Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 14

ಬರದೋರು :   ಚೆನ್ನೈ ಬಾವ°    on   13/06/2013    10 ಒಪ್ಪಂಗೊ

ಚೆನ್ನೈ ಬಾವ°

ಅಡಿಗೆ ಸತ್ಯಣ್ಣ UK ಗೆ ಹೋಯ್ದಾ ಹೇದು ಕೇಳಿಯಪ್ಪಗ ಆನು ಗ್ರೇಶಿದ್ದದು ಉತ್ತರ ಕರ್ನಾಟಕಕ್ಕೆ ಮಣ್ಣ ಹೋದ್ದಾಯ್ಕು ಹೇದು. ಮತ್ತೆ ನೋಡಿರೆ ಅದು ಕುಂಟಾಂಗಿಲ ಬಾವನ ಪೈಕಿಯೋರಿಪ್ಪ UK!.  ಪರದೇಶಡ!!. ಸತ್ಯಣ್ಣ ಪರದೇಶಕ್ಕೆ ಹೋದ್ದು ಬೈಲಿಲ್ಲಿ ಆರಿಂಗೂ ಸಮಾಧಾನ ಆತಿಲ್ಲೆ., ನವಗೂ. ಆದರೂ ನಾವು ಅಕ್ಷೇಪ ಹೇಳ್ವಾಂಗೆ ಇಲ್ಲೆ . ಅದು ಅವನ ವ್ಯಯಕ್ತಿಕ.

ಮತ್ತೆ ಎಂತಾತು ನೋಡ್ವೋ° ಅಂಬಗ –

……..

1.

ಅಡಿಗೆ ಸತ್ಯಣ್ಣ UKಗೆ ಹೋದ್ದೇನೋ ಅಪ್ಪು..

ಅಲ್ಲಿಯಾಣ ಮರ್ಜಿ, ಹವೆ, ಏ.ಸಿ ಅಡಿಗೆ ಕೋಣೆ ಎಲ್ಲ ನೋಡಿಯಪ್ಪಗ ಒಂದರಿ ಕೊಶಿ ಆದ್ದೂ ಅಪ್ಪು..

ಹೋದ ಮರುದಿನಂದಲೇ ಕೆಲಸ ಸುರುಮಾಡ್ತದಿನ್ನು ಹೇದು ಇರುಳು ಬೇಗ ಒರಗಿದ್ದೂ ಅಪ್ಪು..

ಉದಿಯಪ್ಪಗೆದ್ದು ಮಿಂದು ವಿಭೂತಿ ಮೆತ್ತಿ ಅಡಿಗೆ ಕೋಣಗೆ ಬಂದು ಸೇರಿದ್ದೂ ಅಪ್ಪು..

ಇನ್ನೆಂತ ಬೆಶಿನೀರು ಕಾಸಿ, ಹಾಲು ಕಾಸಿಕ್ಕಿ, ಮತ್ತೆ ಇಡ್ಳಿ, ದೋಸೆ, ಪೂರಿ, ಚಪ್ಪಾತಿ ಎಂತ ಬೇಕಾರು ರೆಡಿ ಮಾಡಿಗೊಂಡ° ಹೇದು ಗ್ರೇಶಿಗೊಂಡು..

ಮಡಲು ಎಲ್ಲಿಂಟು? ಹೇದು ಕೇಳಿದ್ದಕ್ಕೆ ಎಲ್ಲೋರು ಇವನ ಮೋರೆ ನೋಡಿದವು 🙁

‘ಸೌದಿ ಬರಡ್’ ಹೇಳಿದ್ದಕ್ಕೆ ಎಲ್ಲೋರು ಸೊಂಟಕ್ಕೆ ಕೈ ಕೊಟ್ಟು ನಿಂದವಪ್ಪ 😀

ಗ್ಲಾಸು ತೊಳೆತ್ತ ಕೊಡೆಯಾಲದ ನಾಯ್ಕ ಹೇಳಿತ್ತು.. “ಅದೆಲ್ಲ ಇಲ್ಲಿ ಸಿಕ್ಕೋದಿಲ್ಲ ಭಟ್ರೇ. ಇಲ್ಲಿ ಎಲ್ಲ ಕರೆಂಟು, ಗೇಸು..”

ತೆಕ್ಕ್.. ಒಂದು ಮಡಲು ಸೌದಿಯೂ ಇಲ್ಲದ್ದೆ ಇವ್ವೆಂತರ ‘ಸೌತ್ ಇಂಡಿಯನ್ ಫುಡ್’ ಆಗ್ಬೇಕು ಹೇದು ಎನ್ನ ಬರ್ಸಿದ್ದು ಹೇಳಿ ತಲಗೆ ಕಟ್ಟಿದ ತೋರ್ತು ಬಿಡಿಸಿ ಕುಡಿಗಿ ಈ ಪಂಚಾತಿಗೆ ನಮ್ಮಂದಾಗ ಹೇಳಿದ್ದೇ…

ಮತ್ತಾಣ ವಿಮಾನಲ್ಲಿ ಅಡಿಗೆ ಸತ್ಯಣ್ಣ° ಊರಿಂಗೆ 😀

 

~~

2.

ಸತ್ಯಣ್ಣ UKಗೆ ಹೋದ್ದೂ ರಮ್ಯಂಗೆ ಕಾಲೇಜು ಸುರುವಾದ್ದೂ ಹೆಚ್ಚು ಕಮ್ಮಿ ಒಂದೇ ಸಮಯಕ್ಕಾತು..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

ಅಂದರೂ ರಮ್ಯಂಗೆ ಕಾಲೇಜಿಲ್ಲಿ ಏನೂ ತೊಂದರೆ ಆಯ್ದಿಲ್ಲೆ.. ಚಂದಕ್ಕೆ ನಡೆತ್ತಾ ಇದ್ದಡ..

ಈ ವೊರಿಶ ರಾಮಜ್ಜನ ಕೋಲೇಜಿಂಗೆ ಮಕ್ಕ ಸೇರ್ಲೆ ಮೂರು ಪಾಲರಷ್ಟು ಹೆಚ್ಚಿಗೆ ಅರ್ಜಿಗೊ ಹೋಯ್ದಡಪ !

ಅದರೊಟ್ಟಿಂಗೆ ಬೇರೆ ಕಾಲೇಜಿಂದ ಈ ಕಾಲೇಜಿಲ್ಲಿ ಸೀಟು ಸಿಕ್ಕುಗೊ ಹೇಳಿಯೋ ಅಲ್ಪ ವಿಚಾರಣೆ ಬೈಂದಡಪ್ಪ!

ಬೈಲಿನ ಮಾಣಿಯಂಗಳೂ ಅಲ್ಪ ರಾಮಜ್ಜನ ಕೋಳೇಜಿಂಗೆ ಈ ವೊರಿಶ ಸೇರಿದ್ದವಡಪ್ಪ!

ಎಂತಕೆ.., ಬೆಂಗಳೂರ ಮಾಣಿಗೂ ರಾಮಜ್ಜನ ಕಾಲೇಜಿಲ್ಲಿ ಸೀಟು ಸಿಕ್ಕುಗೋ ಹೇದು ವಿಚಾರ್ಸಿದ್ದವಡಪ್ಪ!!

ರಾಮಜ್ಜನ ಕೋಲೇಜಿಲ್ಲಿ ಸೀಟಿಲ್ಲ ಹೇದಾದ ಮತ್ತೆ ಬಿದಿರೆ ಕೋಳೇಜಿಂಗೆ ಕೆಲವು ಜೆನಕ್ಕೆ ಹೋಯೇಕ್ಕಾಗಿ ಬಂತಡಪ್ಪ!

ಅದೆಲ್ಲ ಸರಿ… ರಮ್ಯ ಹಾಸ್ಟೇಲ್ಲಿಂದ ಕೋಲೇಜಿಂಗೆ ಹೋವುಸ್ಸೋ ಅಲ್ಲ ಪಿ.ಜಿಂದಲೋ ಹೇದು ವಿಚಾರ್ಸಿ ಶಾರದಗೆ ಫೋನುಗೊ ಬತ್ತಡಪ್ಪ !

ಅದೂ ಸರಿ… ಇದರೆಡಕ್ಕಿಲ್ಲಿ ಸುಳ್ಯಂದ ಕೊಡೆಯಾಲಕ್ಕೆ ಹೋವ್ತೋರೂ ಪುತ್ತೂರ್ಲಿ ಒಂದರಿ ಇಳುದಿಕ್ಕಿ ಹೋದರೆಂತ ಹೇದು ಆಲೋಚನೆ ಮಾಡ್ತವಡಪ್ಪ !! 😀

ಪುತ್ತೂರ ಜಾತ್ರೆ ಮುಗುದರೂ ವಾಹನ ಸಂಚಾರ ರಶ್ಶು ಕಮ್ಮಿಯಾಯ್ದಿಲ್ಲೇಕೆ ಹೇದು ಪುತ್ತೂರ ಪೋಲಿಸಿಗೊಕ್ಕೂ ಅಂದಾಜಿ ಆವ್ತಿಲ್ಲೆಡಪ್ಪ ! 😀
~~

3.

ಅಡಿಗೆ ಸತ್ಯಣ್ಣ UKಗೆ ಹೋಗಿ ಮರುದಿನ ಉದಿಯಪ್ಪಗ ಕಾವಿ ಮುಂಡುದೇ, ಕಾವಿ ತೋರ್ತುದೇ ಕಟ್ಟಿಗೊಂಡು ಡ್ಯೂಟಿಗೆ ಹಾಜರು..

ಅಲ್ಲಿತ್ತಿದವಕ್ಕೆ ಸುಧರಿಕೆಯೋರಿಂಗೆ ಒಂದು ನಮೂನೆ ಡ್ರೆಸ್ಸು, ತೊಳೆತ್ತವಕ್ಕೆ ಒಂದು ನಮೂನೆ ಡ್ರೆಸ್ಸು, ಅಡಿಗೆಯೋರಿಂಗೆ ಮತ್ತೊಂದು ನಮೂನೆ. ಎಲ್ಲ ಪೇಂಟ, ಅಂಗಿ, ಟೊಪ್ಪಿ..

ಸತ್ಯಣ್ಣ ಹೇಳಿದ°- ಇವಕ್ಕೆ ಅಡಿಗೆ ಲಾಯಕ ಆಯೇಕ್ಕಪ್ಪದ, ಅಲ್ಲ.. ಮನುಷ್ಯ° ಚಂದ ಕಾಣೆಕ್ಕಪ್ಪದ!. ಇದೆಂತರ ಇವರ ಕೋಲ ಹೀಂಗೆಲ್ಲ ಸುರ್ಕೊಂಡು 😀

~~

4.

 

ಅಡಿಗೆ ಸತ್ಯಣ್ಣ° UKಗೆ ಹೋದ ಸ್ಪೀಡಿಲ್ಲ್ಯೇ ಹಿಂದೆ ಬಂದದಾರೂ ಅಲ್ಯಾಣ ಅನುಭವ ಮಾಂತ್ರ ಎಂದಿಂಗೂ ಮರೆಯ..

ಮನುಷ್ಯರ ಮನುಷ್ಯರು ಮಾತಾಡ್ಸುತ್ತ ಕ್ರಮ … ಹೈ.. ಹಾಯಿ .. ಬಾಯ್..  ಇದೆಲ್ಲ ಸತ್ಯಣ್ಣಂಗೆ ಕೊಶಿ ಕೊಟ್ಟಿದಿಲ್ಲೆ..

ಸತ್ಯಣ್ಣ ಹೇಳಿದಾ° – ‘ಎಂತಾರು ನಮ್ಮೂರು ನಮ್ಮೂರೇ ., ನಮ್ಮೋರು ನಮ್ಮೋರೆ’ ! 😀

~~

5.

ಅಡಿಗೆ ಸತ್ಯಣ್ಣ° UKಗೆ ಹೋದ್ದು ಇಷ್ಟಪಟ್ಟು ಅಲ್ಲ ಒತ್ತಾಯ ಪಟ್ಟು..

ಸಮಗಟ್ಟು ಆಗದ್ದ ಕಾರಣ್ಣ ಅಲ್ಲಿಂದ ಹೆರಟದ್ದೂ ಆತು..

ನಮ್ಮ ಬೈಲಿಲ್ಲಿಯೂ ಸತ್ಯಣ್ಣ ಹಾಂಗೊಂದು ಹೋದ್ದು ಸಮಾಧಾನ ಇತ್ತಿಲ್ಲೆ, ಅಂದರೂ ಅವನ ಸ್ವಂತ ವ್ಯವಹಾರ ಅದು. ಬೈಲೋರ ಪ್ರೀತಿಗೆ ಸತ್ಯಣ್ಣಂಗೆ ಎಂದಿಂಗೂ ಹೆಮ್ಮೆ ಇದ್ದು..

ಸತ್ಯಣ್ಣ ವಾಪಾಸು ಬಂದಪ್ಪಗ ಮೆನೆ ಹತ್ರಾಣ ನೆರೆಕರೆಯವು ಗುಸು ಮಾತಾಡುವದು, ಸತ್ಯಣ್ಣನತ್ರೆ ಹೇಳ್ಳೂ ಹೇಳಿದವು.. ರಮ್ಯ ದೊಡ್ಡಾಯ್ದು.., ಕಾಲೇಜಿಂಗೆ ಹೋವ್ತು… ಜಾಗ್ರತೆ ಬೇಕು.

ಸತ್ಯಣ್ಣ° ಹೇಳಿದಾ° – ಎಂತಾರು ರಮ್ಯ ಆರಾರೊಟ್ಟಿಂಗೋ ಓಡಿ ಹೋಗ.., ಅದಕ್ಕೆ ನಮ್ಮವು – ನಮ್ಮೋರು ಹೇಳ್ತ ನಂಬಿಕೆ, ಶ್ರದ್ಧೆ ಇದ್ದು. ಒಂದು ವೇಳೆ ನಿಂಗೊ ಹೇಳ್ತಾಂಗೆ ಏನಾರು ಆದರೆ, ಮತ್ತೆ ಅದರ ಹುಡ್ಕ್ಯೊಂಡು ಹೋಗಿ ಕಣ್ಣೀರು ಹಾಕಿ ಮತ್ತೆ ಅದರಿಷ್ಟಕ್ಕೆ ಬಗ್ಗುವೆ ಹೇದು ಗ್ರೇಶೆಡಿ. ನಾಟಕ ಕಣ್ಣೀರು ಹಾಕಿ ಏಕುಟು ಮಾಡುವ ಕೊಂಗಾಟ ಇಲ್ಲೆ . 🙁

~~

6.

ಅಡಿಗೆ ಸತ್ಯಣ್ಣ UKನ್ದ ವಾಪಾಸು ಬತ್ತ ಹೇಳಿ ಶುದ್ದಿ ಸತ್ಯಣ್ಣ ವಿಮಾನ ಇಳಿಯೇಕ್ಕಾರೆ ಮದಲೇ ಬೈಲಿಂಗೆ ಶುದ್ದಿ ಎತ್ತಿದ್ದು..

ಮರದಿನವೇ ಸತ್ಯಣ್ಣನ ಮನಗೆ ಗುಂಡ್ಯಡ್ಕ ಈಶ್ವರಣ್ಣ ರೆಡಿ ಉದಿಯಪ್ಪಾಣ ಪಷ್ಟು ಬಸ್ಸಿಲ್ಲಿ..

ಬಂದವಂಗೆ ಆಸರಿಂಗೆ ಕುಡುಕ್ಕೊಂಬಲೂ ವ್ಯವಧಾನ ಇಲ್ಲೆ..

“ಸತ್ಯಣ್ಣ., ಒಂದು ಉಪಕಾರ ಆಯೇಕ್ಕನ್ನೇ” ಹೇದ° ಬಂದವ°..

ಎಂತಪ್ಪ! ಏನಾರು ಅಂಬೇರ್ಪಿನ ಅನುಪ್ಪತ್ಯ ಏನಾರು ಮಡಿಕ್ಕೊಂಡಿದನೋ ಗ್ರೇಶ್ಯೊಂಡು, “ಎಂತಾಯೇಕು ಹೇಳಿ ಮಾಡ್ವೋ” ಹೇಳಿದ ಸತ್ಯಣ್ಣ..

ಈಶ್ವರಣ್ಣ ಹೇದ° – ನೀನು ಹೇಂಗೂ ಯೂ.ಕೆಗೆ ಹೋಗಿ ಬಂದೆ. ಅಲ್ಲಿಯಾಣೋರ ಗುರ್ತವೂ ಆತೀಗ. ಎನ್ನ ಮಗಂಗೆ ಅಲ್ಲಿ ಏನಾರು ಉದ್ಯೋಗ ವ್ಯವಸ್ಥೆ ಮಾಡ್ಸಲೆಡಿಗೋ?!

ಸತ್ಯಣ್ಣ ಸೀದಾ ಮನುಷ್ಯ°, ಲೊಟ್ಟೆ, ಸೀಂತ್ರಿ ಎಲ್ಲ ಅರಡಿಯ..

ಹೇಳಿದ° – ಸರಿ, ಮಾಣಿಗೆ ಹೇಂಗಿಪ್ಪ ಕೆಲಸ ಆಯೇಕ್ಕಾದ್ದು ?

ಈಶ್ವರಣ್ಣ – ಕೆಲಸ ಹೇಂಗಿಪ್ಪದೂ ಅಕ್ಕು, ಸಂಬಳ ಮಾಂತ್ರ ಸರೀ ಸಿಕ್ಕಿರೆ ಆತು !

ಸತ್ಯಣ್ಣ ಮತ್ತೆ ಹೇಳಿದ° – ಸರೀ ಸಂಬಳ ಆಯೇಕು ಹೇಳಿರೆ ಸಾಲ, ಮಾಣಿಗೆ ಎಂತರ್ಲಿ ಅನುಭವ ಇದ್ದು? ಯೇವ ಲೈನಿಲ್ಲಿ ಕಲ್ತಿದ? ಹೀಂಗಿರ್ಸರ ಎಲ್ಲ ಅರಡಿಯದ್ದೆ ಕೆಲಸ ಹುಡ್ಕುತ್ತ ಕೆಲಸ ಆಗ.

ಈಶ್ವರಣ್ಣ – ಅಂವ°, ಈಗಷ್ಟೇ ಡಿಗ್ರಿ ಕಲಿವಿಕೆ ಮುಗಿಶಿದ್ದಷ್ಟೇ. ಏನಾರು ಸುಪ್ರವೈಸರ ಜಾಬು ಸಿಕ್ಕಿರೆ ಸಾಕು.

ಸತ್ಯಣ್ಣನ ವ್ಯವಧಾನಕ್ಕೂ ಒಂದು ಮಿತಿ ಹೇದಿಲ್ಯೋ!, ಸತ್ಯಣ್ಣ ಹೇಳಿದ° – ಸುಪ್ರವೈಸರ ಹೇಳಿರೆ ಅಂತೇ ಅಲ್ಲ, ಆ ಕೆಲಸಲ್ಲಿ ಅನುಭವ ಬೇಕು. ಕೆಲಸಕ್ಕೆ ಜೆನ ಬಾರದ್ರೂ ಆ ಕೆಲಸ ಮಾಡ್ಳೆ ಅರಡಿಯೆಕು. ಎನ್ನೊಟ್ಟಿಂಗೆ ಕಾಯಿ ಕಡವಲೆ ಕಳ್ಸಿ, ನಾಕೊರಿಶ ಕಳುದು ಅಲ್ಲಿ ಉಡ್ಡುಲೇಂಡ್ಸಿಲ್ಲಿ ಕಿಚ್ಚನ್ನು ಸುಪ್ರವೈಸರ ಆಗಿ ಹೋಪಲೆಡಿತ್ತೋ ನೋಡ್ಳಕ್ಕು.

ಈಶ್ವರಣ್ಣಂಗೆ ಇನ್ನೆಂತ ಹೇಳೇಕು ಹೇದು ಗೊಂತಾತಿಲ್ಲೆ. ಆತಂಬಗ ಮಗನತ್ರೆ ವಿಚಾರ್ಸಿಕ್ಕಿ ಹೇಳ್ತೆ ಹೇದು ಚೀಲ ಹೆಗಲಿಂಗೆ ಸುರ್ಕೊಂಡ°.  😀

~~

7.

ಅಡಿಗೆ ಸತ್ಯಣ್ಣಂಗೆ ಮೂಡ್ಳಾಗಿ ಅನುಪ್ಪತ್ಯ..

ಮೂಡ್ಳಾಗಿ ಒಂದಕ್ಕೆ ಎರಡು ಹೋಳಿಗೆ ಇಲ್ಲದ್ದೆ ಯೇವ ಜೆಂಬ್ರವೂ ಆಗ!., ಹಾಂಗೆ ಮಧ್ಯಾನ್ನವೇ ಬೇಳೆ ನೀರಿಂಗೆ ಹಾಕೇಕ್ಕಿದಾ

ಮುನ್ನಾಣ ದಿನ ಮಧ್ಯಾಹ್ನಕ್ಕೇ ಅಡಿಗೆ ಸತ್ಯಣ್ಣ ಎತ್ತಿದ್ದ° ರಂಗಣ್ಣನೊಟ್ಟಿಂಗೆ..

ವಾರಂದ ಪುರುಸೊತ್ತು ಇಲ್ಲದ್ದ ಸತ್ಯಣ್ಣ ಮಧ್ಯಾಹ್ನವೇ ಕೆಲಸ ಸುರುಮಾಡಿ ಇರುಳು ಉಂಬಲಪ್ಪಗ ಅರೆವಾಶಿ ಹೋಳಿಗೆ ಆತು.

ಉಂಬಂದ ಮದಲು ರಂಗಣ್ಣಂಗೆ ಹೇಳಿದ – “ಉಂಡೆ ಕಾನಕ ಸಮ ಸಮ ಇದ್ದೋ ಲೆಕ್ಕ ಹಾಕು., ಕಾನಕ ಬೇಕಾರೆ ಪುನಃ ಕೂಬಂದ ಮದಲು ಮಾಡಿಕ್ಕುತ್ತೆ..”

ಹಾಂಗೆ ಲೆಕ್ಕ ಹಾಕಿದ ರಂಗಣ್ಣ ಉಂಡೊಡಿಪ್ಪಗ ಹೇಳಿದ° – “ಎರಡು ನಾಕು ಎಂಟು ಕಮ್ಮಿ ಇದ್ದು”

ಉಂಡಿಕ್ಕಿ ಬಂದ ಸತ್ಯಣ್ಣ ಒಂದು ಸೇರು ಮೈದಾ ಕಲಸಿದ°..

ಅಷ್ಟಪ್ಪಗ ಬಂದ ರಂಗಣ್ಣ ಕೇಳಿದ° – ಇದೆಂತ್ಸಕೆ ಮಾವ° ಇಷ್ಟೊಂದು ಕಲಸಿದ್ದು?! ಕಮ್ಮಿಪ್ಪದು ಎಂಟು ಕಾನಕ ಅಲ್ದೋ?!

ಪಿಸುರು ಬಾರದ್ದಿಕ್ಕೋ ಆರಿಂಗಾರು ಅಂಬಗ!, ಸತ್ಯಣ್ಣ ಹೇಳಿದ° – ನೀನೆಂತ ಬಗಳಿದ್ದಾಗ ಮತ್ತೆ?! 248 ಕಮ್ಮಿದ್ದು ಹೇದಲ್ಲದ? ಅಷ್ಟು ಆಗೆಡದೋ ಅಂಬಗ!!..

ರಂಗಣ್ಣ ಹೇಳಿದಾ° – “ಆನು ಹೇಳಿದ್ದದು ಎರಡರ ನಾಕು ಸೆಟ್ಟು ಎಂಟು”.

ಮತ್ತೆಂತ್ಸರ ಮಾಡ್ತದಿನ್ನು ಇದರ ಹೇದು ಸತ್ಯಣ್ಣ ಚಪಾತಿ ಉಂಡೆ ಮಾಡ್ಳೆ ಹೆರಟ° .  😀

~~

8.

ಮಾಮಾದೊಮ ಅಮೇರಿಕಾಲ್ಲಿ ಇಪ್ಪದಾರೂ ವೊರಿಶಕೊಂದರಿ ಊರಿಂಗೆ ಬಂದು ಹೋಗದ್ದೆ ಇಪ್ಪದಿಲ್ಲೆ..

ಮಾಮಾದೊಮ ಊರಿಂಗೆ ಬಂದ ಮಾಮಸಮನಲ್ಲಿ ಕೆಲವು ದಿನ ಠಂಬು..

ಹಾಂಗಾಗಿ ಮಾಮಾದೊಮ ಊರಿಂಗೆ ಬಂದರೆ ಮಾಮಸಮಂಗೂ ತೆರಕ್ಕು..

ಈ ತೆರಕ್ಕಿನೆಡಕ್ಕಿಲ್ಲಿಯೂ ಮಾಮಾದೊಮಂಗೆ ಏನಾರು ವಿಶೇಷ ಪೆಸಲು ಮಾಡೆಕು ಹೇದು ಮಾಮಾಸಮನ ಅಲೋಚನೆ..

ಮಮಾಸಮಂಗೆ ಚಪಾತಿ ರಟ್ಟುಸುತ್ತಲಿಂದ ಹಾಲಪಾತ್ರ ತೊಳೆತ್ತವರೇಂಗೂ ಕೈಬಂದ ಕಲೆ.. ಅಂದರೂ ಪುರುಸೊತ್ತು ಬೇಕನ್ನೇ..

ಹಾಂಗೇಳಿ ಈ ಅನುಪ್ಪತ್ಯದೆಡೆಲಿ ಆರ ಬಪ್ಪಲೆ ಹೇಳ್ವದು ಹೇದು ಮಾಮಾಸಸೊ ಕೇಳಿಯಪ್ಪಗ UK ಸತ್ಯಣ್ಣನ ದೆನಿಗೊಳುವೊ ಹೇದಾತು.

ಅದಾರು ಹೊಸತ್ತು ಈಗ ಬಂದದು UK ಹೇದು ಮಾಮಸಸೊಗೆ ಗೊಂತಾತಿಲ್ಲೆ..

ಮಾಮಸಮ ಹೇದಾ – “ಅದು.. ನಮ್ಮ ಅಡಿಗೆ ಸತ್ಯಣ್ಣ ಈಗ UK ಹೋಗಿ ಬಂದಲ್ಲದಾ. ಇನ್ನೀಗ ಅವ° UK ಅಡಿಗೆ ಸತ್ಯಣ್ಣ”!! :D:D

~~

9.

ಅಲ್ಲ.., ಪ್ರಪಂಚಲ್ಲಿ ಹೇಂಗೇಂಗಿರ್ತ ಮನುಷ್ಯರು ಇರ್ತವು ಹೇದು !! – ಅಡಿಗೆ ಸತ್ಯಣ್ಣಂಗೂ ಕೆಲವು ಸರ್ತಿ ಹೀಂಗೆ ತೋರುವದಿದ್ದು..

ಕೊಡೆಯಾಲ ಅನುಪ್ಪತ್ಯ ಕಳುದಿಕ್ಕಿ ಅಲ್ಲಿಂದಲೇ ಬೆಂಗಳೂರ ಮಾಮಾಸಮ’ನ ಪ್ರೋಗ್ರಾಮಿಂಗೆ ಹೆರಟದು..

ಕೊಡೆಯಾಲಂದ ಹೆರಟ ಬಸ್ಸು ಕಾಪಿ ಕುಡಿತ್ತವಕ್ಕಾತು ಹೇದು ಉಪ್ಪಿನಂಗಿಡಿಂದ ಮದಲೊಂದರಿ ನಿಂದತ್ತು. ಸಕಲೇಶಪುರಲ್ಲಿಯೂ ಬಸ್ಟೇಂಡಿನ ಒಳವೇ ನಿಂದತ್ತು..

ಅಲ್ಲಿಂದ ಹೆರಟ ಬಸ್ಸು ಮತ್ತೆ ನಿಂದದು-  ಓ ಅಲ್ಲಿಗೆ ಒಂದರಿ ಹೋಯ್ಕಿ ಬಪ್ಪವಕ್ಕೋ ಅನುಕೂಲ ಆಗಲಿ ಹೇದು ಚನ್ನರಾಯಪಟ್ಟಣಲ್ಲಿ. .

ದೊಡಾ ಬಸ್ಸು ಸ್ಟೇಂಡದು.. ಎಲ್ಲಾ ಸೌಕರ್ಯಂಗಳೂ ಇದ್ದು..

ಕೆಲವು ಜೆನ ಇಳುದವು ಓ ಅಲ್ಲಿಗೆ ಹೋದವು..

ಇಳುದ ಕೆಲವು ಜೆನ ಓ ಅಲ್ಲಿ ಅದಕ್ಕೇಳಿಯೇ ಜಾಗೆ ಇದ್ದರೂ ಈಚಿಗೆ ಬಿಡುಸಾಡಿ ಮಾರ್ಗದ ಕರೇಲಿ ಹೋಗಿ ಸುಖವಾಗಿ ನಿಂದು ತೀರ್ಸಿಯೊಂಡವು !

ಕೆಲವು ಮನುಷ್ಯರ ತಿದ್ದಲೇ ಎಡಿಯಪ್ಪ! – ಸತ್ಯಣ್ಣ° ಪರಂಚಿಗೊಂಡ° ಮನಸಿನೊಳವೇ..

ಹಾ° .. ಇನ್ನು ಬಸ್ಸು ಹೆರಡುತ್ತು ಹೇದು ಪೀ ಪೀ ಹೇದು ಕಂಡೇಕ್ಟರ ಬಸ್ಸು ಬಿಗಿಲು ಊದಕ್ಕಾರೆ, ಬಸ್ಸು ಸ್ಟಾರ್ಟ್ ಮಾಡಿ ರೆಡಿ ಆಯ್ದು ಡ್ರೈವರ..

ಅಷ್ಟನ್ನಾರ ಬಸ್ಸಿನೊಳವೇ ಕುತ್ತ ಕೂದುಗೊಂಡಿದ್ದ ಕೆಲವಕ್ಕೆ ಈಗ ನೆಂಪಾತು.. – ಹರ್ದು ಬಿದ್ದು ಬಸ್ಸಿಂದ ಇಳಿವಲೆ ಹೆರಟವು- “ಒಂದು ನಿಮಿಷ ನಿಲ್ಲಿ” ಹೇದು.

ಸತ್ಯಣ್ಣಂಗೆ ಎಂತ ಈಗ ಹೀಂಗಿರ್ಸರ ನೋಡಿರೆ ನಿಂಗೊಗೂ ಪಿಸುರು ಬಾರದ್ದಕ್ಕೋ – ಇಷ್ಟೊತ್ತು ಬಸ್ಸು ನಿಂದುಗೊಂಡಿಪ್ಪಗ ನೆಂಪಾಯ್ದಿಲ್ಲೆ.., ಬಸ್ಸು ಹೆರಡ್ಳಪ್ಪ ಒಂದೊಂದಕ್ಕೆ ಅಂಬೇರ್ಪು ನೆಂಪಪ್ಪದು !!

ರಂಗಣ್ಣ ಸಮಾಧಾನ ಹೇದಾ° – “ಎಂತ ಮಾಡೋದು ಮಾವ°, ಬಪ್ಪಲಪ್ಪಗ ಅಲ್ಲದೋ ಹೋಪಲೆಡಿಗು” 😀

ಅಪ್ಪಪ್ಪು.. ಪ್ರಪಂಚಲ್ಲಿ ಹೇಂಗೇಂಗಿರ್ತ ಮನುಷ್ಯರು ಇರ್ತವು ! – ಸತ್ಯಣ್ಣ° ತನ್ನಷ್ಟಕ್ಕೆ ಸಮಾಧಾನ ಮಾಡಿಗೊಂಡ°  😀

 

~~

10.

ಮಾಮಸಮನಲ್ಲಿಗೆ ಹೆರಟ ಅಡಿಗೆ ಸತ್ಯಣ್ಣ ಬಸ್ಸು ಇಳುದು ನಡವಲೆ ಸುರುಮಾಡಿದ°..

ನಾಕು ಮೆಟ್ಟು ಮುಂದೆ ಹೋದಪ್ಪಗ ಹಶು ಆವ್ತು ಹೇದು ಆಚೀಚಿಗೆ ನೋಡಿಯಪ್ಪಗ ‘ಉಡುಪಿ ಶ್ರೀ ಕೃಷ್ಣ ಭವನ’ ಹೇಳಿ ಬೋರ್ಡು ಕಂಡಪ್ಪಗ ಅರೆವಾಶಿ ಹೊಟ್ಟೆ ತುಂಬಿತ್ತಡ..

ರಂಗಣ್ಣನೊಟ್ಟಿಂಗೆ ಹೋದ ಅಡಿಗೆ ಸತ್ಯಣ್ಣ ನೇರ ಹೋಟ್ಳ ಒಳ ಹೋಗಿ ಕೂದ°..

ಸಪ್ಲೈಯರ° ಇಡ್ಳಿ ದೋಸೆ ಚಪ್ಪಾತಿ ಪೂರಿ….. ಹೇಳಿ ಉದ್ದಕೆ ಹೇಳ್ವಗ ‘ಬಕಳಾ ಬಾತ್’ ಹೇದೇನೋ ಹೊಸತ್ತೊಂದು ಕೇಳಿತ್ತು ಅಡಿಗೆ ಸತ್ಯಣ್ಣಂಗೆ..

ಒಂದು ರುಚಿ ನೋಡುವೋ° ಹೇದು- “ಅದನ್ನೇ ಕೊಂಡ ಎರಡು ಪ್ಲೇಟು”  ಹೇಳಿದ° ಅಡಿಗೆ ಸತ್ಯಣ್ಣ°..

ಬಾಯಿಗೆ ಹಾಕಿದ ಅಡಿಗೆ ಸತ್ಯಣ್ಣನತ್ರೆ ರಂಗಣ್ಣ ಕೇಳಿದ° – ಹೇಂಗಿದ್ದು ಸತ್ಯಣ್ಣ?!

ಸತ್ಯಣ್ಣ° ಹೇಳಿದ° – ವಾಹ್! ಇದು ಸೂಪರ್ ಇದ್ದನ್ನೇ, ಅಶನ ಮಾಂತ್ರ ನಿನ್ನಾಣದ್ದಲ್ಲ! , ವಾಸನೆ ಬಡಿವದು ಕಾಂಬಗ ಕಮ್ಮಿಲಿ ನಾಕು ದಿನ ಆತಾಯ್ಕು ಅಲ್ಲದ?! 😀

~~

11.

ಅಡಿಗೆ ಸತ್ಯಣ್ಣಂಗೂ ತಲೆಂಗಳ ಮಾಷ್ಟ್ರಭಾವಂಗೂ ಹಳೇ ಚೆಂಙಾಯಿಪ್ಪಾಡು..

ಮಾಷ್ಟ್ರಭಾವಂಗೆ ಬೇಸಗೆ ರಜೆ, ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯ ಇಲ್ಲದ್ದ ರಜೆ..

ಮಾಷ್ಟ್ರಭಾವಂಗೆ ಕೆಲವೊಂದರಿ ಕೆಲವೊಂದು ನಮೂನೆ ಎಳಕ್ಕ ಬಪ್ಪದು ಹೇಳಿ ಇದ್ದಡ !

ಹಾಂಗೆ ಮೊನ್ನೆ ಇಬ್ರಿಂಗೂ ರಜೆ ಹೇಳ್ತ ಕಾರಣಕ್ಕೆ ತಲಂಗಳ ಮನೇಲಿ ಭೇಟಿಯಪ್ಪದು – ದಿನ ಇಡೀ ‘ಸೌಹಾರ್ದ ಕೂಟ’ ಹೇಳಿ ನಾಕು ಗಟ್ಟಿ ಜವ್ವನಿಗರು ನಿಘಂಟು ಮಾಡಿದವಡ..

ಅಂತೇ ದಿನ ಹಾಳು ಮಾಡ್ತದಲ್ಲ, ಮಾಷ್ಟ್ರಭಾವಂಗೂ ಅಂತೇ ದಿನ ಹಾಳುಮಾಡ್ತರ್ಲಿ ಒಪ್ಪಿಗೆ ಇಲ್ಲೆ..

ಹೇಂಗೂ ಬೆಶಿಲು ಕಾಯ್ತು, ಬಾಡಿಗೆ ಕೊಡೆಡ, ಹಪ್ಪಳ ಮಾಡುವೋ ಹೇದು ನಿಘಂಟಾತು ನೆರೆಕರೆ ಜವ್ವನಿಗರದ್ದು..

ಹಪ್ಪಳ ಮಾಡಿ ಮರುದಿನ ಅಡಿಗೆ ಸತ್ಯಣ್ಣ ಮನಗೆ ತಂದ ವರ್ತಮಾನ ಕೇಳಿರೆ..

ಈ ಜವ್ವನಿಗರು ಎಡಿಗು ಹೇಳಿ ಮರಂದ ಎಳದು ಹಾಕಿದ ಹಲಸಿನಕಾಯಿ 40 ಅಡ..

41ನೇದು ಬಲುಗುವಾಗ ಕೊಕ್ಕೆ ಮರಲ್ಲಿ ಬಾಕಿ ಅಡ!..

ಎಳದು ಹಾಕಿ, ಅಜಪ್ಪಿ, ಕಡದು, ಹಪ್ಪಳ ಒತ್ತುಲೆ ಸುರು ಮಾಡಿರೆ ಇದು ಮುಗಿತ್ತೇ ಇಲ್ಲೆಡ!

ತಲೆಬೆಶಿ ಆತು ಇವಕ್ಕೆ, ಪದ್ಯ ಸುರು ಮಾಡಿದವಡ, ಭಜನೆ ಹಾಡಿದವಡ, ಇರುಳು ಇಡೀ ಒರಕ್ಕು ಕೆಟ್ಟವಡ..

ಮರದಿನ ಆತು, ಕೆಲಸದ ಹೆಣ್ಣಿಗೆ ರೆಜಾ ಕೊಟ್ಟವಡ, ಮತ್ತೂ ಒಳುದ್ಸರ ಕೊಂಡೋಗಿ ದನಕ್ಕೆ ಕೊಟ್ಟವಡ..

ಹೇಂಗಾರೂ ಮುಗುದತ್ತಡ!!

ಹಪ್ಪಳ 3500 ಆತಡ..

ಒಬ್ಬೊಬ್ಬಂಗೆ 500 ಸಿಕ್ಕಿತ್ತಡ…

ಅಷ್ಟು ಮನಸ್ಸು ಮಾಡಿರೆ ಮಧ್ಯಾಹ್ನಕ್ಕಪ್ಪಗ ಎಂಗೊ ಮಾಡಿ ಹಾಕುತ್ತೀತಿಲ್ಯೋ ಹೇದವಡ ಮನೆ ಹೆಮ್ಮಕ್ಕೊ!!  😀

~~

  😀 😀 😀

ಅಡಿಗೆ ಸತ್ಯಣ್ಣ ಊರಿಂಗೆ ಬಂದಾತಿಲ್ಯೋ..  ಇನ್ನು ಸಾವಕಾಶಲ್ಲಿ ಕಂಡುಮುಟ್ಟಿಗೊಂಡಿಪ್ಪೋ ಪುರುಸೊತ್ತಾದಪ್ಪಗೆಲ್ಲ. ನಿಂಗಳೂ ಕಂಡ್ರೆ ಮಾತಾಡ್ಸಿಕ್ಕಿ. ಶುದ್ದಿ ಏನಾರು ಇದ್ದರೆ ನವಗೂ ತಿಳಿಶಿಕ್ಕಿ. ಅಷ್ಟನ್ನಾರ ಹರೇ ರಾಮ.

10 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 14

  1. ಸತ್ಯಣ್ಣನ ಒ೦ದೊ೦ದು ಘಟನೆಯೂ ನೆಗೆ ತರುಸುತ್ತು..ಗಮ್ಮತ್ತು ಊಟ ಮಾಡಿದ ಹಾ೦ಗೆ…

  2. ಓಯ್ ಸತ್ಯಣ್ಣನ ಆ ದೂರದ UK ಬದಲು ಇಲ್ಲೇ ಹತ್ತಿರದ UK ಗೆ (ಉತ್ತರ ಕನ್ನಡಕ್ಕೆ) ಕಳ್ಸಿದ್ದರೆ ವಾಪಾಸ್ ಬತ್ತಿದ್ನೇ ಇಲ್ಲೆ. ಇಲ್ಲಿ ಭಾಷೆ ಬಿಟ್ಟು ಬಾಕಿ ಎಲ್ಲಾ DK ಹಾ೦ಗೇಯಾ ಮಾರ್ರೇ. 😉

  3. ಸತ್ಯಣ್ಣ ಪರದೇಶ ಪ್ರಯಾಣ ಮಾಡಿಕ್ಕಿ ಪುನಃ ಬಂದದು ಕೇಳಿ ಕೊಶಿ ಆತು. ಹೋಟೆಲ್ ಸುಪರ್ವೈಸರು ಅಪ್ಪಲೆ ಸತ್ಯಣ್ಣನೊಟ್ಟಿಂಗೆ ಕಾಯಿ ಕಡವಲೆ ಟ್ರೈನಿಂಗು ತೆಕ್ಕೊಳೆಕಾದ್ದು ಬೇಕಾದ್ದೆ. ಹಪ್ಪಳ ಮಾಡುವ ಸೌಹಾರ್ಧ ಸೇವೆಯೂ ಪಸ್ಟಾಯಿದು. ಇನ್ನಾಣ ವಾರ ಯು ಕೆ ಸತ್ಯಣ್ಣನ ಕಾಂಬೊ ಅಂಬಗ.

  4. Sathyanna bandappaga kosheee aathida. ‘Mamasama’ adenthara heli gonthaidillenne.

    1. ಅದಾರೋ ಅಡಿಗೆ ಸತ್ಯಣ್ಣನ ಕ್ಲೈಂಟಡಪ್ಪ!. ಅಷ್ಟೇ ನವಗೂ ಗೊಂತು. ಒಕ್ಕಿ ಒಕ್ಕಿ ತೊಳಚ್ಚಿರೆ ಸತ್ಯಣ್ಣಂಗೆ ಪಿಸುರು ಬಕ್ಕು, ನವಗೂ ಅದೆಲ್ಲ ಅಗತ್ಯವೂ ಇಲ್ಲೆ. ಶುದ್ದಿ ಸಿಕ್ಕಿತ್ತಿಲ್ಯೋ.. ರಟ್ಟಿತ್ತಲ್ಲಿಂದ 😀

  5. ಯುಕೆಗೆ ಹೋದ ಸತ್ಯಣ್ಣ ಪರದೇಶಿಯಾಯಿದಾಯಿಲ್ಲೆನ್ನೆ -ಅದೇ ಸಮಾಧಾನ. ಹೋಗಿ ಬಂದ ಲೆಕ್ಕಲ್ಲಿ ‘ಯುಕೆ’ ಹೇಳುವ ಡಿಗ್ರಿ ಒಂದು ಸೇರಿಕೊಂಡತ್ತನ್ನೆ- ‘ಯುಕೆ ಅಡಿಗೆ ಸತ್ಯಣ್ಣ’ ಹೇಳಿ . ಇನ್ನು ಜೆಂಬ್ರ ತೆಗೆತ್ತ ಬೈಲಿನವು ಅಡಿಗೆ ಮಟ್ಟಿಂಗೆ ಮಂಡೆಬೆಚ್ಚ ಮಾಡೆಕ್ಕು ಹೇಳಿಲ್ಲೆ.

  6. ಭಕಳಾಭಾತ್ ಪಸ್ಟ್ ಆಯಿದು. ಎನಗೆ ನೆಗೆ ತಡವಲೆ ಎಡಿತ್ತಿಲ್ಲೆ… ಇನ್ನು ನಾಲ್ಕು ದಿನಾಣ ಹಿಂದಾಣ ಅನ್ನ ಇದ್ದರೆ ಭಕಳಾಭಾತ್ ಮಾಡಿರ್ ಎಆತು… >ಫ್

  7. ಏ ಸಿ ಭಾವ ಸತ್ಯಣ್ಣ ಮತ್ತೆ ಬಂದನೋ.. ಕೊಶಿ ಆತಿದಾ…
    ಸತ್ಯಣ್ಣನ ಬದಲಿಂಗೆ ರಂಗಣ್ಣನೇ ಬೈಲಿಲ್ಲಿ ಕೋಂಗಿ ಮಾಡ್ತನೋ ಹೇದು ಗ್ರೇಶಿಸಿತ್ತಿದೆ..
    ಸತ್ಯಣ್ಣಂಗೆ ಜೈ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×