‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 3

March 28, 2013 ರ 10:30 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಮದಲೇ ಹೇಳಿದ ಭಾಗ 1, ಭಾಗ  2  ನೆಂಪಿದ್ದನ್ನೇ.   ಅದರ ನೆಂಪಿಲ್ಲಿ ಮಡಿಕ್ಕೊಂಡು ಇದರ ಓದೆಕು. ಇಲ್ಲದ್ದರೆ ಇದು ನಿಂಗೊಗೆ ಬೇಯದ್ದ ಭಾಗ ಆಗ್ಯೋಕು.

 

 

1

ಅಡಿಗೆ ಸತ್ಯಣ್ಣನ ಸಣ್ಣ ಮಗಳು ರಮ್ಯ..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

ಅದು ಸಣ್ಣದಿಪ್ಪಗ ಕೂಗುಸ್ಸು ಹೆಚ್ಚಿಗೆ..

ಒಂದಿನ ಸತ್ಯಣ್ಣ, ಹೆಂಡತಿ ಶಾರದೆ, ಈ ಕೈ ಕೂಸಿನ ಕರ್ಕೋಂಡು ಎಲ್ಯೋ ಅನುಪತ್ಯದ ಊಟಕ್ಕೆ ನಡಕ್ಕೊಂಡು ಹೋಗ್ಯೊಂಡಿತ್ತವು..

ಇನ್ನೆಂತ .. ಬಸ್ಸು ಹೋವ್ತ ಮಾರ್ಗಲ್ಲಿ ರಜಾ ನಡಕ್ಕೊಂಡು ಮುಂದೆ ಹೋಗಿ ಬಲತ್ತಿಂಗೆ ತಿರುಗಿ ತೋಟಕ್ಕಿಳುದು ಮೇಗೆ ಹತ್ತಿರೆ ಮನೆ ಎತ್ತಿತ್ತು..

ಕೂಸು ಕೂಗಲೆ ಸುರುಮಾಡಿತ್ತು..

ಮಾರ್ಗದತ್ರೆ ಬಂದಪ್ಪದ್ದೆ ಕಾಸರಗೋಡು ಪುತ್ತೂರು ಬಸ್ಸು ಬತ್ತಾ ಇಪ್ಪದು ಕಂಡತ್ತು..

ಸತ್ಯಣ್ಣ° ಬಸ್ಸಿಂಗೆ ಅಡ್ಡ ಕೈ ತೋರಿಸಿದ°..

ಬಸ್ಸು ಹತ್ರೆ ಬಂದು ನಿಂದತ್ತು..

ಕಂಡೆಕ್ಟರ ತಲೆ ಹೆರಹಾಕಿ ಕೇಳಿತ್ತು..  ಭಟ್ರಿಂಗೆ ಎಲ್ಲಿಗೆ ಹೋಯೇಕು?”

ಸತ್ಯಣ್ಣ°.. – “ ಎಂಗೊಗೆ ಅನುಪತ್ಯದ ಮನಗೆ ಹೋಯೇಕು., ಕೂಸು ತರ್ಕ ಮಾಡ್ಳೆ ಸುರುಮಾಡಿತ್ತು. ರಜಾ ಹಾರ್ನ್ ಹಾಕಿ ಶಬ್ದ ಮಾಡುವಿರೋ . ಕೂಸು ಕೂಗುಸ್ಸು ನಿಲ್ಸುಗು”  😀

~~

2

ಅಡಿಗೆ ಸತ್ಯಣ್ಣಂಗೆ ಅನುಪತ್ಯದ ಮೇಗೆ ಅನುಪತ್ಯ..

ಒಂದಿನವೂ ಮನೇಲಿ ಪುರುಸೊತ್ತಿಲ್ಲಿ ಒರಗಲೆ ಪುರುಸೊತ್ತಿಲ್ಲೆ..

ಸತ್ಯಣ್ಣಂಗೆ ಒಂದರಿ ಅಪ್ಪೆಹುಳಿ ಕುಡಿಯೆಕು ಹೇಳಿ ಆತು..

ಒಂದಿನ ಅನುಪತ್ಯ ಇತ್ತಿಲ್ಲೆ , ಪುರುಸೊತ್ತು ಸಿಕ್ಕಿತ್ತು..

ಇರುಳಿಂಗೆ ಅಪ್ಪೆ ಹುಳಿ ರಸ (ಜ್ಯೂಸ್) ಮಾಡಿಯೇ ಬಿಟ್ಟ°..

ಒಂದರಿಯಂಗೆ ಒಳ್ಳೆ ರುಚಿ ಆತು ಹೇಳಿ ಐದು ಗ್ಲಾಸು ಕುಡುದ್ದದೂ ಆತು..   

ಹಸೆ ಬಿಡುಸಿ ಮನುಗಿದ ಸತ್ಯಣ್ಣಂಗೆ ಗಮ್ಮತು ಒರಕ್ಕು..

ಉದಿಯಪ್ಪಗೆ ಶಾರದೆ ಏಳ್ಸಿರೂ ಹಂದಿದ್ದನಿಲ್ಲೆ ಸತ್ಯಣ್ಣ..

ರಜಾ ಹೊತ್ತು ಕಳುದು ಎದ್ದು ಕೂದು ನೋಡುವಾಗ ಗಂಟೆ ಹತ್ತು..

ಶಾರದೆ ವಾಪಾಸು ನೆಂಪು ಮಾಡಿತ್ತು… ಉದಿಯಪ್ಪಗ ರಂಗಣ್ಣನೊಟ್ಟಿಂಗೆ ಹೋಳಿಗೆ ಮಾಡ್ಳೆ ಹೋಪಲಿದ್ದು ಹೇಳಿದ್ದಿ..

ಸತ್ಯಣ್ಣ : ಹಾ° ಅಪ್ಪನ್ನೆ…. ಹೋಯೇಕು ಹೋಯೇಕು. ತಡವಾತೀಗ.;(ಹಸೆ ಮಡ್ಸಿಗೊಂಡೇ..) ಶಾರದೇ, ನಮ್ಮಲ್ಲಿ ಇನ್ನು ಅಪ್ಪೆಹುಳಿ ಮಾಡ್ಳೇ ಆಗ, ಕಂಡಾಪಟ್ಟೆ ಒರಕ್ಕು ಬತ್ತು !  😀

~~

3

ಅಡಿಗೆ ಸತ್ಯಣ್ಣ° ಎಷ್ಟು  ಎಷ್ಟು ಅನುಪತ್ಯಕ್ಕೆ ಹೋಳಿಗೆ ಮಾಡಿದನೋ ಏನೋ..- ಅವಂಗೇ ಲೆಕ್ಕವೇ ಇರ..

ಕೆಲವು ಅನುಪತ್ಯದ ಮನೆಗಳಿಂದ ಹೋಪಗ ಆರೋ ಹತ್ತೋ ಹೋಳಿಗೆ ಸತ್ಯಣ್ಣನ ಜೋಳಿಗೆ ಸೇರದ್ದೇ ಇರ.. . ಪ್ರೀತಿಲಿ ಶಾರದೆಗೆ ಆತು ರಮ್ಯಂಗಾತು ಹೇಳಿ ಮನೆ ಹೆಮ್ಮಕ್ಕೊ ಕಟ್ಟಿ ಕೊಡ್ತವುದೇ.

ಒಂದಿನ ಹಾಂಗೇ ಆತಿದಾ…

ಕಾನಾವು ಅಕ್ಕನಲ್ಲಿ ಅಡಿಗೆ ಮುಗುಶಿ ರಂಗಣ್ಣನೊಟ್ಟಿಂಗೆ ಪಲ್ಸರ್ ಬೈಕಿಲಿ ಹಿಂದೆ ಕೂದೊಂಡು ಬಂದೊಂಡಿತ್ತವದಾ..

ವಿಟ್ಲ ದಾಂಟಿ ರಜಾ ಮುಂದೆ ಬಪ್ಪಗ .. ಕಾಸ್ರೋಡು ಮಾರ್ಗದ ಪೆಟ್ರೋಲ್ ಪಂಪ್ ಎದುರೆ ಪೋಲೀಸು ಜೀಪು ನಿಂದು ವಾಹನ ಶೋಧನೆ, ದಾಖಲೆ ಪತ್ರ ಶೋಧನೆ ಮಾಡಿಗೊಂಡಿತ್ತವು…

ರಂಗಣ್ಣನ ಬೈಕು ಹತ್ರೆ ಬಂದಪ್ಪದ ಪೋಲೀಸುಗೊ ಕೈ ಅಡ್ಡ ತೋರ್ಸಿದವು..

ರಂಗಣ್ಣ° ಕರೇಲಿ ಬೈಕು ನಿಲ್ಸಿ – ಸತ್ಯಣ್ಣೋ.. ಆರ್.ಸಿ ಬುಕ್ ಇಲ್ಲನ್ನೇಹೇದು ತಲೆಬೆಶಿ ಸುರುಮಾಡಿದ°..

ತಲೆಬೆಶಿ ಮಾಡೇಡ .. ನೋಡ್ವೋ°.. ಹೇದು ಸತ್ಯಣ್ಣ° ರಂಗಣ್ಣಂಗೆ ಸಮಾಧಾನ ಹೇಳಿ ಪೋಲೀಸು ಹತ್ರೆ ಬಂದವು..

ಸತ್ಯಣ್ಣ° ಚೀಲಲ್ಲಿತ್ತಿದ್ದ ಎರಡು ಹೋಳಿಗೆ ಕಟ್ಟ ತೆಗದು ಎದುರು ಕೈಲಿ ಹಿಡ್ಕೊಂಡ..

 R C Book ಪೋಲೀಸು ಕೇಳಿಯಪ್ಪಗ ಸತ್ಯಣ್ಣ ಚೀಲಕ್ಕೆ ಕೈ ಹಾಕಿ ಹುಡ್ಕುತ್ತಾಂಗೆ ನಟನೆ ಮಾಡಿದ°..

S I  ಕೇಳಿತ್ತು – “ಅದೆಂತದ್ದು ಕೈಲಿ ಪೇಪರ್ಲಿ ಕಟ್ಟಿಯೊಂಡಿಪ್ಪದು ?”

ಸತ್ಯಣ್ಣ° ಆ ಎರಡೂ ಕಟ್ಟ ಪೋಲಿಸು ಕೈಲಿ ಮಡಗಿ – “ಇದು ಹೋಳಿಗೆ ಸಾರ್.., ಇಂದು ಮಾಡಿದ್ದು… ಭಾರೀ ಲಾಯಕ ಆಯ್ದು.. ನಿಂಗೊಗೆ ಆತು ಹೇಳೀಗ ಚೀಲಂದ ತೆಗದ್ದು .. ತೆಕ್ಕೊಳ್ಳಿ”

S I  ಹೇಳಿತ್ತು – ” ನಿಮಿಗೆ ಥಾಂಕ್ಸ್ ಭಟ್ರೇ., ನೀವು ಹೊರಡಿ”

ಬೈಕು ಹೆರಟತ್ತು ..

ಸತ್ಯಣ್ಣ° ರಂಗಣ್ಣನತ್ರೆ ಕೇಟ° – ಹೇಂಗೆ ರಂಗಣ್ಣೋ..” 😀

 

~~

4

ಅಡಿಗೆ ಸತ್ಯಣ್ಣ ಇಲ್ಲದ್ದಲ್ಲಿ ಅವನ ರೈಟ್ ಹ್ಯಾಂಡ್ ರಂಗಣ್ಣಂದೇ ಕಾರ್ಬಾರು..

ಕಾರ್ಬಾರು ಮಾತ್ರ ಅಲ್ಲ ದರ್ಬಾರು ಕೂಡ

ಹೋದವಾರ ಒಂದಿಕ್ಕೆ ಅನುಪತ್ಯಲ್ಲಿ ಎಂತಾತು ಹೇಳಿರೆ …

ಅಡಿಗೆ ಸತ್ಯಣ್ಣಂಗೆ ಬೇರೆ ಹೋಪಲಿದ್ದೂಳಿ ಒಂದನೇ ಹಂತಿ ಉಂಡಕೂಡ್ಳೆ ಚೀಲ ಹೆಗಲಿಂಗೆ ಹಾಕಿದ°..

ರಂಗಣ್ಣ ಮನೆಯೋರೊಟ್ಟಿಂಗೆ ಎರಡ್ನೇ ಹಂತಿಲಿ..

ತಾಳು ಸಾರು ಕೊದಿಲು ಚಿತ್ರಾನ್ನ ಮೆಣಸುಕ್ಕಾಯಿ ಅವಿಲು ಮೇಲಾರ ಪಾಯಸ ಹೋಳಿಗೆ ಕಾಯಿಹಾಲು … ಅಲ್ಪ ಬಗೆಗೊ

ಮಜ್ಜಿಗೆ ಉಂಡೊಂಡಿಪ್ಪಗ ಮನೆ ಹೆಮ್ಮಕ್ಕ ಹೇದವು – ” ಅಡಿಗೆ ಲಾಯಕ ಆಯ್ದು ರಂಗಣ್ಣೋ”

ಹೇಳಿಕೆಗೆ ಪ್ರತಿಹೇಳಿಕೆ ಹೇಳದ್ರೆ ರಂಗಣ್ಣಂಗೆ ಉಂಡದು ಕರಗ..

ರಂಗಣ್ಣ° ಹೇಳಿಯೇ ಬಿಟ್ಟ° –  ” ಅಡಿಗೆ ಲಾಯಕ ಆಗದ್ದೆ.. ಕಾಯಿ ಕಡದ್ದದು ಆನು!’ ”

ಹಿಂದಿಕ್ಕೆ ಕೂದುಗೊಂಡಿದ್ದ ಬೈಲ ಬೋಸಬಾವ° ಮೆಲ್ಲಂಗೆ ಸೊರ ತೆಗದ° ” ತರಕಾರಿ ಕೊರದ್ದು ಆನು ” 😀

 

~~

5

ಅಡಿಗೆ ಸತ್ಯಣ್ಣಂಗೆ ಅಂತೇ ಇಡ್ಕುದು, ಚೆಲ್ಲುವದು ಕಂಡ್ರೇ ಆಗ..

ಅಡಿಗೆ ಮಾಡುವಾಗ ಎಣ್ಣೆ ಚೆಲ್ಲಿರೂ ಕೈಲಿ ಬರಗಿ ತಲಗೆ ಉದ್ದಿಗೊಂಗು..

ಅಂದು ಉದಿಯಪ್ಪಗ ಶಾರದೆ ತೆಳ್ಳವು ಮಾಡಿದ್ದು ಕಾಪಿಗೆ..

ಅಡಿಗೆ ಸತ್ಯಣ್ಣ° ಜೇನ ಇತ್ತೆ ಕೊಂಡ ತೆಳ್ಳವಿಂಗೆ ಕೂಡ್ಳೆ ಹೇದ ಶಾರದೆಗೆ..

ಶಾರದೆ ಜೇನ ಕುಪ್ಪಿ ತಂದು ಹತ್ರೆ ಮಡಿಗಿಕ್ಕಿ ದೋಸೆ ಎಳಕ್ಕಲೆ ಹೋತು..

ದೋಸೆ ತಿಂದುಗೊಂಡಿದ್ದ ಸತ್ಯಣ್ಣ ಮೆಲ್ಲಂಗೆ ಜಾಗ್ರತೆಲಿ ಜೆನ ಕುಪ್ಪಿ ಮುಚ್ಚಳ ತೆಗವಲೆ ಸುರುಮಾಡಿದ°..

ಕುಪ್ಪಿ ಜಾರಿ ಕೆಳ ಬಿದ್ದತ್ತು .. ಜೇನ ನೆಲಕ್ಕೆ ಹರುದತ್ತು

ನೆಲಕ್ಕ ಬಿದ್ದ ಎಣ್ಣೆಯನ್ನೇ ತಲಗುದ್ದಿಗೊಂಬ ಸತ್ಯಣ್ಣ° ಈಗ ಎಂತ ಮಾಡಿಕ್ಕು ಹೇದಿನ್ನು ಪ್ರತ್ಯೇಕ ನಿಂಗೊಗೆ ಹೇಳೇಕೂದಿಲ್ಲೆನ್ನೆ! 😀

 

~~

6

ಕೂಳಕ್ಕೋಡ್ಳ ತಿಥಿ ಅಡಿಗ್ಗೆ ಹೋದ ಸತ್ಯಣ್ಣ° ಅಡಿಗೆ ಎಲ್ಲ ಆಗಿ ಅಕೇರಿಗೆ ಹಪ್ಪಳ ಹೊರ್ಕೊಂಡು ಇತ್ತಿದ್ದ° ..

ಸಾವಕಾಶಲ್ಲಿ ಹೆಗಲ ತೋರ್ತ ತಲಗೆ ಮುಂಡಾಸು ಕಟ್ಟಿ ಕಡವಕಲ್ಲ ಮೇಗೆ ಮಣೆ ಮಡಿಗಿ ಕೂದ ರಂಗಣ್ಣ° ಲೋಕಾಭಿರಾಮ ಸುರುಮಾಡಿದ°..

ರಂಗಣ್ಣ° – ಅಪ್ಪೋ ಸತ್ಯಣ್ಣ.., ಸವಿತಕ್ಕನ ಮಗ° ಉದಯವಾಣಿ ಕೆಲ್ಸವ ಬಿಟ್ಟಿದನಡೋ.. ಅಪ್ಪೋ? ಅಷ್ಟೊಳ್ಳೆ ಉದಯವಾಣಿ ಕೆಲ್ಸ ಬಿಟ್ಟದೆಂತಕಪ್ಪ ಅಂವ°?

ಸತ್ಯಣ್ಣ° – ಅಪ್ಪು.. ನಿಜ. ಆರಿಂಗೆ ಅಕ್ಕೋ ಅದು ಮತ್ತೆ…. ದಿನಾ ಚಳಿಚಳಿ ಉದಗಾಲಕ್ಕೆದ್ದು ಮನೆಮನಗೆ ಪೇಪರು ಹಾಕೆಕ್ಕಡೋ..!! 😀

 

~~  

7

ಕೀರಿಕ್ಕಾಡು ಅಜ್ಜಂಗೆ ಓ ಮನ್ನೆ ಕುಂಬ್ಳೆ ಜಾತ್ರಗೆ ಹೋದಲ್ಲಿ ಬೆಳಿ ಬೆಳಿ ಕಡ್ಳೆ ಮಿಠಾಯಿ ತೆಗದು ತಿಂದು ಭಾರೀ ರುಚಿ ಹಿಡುದ್ದಿದ್ದತ್ತು.

ಅಡಿಗೆ ಸತ್ಯಣ್ಣನತ್ರೆ ಮನೇಲಿ ಮಾಡ್ಸೆಕು ಹೇಳಿ ಮನೇಲಿ ಮಾತುಕತೆ ಆತು.

ಒಂದಿನ ಕೀರಿಕ್ಕಾಡಜ್ಜ° ಬಳ್ಳಂಬೆಟ್ಟು ತಿರ್ಗಾಸಿಲ್ಲಿ ಬಸ್ಸಿಂಗೆ ನಿಂದುಗೊಂಡಿಪ್ಪಗ ಎಲ್ಯೋ ಅನುಪತ್ಯ ಅಡಿಗೆ ಮುಗುಶಿ ಪಲ್ಸರ್ ಬೈಕಿಲ್ಲಿ ಸತ್ಯಣ್ಣ ಬಪ್ಪದು ಕಂಡತ್ತು.

ಕೀರಿಕ್ಕಾಡಜ್ಜನ ಕಂಡಪ್ಪದ್ದೆ ಸತ್ಯಣ್ಣ ಬೈಕಿನ ಒಂದಾರಿ ಕರೇಂಗೆ ನಿಲ್ಲುಸು ಹೇದ° ರಂಗಣ್ಣಂಗೆ..

ಉಭಯಕುಶೋಲೋಪರಿ ಸಾಂಪೃತ…. ಕೀರಿಕ್ಕಾಡಜ್ಜ° ಮನೇಲಿ ಕಡ್ಳೆ ಮಿಠಾಯಿ ಮಾಡಿ ಕೊಡ್ಳೆ ಎಡಿಗೊ, ಸಾಮಾನು ಎಲ್ಲ ಆನು ತಂದು ಮಡುಗುತ್ತೆ ಹೇದವು.

ಅದಕ್ಕೆಂತಾಯೇಕು, ನಾಡದ್ದು ಆದಿತ್ಯವಾರ ಪುರುಸೊತ್ತಿದ್ದು… ಬತ್ತೆ., ಇಂತಿಂತದ್ದು ಇಂತಿತ್ತಿಷ್ಟು ತಂದು ಮಡುಗಿ ಹೇದ – ಸತ್ಯಣ್ಣ°.

ಕೀರಿಕ್ಕಾಡಜ್ಜನ ತಲೆಲಿ ಬೆಳಿಕಡ್ಳೆಮಿಠಾಯಿ ಒಂದೇ ನೆಂಪು. ಕೇಟವು – ಅಪ್ಪೋ ಸತ್ಯಣ್ಣ, ನಿಂಗೊ ಹೇಳಿದ ಪಟ್ಟಿಲಿ ಬೆಳಿ ಮಾಡ್ತದು ಹೇಳಿದ್ದಿಲ್ಲೆ.

ಸತ್ಯಣ್ಣ° ಹೇದ° – ಅದೆಲ್ಲ ಆನು ಬಪ್ಪಗ ತೆಕ್ಕೊಂಡು ಬತ್ತೆ. ನಿಂಗೊ ಅದರ ಹುಡ್ಕೆಡಿ.

ಆತು ಹೇದು ಹೆರಟವು…. ಪುರುಸೊತ್ತಿನ ಆದಿತ್ಯವಾರವೂ ಬಂತು, ಸತ್ಯಣ್ಣ° ಬಂದು ಕಡ್ಳೆ ಮಿಠಾಯಿಯೂ ಆತು.

ಒಳ್ಳೆ ಲಾಯಕ ಆಯ್ದು‘ – ಹೇದವು ಅಜ್ಜ°….  ‘ಅಂಬಗ ಎಷ್ಟಾತು ನಿಂಗಳ ಬಿಲ್ಲು ಸತ್ಯಣ್ಣ?’

ಸತ್ಯಣ್ಣ ನ್ಯಾಯವಾದ ಅವನ ರೇಟು ಮುನ್ನೂರು ರುಪಾಯಿ ಕೊಡಿ ಸಾಕು ಹೇದ°. ..

ಅದು ನಿಂಗಳ ಪೀಸು ಆತಷ್ಟೆ. ಆ ಬೆಳಿ ಮಾಡ್ತದು ತೈಂದಿ ಬೇರೆ ನಿಂಗೊ… ಅದಕ್ಕೆಷ್ಟಾತು ಹೇಳೆಕು – ಹೇದವು ಅಜ್ಜ°..

ಅದು ಸಾರ ಇಲ್ಲೆ ಮಾಂವ. ಅದು ಎನ್ನ ಲೆಕ್ಕಲ್ಲಿ ಇರ್ಲಿ. ನಿಂಗೊ ಎಂತ ಅನ್ಯನೋ. ಸಾರ ಇಲ್ಲೆ ಬಿಡಿ ಹೇದ° ಸತ್ಯಣ್ಣ°..

ಅಂದರೂ ಅಜ್ಜಂಗೆ ಮನಸು ಒಪ್ಪಿತ್ತಿಲ್ಲೆ. ಮೂನ್ನೂರು ಮದಾಲು ಕೈಲಿ ಮಡ್ಸಿ ಕೊಟ್ಟಿಕ್ಕಿ ಇನ್ನೂರು ಸುರುಟಿ ಸತ್ಯಣ್ಣನ ಕಿಸಗೆ ತಳ್ಳಿದವು.

ಸಂತೋಷಲ್ಲಿ ಸತ್ಯಣ್ಣ ಪಲ್ಸರ್ ಬೈಕ್ ಏರಿಗೊಂಡ°..

ಮರುದಿನ ಕೀರಿಕ್ಕಾಡಜ್ಜ ಹೇಳ್ತದು.. – ಅಡಿಗೆ ಸತ್ಯಣ್ಣನ ಕಡ್ಳೆ ಮಿಠಾಯಿ ಭಾರೀ ಲಾಯಕ ಆಯ್ದು. ಬೆಳಿ ಮಾಡ್ತದಕ್ಕೆ ಪೈಸೆ ಸಾನ ತೆಕ್ಕೊಂಡಿದನಿಲ್ಲೆ!!… 😀

 

~~  

8

ಅಡಿಗೆ ಸತ್ಯಣ್ಣಂಗೆ ಗಟ್ಟದ ಮೇಲೆ ಒಂದು ದೊಡಾ ಅನುಪತ್ಯಡೋ… ಕುಂಡೆ ತೊರುಸಲೂ ಪುರುಸಿತ್ತಿಲ್ಲೆ – ರಂಗಣ್ಣ° ಹೇಳಿದ್ಸು..

ಇದು ಹೇಂಗೋ ಸತ್ಯಣ್ಣನ ಕೆಮಿಗೂ ಬಿದ್ದತ್ತು..

ಹೀಂಗೆ.. ಒಂದಿನ ಶೇಂತಾರು ಅಜ್ಜನಲ್ಲಿ ಅನುಪ್ಪತ್ಯ –  ಕೋಡಿ.

ಸತ್ಯಣ್ಣಂಗೆ ಒಲಗೆ ಕಿಚ್ಚಾಕಿ ಆಗಲಿ ಹೇದು ರಂಗಣ್ಣ° ಕಾದೊಂಡು ನಿಂದುಗೊಂಡಿತ್ತಿದ್ದ°..

ರಂಗಣ್ಣನ ದೆನಿಗೊಂಡು ಸತ್ಯಣ್ಣ ಹೇಳಿದನಡಾ – ಇದ ರಂಗಣ್ಣ°, ಅನುಪತ್ಯದ ಅಡಿಗ್ಗೆ ಬಂದರೆ ತಳಿಯದ್ದೆ ಅಡಿಗೆ ಮಾಡುಸ್ಸು ನಮ್ಮ ಕೆಲಸ. ಅಂತೇ ನಿಂದೊಂಡು ಕುಂಡೆ ತೋರ್ಸುತ್ತಲ್ಲ. ಹೇಳಿದ್ದು ಗೊಂತಾತನ್ನೇ.

ರಂಗಣ್ಣಗೆ ವಿಷಯ ಎಂತಾರ ಹೇಳಿ ಅಂದಾಜಿ ಆತು. ಈಗ ತಳಿಯದ್ದೆ ತಲೆತೋರ್ಸಿಗೊಂಡನಡಾ 😀

 

 ~~~ 😀 😀 ~~~

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಪೋಲೀಸಿಂಗೆ ಹೋಳಿಗೆ ಕಟ್ಟಕೊಟ್ಟು ಮಸ್ಕಾ ಹೊಡದ್ದು ಸೂಪರ್ ಆತು ಚೆನ್ನೈ ಭಾವಯ್ಯ. ಕಡ್ಳೆ ಮೀಟಾಯಿ ಬೆಳಿ ಮಾಡಿದ್ದಕ್ಕೆ ಪೈಸೆ ಸಾನು ತೆಕ್ಕೊಳದ್ದದುದೆ ಬೆಸ್ಟ್ ಆಯಿದು. ಇನ್ನೂ ಬರಳಿ ಸತ್ಯಣ್ಣನ ನೆಗೆಗೊ.

  [Reply]

  VA:F [1.9.22_1171]
  Rating: +2 (from 2 votes)
 2. ಡೈಮಂಡು ಭಾವ

  ಭಾವ ಅಂಬಗ ಸತ್ಯಣ್ಣ ಆ ಜೇನ ತಲೆಗೆ ಉದ್ದಿಗೊಂಡನೋ.. ಹಾಂಗೆ ಮಾಡಿದರೆ ತಲೆ ಕೂದಲು ಬೆಳಿ ಅಕ್ಕನ್ನೇಪ್ಪಾ… :)
  ~
  ~
  ರೈಸಿದ್ದು ಭಾವ ರೈಸಿದ್ದು… ಬರಲಿ ಬರಲಿ ಇನ್ನೂ ಜೋಕುಗೊ….

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಸದ್ಯ ರಂಗಣ್ಣ ಹತ್ರೆ ಇತ್ತಿದ್ದನ್ನಿಲ್ಲೆ ಅಪ್ಪೋ 😀

  [Reply]

  VA:F [1.9.22_1171]
  Rating: +2 (from 2 votes)
 3. ಮುಣ್ಚಿಕಾನ ಭಾವ

  ಚೆನ್ನೈಭಾವಾ……
  “ಸತ್ಯಣ್ಣನ ಜೋಕುಗೊ” ಭಾರೀ ರೈಸುತ್ತಾ ಇದ್ದು… :)
  ಮುಂದೆ ಇದರ ಒಂದು ಪುಸ್ತಕ ರೂಪಲ್ಲಿ ತಪ್ಪಲೆ ಅಕ್ಕು.

  [Reply]

  VA:F [1.9.22_1171]
  Rating: +1 (from 1 vote)
 4. ಗಿರೀಶ

  ಅಡಿಗೆ ಸತ್ಯಣ್ಣಂಗೆ ವೈಶಾಖಲ್ಲಿ ಭಾರೀ ಡಿಮ್ಯಾಂಡು…
  ಶಂಕ್ರಣ್ಣನ ಮನೆಯ ತಿಥಿ ಅಡುಗೆ ಮಾಡಿ ಅರ್ಜೆಂಟಿಲ್ಲಿ ಹೆರಡುವಾಗ..
  ಶಂಕ್ರಣ್ಣ ” ಇಂದು ಅಡುಗೆಗೆ ಸ್ವಲ್ಪ ಉಪ್ಪು ಜಾಸ್ತಿ ಆತೊ ಹೇಳಿ ಅಲ್ದ ಸತ್ಯಣ್ಣೊ”
  ಸತ್ಯಣ್ಣ ” ಉಪ್ಪು ಹಾಕಿದ ಪ್ರಮಾಣ ಸರಿಯಾಗಿತ್ತು ಆದರೆ ಶೆಖೆ ಅಲ್ದ.. ಮನೆಂದ ಬಪ್ಪಾಗ ಭೈರಾಸು ತಪ್ಪಲೆ ಬಿಟ್ಟು ಹೋಯಿದು”
  ಈಗ ಬೆಗರುವ ಸರದಿ ಶಂಕ್ರಣ್ಣಂದು!!!!

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ಡಾಮಹೇಶಣ್ಣಅಕ್ಷರ°ಜಯಶ್ರೀ ನೀರಮೂಲೆಕಾವಿನಮೂಲೆ ಮಾಣಿಪೆರ್ಲದಣ್ಣದೀಪಿಕಾಪುತ್ತೂರುಬಾವದೊಡ್ಮನೆ ಭಾವಶೀಲಾಲಕ್ಷ್ಮೀ ಕಾಸರಗೋಡುಸರ್ಪಮಲೆ ಮಾವ°ಶಾಂತತ್ತೆಬಂಡಾಡಿ ಅಜ್ಜಿವೆಂಕಟ್ ಕೋಟೂರುಅನು ಉಡುಪುಮೂಲೆಗೋಪಾಲಣ್ಣಚೆನ್ನಬೆಟ್ಟಣ್ಣಬಟ್ಟಮಾವ°ಬೊಳುಂಬು ಮಾವ°ಡೈಮಂಡು ಭಾವಸುವರ್ಣಿನೀ ಕೊಣಲೆವಸಂತರಾಜ್ ಹಳೆಮನೆದೊಡ್ಡಭಾವಅಡ್ಕತ್ತಿಮಾರುಮಾವ°ವಿಜಯತ್ತೆಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ