‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 27

September 12, 2013 ರ 11:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

1.

ಅಡಿಗೆ ಸತ್ಯಣ್ಣಂಗೆ ಕೆಲವೆಲ್ಲ ಹತ್ರೆಂದ ಕಂಡ್ರೆ ಆವೇಶ ಬಪ್ಪದಿದ್ದು. ಹಾಂಗಾಗಿ ಹೆಚ್ಚಿಗೆ ಎಂತರನ್ನೂ ಹತ್ರೆ ತಲಗೆ ಹಾಕಿಯೊಂಬಲೆ ಇಲ್ಲೆ.adige satyanna 5

ಮೊನ್ನೆ ಎಲ್ಲಿಂದಲೋ ಅನುಪ್ಪತ್ಯ ಮುಗುಶಿ ಬಪ್ಪಗ ಸರಕಾರದ ಸಾಧನೆಯ ಹೊಗಳಿಕೆ ಬಗ್ಗೆ ಯಕ್ಷಗಾನ ಆಗ್ಯೊಂಡಿತ್ತು ಒಂದಿಕ್ಕೆ.

ಸರಿ., ಚೂರು ನೋಡಿಕ್ಕಿ ಹೋಪೋ ಹೇದು ದಣಿಯ ಜೆನ ಇಲ್ಲದ್ದ ಕಾರಣ ಸ್ಟೇಜಿನ ಹತ್ರಂದಲೇ ನಿಂದ ರಂಗಣ್ಣನೊಟ್ಟಿಂಗೆ

ಶ್ವೇತಕುಮಾರ ಚರಿತ್ರೆಯ ಯಮನಾಂಗೆ ಕಾಂಬ ತಡ್ಪೆಕಿರೀಟ ಒಡ್ಡೋಲಗ ಆತು, ಚಿತ್ರಗುಪ್ತನ ಹಾಂಗಿರ್ತ ದೂತನೂ ಇದ್ದ° ಒಟ್ಟಿಂಗೆ

ಪದ ಆತು , ವೇಷಧಾರಿ ಸುರುಮಾಡಿದ – “ರಾಜ್ಯದಲ್ಲಿ ಒಂದು ರುಪಾಯಿಗೆ ಅಕ್ಕಿ, ಅಗ್ಗದ ಮದ್ಯ ಕೊಡೋಕೆ ಆಜ್ಞೆ ಮಾಡಿದ್ದೇನೆ. ಪ್ರಜೆಗಳೆಲ್ಲ ಕ್ಷೇಮವೇ..? ಹೋದ ವಿಚಾರ ಏನಾಯ್ತು ಹೇಳು” – ಹೇದು ದೂತಂಗೆ ಆಜ್ಞೆ ಆತು..

ಸತ್ಯಣ್ಣಂಗೆ ತಡವಲೆ ಎಡಿಗಾಯ್ದಿಲ್ಲೆ, ಅಲ್ಲಿಂದಲೆ ಬೊಬ್ಬೆ ಹಾಕಿದ° – “ಆ ಒಂದ್ರುಪಾಯಿ ಅಕ್ಕಿ ಎನ ಸಿಕ್ಕಿದ್ದಿಲ್ಲೆ” 😀

**

2.

ಅಡಿಗೆ ಸತ್ಯಣ್ಣಂಗೆ ಅಡಿಗೆ ಮಾಡಿಕ್ಕಿ ಅಡಿಗೆ ಹೇಂಗಾಯ್ದು ಹೇದು ಕೇಳ್ತ ಕ್ರಮ ಇಲ್ಲೆ.

ಅವ್ವಾಂಗಿಯೇ ಆರಾರು ಬಂದು ಲಾಯಕ ಆಯ್ದು ಹೇದರೆ ‘ಎಲ್ಲ ಮನೆಯೆಜಮಾನನ ಮನಸ್ಸು’ ಕೃಷ್ಣಾರ್ಪಣ ಹೇಳ್ವ ಸ್ವಭಾವ

ಮನ್ನೆ ನೆರೆಕರೆಲಿ ಒಂದಿಕ್ಕೆ ಸತ್ಯಣ್ಣಂಗೆ ಊಟಕ್ಕೆ ಹೇಳಿಕೆ , ಸತ್ಯಣ್ಣನೂ ಹೋಯ್ದ ನೆರೆಕರೆ ಅನುಪ್ಪತ್ಯ ಆದ ಕಾರಣ

ಅಡಿಗೆಯವ ಹೊಸಬ್ಬ, ಅನುಭವ ಸಾಲ. ಆರೂ ಇಲ್ಲದ್ದಲ್ಲಿ ಏನಾರು ಮಾಡಿ ಹಾಕಲೆ ಸಾಕು ಅಷ್ಟೇ

ಊಟ ಆಗಿಕ್ಕಿ ಸತ್ಯಣ್ಣನ ಕಂಡಪ್ಪಗ ಅಡಿಗೆಯೋನು ಕೇಟ – ಹೇಂಗಾಯ್ದು ಸತ್ಯಣ್ಣ ಇಂದ್ರಾಣ ಅಡಿಗೆ ?

ಸತ್ಯಣ್ಣಂಗೆ ಲೊಟ್ಟೆ ಹೇಳ್ಳೋ, ಅಂತೇ ಹೊಗಳ್ಳೋ ಅರಡಿಯ, ಸೀದ ಹೇಳಿದ – “ಊಟ ಲಾಯಕ ಆಯ್ದು ಗೋಪಾಲ, ಅಶನ ರಜಾ ಬೇಯೇಕ್ಕಾತು ಅಷ್ಟೇ. ಮತ್ತೆ.. ತಾಳಿಂಗೆ ಅಷ್ಟು ಉಪ್ಪು ಹಾಕೇಕಾತಿಲ್ಲೆ, ಸಾರಿಂಗೆ ಅಷ್ಟು ಹುಳಿ ಬೇಕಾತಿಲ್ಲೆ, ಕೊದಿಲು ಅಷ್ಟು ಮಂದ ಆಯೇಕ್ಕಾತಿಲ್ಲೆ, ಮೇಲಾರ ಲಾಯಕ ಆಯ್ದು .. ಆದರೆ ಹುಳಿಮಜ್ಜಿಗೆ ಇದ್ದತ್ತು ಹೇಳಿ ಅದರ ಪೂರ್ತಿ ಹಾಕೆಕ್ಕಾತಿಲ್ಲೆ. ಪಾಚ ರಜಾ ಸೀವು ಮಾಡ್ಳಾವ್ತಿತ್ತು. ಕೇಸರಿ ಬಾತು ಲಾಯಕ ಆಯ್ದು ಬೀಜದಬೊಂಡು, ದ್ರಾಕ್ಷಿ , ಏಲಕ್ಕಿ ಕೂಡ ಹಾಕಿರೆ ಇನ್ನೂ ಲಾಯಕ ಆವ್ತಿತ್ತು. ಮಜ್ಜಿಗೆ ಹುಳಿ ಇದ್ದರೆ ಅದರ ನೀರು ಮಾಡಿ ರಜ ಉಪ್ಪು ಮೆಣಸು ಶುಂಠಿ ಹಾಕಿ ನೀರು ಮಜ್ಜಿಗೆ ಮಾಡ್ಳಾವ್ತಿತ್ತು. ಮತ್ತೆಲ್ಲ ಲಾಯಕ ಆಯ್ದು ಮಿನಿಯ 😀

**

3.

ಅಡಿಗೆ ಸತ್ಯಣ್ಣನ ಅತ್ತೆಗಳಿಂಗೆ ಪ್ರಾಯ ಅರುವತ್ತೇಳು ದಾಂಟಿದ್ದಡ

ಬಿಪಿ ಶುಗರ್ ಹೆಚ್ಚಿಗೆ ಆದ ಕಾರಣ ಓ ಮನ್ನೆ ಕೊಡೆಯಾಲ ಅಸುಪತ್ರೆಲಿ ಮೂರುದಿನ ಮನಿಗಿಕ್ಕಿ ಬಂದದಡಾ

ದಾಕುಟ್ರಣ್ಣ ಹೇಯ್ದನಡ ಶರೀರ ಅಂಬಗಂಬಗ ನೋಡಿಗೊಳ್ಳೆಕು, ಊಟ ಹದಾಕೆ ಉಣ್ಣೆಕು  – ಕತೆ ಎಲ್ಲ ಹೇದವು ಅತ್ತೆ ಅಳಿಯನತ್ರೆ

ಸತ್ಯಣ್ಣನೂ ಗಮನಿಸಿದ… ಅಪ್ಪಪ್ಪು ಅತ್ತೆ ಈಗ ತುಂಬ ಜಾಗ್ರತೆ ಮಾಡ್ತವಪ್ಪ. ಗಂಟಗೆ ನಾಕು ಸರ್ತಿ ದೊಡ್ಡ ಕನ್ನಾಟಿ ಎದುರೆ ನಿಂದು ಶರೀರ ನೋಡಿಗೊಳ್ತವು, ಒಂದನೆ ಹಂತಿಗೆ ಊಟಕ್ಕೆ ಕೂದರೆ ಮೂರ್ನೇ ಹಂತಿ ಕಳಿವಾಗಷ್ಟೇ ಅತ್ತೆಯ ಊಟ ಮುಗಿತ್ತು. ಹದಾಕೆ ಉಣ್ತವು 😀

**

4.

ಅಡಿಗೆ ಸತ್ಯಣ್ಣನ ಹೆಂಡತಿ ಶಾರದೆಯ ಒಬ್ಬ ಅಣ್ಣ  ಕೊಡೆಯಾಲಲ್ಲಿ ಇರ್ಸು ಅಪ್ಪೋ

ಓ ಮನ್ನೆ ಅಲ್ಲಿ ಗ್ರಾಶಾಂತಿಯೂ ಕಳುದ್ದು ಅಪ್ಪೋ

ಬಪ್ಪಗ ಶಾರದೆಯ ಅಬ್ಬೆಯೂ ಒಟ್ಟಿಂಗೆ ಬಂದಿತ್ತವು ಸತ್ಯಣ್ಣನ ಮನಗೆ ಮಗಳ ಮನೆಲಿ ನಾಕು ದಿನ ಕೂದಿಕ್ಕಿ ಹೋಪಲೆ

ಶಾರದೆಯ ಅಬ್ಬಗೆ ಊಟ ತಿಂಡಿ ಎಲ್ಲ ಹದಾಕೆ ಇದಾ. ಹಾಂಗೆ ಸಮಧಾನಲ್ಲಿ ಉಂಬದು ತಿಂಬದು.

ಇರುಳಿಂಗೆ ಊಟ ಇಲ್ಲೆ. ಚಪ್ಪಾತಿ. ಮತ್ತೆ ಎರಡು ಗ್ಲಾಸು ಮಜ್ಜಿಗೆ. ಚಪ್ಪಾತಿ ದಣಿಯ ತಿಂಬಲೆ ಇಲ್ಲೆ. ಎಷ್ಟು ಬೇಕೋ ಅಷ್ಟೇ.

ಮೂರು ಚಪಾತಿ ತಿಂದಪ್ಪಗ ಡರ್ರ ಒಂದು ತೇಗು ಬಂತು. ಸತ್ಯಣ್ಣಂಗೆ ಅತ್ತಗೆ ಇನ್ನೊಂದು ಚಪ್ಪಾತಿ ಬಳುಸೆಕೋ ಬೇಡದೋ ಅಂದಾಜಿ ಆಯ್ದಿಲ್ಲೆ.

ಸತ್ಯಣ್ಣ ಕೇಳಿದ ಅತ್ತಗೆ ಚಪ್ಪಾತಿ ಇನ್ನೊಂದು ಬೇಕೋ

ಅತ್ತೆ ಅತ್ತಿತ್ತೆ ನೋಡಿತ್ತು ., ಒಂದೇ ತೇಗು ಬಂದದಲ್ಲದ… ಇನ್ನೊಂದು ತಿಂಬಲಕ್ಕು.

ನಾಕೇನದು ತಿಂದಪ್ಪಗ ಮತ್ತೆ ಎರಡು ತೇಗು ಬಂತು. ಅತ್ತಗೆ ಹೊಟ್ಟೆ ತುಂಬಿತ್ತೋಳಿ ಅಂದಾಜಿ ಆತು.  “ಇನ್ನು ಸಾಕು ಸತ್ಯೋ” – ಹೇದವು ಅತ್ತೆ.

‘ಅವರವರ ಹೊಟ್ಟೆ ಹಾಳಿತ ಅವಕ್ಕವಕ್ಕೇ ಅರಡಿಗಷ್ಟೆ, ಹದಾಕೆ ತಿಂದರಾತಷ್ಟೇ.’ – ಹೇಳಿದ° ಸತ್ಯಣ್ಣ° 😀

**

5.

ಅಡಿಗೆ ಸತ್ಯಣ್ಣಂಗೆ ಇಪ್ಪದು ಬರೇ ಹಿತ್ತಲು ಮನೆ . ನಾಕು ತೆಂಙಿನಮರ , ಎರಡು ಬೀಜದ ಮರ , ಎರಡು ಹಲಸಿನ ಮರ , ಎರಡು ಬಾಳೆ ಸೆಸಿ ಬಿಟ್ರೆ ತೊಂಡೆ ಚಪ್ಪರವೂ ಬಸಳೆ ಚಪ್ಪರ ಮಾಂತ್ರ

ಅಡಿಗೆ ಸತ್ಯಣ್ಣನಲ್ಲಿ ಅನುಪ್ಪತ್ಯ ಅಪ್ಪದು ಭಾರೀ ಅಪರೂಪವೇ

ಅಂದರೂ ವರ್ಷ ವರ್ಷ ತಿಥಿ, ಮಹಾಲಯ ಹೇದು ಎರಡು ನಡದೇ ತೀರ್ತು

ಅಡಿಗೆ ಸತ್ಯಣ್ಣನಲ್ಲಿ ಅನುಪ್ಪತ್ಯ ಆಯೇಕ್ಕಾರೆ ಒಂದೋ ಪೇಟೆಂದ ತಂದಾಯೇಕು, ಇಲ್ಲದ್ರೆ ನೆರೆಕರೆ ನೆಂಟ್ರಿಷ್ಟ್ರು ಕೊಟ್ಟಾಯೆಕು.

ನೇವೇದ್ಯಕ್ಕೆ, ಎಲೆತಟ್ಟಗೆ ಹತ್ತು ಹಣ್ಣಡಕ್ಕೆ ಬೇಕಾರೂ ಆರಾರು ಕೊಟ್ಟಾಯಕ್ಕಷ್ಟೆ.

ಕಳುದೊರಿಶ ಹೀಂಗೆ ಒಬ್ಬ ಭಾವನತ್ರೆ ಹೀಂಗೆ “ಮನೆಲಿ ಜೆಂಬ್ರ ಇದ್ದು, ಒಂದು ಇಪ್ಪತ್ತೈದು ಅಡಕ್ಕೆ ಸಿಕ್ಕುಗೋ ಹೇದು ಕೇಟ” – ಅಡಿಗೆ ಸತ್ಯಣ್ಣ°

ಭಾವಯ್ಯ° ಹೇದ° – ‘ನೋಡೇಕ್ಕಷ್ಟೇ… ಇದ್ದರೆ ನಾಳೆ ನಾಡುದ್ದಾಗಿ ಹೇಳುವೆ ನಿನಗೆ’ 

‘ಆತಪ್ಪ., ಇದ್ದರಲ್ಲದೋ ಕೊಡ್ಸು’ – ಹೇದು ಸತ್ಯಣ್ಣನೂ ತಲೆ ಆಡಿಸಿದ°

ಅನುಪ್ಪತ್ಯ ಕಳುದು ದಿನ ಹದಿನೈದಾದರೂ, ಹೇಳ್ತೆ ಹೇದವನ ಸುದ್ದಿಯೇ ಇಲ್ಲೆ

ರಂಗಣ್ಣ ಕೇಟ° – ಅಪ್ಪೋ ಮಾವ°!, ನಿಂಗೊ ಅವನತ್ರಂದ ಸಿಕ್ಕ ಹೇದು ಗೊಂತಿದ್ದೂ ಕೇಟದೆಂತಕೆ?

ಸತ್ಯಣ್ಣ ಹೇದ° – “ರಂಗೋ!, ಸಿಕ್ಕುಗು ಹೇದು ಕೇಟದ್ದಲ್ಲ, ಸಿಕ್ಕಿರೆ ಆತನ್ನೇದು.  ಸಿಕ್ಕದ್ರೆ ಆತೂ ಹೇದು ನಾವಿನ್ನೊಂದು ದಿಕ್ಕಂದ ಸಂಪಾಲುಸಿ ಆತಿಲ್ಯೋ.

ಅಷ್ಟಪ್ಪಗ ಆ ಭಾವ° ಸ್ಕೂಟರ್ಲಿ ಬಂದು ಒಂದು ಚೀಲ ಇಳುಶಿ – “ಇದಾ ಸತ್ಯಣ್ಣ ಅಡಕ್ಕೆ. ರಜಾ ತಡವಾತು ಆತೋ” – ಹೇದ°.

ಸತ್ಯಣ್ಣ ಆತು ಇರಳಿ, ಸಂತೋಷ ಹೇದು ತೆಗದು ಮಡಿಗಿ ರಂಗಣ್ಣನತ್ರೆ ತಿರುಗಿ ಹೇದ° – “ಕಂಡತ್ತೋ, ನೋಡಿದ್ಯೋ… ಇನ್ನೊಬ್ಬನ ನಾವು ಹಾಂಗೆಲ್ಲ ಲೆಕ್ಕ ಹಾಕಿ ಮಾತಾಡ್ಳಾಗ. ಅವಂಗೆ ಎಂತ ತೆರಕ್ಕೊ ಅದು ಅವಂಗೇ ಗೊಂತು” 😀

**

6.

ಪೆಲತ್ತಡ್ಕ ಅಪ್ಪಚ್ಚಿಯ ಮಗ ಎಸ್ಸೆಲ್ಸಿಲಿ ಕಂಜಿ ಹಾಕಿದ

ಇನ್ನೆಂತ ಮಾಡ್ಸು.. ಮನೆಲಿ ಕೂಬೋ ಹೇಳಿರೆ ತೋಟ ಇಲ್ಲೆ

ಉದ್ಯೋಗಕ್ಕೆ ಹೋಪೋ ಹೇಳಿರೆ ಕಲಿವಿಕೆ ಇಲ್ಲೆ

ಮಂತ್ರ ಕಲಿವಲೆ ಹೋಗು ಹೇಳಿರೆ ಬಟ್ಟಮಾವ ತೊಡೆ ಚೂಂಟುಗು

ಹೋಟ್ಳು ಕೆಲ್ಸಕ್ಕೆ ಹೋಪಲೆ ಮರ್ಯಾದಿ ಬಿಡ್ತಿಲ್ಲೆ

ಸರಿ ಹೇದು ನೀರ್ಚಾಲು ಬಾವನ ಎಲೆಕ್ಟ್ರಿಕ್ ಅಂಗುಡಿಲಿ ಕೆಲ್ಸಕ್ಕೆ ಸೇರಿದ ಬಾವನೊಟ್ಟಿಂಗೆ ವಯರಿಂಗ್ ಕಲಿವಲಕ್ಕನ್ನೇದು

ಅದೂ ಸಮ ಕೂಡಿ ಬಂತಿಲ್ಲೆ ಅರ್ಧಲ್ಲಿ ಬಿಟ್ಟು ಬಸ್ಸು ಬಿಡ್ಳೆ ಕಲ್ತ°

ಕಲ್ತ ಕೂಡ್ಳೆ ಬಸ್ಸು ತಿರುಗುಸಲೆ ಆರು ಕೊಡ್ತ!., ಬಿಗಿಲು ಊದಲೆ ಸೇರಿಗೊಂಡ°

ನಿತ್ಯ ಬಸ್ಸು ತೊಳವದು. ಕುಂಬ್ಳೆ ಮಾರ್ಗಲ್ಲಿ ಹೋವ್ತಕಾರಣ ಎರಡುದಿನಕ್ಕೊಂದರಿ ಟಯರು ಬದಲ್ಸುದು ಆಗದ್ದ ಕೆಲಸ . ಅದೂ ಬಿಟ್ಟ

ಅಕೇರಿಗೆ ಅಡಿಗೆ ಸತ್ಯಣ್ಣನತ್ರೆ ಬಂದ° – “ಆನೂ ಬತ್ತೆ ನಿಂಗಳೊಟ್ಟಿಂಗೆ ಅಡಿಗ್ಗೆ”

“ಆತಪ್ಪ, ಕಲ್ತುಗೊ ಒಳ್ಳೆದೇ” – ಹೇದು ಮರದಿನಂದಲೇ ಬಪ್ಪಲೆ ಹೇದ° ಅವನ ಅಡಿಗೆ ಸತ್ಯಣ್ಣ°

ಹೋದಪ್ಪದ್ದೆ ಹನ್ನೆರಡು ಕಾಯಿ ಕೆರದು ಅಷ್ಟದ್ರವ್ಯಕ್ಕೆ ರೆಡಿಮಾಡು ಹೇದ° ಸತ್ಯಣ್ಣ°

ಅಷ್ಟದ್ರವ್ಯ ಆತು, “ಇನ್ನೊಂದು ಹತ್ತು ಕಾಯಿ ಕೆರದು ಕಡವ ಕಲ್ಲಿಂಗೆ ಹಾಕು” – ಹೇದ° ಅಡಿಗೆ ಸತ್ಯಣ್ಣ° 

ಮಾವ°, “ಆನು ದಾಣೆ ಹಿಡ್ಕೊಳ್ತೆ, ಕಡವಲೆ ನಿಂಗೊ ಕೂರ್ತೀರೋ”- ಕೇಟ° ಪೆಲತ್ತಡ್ಕ ಮಾಣಿ  

ಅಡಿಗೆ ಸತ್ಯಣ್ಣ ಹೇದ° – ಇದ ಮಗನೇ! ಆನು ಅಡಿಗ್ಗೆ ಹೆರಟದು ಹದಿನಾಕು ವೊರಿಶಲ್ಲಿ, ದಾಣೆ ಹಿಡುದ್ದದು ಇಪ್ಪತ್ತೆರಡು ವೊರಿಶಲ್ಲಿ…, ಅದೂ ಅಪ್ಪ° ಸತ್ತಮತ್ತೆ!   😀
**

7.

ಅಡಿಗೆ ಸತ್ಯಣ್ಣಂಗೆ ಆಟಿಅಮಾಸೆ ಅನುಪ್ಪತ್ಯ.

ಉಂಡೆಪ್ರಸಾದ ಪೂಜೆ ಇದ್ದ ಕಾರಣ ನಾಕು ಸೇರು ಹೋಳಿಗೆಯೂ ಆಗ್ಬೇಕು ಹೇಯ್ದ° ಮನೆ ಯೆಜಮಾನ

ಜಡಿಗುಟ್ಟಿ ಮಳೆ ಸೊಯ್ಪ್ಯೊಂಡಿದ್ದರೂ ರಂಗಣ್ಣನ ಕರ್ಕೊಂಡು ಅಡಿಗೆ ಸತ್ಯಣ್ಣ ಸಮಯಕ್ಕೆ ಸರಿಯಾಗಿ ಹಾಜರು..

ಎಲ್ಲಿ ನೋಡಿರೂ ನೀರ ಪಸೆ, ಅಡಿಗೆ ಕೊಟ್ಟಗೆಲಿ ಅಂತೂ ಕೇಳೇಡ. ಸಗಣ ಬಳಿಗಿದ್ದೂ ಚಂಡಿ ಚಂಡಿ ಒಣಗಿದ್ದಿಲ್ಲೆ

ರಂಗಣ್ಣನ ಕಡೆಯಾಣ ಸುರುವಾತು … ಎಡಕ್ಕಿಲ್ಲಿ ಎಲ್ಯೋ ಕಂಬ್ಳಿ ಹುಳು ಕಾಲಿಂಗೆ ನೊರಪ್ಪಿತ್ತು ಕಾಣುತ್ತು

ತೆಕ್ಕೋ…. ಸುರುಮಾಡಿದ ರಂಗಣ್ಣ ತೊರುಸಲೆ. ಕೈಲಿ ತೊರುಸಿ ತೊರುಸಿ ಪಾಟಗೆ ಕೈ ಅದ್ದಿ ಬೈರಾಸಿಲಿ ಉದ್ದಿಯಾತು

ಹತ್ರೆ ಇದ್ದ ಹಾಳೆಕಡೆಲಿ ಕೆರಸಿಯೂ ಆತು. ಕಾಲು ಕೆಂಪಾದರೂ ತೊರ್ಸುತ್ತದು ನಿವೃತ್ತಿ ಕಾಣುತ್ತಿಲ್ಲೆ

ಮನೆ ಯೆಜಮಾಂತಿ ಬಂದು ನಾಳಂಗೆ ಸತ್ಯಣ್ಣನತ್ರೆ ನಾಳಂಗೆ ಕಾಪಿಗೆಂತರ ಮಾಡ್ಸು ಹೇದು ಕೇಟದರ ಇಂತದ್ದು ಹೇಳಿ ಕಳ್ಸಿಯಾತು.

ಸತ್ಯಣ್ಣ ರಂಗಣ್ಣನತ್ರೆ ತಿರುಗಿ ಹೇದ° – ರಂಗಣ್ಣೋ .. ಅಡಿಯಂಗೆ ಒಂದು ಉರುಳಿ ಮಡಿಕ್ಕೊಂಬಲಾವ್ತಿತ್ತು., ಸಜ್ಜಿಗೆ ಉಳಿತಾಯ ಆವ್ತಿತ್ತು 😀

“ಈ ಮಾವಂಗೆ ಕುಸಾಲು” – ರಂಗಣ್ಣ ಎದ್ದಿಕ್ಕಿ ಅಬ್ಬಿಕೊಟ್ಟಗ್ಗೆ ಹೋಗಿ ತಲಗೆರಡು ಚೆಂಬು ನೀರಾಕಿ ಉದ್ದಿಕ್ಕಿ ಬಂದ° ಮತ್ತೆ 😀

**

8.

ರಂಗಣ್ಣನ ಪಜೀತಿ ಹೀಂಗಾತನ್ನೇ

ಸತ್ಯಣ್ಣ ಹಪ್ಪಳ ಹೊರಿವಲೆ ಬಾಣಲೆ ಮಡಿಗಿತ್ತಿದ್ದ°

ಆಚಿಗೆ ಚಾವಡಿಲಿ ಟಿವಿ ನೋಡಿಗೊಂಡಿತ್ತಿದ್ದ ಗೋವಿಂದಕೋಡ್ಳ ಭಾವ ಹೊಟ್ಟಗೆ ಕೈ ಮಡಿಕ್ಕೊಂಡು ಗೇಸು ಗೇಸು ಹೇದು ಅರ್ದಿಗೊಂಡು ಹೆರ ಬಪ್ಪದು ಕಂಡತ್ತು

ಅಡಿಗೆ ತೆರಕ್ಕಿಲ್ಲ್ಯೇ ಇತ್ತಿದ್ದ ಅಡಿಗೆ ಸತ್ಯಣ್ಣಂಗೆ ವಿಷಯ ಎಂತರ ಹೇದು ಗೊಂತಿಯ್ದಿಲ್ಲೆ

ಅಂದರೂ ತನಗೆ ಗೊಂತಿಪ್ಪದರ ಗಟ್ಟಿಗೆ ಹೇದ° –  ಗೇಸಿಂಗಾದರೆ ಆಧಾರ್ ಕಾರ್ಡು.. !  😀  

 

**

 ***  😀 😀 😀  ***

ಚೌತಿ ಕಳುದಿಕ್ಕಿ ಗಟ್ಟ ಹತ್ತಲಿದ್ದು ಹೇಯ್ದ ಅಡಿಗೆ ಸತ್ಯಣ್ಣ° ಓ ಮನ್ನೆಯೇ. ಒಂದರಿ ಕಂಡಿಕ್ಕಿ ಬಪ್ಪೋ ಹೇದರೆ ನಾಕು ದಿನಂದ ಸತ್ಯಣ್ಣನ ಮೊಬೈಲು ರೀಚೂ ಆವ್ತಾ ಇಲ್ಲೆ. ಹಾಂಗಾದ ಕಾರಣ ಈಗ ಒಟ್ಟಾರೆ…

        ಗೊಂತಾತನ್ನೇ :(

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. govindakudlu Bhavange gas oo???? che…

  [Reply]

  VA:F [1.9.22_1171]
  Rating: +1 (from 1 vote)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಅಡಿಗೆ ಮತ್ತೆ ದಾಣೆಯ ಜೋಕು ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: +2 (from 2 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  * ೧. ಸತ್ಯಣ್ಣಂಗೆ ಈ ಯಕ್ಷಗಾನದ ಮರುಳು ಜೋರಿದ್ದಲ್ಲದೋ? ಪುಣ್ಯಕ್ಕೆ ಸ್ತೇಜಿಂಗೇ ಹತ್ತಿ ಹೋಗಿ, ಹೇಳದ್ದು ಭಾಗ್ಯ! ಒರಕ್ಕುಗೆಟ್ತು ಯಕ್ಷಗಾನ ನೋಡಿದರೆ ಮರುದಿನಾಣ ಅಡಿಗೆ ಹೇಂಗಾವುತ್ತೋ?

  * ೨. ಆ ಗೇಸು ಗೇಸು ಹೇಳ್ಯೊಂದು ಬಂದ ಭಾವನ ಗೇಸಂಡೆ ಮೇಗೆ ಕೂರ್ಸೇಕ್ಕಾತಲ್ಲದೋ?

  ಲಾಯಕ್ಕಾಯಿದು ಭಾವಾ…ಲಾಯಕ…

  [Reply]

  VN:F [1.9.22_1171]
  Rating: +2 (from 2 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪಷ್ಟಾಯಿದು, ಭಾವ.
  ಪುಣ್ಯಕ್ಕೆ ಸತ್ಯಣ್ಣಂಗೆ ಕಂಬಲಿ ಹುಳು ಕಚ್ಚಿದ್ದಿಲೆನ್ನೆ.

  [Reply]

  VN:F [1.9.22_1171]
  Rating: +1 (from 1 vote)
 5. Aravinda Bhat

  Supper aaidu… eels kelsa bittu aanu first odude idara… :) :) :) 😉

  [Reply]

  VA:F [1.9.22_1171]
  Rating: +1 (from 1 vote)
 6. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ತುಂಬಾ ಲಾಯ್ಕ ಇದ್ದು

  [Reply]

  VN:F [1.9.22_1171]
  Rating: +1 (from 1 vote)
 7. ಅಧಾರ ಕಾರ್ಡು!!! ಎನಗೆ ಒಂದು ರೂಪಾಯಿ ಅಕ್ಕಿ ಎನಗೆ ಸಿಕ್ಕಿದ್ದಿಲ್ಲೆ!!! ಭಾರಿ ಲಾಇಕ್ ಆಯಿದು…
  ಹಾಂಗೆ ನಮ್ಮ ರಾಮನ ಒಟ್ಟಿಂಗೆ ಹನುಮಂತ ಇಪ್ಪ ಹಾಂಗೆ ಅಡಿಗೆ ಸತ್ಯಣ್ನನ ಜೊತೆ ವೆಂಕಣ್ಣ ಬರೆದ ಅಡಿಗೆ ಸತ್ಯಣ್ಣನ ಪಟ ಇಲ್ಲದ್ದರೆ … ಸತ್ಯಣ್ಣ್ನ ರೈಸುತ್ತಿಲ್ಲೆ… ವೆಂಕಣ್ಣ ಬರೆದ ಪಟವು ಪಸ್ಟಾಯಿದು…

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರುದೊಡ್ಡಮಾವ°ಶ್ರೀಅಕ್ಕ°ಪೆಂಗಣ್ಣ°ಅಜ್ಜಕಾನ ಭಾವಹಳೆಮನೆ ಅಣ್ಣಸರ್ಪಮಲೆ ಮಾವ°ಶಾ...ರೀಸಂಪಾದಕ°ವಿದ್ವಾನಣ್ಣವಿಜಯತ್ತೆಶಾಂತತ್ತೆಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಪುಣಚ ಡಾಕ್ಟ್ರುಜಯಶ್ರೀ ನೀರಮೂಲೆಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಮಾಷ್ಟ್ರುಮಾವ°ರಾಜಣ್ಣವಸಂತರಾಜ್ ಹಳೆಮನೆದೊಡ್ಡಭಾವವೇಣಿಯಕ್ಕ°ಡಾಗುಟ್ರಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ