅಡಿಗೆ ಸತ್ಯಣ್ಣ° ಬಂದಾಯೇಕ್ಕಾಷ್ಟೆ ಮುಂದಾಣ ಶುದ್ದಿ ನವಗೆ ಅರಡಿಯೆಕ್ಕಾರೆ.

 

ಅಷ್ಟನ್ನಾರ ನಿಂಗಳತ್ತರೇನಾದರು ಶುದ್ದಿ ಇದ್ದರೆ ಹೇಳಿಕ್ಕಿ ಮಿನಿಯಾ. 😀 😀 

 

ಇನ್ನೊಂದರಿ ಕಾಂಬೊ°.   ಹರೇ ರಾಮ.

 

~~

 

ಓದುಗರಿಂಗೆ ಸವಾಲು

ಕಳುದವಾರದ ಸರಿ ಉತ್ತರ –  ○ ಐದು

(ಕಳುದವಾರದ ಚೋದ್ಯಕ್ಕೆ ಸರಿಯುತ್ತರ ಹೇಳಿ ಕೆರುಶಿಹೋಳಿಗೆ ವಿಜೇತರಾದವು – ಶ್ರೀಪಾದರಾವ್ ಮಾವ°.
ವಿ.ಸೂಃ ರಮ್ಯಂಗೆ ಕೋಳೇಜಿ ಕಲಿವಿಕೆ ಸುರುವಾಯ್ದಷ್ಟೇ)

 

ಈ ವಾರದ ಚೋದ್ಯ – ಇಲ್ಲೆ.

😀 😀 😀

7 thoughts on “‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 13

  1. ಮತ್ತೆ ವಿಮಾನದಲ್ಲಿ ಸತ್ಯಣ್ಣನ ಲಟ್ಟಣಿಗೆ ನೋಡಿ ಯೂ ಕೆ ಲಿ ಇವ ಟೆರರಿಸ್ಟ್ ಅ೦ತ ಹಿಡ್ಕೊಬಿಡ್ತ್ವೋ ಅ೦ತ ಯನಗೆ ಬೇಸರ ಆವ್ತಾ ಇದ್ದು. ಹಾ೦ಗೇನಾದ್ರೂ ಆದ್ರೆ ಮತ್ತೆ ಇಲ್ಲಿ ಅನುಪತ್ಯಕ್ಕೆ ಇನ್ಯಾರು ತಯಾರಿದ್ದವೋ ಗೊ೦ತಿಲ್ಲೆ.. ಎ೦ಬೆಸಿ ಗೆ ಈಗ್ಲೇ ಫೋನ್ ಮಾಡಿ ಮಾರ್ರೇ..

  2. ಇನ್ನು ನಾಳೆಂದ ಅಡುಗೆ ಸತ್ಯಣ್ಣ ಇನ್ “ಯು ಕೆ ” ಜೋಕ್ಸ್ ಶುರುವಾಗಲಿ ಅಂಬಗ ! ಹೆಂಗೂ ಮಿಂಚಂಚೆ ಇದ್ದನ್ನೇ ಮಾತಾಡುಲೇ !!!

  3. ಶಾರದೆದೆ ರಮ್ಯಂದೆ ಸತ್ಯಣ್ಣನ ಒಟ್ಟಿಂಗೆ ಯುಕೆಗೆ ಹೋಯಿದವಿಲ್ಲೆನ್ನೆ , ಬಚಾವ್, ಇಲ್ಲದ್ರೆ ಸತ್ಯಣ್ಣ ಎಲ್ಯಾರು ಯುಕೆಯೇ ಓಕೆ ಹೇಳಿ ಅಲ್ಲಿಯೇ ಬಾಕಿಯಾದರೆ ! ಜೆಂಬ್ರ ತೆಗೆತ್ತವೆಲ್ಲಾ ತಲೆಬೆಶಿ ಮಾಡಿಗೊಂಡು ಕೂರೆಕ್ಕಕ್ಕನ್ನೇ !
    ಸತ್ಯಣ್ಣ ಹೋಪಾಗ ಹೋಳಿಗೆ ಕಟ್ಟು ತೆಕ್ಕೊಂಡಿದನಾ – ವಿಮಾನಲ್ಲಿ ಬಪ್ಪ ಕೂಸುಗೊಕ್ಕೆ ಕೊಡ್ಳೆ ಹೇಳಿ !
    ಧಾರಾವಾಹಿಯ ಎಡಕ್ಕಿಲಿ ಬಪ್ಪ ಎಡ್ವರ್ಟೈಸಿನ ಹಾಂಗೆ ಸತ್ಯಣ್ಣ ಇಲ್ಲಿಂದ ಹೆಚ್ಚು ಯುಕೆಲಿಯೇ ಇಪ್ಪದು ಹೇಳಿ ಆಗನ್ನೆ –
    ಬೇಗ ಬರಲಿ ಆತ- ಅವನ ಹಾಸ್ಯರಸಾಯನ ಮಾವಿನಹಣ್ನಿನ ರಸಾಯನದ ಹಾಂಗೆ ರುಚೀ… ಆಗಿರ್ತು.

  4. ಭಾವ ಅಶನದ ಹಪ್ಪಳ ಮಾಡ್ಳೆ ಎಡಿತ್ತಲ್ಲೋ….
    ಹು ಹು ಹು ಸತ್ಯಣ್ಣ ಭಯಂಕರ…

    ಛೇ ಅವಂತಕೆ ಯುಕೆಗೆ ಹೋದ್ಸು…

  5. ಓಹೋ! ಅಂಬಗ, ಇನ್ನು ಮೌಡ್ಯ ಕಳಿವವರೆಗೆ ಹೇಂಗೂ ಜೆಂಬ್ರ ಇಲ್ಲೇಳಿ UK ಗೆ ಹೋದ್ದೊ ಹೇಂಗೆ? 😉

  6. ಏವತ್ರಾಣ ಹಾಂಗೆ ಸತ್ಯಣ್ಣನ ಜೋಕುಗೊ ನಳಪಾಕವೇ. ಲಾಯಕಿತ್ತು. ಮಾವಿನ ಹಣ್ಣಿನ ಕತೆ, ಗಾಳಿ ಮಳೆಲಿ ಅಜ್ಜಿಗೆ ಡೇಶ್ ಹೊಡದ ಕತೆ, ಅಶನದ ಹಪ್ಪಳ ಎಲ್ಲವು ಲಾಯಕಾತು. ಚೆನ್ನೈ ಭಾವಯ್ಯಾ, ಸತ್ಯಣ್ಣ, ಯು ಕೆ ಂದ ಬಂದ ಕೂಡ್ಳೇ ಜೋಕು ಮಾಡ್ಳೆ
    ಮತ್ತೆ ಶುರು ಮಾಡ್ಳಿ ಆತೊ ?

  7. Entha bhava illige mugushutha erpado henge!? Idu nimbalediya. Holeli hopa neerinange harkonde ireku..
    Ragging madidavara odsiddu pashtayidu:-)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×