‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 16

June 27, 2013 ರ 11:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

1.

ಅಡಿಗೆ ಸತ್ಯಣ್ಣ೦ಗೆ ಪೇಟಗೆ ಹೋದರೆ ಚಾ ಕುಡಿವಾಗ ಬನ್ಸ್ ತಿಂತ  ಕ್ರಮ ಇದ್ದು..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

 

ಹಾಂಗೆ ಮೊನ್ನೆ ಪೇಟೆಗೆ ಹೋಗಿ ಬನ್ಸ್ ತಿಂದು ಚಾ ಕುಡುದು ಹೆರ ಬಪ್ಪಗ ಹೆಂಡತಿ ಬಾಳೆ ಹಣ್ಣು ತಪ್ಪಲೆ ಹೇಳಿದ್ದು ನೆಂಪಾತು..

ಶೆಟ್ಟಿ ಅಂಗಡಿ ಪರಿಚಯದ್ದೇ., ಏನು ಭಟ್ರೇ ಹೇಳಿ ಕುಶಲೋಪರಿ ಮಾತಾಡಿತ್ತು..

ಸತ್ಯಣ್ಣ ಲೋಕಾಭಿರಾಮ ಮಾತಾಡಿಕ್ಕಿ, ಒಂದು ಕಿಲೋ ಕದಳಿ ಬಾಳೆ ಹಣ್ಣು ಬೇಕಾತು ಹೇಳಿ ಕ್ರಯ ಮಾಡುವಾಗ 45/= ರೂಪಾಯಿ ಹೇಳಿತ್ತು. ಆಗಲಿ ಹೇಳಿ ತೂಕ ಹಾಕ್ಸಿ ಅಪ್ಪಗ ಅಲ್ಲೇ ಕರೇಲಿ ಕಪ್ಪು ಆದ ಅರ್ಧ ಕೊಳದ ಬಾಳೆ ಹಣ್ಣಿನ ರಾಶಿ ಕಂಡತ್ತು. ಕೌಳಿ ಹಾರಿಂಡು ಬೇರೆ ಇತ್ತಿದ್ದು.  ಇದೆಂತಕೆ ಇಲ್ಲಿ ಹೀಂಗೆ ಮಡುಗಿದ್ದು , ಇಡ್ಕಲಾಗದ ಅತ್ಲಾಗಿ ಹೇಳಿ ಸತ್ಯಣ್ಣ ಶೆಟ್ಟಿ ಹತ್ರೆ ಹೇಳಿದ.

ಶೆಟ್ಟಿ ಹೇಳಿತ್ತು –

ಈಗ ಸಂಜೆ ಹೋಟೆಲಿನವರು ಬಂದು ಕಿಲೋಕ್ಕೆ 10 ರೂಪಾಯಿಯಂತೆ ಕೊಂಡೊಗ್ತಾರೆ , ಇದರಲ್ಲಿ ಅವರಿಗೆ ಬನ್ಸ್ ಮಾಡ್ಲಿಕ್ಕೆ ಆಗ್ತದೆ  ಹೇಳಿತ್ತು.

ಸತ್ಯಣ್ಣಂಗೆ ಮೈ ಅಕ್ಕಿ ಕಟ್ಟಿತ್ತು.., “ಧರ್ಮಕ್ಕೆ ಕೊಡ್ತರೂ ಎನಗೆ ಇದು ಆತಿಲ್ಲೆ”,. ಇನ್ನು ಮುಂದೆ ಹೋಟ್ಲಿ ಲ್ಲಿ ಬನ್ಸ್ ತಿಂತಿಲ್ಲೆ ಹೇಳಿ ಅಲ್ಲಿಯೇ ಶಪಥ ಹಾಕಿ ಸತ್ಯಣ್ಣ ಮನೆ ದಾರಿ ಹಿಡುದ° 😀
~~~

2.

ಅಡಿಗೆ ಸತ್ಯಣ್ಣ ಮನೆ ಹತ್ರೆ ತರಕಾರಿ ಮಾಡಿ ಅದನ್ನೇ ಬೆಂದಿ ಮಾಡ್ತ ಕ್ರಮ. ಈ ಮಳೆಗಾಲವೋ , ಮಳೆಯೋ, ಮಾಡಿದ ಬೆಳೆ ಎಲ್ಲಾ ಒಟ್ಟು ಹುಳು ಹಿಡುದರೆ ಸತ್ಯಣ್ಣ ಎಂತ ಮಾಡ್ಳೆಡಿಗು!.  ತರಕಾರಿ ಇಲ್ಲದ್ದೆ ಅಡಿಗೆ ಆಗ..  

ಹಾಂಗೆ ಸತ್ಯಣ್ಣ ಶೆಟ್ಟಿ ಅಂಗಡಿಗೆ ಹೋದ°

ಶೆಟ್ರೆ, ಟೊಮೆಟೋ ಎಷ್ಟು ?

10 ರೂಪಾಯಿ

ಒಂದು ಅರ್ಧ ಕಿಲೋ ಇರಲಿ

ಊರ ತೊಂಡೆಕಾಯಿಗೆ ?

15  ರೂಪಾಯಿ.  ಹುಳಿ ಮೆಣಸಿನ ಕೊದಿಲು ಮಡ್ಲಾತು ಒಂದು ಕಿಲೋವೆ ಇರಳಿ.

ಊರ ಬೆಂಡೆ ಕಾಯಿ ಎಷ್ಟು? 20  ರೂಪಾಯಿ. ಅರ್ಧ ಕಿಲೋ ಇರಳಿ

ಎಲ್ಲ ತೂಕ ಮಾಡಿ ಚೀಲಕ್ಕೆ ಹಾಕಿತ್ತು ಶೆಟ್ಟಿ.

ಸತ್ಯಣ್ಣ 30 ರೂಪಾಯಿ ಬಾಯಿ ಲೆಕ್ಕ ಮಾಡಿ ಕೊಟ್ಟ.

ಶೆಟ್ಟಿ ಮೇಗೆ ಕೆಳ ನೋಡಿ, ಇದೇನು ಭಟ್ರೇ ಕೇಳಿತ್ತು.. ಇನ್ನು 90 ರೂ ಕೊಡಿ ಹೇಳಿತ್ತು.

ಸತ್ಯಣ್ಣಂಗೆ ತಲೆ ತಿರುಗಿತ್ತು. ಲೆಕ್ಕ ಮಾಡಲೇ ಎಡಿಯದ್ದ ನೀನು ಹೆಂಗೆ ಅಂಗಡಿ ನೆಡೆಶುತ್ತದು ಕೇಳಿದ ರೆಜ ಜೋರಿಲ್ಲಿಯೇ

ಅಯ್ಯೋ ಭಟ್ರೇ, ನಾನು ರೇಟ್ ಹೇಳಿದ್ದು ಎಲ್ಲಾ ಕಾಲು ಕಿಲೋ ತರಕಾರಿದು. ಕಿಲೋಕ್ಕೆ ರೇಟ್ ಹೇಳಿರೆ ಕೊಂಡೊಪವು ಆರೂ ಇಲ್ಲೇ. ಈಗ ನೇವೇ ಲೆಕ್ಕ ಹಾಕಿ ಹೇಳಿ ಹುಳಿ ನೆಗೆ ಬೀರಿತ್ತು.

“ಅಂಬಗ ಇನ್ನು ಮುಂದೆ ನೀನು  ಕಿಲೋಕ್ಕೆ ಲೆಕ್ಕ ಹೇಳೆಡ , 100 ಗ್ರಾ ಮಿಂಗೆ ಹೇಳು ”  ಹೇಳಿಕ್ಕಿ ಪೈಸೆ ಕೊಟ್ಟು ಸತ್ಯಣ್ಣ ಅಲ್ಲಿಂದ ಜಾರಿದ°

 

~~

3

ಅಡಿಗೆ ಸತ್ಯಣ್ಣ ಅಂದು ಬಸ್ಸಿಲ್ಲಿ ಹತ್ತಿ ಟಿಕೇಟು ತೆಗದು ಕೂದಾತು. ಶಾಲೆ ಬಿಟ್ಟು ಮಕ್ಕೊ ಬಪ್ಪಲೆ ಸುರು ಆತು. ಹೊತ್ತೋಪಗಾಣ ಜೆನಂಗಳ  ರಶ್ಶೋ ರಶ್ಶು.

ರೈಟ್ ಪೋಯಿ ಹೇಳಿ ಬಸ್ಸು ಹೆರಟತ್ತು. ಬಸ್ಸಿಲ್ಲಿ ಒಳ ಜಾಗೆ ಇಲ್ಲೇ ಹೇಳಿ ಕೆಲವು ಮಕ್ಕೊ ನೇಲ್ಲೆ ಸುರು ಮಾಡಿದವು.
ಕಂಡಟ್ರಂಗೆ ನೇತಾಡ್ತವರ ಕಂಡ್ರೆ ಪಿಸುರು ಬಪ್ಪದು. ಇವು ಬಿದ್ದರೆ ಮತ್ತೆ ಸ್ಟೇಶನಿಲ್ಲಿ ಹೋಗಿ ಕೈ ಕಟ್ಟಿ ನಿಲ್ಲೆಕ್ಕಾವ್ತಲ್ಲದೋ .

 ” ನಿಮಗೆ ನೇತಾಡ್ಲೇ ಬೇಕ೦ತ ಇದ್ದರೆ  ಹೋಗಿ ಮಾವಿನ ಮರದಲ್ಲಿ ನೇತಾಡಿ ” ಹೇಳಿ ಜೋರು ಮಾಡಿತ್ತು.

ಸತ್ಯಣಂಗೆ ಒಂದು ದಿನ ಮಗಳು ಶಾಲೆಂದ ಬಂದು ಕೇಳಿದ್ದು ಈಗ ನೆಂಪಾತು ” ಅಪ್ಪ°, ಮಂಗನಿಂದ ಮಾನವ ಆದ್ದು ಹೇಳಿ ಮಾಷ್ಟ್ರ ಇಂದು ಹೇಳಿದ್ದ ನಿಜವೋ?”

ಈಗ ಸತ್ಯಣ್ಣಂಗೆ ಮಗಳು ಕೇಳಿದ್ದು ಮಾಷ್ಟ್ರ ಹೇಳಿದ್ದು ಎಲ್ಲಾ ಸತ್ಯ ಹೇಳಿ ಕಂಡತ್ತು. 😀
~~~~

4.

ಅಡಿಗೆ ಸತ್ಯಣ್ಣ೦ಗೆ ಹೆರಡುತ್ತ ತೆರಕ್ಕು.., ರಮ್ಯ ಕಾಲೇಜಿಂದ ಬರೆಕಷ್ಟೆ, ಶಾರದೆ ನೆಟ್ಟಿ ಸೇಸಿಗೊಕ್ಕೆ ಗೊಬ್ಬರ ಮಡುಗಲೆ ಹೋಯಿದು.

ರಮ್ಯನ  ಫ್ರೆಂಡ್  ಹತ್ರಾಣ  ಮನೆ ಕೂಸು ಬಂತು.

“ಮಾವಾ°,  ಬನ್ಸ್ ಮಾಡ್ಲೆ  ಹೇಳಿ ಕೊಡಿ” ಹೇಳಿತ್ತು.

ಎನಗೆ ಈಗ ಪುರುಸೊತ್ತಿಲ್ಲೆನ್ನೇ – ಹೇಳಿದ ಸತ್ಯಣ್ಣ.

“ಹಾಂಗಾರೆ ಆನೇ ಪುಸ್ತಕ ನೋಡಿ ಮಾಡ್ತೆ”- ಹೇಳಿತ್ತು ಕೂಸು., “ಇದರಲ್ಲಿ ಬರದ್ದು ಸರಿ ಇದ್ದಾ ನೋಡಿ” ಹೇದು ಕೈಲಿಪ್ಪ ಅಡಿಗೆ  ಪುಸ್ತಕ ಬಿಡುಸಿ ಓದಲೇ ಸುರು ಮಾಡಿತ್ತು.

ಮೈದಾ ಹೊಡಿ, ಉಪ್ಪು, ಸಕ್ಕರೆ, ಎಲ್ಲಾ ಓದಿಕ್ಕಿ ‘ಕೊಳೆತ ಬಾಳೆ ಹಣ್ಣು ” ಹೇಳಿತ್ತು ಕೂಸು

ಕೂಸೇ ಅದು ಕೊಳೆತ ಹಣ್ಣು ಅಲ್ಲ, ಕಳಿತ ಹಣ್ಣು, ಹೇದರೆ ಸರಿಯಾಗಿ ಹಣ್ಣಾದ ಬಾಳೆ ಹಣ್ಣು ಹೇಳಿ ಅರ್ಥ ಹೇಳಿ ಸತ್ಯಣ್ಣ ಬಿಡುಸಿ ಹೇಳಿದ° .

 

ಸುಮ್ಮನಲ್ಲ ಮೊನ್ನೆ ಶೆಟ್ಟಿ ಅಂಗಡಿನ್ದ ಕೊಳದ ಬಾಳೆ ಹಣ್ಣಿನ ಹೋಟೆಲಿನವು ತೆಕ್ಕೊಂಡು ಹೋದ್ದು ಹೇಳಿ ಒಂದು ತೀರ್ಮಾನಕ್ಕೆ ಬಂದ ಸತ್ಯಣ್ಣ 😀

 

~~

5.

ಅಡಿಗೆ ಸತ್ಯಣ್ಣ ಓ ಅಂದು ಪೆರ್ಲದಾಟಕ್ಕೆ ಹೋದ್ದು ಬಾಲಣ್ಣಂಗೂ ಗೊಂತಾತು..

ಹೀಂಗೆ ಓ ಮನ್ನೆ ಅಡಿಗೆ ಸತ್ಯಣ್ಣ ನೀರ್ಚಾಲಿಲಿ ಸಿಕ್ಕಿಯಪ್ಪಗ ಬಾಲಣ್ಣ ಹೇದವು – “ಸತ್ಯಣ್ಣ, ನಾಡದ್ದಿಂಗೆ ಶಾಂತಿಪಳ್ಳಲ್ಲಿ ಆಟ ಇದ್ದಡೋ”..

ಅಡಿಗೆ ಸತ್ಯಣ್ಣ ಆಟಕ್ಕೆ ಹೋವ್ತ ಕ್ರಮ ಇಲ್ಲದ್ರೂ ಆಟದ ನೋಟೀಸು ಕಂಡ್ರೆ ವಿವರ ನೋಡ್ತ ಕ್ರಮ ಇದ್ದು..

ಸತ್ಯಣ್ಣ ಹೇದ° – “ಅಪ್ಪಪ್ಪು ., ಶಬರಿಮಲೆ ಅಯ್ಯಪ್ಪ ಪ್ರಸಂಗ”

ಬಾಲಣ್ಣ ಅಷ್ಟಕ್ಕೇ ಬಿಡೊಕೋ!, ರಜಾ ಸತ್ಯಣ್ಣನ ಎಳಗುಸುವೋ° ಹೇದು –

“ಸತ್ಯಣ್ಣೋ.., ಸಮುದ್ರಮಥನಲ್ಲಿ ದೇವೇಂದ್ರ° ಆನೆಲಿ ಬತ್ತಾಂಗೆ, ಶಬರಿಮಲೆ ಅಯ್ಯಪ್ಪಲ್ಲಿ..?”

ಸತ್ಯಣ್ಣ ಎಂತ ಅಷ್ಟು ಪಡ್ಪೋಸಿಯೋ! ., ಹೇದ° – ಅಪ್ಪಪ್ಪು ದೇವಿ ಮಹಾತ್ಮೆಲಿ ದೇವಿ ಸಿಂಹವಾಹಿನಿ ಆವ್ತಾಂಗೆ ಇಲ್ಲಿ ಅಯ್ಯಪ್ಪ° ಹುಲಿ ಏರಿ ಬಪ್ಪಲಿಕ್ಕು  😀

~~

6.

ಅಡಿಗೆ ಸತ್ಯಣ್ಣ ಅಡಿಗ್ಗೆ ಹೋದರೆ ಕೆಲಸಲ್ಲಿ ತೆರಕ್ಕೆ. ಹೊತ್ತು ಹೊತ್ತಿಂಗೆ ಆಯೇಕ್ಕಾದ್ದು ಆಗಿಯೇ ಆಯೆಕು.

ಹಾಂಗೇಳಿ ಆರಾರು ಬಂದೋರು ಅಡಿಗೆ ಕೊಟ್ಟಗ್ಗೆ ಬಂದು ಮಾತಾಡಿಸಿರೆ ಏನು ತಾನು ಹೇದು ಉಭಯಕುಶಲೋಪರಿ ಸದ್ರಿ ವಿಶೇಷ ಏನಾರು ಇದ್ದರೆ ಮಾತಾಡ್ಸದ್ದೆ ಇಪ್ಪಲಿಲ್ಲೆ.

ಮೊನ್ನೆ ಹಾಂಗೇ ಓ ಅಲ್ಲಿ ಬೈಲಿಲಿ ಒಂದು ಅನುಪ್ಪತ್ಯ.., ಸತ್ಯಣ್ಣದ್ದೇ ಅಡಿಗ್ಗೆ..

ಬಂದೋರಪೈಕಿಲಿ ಒಬ್ಬ ಉದ್ದದಷ್ಟೇ ಅಡ್ಡ ಇತ್ತಿದ್ದ ಭಾವಯ್ಯ ಒಬ್ಬ° ಬೆಂಗಳೂರ್ಲ್ಲಿ ಹೋಗಿ ಖಾಯಂ ಆಗಿತ್ತಿದ್ದವ° ಅಪರೂಪಲ್ಲಿ ಊರಿಂಗೆ ಬಂದೋನು..

ತನ್ನ ಹಳೆ ನೆಂಪು ಭಾವಯ್ಯನತ್ರೆ ಮಾತಾಡ್ಸಿಗೊಂಡು ಅಡಿಗೆ ಕೊಟ್ಟಗ್ಗೂ ಎತ್ತಿದ..

ಸತ್ಯಣ್ಣನ ಕಂಡಪ್ಪಗ ಭಾರೀ ಕೊಶಿ ಆತು.. – “ಹಾಯ್ ಸತ್ಯಣ್ಣ” ಹೇದ°..

ಸತ್ಯಣ್ಣನ್ನೂ ಓಯ್ ಭಾವಯ್ಯ ಹೇದ°

ಆಚ ಬಾವಯ್ಯ ಮುಂದುವರ್ಸಿದ – “ಯೂ ಸೀ ಇನ್ 1967 ವಿ ಟುಗೆದರ್….”

ಸತ್ಯಣ್ಣ ಹೇದ° – ಭಾವೋ ನಿನಗೆ ಇಂಗ್ಲೀಷು ಗೊಂತಿಕ್ಕು., ನಿನಗೆ ನಮ್ಮ ಭಾಷೆ ಬತ್ತನ್ನೆ. ಅದರ್ಲೇ ಹೇಳಿರೆ ಎನಗೂ ಅರ್ಥ ಅಕ್ಕು :D

~~

7.

ಕೊಡೆಯಾಲಕ್ಕೆ ಹೋದ ಸತ್ಯಣ್ಣ-ರಂಗಣ್ಣಂಗೆ ಅವರ ಖಾಯಂ ಅಡಿಗೆ ಮನೆ ಪೈಕಿ ಅಜ್ಜ ಒಬ್ಬ° ‘ಯೇನಪೋಯಲ್ಲಿ’ ಎಡ್ಮಿಟ್ಟು ಆಯ್ದ ಹೇದು ಶುದ್ದಿ ಗೊಂತಾತು..

ಹೋದ್ದರ್ಲಿ ಅಲ್ಲಿ ಹೋಗಿ ನೋಡಿ ವಿಚಾರ್ಸಿ ಮಾತಾಡ್ಸಿಕ್ಕಿ ಹೋಪೋ ಹೇದು ಇಬ್ರೂ ಯೇನಪೋಯಕ್ಕೆ ಹೋದವು..

ಅಲ್ಲಿಗೆ ಎತ್ತುವಾಗ ಸುಮಾರು ಬೆಳಿ ಅಂಗಿ ಜೆನಂಗಳೂ, ಜರಿ ಸೀರೆ ಹೆಮ್ಮಕ್ಕಳು ಹೆರ ಕಾದು ನಿಂದುಗೊಂಡಿತ್ತವು..

ಈ ಗುಂಪು ನೋಡಿಯಪ್ಪಗ ಇದು ಒಳ ಸೇರಿದ್ದದು ಏವುದೋ ಶ್ರೀಮಂತ ವ್ಯಕ್ತಿ ಹೇದು ಪ್ರತ್ಯೇಕ ಹೇಳೇಕ್ಕಾದ್ದಿಲ್ಲೆ..

ಆಸುಪತ್ರೆ ವಾತಾವರಣ ನೋಡಿಯಪ್ಪಗ ಸತ್ಯಣ್ಣಂಗೆ ಒಂದರಿ ಏನೆನೆಲ್ಲ ಆತು ಮನಸ್ಸಿಂಗೆ ಆತಂಕ, ಮೋರೆ ಬಾಡಿತ್ತು..

“ಛೇ! ಮನುಷ್ಯಾವಸ್ಥೆಯೇ!!,  ದರ್ಬಾರು ಎಲ್ಲ ಕಾರ್ಬಾರು ಕಾಲಲ್ಲಿ. ಅತ್ಲಾಗಿ ಹೋಪಲಾತು ಹೇದಾದರೆ ಆರಿಂದಲೂ ತಡವಲೆ ಎಡಿಯ!, ಆಸುಪತ್ರೆ ಒಳ ಹೋದರೆ ಎಷ್ಟು ದೊಡ್ಡ ನೆಂಟ ಆದರೂ ಹೆರ ಜೆಗುಲಿಲಿಯೇ ಕಾಯೇಕ್ಕಷ್ಟೇ”! :(  – ಸತ್ಯಣ್ಣ ಸಣ್ಣಕ್ಕೆ ಹೇದ ರಂಗಣ್ಣಂಗೆ.

“ರಂಗಣ್ಣೋ., ಮನುಷ್ಯ° ಎಷ್ಟು ಶ್ರೀಮಂತ ಆದರೂ ಚಡ್ಡಿ-ಪೇಂಟು ಹಾಕುವಾಗ ಒತ್ತೆ ಕಾಲಿಲ್ಲಿ ಒಂದರಿ  ನಿಂದೇ ಆಯೇಕ್ಕಪ್ಪೋ”!

ರಂಗಣ್ಣ ಹೇದ° – “ಅಪ್ಪು ಮಾವ°, ಮನುಷ್ಯ° ಎಷ್ಟು ದೊಡ್ಡವ° ಆಗಿರಳಿ, ಏ.ಸಿ ಕಾರು – ಬಂಗಲೆಲಿ ಇಪ್ಪವ° ಇರಳಿ, ಆದರೆ.. ಉರ್ಚುದು ಕಾಲಬುಡಲ್ಲೇ, ತಪ್ಪುಸಲೇ ಎಡಿಯ”!  :(

“ತೆಕ್ಕ್… ನಿನ್ನ ಬಾಯಿಲ್ಲಿ ಲಾಯಕದ ಮಾತುಗಳೇ ಬಾರ, ತಳಿಯದ್ದೆ ನಡೆ, ಹೋಪೋ” – ಹೇದು ಸತ್ಯಣ್ಣ ರಂಗಣ್ಣನ ಮುಂದೆ ಹೆರಡಿಸಿದ 😀

~~

 

 

😀 😀 😀

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಡೈಮಂಡು ಭಾವ

  ಹು ಹು ಹು.. ಸತ್ಯಣ್ಣ° ರೈಸಿದ್ದ° ಈ ವಾರ…
  ಈ ರಂಗಣ್ಣನಂತ ಗೋಣ ಸಂಬಯಂಗಳ ಬಾಯಿಲಿ ಹೀಂಗಿಪ್ಪ ಮಾತುಗಳೇ ಬಪ್ಪದೋದು ತೆಕ್‌..

  [Reply]

  VA:F [1.9.22_1171]
  Rating: +3 (from 3 votes)
 2. swathi

  ಇನ್ನು ಹೋಟೆಲಿಲಿ ಬನ್ಸು ತಿಂಬಲಿಲ್ಲೆ… ಕಳಿತ ಅಲ್ಲಲ್ಲ ಕೊಳೆತ ಬಾಳೆಹಣ್ಣು ಹಾಕಿ ಬನ್ಸು ಮಾಡಿರೆ ಕಷ್ಟ… ಸತ್ಯಣ್ಣ ರೈಸಿದ್ದ….

  [Reply]

  VA:F [1.9.22_1171]
  Rating: +2 (from 2 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸತ್ಯಣ್ಣ ವಿಚಾರಶೂನ್ಯ ಅಲ್ಲ….ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: +3 (from 3 votes)
 4. ಪುಟ್ಟಬಾವ°
  ಗಣೇಶ ಹಾಲುಮಜಲು

  ರಂಗಣ್ಣ ಹೇಳಿದ್ದರ್ಲಿ ತುಂಬಾ ನೀತಿ ಇದ್ದದ..!!!ಪಷ್ಟಾಯ್ದು!!! 😉

  [Reply]

  VA:F [1.9.22_1171]
  Rating: +5 (from 9 votes)
 5. hegdekatte
  Hegdekatte

  Ganesha mahatme… Shani mahatme illya

  [Reply]

  VA:F [1.9.22_1171]
  Rating: +1 (from 1 vote)
 6. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  *ಸತ್ಯಣ್ಣಂಗೆ ಆದ ಹಾಂಗೇ ನವಗುದೆ ಆಯಿದು. ” ಬೆಂಡೆ ಎಷ್ತು?”
  ನಾವು ಮಂಗ ಆತದ . ” ಹದಿನಾಲ್ಕು ಸ್ವಾಮಿ” ಊರಿಂದಲೂ ಕಮ್ಮಿ ಇದ್ದನ್ನೇ! ಹೇಳಿ …
  (ಇದು ಓ ಮೊನ್ನೆ ಬೆಂಗ್ಳೂರಿಲಿ ನೆಡದ್ದದು) ” ಅರ್ಧ ಕಿಲೋ ಕೊಡಿ, ಎಷ್ತಾಯ್ತು?” ಕೇಳಿತ್ತು ನಾವು ..
  ” ಇಪ್ಪತ್ತೆಂಟು ಸ್ವಾಮಿ” ಎಬ್ಬೋ.. ಇದೆಂತ ಕೆಣಿಯಪ್ಪೋ !!!
  ~~~~~ ~~~~~ ~~~~~ ~~~~~~~
  *ಸತ್ಯಣ್ಣಂಗೆ ಯಕ್ಷಗಾನದ ಮರುಳು ಇದ್ದಲ್ಲದೋ ಅಂಬಗ?

  *ಚೆನ್ನೈ ಭಾವ,ಲಘು ಬರಹಂಗೊ ಲಾಯಕ ಬತ್ತಾ ಇದ್ದು. ಧನ್ಯವಾದಂಗೊ.

  [Reply]

  VN:F [1.9.22_1171]
  Rating: +1 (from 1 vote)
 7. ಇಂದಿರತ್ತೆ
  ಇಂದಿರತ್ತೆ

  ಎನ್ನ ಅತ್ತಿಗೆ ಬನ್ಸು ಲಾ…ಯ್ಕ ಮಾಡ್ತು. ಬಂದೋರಿಂಗೆ ತಿಂಬಾಗ ಕೊಳದ ಬಾಳೆಹಣ್ನು ಹಾಕಿದ್ದೋ ಹೇಳ್ತ ಸಂಶಯ ಬಪ್ಪದು ಬೇಡಾ ಹೇಳಿ ಎನ್ನ ಅತ್ತಿಗೆ ಬಾಳೆಹಣ್ನು ಹಾಕದ್ದೆ ಬನ್ಸು ಮಾಡುದು –

  ಸತ್ಯಣ್ಣಂಗೆ ಜೋಕು ಹೇಳಿಹೇಳಿ ಬಚ್ಚಿತ್ತೋ ಸಂಶಯ- ಹತ್ತುಹನ್ನೆರಡು ಹೇಳಿಗೊಂಡಿದ್ದವ° ಈಗ ಆರೇಳಕ್ಕೇ ನಿಲ್ಸುತ್ತ°. ಅನುಪತ್ಯಕ್ಕೆ ಅಡಿಗೆ ಮಾಡುದು ಹೇಳಿರೆ ಸುಮ್ಮನೆಯೊ- ಅವಂಗುದೆ ಬಚ್ಚುತ್ತಿಲ್ಲೆಯೊ ಪಾಪ ! ಆದರೆ ಅವ° ಹೇಳುವ ಜೋಕು ಕೇಳಿಯಪ್ಪಗ ನೆಗೆಮಾಡದ್ದೆ ಇಪ್ಪಲೆ ಎಡಿತ್ತೇಇಲ್ಲೆ.

  [Reply]

  VA:F [1.9.22_1171]
  Rating: +1 (from 1 vote)
 8. ಕೆ. ವೆಂಕಟರಮಣ ಭಟ್ಟ

  ಅಪರೂಪಕ್ಕೆ ಊರಿಂಗೆ ಬಂದರೆ ಪುತ್ತೂರಿಲ್ಲಿ ಉದೆಕಾಲಕ್ಕೆ ಹಲ್ಲೂ ತಿಕ್ಕದ್ದೆ ಬನ್ಸು,ಚಾ ಕುಡುಕ್ಕೋಂಡಿತ್ತಿದ್ದೆ. ಇನ್ನು ಅದೂ ತಪ್ಪಿತ್ತು!!!

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಗಣೇಶ ಮಾವ°ಶೇಡಿಗುಮ್ಮೆ ಪುಳ್ಳಿಅಕ್ಷರದಣ್ಣಪ್ರಕಾಶಪ್ಪಚ್ಚಿವೆಂಕಟ್ ಕೋಟೂರುನೆಗೆಗಾರ°ವಾಣಿ ಚಿಕ್ಕಮ್ಮಮಂಗ್ಳೂರ ಮಾಣಿಮುಳಿಯ ಭಾವಕಳಾಯಿ ಗೀತತ್ತೆಅನಿತಾ ನರೇಶ್, ಮಂಚಿಕೆದೂರು ಡಾಕ್ಟ್ರುಬಾವ°ಪಟಿಕಲ್ಲಪ್ಪಚ್ಚಿಸರ್ಪಮಲೆ ಮಾವ°ಅನು ಉಡುಪುಮೂಲೆಡಾಮಹೇಶಣ್ಣಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕಹಳೆಮನೆ ಅಣ್ಣvreddhiಚೆನ್ನೈ ಬಾವ°ವೇಣಿಯಕ್ಕ°ಅಜ್ಜಕಾನ ಭಾವವಿನಯ ಶಂಕರ, ಚೆಕ್ಕೆಮನೆದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ