‘ಅಡಿಗೆ ಸತ್ಯಣ್ಣ’ – 40

December 12, 2013 ರ 11:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

1

ಅಡಿಗೆ ಸತ್ಯಣ್ಣಂಗೆ ಕೋರಿಕ್ಕಾರಿಲಿ ತಿಥಿ ಅನುಪ್ಪತ್ಯ

ಕೋರಿಕ್ಕಾರಿಲಿ ತಿಥಿಗೆಲ್ಲ ಹೋಳಿಗೆ ಮಾಡ್ತ ಕ್ರಮ ಇಲ್ಲೆ. ಸಣ್ಣಕೆ ಜಿಲೇಬಿಯೋ, ಮೈಸೂರು ಪಾಕೋ, ಗೆನಾ ಬಾಳೆಣ್ಣು ಸಿಕ್ಕಿರೆ ಹಲ್ವವೋ, ಸಾಟೋ ಹೀಂಗೆಂತಾರು

ಈ ಸರ್ತಿ ತಿಥಿಗೆ ಜಿಲೇಬಿಯೇ ಮಾಡಿದ್ಸು. ಅಡಿಗೆ ಸತ್ಯಣ್ಣನ ಜಿಲೇಬಿ ಮೆಶಿನಿಲ್ಲ್ಯೇ.1070105_337852496346404_1008803229_n

ತಿಥಿ ಅಡಿಗೆ ಹೇದರೆ ಮತ್ತೆ ಬಾಳೆ ಹಾಕುತ್ತನ್ನಾರವೂ ಅಡಿಗೆ ಮಾಡಿಗೊಂಡು ಕೂಬಲೆ ಎಂತ್ಸೂ ಇಲ್ಲೆ.

ಎಣ್ಣೆ ಕೊಟ್ಟು ಅವ್ವು ಮಿಂದು ಬಂದಪ್ಪಗ ಅಡಿಗೆ ಸತ್ಯಣ್ಣಂಗೆ ಸುಟ್ಟವೊಡೆ ಹಪ್ಪಳವೂ ಆಯ್ದು.

ಕಾಯಾಲಿಂಗೆ ಕಡವಲೆ ಇಲ್ಲದ್ದ ಕಾರಣ ರಂಗಣ್ಣಂಗೂ ಕಡವ ಕಲ್ಲು ತೊಳದಾಯ್ದು

ರಂಗಣ್ಣ ಹಾಂಗೆ ಚಾವಡಿಲಿ ನಡಕ್ಕೊಂಡು ಹೋಪಗ ಅಲ್ಲಿ ನೇತುಗೊಂಡಿದ್ದ ಕೆಲೆಂಡರಿಲ್ಲಿ ಸೂಜಿ ಒಂದು ಕುಂಞಿ ತುಂಡು ನೂಲಿನೊಟ್ಟಿಂಗೆ ಕುತ್ತಿಮಡಿಗಿದ್ದದು ಕಂಡತ್ತು

ರಂಗಣ್ಣಂಗೆ ನೆಂಪಾತು. ಸೂಜಿ ಇದ್ದು ಹೇಂಗೂ ಇಲ್ಲಿ. ಅಂಗಿ ಗುಬ್ಬಿ ಹೋದ್ದರ ಹಾಕಿ ಹೊಲಿವಲಕ್ಕೀಗ. ಒಂದು ಕೆಲಸವೂ ಮುಗಿತ್ತನ್ನೆ.

ಸೂಜಿ ತೆಕ್ಕೊಂಡು ಆಚಿಗೆ ಈಚಿಗೆ ಗಿಳಿಬಾಗಿಲೆಡೆ ದಾರಂದಲ್ಲಿ ಹುಡ್ಕಲೆ ಸುರುಮಾಡಿದ°

ಸತ್ಯಣ್ಣ ಅಲ್ಲಿಂದಲೇ ಕೇಟ° – “ಎಂತರ್ನೋ ನೀ ಹುಡುಕ್ಕುಸ್ಸು?”

ರಂಗಣ್ಣ ಸತ್ಯವನ್ನೇ ಹೇದ° – ನೂಲುಂಡೆ ಮಾವ°, ನೂಲುಂಡೆ. ಗುಬ್ಬಿ ಹೊಲಿವಾಲೆ!

ಸತ್ಯಣ್ಣ ಹೇದ° – ಈ ಸುಕ್ರುಂಡೆ ಮಾಡ್ತಲ್ಲಿ ಬಂದು ನೀನು ನೂಲುಂಡೆ ಹುಡ್ಕುತ್ತೆನ್ನೇ. ಮನಗೆ ಹೋಯ್ಕಿ ನೂಲುಂಡೆ ಹುಡ್ಕಿರೆ ಸಾಕು ಮಾರಾಯ 😀

 

**

2

ಕೋರಿಕ್ಕಾರ ತಿಥಿ ಮರದಿನ ಗೋಳಿತ್ತಡ್ಕಲ್ಲಿ ತಿಥಿ ಅನುಪತ್ಯ.

ಹತ್ರವೇ ಆದ ಕಾರಣ ಉದಿಯಪ್ಪಗ ಹೋಗಿ ಎತ್ತ್ಯೊಂಡ್ರೆ ಸಾಕು.

ಮುನ್ನಾಣ ದಿನ ಲಟ್ಟುಸುತ್ತ ಏರ್ಪಾಡು ಎಂತ್ಸೂ ಇದ್ದತ್ತಿಲ್ಲೆ.

ರಂಗಣ್ಣಂಗೆ ಆಚೊಂಡೆಂದ ಬರೆಕ್ಕಪ್ಪದು , ಸತ್ಯಣ್ಣಂಗೆ ಇಚೊಂಡೆಂದ ಹೋಯೆಕ್ಕಪ್ಪದು ಗೋಳಿತ್ತಡ್ಕಕ್ಕೆ ಹೋಯೆಕ್ಕಾರೆ

ಹಾಂಗೆ ಅಲ್ಲಿಗೆ ನೀನು ಸೀತಾ ಬಂದಿಕ್ಕು ಹೇದು ಮಾತು ರಂಗಣ್ಣಂಗೆ.

ಸತ್ಯಣ್ಣ ಹೋಗಿ ಎತ್ತಿ ಮಾರಾಪ ಕೊಕ್ಕೆಲಿ ನೇಲ್ಸಿ ಅಡಿಗ್ಗೆ ಕೂಬ ಮಡಿಯ ಕಟ್ಟಿಯೊಂಡಪ್ಪಗ ಮೆಲ್ಲಂಗೆ ರಂಗಣ್ಣನೂ ಎತ್ತಿಗೊಂಡ°

ಬಪ್ಪಾಳೇ ರಂಗಣ್ಣನ ಮೋರೆ ಇಂಗು ತಿಂದ ಮಂಗನಾಂಗೆ ಇದ್ದತ್ತು. ಮೊರೆ ಬಾಡಿ ಸಣ್ಣಾಯ್ದು

ಸತ್ಯಣ್ಣ ಕೇಟ° – ಎಂತಾತೋ ಹೀಂಗೊಂದು ನಿನಗಿಂದು. ?!

ರಂಗಣ್ಣ ಮತ್ತೂ ಮೋರೆ ಚೆಪ್ಪೆ ಚೆಪ್ಪೆ ಮಾಡ್ಯೊಂಡೇ ಹೇದ° – ಅಲ್ಲ ಮಾವ ಉದಿಗಾಲಕ್ಕೆ ಕಂಡ ಕನಸು ನಿಜ ಆವ್ತಡ ಅಪ್ಪೋ??!

ಸತ್ಯಣ್ಣ° – ಏ ಮಾರಾಯ! ಎಂತ ಕನಸು ಬಿದ್ದತು ನಿನಗಿಂದು??!

ರಂಗಣ್ಣ ಮತ್ತೂ ರಾಹು ಬಡುದೋರ ಹಾಂಗೆ ಇತ್ತಿದ್ದ°., ಹೇದ° – ಉದಿಗಾಲಕ್ಕೆ ಎನ್ನ ಆರೋ ಎಳಕ್ಕೊಂಡೋಗಿ ಕೈಕಾಲು ಕಟ್ಟಿ ಹಾಕಿ ಕೈ ಕಾಲು ಕತ್ತರುಸುತ್ತ ಹಾಂಗೆ ಕಂಡತ್ತು.

ಸತ್ಯಣ್ಣ° ಹೇದ° – ಹಾಂಗೆಲ್ಲ ಕನಸು ನಿಜ ಆವ್ತಿತ್ತರೆ ಆನು ಏವತ್ತೇ ದೇವೇಂದ್ರನ ಜಾಗೆಲಿ ಕೂರ್ತಿತ್ತೆ. ದೇವೇಂದ್ರ ಇಲ್ಲಿ ಬಂದು ಅಡಿಗ್ಗೆ ಹೋಯೇಕ್ಕಾತು ! ಕನಸು ಬೀಳುವದು ಒಂದು ಯೋಗ, ಕನಸ್ಸಿಲ್ಲಿ ಬೀಳುವದು ಮತ್ತೊಂದು ಯೋಗ !!

ಮಾವ° ಇಟ್ಟು ಹೇದಮತ್ತೆ ರಂಗಣ್ಣಂಗೆ ರಜಾ ಸಮಾಧಾನ ಆತು. ಹೋಗಿ ಅಂಗಿ ಗುಬ್ಬಿ ಪೀಂಕುಸಲೆ ಸುರುಮಾಡಿದ° 😀

**

3

ದೀಪಾವಳಿ ಪಟಾಕಿ ಗೌಜಿ ದೀಪಾವಳಿ ಒಂದು ದಿನಲ್ಲಿ ಮುಗಿತ್ತಾರು ದೀಪಾವಳಿ ಶುದ್ದಿಗೊ  ಮಾತ್ರ ಮತ್ತೂ ಮುಂದುವರಿವಲೆ ಅಕ್ಕಪ್ಪೋ

ರಮ್ಯಂಗೆ ಪಟಾಕಿ ಆಗ್ಬೇಕು ಹೇದು ಪಟಾಕಿ ತಪ್ಪಲೆ ಕುಂಬಳೆ ವರೇಂಗೆ ಹೋಪಲೆ ಹೆರಟ ಸತ್ಯಣ್ಣಂಗೆ ಬದಿಯಡ್ಕಕ್ಕೆ ಎತ್ತುವಾಗ ಅಲ್ಲಿ ಬೆಂಗಳೂರ ಬಾವ ಕಾಂಬಲೆ ಸಿಕ್ಕಿ ಪಟಾಕಿ ಹೊಟ್ಟುಸಲಪ್ಪಗ ರಂಗೋಲಿ ಊರಿಂಗೆ ಎತ್ತೆಕು ಹೇದು ಬೆಂಗ್ಳೂರ ಬಾವ° ಬೆಂಗ್ಳೂರ ಬಸ್ಸಿಂಗೆ ಹತ್ತಿದ್ದು ನೆಂಪಿದ್ದ°?!

ಕಲ್ಲುಗುಂಡಿಂದ ಕಳುಶಿಕ್ಕಿ ಬಂದ ಮರದಿನ ಕುಂಬ್ಳೆಜ್ಜ ಸತ್ಯಣ್ಣಂಗೆ ಸಿಕ್ಕಿಯಪ್ಪಗ ಬೆಂಗ್ಳೂರ ಬಾವ ಈ ಸರ್ತಿ ದೀಪಾವಳಿ ಇಲ್ಲದ್ದ ಸುದ್ದಿ ಮಾತಾಡಿ ಹೋತು

ಅಷ್ಟಪ್ಪಗ ಅಲ್ಲದ ಒಳ ವಿಷಯ ಬೇರೆಯೇ ಇದ್ದತ್ತು ಹೇದು ಸತ್ಯಣ್ಣಂಗೂ ಗೊಂತಾದ್ದು !

ಬೆಂಗ್ಳೂರ ಬಾವಯ್ಯ ಮಾಣಿಗೆ ಸುರೂವಾಣ ದೀಪಾವಳಿ ಹೇದು ಬೆಂಗ್ಳೂರಿಂದ ಪಟಾಕಿ ತೆಕ್ಕೊಂಡು ಬಂದ್ಸಡ

ಕುಂಬ್ಳಗೆ ಎತ್ತಿಯಪ್ಪಗ ಹಿಳ್ಳೆಮಾಣಿಗೆ ಪಟಾಕಿ ಎಂತ್ಸಕೆ ತಂದು ಹೇದು ಕುಂಬ್ಳೆ ಅಜ್ಜಿ ಎರಡ ಗೌಜಿ ಮಾಡಿಯಪ್ಪಗ, ಇದರಿನ್ನು ಇಲ್ಲಿ ಹೊಟ್ಟಿಸಕ್ಕಲೆ ಗೊಂತಿಲ್ಲೆ, ರಂಗೋಲಿ ಊರಿಂಗೇ ಆತು ಹೇದು ಅದರ ವಾಪಾಸು ತೆಕ್ಕೊಂಡು ಹೆರಟದಾಗಿ ಕುಂಬ್ಳೆಜ್ಜ ಸತ್ಯಣ್ಣನತ್ರೆ ಹೇದ್ದು ಮರದಿನ ಬೈಲಿಂಗೂ ಗೊಂತಾದ ಶುದ್ದಿಯಪ್ಪ :D

 

**

4

ಇಪ್ಪದರ ಇಪ್ಪಾಂಗೆ ಹೇಳ್ಸರ್ಲಿ ಅಡಿಗೆ ಸತ್ಯಣ್ಣ ಬಲ

ಸತ್ಯಣ್ಣ ಸತ್ಯ ಅಲ್ಲದ್ದೆ ಲೊಟ್ಟೆ ಹೇಳ್ತ ಕ್ರಮವೇ ಇಲ್ಲೆ

ಸತ್ಯಣ್ಣನ ಹೇಂಗಾರು ಕೆಣುಶೆಕು ಹೇದು ಕಣ್ಣ ಹಾಕಿ ಕೂಯ್ದವು ಕೆಲವು ಜೆನಂಗ

ಸತ್ಯಣ್ಣನ ಮೇಗೆ ಎಟ್ಟು ಜೆನ ದೃಷ್ಟಿ ಹಾಕಿರೂ ಸತ್ಯಣ್ಣಂಗೆ ಏವ ದೃಷ್ಟಿಯೂ ತಾಗುತ್ತಿಲ್ಲೆ

ದೃಷ್ಟಿತಾಗುತ್ತಕ್ಕೆ ಬೇಕಾಗಿ ಸತ್ಯಣ್ಣ ಏವ ಉರ್ಕು ಬಳ್ಳಿಯನ್ನೂ ಕೈಗೋ ಸೊಂಟಕ್ಕೋ ಕಟ್ಟಿದ್ದನಿಲ್ಲೆ

ಸತ್ಯಣ್ಣನತ್ರೆ ಲೆಕ್ಕಂದೆಚ್ಚಿಗೆ ಒಕ್ಕಿ ಕೇಟ್ರೆ ಸತ್ಯಣ್ಣ° ಪ್ರೂಪು ನೆಗ್ಗಿ ತೋರ್ಸುಗು

ಹಾಂಗೇದು ಅವನತ್ರೇ ಮುಖಾಮುಖಿ ಪಂಥ ಕಟ್ಟಿಕ್ಕುಲೆ ಆರಿಂಗೂ ಬೆಟ್ರಿ ಸಾಲ

ಅಂದರೂ ಸತ್ಯಣ್ಣನ ಚೇಡ್ಸದ್ದೆ ಕೂದರೆ ಜೆವ್ವನಿಗರಿಂಗೆ ಹೊತ್ತೋವ್ತಿಲ್ಲೆ

ತಲೆಂಗಳ ಮದುವೆ ಕಳುದ ಮರುದಿನ ದೇರಾಜೆಲಿ ಅನುಪ್ಪತ್ಯ

ಅನುಪ್ಪತ್ಯಕ್ಕೆ ಬಂದ ಒಬ್ಬ ಭಾವಯ್ಯ ಸುರುಮಾಡಿದ° – ಇನ್ನಾಣ ಪ್ರಧಾನಿ ಆಗಿ ಅಡಿಗೆ ಸತ್ಯಣ್ಣನನ್ನೇ ನಿಲ್ಸಿರೆ ಹೇಂಗೆ?

ಹೇದ್ದರ ಎಲ್ಲ ಕೇಳದ್ದಾಂಗೆ ಕೂದುಗೊಂಬಲೆ ಅಡಿಗೆ ಸತ್ಯಣ್ಣ ಎಂತ ಚೆವುಡನೋ?!

ಸತ್ಯಣ್ಣ ಹೇದ° – ಬೇಡಪ್ಪ ಬೇಡ. ನವಗಿಲ್ಲಿ ಸರಿಮಾಡೇಕ್ಕಾದ್ದೇ ಬೇಕಾಷ್ಟಿದ್ದು. ಇಲ್ಯಾಣದ್ದರ ಸರಿ ಮಾಡಿ ಆಗದ್ದೆ ಅಲ್ಯಾಣದ್ದರ ಸರಿ ಮಾಡ್ಳೆ ಹೋಗಿ ಎಂತ ಗುಣವೂ ಇಲ್ಲೆ.

ಅಟ್ಟಪ್ಪಗ ಅರಸಿಕೆರೆ ಅಜ್ಜ ಹೇದವು  – ಕಂಡತ್ತೋ ಸತ್ಯಣ್ಣ ಹೇದ್ದರ್ಲಿ ಎಟ್ಟು ಮರ್ಮ ಇದ್ದು! ಮನೆ ಮನೆ ಸುಧಾರಣೆ ಆದರೆ ಗ್ರಾಮ ಸುಧಾರಣೆ, ಗ್ರಾಮ ಸುಧಾರಣೆ ಆದರೆ ರಾಜ್ಯ ಸುಧಾರಣೆ, ರಾಜ್ಯ ಸುಧಾರಣೆ ಆದರೆ ದೇಶ ಸುಧಾರಣೆ. ಇದೇ ಅಲ್ದೋ ರಾಮ ರಾಜ್ಯ  😀

**

5

ಅಡಿಗೆ ಸತ್ಯಣ್ಣಂಗೆ ರಜ ಬಿಪಿ ರಜ ಶುಗರು ಇದ್ದರೂ ಎಲ್ಲವೂ ಕಂಟ್ರೋಲಿಲಿ ಇದ್ದು.

ಇಪ್ಪಾಂಗೆ ಸತ್ಯಣ್ಣ ಈಗಂಗೆ ಗಟ್ಟಿಮುಟ್ಟು

ಹೇದರೆ ಎಲ್ಲವನ್ನೂ ಸಮಧಾನಲ್ಲಿ ತೆಕ್ಕೊಂಡ ಕ್ರಮ ಮದಲಿಂದಲೇ ಅಭ್ಯಾಸಲ್ಲಿ ಬೈಂದು

ಅಂದರೂ ಈಗಾಣ ತಿಂಬದೇ ವಿಷ ಹೇದಾದಮತ್ತೆ ಎಟ್ಟು ಆರೋಗ್ಯ ನೋಡ್ತವಂಗೂ ರಜ ರಜ ತಟಪಟ ಆಗದ್ದೆ ಇರ್ತ

ದೇರಾಜೆಂದ ಬಂದ ಮರದಿನ ಅಡಿಗೆ ಸತ್ಯಣ್ಣಂಗೆ ಎದೆಲಿ ಎಂತದೋ ಡಬಡಬ ವ್ಯತ್ಯಾಸ ಆದಾಂಗೆ ಆತು

ಶಾರದಕ್ಕಂಗೆ ಸತ್ಯಣ್ಣನ ಆರೋಗ್ಯ ರಹಸ್ಯ ಎಲ್ಲ ಗೊಂತಿದ್ದ ಕಾರಣ ಶಾರದಕ್ಕ° ಹೇತು – ನಿಂಗೊಗೆ ಭ್ರಾಂತು!

ಅಂದರೂ ಅಂದು ಅನುಪ್ಪತ್ಯ ಎಲ್ಲ್ಯೂ ಇಲ್ಲೆನ್ನೇ ಪುರುಸುತ್ತಿದ್ದನ್ನೇದು ಪೆರ್ಲ ಡಾಕುಟ್ರಣ್ಣನತ್ರೆ ಹೋದ°

ಡಾಕುಟ್ರಣ್ಣನು ಕೆಮಿಗೆ ಮಡಿಗೆ ಎದಗೆ ಮಡಿಗೆ ಕೈ ಒತ್ತಿ ಹಿಡುದು ಬಾಯಿ ಒಡಶಿ ಕಣ್ಣರಳ್ಸಿ ಎಲ್ಲ ನೋಡಿಕ್ಕಿ – “ಎಲ್ಲ ಸಮ ಇದ್ದು ಸತ್ಯಣ್ಣೋ!., ಒರಕ್ಕು ನೇರ್ಪ ಇಲ್ಲದ್ದೆ, ಹೊತ್ತೊತ್ತಿಂಗೆ ಆಯೇಕ್ಕನ್ನೇದು ನಿಂಗೊ ಅತ್ತಿತ್ತೆ ಹೊಡಚ್ಚುವಾಗ ಹೀಂಗೆ ಸಣ್ಣಸಣ್ಣಕೆ ಉದ್ವೇಗಂದ ಅಪ್ಪದಟ್ಟೇ. ಗಾಬರಿ ಏನೂ ಇಲ್ಲೆ” ಹೇದು ಹೇದ°. 

“ಎಂತಕ್ಕೂ ನಿಂಗೊ ರಜಾ ದಿನಾ ವ್ಯಾಯಾಮ,ಪ್ರಾಣಾಯಾಮ, ಯೋಗ ಏನಾರು ಮಾಡ್ಯೊಂಡು ಬಪ್ಪದು ಒಳ್ಳೆದು” ಹೇದು ಹಿತೋಪದೇಶ ಕೊಟ್ಟ ಡಾಕುಟ್ರಣ್ಣ.

“ಅಲ್ಲ ಡಾಕುಟ್ರಣ್ಣ.,  ಯೋಗ, ಪ್ರಾಣಾಯಾಮ ಹೇದು ಅಂತೇ ಕೂಬದರಿಂದ ಪೇಟೆಯೋರು ಮಾಡ್ತಾಂಗೆ ಉದಿಯಪ್ಪಗ ಎದ್ದಾಂಗೆ ರಜಾ ವಾಕಿಂಗು ಹೋದರೆ ಆಗದ?!”   – ಸತ್ಯಣ್ಣ ವಾಪಾಸು ಕೇಟ°

ಅದೆಂತ್ಸೆಪ್ಪಾ ಕೂದಲ್ಲೇ ಮಾಡ್ತರ ಬಿಟ್ಟು ನಡಕ್ಕೊಂಡು ವ್ಯಾಯಾಮ ಮಾಡ್ತೇನು ಹೇದು ಹೇಳ್ಸು ಇವ° ಡಾಕುಟ್ರಣ್ಣ ಎಂತ ಹಾಂಗೆ?!! ಹೇದು ಕೇಟ°

ಸತ್ಯಣ್ಣ ಹೇದ° – ಇದಾ ಯೋಗ ಪ್ರಾಣಾಯಾಮ ಹೇದು ಉದಿಯಪ್ಪಗ ಎದ್ದು ಕೂದೊಂಡು ಬಾಯಿಮುಚ್ಯೊಂಡು ಕೂರ್ತರಿಂದ ಒಂದರಿ ಎಲೆ ಬಾಯಿಗೆ ತುಂಬ್ಸಿಂಡು ಮಾರ್ಗಲ್ಲೇ ಉದ್ದಾಕೆ ನಡಕ್ಕೊಂಡು ಮಾರ್ಗದ ಎರಡು ಹೊಡೆಲಿ ಪಿಚಕ್ಕನೆ ತುಪ್ಪಿಯೊಂಡು ಹೋಪಲಕ್ಕು, ಎಲೆತಿಂತ ಕೆಲಸವೂ ಆತು, ವ್ಯಾಯಾಮ ಆದ ಹಾಂಗೆಯೂ ಆತು.  😀

ಡಾಕುಟ್ರಣ್ಣಂಗೆ ಗೊಂತಿದ್ದು ಇವಂಗೆ ಇದೆಲ್ಲ ಸರಿಬಾರ. ಹಾಂಗಾಗಿ ಡಾಕುಟ್ರಣ್ಣ –  “ಅಕ್ಕಕ್ಕು, ಆದರೆ ಉದಿಯಪ್ಪಗ ಎದ್ದು ಇನ್ನು ಗುಡ್ಡಗೆ ಹೋವ್ತೇದು ಹೆರಟ್ರಾಗ” ಹೇದ° ಜಾಗ್ರತಗೆ 😀

**

6

ಅಡಿಗೆ ಸತ್ಯಣ್ಣ° ಮಾಡಾವು ಅನುಪ್ಪತ್ಯ ಕಳ್ಸಿಕ್ಕಿ ಮನಗೆ ಎತ್ತಿಯಪ್ಪದ್ದೆ ಶಾರದಕ್ಕ ಪೇಟೆಂದ ಅಂಗುಡಿ ಸಾಮಾನು ಆಗ್ಬೇಕು ಹೇದು ಪಟ್ಟಿ ಬರದು ಮಡಿಗಿದ್ಸರ ಕೊಟ್ಟತ್ತು ಸತ್ಯಣ್ಣನೈಲಿ.

ಪಟ್ಟಿಲ್ಲಿ ಅಗತ್ಯ ಸಾಮಾನುಗಳ ಹೆಸರುಗಳೇ ಇತ್ತಿದ್ದ ಕಾರಣ ಇನ್ನು ನಾಳಂಗೆ ತಪ್ಪೋ ಹೇಳ್ವಾಂಗೆ ಇಲ್ಲೆ

ಬೈಕಿಂಗೆ ಒಂದ ಮೆಟ್ಟಿ ಅದರ ಕೆಮಿ ಪೀಂಟಿಸ್ಯೊಂಡು ಹೆರಟ ಪೆರ್ಲ ಪೇಟಗೆ ಕಾಯಂ ಪದ್ಯಂಬಟ್ಟನ ಅಂಗುಡಿಗೆ

ಗೇಟಿನತ್ರೆಂಗೆ ಎತ್ತುವಾಗ ಎದುರಂದ ಒಂದು ಬಸ್ಸು ಬಂತು .

ಸತ್ಯಣ್ಣ ಎಡದ ಕರೆಂದಲೇ ಹೋಗ್ಯೊಂಡಿದ್ದರೂ ಒಂದು ಕರಿನಾಯಿ ಬಲತ್ತಿಂದ ಎಡತ್ತಿಂಗೆ ಅಡ್ಡ ಓಡಿತ್ತು

ಬೈಕಿಂಗೆ ಕೈಕಾಲ ಮೆಟ್ಟಿ ನಿಲ್ಸುಲೆ ಅಂದಾಜಿ ಮಾಡಿರೂ ಬೈಕು ಪತ್ತಿಂಗೆ ಸಿಕ್ಕದ್ದ ಅಡ್ಡಡ್ಡ ಮಾಲಿತ್ತು

ಬೈಕು ಮಾಲುತ್ತರ ಕಂಡು ಅದರೊಟ್ಟಿಂಗೆ ಇನ್ನಾಗ ಹೇದು ಸತ್ಯಣ್ಣ ರಪಕ್ಕನೆ ಬೈಕಬಿಟ್ಟು ಎಡತ್ತಿಂಗೆ ಹಾರ್ಲೆ ಹೆರಟ°

ಸತ್ಯಣ್ಣ ಬೈಕ ಬಿಟ್ಟರೂ ಬೈಕು ಸತ್ಯಣ್ಣನ ಅಷ್ಟು ಪಕ್ಕಕ್ಕೆ ಬಿಡೆಕ್ಕನ್ನೆ ಅದರ ನೇರ್ಪಕ್ಕೆ ಕೂರ್ಸಿಯೋ ನಿಲ್ಸಿಯೋ ಸಾಂಚಿಯೋ ಮಾಡದ್ದೆ!

ಅಂತೂ ಸತ್ಯಣ್ಣ ಮಾಲಿದ°, ಸತ್ಯಣ್ಣನ ಮೇಗೆ ಬೈಕು ಮಾಲಿತ್ತು, ಇಬ್ರೂ ಮಾರ್ಗದ ಕರೆಂಗೆ ಸಾಂಚಿದವು

ಬಸ್ಸು ಅತ್ತೆ ಹೋತು, ನಾಯಿ ಇತ್ತೆ ಹೋತು, ಅಲ್ಲಿ ಬಿದ್ದ ಸತ್ಯಣ್ಣಂಗೆ ಮಾಂತ್ರ ರಜ ಪರಂಚಿದಾಂಗೆ ಗಾಯವೂ ಆತು

ಪುಣ್ಯಕ್ಕೆ ಬೈಕಿಂಗೆ ಎಂತ ಆಯ್ದಿಲ್ಲೆ!

ಮೆಲ್ಲಂಗೆ ಕಾಲ ಬಲುಗಿ ಎದ್ದು ಬೈಕ ಸರ್ತ ಮಾಡಿ, ಪೆರ್ಲ ಪೇಟಗೆ ಬಂದಾತು. ಮೇಗೆ ನೋಡಿರೆ ಡಾಕುಟ್ರಣ್ಣ ಇದ್ದವು.

ಎಂತಕೂ ಒಂದರಿ ಡಾಕುಟ್ರಣ್ಣ ಕಂಡಿಕ್ಕುವದೇ ಒಳ್ಳೆದು ಹೇದು ಸತ್ಯಣ್ಣ ಮೋಂಟುಸಿದಾಂಗೆ ಮಾಡ್ಯೊಂಡು ಮೇಗೆ ಬಂದ°

ಡಾಕುಟ್ರಣ್ಣ ಸತ್ಯಣ್ಣ ಪರೀಕ್ಷೆ ಮಾಡಿಗೊಂಡು ಕೇಟವು – “ಅದು ಏವ ನಾಯಿ ಸತ್ಯಣ್ಣ ಅಡ್ಡ ಹೋದ್ಸು?!” :(

ಸತ್ಯಣ್ಣ ಹೇದ° – “ಇದೊಳ್ಳೆ ಪಂಚಾತಿಗೆ ಆತನ್ನೇ ಡಾಕುಟ್ರಣ್ಣ.., ನಾಯಿ ಅದು ಒಂದು ಕರಿ ನಾಯಿ. ಎದುರೆ ಬಂದ ಬಸ್ಸಿಂಗಾರೂ  ‘ಆಂಜನೇಯ’ ಹೇದು ಬೋರ್ಡು ಇದ್ದು . ಆ ನಾಯಿಗೆ ಬೋರ್ಡು ಸಾನ ಇತ್ತಿಲ್ಲೆ. ಮತ್ತೆ ನಿಂಗೊಗೀಗ ಆನು ಅದು ಏವುದು ಹೇದು ಹೇಳ್ವೆ!  😀

**

7

ಮನ್ನೆ ಕಾರ್ತಿಕದೀಪದ ದಿನ ಶಾರದಕ್ಕ ಹೊತ್ತೋಪಗ ದೇವರಕೋಣೆಲಿ ದೀಪ ಹೊತ್ತುಸಿಕ್ಕಿ ಹೆರ ದೀಪಸಾಲು ಮಡುಗಲೆ ಹೇದು ತಿಬಿಲೆದೀಪಂಗಳ (ಅಗಳುದೀಪ ಕೆಲವು ದಿಕ್ಕೆ) ತಂದು ದೀಪಕ್ಕೆ ಬತ್ತಿ ಎಣ್ಣೆ ಹಾಕಿ ಮಡಿಗಿತ್ತು

ಇನ್ನೆಂತ ದೀಪ ಹೊತ್ತುಸಿ ಮಡಿಗಿಕ್ಕುತ್ತೆ ಹೇದು ಹೆರಟಪ್ಪಗ ಕರೆಂಟತ್ತೆ ಪುಸ್ಕ

ಇನ್ನೀ ಕರ್ಗುಡಿ ಕಸ್ತಲೆಲಿ ಹೇಂಗಪ್ಪ ದೀಪ ಮಡುಗುಸ್ಸು ಹೇದು ಸಹಸ್ರನಾಮ ಸುರುಮಾಡಿತ್ತು ಶಾರದಕ್ಕ

ಮನೇಲಿ ಇತ್ತಿದ್ದ ಅಡಿಗೆ ಸತ್ಯಣ್ಣ ಹೇದ° – “ಇಂದು ಕಾರ್ತಿಕ ದೀಪ, ದೀಪ ಹೊತ್ತುವ ಚಂದ ಕಾಣೆಕ್ಕಾರೆ ಕಸ್ತಲೆಲೆ ನೋಡೆಕು. ಅದಕ್ಕೆ ಬೇಕಾಗಿಯೇ ಕರೆಂಟು ತೆಗದ್ದಾಯ್ಕು ಶಾರದೆ. ನೀನು ದೀಪ ಹೊತ್ತುಸಿ ಸಾಲಾಗಿ ಮಡುಗು ನೋಡೋ. ಅದಾ… ಎಲ್ಲಿಂದಲೋ ಪಟಾಕಿ ಕೇಳುತ್ತು” 😀

**

8

ದೊಡ್ಡಭಾವನ ಪೈಕಿ ಮೊನ್ನೆ ಒಂದು ಮನೆ ಒಕ್ಕಲು ಓ ಆ ಮೈಸೂರಿಲ್ಲಿ

ಸೆಟ್ಟು ಒಟ್ಟಿಂಗೆ ಸತ್ಯಣ್ಣನೂ ಹೋಗಿತ್ತಿದ್ದ ಮುನ್ನಾಣ ದಿನವೇ.

ಕಾರ್ಯಕ್ರಮ ಎಲ್ಲ ಚೆಂದಕೆ ಕಳುತ್ತು, ಬಾಳೆಲೆ ಹಾಕಿ ಬಡುಸಲೆ ಹೆರಟವು

ಗುರಿಕ್ಕಾರ° ಬಳ್ಸಲೆ ನಿಂದ ಒಬ್ಬೊಬ್ಬನತ್ರೆಯೂ ಹೇಳ್ಯೊಂಡಿತ್ತಿದ್ದ – “ ಇದಾ ನೋಡಿ ಬಳ್ಸಿ., ನೋಡ್ಯೊಂಡು ಬಳ್ಸಿ” 

ಬಳ್ಸುಲೆ ನಿಂದ ನೂಜಿ ಬಾವ ಅಡಿಗೆ ಕೊಟ್ಟಗೆಲಿ ಸತ್ಯಣ್ಣನತ್ರೆ ನೆಗೆ ಮಾಡಿ ಕೇಟ° – ಆರ ನೋಡಿ ಬಳ್ಸೆಕ್ಕಾದ್ದು ಸತ್ಯಣ್ಣ°?!

ಸತ್ಯಣ್ಣ° ಹೇದ° – ಗುರಿಕ್ಕಾರ್ರು ನೋಡಿ ಬಳ್ಸಿ ಹೇಳ್ಸು ಉಂಬಲೆ ಕೂದವರ ಮಾತ್ರ ಅಲ್ಲ, ಬಳ್ಸುವದರನ್ನೂ ನೋಡಿ ಬಳ್ಸಿ, ಪಾಕಯ್ತನ ಒಳಿವಲೂ ಆಗ, ಸಾಕಾಗದ್ದೆ ಅಪ್ಪಲೂ ಆಗ

ಸತ್ಯಣ್ಣನ ಸಿದ್ದಾಂತ ಕೇಟಪ್ಪಗ ದೊಡ್ಡಭಾವಂಗೂ – ‘ಓಹ್ ಅಪ್ಪನ್ನೇ.. ಸತ್ಯಣ್ಣ ಹೇದ್ದು ಸತ್ಯ’ ಹೇದು ತೋರಿತ್ತಡ 😀

**

9

ಅಡಿಗೆಯೋರ ಮನೆ ಅನುಪ್ಪತ್ಯಕ್ಕೆ ಅವ್ವೇ ಅಡಿಗೆ ಮಾಡ್ಸು ಹೇದು ಏನಿಲ್ಲೆ

ಬಟ್ಟಮಾವನ ಮನೆ ಅನುಪ್ಪತ್ಯಕ್ಕೆ ಅವ್ವೇ ಬಟ್ಟಮಾವ ಆವ್ಸು ಹೇದೂ ಏನಿಲ್ಲೆ

ಹಾಂಗೆ ಅಡಿಗೆ ಸತ್ಯಣ್ಣನ ಮನೆ ಅನುಪ್ಪತ್ಯಕ್ಕೆ ಅಡಿಗೆ ಸುಬ್ಬಣ್ಣ ಬತ್ಸು

ಅಡಿಗೆ ಸುಬ್ಬಣ್ಣನಲ್ಲಿಗೆ ಅಡಿಗೆ ಸತ್ಯಣ್ಣ ಅಡಿಗ್ಗೆ.

ಹಾಂಗೆ.,  ಓ.. ಮೊನ್ನೆ ಅಡಿಗೆ ಸುಬ್ಬಣ್ಣನಲ್ಲಿ ಮನೆಒಕ್ಕಲು.

ಅಡಿಗೆ ಸುಬ್ಬಣ್ಣಂಗೆ ಸ್ಪೀಕರು ರಜಾ ದೂರ. ಸಣ್ಣಕೆ ಹೇದರೆಲ್ಲ ಕೆಮಿಗೆ ನಾಟ.

ಕೆಲಸಲ್ಲಿ ಮಾತ್ರ ಅಚ್ಚುಕಟ್ಟೂ ಹೇದರೆ ಅಷ್ಟೂ ಅಚ್ಚುಕಟ್ಟು.

ಅವಕ್ಕೆ ಮನೆಒಕ್ಕಲಿನ ತೆರಕ್ಕಿಪ್ಪ ಕಾರಣ ಅಡಿಗ್ಗೆ ಸತ್ಯಣ್ಣನನ್ನೇ ಹೇಳಿದ್ದವು.

ಅಡಿಗೆಯೋರಲ್ಲಿ ಜೆಂಬರ ಆದರೆ ಪಟ್ಟಿ ಮಾಡ್ಲೆ ಹೇದು ಎಂತೂ ಇಲ್ಲೆನ್ನೆ? ಅಡಿಗೆಯೋರು ಸೀದಾ ಹೋದರೆ ಆತು, ಬೇಕಾದ್ದು ಕೈಕ್ಕಾಲಿಂಗೆ ಸಿಕ್ಕುಗಿದಾ.

ಸತ್ಯಣ್ಣ ಹೋಗಿ ಅಪ್ಪಗ ಹಳೆಮನೆಕರೆಲಿಯೇ ದೊಡ್ಡ ಚೆಪ್ಪರ ಹಾಕಿ ಅಡಿಗೆಶಾಲೆ ಮಾಡಿದ್ದವು. ಎಲ್ಲವೂ ತೆಯಾರಾಗಿಯೇ ಇತ್ತು.

ಇರುಳಾಣ ಅಡಿಗೆಗೆ ಬಗೆಗೋ ಎಂತರ, ಎಷ್ಟು ಜೆನಕ್ಕೆ ಹೇಳಿ ಮಾತ್ರ ಸುಬ್ಬಣ್ಣ ಹೇಳಿದ್ದದು.

ರಂಗಣ್ಣನೂ ಇದ್ದ ಕಾರಣ ಸತ್ಯಣ್ಣನ ಕೈ ಬೇಗ ಬೇಗ ಓಡಿತ್ತಿದಾ…

ಅಡಿಗೆ ಹೋಪೋರಲ್ಲಿ ಅಡಿಗೆಗ ಯಾವಾಗಲೂ ಒಳ್ಳೇದೇ ಇರ್ತು ಎಂತಕೆ ಹೇದರೆ, ಅವಕ್ಕೆ ಯೇವ ಬಗೆ ಹೇಂಗೆ ಆವುತ್ತು ಹೇದು ಸರಿಯಾಗಿ ಗೊಂತಿಪ್ಪ ಕಾರಣ ಎಲ್ಲಾ ದಿಕ್ಕೆ ಹೋಗಿ ಮಾಡಿದ್ದದರಲ್ಲಿ ಲಾಯ್ಕ ಐಟಮ್ಮನ್ನೇ ಮಾಡ್ತವು!! 😉 😉

ಸತ್ಯಣ್ಣಂಗೆ ಅಡಿಗೆ ಎಲ್ಲ ತೆಯಾರಾಗಿ ಬಳ್ಸುಲೆ ತೆಕ್ಕೊಂಡು ಹೋಗಿ ಮಡಗಿದರೂ ಬಟ್ಟಮಾವಂದ್ರ ಮಂತ್ರವೇ ಮುಗುದ್ದಿಲ್ಲೆ!

ಕಾದು ಕಾದು ಹಪ್ಪಳ ಹೊರುದೂ ಆತು. ಅಂದರೂ ಬಟ್ಟಮಾವನ ಸೊರ ಕೇಟುಗೊಂಡೇ ಇದ್ದು!! ಮುಂದಾಣ ಕೆಲಸ ಆಯೆಕ್ಕಾದರೆ ಊಟ ಆಯೆಕ್ಕಟ್ಟೇ!

ಕಾದ ರಂಗಣ್ಣಂಗೆ ಬೊಡುದತ್ತು. ಸತ್ಯಣ್ಣನ ಹತ್ರೆ ಕೇಟ°- “ಅಪ್ಪೋ ಮಾವ°, ಈ ಬಟ್ಟಮಾವನ ಮಂತ್ರ ಏಕೆ ಇಂದು ಮುಗಿತ್ತಿಲ್ಲೆ? ಸುಮಾರು ಹೊತ್ತಾತನ್ನೆ! ಹೇಳಿದ ಮಂತ್ರಂಗಳನ್ನೇ ಇರುವಾರ ಹೇಳ್ತಾ ಇದ್ದವೋ ಎಂತ!!” :(

ಸತ್ಯಣ್ಣ ಹೇದ°- “ರಂಗೊ, ನೀನು ಹೋಗಿ ಒಂದರಿ ಬಟ್ಟಮಾವನ ಹತ್ರೆಯೇ ಕೇಟಿಕ್ಕಿ ಬಾ! ಆನು ಇಲ್ಲಿಯೇ ರಜ್ಜ ಕಾಲುನೀಡಿ ಕೂರ್ತೆ ಮಿನಿಯಾ!! ಸುಬ್ಬಣ್ಣಂಗೆ ಕೇಳುದು ರಜ್ಜ ಸಮಸ್ಯೆ ಹೇದು ನಿನಗೆ ಅರಡಿಯದಾ! ಬಟ್ಟಮಾವಂಗೆ ಅಟ್ಟು ದೊಡ್ಡಕ್ಕೆ ‘ಅದು ಮಾಡು.. ಇದು ಮಾಡು’ ಹೇದು ಹೇದು ಮಾಡ್ಸಿ ಅಪ್ಪಗ ರಜ್ಜ ತಡವಾಗದ್ದೆ ಇಕ್ಕೋ!!” 😀

**
10

ಸತ್ಯಣ್ಣ ಕಳುದ ವಾರ ಬೈಲಿನೋರು ಪುತ್ತೂರಿಲ್ಲಿ ಒಂದರಿ ಇಳುದಿಕ್ಕಿ ಒಂದನೇ ಮಾಳಿಗ್ಗೆ ಹೋಗಿ ಚಾಯೆ ಕಾಪಿ ಹೇಳ್ವಾಗ ಎರಡ್ನೇ ಮಾಳಿಗೆಂದ ಕಾಪಿ ಚಾಯೆ ಬೇರೆ ಬೇರೆ ಗ್ಲಾಸಿಲ್ಲಿ ಬಪ್ಪ ಕತೆ ಹೇದ್ದು ನೆಂಪಿದ್ದ?!

ಆ ಜಾಗೆ ಬದಲ್ಸಿದ ಆ ‘ಸುದರ್ಶನ’ದೋರಲ್ಲಿ ವಾಹನ ನಿಲ್ಸೆಕ್ಕಾದರೆ ಪೈಶೆ ಕೊಡೆಕ್ಕಡ್ಡ.

ಅಲ್ಲಿ ಒಂದು ಜವ್ವನಿಗ ಕೈಲಿ ಚೀಟು ಹಿಡ್ಕೊಂಡು ಆರು ಎಲ್ಲಿ ಕಾರು ನಿಲ್ಸಿಕ್ಕಿ ಹೋವುತ್ತವು ಹೇದು ಕಾದೋಂಡಿರ್ತು.

ಬೈಲಕರೆ ಬಾಲಣ್ಣನ ಕಂಡತ್ತು ಪೇಟೆಲಿ ಕಾರು ಹಿಡ್ಕೊಂಡು ತಿರುಗುತ್ತದು ಸತ್ಯಣ್ಣಂಗೆ.

ಏನು ಎಂತ ಹೇದು ವಿಚಾರ್ಸಿದ° ಸತ್ಯಣ್ಣ.

ಅಂಬಗ ಬಾಲಣ್ಣ ಹೇದ°- “ಹೆಂಡತಿಗೆ ಕನ್ನಡ್ಕ ಮಾಡ್ಸಿದ್ದದರ ತೆಕ್ಕೊಂಬಲೆ ಹೋಯಿದು. ಅಲ್ಲಿ ನಿಲ್ಸಿದರೆ ಪೈಶೆ ಕೊಡೆಕ್ಕಿದಾ, ಹಾಂಗೆ ಆನು ಒಂದು ಸುತ್ತು ಬತ್ತಾ ಇಪ್ಪದು. ಇನ್ನೀಗ ಹೋಪಗ ಸರೀ ಅಕ್ಕಿದಾ!!”

ಹ್ಞಾ! ಸರಿ ಹೇದು ಸತ್ಯಣ್ಣ ಇತ್ಲಾಗಿ ಹೆರಟನಡ!

ಅಷ್ಟಪ್ಪಗ ಒಟ್ಟಿಂಗೆ ಇತ್ತಿದ್ದ ರಂಗಣ್ಣ° ಕೇಟನಡ- ಅದೆಂತ ಮಾವ°!,  ಬಾಲಣ್ಣ ಹೀಂಗೆ ಮಾಡುಸ್ಸು? ಅಲ್ಲಿ ನಿಲ್ಲುಸಿದರೆ ಕೊಡೆಕ್ಕಪ್ಪದು ಹತ್ತು ರುಪಾಯಿ. ಈಗ ಈ ಒಂದು ಸುತ್ತು ಹೋದ್ದದರಲ್ಲಿ ಇಪ್ಪತ್ತೈದು ಮುಗಿಯದೋ!!?”

ಅಪ್ರೂಪಲ್ಲಿ ರಂಗಣ್ಣನ ಬಾಯಿಲಿ ಒಳ್ಳೆ ಮಾತು ಬಂದದೇ ಸತ್ಯಣ್ಣಂಗೆ ಭಾರೀ ಕೊಶೀ ಆತಡ.

ಸತ್ಯಣ್ಣ ಹೇದ°- ರಂಗೋ!,  ಅದೆಲ್ಲ ನಿನಗೆ ಈಗ ಹೇದರ ಅರಡಿಯ. ಅವಂಗೆ ಮದುವೆ ಆಯ್ದು. ಅಲ್ಲಿ ಹೋಗಿ ಅಂತೇ ‘ಬನ್ನಿ ಕೂತುಕೊಳ್ಳಿ’ ಹೇಳ್ತದರ ಎಷ್ಟೊತ್ತು ಹೇದು ನೋಡಿಗೊಂಡು ಕೂಬಲೆ ಎಡಿಗು!,  ಬಾ, ನಾವು ಇಲ್ಲೇ ಒಂದು ಕಬ್ಬಿನಹಾಲು ಕುಡುದಿಕ್ಕಿ ಹೋಪೊ” :-)

**
11

ಸತ್ಯಣ್ಣಂಗೆ ಬಾಯಾರು ಹೊಡೆಲಿ ಒಂದು ಅನುಪ್ಪತ್ಯ.

ಸತ್ಯಣ್ಣ ಬೈಕು ಬೇಡ ಹೇದು ಅಂದು ಹೋದ್ದು ಬಸ್ಸಿಲ್ಲಿ.

ಬಾಯಾರಿಲಿ ಇಳುದು ನೆಡವಗ ಒಂದು ಸಣ್ಣ ಪ್ರಾಯದ ಬ್ಯಾರಿ ಕುಟ್ಟನೂ, ಬ್ಯಾರ್ತಿಯೂ, ಎರಡು ಮಕ್ಕಳೂ ಎದುರಂದ ಬಂದವು.

ಬ್ಯಾರಿ ಕುಟ್ಟನ ಕಂಡಪ್ಪಗ ಎಲ್ಲಿಯೋ ನೋಡಿದ ಹಾಂಗೆ ಆತು ಸತ್ಯಣ್ಣಂಗೆ.

ಸತ್ಯಣ್ಣನ ಕಂಡಪ್ಪದ್ದೇ ‘ಅಸ್ಸಲಾಮಲೈಕುಂ’ ಹೇಳಿತ್ತಡ ಆ ಜೆನ.

ಸತ್ಯಣ್ಣಂಗೆ ಗಡಿಬಿಡಿ ಆಗಿ ಹೋತು. ‘ಎಲಾ! ಎಂತ ಕತೆ ಇದು!’ ಹೇದು.

ಅದೇ ಯೋಚನೆಲಿ ಜೆಂಬರದ ಮನೆಗೆ ಎತ್ತಿದನಡ.

ಆಸರಿಂಗೆ ಕುಡುದು ಎಲ್ಲ ಸಾವಕಾಶ ಆಗಿ ಅಪ್ಪಗ ಆ ಮನೆಲಿ ಯಾವಾಗಲೂ ಸುದರಿಕೆಲಿ ಇದ್ದುಗೊಂಡು ಬಟ್ಟಮಾವಂಗೂ, ಸತ್ಯಣ್ಣಂಗೂ ಸಕಾಯ ಮಾಡಿಗೊಂಡಿದ್ದ ಮಾಣಿ ಕಂಡನಿಲ್ಲೆಡ್ಡ.

ಒಬ್ಬ ಭಾವಯ್ಯನ ಹತ್ರೆ ಸತ್ಯಣ್ಣ ಕೇಟನಡ- ‘ನಮ್ಮ ಆದಿತ್ಯನ ಕಾಣ್ತಿಲ್ಲೆನ್ನೆ, ಇನ್ನೂ ಬಯಿಂದನಿಲ್ಲೆಯೋ ಅಂಬಗ?’ – ಹೇದು.

ಆ ಭಾವ ಸತ್ಯಣ್ಣನ ಹತ್ರೆ ಬಂದು ಹೇದನಡ- “ಸತ್ಯಣ್ಣೋ, ಗಟ್ಟಿ ಮಾತಾಡಿಕ್ಕೆಡಿ. ಆ ಮಾಣಿ ಈಗ ನಮ್ಮ ಮಾಣಿ ಆಗಿ ಇಲ್ಲೆ. ಅವ ಈಗ ಅಬ್ದುಲ್ಲ ಆಯಿದ°. ಬ್ಯಾರ್ತಿಯ ಕಟ್ಟಿಗೊಂಡು ಇದೇ ಊರಿಲಿ ಇದ್ದ. ಮನೆಯವಕ್ಕೆ ಎಂತ ಮಾಡುಲೂ ಎಡಿಗಾಯಿದಿಲ್ಲೆ. ಹೇಂಗೆ ಮಾಣಿ ಕೈ ತಪ್ಪಿದ° ಹೇದೇ ಗೊಂತಾಯಿದಿಲ್ಲೆ. ಅಷ್ಟು ನಮ್ಮ ಸಂಸ್ಕೃತಿಲಿ ಇದ್ದವ ಯಾವಾಗ ಧರ್ಮ ಬದಲ್ಸಿದನೋ ಅಂಬಗಳೇ ಗೊಂತಾದ್ದದು. ಒಟ್ಟಾರೆ ಕಷ್ಟ ಆತಪ್ಪಾ!! ಒಬ್ಬನೇ ಮಗ°, ಅಬ್ಬೆ ಅಪ್ಪ ಪ್ರಾಯದೋರು. ಇನ್ನಾರು ನೋಡಿಗೋಳ್ತ° ಅವರ!!”

ಸತ್ಯಣ್ಣಂಗೆ ಮತ್ತೆ ಬಸ್ಸು ಹತ್ತುಲಪ್ಪಗ ಕಂಡ ಮೋರೆ ಒಂದರಿಯಂಗೇ ನೆಂಪಾತದಾ!

ಸತ್ಯಣ್ಣ ರಂಗಣ್ಣನ ಹತ್ರೆ ಹೇದನಡ- “ರಂಗೋ, ನಮ್ಮ ಮಕ್ಕಳ ನಾವು ಎಷ್ಟು ಗಮನ ಮಡಿಕ್ಕೊಂಡರೂ ಸಾಲ. ಹೇಂಗೆಲ್ಲ ಆವುತ್ತು ಲೋಕಲ್ಲಿ. ಛೆ! ನಮ್ಮ ಸಂಸ್ಕೃತಿ ಬಿಟ್ಟು ಕೊಡ್ತದು ಹೇದರೆ ಹೆಂಗಪ್ಪಾ!! ಅನ್ಯದ್ದು ನವಗೆ ಹೇಂಗೆ ಒಗ್ಗುದು? ಇದು ಸಮ ಆತೇ ಇಲ್ಲೆ. ಎಂತಕ್ಕೂ ರಮ್ಯನ ಮೇಗೆ ನಿನ್ನ ಒಂದು ಕಣ್ಣು ಯೇವತ್ತೂ ಇರಲಿ ಮಿನಿಯ”

ರಂಗಣ್ಣಂಗೆ ಬೇರೆ ಎಂತ ಬೇಕು? ಕೊಶೀಲಿ ಹೇದನಡ°- ಮಾವ°, ಅದು ಎನ್ನದು ಯಾವಾಗಲೂ ಇರ್ತು. ಆನಿಪ್ಪನ್ನಾರ ನಿಂಗೊ ಹೆದರೆಡಿ” 😉

**

 

**  😀  😀  😀  **

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಪಷ್ಟಾಯ್ದು! ಆದರೆ ಲಾಷ್ಟಾಣದ್ದು ಮಾತ್ರ ತುಂಬಾ ಗಂಭೀರವಾಗಿ ಆಲೋಚನೆ ಮಾಡೆಕ್ಕಾದ ಸಂಗತಿ!

  [Reply]

  VA:F [1.9.22_1171]
  Rating: +3 (from 3 votes)
 2. ಲಕ್ಷ್ಮಿ ಜಿ.ಪ್ರಸಾದ

  ಆದಿತ್ಯ ಅಬ್ದುಲ್ಲ ಆದ್ದರ ಕೇಳಿ ಸತ್ಯನ್ನಂಗೆ ರಮ್ಯನ ನೆನಪ್ಪಾದ ಹಾಂಗೆ ಇದರ ಓದಿ ಆದರೂ ಎಲ್ಲ ಅಬ್ಬೆ ಅಪ್ಪ ಅವರವರ ಮಕ್ಕಳ ಮೇಲೆ ನಿಗಾ ಮಡುಗಕ್ಕು ಹೇಳಿ ನೆನಪಕ್ಕು! ಎನಗೂ ಸೇರಿ

  [Reply]

  VA:F [1.9.22_1171]
  Rating: +4 (from 4 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಸತ್ಯಣ್ಣನ ಜಿಲೇಬಿ ಮಿಶನ್ನಿನ ಕಲ್ಪನೆ ಮಾಡಿ ನೆಗೆ ಬಂತು. ಅಂದು ಅದರ ವಿದೇಶಕ್ಕೆ ರಫ್ತು ಮಾಡಿದ ಶುದ್ದಿಯುದೆ ನೆಂಪಾತು.
  ಬಾಲಣ್ಣ ಪಾರ್ಕಿಂಗು ಚಾರ್ಜು ಒಳುಸಿ ರೌಂಡು ಹೊಡದ್ದುದೆ ಲಾಯಕಿತ್ತು. ಆದಿತ್ಯ ಅಬ್ದುಲ್ಲ ಆಗಿ ಸಲಾಂ ಅಲೈಕುಂ ಹೇಳಿದ ಹಾಂಗೆ ಕೂಸುಗೊ ಮಾಪುಳ್ತಿಗೊ ಆಗಿ ಆವ್ತದುದೆ ಗ್ರೇಶಿ ಬೇಜಾರಾತು. ಸತ್ಯಣ್ಣ ತಲೆಬೆಶಿ ಮಾಡೆಕು ಹೇಳಿ ಇಲ್ಲೆ, ರಂಗಣ್ಣ ಎಂತಿದ್ದರು ಬಿಡ !

  [Reply]

  VA:F [1.9.22_1171]
  Rating: +3 (from 3 votes)
 4. ಕೆ. ವೆಂಕಟರಮಣ ಭಟ್ಟ

  ಪ್ರಾಣಿ, ಪಕ್ಷಿಗೊ ತಮ್ಮ ಮಕ್ಕಳ ದೊಡ್ಡಪ್ಪನ್ನಾರ ವೈರಿಗಳಿಂದ ಕಾಪಾಡುವ ಹಾಂಗೇ ಆತು ಈಗ ನಮ್ಮ ಹಿಂದೂಗಳ ಪರಿಸ್ಥಿತಿ. ವೈರಿಗೊ ತಮ್ಮ ಸಂಖ್ಯೆ ಜಾಸ್ತಿ ಮಾಡಲೆ ಹಲವಾರು ದಾರಿ ಹಿಡುದ್ದವು. ಒಗ್ಗಟ್ಟೊಂದೇ ಈಗ ನಮಗಿಪ್ಪ ದಾರಿ. ಹರೇ ರಾಮ.

  [Reply]

  VA:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಬೋಸ ಬಾವಡಾಗುಟ್ರಕ್ಕ°ಗೋಪಾಲಣ್ಣಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ಹಳೆಮನೆ ಅಣ್ಣಬಟ್ಟಮಾವ°vreddhiವಿದ್ವಾನಣ್ಣಶಾಂತತ್ತೆಚೆನ್ನೈ ಬಾವ°ಕಜೆವಸಂತ°ಉಡುಪುಮೂಲೆ ಅಪ್ಪಚ್ಚಿವಿಜಯತ್ತೆಜಯಗೌರಿ ಅಕ್ಕ°ಶ್ರೀಅಕ್ಕ°ಪ್ರಕಾಶಪ್ಪಚ್ಚಿದೊಡ್ಮನೆ ಭಾವಅಕ್ಷರದಣ್ಣಪೆಂಗಣ್ಣ°ನೆಗೆಗಾರ°ಶೀಲಾಲಕ್ಷ್ಮೀ ಕಾಸರಗೋಡುಅಜ್ಜಕಾನ ಭಾವಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ