Oppanna.com

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 23 ('ಅಟ್ಟಿನಳಗೆ' ವಿಶೇಷಾಂಕ)

ಬರದೋರು :   ಚೆನ್ನೈ ಬಾವ°    on   15/08/2013    16 ಒಪ್ಪಂಗೊ

ಚೆನ್ನೈ ಬಾವ°

1
ಅಡಿಗೆ ಸತ್ಯಣ್ಣ ಓ ಮನ್ನೆ ಮಾಣಿಮಠಕ್ಕೆ ಹೋದ್ದು ಗೊಂತಿದ್ದನ್ನೇadige satyanna 5
ಅಂದು ಅಡಿಗೆ ಸತ್ಯಣ್ಣ ಮಾಂತ್ರ ಅಲ್ಲ, ರಮ್ಯಾ ಶಾರದೆ ರಂಗಣ್ಣನೂ ಒಟ್ಟಿಂಗೆ ಇತ್ತಿದ್ದವು.
ರಮ್ಯ ಬಂತು ಹೇದು ಗೊಂತಾಗಿಯೋ ಏನೋ… ಜೆನ ಮಾತ್ರ ಅಂದು ಏವುತ್ರಾಣಂದ ಹೆಚ್ಚಿಗೆ !
ಸತ್ಯಣ್ಣ ಮಧ್ಯಾಂತ್ರಿಗಿ ಅಡಿಗೆ ಕೊಟ್ಟಗೆಲಿ ಅಡಿಗೆಯೋರತ್ರೆ ಲೋಕಾಭಿರಾಮ ಮಾತಾಡಿಗೊಂಡಿತ್ತಿದ್ದ°. ಬೆನ್ನಾರೆ ರಂಗಣ್ಣನೂ ಇತ್ತಿದ°.
ಸುಮಾರು ನಾಕು ಕಾಲು ಗಂಟೆಪ್ಪಗ ಎರಡು ಬೆಳಿಶಾಲು ಎರಡು ಅರಶಿನ ಶಾಲು ಬಾವಂದ್ರು ಬಂದು ಅಟ್ಟಿನಳಗೆ ಮುಚ್ಚಿಮಡಿಗ್ಯೊಂಡಿದ್ದರ ಹೊತ್ತೊಂಡೋಪದು ಕಂಡತ್ತು ರಂಗಣ್ಣಂಗೆ.
ರಂಗಣ್ಣ ಹೇದ° – ಗುರಿಕ್ಕಾರ್ರ ಸಮಾವೇಶ ಆದ ಕಾರಣ ಇಂದು ಕೊಟ್ಟಿಗೆ ಪ್ರಸಾದ ಗುರುಗೊ ಕೊಡ್ತವೋದು!
ಸತ್ಯಣ್ಣ ಹೇದ° – ಅಪ್ಪಪ್ಪು, ಬೇಗ ಹೋಗು.. ಹಲಸಿನಣ್ಣು ಕೊಟ್ಟಿಗೆ ಅಲ್ಲ, ಗುರುಗೊ ಶುದ್ದಿಕೊಟ್ಟಿಗೆ ಬಿಡ್ಸಿ ಕೊಡ್ತವೀಗ   😀
**
2
ಗುರುಗಳ ಭೇಟಿಗೂ ಆತು, ಬೈಲಿನೋರ ಕಾಂಬಲೂ ಆತು ಹೇದು ಸತ್ಯಣ್ಣ ಓ ಮನ್ನೆ ಮಾಣಿ ಮಠಕ್ಕೆ ಹೆರಟದದಾ.
ಆದಿತ್ಯವಾರ ಆದ ಕಾರಣ ರಮ್ಯಂಗೆ ಕೊಲೇಜಿಂಗೆ ರಜೆ ಅನ್ನೆ, ರಮ್ಯ ಹೋವ್ತ ಕಾರಣ ರಮ್ಯನ ಕೋಲೇಜುಮೆಟ್ಟುಗಳೂ ಬಂದಿತ್ತವು ಮಾಣಿಮಠಕ್ಕೆ.
ಸತ್ಯಣ್ಣ ಒಂದಿಕ್ಕೆ ಇತ್ತಿದ್ದ° , ರಮ್ಯ ಅದರ ಪ್ರೆಂಡುಗಳೊಟಿಂಗೆ ಮತ್ತೊಂದಿಕ್ಕೆ ಇತ್ತಿದ್ದು.
ಹಾಂಗೆ ಎಂತಕೋ ಒಂದಾರಿ ಮೊಬಿಲಿಲಿ ಕುಟ್ಟಿ, “ಎಲ್ಲಿದ್ದೆ  ನೀನು ಇತ್ತೆ  ಬಾ” – ಹೇದ° ಸತ್ಯಣ್ಣ°.
ಗ್ರೇಶಿದಾಂಗೆ ಆತು. ರಮ್ಯನೂ ಅದರ ಕ್ಲಾಸುಮೇಟುದೆ ಒಟ್ಟಿಂಗೆ ಬಂದವು. ಸತ್ಯಣ್ಣ ಆ ಹೊತ್ತಿಲಿ ಬೈಲ ಪುಸ್ತಕದ ಕೌಂಟರಿಲಿ ಒಂದು ಖಾಲಿ ಕುರ್ಚಿಲಿ ಕೂದೊಂಡಿತ್ತಿದ್ದ.
ಅಲ್ಲಿ ಅಟ್ಟಿ ಮಡಗಿದ ಪುಸ್ತಕಂಗಳ ಕೈಲಿ ತೆಕ್ಕೊಂಡು ರಮ್ಯ ನೋಡ್ಲೆ ಶುರು ಮಾಡಿತ್ತು. “ಒಪ್ಪಣ್ಣನ ಒಪ್ಪಂಗೊ” ನೋಡ್ಯೊಂಡು ಅಲ್ಲೇ ಕೂದ ಮೀಸೆ ಇಲ್ಲದ್ದ ಭಾವನತ್ರೆ ರಮ್ಯ ಕೇಟತ್ತು, “ಒಪ್ಪಂಗೊ” ಹೇಳಿರೆ ಎಂತ ಅರ್ಥ.?”
ಆ ಮೀಸೆ ಮಡುಗದ್ದ ಭಾವ°, ” ಉಮ್ಮ್….ಮ್ಮ…” ಹೇಳಿ ಶುರು ಮಾಡ್ವಾಗ, ಹತ್ತರೆ ಕೂದ ಸತ್ಯಣ್ಣ ಎದ್ದು, “ಬಾ ಮಗಳೆ, ಓ ಅಲ್ಲಿ ಗೋ – ತುಲಾಭಾರ ಆವುತ್ತರ ನೋಡುವೊ° ನಾವು” – ಹೇದು ರಮ್ಯನ ಕರಕ್ಕೊಂಡು ಅತ್ತ ನಡದ° 😀
**
3
ಮಧ್ಯಾನ ಊಟ ಮುಗುಶಿ ಒಂದು ಗಳಿಗೆ ಕೂರೆಕ್ಕು ಹೇದು ಗ್ರೇಶಿ ಬೈಲ ಕೌಂಟರಿಂಗೆ ಸತ್ಯಣ್ಣ ಬಂದು ಕುರ್ಶಿ ಎಳದು ಕೂದ ಒರಕ್ಕು ತೂಗ್ಯೊಂಡು.
ಬೈಲಿನೋರು ಊಟಕ್ಕೆ ಹೆರಡೊಗ, ಸತ್ಯಣ್ಣನ ಎಬ್ಬುಸಿ ಹೇದವು – “ಇದಾ ಸತ್ಯಣ್ಣ, ಎಂಗೊ ಪಕ್ಕ ಒಂದು ಮುಷ್ಟಿ ಉಂಡಿಕ್ಕಿ ಬತ್ತೆಯೊ. ನಿಂಗೊ ಇಲ್ಲಿ ಕೂದೊಂಡಿರಿ. ಪುಸ್ತಕದ ಹಿಂದಾಣ ಹೊಡೆಲಿ ಪ್ರಿಂಟು ಮಾಡಿದ ಕ್ರಯಂದ ಹತ್ತು ರುಪಾಯಿ ಕಮ್ಮಿ ಹೇಳಿರೆ ಆತು. ಯೇವುದು ಎಷ್ಟು ಹೋತು ಹೇದು ಇಲ್ಲಿ ಗುರ್ತ ಮಾಡಿಗೊಳ್ಳಿ. ಪೈಸೆ ಹಾಕುಲೆ ಇದಾ ಈ ಸಂಚಿ ಇದ್ದು.”

” ಓ, ಧಾರಾಳ.ಆನು ನೋಡಿಗೊಂಬೆ. ನಿಂಗೊ ಸಾವಕಾಶ ಉಂಡಿಕ್ಕಿ ಬನ್ನಿ” ಹೇದು ಅವರ ಕಳುಗಿದ.

ಮುಕ್ಕಾಲು ಘಂಟೆ ಕಳುದು ಭಾವಂದ್ರು ವಾಪಸು ಬಂದವು.

“ಹೇಂಗೆ ಸತ್ಯಣ್ಣ, ವ್ಯಾಪಾರ ?.ಪುಸ್ತಕಂಗೊ ಎಷ್ಟು ಹೋತು.?”

“ನಾಕು ಜೆನ ಭಾವಂದ್ರು ಬಂದು ಪುಸ್ತಕ ಬೈಂಡು ತಿರುಗಿಸಿ ನೋಡಿ ಮಡಗಿದವು. ಅಷ್ಟೇ ಅಕ್ಕಂದ್ರು ಬಂದು ಪುಸ್ತಕ ಬಿಡುಸಿ ಪುಟ ತಿರುಗಿಸಿ ತಿರುಗಿಸಿ ಓದಿದ ಹಾಂಗೆ ಮಾಡಿ ಲಾಯಿಕಿದ್ದು ಭಾವ ಹೇಳ್ಯೊಂಡು ವಾಪಾಸು ಕೊಟ್ಟವು.,  ಸೇಲ್ ಒಂದೂ ಆಯಿದಿಲ್ಲೆ, ಆನು ಹತ್ತು ಸರ್ತಿ ಪೈಸೆ ಎಣುಸಿ ಮಡಗಿದೆ. ಎಲ್ಲ ಸರಿ ಇದ್ದು ಭಾವ” – ಹೇದು ಕುರ್ಶಿ ಕಾಲಿ ಮಾಡಿದ° ಸತ್ಯಣ್ಣ° 😀
**
4
ಅಡಿಗೆ ಸತ್ಯಣ್ಣ ಮಾಣಿ ಮಠಕ್ಕೆ ಹೋಗಿದ್ದರೂ, ಬಾಕಿದ್ದೋರ ಹಾಂಗೆ ಸಭೆಲಿ ಇಡೀ ತಿರಿಗ್ಯೊಂಡು ಕೂಯ್ದನಿಲ್ಲೆ..
ಹೋದವ° ಒಳ ಕೂದೊಂಡು ಶ್ರದ್ಧೆಲಿ ಒಂದಿಷ್ಟು ರಾಮ ಜೆಪವನ್ನೂ ಮಾಡಿದ್ದನಡ..
ಸತ್ಯಣ್ಣ ಹೋದ್ದು ಹಲವು ಜೆನಕ್ಕೆ ಕಂಡಿದ್ದರೂ ಕೆಲವು ಜೆನಕ್ಕೆ ಕಂಡಿದೇ  ಇಲ್ಲೇಡಾ..!
ಅದರ್ಲಿಯೂ ಒಬ್ಬ° ಬಗ್ಗಿ ಕೂದರೇ ಎಕ್ಕಳ್ಸಿ ನೋಡ್ತಾಂಗೆ ಕಾಣ್ತ ಮಾಣಿಗೆ ಸತ್ಯಣ್ಣ ಬಂದದೇ ಗೊಂತಿಲ್ಲೇಡ 
ಈ ಸುದ್ದಿ ಸತ್ಯಣ್ಣಂಗೆ ಗೊಂತಾದಪ್ಪಗ ಸತ್ಯಣ್ಣ ಹೇದ°.. “ಅವ° ಎಲ್ಲಿ ಓಂಗ್ಯೊಂಡಿತ್ತಿದ್ದನೋ ಏನೋ” 😀
**
5
ಮಧ್ಯಾಹ್ನ ಊಟದ ಹೊತ್ತಿಲಿ ಸತ್ಯಣ್ಣ ಬೈಲ ಕೌಂಟರಿಲಿ ಕೂದೊಂಡಿಪ್ಪದರ ಕಂಡು ಪೆರ್ಲ ಭಾವ° ಮಾತಾಡ್ಸಿಗೊಂಡು ಬಂದವು.
ಸತ್ಯಣ್ಣ° ಬೈಲ ಪುಸ್ತಕಂಗಳ ಬಗ್ಗೆ ಕೊರದ್ದೇ ಕೊರದ್ದು. ಹಿಂದಾಣ ಹೊಡೆಲಿ ಪರದೆ ಮೇಗಂದ ಅಂಟುಸಿದ ಬೇನರಿನ ಸತ್ಯಣ್ಣ ನೋಡಿದ್ದನಿಲ್ಲೆ.
ಪೆರ್ಲ ಭಾವ° ಕೇಟ° – “ಹೋ, ಅಂಬಗ ಸತ್ಯಣ್ಣ , ಈ ಅಟ್ಟಿನಳಗೆ ಬರದ್ಸು ನೀನೆಯೋ..?”

“ಅಲ್ಲ…ಅಲ್ಲ. ಅದು ಅಡಿಗೆ ಪುಸ್ತಕ ಅಲ್ಲ ಭಾವ” – ಹೇದ ಸತ್ಯಣ್ಣ°.

“ಸರಿ..ಸರಿ. ಅದು ಕೊಟ್ಟಿಗೆ, ಗೆಣಸಲೆ, ಉಂಡೆ, ಇಡ್ಲಿ ಇತ್ಯಾದಿ ಅಟ್ಟಿನಳಗೆಲಿ ಮಾಡ್ತ ಪಾಕಂಗಳ ವಿವರಣೆಯ ನೀನು ಬರದ್ಸು ಹೇದು ಗ್ರೇಶಿದ್ದಿದಾ.!” –  ಪೆರ್ಲ ಭಾವ° ಅಷ್ಟು ಹೇಳಿಕ್ಕಿ ಆಚಿಕೆ ಮೋರೆ ತಿರುಗಿಸಿ ಮುಂದೆ ನಡದ°. 😀
**
6
ಮನ್ನೆ ಮಾಣಿಯ ಹತ್ರೆ ಒಂದು ಅನುಪ್ಪತ್ಯಲ್ಲಿ ಸತ್ಯಣ್ಣ ಉದೆಕಾಲಕ್ಕೆ ಉಗ್ರಾಣಲ್ಲಿ ಎಂತರ್ನೋ ಹುಡುಕ್ಕುಸ್ಸು ಕಂಡತ್ತು .
ಮನೆ ಯೆಜಮಾನ ಕೇಳಿದ° – ಎಂತರ ಸತ್ಯಣ್ಣ ಹೀಂಗೂ ಹುಡುಕ್ಕುಸ್ಸು ?!
ಸತ್ಯಣ್ಣ ಹೇಳಿದ° – ನಿನ್ನೆ ಕಸ್ತಲೆಪ್ಪಗ ತೊಳದು ಮಡಗಿದ ಅಟ್ಟಿನಳಗೆ ಎಲ್ಲಿ ಮಾಯ ಆತು ಹೇಳಿ .
ಯೆಜಮಾನ ಹೇಳಿದ – ಅದು ಬೈಲಿನ ”ಅಟ್ಟಿನಳಗೆ ” ಬಿಡುಗಡೆಗೆ ಜವ್ವನಿಗರು ಕೊಂಡು  ಹೋಯಿದವು, ಈಗ ತಕ್ಕು.
ಸತ್ಯಣ್ಣ ಹೇಳಿದ°- “ಸದ್ಯ ಹುಳಿ  ಬಂದ ಹಿಟ್ಟಿನ ಪಾತ್ರವ ಇಲ್ಲಿಯೇ ಬಾಕಿ ಮಡಗಿದ್ದವನ್ನೇ , ದೋಸೆ ಆದರೂ ಎರಕ್ಕೊಂಬಲಕ್ಕು” 😀
**
7
ಅಡಿಗೆ ಸತ್ಯಣ್ಣಂಗೆ ಓ ಮನ್ನೆ ಕಾನಾವು ಕಣ್ಣಿನ ಡಾಕುಟ್ರಲ್ಲಿ ಸಣ್ಣ ಒಂದು ಅನುಪ್ಪತ್ಯ
ದೊಡ್ಡ ಅನುಪ್ಪತ್ಯ ಇದ್ದರೇ ಚಪ್ಪಾತಿ , ಪೂರಿ , ದೋಸೆ ಆಯೇಕ್ಕಲ್ಲಿ!. , ಇನ್ನು ಸಣ್ಣ ಅನುಪ್ಪತ್ಯ ಹೇಳಿರೆ ಕೇಳೇಕೋ!
ಉದಿಯಪ್ಪಗಂಗೆ ಕೊಟ್ಟಿಗೆ ಸಾಂಬಾರು ರಸಾಯನ ಹೇಳಿತ್ತಿದ್ದವು
ಸತ್ಯಣ್ಣನೂ ರಂಗಣ್ಣನೂ ಮುನ್ನಾಣ ದಿನವೇ ಹೋಯ್ದವು ಸ್ವೀಟೂ ಆಯೇಕು , ಕೊಟ್ಟಿಗ್ಗೆ ಕಡದೂ ಆಯೇಕು ಹೇದು
ರಂಗಣ್ಣ ಕಡದೆದ್ದಿಕ್ಕಿ ಸತ್ಯಣ್ಣನತ್ರೆ ಕೇಟ° ಒಳಂದ ಅಟ್ಟಿನಳಗೆ ಕೇಳಿ ತಂದು ಇಲ್ಲಿ ಮಡುಗೆಕೋ ಮಾವ°?
ಸತ್ಯಣ್ಣ° ಹೇದ° – ಇದು ಲಾಯಕಾತೀಗ ನಿನ್ನ ಪಂಚಾತಿಗೆ. ‘ಅಟ್ಟಿನಳಗೆ’ ಮನ್ನೆ ಮಾಣಿ ಮಠಲ್ಲಿ ಬಿಡುಗಡೆ ಆಯ್ದು.  ನೀ ಈಗ ಒಳ ಹೋಗಿ ಕಾನಾವಕ್ಕನತ್ರೆ ಅಟ್ಟಿನಳಗೆ ಕೊಡಿ ಹೇತುಕಂಡ್ರೆ ‘ಅಟ್ಟಿನಳಗೆ’ ಪುಸ್ತಕ ತೆಗದು ಕೊಡ್ಳೆ ಇದ್ದು ನೋಡು :D
**

***  😀 😀 😀  ***

16 thoughts on “‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 23 ('ಅಟ್ಟಿನಳಗೆ' ವಿಶೇಷಾಂಕ)

  1. ಅದಾರು ಮೀಸೆ ಮಡುಗದ್ದ ಭಾವ°? 😉
    ಇನ್ನು ಸತ್ಯಮಾವ°ನ ಎನಗೆ ಮಾಣಿ ಮಠಲ್ಲಿ ಕಂಡಿದಿಲ್ಲೆ ಹೇಳಿಕ್ಕಲೆ ಗೊಂತಿಲ್ಲೆ…
    ಛೇ! ಮಾತಾಡ್ಸಿಕ್ಕಲೆ ಆತಿಲ್ಲೆನ್ನೆ! 🙁

  2. ಅಟ್ಟಿನಳಗೆ ವಿಶೇಷ ವಿಶೇಷವಾಗಿ ಬಯಿಂದು. ಎಲ್ಲ ಜೋಕುಗಳೂ ಕೊಶಿ ಕೊಟ್ಟತ್ತು. ಮಾಣಿಲಿ ಒಪ್ಪಣ್ಣನ ಕೌಂಟರಿಲ್ಲಿ ಸತ್ಯಣ್ಣನ ಸುದರಿಕೆ ಕಂಡು ಸಂತೋಷ ಆತು. ಮೀಸೆ ತೆಗದ ಬಾವನ ಹತ್ರೆ ರಮ್ಯ ಮಾತಾಡ್ಳೆ ಸುರು ಮಾಡಿ ಅಪ್ಪಗ ಸತ್ಯಣ್ಣ ಎಳಕ್ಕೊಂಡು ಹೋದ್ದು ಕೇಳಿ ನೆಗೆ ಬಂದು ತಡೆಯ.

  3. ಅಂಬಗ ಸತ್ಯಣ್ಣಂಗೆ “ಅಟ್ಟಿನಳಗೆ” ತುಂಬ ಹಿಡ್ಸಿದ್ದು ಹೇಳಿ ಆತು, ಸಂತೋ….ಓಓಓಓಓಷಾತು, ಸತ್ಯಣ್ಣ.

  4. ಸತ್ಯಣ್ಣ ಅದಿರಳಿ ನಿಂಗ ಒಂದು ಪುಸ್ತಕ ತೆಕ್ಕೊಂಡಿರಾ..ಇನ್ನು ಕೆಲವು ಜನ ಸತ್ಯಣ್ಣನ ಹತ್ತರೆ ಕೇಳುಗು ಅಟ್ಟಿನಳಗೆ ಹೇಳ್ತ ಪುಸ್ತಕಲ್ಲಿ ನಿಂಗಳ ಅಡುಗೆ ಎಂತಾರು ಇದ್ದೋ ಹೇಳಿ..

  5. ಅಡಿಗೆ ಸತ್ಯಣ್ಣನ ಜೋಕುಗ ಈಗ ಎನಗೆ ತುಂಬಾ ಇಷ್ಟ ಆಯಿದು ,ಸುರು ಸುರು ವಿನ್ಗೆ ಎನಗೆ ಓದುವ ರಜ್ಜ ಅಯೋಮಯ ಆಯಿಕ್ಕೊಂಡು ಇತ್ತು ,ಈಗ ಸತ್ಯಣ್ಣ ಹೋಪ ದಾರಿ ಗೊಂತಾತು !ತುಂಬಾ ಲಾಯಕ್ಕು ಇದ್ದು ,ಕೆಲವೆಡೆ ವಾಸ್ತವದ ವಿಡಂಬನೆ ,ಕೆಲವೆಡೆ ರಜ್ಜ ಬೆಶಿ ಎಲ್ಲ ಮನಸ್ಸಿನ್ಗೆ ಹತ್ತರೆ ಆವುತ್ತು ,ಆನು ಅಟ್ಟಿನಳಗೆ ಒಳ ಬಿದ್ದು ಬಿಟ್ಟಿದೆ ಒಳ್ಳೆ ಸಹೃದಯ ಹಾಸ್ಯವ ಕೊಟ್ಟದಕ್ಕೆ ಧನ್ಯವಾದಂಗ -ಲಕ್ಷ್ಮೀ ಜಿ ಪ್ರಸಾದ

  6. ‘ಅಟ್ಟಿನಳಗೆ ವಿಶೇಷಾಂಕ’ ಭಾರೀ ರೈಸಿದ್ದು . ಸತ್ಯಣ್ಣಾ, ಎಷ್ಟಾದರೂ ನಿಂಗಳ ಕಾರ್ಯಕ್ಷೇತ್ರದ ಪರಿಕರವೇ ಅಲ್ಲದ.
    ಚೆನ್ನೈಭಾವ, ಅಟ್ಟಿನಳಗೆಯ ಒಳ ಹದವಾಗಿ ಬೆಂದ ಕೊಟ್ಟಿಗೆಯ ಒಟ್ಟಿಂಗೆ ಹಾಸ್ಯದ ರಸಾಯನವೂ ಸಿಕ್ಕಿತ್ತದ – ಎರಡೂ ಬಹು ರುಚಿಯಾಯಿದು- ಅಭಿನಂದನೆಗೊ.

  7. 🙂 🙂 ಛೇ…. ಆ ದಿನ ಆನುದೇ ಮಾಣಿಮಠಕ್ಕೆ ಬಂದಿತ್ತಿದ್ದೆ…. ಆದರೆ ಮುಳಿಯದಣ್ಣ ಅಡಿಗೆ ಸತ್ಯಣ್ಣನ ಪರಿಚಯವೇ ಮಾಡ್ಸಿದ್ದವಿಲ್ಲೆ.. 🙂 🙂 ಕಂಡಿದ್ದರೆ ಕವನ ಕೊರವಲಾವುತ್ತಿತ್ತನ್ನೇ…

    1. ಶೈಲಜಕ್ಕ ,
      ನಿ೦ಗ ಬ೦ದಪ್ಪಗ ಅವನನ್ನೇ ಹುಡುಕ್ಕಿದ್ದು ,ಗುರ್ತ ಮಾಡ್ಸುವ° ಹೇಳಿ. ಅವ° ಮೇಲಾರಕ್ಕೆ ಕೊರವಲೆ ಸೇರಿತ್ತಿದ್ದ°ಡಾ !

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×