‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 5

ಕಳದ ವಾರ ಹೇಳಿದ್ದು ನೆಂಪಿದ್ದನ್ನೇ. ಇಲ್ಲದ್ರೆ ಮತ್ತೆಯಾರು ಒಂದರಿ ಪುಟ ತಿರುಗಿಸಿ ನೋಡಿಕ್ಕಿ. ಈಗ ಈ ವಾರ ಎಂತರ ಹೇದು ನೋಡುವೋ° –

ಚಿತ್ರ ಕೃಪೆ: ವೆಂಕಟ್ ಕೋಟೂರ್

ಚಿತ್ರ ಕೃಪೆ:
ವೆಂಕಟ್ ಕೋಟೂರ್

1.

ಸೊಡಂಕೂರು ಸೀತಣ್ಣ ಇಪ್ಪದು ಬೇಳದ ಹತ್ರೆ ಹಿತ್ತಲ ಮನೆ..

ಹಿತ್ತಲ ಮನೆ ಹೇಳಿದ ಮತ್ತೆ ಕೃಷಿ ಭೂಮಿ ಹೇಳಿ ಇಲ್ಲೆ ಇದಾ..

ಒಂದಾರಿ ಸೀತಣ್ಣನಲ್ಲಿ ಅನುಪತ್ಯ ಬಂತು..

ಅಲ್ಲಿಗೂ ನಮ್ಮ ಅಡಿಗೆ ಸತ್ಯಣ್ಣನೇ ಖಾಯಂ..

ಸೀತಣ್ಣ° ಸತ್ಯಣ್ಣಂಗೆ ಹೇಳಿದಾ – “ಸತ್ಯಣ್ಣೋ°., ಇದಾ ಅಂಗಡಿ ತರಕಾರಿ ತಂದೆಲ್ಲ ಪೂರೈಸ. ಮನೆ ಹತ್ರೆ ಇಪ್ಪದರ ಮಡಿಗಿ ಸುಧಾರ್ಸಿ ಕೊಡೆಕು.”

ಸತ್ಯಣ್ಣ° ಹೇಳಿದ° – ಆತಪ್ಪ., ಅದಕ್ಕೆಂತಾಯೇಕು.., ಮನೆ ಹತ್ರೆ ಎಂತ ಇದ್ದು ?

ಸೀತಣ್ಣ° : ನಾಕು ಬಾಳೆ ಸೆಸಿ ಇದ್ದು.

ಸತ್ಯಣ್ಣ° : ಹೋ.., ಸಾಕನ್ನೇ ಮತ್ತೆ . ಧಾರಾಳ ಆತು. ಎರಡು ಬಾಳೆ ಕೊನೆ ಕಡುದಾರೆ ಸಾಕು.

ಸೀತಣ್ಣ° : ಬರೇ ಬಾಳೆಗೊನೆಲಿ ನಿವೃತ್ತಿಯೋ?! ಅದೇಂಗೆ??

ಸತ್ಯಣ್ಣ° : ಸೀತಣ್ಣೋ°.., ಉದಿಯಪ್ಪಾಣ ತಿಂಡಿಗೆ ಬಾಳೆಕ್ಕಾಯಿ ಬೇಶಿ ಒಗ್ಗರುಸುವೋ°. ಊಟಕ್ಕೆ ಕುಂಡಿಗೆ ತಾಳು, ದಂಡು ತಾಳು ಒಂದು. ದಂಡು ಒಳುದರೆ ಅದರದ್ದೇ ಒಂದು ಮೊಸರು ಗೊಜ್ಜು. ಕಟ್ಟುಸಾರು ಮಾಡಿತ್ತು.., ಮತ್ತೆ ಬಾಳೆಕ್ಕಾಯಿ ಕೊದಿಲು, ಬಾಳೆಕ್ಕಾಯಿ ಮೇಲಾರ, ಬಾಳೆಕ್ಕಾಯಿ ಮೆಣಸುಬೆಂದಿ, ಬಾಳೆಹಣ್ಣು ಪಾಯಸ, ಬಾಳೆಹಣ್ಣು ಹಲ್ವ, ಸಕ್ಕರೆ ಬೆರಟಿ, ಚಿಪ್ಸು. ಬಾಳೆಲೆ ಊಟಕ್ಕೆ. ಮಜ್ಜಿಗೆ ಹೇಂಗೂ ಮನೆಹತ್ರಂದ ಸುಧಾರಿಕೆ ಆವ್ತು. ಆರು ಬಾರದ್ರೆ ಒಂದು ಮದುವೆ ಮುಗುಶಲೂ ಸಾಕು ಅಷ್ಟಿದ್ದರೆ.

 

ಅಷ್ಟಪ್ಪಗ ಸಾರಡ್ಕ ಮಾಂವ° ಬಂದವು. ಅನುಪತ್ಯ… ಶತರುದ್ರ … ಅಡಿಗೆ ಆಗ್ಬೇಕು ಹೇದು.

ಅವರಲ್ಲಿಯೂ ಸಣ್ಣಕೇ ಮಾಡುಸ್ಸು ಈ ವಾರಿ. ಮನಲಿಪ್ಪದರ ಮಡಿಗಿ ಎಜೆಸ್ಟು ಮಾಡೇಕು ಹೇದು ಬಿನ್ನಹ ಆತು.

ಸರಿ., ಮನೇಲಿ ಎಂತ ಇದ್ದು, ಎಂತ ಮಾಡೇಕು ಹೇಳಿ ಹೇದು ಹೇಳಿದ° ಅಡಿಗೆ ಸತ್ಯಣ್ಣ°.

ಸಾರಡ್ಕ ಮಾಂವ : ಸತ್ಯಣ್ಣೋ°,. ಈಗ ಹೇಂಗೂ ಹಲಸಿನ ಕಾಯಿ ಸೀಸನು. ಕುಜ್ವೆಯೂ ಇದ್ದು. ತಾಳಿಂಗೆ ಅದುವೇ ಆತು. ಮತ್ತೆ ಹಲಸಿನ ಕಾಯಿ ತಾಳು, ಹಲಸಿನ ಕಾಯಿ ಗಸಿ, ಹಲಸಿನ ಕಾಯಿ ಕೊದಿಲು, ಹಲಸಿನ ಕಾಯಿ ಮೇಲಾರವೇ ಅಕ್ಕೋಳಿ. ಮತ್ತೆ ಸ್ವೀಟು ಎಂತಕ್ಕು ನಿಂಗಳೇ ಹೇಳಿ.

ಸತ್ಯಣ್ಣ° – ಇಷ್ಟು ಹಲಸಿನಕಾಯಿ ಕೊರದ ಮತ್ತೆ ಅದರದ್ದೇ ಬೇಳೆ ಸುಮಾರು ಆತಿಲ್ಯೋ., ಅದರದ್ದೇ ಹೋಳಿಗೆಯೂ ಮಾಡಿಕ್ಕುವೋ°.  ಉದಿಯಪ್ಪಂಗೆ ಹಲಸಿನಕಾಯಿ ಬೇಶಿ ಒಗ್ಗರ್ಸಿರೆ ತಿಂಡಿಗೂ ಆತು.   😀

ಹು! ಆಡಿಗೆ ಸತ್ಯಣ್ಣ ಹೇಳಿರೆ ಎಂತ ಗ್ರೇಶಿದ್ದಿ. ಅಡಿಗ್ಗೆಯೋ.. ಕುದ್ಕನೋ! 😀

 

~~

2

 

ಪಾಂಡ್ಳು ಸಂಕಪ್ಪಜ್ಜ, ಪರಿಕರ್ಮಿ ನಾರಾಯಣಣ್ಣ , ಅಡಿಗೆ ಸತ್ಯಣ್ಣ ಇದು ಮದಲಿಂಗೇ ಹೆಸರು ಹೋದ ಸೆಟ್ಟು..

 

ಏವತ್ತೂ ಅಲ್ಲದ್ರೂ ಅಪರೂಪಕ್ಕೊಂದಂದರಿ ಈ ಸೆಟ್ಟು ಒಂದೇ ದಿಕ್ಕೆ ಸಿಕ್ಕಿಗೊಂಬದಿದ್ದು..

 

ಸಂಕಪ್ಪಜ್ಜನ ಭಟ್ಟತ್ತಿಗೆ, ನಾರಾಯಣಣ್ಣನ ಪರಿಕರ್ಮ ಹೇಳಿರೆ ಮತ್ತೆ ಮನೆಯವಕ್ಕಂತೂ ಕೆಲಸವೇ ಇಲ್ಲೆ . ಬಾ ಹೇಳುವಾಗ ಬಂದರಾತು, ಕೈ ಮುಗಿ ಹೇಳ್ವಗ ಮುಗುದರಾತು. ಮತ್ತೆಲ್ಲವೂ ಸಮಯಕ್ಕೆ ಸರಿಯಾಗಿ ನಾರಾಯಣಣ್ಣ ರೆಡಿ ರೆಡಿ..

 

ಅಂದು ಕೋಳಾರಿ ಗೋವಿಂದಣ್ಣನಲ್ಲಿ ಗ್ರಾಶಂತಿ..

 

ಚಪ್ಪರಲ್ಲಿ ಹೋಮ… ಅಲ್ಲೇ ಆಚಿಗೆ ಅಡಿಗೆ ಕೊಟ್ಟಗೆ..

 

ಹೋಮಕ್ಕೆ ಮಡಿಗಿದ ತುಪ್ಪ ಬೆಶಿಯಾತು.. ಭಟ್ರು ಮಂತ್ರ ಹೇಳಿಗೊಂಡು ತುಪ್ಪದ ಪಾತ್ರೆ ನೆಗ್ಗಿದವು… ತುಪ್ಪ ಗಟ್ಟಿಯಾಗಿತ್ತು.

 

ಭಟ್ರು ಪರಿಕರ್ಮಿ ನಾರಾಯಣಣ್ಣ ದೆನಿಗೊಂಡವು., ನಾರಾಯಣಣ್ಣ ತುಪ್ಪದ ಪಾತ್ರೆ ತೆಕ್ಕೊಂಡು ಅಡಿಗೆ ಕೊಟ್ಟಗೆಲಿ ಬೆಶಿ ಮಾಡಿ ತತ್ತೆ ಭಟ್ಟಮಾಂವ ಹೇದ.

 

ಅರ್ಧ ಮಂತ್ರಲ್ಲಿಪ್ಪ ಭಟ್ರು ಹೇಳಿದವು – “ಓಡು ನಾರಾಯಣಾ.. ಓಡು”.

 

ನಾರಾಯಣಣ್ಣ ಅಡಿಗೆ ಕೊಟ್ಟಗಗೆ ರಪಕ್ಕನೆ ಬಂದು – ಸತ್ಯಣ್ಣ , ಸತ್ಯಣ್ಣ ಒಂದರಿ ಇದರ ಬೆಶಿ ಮಾಡಿಗೊಳ್ತೆ.

 

ಸತ್ಯಣ್ಣ ಹೇದ° – “ಮಾಡು ನಾರಾಯಣಾ.. ಮಾಡು”. 😀

 

~~

3.

 

ಕಾವೇರಿಕಾನಲ್ಲಿ ತ್ರಿಕಾಲ ಪೂಜೆ… 

 

ಮುನ್ನಾಣ ದಿನವೇ ಹೋದ ಸತ್ಯಣ್ಣ ಹೋಳಿಗೆ ಮಾಡ್ತರಲ್ಲಿ ಬಿಸಿ..

 

ಟಿ.ವಿ ಕ್ರಿಕೆಟಿನ ಗೌಜಿ, ಚಾವಡಿಲಿ ಟಿ.ವಿ ನೋಡಿಗೊಂಡು ಮಕ್ಕಳ ಆಟವೂ ಆರ್ಭಾಟವೂ..

 

ಪಕ್ಕನೇ ಒಬ್ಬ ಕಿರುಚುವದು ಕೇಳಿತ್ತು..

 

ಅಡಿಗೆ ಕೊಟ್ಟಗೆ ಕರೇಲಿ ಬಂದ ಮಾಣಿಯ ಅಪ್ಪಚ್ಚಿಯ ಹತ್ರೆ ಸತ್ಯಣ್ಣ ಕೇಳಿದ ಎಂತಾತು? ಎಂತಾತು.??!

 

ಅಪ್ಪಚ್ಚಿ ಓಡಿಗೊಂಡು ಹೋವ್ತಾಂಗೇ ಹೇಳಿಗೊಂಡು ಓಡಿದ – ‘ಮೋರಗೆ ತಾಗಿತ್ತಡ’.

 

ಸತ್ಯಣ್ಣಂಗೆ ಮದಲೇ ಮಕ್ಕಳ ಕಿರುಚಾಟ ಆರ್ಬಾಟ ಕೇಳಿ ಪಿಸುರು …

 

ಸತ್ಯಣ್ಣನೂ ಗೌಜಿ ಮಾಡಿದ° – ಮತ್ತೆ ಎಂತ ಸೊಕ್ಕು ಈ ಮಕ್ಕೊಗೆ. ರಜಾವೂ ಜಾಗ್ರತೆ ಇಲ್ಲೆ. ಹಾಂಗೊಂದು ಲಾಗ ಹಾಕಿರೆ ಕೆಳ ಬೀಳದ್ದಿಕ್ಕೋ, ಮೋರಗೆ ತಾಗದ್ದಿಕ್ಕೋ 😀

 ಪರಂಚಿಯೊಂಡೇ ಸತ್ಯಣ್ಣ ರಂಗಣ್ಣಂಗೆ ಹೇಳಿದ° –  “ನೀ ಹೋಳಿಗೆ ಲಟ್ಟುಸು, ಆನು ಹೋಳಿಗೆ ಬೇಶುತ್ತೆ “.

~~

4

 

ಅಂದು ಎಲ್ಯೂ ಅನುಪತ್ಯ ಇಲ್ಲೆ..

 

ಸತ್ಯಣ್ಣ ಮನೆಲೇ ಇತ್ತಿದ್ದ°..

 

ಶಾರದೆ ಹೇಳಿತ್ತು – ಓಯಿ.. ಮಧ್ಯಾಹ್ನ ಉಂಡಿಕ್ಕಿ ಒಂದರಿ ಪೇಟೆಗೆ ಹೋಗಿಕ್ಕಿ ಬಪ್ಪನೋ. ಎನ ಒಂದರಿ ದರ್ಜಿ ಅಂಗಡಿಗೆ ಹೋಪಲಿದ್ದು, ಹಾಂಗೆ ಬಪ್ಪಗ ಅಂಗಡಿ ಸಾಮಾನೂ ತಪ್ಪಲಕ್ಕು..

 

ಅದೆಕ್ಕೆಂತ ಮಾಡೇಕು. ಮಗಳು ರಮ್ಯಾ ಹೇಂಗೂ ಮನೇಲಿದ್ದನ್ನೆ. ಹೋಗಿಕ್ಕಿ ಬಪ್ಪೋ ಹೇಳಿ ತೀರ್ಮಾನ ಆತು..

 

ಮಧ್ಯಾಹ್ನ ಉಂಡಿಕ್ಕಿ ಹೆರಟು ನಿಂದ ಸತ್ಯಣ್ಣ ಮಗಳ ದೆನಿಗೋಳಿ ಹೇಳಿದ° – ಇದಾ ಮಗಳೇ, ಗೋಳಿ ಬಜಗೆ ಹಿಟ್ಟು ಕಲಸಿ ಮಡಿಗಿದ್ದೆ. ಪೇಟೆಗೆ ಹೋಗಿ ಬಪ್ಪಂದೊಳ ಗೋಳಿಬಜೆ ಕಾಸಿ ಮಡಿಗಿಕ್ಕಾತ..

 

ರಮ್ಯನೂ ಆತಪ್ಪ° ಹೇಳಿತ್ತು. ಇವು ಪೇಟಗೆ ಹೆರಟವು.

 

ಹೊತ್ತೋಪಗ ಐದು ಗಂಟಗೆ ಮನಗೆ ಬಂದು ಎತ್ತಿದ ಸತ್ಯಣ್ಣ° ಮಗಳತ್ರೆ ಕೇಳಿದ° ಗೋಳಿಬಜೆ ಮಾಡಿದೆಯಾ ಮಗಳೇ?

 

ರಮ್ಯಾ – ಇಲ್ಲೆಪ್ಪಾ°…, ಗೋಳಿಬಜಗೆ ಬೇವಿನಸೊಪ್ಪು ಎಷ್ಟು ಹಾಕೇಕು ನಿಂಗೊ ಹೇಳಿದ್ದಿಲ್ಲಿ, ಎನ ಅಂದಾಜಿಯೂ ಸಿಕ್ಕಿತ್ತಿಲ್ಲೆ. ಮಾಡಿದ್ದಿಲ್ಲೆ. 🙁

 

ಸತ್ಯಣ್ಣಂಗೆ ಪಿಸುರು ಬಂದರೂ ತೋರ್ಸಿ ಎಂತ ಗುಣ ಹೇದು ಅಂಗಿ ಬಿಡಿಸಿ ತನ್ನ ಕಾವಿ ವೇಷ್ಟಿ ಸುತ್ತಿಗೊಂಡೇ ಶಾರದೆಗೆ ಹೇಳಿದ° – ಇದಕ್ಕಿನ್ನು ಏವ ಮನೆಂದ ಗೆಂಡನ ಹುಡ್ಕುತ್ತದಪ್ಪ ಆನು ! 😀

 

~~

5

ಓ ಮನ್ನೆ ಕಿಳಿಂಗಾರಿಲ್ಲಿ ಒಂದು ಬಾರ್ಸ..

ಅಲ್ಲಿಗೆ ಸತ್ಯಣ್ಣನ ಅಡಿಗೆ..

ಕಿಳಿಂಗಾರು ಭಟ್ಟಜ್ಜನ ಮಗಳ ಕೊಟ್ಟದು ವಿಟ್ಲಕ್ಕೆ. ಅವಿಪ್ಪದು ಬೆಂಗಳೂರಿಲ್ಲಿ..

ಆ ಮಗಳಿಂಗೆ ಮಗಳಾಗಿ ಬೆಂಗಳೂರ್ಲಿಯೇ ಶಾಲಗೆ ಹೋಪದು..

ಬಾರ್ಸಕ್ಕೆ ಅವ್ವುದೇ ಕುಟುಂಬ ಸಮೇತ ಬಂದಿತ್ತವು..

ಅಡಿಗ್ಗೆ ಹೋದ ಸತ್ಯಣ್ಣನ ಸುದ್ದಿ ಅಲ್ಲಿ ವಿಶೇಷ ಎಂತೂ ಕೇಳಿಬೈಂದಿಲ್ಲೆಯಾದರೂ..

ಪಂಚಗವ್ಯ ಕೂಡ್ಳಪ್ಪಗ ಭಟ್ಟಜ್ಜ ಈ ಬೆಂಗಳೂರ ಪುಳ್ಳಿಯ ದೆನಿಗೋಳಿ ಹೇಳಿದವು.. “ಇದಾ ಮೋಳೆ ರಜಾ ಗೋಮಯ ಕೊಂಡ.”

ಪುಳ್ಳಿ ಆತಾತು ತತ್ತೆ ಹೇಳಿ ಹೆರಟತ್ತು. .

ಅಷ್ಟಪ್ಪಗ ಭಟ್ಟಜ್ಜಂಗೆ ನೆಂಪಾತು… ಈ ಪೇಟೆ ಕೂಸಿಂಗೆ ಗೋಮಯ ಹೇಳಿರೆ ಎಂತಾರ ಹೇದು ಗೊಂತಿದ್ದೋ ಇಲ್ಯೋ..

ಅಲ್ಲಿಂದ ಗಟ್ಟಿಗೆ ಕೇಟವು..- ಇದಾ ಗೋಮಯ ಹೇಳಿರೆ ಎಂತರ ಗೊಂತಿದ್ದನ್ನೇ?

ಪುಳ್ಳಿಯೂ ಹಟ್ಟಿ ಹತ್ರೇ ಹೋಗ್ಯೋಂಡಿದ್ದೋಳು ಅಲ್ಲಿಂದಲೇ ಗಟ್ಟಿಗೆ ಹೇಳಿತ್ತು – “ಹಾ° ಹಾ°.. , ಗೊಂತಿದ್ದು. ಗೋಮಯ ಹೇಳಿರೆ ಎಮ್ಮೆ ಸಗಣ. ಅಷ್ಟು ಗೊಂತಿಲ್ಲದ್ದೆ ಆನು ಕಿಳಿಂಗಾರು ಭಟ್ರ ಪುಳ್ಳಿ ಅಲ್ಲದ ಆನು” 🙁

 

ಇದು ನಮ್ಮ ಸತ್ಯಣ್ಣನ ಕೆಮಿಗೆ ಬೀಳಿಕೋ.. 😀

~~

6

ಅಡಿಗೆ ಸತ್ಯಣ್ಣ° ಎಂತಕ್ಕೆ ಅರ್ಜಿ ಹಾಕಲೆ ಅರ್ಜಿ ತುಂಬಿಸಿಗೊಂಡಿಸಿತ್ತದ್ದ°..

ಹೆಸರು / ವಿಳಾಸ – ….. ….. ಅಡಿಗೆ ಸತ್ಯಣ್ಣ° / … … …
ಪ್ರಾಯ – ……  ೪೮
ಅಪ್ಪ ° / ಅಬ್ಬೆ – …. ಇಲ್ಲೆ / ಇಲ್ಲೆ
ಭಾಷೆ – ….. ಇದ್ದು
ಗುರ್ತ – ……. –

ಇನ್ನೂ ಮೂರು ಪುಟ ಇದ್ದತ್ತು ಭರ್ತಿ ಮಾಡ್ಳೆ. ಅರ್ಜಿಲಿ ಕೇಳಿದ ಹಲವಾರು ಸತ್ಯಣ್ಣನ ಕೆರಳಿಸಿತ್ತು. ಅದರೆಲ್ಲ ಅರ್ಥ ಮಾಡಿ ಬರವಲೆ ಸತ್ಯಣ್ಣಂಗೆ ಅರಡಿಯಾ..

ಮಗಳು  ರಮ್ಯಾ ಶಾಲಗೆ ಹೋವ್ತು. ಅದಕ್ಕೆ ಅರಡಿಗು ಹೇಂಗೆ ಕನ್ನಡಲ್ಲಿ ನೇರ್ಪಕ್ಕೆ ಬರೇಕ್ಕಾದ್ದು ಹೇದು..

ಸತ್ಯಣ್ಣ ಮಗಳ ದೆನಿಗೋಳಿ – “ಇದಾ ಕೂಸೇ ., ನೀನೇ ಓದಿ ಭರ್ತಿ ಮಾಡಿ ಅಡಿಗೆ ಸತ್ಯಣ್ಣ ಹೇದು ರುಜು ಹಾಕು” ಹೇದ°..

ರಮ್ಯಾ ಅರ್ಜಿ ಕೈಲಿ ತೆಕ್ಕೊಂಡು ಎರಡು ಸರ್ತಿ ಓದಿ ನೋಡಿತ್ತು. ಪೆನ್ನು ಕೈಲಿ ಹಿಡ್ಕೊಂಡಿದ್ದು…

ರಂಗಣ್ಣ ಇದರ ನೋಡ್ತಾ ಇದ್ದ°… ೧ಹಪ್ಪಳ ಹೊರಿವಲೂ ಅರಡಿಯದ್ದ ಇದು ಎಂತ ಭರ್ತಿ ಮಾಡ್ಳೆ ಇದ್ದೋ ಇನ್ನು’! ಹೇದು ಒಳಂದೊಳವೇ ನೆಗೆ ಮಾಡಿಗೊಂಡು ಮೆಲ್ಲಂಗೆ ಅಲ್ಲಿಂದ ಜಾಗೆ ಕಾಲಿ ಮಾಡಿದ°.  😀

~~

7

ಅಡಿಗೆ ಸತ್ಯಣ್ಣ° ಅಂವ° ಆತು ಅವನ ಕೆಲಸ ಆತು..

ಮಾಡ್ತ ಕೆಲಸ ಅಷ್ಟು ಚೊಕ್ಕ, ಅಷ್ಟು ಶ್ರದ್ಧೆ..

ಕೆಲಸದೆಡಕ್ಕಿಲಿ ನಿಂಗೊ ಏನಾರು ಹೇಳಿರೆ ಅವಂಗೆ ಅದು ತಲಗೆ ಹೋಗ ..  , ಹಾಂಗೇಳಿ ಗೊಂತಾಗದ್ದೋರಂಗೆ ನಟನೆ ಮಾಡ್ಳೂ ಇಲ್ಲೆ..

ಓ ಮನ್ನೆ ಹೀಂಗೇ ಆತಿದ ಪನೆಯಾಲ ಅನುಪತ್ಯಲ್ಲಿ….

ಬಂದೋನೊಬ್ಬ ಭಾವಯ್ಯ° ಅಡಿಗೆ ಕೊಟ್ಟಗೆಲಿ ಸತ್ಯಣ್ಣನತ್ರೆ ಸಾವಕಾಶ ಮಾತಾಡ್ಯೊಂಡಿತ್ತಿದ್ದಾ..

ಭಾವಯ್ಯ ಎಡಕ್ಕಿಲಿ ಹೇಳಿದ° – “ಸತ್ಯಣ್ಣೋ.., ಸುಂಕದಕಟ್ಟೆ ಅತ್ತಿಗೆ ಹೆತ್ತಿದಡೋ., ಮಾಣಿಯಡೋ”

ಸತ್ಯಣ್ಣಂಗೆ ಅದು ಗೊಂತೇ ಇತ್ತಿಲ್ಲೆ, ಕೇಳಿದ° – ಹೋ! ಅಪ್ಪೋ! ಅದು ಬಸರಿಯೋ ಅಂಬಗ! 😀

ಕಾಯಿ ಕಡಕ್ಕೊಂಡಿದ್ದ ರಂಗಣ್ಣ ಒಳಂದೊಳ ನೆಗೆ ಮಾಡ್ತು ಕಂಡತ್ತು – “ಅಲ್ಲ., ಈಗ ಬಾಣಂತಿ” 😀

~~

8

ಸತ್ಯಣ್ಣಂಗೆ ಒಬ್ಬ ತಮ್ಮ ಇದ್ದ°..  ಹೆಸರು ಸುಬ್ಬಣ್ಣ

ತಮ್ಮ ಹೇಳಿರೆ ಕಾಸಾ ತಮ್ಮನೇ. ಒಂದೇ ಅಬ್ಬೆ ಅಪ್ಪನ ಮಕ್ಕ..

ಅಂವ ಇಪ್ಪದು ಉಜಿರೆಲಿ. .  ತುಂಬಾ ವೊರಿಶಂದ ಅಲ್ಲೇ ಇದ್ದ ಸಣ್ಣಕೆ ಒಂದು ಅಂಗುಡಿ ಮಡಿಕ್ಕೊಂಡು.. ಹಾಂಗಾಗಿ ಅವನ ಅಂಗುಡಿ ಸುಬ್ಬಣ್ಣ ಹೇಳಿಯೇ ಗುರ್ತ..

ಆದರೆ.., ಎಲ್ಲಾ ಮನೆಯ ದೋಸೆಯು ತೂತೇ ಹೇಳ್ತಾಂಗೆ ಇವಕ್ಕೆ ಅತ್ತಿತ್ತೆ ಹೋಕರ್ಕು ಅಷ್ಟಕ್ಕಷ್ಟೆ..

ಎಂತಕೆ ಹೇಳಿರೆ … ದೊಡ್ಡ ಕಾರಣ ಎಂತದೂ ಇಲ್ಲೆ…. ಹೋಕರ್ಕು ಕಮ್ಮಿ  ಅಷ್ಟೇ. ಅದರಿಂದ ಹೆಚ್ಚಿಗೆ ನವಗೆ ಬೇಡ..

ಓ ಮನ್ನೆ ಅಡಿಗೆ ಸತ್ಯಣ್ಣಂಗೆ ಒಂದು ಅನುಪತ್ಯ ಉಪ್ಪಿನಂಗಡಿ ಹತ್ರೆ..

ಊಟಕ್ಕೆ ಬಂದೋನೊಬ್ಬ ಬೆಳ್ತಂಗಡಿ ಹೋಡೆಯೋನು ಬಾವಯ್ಯ ಅಡಿಗೆ ಕೊಟ್ಟಗೆ ಬಂದೋನು ಸತ್ಯಣ್ಣನ ಅಪರೂಪಲ್ಲಿ ಕಂಡು ಲೋಕಾಭಿರಾಮ ಮಾತಾಡಿಗೊಂಡು ಇತ್ತಿದ್ದ..

ಮಾತಿನೆಡಕ್ಕಿಲಿ ಸುಬ್ಬಣ್ಣನ ಸುದ್ದಿಯೂ ಬಂತು..

ಬಾವಯ್ಯ ಹೇದ° – ಸತ್ಯಣ್ಣೋ., ನಿಂಗಳ ತಮ್ಮನ ಕಂಡಿದೆ ಮನ್ನೆ.., ಮಾತಾಡಿದ್ದೆ… , ಈಗ ಉಷಾರಿದ್ದ°.. ಎಂತಾರು ಅಂವ ಒಳ್ಳ್ವೆ ಮನುಷ್ಯ° ಸತ್ಯಣ್ಣೋ…

ಸತ್ಯಣ್ಣಂಗೆ ರಜಾ ತಲೆಹರಟೆ ಹೇದು ಕಂಡತ್ತಿದು ವರ್ಣನೆ..

ಸತ್ಯಣ್ಣ° ಕೇಟ° “ಅಂಬಗ ಎಂಗೊ ಎಂತ ಒಳ್ಳೋರಲ್ಲದ?”. 🙁

ಬಾವಯ್ಯ° – “ಹಾಂಗೆಲ್ಲ ಸತ್ಯಣ್ಣ°, ತುಂಬ ಲಾಯಕ ಮಾತಾಡ್ಸುತ್ತ ಹೇದು”

ಸತ್ಯಣ್ಣ° – “ಅಂಬಗ  ಆನೆಂತ  ಪೆದಂಬನೋ?” 🙁 🙁

ಬಾವಯ್ಯಂಗೆ ಇದಿನ್ನು ಅಸಲಾಗ ಮಾತಾಡಿರೆ ಹೇದು ಅಂದಾಜಿ ಆತು. ಮೆಲ್ಲಗೆ ಜಾರ್ಲೆ ದಾರಿ ಹುಡ್ಕಿದಾ° – “ಸತ್ಯಣ್ಣೋ.. ಮಜ್ಜಿಗೆನೀರು ಮಾಡಿದ್ದದು ಇದ್ದೋ.. ,  ನಿಂಗ ಮಜ್ಜಿಗೆನೀರು ಮಾಡಿರೆ ಲಾಯಕ ಆವ್ತು” 😀

~~

 

ಇದಾ.. ಅಡಿಗೆ ಸತ್ಯಣ್ಣನ ಮಗಳು ರಮ್ಯಾ ಮನ್ನೆ ಎಸ್ಸೆಲ್ಸಿ ಪರೀಕ್ಷಗೆ ಬರದ್ದು. ಒಂದು ಆಶೀರ್ವಾದ ಮಾಡಿಕ್ಕಿ ಆತ.

    ~~~~~ 😀 😀 😀 ~~~~~

ಚೆನ್ನೈ ಬಾವ°

   

You may also like...

6 Responses

 1. Sandesh says:

  Ee sartiyanaddu aaha.. Bhari koshi aayidu. Maneli ella nege madidde madiddu.

 2. ಭಾರೀ ಫಷ್ಟಾಯಿದು.. ಆಪ್ತ ಶೈಲಿಯ ಬರವಣಿಗೆ 🙂 😛

 3. ಗಣೇಶ ಹಾಲುಮಜಲು says:

  ಲಾಯ್ಕಾಯ್ದು ಬಾವ!!! ಬಾಳೆಲಿದೆ, ಹಲಸಿನಕಾಯಿಲಿ ಇಡೀ ಅಡಿಗೆಯ ಸುಧಾರ್ಸಿದ್ದು ಪಷ್ಟಾಯ್ದು!! ಃ) 😉

 4. ಶರ್ಮಪ್ಪಚ್ಚಿ says:

  ರೈಸಿತ್ತಪ್ಪಾ ರೈಸಿತ್ತು.
  ಜೋರು ನೆಗೆ ಮಾಡ್ಲೆ ಗೊಂತಿಲ್ಲೆ. ಆಪೀಸಿಲ್ಲಿ ಓದ್ತಾ ಇದ್ದೆ. 🙂

 5. ತೆಕ್ಕುಂಜ ಕುಮಾರ ಮಾವ° says:

  ಯೇ ಭಾವ. ಮೇ ತಿಂಗಳಿಲಿ ಮನೆ ಜೆಂಬ್ರ ಇದ್ದು. ಸತ್ಯಣ್ಣನೆ ಬಪ್ಪಲೆ ಮಾಡಿರೆ ಅಡಿಗೆ ಸುದಾರ್ಸಿದ ಹಾಂಗೂ ಆವುತ್ತು, ನೆಗೆ ಮಾಡಿಗೊಂದು ಜೆಂಬ್ರ ಗಮ್ಮತ್ತೂ ಅಕ್ಕು , ಅಪ್ಪೊ..?ಮಾಂತ್ರ, ಪುರುಸೊತ್ತು ಇರ ಪಾಪ ಸತ್ಯಣ್ಣಂಗೆ.

 6. 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀 😀

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *