‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 20

July 25, 2013 ರ 11:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

1.

ಸತ್ಯಣ್ಣನ ಬೇಲಿ ಕರೆಲಿ ನಾಕು ತೆಂಗಿನ ಮರ. ಬೇಲಿಂದಾಚಿಗೆ ಪಡ್ರೆ ಕೃಷ್ಣ ಭಟ್ಟನ ತೋಟ..

ಅಡಿಗೆ ಸತ್ಯಣ್ಣ ಹೋಟ್ಳಿಲಿ ಬನ್ಸ್ ತಿಂಬಗ ಎಂಕಟಣ್ಣನ ಕೆಮರದೊಳ ಸಿಕ್ಕಿದ್ದದು
ಅಡಿಗೆ ಸತ್ಯಣ್ಣ ಹೋಟ್ಳಿಲಿ ಬನ್ಸ್ ತಿಂಬಗ ಎಂಕಟಣ್ಣನ ಕೆಮರದೊಳ ಸಿಕ್ಕಿದ್ದದು

 

ಸತ್ಯಣ್ಣನ ತೆಂಗಿನಮರಂದ ಕಾಯಿ ಬಿದ್ದದು ಕೃಷ್ಣ ಭಟ್ಟನ ತೋಟಕ್ಕೆ ಆತು..

ಬೇಲಿ ನುರುಪ್ಪಿ ತೋಟಕ್ಕೋಗಿ  ಕಾಯಿ ಹೆರ್ಕಿದ್ದಕ್ಕೆ ಸತ್ಯಣ್ಣಂಗೂ ಕೃಷ್ಣ ಭಟ್ಟಂಗೂ ವಾಗ್ವಾದ ಆತು..

ವಾಗ್ವಾದಂದ ಸತ್ಯಣ್ಣನ ಮನಸ್ಸಿಂಗೂ ಬೇಜಾರ ಆತು.. ಹೋಕರ್ಕು ನಿಂಬಾಂಗೆ ಆತು..

ಸತ್ಯಣ್ಣ ಡೈರಿಲಿ ಬರದು ಮಡಿಗಿದಾ.. “ದಿನಾಂಕ 15.07.2013 ಲಾಗಾಯ್ತು ನಾನು ಮತ್ತು ನನ್ನ ಹೆಂಡತಿ, ಮಕ್ಕಳು ಮತ್ತು ವಗೈರೆ ಕೃಷ್ಣ ಭಟ್ರ ಮನಗೆ ಹೋಪದು ಖಡ್ಡಾಯವಾಗಿ ನಿಷೇಧಿಸಿದ್ದು”

ಈ ಡೈರಿ ರಂಗಣ್ಣನ ಕಣ್ಣಿಂಗೆ ಬಿದ್ದತ್ತು , ರಮ್ಯನತ್ರೆ ಕೇಳಿದಾ°“ಈ ವಗೈರೆ ಹೇಳಿರೆ ಆರು?” 😀

~~

2.

ಒಂದು ಅನುಪ್ಪತ್ಯ ತೆಗೆತ್ತು ಹೇಳಿರೆ ಎಷ್ಟು ಬಂಙ ಇದ್ದು ಅಡಿಗೆ ಸತ್ಯಣ್ಣಂಗೆ ಒಳ್ಳೆತ ಅರಡಿಗು..

ಪಾತ್ರ ಸಾಮಾನಿಂದ ತೊಡಗಿ ಹಸೆ ವಸ್ತ್ರ ಬೈರಾಸುವರೇಂಗೂ ಮನೆಯೆಜಮಾನ ತಯಾರಿ ಮಾಡೆಕು..

ಸತ್ಯಣ್ಣಂಗೆ ಹತ್ತು ದಿಕ್ಕೆ ಹೋಗಿ ಗೊಂತಿಪ್ಪದರಿಂದ ಇಂತದ್ದೇ ಆಯೇಕು ಹೀಂಗೇ ಆಯೇಕು ಹೇದು ತರ್ಕ ಇಲ್ಲೆ. ಇಪ್ಪದರ್ಲಿ ಎಜೆಸ್ಟು ಮಾಡ್ವವ ಆದ್ದರಿಂದ ಎಲ್ಲೋರಿಂಗೂ ಅಡಿಗೆ ಸತ್ಯಣ್ಣನೇ ಆಯೇಕು ಹೇದು ಆಶೆ..

ಓ ಮನ್ನೆ ಬೈಲ ಉಪ್ನಾನಕ್ಕೆ ಹೋದಲ್ಲಿ ಸತ್ಯಣ್ಣನ ಹೋಳಿಗೆ ಅಪ್ಪಗ ನೆಡು ಇರುಳು ಕಳುದು ಮತ್ತೂ ಹೊತ್ತು ಸುಮಾರು ಆಯ್ದು. ಉದಿಯಪ್ಪಾಣದು ಸುರುವಪ್ಪಲೆ ಇನ್ನೂ ಹೊತ್ತಿದ್ದು..

ಬಂದ ನೆಂಟ್ರುಗೊ ಅಲ್ಪ ಇದ್ದರಿಂದ ಇದ್ದಾಂಗೆ ಹಸೆ ಹೊದಕೆ ಜಾಗೆ ಸುದಾರಿಕೆ ಮಾಡಿ ಆಗಿದ್ದತ್ತು. .

ಇದೀಗ ಅಡಿಗೆ ಸತ್ಯಣ್ಣಂಗೆ ಹಸೆ ಹೊದಕ್ಕೆ ಕೊಡ್ವ ಸರದಿ..

ಮನೆಯೆಜಮಾಂತಿ ಹೊದಕ್ಕೆ ಹೊದಕ್ಕೆ ಹೇದು ಹುಡ್ಕುತ್ತರ ಕಂಡು ಅಡಿಗೆ ಸತ್ಯಣ್ಣ … “ಹೊದೆಕ್ಕೆಲ್ಲ ಬೇಡ ಅಕ್ಕಾ.. ಇದಾ ಓ ಆ ಒತ್ತೆ ಮಂಚ ಇತ್ತೆ ನೂಕಿಕ್ಕಿ” ಹೇದು ಸತ್ಯಣ್ಣ ತನ್ನ ಖಾಕಿ ಮಾರಾಪಿಂಗೆ ಕೈ ಹಾಕಿದ..

ಮನೆಯೆಜಮಾಂತಿಂಗೆ ಗೊಂತಾತು ಸತ್ಯಣ್ಣನ ಮಾರಾಪಿಲಿ ಓಯಿಲು ಸೀರೆ ಬೈಂದೂ! 😀

 

~~

3.

ಸತ್ಯಣ್ಣನ ಓಯಿಲು ವಸ್ತ್ರದ ಪ್ರೇಮ ಎಲ್ಲೋರಿಂಗೂ ಗೊಂತಿಪ್ಪದೆ.
ವಿಟ್ಲ ಕೇಚಣ್ಣನ ಮನೆಲಿ ಶತರುದ್ರಾಭಿಷೇಕ..

ಹತ್ತು ಸೇರಿನ ಹೋಳಿಗೆ ಆಯೆಕ್ಕು ಹೇಳಿ ಸತ್ಯಣ್ಣನೂ, ಅವನ ಸೆಟ್ಟೂ ಮುನ್ನಾಣ ದಿನವೇ ಹೋಯಿದವು..

ಅಡಿಗೆ ಶುರು ಮಾಡ್ಳೆ ಒಲೆಗೆ ಕಿಚ್ಚು ಹಾಕಿ ಆತು.

ಮನೆಯ ಅಕ್ಕ ಎಲ್ಲಾ ಸಾಮಾನು ತೆಗೆದುಮಡಗಿತ್ತು ಅಡಿಗೆ ಕೊಟ್ಟೆಗಲಿ.

ಸತ್ಯಣ್ಣ ಹುಡ್ಕಿದ°.., ಹುಡ್ಕಿದ°.. ಆದರೆ ಒಂದು ಸಾಮಾನು ಸಿಕ್ಕಿದ್ದಿಲ್ಲೆ.

ಸತ್ಯಣ್ಣ ಹೇದಾ – “ಒಂದೇ ಒಂದು ಬಾಕಿ ಆಯಿದನ್ನೇ ಅಕ್ಕಾ!.

ಎಂತರ..?

ಕೈಕೀತಳೆ..

ಅಷ್ಟಪ್ಪಗ ಮನೆಯ ಯೆಜಮಾಂತಿ “ಅದಾ ಸತ್ಯಣ್ದ ಅದೊಂದೇ ಮರದ್ದದಾ, ನಿಲ್ಲಿ..,  ಈಗ ಕೊಡ್ತೆ” ಹೇಳಿ ಒಳಾಂದ ಹಳೇ ಓಯಿಲ್‌ ವಸ್ತ್ರವ ಅಡಿಗೆ ಕೊಟ್ಟಗೆ ತಂದು ಹರಿವಲೆ ಹೆರಟತ್ತು…

ಸತ್ಯಣ್ಣ.. “ಅಕ್ಕೋ ಅದು ಓಯಿಲ್ ವಸ್ತ್ರವೋ… ಇಷ್ಟೊಳ್ಳೆ ವಸ್ತ್ರವ ಹರಿತ್ತಿರೋ.. ಬೇಡಪ್ಪ ಬೇಡ.. ಬೆಚ್ಚಂಗೆ ಹೊದದು ಮನುಗಲೆ ಇದು ಪಷ್ಟಾವುತ್ತು. ಅಣ್ಣನ ಹಳತ್ತು ಕಂಬಾಯಿ ಮಣ್ಣ ಇದ್ದರೆ, ಅಥವಾ ಹಳೆ ಚೆಂಡಿ ಹರ್ಕು ಧಾರಾಳ ಸಾಕು ಕೈ ಕೀತಳೆಗೆ. ಈ ಓಯಿಲ್‌ ವಸ್ತ್ರ ಹರಿಯೆಡಿ. ಎನ್ನ ವಸ್ತ್ರವೇ ಹರುದಾಂಗೆ ಆವುತ್ತು” ಹೇಳಿ ಸತ್ಯಣ್ಣ ಓಯಿಲ್‌ ವಸ್ತ್ರವ ಮನೆ ಯೆಜಮಾಂತಿಯ ಕೈಯಿಂದ ತೆಗದು ಚಿಟ್ಟೆಲಿ ಮಡಗಿದ° 😀

 

~~

4.

ಆಟಿ ಶುರು ಆತಿದಾ.. ಅನುಪ್ಪತ್ಯಂಗ ರಜ್ಜ ಕಡಮ್ಮೆಯೇ.. ಸತ್ಯಣ್ಣ ರಜ್ಜ ಫ್ರೀ..

ಅಪ್ಪನ ಮನೆಗೆ ಹೋಗದ್ದೆ ಸುಮಾರು ಸಮಯ ಆತು ಹೇಳಿ ಶಾರದೆ ಪರಂಚಿಗೊಂಡೇ ಇತ್ತಿದು. ಈ ಸರ್ತಿ ಆಟಿಲಿ ಹೋಪ° ಹೇಳಿ ಸತ್ಯಣ್ಣ ಸಮಾಧಾನ ಮಾಡಿತ್ತಿದ°.

ಹಾಂಗೆ ಇನ್ನೇನು ಅಂಗಿ ಹಾಯೆಕ್ಕು. ಅಷ್ಟಪ್ಪಗ ಆಚಕರೆ ರಾಮಣ್ಣ ಫೋನು..

“ಸತ್ಯಣ್ಣ, ನಾಳಂಗೆ ಇರುಳಿಂಗೆ ದುರ್ಗಾ ಪೂಜೆ ಇದ್ದು ಸಣ್ಣ ಮಟ್ಟಿಂಗೆ. ಒಂದು ಅಡಿಗ್ಗೆ ಆಯೆಕಿತ್ತನ್ನೆ” ಹೇಳಿ ಹೇಳಿದ.

ಸರಿ ಅಣ್ಣ ರಂಗಣ್ಣನ ಕಳುಸುತ್ತೆ ಹೇಳಿ ಫೋನು ಮಡಗಿದ
ವಿಷಯ ಹೇಳ್ಳೆ ರಂಗಣ್ಣಂಗೆ ಸತ್ಯಣ್ಣ ಫೋನು ಮಾಡಿದ°..

“ರಂಗಣ್ಣೋ!,  ನಾಳಂಗೆ ಇರುಳಿಂಗೆ ಆಚಕರೆ ರಾಮಣ್ಣನ ಮನೆಲಿ ದುರ್ಗಾ ಪೂಜೆ ಇದ್ದು. ನೀನೆ ಸುದರ್ಸಿಕ್ಕು.. ಆನೊಂದರಿ ಮಾವುಗಳಲ್ಲಿಗೆ ಹೋಯಿಕ್ಕಿ ಬತ್ತೆ್”

ರಂಗಣ್ಣಂಗೆ ಆಶ್ಚರ್ಯ ಆತು ಹೆಂಡತ್ತಿಯ ಅಪ್ಪನ ಮನೆಗೆ ಹೋಗದ್ದ ಜೆನ ಇಂದೆಂತಕೆ ಹೋವುತ್ತಾ ಇದ್ದವು ಹೇಳಿ ಕೇಳಿಯೇ ಬಿಟ್ಟ°- “ಮಾವ° ಎಂತಾ ಮಾವಗಳಲ್ಲಿಗೆ ಅದೂ ಆಟಿ ತಿಂಗಳಿಲ್ಲಿ. ಮಾವಗಳ ಹತ್ರೆ ಕೈ, ಬೆರಳು ಒಡ್ಡುವ ಅಲ್ಲ ಕೊರಳೊಡ್ಡುವ ಕಾರ್ಯ ಮಣ್ಣೋ ಇದ್ದೋ?!, ಹೇಂಗೂ ಚಿನ್ನಕ್ಕೆ ರೇಟು ಇಳುದ್ದು!!”
ಸತ್ಯಣ್ಣ “ಆನೆಂತ ಓ ಆ ಜೆನವೋ?!” ಹೇದು ಫೋನು ಬಿಟ್ಟ° 😀

 

[ಏವ ಜೆನ ಗೊಂತಾಯೇಕ್ಕಾರೆ –  ಓ ಇದರ ಓದಿ  http://oppanna.com/harate/aati-amavase-ungilu-sammana  ]  😀

 

~~
5.

ಅಡಿಗೆ ಸತ್ಯಣ್ಣ ಹೇದರೆ ಸಣ್ಣದಿಪ್ಪಂದಲೇ ಒಳ್ಳೆ ಬಡತನಲ್ಲಿ ಬೆಳದು ಮುಂದೆ ಬಂದವ°..

ಹೇಂಗೂ ಒಂದು ಹಂತಲ್ಲಿ ಸ್ವಾವಲಂಬಿ ಆದಮತ್ತೆ ಮದುವೆ ಮಕ್ಕೋ ಎಲ್ಲ ಆತು..

ಅಕೇರಿಯಾಣಕುಂಞಿ ರಮ್ಯನೂ ಹುಟ್ಟಿ ಶಾಲಗೆ ಹೋಪಲೆ ಸುರುವಾದ ಮತ್ತೆ ಅಡಿಗೆ ಸತ್ಯಣ್ಣ ಹೆಂಡತಿ ಮಕ್ಕಳ ಕರಕ್ಕೊಂಡು ಪುತ್ತೂರ ಜಾತ್ರಗೆ ಹೋದ್ದು ಒಂದರಿ..

ಜಾತ್ರೆ ಹೇಳಿದ ಮತ್ತೆ ಸಂತೆಗೆದ್ದೆ ಇದ್ದೇ ಇಪ್ಪದನ್ನೇ..

ಮಾರ್ಗದ ಎರಡೂ ಹೊಡೆಲಿ ಅಂಗುಡಿ ಸಾಲು ಸಾಲಾಗಿ ಇದ್ದತ್ತದ್ದು… ಬಗೆ ಬಗೆಯ ಆಟದ ಸಾಮಾನುಗಳೂ..

ಕುಂಞಿಕೂಸು ರಮ್ಯ ಅದು ಬೇಕು ಇದು ಬೇಕು ಹೇದು ತರ್ಕಮಾಡ್ಳೆ ಸುರುಮಾಡಿತ್ತು..

ಎರಡು ದಿನಲ್ಲಿ ಲಗಾಡಿ ಮಾಡ್ಳಿಪ್ಪ ಹಾಂಗಿರ್ಸಕ್ಕೆ ಪೈಸೆ ಹಾಕಿ ಹಾಳು ಮಾಡ್ಳೆ ಅಡಿಗೆ ಸತ್ಯಣ್ಣಂಗೆ ಒಪ್ಪಿಗೆ ಇಲ್ಲೆ..

ಎಂತಾರು ತರ್ಕಮಾಡ್ಸರ ಈಗ ಸಮಾಧಾನ ಮಾಡೇಕ್ಕನ್ನೇ..

ಅಡಿಗೆ ಸತ್ಯಣ್ಣ ಹೇದಾ° … ಮಗಳೋ!, ಇದೆಲ್ಲ ನವಗೆ ತೆಗವಲೆ ಇಪ್ಪದಲ್ಲ. ಅಂತೇ ನೋಡ್ಳೆ ಮಡಿಗಿದ್ದದು.. ನಾವು ತೆಗದರೆ ಮತ್ತೆ ಬಪ್ಪಲೆ ನೋಡ್ಳೆ ಸಿಕ್ಕ ಇದಾ..

ರಮ್ಯನೂ ಆತು ಅಪ್ಪಯ್ಕು ಹೇದು ತಳಿಯದ್ದೆ ಅಪ್ಪನ ಕೈ ಹಿಡ್ಕೊಂದು ಮುಂದೆ ನಡವಲೆ ಸುರುಮಾಡಿತ್ತು.

 

ಇದನ್ನೇ ನೆಂಪಿಲ್ಲಿ ಮಡಿಕ್ಕೊಂಡಿತ್ತಿದ್ದ ಎರಡು ಕಾರು ಮಡಿಕ್ಕೊಂಡಿತ್ತಿದ್ದ ಒಬ್ಬ ಕುರೆ ಭಾವಯ್ಯ° ಒಂದರಿ ದೊಡ್ಡ ಪೇಟಗೆ ಕುಟುಂಬಸಮೇತ ಟೂರ್ ಹೋದಿಪ್ಪಗ ಮಗನತ್ರೆ ಹೇದಾ°ಇದೆಲ್ಲ ನವಗೆ ತೆಗವಲೆ ಇಪ್ಪದಲ್ಲ., ಅಂತೇ ನೋಡ್ಳೆ ಮಡಿಗಿದ್ದದಾತೋ 😀

~~

6.

ಅಡಿಗೆ ಸತ್ಯಣ್ಣಂಗೆ ಹರಟೆ ಸಮಯ..

ಬಿತ್ತುರುಟಿ ಬಾವಯ್ಯ ಒಬ್ಬ ಸತ್ಯಣ್ಣನತ್ರೆ ಕೇಳಿದಾ° – “ಉತ್ತರಾಖಂಡಲ್ಲಿ ಬಂದಾಂಗಿರ್ತ ಬೆಳ್ಳ ನಮ್ಮೂರ್ಲಿ ಬಂದಿದ್ರೆ ಎಂತ ಆವ್ತಿತ್ತು ಸತ್ಯಣ್ಣ?!”

ಸತ್ಯಣ್ಣ ಹೇದ°ನಿನ್ನ ಜಾಲಿಲಿ ಅಲ್ಪ ತೆಂಗಿನಕಾಯಿ ಸೇರ್ತಿತ್ತೋದು! 😀

~~

7.

ಕಾಯಿಕಡವ ರಂಗಣ್ಣಂಗೆ ಸೆಮ್ಮ-ಶೀತ ಹೇದೊಂಡು ಅಡಿಗೆ ಸತ್ಯಣ್ಣನೊಟ್ಟಿಂಗೆ ರಂಗಣ್ಣ° ಬಂದ್ಸು ಕಂಡತ್ತಿಲ್ಲೆ ಕೇಕಣಾಜೆ ಅನುಪ್ಪತ್ಯಕ್ಕೆ..

ಬಾವ ಕೇಟವು “ರಂಗಣ್ಣ° ಇಲ್ಯೋ ಇಂದು”?!

ಸತ್ಯಣ್ಣ° ಹೇದ° – ‘ಶೀತ-ಸೆಮ್ಮ’

ಶೀತಸೆಮ್ಮ ಆದರೆ ಕಾಯಿ ಕಡವಲಾಗ ಹೇದಿದ್ದೋ?! – ಬಾವನ ಪ್ರಶ್ನೆ.

ಸತ್ಯಣ್ಣ° ಹೇದಾ°ಎಂಗೊ ಅಡಿಗ್ಗೆ ಸುತ್ತುವ ಮುಂಡು ನೋಡಿರೇ ಅಡಿಗೆಯೋರು ಕ್ಲೀನ್ ಸಾಲ ಹೇಳ್ತವು ಬಾವ.., ಇನ್ನು ಸೆಮ್ಮಿಗೊಂಡು ಕಾಯಿ ಕಡದರೆ!! 😀

~~

8.

ಅಂದು ಅನುಪ್ಪತ್ಯಕ್ಕೆ ಹೋದಲ್ಲಿ ಅಡಿಗೆ ಸತ್ಯಣ್ಣ ಅದೆಂಸ್ಸೋ ಅಂದು ಕೊಶಿಲಿ ಇತ್ತಿದ್ದಪ ..

ಹೋಮಕ್ಕೆ ಕೆಂಡ ಕೊಂಡೋಪಲೆ ಮನೆಯೆಜಮಾಂತಿ ಬಾಯಡೆ ಹಿಡ್ಕೊಂಡು ಅಡಿಗೆ ಕೊಟ್ಟಗ್ಗೆ ಬಂತು..

ಬಟ್ಟಮಾವನ ಮಂತ್ರ ಅಡಿಗೆಕೊಟ್ಟಗೆ ವರೇಂಗೆ ಕೇಳುತ್ತುದೇ..

ಮನೆಯೆಜಮಾಂತಿಗಂದು ಖರ್ಮ.. ಶೀತ.

ಕೆಂಡತೆಗವಲೆ ಮನೆಯೆಜಮಾಂತಿ ಒಲೆಬುಡಕ್ಕೆ ಬಗ್ಗಿಯಪ್ಪಗ ಆ..ಕ್ಷಿ ಹೇಳಿತ್ತು..

ಆಚಿಗೆ ಸೌಟಿಲ್ಲಿ ಡಬ್ಬಿಂದ ಸಕ್ಕರೆ ತೋಡಿಗೊಂಡಿದ್ದ ಸತ್ಯಣ್ಣ° ಹೇದಾ°ಗೆಣಮೆಣಸು ಕಶಾಯ ಸ್ವಾಹ , ಶೀತಾಯೈ ಇದಂ ನಮಮ 😀

~~

9.

ಅಡಿಗೆ ಸತ್ಯಣ್ಣನ ಮನಗೆ ಅಡಿಗೆ ಪಟ್ಟಿ ಮಾಡ್ಸಲೆ ಬಂದ ಬಾವಯ್ಯ ಅಡಿಗೆ ಪಟ್ಟಿ ನೋಡಿ- “ಯಬೋ.. ಅಲ್ಪ ಆತಿದು ಹೇದು, ರಜಾ ಕಮ್ಮಿ ಮಾಡ್ಳೆ ಎಡಿಯದೋ” ಹೇದು ಕೇಳಿದ°

ಅಡಿಗೆ ಸತ್ಯಣ್ಣ ಹೇದ° – ಏಕಾಗದ್ದೆ , ಬೇಡದ್ದರ ಎಲ್ಲ ತೆಗದರಾತು. ಇಷ್ಟು ಬಗೆ ಆಯೇಕು ಹೇದು ನಿಂಗಳದ್ದೆಂತ ಹರಕ್ಕೆ ಇದ್ದೋ?!

ಬಂದ ಬಾವಯ್ಯ ಹೇದ – “ಇಲ್ಲೆಪ್ಪ , ಆನಂತೇ ಹೇದ್ದಷ್ಟೇ”

ಸತ್ಯಣ್ಣನೂ ಹೇದ° – “ಆತಪ್ಪ, ಆನುದೇ ಅಂತೇ ಹೇದ್ದಷ್ಟೇ” 😀

~~

10.

ಬೈಲಿಲಿ ಬಂದ ‘ಚೈನು- ಭಾಗ ಒಂದು’ ಅಡಿಗೆ ಸತ್ಯಣ್ಣನೂ ಓದಿ ಆಯ್ದು..

ಕತೆ ಎಷ್ಟು ಪ್ರಭಾವ ಆಯ್ದು ಹೇಳಿರೆ ಸತ್ಯಣ್ಣಂಗೆ ಅದರ ಓದಿದ ಮತ್ತೆ ತಲೆಲಿ ಅದೇ ಕಾಣ್ತಾ ಇದ್ದಡ! ಕಾಕಿ ಚಡ್ಡಿ ಬೆಳಿ ಬನಿಯನು ಆರಾಯ್ಕು!!

ಮನ್ನೆ ದೊಡ್ಡಬಾವನಲ್ಲಿ ದೊಡ್ಡಮಾವನ ಮಾಸಿಕಕ್ಕೆ ಹೋದ ಅಡಿಗೆ ಸತ್ಯಣ್ಣನತ್ರೆ ದೊಡ್ಡಬಾವ° ಕೇಟವಡ – ಹೇಂಗಾಯ್ದು ಕತೆ ಸತ್ಯಣ್ಣ?!

ಸತ್ಯಣ್ಣ° ಹೇದಾ° “ಎಂತ ಮಾರಾಯಾ.., ರಮ್ಯನ ಹಿಡುದು ಮಡಿಗಿ ಕಾಲಿಲಿ ಮನಿಶಿ ಮದ್ದು ಕುಡಿಶಿದ್ದೂ ನೆಂಪಾತು” 😀

 

~~

ಸತ್ಯಣ್ಣನ ಮೋರೆಪುಟ ಇಲ್ಲಿದ್ದು

….   😀 😀 😀  ….

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. swathi

  ಭಾರಿ ಲೈಕ ಆಯಿದು. ಹಾಂಗೆ ಬನ್ಸ್ ತಿಂಬ ಪಟ ರೈಸಿದ್ದು!

  [Reply]

  VA:F [1.9.22_1171]
  Rating: +2 (from 2 votes)
 2. ಎ೦ಕೆ.ಎಸ್

  ಸತ್ಯಣ್ಣನ ತೆಂಗಿನಮರಂದ ಕಾಯಿ ಬಿದ್ದದು ಕೃಷ್ಣ ಭಟ್ಟನ ತೋಟಕ್ಕೆ ಆತು—–ಪಾರಿಜಾತ ಹೂ ಗಿಡದ ಹತ್ತರೆ ಇಪ್ಪ ಕಾಯಿ ಮರವೇ ಆಗಿರೆಕ್ಕು ಇದು! ಇಲ್ಲದ್ರೆ ಹೀ೦ಗೆ ಆಕ್ಕಾ ,.

  [Reply]

  VA:F [1.9.22_1171]
  Rating: +2 (from 2 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಸತ್ಯಣ್ಣ ಹೇಳಿದ ಸಾಮಾನಿನ ಪಟ್ಟಿ ವಿಷಯ ಲಾಯ್ಕ ಆಯಿದು.ಇದು ತಮಾಶೆಯೂ ಅಪ್ಪು;ಕಾರ್ಯವೂ ಅಪ್ಪು.

  [Reply]

  VA:F [1.9.22_1171]
  Rating: +3 (from 3 votes)
 4. Sandesh

  sathyannange sathyannane sati..

  [Reply]

  VA:F [1.9.22_1171]
  Rating: +2 (from 2 votes)
 5. ಮಾನೀರ್ ಮಾಣಿ
  ಮಾನೀರ್ ಮಾಣಿ

  ಅಪ್ಪು ಈ ವೈಗೈರೆ ಆರು ಮಾರ್ರೇ.. ಅನೂದೇ ಸುಮಾರು ಸರ್ತಿ ಕೇಳಿದ್ದೆ.. 😉
  ರೈಸಿದ್ದು ಭಾವೋ…

  [Reply]

  VN:F [1.9.22_1171]
  Rating: +2 (from 2 votes)
 6. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಸತ್ಯಣ್ನಂಗುದೆ ಚೈನಿನ ಕತೆ ತಲೆಲಿ ತಿರುಗಿದ್ದು ಲಾಯಕಾಯಿದು. ಸತ್ಯಣ್ಣ ನಮ್ಮ ಬೈಲಿನ ಅಭಿಮಾನಿ ಹೇಳುವುದು ಕೊಶಿ ಕೊಡ್ತು. ಅವನ ಓಯಿಲು ಸೀರೆ ಪ್ರೀತಿ ಮೆಚ್ಚೆಕಾದ್ದೆ.

  [Reply]

  VA:F [1.9.22_1171]
  Rating: +1 (from 1 vote)
 7. ಮುಣ್ಚಿಕಾನ ಭಾವ

  ಹ್ಹ… ಹ್ಹಾ.. ಹ್ಹ… ಹ್ಹಿ.. ಹ್ಹೀ.. ಹ್ಹು… ಹ್ಹೂ…
  ಹ್ಹೆ.. ಹ್ಹೆ.. ಹ್ಹ್ಹೇ… ಹ್ಹೊ.. ಹ್ಹೋ.. ಹ್ಹೌ….
  ಹ್ಹಂ… ಹ್ಹ:… ಹ್ಹ…. ಹ್ಹ….
  ಯಬೋ ನೆಗೆ ಮಾಡಿ ಸಾಕಾತು… 😀 😀 😀

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವನೀರ್ಕಜೆ ಮಹೇಶಕೇಜಿಮಾವ°ಡಾಮಹೇಶಣ್ಣಜಯಗೌರಿ ಅಕ್ಕ°ಪೆರ್ಲದಣ್ಣವೇಣಿಯಕ್ಕ°ಡಾಗುಟ್ರಕ್ಕ°ಮಾಲಕ್ಕ°ಯೇನಂಕೂಡ್ಳು ಅಣ್ಣಕಜೆವಸಂತ°ದೊಡ್ಡಮಾವ°ಶ್ರೀಅಕ್ಕ°ಶಾಂತತ್ತೆಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿವಿಜಯತ್ತೆಪ್ರಕಾಶಪ್ಪಚ್ಚಿಗೋಪಾಲಣ್ಣಕಳಾಯಿ ಗೀತತ್ತೆದೊಡ್ಡಭಾವಶ್ಯಾಮಣ್ಣಪುಟ್ಟಬಾವ°ರಾಜಣ್ಣವಿನಯ ಶಂಕರ, ಚೆಕ್ಕೆಮನೆವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ