‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 28 (ಒಪ್ಪಣ್ಣ ಸಮಾವೇಶ ವಿಶೇಷಾಂಕ)

September 19, 2013 ರ 11:00 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

1.

ಅಡಿಗೆ ಸತ್ಯಣ್ಣ ಚೌತಿ ಕಳುದಿಕ್ಕಿ ಗಟ್ಟ ಹತ್ತಲಿದ್ದು ಹೇದ್ದು ಅಪ್ಪು

ಕೆಲವು ದಿನಂದ ಸತ್ಯಣ್ಣ ಮೊಬೈಲಿಂಗೂ ಸಿಕ್ಕದ್ದು ಅಪ್ಪು

ಇನ್ನಾಣ ವಾರಕ್ಕೆ ಎಂತ ಮಾಡ್ಸಪ್ಪ ಹೇದು ತಲೆಬೆಶಿ ಆದ್ದೂ ಅಪ್ಪು

ಮತ್ತೆ ತಲಾಸು ಮಾಡಿದ್ದರ್ಲಿ ಗೊಂತಾತು… ಸತ್ಯಣ್ಣ ಹೋದ್ದು ಗಟ್ಟದ ಮೇಗೆ ನಾಕನೇ ಮಾಳಿಗೆಲಿ ನಡದ ಕೋಡಿ ಪಾಚಕ್ಕೆ.

ಅಲ್ಲಿ ಪಾಚ ಸಾಂಬಾರು ಮಾಡ್ತ ಎಡೆಕ್ಕಿಲ್ಲಿ ಸತ್ಯಣ್ಣ ಮೊಬೈಲು ಕಿಣಿಕಿಣಿಯಾಗಿ, ಸತ್ಯಣ್ಣ ಅದರ ಅಂಗಿ ಕಿಸೆಂದ ತೆಗದು, ಮಾತಾಡಿಗೊಂಡೇ ಸಾಂಬಾರು ಕುಟ್ಟುಗದ ಹತ್ರೆ ಬಗ್ಗಿಯಪ್ಪಗ ಮೊಬೈಲು ಕೈ ತಪ್ಪಿ ಸಾಂಬಾರಿನ ಪಾತ್ರದೊಳ ಬಿದ್ದು ಮತ್ತೆ ಅದು ತೊಳದು ಒಣಗಿಸಿ ಅಪ್ಪಗ ದಿನ ಎಂಟಾತಡ :(

ಸತ್ಯಣ್ಣ ಹೇದ° “ಅದೆಲ್ಯಾರು ವಡೆ ಹಿಟ್ಟಿನ ತಪ್ಪಲಗೆ ಬಿದ್ದಿದ್ದರೆ ಎನ್ನದೂ ಒಡೆಪೋನು ಆವ್ತಿತ್ತನ್ನೇ”  😀

ಅಡಿಗೆ ಸತ್ಯಣ್ಣ
ಚಿತ್ರ ಕೃಪೆ – ವೆಂಕಟ್ ಕೋಟೂರ್

**

2.

ಅಡಿಗೆ ಸತ್ಯಣ್ಣ ಆ ಗಟ್ಟದ ಮೇಗಾಣ ಕೋಡಿಗೆ ಹೋಪಗ ಸಕಾಯಕ್ಕೆ ರಂಗಣ್ಣನೂ ಹೋಯ್ದ ಹೇದು ಪ್ರತ್ಯೇಕ ಹೇಳ್ಳೆ ಇಲ್ಲೆ. ಹೋಯ್ದ.

ಹೋದವನೆ ಒಳಹೋಗಿ ಮದಾಲು ಆಸರಿಂಗೆ ಕುಡಿತ್ತರ ಬಿಟ್ಟು ಹೋಗಿ ಇಣ್ಕಿದ್ದದು ಬಾಲ್ಕನಿಯಡ

“ಎಂತ ರಂಗೋ ಅಲ್ಲಿ ನೋಡ್ತೆ ಅಷ್ಟೊಂದು ಏವ್ರಲ್ಲಿ?” – ಸತ್ಯಣ್ಣ ಕೇಟ°

ರಂಗಣ್ಣ ಹೇದ° – “ಅಲ್ಲ ಮಾವ°, ಕಳುದ ಸರ್ತಿ ನಾವಿದ ಇಲ್ಲಿ ನಿಂದೊಂಡೇ ಇದಾ ಕೆಳ ರಂಗೋಲಿ ಕಂಡದು. ಈಗಳೂ ಅದು ಇದ್ದೋದು ನೋಡಿದ್ದದಾನು. ಅಷ್ಟೇ”.

“ಅಪ್ಪಪ್ಪು, ಇಕ್ಕು, ಕಾಂಗು. ಉದಿಯಪ್ಪಗ ಬೇಗ ಎದ್ದು ಅಲ್ಲಿ ಕೂದೊಂದು ಕಾಯಿ ಕೆರದರಾತು. …. ಮತ್ತೆ ಸಗಣನೀರು ರಟ್ಟಿತ್ತು ಹೇದು ಮಾತ್ರ ಹೇದೊಂಡು ಬಪ್ಪಲಾಗ ಎನ್ನತ್ರೆ ಆತೋ” – ಸತ್ಯಣ್ಣ ಹೇದಪ್ಪಗ ರಂಗಣ್ಣಂಗೂ ಸಮಾಧಾನ ಆತು, ಮತ್ತೆ ಕುಡುದ ಬೆಲ್ಲ ನೀರೂ ಸೀವಾತು. 😀

**

3.

ಅಡಿಗೆ ಸತ್ಯಣ್ಣ ಗಟ್ಟಕ್ಕೆ ಹೋಗಿ ಬಂದು ಮನಗೆ ಎತ್ತಿದ್ಸು ಆದಿತ್ಯವಾರ ಉದಿಯಪ್ಪಗ. ಅಂದು ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯ ಇಲ್ಲದ್ದ ಎಡೆ ದಿನ

ರಮ್ಯಂಗೂ ರಜೆ ದಿನ

ಶಾರದೆಗೆ ಸಂಸ್ಕೃತ ಕ್ಲಾಸು ದಿನ

ಜೆಡಿಗುಟ್ಟಿ ಮಳೆ ಉದಿಯಪ್ಪಂದಲೇ.  ಕರೆಂಟು ಇರುಳು ಎಟ್ಟೊತ್ತಿಂಗೆ ಹೋದ್ದೋ …ಇನ್ಯೇವಾಗ ಬಕ್ಕೋ

ರಮ್ಯಂಗೆ ಟಿವಿ ನೋಡ್ಳೆ ಎಡಿತ್ತಿಲ್ಲೆ, ಸತ್ಯಣ್ಣಂಗೆ ಪೇಟಗೆ ಹೋಪಲೆ ಎಡಿತ್ತಿಲ್ಲೆ

ರಮ್ಯನ ಕೈಲಿ ಮೊಬೈಲು, ಸತ್ಯಣ್ಣಂಗೆ ಈಗ ಬೇಕಾಯ್ದು… ಆದರೆ ರಮ್ಯ ಮೊಬೈಲು ಒತ್ತುತ್ತರ್ಲಿ ತೆರಕ್ಕಿಲ್ಲಿದ್ದು. ಕೇಳಿರೆ ಸಿಕ್ಕ ಹೇದು ಗೊಂತಿದ್ದು.

ಅಂದರೂ ಸತ್ಯಣ್ಣ ರಮ್ಯನತ್ರೆ ಕೇಟ – ಮಗಳೋ, ಒಂದರಿ ಮೊಬೈಲು ಇತ್ತೆ ಕೊಡು, ನಾಕೈದು ಮಾತಾಡಿಕ್ಕಿ ಕೊಡ್ತೆ.

ರಮ್ಯಂಗೆ ಗೊಂತಿದ್ದು – ಈಗ ಅಪ್ಪನ ಕೈಲಿ ಕೊಟ್ರೆ ಮೊಬೈಲು ಚಾರ್ಜೂ ಕಾಲಿ ಅಕ್ಕು, ಬೇಲೆನ್ಸೂ ಕಮ್ಮಿ ಅಕ್ಕು

“ಹುಮ್ಮ್ಮ್ , ಈಗ ಕೊಡೆ , ಎನಬೇಕು ” – ಹೇಳಿತ್ತು.

ಏ.. ಒಂದರಿ ಕೊಡೋ°, ಮತ್ತೆ ಕೊಡ್ತನೊ° – ಸತ್ಯಣ್ಣನ ಸೊರ ರಜಾ ದೊಡ್ಡಾತು

ಉಹುಮ್ಮ್ , ರಮ್ಯ ಮೋರೆ ಆಚೊಡೆಂಗೆ ತಿರುಗಿಸಿ ಕೂದತ್ತು.

ಏ ಒಂದರಿ ಕೊಡು ಮಾರಾಯ್ತಿ , ಹೇದರೆ ಗೊಂತಾವ್ತಿಲ್ಯ – ಸತ್ಯಣ್ಣ ಅದೇ ಪಾಕಲ್ಲಿ

ಈ ಸರ್ತಿ ಎಂತ ಉತ್ತರವೂ ಇಲ್ಲೆ ರಮ್ಯನೈಂದ

ನೀ ಒಂದರಿ ಕೊಡ್ತ್ಯಾ  ಅಲ್ಲ…– ರಜಾ ಪಿಸುರೇ ಎಳಗಿತ್ತು ಸತ್ಯಣ್ಣಂಗೆ

ಏ ಅಪ್ಪ, ನಿಂಗೊ ಒಂದರಿ ಹರಟೆ ಮಾಡದ್ದೆ ಕೂರ್ತಿರಾ. ಈಗ ಸಿಕ್ಕ , ಹೇಳಿದ್ದೆ – ರಮ್ಯನಿಂದ ಬಂತು.

ಹೇಳಿರೆ ಭಾಷೆ ಬೇಕು, ಕೊಡು ಹೇಳಿರೆ ಕೊಡೆಕು – ಸತ್ಯಣ್ಣನೂ ಏರುಸೊರಲ್ಲೇ

ಈಗಳೂ ಎಂತ ಉತ್ತರ ಇಲ್ಲೆ ರಮ್ಯನದ್ದು.

ಕಡೆಂಗೆ ಸತ್ಯಣ್ಣನೇ ತಗ್ಗಿದ, ರಮ್ಯನ ಕೋಲೇಜು ಬಾಷೆಲಿ ಕೇಳಿರೆ ಸಿಕ್ಕುತ್ತೋದು ನೋಡ್ವೊ° ಹೇದು  – “ಪ್ಲೀಸು ರಮ್ಯ, ಗೆಂಟು ಮಾಡ್ಳಾಗ, ಇದ ಆನು ಕೂಗುವೆ ಮತ್ತೆ..”

ಸತ್ಯಣ್ಣ ಹೀಂಗೆ ಒರಂಜುವಾಗ ರಮ್ಯಂಗೆ ತಡವಲೆ ಎಡಿಗಾಯ್ದಿಲ್ಲೆ, ‘ಇದಪ್ಪ..’, ಹೇದು ಮೊಬೈಲು ಅಪ್ಪನ ಕೈಲಿ ಕೊಟ್ಟತ್ತು 😀

**

4.

ಅಡಿಗೆ ಸತ್ಯಣ್ಣ ಮಾಣಿ ಮಠಲ್ಲಿ .

ಅಂದು ‘ಒಪ್ಪಣ್ಣ ಸಮಾವೇಶ’ ಹೇದು ಗೊಂತಿಲ್ಲದ್ದ ಮಾಣಿಯಂಗಳೇ ಇಲ್ಲೆ

ಮಾಣಿ ಮಠಲ್ಲಿ ಆಂಜನೇಯನ ಗುಡಿ ಇಪ್ಪದು ಅರಡಿಗನ್ನೆ?

ಈ ಸರ್ತಿ ಅವನ ಮಹಿಮೆಯ ಲೋಕಕ್ಕೆ ಸಾರುತ್ತ ಹಾಂಗೆ ಶ್ರೀಗುರುಗೋ ರಾಮಕಥೆಲಿ ಹನುಮನ ಕತೆ ಹೇಳಿದ್ದೂ ಗೊಂತಿದ್ದನ್ನೆ?

ಈ ಹನುಮನ ಗುಡಿಯ ಎದೂ…ರಂಗೆ ಇಪ್ಪದು ಸುವಸ್ತು ಕೌಂಟರ್.

ಇದರಲ್ಲಿ ಸೇವೆಗೆ ಕೂದ ಜೆನಂಗೊಕ್ಕೆ ಹನುಮ ಅವರವರ ಮನದಿಚ್ಛೆ ಪೂರೈಸಿದ್ದನಡ್ಡ!!

ಒಬ್ಬ ಮಾಣಿ ನಿತ್ಯ ಆಂಜನೇಯಂಗೆ ಮೋರೆ ಮಾಡಿ ಕೂದೋಂಡಿತ್ತಿದ್ದ.

ಚಾತುರ್ಮಾಸ್ಯ ಅರೆವಾಶಿ ಅಪ್ಪಗ ಮಾಣಿಗೆ ಕೂಸು ನಿಗಂಟಾತು!

ಈಗ ಅವ ಎಲ್ಲೋರಿಂದ ಹಿಂದೆ ಕೂಪದು!

ಇದರ ನೋಡಿ ರಂಗಣ್ಣ ಕೇಟ° ಸತ್ಯಣ್ಣನತ್ರೆ – ಇದೆಂತ ಮಾವ° ಈ ಮಾಣಿ ಅವನ ಕೆಲಸ ಆದ ಕಾರಣ ಇನ್ನೊಬ್ಬಂಗೆ ಅಲ್ಲಿ ಕೂದು ಉಪಕಾರ ಆಗಲಿ ಹೇದೋ ಹಿಂದಂತಾಗಿ ಒಚ್ಚಿದ್ದದು ಈಗ!

ಸತ್ಯಣ್ಣ ಹೇದ° –  ಅಲ್ಲ. ಕೂಸಿಂಗೆ ಮೆಸೇಜ್ ಕಳ್ಸುಲೆ!!! 😉 .

**

5

ಮಾಣಿ ಮಠಲ್ಲಿ ಒಪ್ಪಣ್ಣ ಸಮಾವೇಶಕ್ಕೆ ಅಡಿಗೆ ಸತ್ಯಣ್ಣ ರಂಗಣ್ಣನಷ್ಟೇ ಏವ್ರಲ್ಲಿ, ಹುರುಪಿಲ್ಲಿ ಇತ್ತಿದ್ದ.

ಆಂಜನೇಯ ಮಹಿಮೆ ಗುರುಗಳ ಹನುಮ ಕತೆ ಮೂಲಕ ಒಂದು ವಿಧಲ್ಲಿ ಗೊಂತಾದರೆ, ಬಂದೋರ ಮುಖಾಂತರವೂ ಇನ್ನೊಂದು ರೀತಿಲಿ ಪ್ರಚಾರ ಆಗ್ಯೊಂಡಿತ್ತಿದ್ದು.

ಮೊನ್ನೆ ಒಂದೆರಡು ದಿನಕ್ಕೆ ಬಂದ ನಮ್ಮ ಬೈಲಿನ ಮಾಣಿಯೂ ಆಂಜನೇಯನ ಎದುರೆ ಕೂದೋಂಡಿತ್ತಿದ್ದಡ!!;-)

ಅದರ ನೋಡಿ ಸತ್ಯಣ್ಣ ಹೇದ°, ರಂಗೋ!, “ಆಂಜನೇಯ ಕಣ್ಣು ಬಿಟ್ಟರೆ ಬೈಲಿಂಗೆ ಒಂದು ಪಾಚದೂಟ ಇದ್ದಿದಾ”!! 😉

ರಂಗಣ್ಣನೂ ಉಷಾರಿ ಚಿಲ್ಲೆರಿ ಏನಲ್ಲ, ಎಂತಕ್ಕೂ ಸತ್ಯಣ್ಣನತ್ರೆ ಕೇಳಿಯೇ ಬಿಟ್ಟ° – ಮಾವ°, ಇನ್ನೆರಡು ದಿನಕ್ಕೆ ನವಗೆ ಒಪ್ಪ್ಯೊಂಡ ಅನುಪ್ಪತ್ಯಂಗೊ ಇಲ್ಲೆನ್ನೆ 😀

**

6.

ಈ ಸರ್ತಿ ಮಾಣಿಮಠಕ್ಕೆ ಹೋದವಕ್ಕೆ ಬೈಲ ಉದಯಣ್ಣನ ಗುರ್ತ ಆಗದ್ದೋರು ಆರೂ ಇರವು. ಗುರ್ತ ಇಲ್ಲದ್ದೋರಿಂಗೆ ಎಸ್ ಅಕ್ಕ ಗುರ್ತ ಮಾಡದ್ದೆ ಇರವು.

ಉದಯಣ್ಣ ಹೇದರೆ ಅಷ್ಟೂ ಅಚ್ಚುಕಟ್ಟಿನ ಜೆವಾಬುದಾರಿ.. ಹಾಂಗೇ ಚುರುಕು ಕೆಲಸವುದೆ. ಅದರೊಟ್ಟಿಂಗೆ ಅಂಬಗಂಬಗ ಹಲವು ನಮೂನೆ ಪಟಾಕಿಗಳೂ.

ಉದಯಣ್ಣಂಗೂ ಆಂಜನೆಯನ ಎದುರೇ ಕೆಲಸ.

ಉದಯಣ್ಣಂಗೆ ಹೊತ್ತೊತ್ತಿಂಗೆ ಎಲೆ ತಿನ್ನದ್ದೆ ಕಳಿಯ! ಆಂಜನೇಯನ ಎದುರೆ ಕೂದು ಎಲೆ ತಿಂದು ತುಪ್ಪುಲಾವುತ್ತೋ?

ಅವನನ್ನೇ ದಿಟ್ಟಿಸಿ ನೋಡಿಯೋಂಡಿದ್ದ ಉದಯಣ್ಣಂಗೆ ಈ ಎಲೆ ತಿಂತ ದುರಭ್ಯಾಸವ ಬಿಟ್ರಕ್ಕು ಹೇದು ತೋರಿ ಆಂಜನೇಯಂಗೆ ಹೇದು ಎಲೆ ತಿಂತ್ಸರ ಬಿಟ್ಟಾತು!!

ಇದರೆಲ್ಲ ಗಮನಿಸಿದ ಅಡಿಗೆ ಸತ್ಯಣ್ಣ ಹೇದ.. ಉದಯಣ್ಣೋ.. ಈಗ ಮದಲಿಂದ ಹತ್ತು ಪಟ್ಟು ಕೆಲಸ ಹೆಚ್ಚಿಗೆ ಆವುತ್ಸು ಕಾಣುತ್ತಿದ! .ಎಲೆ ತಿಂಬ ಸಮೆಯ ಲಾಬವೇ ಇದಾ!!!  😉

**
7.

ಮಾಣಿ ಮಠಲ್ಲಿ ಸ್ವಾಗತದ ಜೆಬಾದಾರಿಲಿ ಇಪ್ಪ ಮುಳ್ಳುಂಜ ಅಣ್ಣಂಗೆ ಮುಳ್ಳುಸೌತೆ ಹೇದರೆ ಭಾರೀ ಇಷ್ಟ.

ಜೆನಂಗ ಎಲ್ಲಾ ಹೊತ್ತೂ ಬಂದೋಂಡೇ ಇರ್ತವಿಲ್ಲೆ ಅಲ್ಲದಾ? ಹಾಂಗೆ ಎಡೆ ಎಡೇಲಿ ಚೆಕ್ಕರ್ಪೆ, ಮಂಡಕ್ಕಿ, ಚಕ್ಕುಲಿ, ಕೋಡುಬಳೆ, ಮರಗೆಣಂಗು ಚಿಪ್ಸು ಹೇದು ಬ್ರೇಕುಗೋ ಇರ್ತು!

ಸತ್ಯಣ್ಣನೂ ಒಂದರಿಯಾಣ ತಿರುಗಾಟ ಮುಗಿಶಿ ಅಲ್ಲೇ ಕೂದೋಂಡಿತ್ತಿದ್ದ.

ಮುಳ್ಳುಂಜ ಅಣ್ಣ ಒಬ್ಬನೇ ತಿನ್ನವಿದಾ! ಒಂದು ಸುತ್ತು ನೋಡಿಗೊಂಡು ಹತ್ತರೆ ಕೂದವಕ್ಕೆ ಹಂಚಿಯೇ ತಿಂಗು. ಯೇವತ್ತೂ ಕಾಂಬೋರು ಅಲ್ಲಿರದ್ದರೆ ಅವಕ್ಕೆ ಒಂತುಂಡು ತೆಗದು ಮಡಿಗಿ ತಿಂಬಲೆ ಕೊಡುಗು. ಅಂಬಗ ಸತ್ಯಣ್ಣನ ಬಿಡುಗೋ? ಸತ್ಯಣ್ಣಂಗೂ ತುಂಡುಸಿದ ಮುಳ್ಳುಸೌತೆ ಕೊಟ್ಟವು.

ರಂಗಣ್ಣಂಗೆ ಕೊಡ್ಲಪ್ಪಗ ತಂದ ಮುಳ್ಳಸೌತೆ ಕಾಲಿ!,  ಅವಂಗೆ ಕೊಡದ್ದೆ ತಿಂಬಲೆ ಸತ್ಯಣ್ಣಂಗೆ ಮನಸ್ಸು ಬಯಿಂದಿಲ್ಲೆ.

ಸತ್ಯಣ್ಣ ಮುಳ್ಳುಂಜಣ್ಣನ ಮೋರೆ ನೋಡಿದ°, ಮುಳ್ಳಂಜಣ್ಣ ಸತ್ಯಣ್ಣನ ಮೋರೆ ನೋಡಿದವು.

ಅಷ್ಟೊತ್ತಿಂಗೆ ಸತ್ಯಣ್ಣ ಹೇದ°-  ತಲೆಬೆಶಿ ಮಾಡೆಡಿ ಮುಳ್ಳುಂಜಣ್ಣ, ಅದಾ ಕಾನಾವಕ್ಕಂಗೆ ಹೇಳಿ ಒಂತುಂಡು ತೆಗದು ಮಡಗಿದ್ದು ಇದ್ದನ್ನೆ. ಅವಕ್ಕೆ ತಿಂದರೆ ವಿಪರೀತ ಶೀತ ಸೆಮ್ಮ. ಹೇಂಗಾರೂ ತಿನ್ನವು. ಅವರ ಲೆಕ್ಕದ್ದರ ರಂಗಣ್ಣಂಗೇ ಕೊಡಿ. ಅಕ್ಕನೂ ಏನೂ ಬೇಜಾರ ಮಾಡವು.

ಮುಳ್ಳಂಜಣ್ಣಂಗೂ ಕೊಶಿ, ರಂಗಣ್ಣಂಗೂ ಕೊಶಿ. ಕಾನಾವಕ್ಕಂಗೆ ತಿಂದರೆ ಶೀತ ಸೆಮ್ಮಂದಾಗಿ ಚೆಕ್ಕರ್ಪೆ ಸಿಕ್ಕಿತ್ತಿಲ್ಲೆನ್ನೆ ಹೇಳಿ ತಲೆಬೆಶಿ!! 😀

**

8.

ಮಾಣಿಮಠಲ್ಲಿ ಸೇಡಿಯಾಪು ಸಪ್ನಕ್ಕ ಸಣ್ಣ ಮಗಳ ಕಟ್ಯೊಂಡು ವಿಐಪಿ ನೆಂಟ್ರುಗಳ ಸತ್ಕಾರ ಮಾಡುದು ಕಾಂಬಗ ಸತ್ಯಣ್ಣಂಗೆ ಭಾರೀ ಹೆಮ್ಮೆ ಅಪ್ಪದು.

ಸತ್ಯಣ್ಣ ಮಠಕ್ಕೆ ಹೋದ ದಿನಂಗಳಲ್ಲಿ ಉದಿಯಪ್ಪಗಂದ ನೆಡು ಇರುಳೊರೆಗೂ ಆ ಕೂಸು ಕೆಲಸ ಮಾಡುದರ ಕಂಡಿದ.

ರಮ್ಯ ಸಣ್ಣಾದಿಪ್ಪಗ ಸತ್ಯಣ್ಣನ ಒಟ್ಟಿಂಗೇ ಬಕ್ಕಡ್ಡ ಕೆಲಾವು ಸರ್ತಿ.

ಅದರ ಬುಳ್ಪಾಟಿಕೆಯೂ, ಅದರ ಹಟಂಗಳೂ ಕೆಲಸದ ಎಡಕ್ಕಿಲಿ ತಡಕ್ಕೊಂಬಲೆ ಎಡಿಯದ್ದೆ ಮತ್ತೆ ರಮ್ಯನ ಕಣ್ಣು ತಪ್ಪುಸಿಯೇ ಅಡಿಗ್ಗೆ ಹೋಯ್ಕೊಂಡು ಇದ್ದದಡ್ಡ!!

ಇಷ್ಟು ಸಣ್ಣ ಮಗಳ ಕಟ್ಯೋಂಡು ಈ ಹೆಮ್ಮಕ್ಕೊ ಹೇಂಗೆ ಕೆಲಸ ಮಾಡ್ತವಪ್ಪ ಹೇಳಿ ಸತ್ಯಣ್ಣಂಗೆ ಆಶ್ಚರ್ಯ ಅಪ್ಪದು!

ಸಪ್ನಕ್ಕನ ಮಗಳು ಬರೇ ಸಣ್ಣ ಇದಾ.. ಅದು ಕೂಗುವಾಗ ಸಮಾಧಾನ ಮಾಡಿಗೊಂಡು, ಹಶು ಆದಪ್ಪಗ ರೆಜಾ ಪುರುಸೋತ್ತು ಮಾಡಿ ಉಣುಸಿಗೊಂಡು, ಎಲ್ಲಿಯಾದರೂ ಜಾಗೆ ಸಿಕ್ಕಿದಲ್ಲಿ ಒರಗಿಸಿಗೊಂಡು ಎಲ್ಲರ ಮನಸ್ಸಿಂಗೆ ಬೇಕಾದ ಹಾಂಗೆ ಕೆಲಸ ಮಾಡ್ತದು ಕಾಂಬಗ ಸತ್ಯಣ್ಣ ರಂಗಣ್ಣಂಗೆ ತೋರ್ಸಿ ಹೇದ° – “ನೋಡು ರಂಗಣ್ಣೋ..,  ಗುರುಸೇವೆ ಮಾಡ್ಲೆ ಮನಸ್ಸಿಪ್ಪವಂಗೆ ಮನೆ, ಮನೆತನ, ಸಿರಿತನದ ಲೆಕ್ಕ ಇರ್ತಿಲ್ಲೆ, ಸಿರಿವಂತ ಮನಸ್ಸೇ ಬೇಕಪ್ಪದು. ಅದಿಪ್ಪವಂಗೆ ಎಲ್ಲ ಜನಂಗಳಲ್ಲಿಯೂ ರಾಮ ಕಾಂಗು, ಹನುಮನಾಗಿ ಅವರ ಸೇವೆ ಮಾಡುಗು., ಮನಸ್ಸಿಲಿ ಗುರುಸೇವೆ ಮಾಡೆಕ್ಕು ಹೇದು ಇಲ್ಲದ್ದವಂಗೆ ಎದುರು ಕಾಂಬ ಜೆನಂಗಳಲ್ಲಿ ರಾಮ ಕಾಂಬದು ಹೇಂಗೆ? ಶ್ರದ್ಧೆಲಿ ಸೇವೆ ಮಾಡ್ತವರ ಕೊಂಗಿ ಮಾಡ್ಲೆ ಆಗ ಆತೋ”.

ರಂಗಣ್ಣ ಕೇಟ – “ಅಂಬಗ ನಿಂಗೊ ಈಗ ಮಾಡಿದ್ದು?!”

ಸತ್ಯಣ್ಣ ಹೇದ° – “ಎಲ್ಲಾ ಹೊತ್ತೂ, ಎಲ್ಲಾ ಸರ್ತಿಯೂ ನೆಗೆ ಮಾಡ್ಲಾಗ ಹೇದು ನಿನಗರಡಿಯದೋ ರಂಗಾ?”  x-(

**

9.

ಮಾಣಿಮಠಲ್ಲಿ ಬೈಲ ಮಿಲನ, ಮರದಿನಾಣ ಒಪ್ಪಣ್ಣಂದ್ರ ಸಮಾವೇಶ ಎಲ್ಲ ಮುಗುಶಿ ಮನೆಗೆತ್ತಿದ ಸತ್ಯಣ್ಣಂಗೆ ರೋಮಾಂಚನ ಅನುಭವ, ಅದೇ ಗುಂಗು.

ಇರುಳು ಊಟಕ್ಕೆ ಚಪಾತಿ ಮಾಡೆಕ್ಕೋ ಹೇದು ಶಾರದೆ ವಿಚಾರ್ಸಿದರೆ ಅಂತೆ ಹೂಂಕುಟ್ಟಿದ.

ಸರಿ, ಶಾರದೆ ಚಪಾತಿಗೆ ಹಿಟ್ಟು ಕಲಸಿ ತಯ್ಯಾರಿ ಮಾಡಿ ಇನ್ನು ಲಟ್ಟುಸುದು ಹೇದು ಲಟ್ಟಣಿಗೆ ಹುಡ್ಕಿರೆ ಅದು ಸಿಕ್ಕಿದ್ದಿಲೆ. ಎಲ್ಲ ದಿಕ್ಕೆ ಹುಡ್ಕಿರೂ ಕಾಣೆ.

ಇನ್ನೆಂತ ಮಾಡೊದು ಹೇಳಿ ಶಾರದೆ ಸತ್ಯಣ್ಣನ ಚೀಲಂದ ಹೋಳಿಗೆ ಲಟ್ಟಣಿಗೆಯ ತೆಗದು ಚಪಾತಿ ಲಟ್ಟುಸಿ, ಬೇಶಿ ಕೂಟಿಂಗೆ ಒಂದು   ಗಶಿಯನ್ನೋ ಮಾಡಿ ಉಂಬಲೆ ದೆನುಗೇಳಿತ್ತು.

ಉಂಡಿಕ್ಕಿ  ಬೆಂಗ್ಳೂರಭಾವನಲ್ಲಿ ಮರದಿನಾಣ ಕೋಡಿಗೆ ಹೆರಟೂ ಆತು.

ಸತ್ಯಣ್ಣ ಮಾಡಾವಿಂಗೆ ಬಂದು ಮನೆಯೋರ ಜೀಪು ಹೆರಡ್ಲಪ್ಪಗ ಬಂದು ಎತ್ತಿದ.

ಅಲ್ಲಿಗೆ ರಂಗಣ್ಣನೂ ಬಂದು ಸೇರಿಗೊಂಡ.

ಹೊತ್ತೋಪಗ ಫಲಾರ ಮುಗುಶಿ ಹೆರಟು ಉದೆಗಾಲಕ್ಕೆ ಬೆಂದಕಾಳೂರಿಂಗೆ ಬಂದು ಎತ್ತಿ ಆತು.

ಬಸರಿಗೆ ಹೋಳಿಗೆ ಮಾಡ್ಸೋದು ಹೇದು ಭಾವ ಮದಲೇ ಸೂಚನೆ ಕೊಟ್ಟಿತ್ತಿದ್ದ.

ಭಾವನೇ ಅದಕ್ಕೆ ಬೇಕಪ್ಪ ಕಡ್ಲೆಬೇಳೆ ಬೇಶಿ ಮಡಗಿತ್ತಿದ್ದ. ಇನ್ನು ಲಟ್ಟುಸಿ ಬೇಶಿರೆ ಆತು ಹೇದು ಸತ್ಯಣ್ಣ ತಯಾರಿಗೆ ರಂಗಣ್ಣನತ್ರೆ ಹೇದ.

ಒಳಂದ ಚೀಲ ಹಿಡ್ಕೊಂಡು ಬಾಲ್ಕನಿಗೆ ಬಂದರೆ ಚೀಲಲ್ಲಿ ಲಟ್ಟಣಿಗೆ ಕಾಣೆ!.

ಛೆಲಾ …ಎಂತಾತು, ಎಲ್ಲಿ ಬಿಟ್ಟಿದೆ ಹೇಳೊದು ಸತ್ಯಣ್ಣನ ತಲೆಗೆ ಹೊಳೆಯ.

ಭಾವನತ್ರೆ ಕೆಮಿಲಿ ಮೆಲ್ಲಂಗೆ ವಿಷಯ ಹೇದ.

“ಇಲ್ಲಿ ಇನ್ನೊಂದು ಲಟ್ಟಣಿಗೆ ವೆವಸ್ಥೆ ಎಡಿಗಾಗ ಸತ್ಯಣ್ಣ. ಕಡ್ಲೆಬೇಳೆ ಬೇಶಿ ಮಡಗಿದ್ದರ ಇನ್ನೆಂತ ಮಾಡೊದು” ಹೇಳಿ ಭಾವ ಗಡಿಬಿಡಿ ಮಾಡಿದ.

ಬಸರಿ ಅಕ್ಕಂಗೆ ಹೋಳಿಗೆ ಸಿಕ್ಕದ್ದ ಹಾಂಗಾತನ್ನೆ ಹೇದು ಸತ್ಯಣ್ಣಂಗೆ ಬೇಜಾರಾತು. ಆದರೂ “ಅದಕ್ಕೆ ತಲೆಬೆಶಿ ಬೇಡ ಭಾವ, ನಾವು ಅದೇ ಕಡ್ಲೆ ಬೇಳೆಯ ಹಯಗ್ರೀವ ಮಡುವ, ಲಾಯ್ಕಾವುತ್ತು , ಎಂತ ಭಾವ?” ಹೇದು ಉತ್ತರಕ್ಕೂ ಕಾಯದ್ದೆ ಬಾಲ್ಕನಿಗೆ ಬಂದ.

ರಂಗಣ್ಣ ಇನ್ನು ಲಟ್ಟುಸುಲೆ ಶುರು ಮಾಡುದು ಹೇದು “ಮಾವ, ಆನು ಕಾನಕ ತುಂಬುಸುಲೆ ಶುರು ಮಾಡ್ತೆ, ನಿಂಗೊ ಲಟ್ಟುಸುಲೆ ಕೂರಿ. ತಡವಾದರೆ ರಂಗೋಲಿ ಹಾಕುತ್ತ ಹೊತ್ತಾವುತ್ತು. ಬನ್ನಿ ಕೂರಿ” ಹೇದು ರಂಗಣ್ಣ ಅರ್ಗೆಂಟು ಮಾಡಿದ.

ಬೇಜಾರದೆ ಕೋಪವುದೆ ಒಟ್ಟು ಬಂದು “ನೀನು ಏಳು ಇಲ್ಲಿಂದ, ತುಂಬುಸೋದು ಬೇಡ, ಲಟ್ಟ್ಸೊದು ಬೇಡ. ಹಯಗ್ರೀವಕ್ಕೆ ಏಲಕ್ಕಿ ಸಣ್ಣ ಹೊಡಿ ಮಾಡಿ ರೆಡಿ ಮಡುಗು” ಹೇದು ಸತ್ಯಣ್ಣ ರಜ್ಜ ಜೋರಿಲಿಯೇ ಹೇದ.

ಈ ಮಾವಂಗೆ ಎಂತ ಆತಪ್ಪ!, ಬಾಲ್ಕನಿಲಿ ತಣ್ಣಂಗೆ ಕೂದೊಂಡು ಉದೆಗಾಲಕ್ಕೆ ರಂಗೋಲಿ ಹಾಕುತ್ತರ ನೋಡ್ಳೂ ಸಿಕ್ಕದ್ದಾಂಗವ್ತನ್ನೇ ಈ ಸರ್ತಿ ಹೇದು ರಂಗಣ್ಣ ಮಂಗ ಮೋರೆ ಮಾಡ್ಯೊಂಡು ಒಳ ನಡದ. 😀

**

**    😀  :D:  😀  **

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಬಲ್ನಾಡುಮಾಣಿ

  ಅಡಿಗೆ ಸತ್ಯಣ್ಣ ಈ ಸತ್ತಿ ಮಾಣಿ ಮಠಲ್ಲಿ ಫುಲ್ಲು ಬಿಸಿ ಅಂಬಾಗ,.. ಆಗಲ್ಲಿ :)

  ಆಂಜನೇಯನ ಎದುರು ಕೂದ ಮಾಣಿ ಕಡೇಲಿ ಕೂಪಲೆ ಸುರು ಮಾಡಿದ ಕತೆ ಪಷ್ಟಾಯಿದು. :)

  [Reply]

  VN:F [1.9.22_1171]
  Rating: +1 (from 1 vote)
 2. ಕೆ. ವೆಂಕಟರಮಣ ಭಟ್ಟ

  ಬಾವಯ್ಯ, ಸತ್ಯಣ್ಣನತ್ರೆ ಸಾಂಬಾರು ಪಾತ್ರಕ್ಕೆ ಜಾಸ್ತಿ ಬಗ್ಗೆಡ ಹೇಳಿ. ಕರ್ನಾಟಕಲ್ಲಿ ಗವ್ರೀಬಿದನೂರಿಲ್ಲಿ ಕೂಸೊಂದು ಸಾಂಬಾರಿಂಗೆ ಬಿದ್ದು ಸತ್ತೇ ಹೋಯಿದು!!!.

  [Reply]

  VA:F [1.9.22_1171]
  Rating: +2 (from 2 votes)
 3. Aravinda Bhat

  Laaika aaidu chennai bhaava… :)

  [Reply]

  VA:F [1.9.22_1171]
  Rating: +1 (from 1 vote)
 4. ಪಾರ್ವತಿ

  ಸೇದಿಯಾಪು ಸಪ್ನಕ್ಕನ ಉದಾಹರಣೆಯ ಮೂಲಕ ಒಂದು ಉತ್ತಮ ಸಂದೇಶವ ಕೊಟ್ಟಿದಿ…

  [Reply]

  VA:F [1.9.22_1171]
  Rating: +3 (from 3 votes)
 5. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ರಂಗೋಲಿ ಪ್ರಿಯ ರಂಗಣ್ಣನ ರಂಗು ರಂಗಿನ ಶುದ್ದಿಗಳ ಒಟ್ಟಿಂಗೆ ಸತ್ಯಣ್ಣನ ಶುದ್ದಿಗಳೂ ಸೊಗಸಾಗಿ ಬತ್ತಾ ಇದ್ದು. ಚೆನ್ನೈ ಭಾವಯ್ಯನ ಈ ಶುದ್ದಿಗೊ ಶತಕ ಬಾರುಸಲಿ.

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  {ರಂಗೋಲಿ ಪ್ರಿಯ ರಂಗಣ್ಣನ ರಂಗು ರಂಗಿನ ಶುದ್ದಿಗಳ}
  ಲಾಯಕ ಬರೆದ್ದಿ ಮಾವಾ!

  [Reply]

  VN:F [1.9.22_1171]
  Rating: +1 (from 1 vote)
 6. ಭಾರಿ ಪಸ್ಟಾಯಿದು… ಮುಳ್ಳುಂಜಮಾವಂಗೆ ಮುಳ್ಳುಸೌತೆ ಇಸ್ಟ ಹೇಳಿ ಓದಿ ನೆಗೆ ತಡವಲಾಯಿದಿಲ್ಲೆ… ಅಡಿಗೆ ಸತ್ಯಣ್ಣ ರೈಸುತ್ತ ಇದ್ದ…. ಆನು ಅಡಿಗೆ ಸತ್ಯಣ್ಣನ ದೊಡ್ಡ ಫ಼್ಯಾನು….

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ವಾಣಿ ಚಿಕ್ಕಮ್ಮಕಾವಿನಮೂಲೆ ಮಾಣಿಜಯಶ್ರೀ ನೀರಮೂಲೆವೇಣೂರಣ್ಣಚೂರಿಬೈಲು ದೀಪಕ್ಕಪ್ರಕಾಶಪ್ಪಚ್ಚಿನೀರ್ಕಜೆ ಮಹೇಶಉಡುಪುಮೂಲೆ ಅಪ್ಪಚ್ಚಿವೆಂಕಟ್ ಕೋಟೂರುಶಾ...ರೀಎರುಂಬು ಅಪ್ಪಚ್ಚಿಬಂಡಾಡಿ ಅಜ್ಜಿಅನಿತಾ ನರೇಶ್, ಮಂಚಿಕೊಳಚ್ಚಿಪ್ಪು ಬಾವಮಾಲಕ್ಕ°ನೆಗೆಗಾರ°ಸುವರ್ಣಿನೀ ಕೊಣಲೆಪುಟ್ಟಬಾವ°ಶೀಲಾಲಕ್ಷ್ಮೀ ಕಾಸರಗೋಡುವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆಅನುಶ್ರೀ ಬಂಡಾಡಿರಾಜಣ್ಣಗಣೇಶ ಮಾವ°ಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ