Oppanna.com

'ಅಡಿಗೆ ಸತ್ಯಣ್ಣ°" – 42

ಬರದೋರು :   ಚೆನ್ನೈ ಬಾವ°    on   26/12/2013    6 ಒಪ್ಪಂಗೊ

ಚೆನ್ನೈ ಬಾವ°

1
ಅಂದು ಅನುಪ್ಪತ್ಯ ಇಲ್ಲದ್ದ ಕಾರಣ ಅಡಿಗೆ ಸತ್ಯಣ್ಣಂಗೆ ಎಡೆ ಇದ್ದತ್ತು1070105_337852496346404_1008803229_n
ಉಂಡಾಯಿಕ್ಕಿ ಮಧ್ಯಾಂತ್ರಿಗೆ  ಹೀಂಗೆ ಒಂದರಿ ಎಲ್ಯಾರು ಹೋಯ್ಕಿ ಬತ್ತುಕ್ಕುತೆ ಹೇದು ಬೈಕ ತಿರ್ಗಿಸಿಯೊಂಡು ಎತ್ತಿದ್ದದು ರಂಗಣ್ಣನ ಜಾಲಿಂಗೆ
ರಂಗಣ್ಣ ಮನೆ ಎದುರೆ ಎಡದ ಕರೆಲಿ ಕೈತೊಳೆತ್ತಲಾಗಿ ಇದ್ದ ಬಾಳೆ ಬುಡಲ್ಲಿ ಒಂದು ಗೊನೆಹಾಕಿ ಬಿದ್ದ ಜಾಗೆಯ ಸಪಾಯಿ ಮಾಡಿ ಬೆರೊಂದು ಬಾಳೆಕುರುಳೆ ನೆಟ್ಟಿಕ್ಕಿ ಅದನ್ನೇ ನಿಂದು ನೋಡಿಗೊಂಡಿತ್ತಿದ್ದ°
ಸತ್ಯಣ್ಣ° ಬಂದವನೇ ಬೈಕ ಕರೇಲಿ  ಸ್ಟೇಂಡಿಲ್ಲಿ ಬಿಟ್ಟಿಕ್ಕಿ – ‘ಎಂತ್ಸೋ ನೋಡ್ಸು’ ಹೇದು ರಂಗಣ್ಣನತ್ರೆ ಬಂದ°
“ಅಲ್ಲ ಮಾವ° ಇಲ್ಲಿ ಹಾಕಿದ ಮದಲಾಣ ಬಾಳೆಗೊನೆ ಹಣ್ಣು ಬರೇ ಚೆಪ್ಪೆ ಇತ್ತಿದ್ದು. ಇದಕ್ಕಿನ್ನು ಸೀವು ಬಾಳೆಹಣ್ಣು ಗೊನೆ ಸಿಕ್ಕುತ್ತಾಂಗೆ ಮಾಡ್ಸಲೆಂತಾರು ಹಿಕ್ಮತ್ತು ಇದ್ದೋದು ಯೋಚನೆ ಮಾಡ್ತಾ ಇದ್ದೆ.” – ರಂಗಣ್ಣ° ಸತ್ಯಣ್ಣನತ್ರೆ  ಸತ್ಯವನ್ನೇ ಹೇದ°
ಅದಕ್ಕೆ ರಂಗೋ!, ತೊಂಡೆ ಚೆಪ್ಪರದ ಬುಡಕ್ಕೆ ಹಿಂಡಿ ಕರಡಿ ಬಿಡ್ಸು ಕೇಳಿದ್ಯೋ.., ಹಾಂಗೇ ಬಾಳೆಹಣ್ಣು ಚೀಪೆ ಆಗಿ ಸಿಕ್ಕೆಕಾರ ಇದರ ಬುಡಕ್ಕೆ ರಜ ಸಕ್ಕರೆ ಪಾಕವೋ, ಬೆಲ್ಲದ ರವೆಯೋ ಎರದು ನೋಡು. ಎರಡು ತಿಂಗಳು ಕಳುದು ಬೇಕಾರೆಒಂದು ಕಿಲೋ ಜೇನ ಇದರ ಬುಡಕ್ಕೆ ಎರದು ನೋಡು.  ಬಂದವಕ್ಕೆ ಚೀಪೆ ಚೀಪೆ ಬಾಳೆಣ್ಣು ಹೇದು ಕೊಡ್ಳಕ್ಕು ಮತ್ತೆ”  😀
**
2
ಮಣಿಲ ಅಪ್ಪಚ್ಚಿಯಲ್ಲಿ ಅಂದು ಅನುಪ್ಪತ್ಯ.
ದೂರ ದೂರಂದೆಲ್ಲ ನೆಂಟ್ರುಗೊ ಬಂದಿತ್ತವು ಅಲ್ಲದ್ದೆ ಮಣಿಲ ಅಪ್ಪಚ್ಚಿಯ ಮಗಳ ಪ್ರೆಂಡುಗೊ ಹನಿಯ ಬೆಂಗಳೂರಿಂದಲೂ ಬಂದಿತ್ತವು.
ಮಣಿಲ ಅಪ್ಪಚ್ಚಿಯ ಮಗಳು ಬೆಂಗ್ಳೂರ್ಲಿ  ಒಂದು ಪ್ರತ್ಯೇಕ ಫ್ಲಾಟಿಲ್ಲಿ ಐದಾರು ಕೂಸುಗೊ ಸೇರ್ಯೊಂಡು ಇದ್ದುಗೊಂಡು ಅದೆಂತ್ಸೋ ಕಂಪ್ಯೂಟ್ರ ತಟ್ಟುತ್ತ ಉದ್ಯೋಗಕ್ಕೆ ಕಲಿತ್ತ ಇಪ್ಪದಿದಾ
ಮಣಿಲ ಅಪ್ಪಚ್ಚಿಯಲ್ಲಿ ಒಂದು ದೊಡ್ಡಾ ಕರಿ ನಾಯಿ ಇದ್ದು! – ಜಿಮ್ಮಿ. ನೆಂಪಿದ್ದೋ?!.
ಅದಕ್ಕೆ ಬುದ್ಧಿ ಹೇದರೆ ಬುದ್ಧಿ. ಜಾಣನಿಂದಲೂ ಬಲ !
ಹೇದ್ದರ ಹೇದಾಂಗೆ ಹೇಳ್ಳೆ ಅರಡಿಯದ್ರೂ ನಿಂಗೊ ಹೇದ್ದೆಂತರ  ಹೇದು ಸರಿಯಾಗಿ ಅರ್ಥಮಾಡಿ ತಿಳ್ಕೊಂಡವರ ಹಾಂಗೆ ಮಾಡುತ್ತು ನೋಡಿರೆ
ಮನೆಯವು ಇದರ ಕೊಂಗಾಟ ಮಾಡ್ಸರ ನೋಡಿ ಆ ಪೇಟೆಕೂಸುಗೊಕ್ಕು ತೋರಿತ್ತು- ‘ನಾವೂ ಒಂದು ನಾಯಿಯ ಸಾಂಕುವೊ ನಮ್ಮ ಫ್ಲೇಟಿಲ್ಲಿ ಬೆಂಗ್ಳೂರ್ಲಿ’- ಹೇದು.
ಹಾಂಗೆ ಏವ ಬಣ್ಣದ್ದಕ್ಕು, ಅದಕ್ಕೆ ಎಂತರ ತಿಂಬಲೆ ಹಾಕುಸ್ಸು, ಅದರ ಆರು ಮೀಶುತ್ಸು, ಚಾಕ್ರಿ ಮಾಡುಸ್ಸು ಎಲ್ಲ ಮಾತಾಡಿಗೊಂಡಿತ್ತವು ಹೆಮ್ಮಕ್ಕಳ ಹರಟೆ ಚಾವಡಿಲಿ
ಅವರ ಕತೆ ಕೇಟ್ರೆ ನಾಯಿ ಸಾಂಕಿ ವ್ಯಾಪಾರ ಮಾಡುವ ಅಂದಾಜಿವರೇಂಗೆ ಎತ್ತಿತ್ತು.
ಇವರ ಪಟ್ಟಾಂಗ ಅಡಿಗೆ ಕೊಟ್ಟಗೆಲಿ ಇದ್ದ ಸತ್ಯಣ್ಣಂಗೂ ಕೇಳ್ತು.
ಸತ್ಯಣ್ಣ° ಹೇದ° – ಮದಾಲು ….  ನಾಯಿ ಮೊಟ್ಟೆ ಮಡುಗುತ್ಸೋ ಕುಂಞಿ ಮಡುಗುಸ್ಸೋ ಹೇದು ಗೊಂತಿದ್ದಡವೊ ಇವಕ್ಕೆ?! 😀
ಅಲ್ಲದ್ರೆ …. ಆ ಪೇಟೆಲಿ ನಾಯಿ ಸಾಂಕುತ್ಸು ಹೇದರೆ ಅದೆಂನ್ಸು ಅಷ್ಟು ಎಳ್ಪವೋ! 😀
 
**
3
ಹೊಂತಿಲ ಅನುಪ್ಪತ್ಯಲ್ಲಿ ಕಾಯಿ ಕಡಕ್ಕೊಂಡಿದ್ದ ರಂಗಣ್ಣಂಗೆ ದಿಢೀರ್ನೆ ಒಂದು ಸಂಶಯ!
ಕಡವ ಕಲ್ಲ ಅಲ್ಲೇ ಆಚಿಗೆ ಹಣ್ಣು ಸೌತೆಕಾಯಿ ಕಂಬಕ್ಕೆ ಕಟ್ಟಿ ನೇಲ್ಸಿಗೊಂಡಿಪ್ಪದು, ದೊಡ್ಡ ದೊಡ್ಡ ಕುಂಬಳಕಾಯಿ ಮೂಲೆಲಿ ಮಡಿಕ್ಕೊಂಡಿಪ್ಪದು ಕಂಡತ್ತು
ಸತ್ಯಣ್ಣನತ್ರೆ ಕೇಳಿಯೇ ಬಿಟ್ಟಾ° –  “ಅಲ್ಲ.. ಅಷ್ಟು ಸಣ್ಣ ಮಾವಿನಕಾಯಿ ಅಷ್ಟು ದೊಡ್ಡ ಮರಲ್ಲಿ ಅಪ್ಪದು. ಎಂತಕೆ?!…. ಅಷ್ಟು ಸಣ್ಣ ಲಿಂಬುಳಿ ಸಾನ ಮರಲ್ಲಿ ಅಪ್ಪದು!. ಆದರೆ ಇಟ್ಟು ದೊಡ್ಡ ಕುಂಬಳಕಾಯಿ ಮಾಂತ್ರ ಎಂತಕೆ ಬಳ್ಳಿಲಿ ಅಪ್ಪದು?!!”
“ಕುಂಬಳಕಾಯಿ ಬಳ್ಳಿಯಿಟ್ಟನು.. ನಮ್ಮ ಶಿವ …” ರಂಗಣ್ಣಂಗೆ ನೆಂಪಾತು
ಸತ್ಯಣ್ಣ ಹೇದ° – “ಮಾವಿನಕಾಯಿ, ಹಲಸಿನಕಾಯಿ, ಲಿಂಬುಳಿ, ಪೇರಳೆ ಎಲ್ಲ ಮರಲ್ಲಿ ಅಪ್ಪದು ಸಮ. ಅದು ಬಿದ್ದರೆ ಒಡೆಯ. ಈ ಕುಂಬಳಕಾಯಿ ಬಿದ್ದರೆ ಒಡಯದೋ?! ಮತ್ತೆ ನಿನಗೆ ಬೆಂದಿಗೆ ಎಂತ ಸಿಕ್ಕುಗು ರಂಗೋ?! 
ರಂಗಣ್ಣ ಹೇದ° – ಓ ಅಪ್ಪಪ್ಪು… ಬೂದಿ ಕುಂಬಳಕಾಯಿ ತಲಗೆ ಮಣ್ಣ ಬಿದ್ದರೆ!! 😀
**
4
ಬೈಲಿಲ್ಲಿ ಅಂದೆಂತ್ಸೋ ಅನುಪ್ಪತ್ಯ
ಬೈಲಿಲ್ಲಿ ಅನುಪ್ಪತ್ಯ ಹೇದರೆ ಬೈಲಕರೆಯವು ಅಗತ್ಯ ಬಂದು ಸೇರಿಯೇ ಸೇರ್ತವು
ಹಾಂಗೇ ಬೈಲ ಅನುಪ್ಪತ್ಯಕ್ಕೆ ಬಂದ ಡಾಕುಟ್ರು ಸೌಮ್ಯಕ್ಕನೂ, ಡಾಕುಟ್ರು ಸುವರ್ಣಿನಿ ಅಕ್ಕನೂ ಬಂದೋರಿಂಗೆ ಸರ್ಬತ್ತು ವಿಲೆವಾರಿ ಮಾಡ್ಳೆ ಅಡಿಗೆ ಕೊಟ್ಟಗ್ಗೆ ಬಂದವು.
ಡಾಕುಟ್ರಂಗಳ ಕಂಡಪ್ಪದ್ದೆ ಸತ್ಯಣ್ಣ ಹೇದ° – ಇದಾ ಅಕ್ಕೋ .. ಎನ ಅಂಬಗಂಬಗ ತಲೆ ಶೆಳಿತ್ತು. ಎಂತ ಮಾಡ್ಳಕ್ಕು.
ಈ ಬೈಲ ಡಾಕುಟ್ರಕ್ಕೊ ಹೇಂಗೆ ಹೇದರೆ..-  ಅಂತೆ ಎಲ್ಲ ಮದ್ದು ತಿಂಬದಕ್ಕೆ ಒಪ್ಪುತ್ತವಿಲ್ಲೆ. ಆದಷ್ಟು ಬಾರದ್ದಾಂಗೆ ಎಂತ ಮಾಡ್ಳಕ್ಕು ಹೇಳಿಯೇ ಹೇಳ್ಸು.
ಹಾಂಗೆ ಸುವರ್ಣಿನಿ ಅಕ್ಕ ಹೇದವು – ಸತ್ಯಣ್ಣ,  ನಿಂಗೊ ಸರಿಯಾಗಿ ಆನು ಹೇಳ್ತಾಂಗೆ ಮುದ್ರೆ ಮಾಡೆಕು. ಎಡಿಗೋ?
ರಂಗಣ್ಣಂಗೆ ಒಂದರಿಯೆ ನೆಗೆ ಬಂತು. ಅಲ್ಲಿಂದಲೇ ಹೇದ° –  ಸತ್ಯಣ್ಣ ಕೆಲ್ಸ ಮುಗಿಶಿ ಮನಿಗಿರೆ ಸರೀ ನಿದ್ರೆ ಮಾಡ್ತವು. ಎಂತ ಅಷ್ಟು ಸಾಲದೋ!!
ಸತ್ಯಣ್ಣ ಹೇದ° – ಎಲ ಇವನೇ!!  ಮುದ್ರೆ ಮಾಡೆಕು ಹೇದ್ದು ಇವಂಗೆ ನಿದ್ರೆ ಮಾಡೆಕು ಹೇಳಿದಾಂಗೆ ಕೇಳಿತ್ತೋ!  😀
**
5
ಈ ಸರ್ತಿ ಪೆರ್ಲ ಶಾಲೆಲಿ ಶಾಲಾ ವಾರ್ಷಿಕೋತ್ಸವಕ್ಕೆ ಅಡಿಗೆ ಸತ್ಯಣ್ಣನನ್ನೇ ಅತಿಥಿ ಭಾಷಣಕ್ಕೆ ದೆನಿಗೊಂಬದು ಹೇದು ಅಲ್ಯಾಣ ಕೆಲವು ಮಾಟ್ರಕ್ಕೊ ಅಂದಾಜಿ ಮಾಡ್ಯೊಂಡಿತ್ತಿದ್ದವಡ.
ಅಂದಿಂಗೆ ಸತ್ಯಣ್ಣಂಗೆ ಪುರುಸೊತ್ತು ಇದ್ದೋ ಇಲ್ಯೋ ಹೇದು ಮದಾಳಿ ತಿಳಿಯೆಕು ಹೇದು ಅಲ್ಯಾಣ ಹಿಂದಿ ಮಾಟ್ರು ಸತ್ಯಣ್ಣಂಗೆ ಫೋನ ಮಾಡಿದವಡ
“1978 ದಶಂಬರ 14 . ಕೊಕ್ಕರೆ ಗೆದ್ದೆಲಿ ಬಯಲಾಟ. ಬಲಿಪ್ಪನ ಪದ. ಎಂಗೊ ಪಾರೆ ಭೂತ ಕೋಲ ಕಳ್ಶಿಕ್ಕಿ ಕುಕ್ಕಿಲಕ್ಕೆ ಹೋದ್ದು. ಪೋಲೀಸು ಜೀಪು ಎರಡು ಒಟ್ಟೊಟ್ಟಿಂಗೆ ಹೋತು. ಸೇಮಗೆ ಪಾಚ, ಬೂಂದಿ ಲಾಡು. ವಾಂತಿಚ್ಚಾಲು ವಕೀಲರ ಭಾಷಣ. ಎಂಗೊಗೆ ಓಟು ಪೆರ್ಲಲ್ಲಿ . ಮಡಿಕೇರಿಲಿ ಗಲಾಟೆ, ಅಲ್ಲೆ ಕೂಡಿ ಬಸ್ಸು ಹೋವ್ತಿಲ್ಲೆ  ಮೂರು ದಿನಂದ. ಮರದಿನ ಪೈಸಾರಿಗೆ ಎತ್ತೆಕು.” – ಸತ್ಯಣ್ಣ ಹೇದ°.
ಎಂತ.. ನಿಂಗೊಗೆ ಸತ್ಯಣ್ಣ ಹೇದ್ದು ಏನಾರು ಅರ್ಥ ಆತೋ?
ಸತ್ಯಣ್ಣನ ಭಾಷಣ ಮಾಡ್ಳೆ ಹೇದರೆ ಹೀಂಗೇ ಅಕ್ಕಷ್ಟೆಡ 😀
**
6
ಓ ಮನ್ನೆ ನೀರ್ಚಾಲು ಶಾಲೆಲಿ ಶತಮಾನೋತ್ಸವ ಕಳುದತ್ತಪ್ಪೋ
ದೊಡ್ಡಬಾವಂಗೆ ಒಂದು ತಿಂಗಳು ಮದಲೇ ಸುರುವಾಯ್ದು ಬೆಶಿ.. , ನಾವೆಲ್ಲ ಎಂತ ಹೇಳಿರೂ ಒಂದು ಬೆಳಿನೆಗೆಲಿಯೇ ನಿವೃತ್ತಿ.
ಅನಂತಪುರ ಅಡಿಗ್ಗೆ ಕಳಿಶಿಕ್ಕಿ ಸತ್ಯಣ್ಣನೂ ರಂಗಣ್ಣನೂ ನೀರ್ಚಾಲು ಕೂಡಿಯೇ ಬಂದ್ಸಿದಾ
ನೀರ್ಚಾಲಿಂಗೆ ಎತ್ತುವಾಗ ಸಭಾಕಾರ್ಯಕ್ರಮ ಭಾಷಣ ಕೇಳ್ಯೊಂಡಿತ್ತಿದ್ದು.
ಹೆರ ಕಾರು ಬೈಕು ಅಲ್ಪ ನಿಂದೊಂಡಿಪ್ಪದರ ನೋಡಿರೆ ಜೆನ ಅಲ್ಪ ಸೇರಿರೆಕು ಹೇದು ಅಂದಾಜಿ ಮಾಡಿದವು.
ಸಾಲದ್ದಕ್ಕೆ ಜೆನಂಗೊ ಮತ್ತೂ ಆನು ಮುಂದೆ ಆನು ಮುಂದೆ ಆನು ಬಂದೆ ಉಷಾರಿ ಹೇಳ್ತಾಂಗೆ ಹೋಗ್ಯೊಂಡಿತ್ತವು
ಸತ್ಯಣ್ಣ – ರಂಗಣ್ಣಂಗೂ ಒಂದರಿ ಒಳ ಹೊಕ್ಕಿ ನೋಡಿಕ್ಕುವೊ ಹೇದು ಕಂಡತ್ತು.
ಸಭಾಕಾರ್ಯಕ್ರಮ ಕಳುತ್ತು…. ಸಣ್ಣ ಸಣ್ಣ ಚೆಂದದ ಒಪ್ಪಕ್ಕಂಗಳ ಡೇನ್ಸು ಆಗಿಯೊಂಡಿತ್ತಿದ್ದು
ಶಿವ ಪರಮೇಶ್ವರ ಹೇಳಿ ಎರಡು ಒಪ್ಪಕ್ಕಂಗ ಸುಮಾರು ಹೊತ್ತು ಕೊಣುದವು
ರಂಗಣ್ಣ ಕೇಟ° – ಅಲ್ಲ ಮಾವ°, ಇವರ ಡೇನ್ಸು ಮುಗಿಯದ್ದೆ ಪದ್ಯ ನಿಲ್ಲುತ್ತಾಂಗೆ ಕಾಣುತ್ತಿಲ್ಲೆ, ಅವನ ಪದ ಮುಗಿಯದ್ದೆ ಇವು ಕೊಣಿತ್ಸು ನಿಲ್ಸುತ್ತಾಂಗೆ ಕಾಣುತ್ತಿಲ್ಲೆನ್ನೆ ?! 😀
ಸತ್ಯಣ್ಣ ಹೇದ° – ನಿನಗೆಂತಾಯೇಕು ಈಗ. ಹೇಂಗೂ ಊಟಕ್ಕೆ ಆವ್ತಷ್ಟೇ. ಅಂಬೇರ್ಪು ಮಾಡೆಡ 😀
~~
7
ಅವರ ಡೇನ್ಸು ಮುಗುದತ್ತು. ಅವಕ್ಕೆ ಕಿರು ಸ್ಮರಣಿಕೆ ಕಾಣಿಕೆ ಕೊಟ್ಟಾತು
ಮತ್ತಾಣ ಕೂಸು ಬಂತು . ಅದರದ್ದೂ ಡೇನ್ಸೇ
ತಾಂ ದಿಕ್ಕು ತಪ್ಪಿತಾಂ ಹೇದು ಪದ ಕೇಳ್ಯೊಂಡಿದ್ದಾಂಗೆ ಕೂಸು ಕಾಲು ನೆಗ್ಗಿ ನೆಗ್ಗಿ ಕೊಣಿವದು ಕಂಡತ್ತು
ರಂಗಣ್ಣ ಹೇದ° – ಎಂತ ಮಾವ°, ಸ್ಟೇಜಿಲ್ಲಿ ಹಸಿ ಸಗಣ ಮಣ್ಣ ಹಾಕಿ ಮಡಿಗಿದ್ದವ! ಕೂಸ ಕಾಲು ನಿಂದಲ್ಲಿ ನಿಲ್ಲುತ್ತಿಲ್ಲೆ !! ಜಕ್ಕು ಜಯ್ಯ° ಹೇದು ಕೊಣಿತ್ತಲೇ ಇದ್ದನ್ನೇ
ಸತ್ಯಣ್ಣ ಕೇಟ° – ಎಂತ ನಿನಗೂ ಡೇನ್ಸು ಮಾಡೆಕು ಹೇದು ಕಾಣುತ್ತ°?!
ರಂಗಣ್ಣ° – ಇಲ್ಲೆಪ್ಪ.. ಅದೇಂಗೆ ಅವ್ವು ಹಾಂಗೆ ಕಾಲ ಬಿಡದ್ದೆ ಕೊಣುಕ್ಕೊಂಡೇ ಇದ್ದವನ್ನೇ!. ಎನಗೆ ಅಷ್ಟೊತ್ತೆಲ್ಲ ಕೊಣುಕ್ಕಂಡೇ ನಿಂಬಲೆ ಎಡಿಯಪ್ಪ
ಸತ್ಯಣ್ಣ ಹೇದ° – ಅದಕ್ಕೊಂದು ಕೆಣಿ ಇದ್ದೋ°. ಅಂಗಿಯೊಳ ನಾಕು ಎರುಗು ಬಿಟ್ರೆ ಆತು. ಕೊಣಿವಲೆ ಗೊಂತಿಲ್ಲದ್ದ ಹೇಂಗಿರ್ತವಂಗೂ ಕೊಣಿವಲೆ ಎಡಿಗು. ಬೇಕಾರೆ ನೀ ಈಗ ಮಾಡಿ ನೋಡು 😀
ರಂಗಣ್ಣ ಹೇದ° – ಮಾವ° – ಗಂಟೆ ಒಂಬತ್ತು ಕಳಾತು.. 😀
~~
8
ಆ ಡೇನ್ಸು ಮುಗುದತ್ತು.
ಅಷ್ಟಪ್ಪಗ ಮೈಕಿಲಿ ಹೇಳ್ಸು ಕೇಳಿತ್ತು .. “ಆರದ್ದೋ ಮೊಬೈಲು ಚಾರ್ಜರು ಇಲ್ಲಿ ಬಿಟ್ಟೋದ್ದು ಸಿಕ್ಕಿದ್ದು. ಆರದ್ದಾಗಿದ್ದರೆ ಇಲ್ಲಿ ಬಂದು ಗುರ್ತ ಹೇದು ತೆಕ್ಕೊಂಬಲಕ್ಕು”
ರಂಗಣ್ಣ ಕೂಡ್ಳೆ ಸತ್ಯಣ್ಣಂಗೆ ಹೇದ° – “ಮಾವ°, ಈ ಎನ್ನ ಚೀಲ ನಿಂಗ ಹಿಡ್ಕೊಳ್ಳಿ.”?
ರಂಗಣ್ಣ ಹೀಂಗೆ ದಿಡೀರ್ನೆ ಹೇದ್ದರ್ಲಿ ಸತ್ಯಣ್ಣಂಗೆ ಎಂತಕೇದು ಗೊಂತಾತಿಲ್ಲೆ. ಕೇಟ° – ಎಂತಕೋ? ಎಲ್ಲಿಗೋವ್ತೆ ನೀನು??!
ರಂಗಣ್ಣ ಮಾವ° – “ಇಲ್ಲೆ ಮಾವ.. , ಆನೀಗ ಅಲ್ಲಿ ಹೋಗಿ ಹೇಳ್ತೆ ಎನ್ನ ಚೀಲ ಕಾಣೆ ಆಯ್ದು ಹೇದು. ಅವು ಮೈಕಿಲ್ಲಿ ಹೇಳುಗದ. ನಿಂಗೊ ಮತ್ತೆ ತೆಕ್ಕೊಂಡೋಗಿ ಎನಗೆ ಸಿಕ್ಕಿದ್ದು ಹೇದು ಕೊಡಿ . ಅಷ್ಟಪ್ಪಗ ನಮ್ಮ ಹೆಸರು ಮೈಕಿಲ್ಲಿ ಬಕ್ಕದ !”
ಸತ್ಯಣ್ಣ ಹೇದ° – ಅದೆಕ್ಕೆಂತಕೆ ನೀ ಇಷ್ಟು ಭಂಙ ಬತ್ತೆ. ನೀನು ಹೋಗಿ ಹೆಬ್ಬಾರನ ಹೋಟ್ಳಿಲ್ಲಿ ಚಾ ಕುಡ್ಕೊಂಡು ಕೂರು. ಆನಿಲ್ಲಿ ರಂಗಣ್ಣ ಕಾಣುತ್ತಿಲ್ಲೆ ಹೇದು ಹೇಳ್ತೆ. ಆಗದ?
ರಂಗಣ್ಣಂಗೆ ಎಂತ ಹೇತಿಕ್ಕಲೂ ಉಪಾಯ ಇಲ್ಲೆ. ಮಾನಿಷಾದ ನಾಟಕ ಸುರುವಾತು. 😀
~~
9
ರಂಗಣ್ಣನೂ ಸತ್ಯಣ್ಣನೂ ಹಿಂದೆ ನಿಂದುಗೊಂಡು ನೋಡಿಗೊಂಡಿತ್ತವು.
ಅಷ್ಟಪ್ಪಗ ಅಲ್ಲೆ ಪೆರ್ವ ಮೆಡಿಕಲ್ಲು  ಅಣ್ಣ ಅಲ್ಲಿ ಬಂದವದಾ ಯೇವತ್ರಾಣಾಂಗೆ ಒಂಬತ್ತು ಗಂಟಗೆ ಅಂಗುಡಿ ಬಾಗಿಲೆಳದಿಕ್ಕಿ
ಮೆಡಿಕಲ್ಲು ಅಣ್ಣ ಎಲ್ಯಾರು ಹೋವ್ತರೆ ಒಬ್ಬನೇ ಹೋವ್ತ ಕ್ರಮ ಇಲ್ಲೆ. ಎಡತ್ತಿಂಗೂ ಬಲತ್ತಿಂಗೂ ಒಟ್ಟಿಂಗೆ ಚೆಂಙಾಯಿಗೊ ಇದ್ದೇ ಇರ್ತವು
ಮೆಡಿಕಲ್ಲು ಅಣ್ಣ ಬಂದವನೇ ಸತ್ಯಣ್ಣನ ಹತ್ರ ನಿಂದಪ್ಪಗಳೇ ಗೊಂತಾದ್ದು – ಓಹ್ಹ್ ! ಸತ್ಯಣ್ಣನೂ ಬಯಿಂದ°
ಉಪಚಾರಕ್ಕೆ ಏನು ತಾನು ಆತು.
“ಹೇಂಗಾವ್ತಾ ಇದ್ದು ಸತ್ಯಣ್ಣ?” – ಮೆಡಿಕಲ್ಲು ಅಣ್ಣ ಕೇಟ°
ಸತ್ಯಣ್ಣ° ಹೇದ°- ‘ಎಲ್ಲ ಲಾಯಕ ಇದ್ದೋ°. ಆದರೆ ಒಂದು ಮಾತ್ರ ಏವುತ್ರಾಣಂಗೆ ಎಲ್ಲ ದಿಕ್ಕೆಯೂ ಇಪ್ಪಾಂಗೆ ಇದ್ದು’!
ಸತ್ಯಣ್ಣ ಹಾಂಗೆ ಒಗಟು ಹೇದರೆ ಮೆಡಿಕಲ್ಲಣ್ಣಂಗೆ ಹೇಂಗೆ ಗೊಂತಕ್ಕು? ‘ಎಂತರದು?!!’ – ಕೇಟ°
ಸತ್ಯಣ್ಣ° ಹೇದ° – ಅದೇಯೋ° ಮೈಕು. ಇಲ್ಲಿಯೂ ಚಿರ್ರ್ರ್ರಿ ಚಿರ್ರ್ರಿ ಚಿಟಿ ಚಿಟ್ ಕೋಂಯ್ಯ್.. 😀
~~
10
ಸುರುವಾಣ ದಿನ ಕಾರ್ಯಕ್ರಮ ಲಾಯಕ ಆಯ್ದು ಹೇದು ಅಡಿಗೆ ಸತ್ಯಣ್ಣನೂ ಅಸಿಸ್ಟೆಂಟು ರಂಗಣ್ಣನೂ ಎರಡ್ನೇ ದಿನವೂ ಬಂದಿತ್ತವು ನೀರ್ಚಾಲು ಶಾಲೆ ಶತಮಾನೋತ್ಸವಕ್ಕೆ
ಅಂದು ಬೇರೊಂದಿಕ್ಕೆ ಅನುಪ್ಪತ್ಯ ಕಳ್ಸಿಕ್ಕಿ ಬರೆಕ್ಕಾದ ಕಾರಣ ಮನಗೆ ಹೋಗಿ ಮಿಂದು ಜೆಪ ಮಾಡಿಕ್ಕಿ ಉಂಡಿಕ್ಕಿಯೇ ಹೆರಟದು.
ಅಂದರೂ ಕಾರ್ಯಕ್ರಮ ಮುಗಿಯೆಕ್ಕಾರೆ ಮದಲೆ ಬಂದು ಎತ್ತಿಗೊಂಡಿದವು!
ಅಷ್ಟಪ್ಪಗ ಮೈಕಿಲ್ಲಿ ಹೇಳ್ಸು ಕೇಟತ್ತು – “ಇನ್ನೀಗ ಇಬ್ರು ವಿದಾರ್ಥಿಗಳ ಮಿಮಿಕ್ರಿ. ಅದಾಯ್ಕಿ ಕಿಳಿಂಗಾರಿನವರದ್ದು ಹಾಸ್ಯ. ಮತ್ತೆ  ಸಂಸ್ಕೃತ ನಾಟಕ. ಅದರ ಮತ್ತೆ ಭಕ್ತಿಗೀತೆ ಕಛೇರಿ. ಇನ್ನು ವಾಪಾಸು ಹೇಳ್ಳೆ ಇಲ್ಲೆ”.
ರಂಗಣ್ಣ ಸತ್ಯಣ್ಣನತ್ರೆ ಹೇದ° – ಅವಂಗೆ ಊಟಕ್ಕೆ ಹೋಪಲೆ ಅಂಬೆರ್ಪು ಆವ್ತೋದು?! 😀
~~
11
ಸ್ಟೇಜಿಲ್ಲಿ ಕತ್ತಲೆ. ಬಹುಶಃ ಮಿಮಿಕ್ರಿಗೆ ತಯಾರಿ ಆವ್ತಾ ಇದ್ದತ್ತಾಯ್ಕು ಸ್ಟೇಜಿಲ್ಲಿ
ಊಟಕ್ಕೆ ಹೋಪಲೆ ಅಂಬೆರ್ಪಾವ್ತನದ್ದು ವಾಪಾಸು ಕೇಟತ್ತು ಮೈಕಿಲ್ಲಿ-
“ಒಂದು ಡಿಜಿಟಲ್ ಕೆಮೆರ ಕಳೆದುಹೋಗಿದೆ. ಸಿಕ್ಕಿದವರು ಕೌಂಟರ್ಲಿ ತಂದುಕೊಡಬೇಕಾಗಿ ಅಪೇಕ್ಷೆ” – ಹೇದು ಒಂದು ಪ್ರಕಟಣೆ ಬಂತು
ರಂಗಣ್ಣ ಸತ್ಯಣ್ಣನತ್ರೆ ತಿರುಗಿ ಹೇದ° – ಅದು ಆ ವೀಡಿಯೊಲ್ಲಿ ನೋಡಿರೆ ಗೊಂತಾಗದ ಮಾವ° ಕಳದುಹೋಗಿಯೊಂಡಿಪ್ಪಗ ರೆಕಾರ್ಡು ಆದ್ದು°!
ಸತ್ಯಣ್ಣ ಹೇದ° – “ಇದೆಂತ್ಸು ಬೇಂಕಿನ ಏ ಟಿ ಏಮ್ ಹೇದು ಗ್ರೇಶಿದೆಯೋ?!” 😀
~~
12
ಊಟಕ್ಕೆ ಅಂಬೆರ್ಪಾದವ° ಹೋದವ° ಹೋದಲ್ಲೇ ಬಾಕಿ ಆದನೋ ಸಂಶಯ
ಮಿಮಿಕ್ರಿ ಕಳುದತ್ತು. ಹಾಸ್ಯದೋರು ಬಂದವು ಒಂದರಿ ಸ್ಟೇಜಿಯ ಕಸ್ತಲೆ ಮಾಡಿಕ್ಕಿ.
ಹಾಸ್ಯ ಎಂತರ?! – “ ‘…’ ಪಂಡ ದಾದ ಗೊತ್ತುಂಡ?”
“ನಿಕ್ಲೆಗ್ ಗೊತ್ತುಂಡಾಂಡ ಬುಕ್ಕ ಯಾನ್ ದಾಯೆಗು ಪಣೋಡು?!”
“… ಪಂಡ ಗೊತ್ತುಂಡ?!”
“ನಿಕ್ಲೆಗು ಗೊತ್ತಿಂಜಾಡ ಬುಕ್ಕ ಯಾನ್ ದಾಯೆಗ್ ಅಯ್ನ್ ಪಣೋಡು”
ರಂಗಣ್ಣ ಹೇದ° – ಮಾವ° ಇನ್ನಾರಾರು ಭಾಷಣಕ್ಕೆ ದೆನಿಗೊಂಡ್ರೆ ಬೇಡ, ಎಡಿಯ ಹೇದಿಕ್ಕೆಡಿ. ಭಾಷಣ ಹೇದರೆ ಇಟ್ಟು ಸುಲಬ ಇದಾ. 😀
~~
13
ಅದೇ ಹಾಸ್ಯ ಪ್ರಸಂಗಲ್ಲಿ ಮತ್ತೆಂದೊಂತದೇ ಹೇದವು – “ಕಲೆ., ಕಲೆ ಹೇದರೆ ಎಂತರ?!”
ಕೂಡ್ಳೆ ಸತ್ಯಣ್ಣ ಹೇದ° – “ಇವ್ವೆಂತರಪ್ಪ ಕಲೆ ಕಲೆ ಹೇಳ್ಸು. ಎಂತಾರು ನಮ್ಮ ಕಾಪಿ ಕರಗೆ ಏವುದಾರು ಬಕ್ಕೋ. ಕಾಪಿ ಕಲೆ ಹಿಡುದರೆ ಮತ್ತೆ ಹೋಕೋ?! ಇದರಟ್ಟು ದೊಡ್ಡ ಕಲೆ ಎಂತರ ಮತ್ತೆ ಅಲ್ಲದೋ ರಂಗ!” 😀
~~
14
ಮತ್ತಾಣ ದಿನ ವಿಶೇಷ ಅತಿಥಿ ಹೇದು ಕಾವ್ಯಕ್ಕ° ಬತ್ಸಡ°
ಸತ್ಯಣ್ಣ ಹೇದ° – ರಂಗೊ ನಾಳಂಗೆ ನಾವು ಬತ್ಸು ಬೇಡಾ. ಹೇಂಗೂ ಇಲ್ಲಿ ಜಾಗೆ ಇರ. ಅದು ಹೋದಮತ್ತೆ ಇಲ್ಲಿ ಏಕಾದಶಿ. ಏಕಾದಶಿ ಇರುಳಿಡೀ ಇದ್ದಡ.  ಬತ್ತರೂ ಮನೆಲಿ ಸಮದಾನಲ್ಲಿ ಉಂಡಿಕ್ಕಿ ಏಕಾದಶಿಗೆ ಬಂದು ಸೇರಿಯೊಂಡ್ರೆ ಆತು.
ಹಾಂಗೆ ಬಂದೋರು ಅಂದು ಏಕಾದಶಿ ಕಳಿಶಿಕ್ಕಿ ಮರದಿನ ಉದೆಗಾಲಕ್ಕೆ ಏಕಾದಶಿ ಪ್ರಸಾದ ಕೇಂಟೀನಿಲ್ಲಿ ತೆಕ್ಕೊಂಡಿಕ್ಕ್ಯೇ ಹೆರಟದಡ 😀
~~
 

* * * 😀 😀 😀  * * *

 
 
 

6 thoughts on “'ಅಡಿಗೆ ಸತ್ಯಣ್ಣ°" – 42

  1. ಸತ್ಯಣ್ಣಂಗೆ ಸುಬ್ರಾಯಜ್ಜನ ಬೊಜ್ಜದ ಅಡಿಗೆ ಇದ್ದಾಯ್ಕು ಅಲ್ಲದಾ?

  2. ನೀರ್ಚಾಲು ಶಾಲೆ ಶತಮಾನೋತ್ಸವಲ್ಲಿ ಸತ್ಯಣ್ಣ /ರಂಗಣ್ಣನ ಜೋಡಿ ಭಾರೀ ರೈಸಿತ್ತು. ಬಾಳೆ ಹಣ್ಣಿನ ಸೀವು ಮಾಡ್ಳೆ ಇಪ್ಪ ಸುಲಾಬದ ಕೆಣಿ ಎಲ್ಲೋರಿಂಗುದೆ ಮಾಡ್ಳಕ್ಕು . . .! ಬಳ್ಳೀಲಿ ಕುಂಬಳ ಕಾಯಿ, ಮರದಲ್ಲಿ ಮಾವಿನ ಕಾಯಿ ಪದ್ಯವುದೆ ನೆಂಪಾತು. ವಾಹ್, ಸತ್ಯಣ್ಣ.

  3. ಅದಕ್ಕೆ ಬುದ್ದಿ ಹೇಳಿದರೆ ಬುದ್ದಿ.
    ಅದು ಬೈಪ್ಪಣ್ಣೆ ಹತ್ರ-ಹಲಸಿನ ಹಣ್ಣ ಮೂರಿಗೆ
    ಹೋವುತ್ತಾ ಕ್ರಮ ಎನಾದರೂ ಇದ್ದ ?
    ಅರ್ತೋ೦ಬಲೆ ಕೇಟದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×