Oppanna.com

'ಅಡಿಗೆ ಸತ್ಯಣ್ಣ°' – 50 (ಅರ್ಧ ಸೆಂಚುರಿ)

ಬರದೋರು :   ಚೆನ್ನೈ ಬಾವ°    on   20/03/2014    12 ಒಪ್ಪಂಗೊ

ಚೆನ್ನೈ ಬಾವ°


ಇದು ನಿಂಗೊಗೆಲ್ಲ ಗೊಂತಿದ್ದ ಕತೆಯೋ ಗೊಂತಿಲ್ಲೆ. ರಜಾ ಹಳೆ ಕತೆ1059919_326946067437047_1223847748_n
ಮದಲಿಂಗೆ ಪೆರ್ಲದ ಬಸುಸ್ಟೇಂಡಿನ ಎದುರಾಣ ಕಟ್ಟೋಣಲ್ಲಿ ಒಬ್ಬ° ಹಲ್ಲು ಡಾಕುಟ್ರ° ಇತ್ತಿದ್ದ° ನಾರಾಯಣ ಭಟ್ಟ° ಹೇದು.
ಅಡಿಗೆ ಸತ್ಯಣ್ಣ ಎಲ್ಲಿಂದಲೋ ಅನುಪ್ಪತ್ಯ ಕಳಿಶ್ಯೊಂಡು ಪೆರ್ಲಕ್ಕೆ ಎತ್ತಿದ್ದನಟ್ಟೆ
ಬಸ್ಸು ಇಳುದು ಆಚೊಡೆಂಗೆ ದಾಂಟಿ ಅಪ್ಪಗ ಎದುರಂದ ಬಂದ ಒಂದು ಮಾಪಳೆ ಎದುರಾಣ ಕಟ್ಟೋಣದ ಮೇಗಾಣ ಕೋಣೆಗೆ ನೇತು ಹಾಕ್ಯೊಂಡಿತ್ತಿದ್ದ ಹಲ್ಲು ಡಾಕುಟ್ರನ ಬೋರ್ಡಿಂಗೆ ಬೆರಳು ತೋರುಸಿ ಕೇಟತ್ತು – ‘ಅಯಾಳ್ ಒರು ಪಲ್ಲ್ ಡಾಕುಟ್ರ?!’
ಸತ್ಯಣ್ಣ ಹೇದ° ಅಲ್ಲ.., ಅವ° ಮುವತ್ತೆರಡು ಹಲ್ಲಿಂಗೂ ಡಾಕುಟ್ರ°
ಅಂದಿಂಗೆ ಆ ಬೋರ್ಡು ಇಳುಶಿಕ್ಕಿ ಊರು ಬಿಟ್ಟ ಆ ಹಲ್ಲು ಡಾಕುಟ್ರ° ಮತ್ತೆ ಏವ ಊರಿಂಗೆ ಹೋದ° ಹೇಳಿಯೇ ಗೊಂತಿಲ್ಲೆ. 😀
~~

ದೊಡ್ಡಮಾವನ ವರ್ಷಾಂತಕ್ಕೆ ಹೋಪಲೆ ಅಡಿಗೆ ಸತ್ಯಣ್ಣನೂ ಸಕಾಯಿ ರಂಗಣ್ಣನೂ ಅಡಿಗೆ ಸತ್ಯಣ್ಣನಲ್ಲಿ ಒಟ್ಟಾಗಿ ಅಲ್ಲಿಂದ ಒಟ್ಟಿಂಗೆ ಹೆರಡ್ತದು ಹೇದು ಮಾತು.
ರಂಗಣ್ಣ ಬಪ್ಪಗ ಶಾರದಕ್ಕನ ಸಂಸ್ಕೃತ ಬಾಯಿಪಾಠ ಆಗ್ಯೊಂಡಿತ್ತಿದ್ದು – ರಾಮಃ ರಾಮೌ ರಾಮಾಃ
ವರ್ಷಾಂತ ದಿನ ರಂಗಣ್ಣ ಕಾಯಿ ಕಡಕ್ಕೊಂಡಿಪ್ಪಗ ಕುಂಟಾಂಗಿಲ ಭಾವ ಅಡಿಗೆ ಕೊಟ್ಟಗ್ಗೆ ಬಂದು ಹೇದ° ಬಟಾಟೆ ಸುಮಾರು ಇದ್ದು, ಬಟಾಟೆ ಗೊಜ್ಜಿ ಮಾಡುವನೋ ಸತ್ಯಣ್ಣ
ಕೂಡ್ಳೆ ರಂಗಣ್ಣನ ಬಾಯಿಂದ ಹೆರಟತ್ತು ಬಟಾಟೆಃ ಬಟಾಟೌ ಬಟಾಟಃ
ಅಷ್ಟಪ್ಪಗ ಕುಂಟಾಂಗಿಲ ಬಾವನ ಮೊಬೈಲು ರಿಂಗಾತು. ಏಕಾಚಮೇ ತಿಸ್ರಶ್ಚಮೇ…. ಹೇದು ಮೊಬೈಲು ರಿಂಗ್ ಟೋನ್
ಕೂಡ್ಳೆ ರಂಗಣ್ಣನ ಸಂಸ್ಕೃತ ಹೆರಟತ್ತು ಏಕಃ ಏಕೌ ಏಕಾಃ , ಏಕಂ ಏಕೌ ಏಕಾನ್, ಏಕೇನ ಏಕಾಭ್ಯಾಂ ಏಕೈಃ  😀
ಸತ್ಯಣ್ಣ° ಅಲ್ಲಿಂದಲೆ ಒಂದರಿಯೇ ಬೊಬ್ಬೆ ಹಾಕಿದ° – ರಂಗೋ! ಒಂದಾರಿ ನೀ ಸಂಸ್ಕೃತವ  ಅದರಟ್ಟಕ್ಕೆ ಬಿಟ್ಟಿಕ್ಕು. 😀
ಕುಂಟಾಂಗಿಲ ಭಾವ° ಮೊಬೈಲಿನ ಕೆಮಿಗೆ ಒತ್ತಿಗೊಂಡು ಆಚೊಡೆಂಗೆ ಹೋದ°. ಬಟಾಟೆ ಗೊಜ್ಜಿಯೂ ಬಾಕಿ ಆತು, ರಂಗಣ್ಣನ ಸಂಸ್ಕೃತವೂ ನಿಂದತ್ತು 😀
~~

ಅಡಿಗೆ ಸತ್ಯಣ್ಣನ ಕಂಡಪ್ಪಗ ಕುಂಟಾಂಗಿಲ ಭಾವಂಗೆ ಎಂತ ಆವ್ತೋ ಇನ್ನು!  ಅಲ್ಲ.. ಕುಂಟಾಂಗಿಲ ಭಾವನ ಕಂಡ್ರೆ ಅಡಿಗೆ ಸತ್ಯಣ್ಣಂಗೆ ಎಂತ ಅಪ್ಪದೋ!.
ಕುಂಟಾಂಗಿಲ ಭಾವನ ನೆರೆಕರೆಲಿ ಒಂದಿಕ್ಕೆ ಮನೆ ಒಕ್ಕಲ ಅನುಪ್ಪತ್ಯದ ತೆರಕ್ಕು ಮುಗುದು ಸಾವಾಕಾಶ ಚಿಟ್ಟಿಲೆ ಕೂದುಗೊಂಡು ಎಂತದೋ ಏಚನೆಲಿ ಇತ್ತಿದ್ದ° ಅಡಿಗೆ ಸತ್ಯಣ್ಣ°
ಕೆಲಸ ಮುಗಾತು ಇನ್ನು ಹೆರಡುವಾಗ ಒಂದಾರಿ ಎಲೆ ತಿಂದುಕ್ಕುತೆ ಹೇದು ಸತ್ಯಣ್ಣನ ಹತ್ರೆ ಇತ್ತಿದ್ದ ಎಲೆ ತಟ್ಟಗೆ ಕೈ ಹಾಕಿದ ಕುಂಟಾಂಗಿಲ ಭಾವಯ್ಯ – ‘ಎಂತ ಸತ್ಯಣ್ಣ ಮತ್ತೆ ವಿಶೇಷ’? ಹೇದು ಕೇಟವು.
ಸತ್ಯಣ್ಣ ಹೇದ° – ಅಲ್ಲ.. ಮನ್ನೆ ಪುತ್ತೂರಿಂಗೆ ಬತ್ತ ತೆಂಕ್ಲಾಗಾಣ ಆನೆ ಉಕ್ಕಿನಡ್ಕಂದ ಒಂದೇ ಬೆಟ್ಟಿಂಗೆ ಹೇಳದ್ದೆ ಕೇಳದ್ದೆ ಬಲ್ಪಲೆ ಸುರುಮಾಡಿತ್ತು.
ಓಡಿ ಓಡಿ ಓಡಿ ಪೆರ್ಲಲ್ಲಿ ಬಾಳೆಣ್ಣು ಇಬ್ರಾಯಿ ಅಂಗಡಿ ಎದುರೆ ಬಂದು ನಿಂದತ್ತು. ಅಲ್ಲಿ ಅದು ಎಂತ ತೆಗಗು.?
ಕುಂಟಾಂಗಿಲ ಭಾವಂಗೂ ತಲಗೆ ಹೊಕ್ಕತ್ತಿಲ್ಲೆ ಎಂತ ತೆಗಗಪ್ಪ ಆನೆ ಅಂಗಡಿಲಿ ಹೇದು! ಬಾಳೆಣ್ಣ ಗೊನೆ ಮತ್ತು ಬಲುಗಿತ್ತೋ ಸತ್ಯಣ್ಣ?! ಕೇಟ° ಕುಂಟಾಂಗಿಲ ಭಾವ°.
ಸತ್ಯಣ್ಣ° ಹೇದ° – ಇಲ್ಲೆಪ್ಪ, ಅದು ಸೇಂಕು ಬಲಿಗಿದ್ದದಟ್ಟೇ 😀
~~

ಆತಂಬಗ ಹೇದು ನೆಗೆಮಾಡಿಗೊಂಡು ಕುಂಟಾಂಗಿಲ ಭಾವ ಹೆರಟಪ್ಪದ್ದೆ ನಾವು ಹೋಗಿ ನಿಂದತ್ತು. ಏನಾರು ವಿಷಯ ಸಿಕ್ಕುತ್ತೋ ಈ ವಾರಕ್ಕೆ ಬೈಲಿಂಗೆ ಹೇಳ್ಳೆ ಹೇದು.
ಪ್ರತಿಸರ್ತಿಯೂ ನಾವು ಅತ್ಲಾಗಿ ಚೋದ್ಯ ಕೇಳ್ತ ಕ್ರಮ. ಈ ಸರ್ತಿ ಸತ್ಯಣ್ಣಂದೇ ಚೋದ್ಯ ಇತ್ಲಾಗಿಯಂಗೆ.
ಎಂತ್ಸರ?! –

  1. ನಾಯಿಗೆ ನಾಕು ಕಾಲ್ ಇದ್ದರೂ ಅದಕ್ಕೆ ಲೋಕಲ್, ನಾಶೆನಲ್, ಇಂಟರ್ನೇಶನಲ್ ಎಂತಕೆ ಮಿಸ್‍ಡ್ ಕಾಲ್ ಆದರೂ ಕೊಡ್ಳೆ ಎಡಿಗೊ?!
  2. ಎಷ್ಟೇ ತಲೆ ತಿರುಗಿರೂ ಕೊರಳು ಪೀಂಟಿರೂ ತನ್ನ ಬೆನ್ನು ತನಗೆ ನೋಡ್ಳೆ ಎಡಿಗೋ?!
  3. ಒಬ್ಬ ಎಟ್ಟೇ ಗುಂಡು ಗುಂಡಾಗಿದ್ದರೂ ಅವನ ತೆಗದು ಬೆಡಿಯೊಳ ಹಾಕಲೆಡಿಗೋ?!
  4. ಒಬ್ಬಂಗೆ ಎಟ್ಟೇ ಕೂದುಂಬಟ್ಟು ಪೈಸೆ ಇದ್ದರೂ ಪೇಟಗೆ ಹೋಗಿ ಪಾಸ್ಟ್ ಪುಡ್ ಸೆಂಟರಿಂಗೆ ಹೋದರೆ ನಿಂದುಗೊಂಡೇ ತಿಂದಾಗೆಡದೋ?!
  5. ಇಂಜಿನೀರು ಕೋಲೋಜಿಂಗೆ ಹೋದವೆಲ್ಲೋರು ಇಂಜಿನೀರು ಅಪ್ಪಲೆಡಿಗು, ಪ್ರೆಸಿಡೆನ್ಸಿ ಕಾಲೇಜಿಂಗೆ ಹೋದವೆಲ್ಲೋರು ಪ್ರಸಿಡೆಂಟು ಅಪ್ಪಲೆಡಿಗೋ?!
  6. ಆಟೋಕ್ಕೆ ಆಟೋ ಹೇದು ಹೆಸರು ಇದ್ದರೂ ಅದರ ಓಡುಸೆಕ್ಕಾರೆ ಮನುಷ್ಯನೇ ಆಗೆಡದೋ?!
  7. ಒರಕ್ಕಿನ ಮಾತ್ರೆ ತೆಕ್ಕೊಂಡ್ರೆ ಒರಕ್ಕು ಬಕ್ಕು ಆದರೆ ಸೆಮ್ಮದ ಮಾತ್ರೆ ತೆಕ್ಕೊಂಡ್ರೆ ಸೆಮ್ಮ ಬಕ್ಕೋ?!
  8. ಹಲ್ಲು ಬೇನೆ ಹೇದಾದರೆ ಹಲ್ಲು ತೆಗವಲಕ್ಕು ಆದರೆ ತಲೆ ಬೇನೆ ಹೇದರೆ ತಲೆ ತೆಗವಲೆಡಿಗೋ?!
  9. ಮೊಬೈಲು ಇದ್ದವಂಗೆ ಸಮೋಸ ಕಳುಸೆಲೆಡುಗು ಆದರೆ ಸಮೋಸ ಇದ್ದವಂಗೆ ಮೊಬೈಲು ಕಳುಸೆಲೆಡುಗೋ?!
  10. ಹೇಂಡು ವಾಶ್ ಹೇದರೆ ಕೈ ತೊಳವದು, ಫೇಸು ವಾಶ್ ಹೇದರೆ ಮೋರೆ ತೊಳವದು ಆದರೆ ಬ್ರೈನ್ ವಾಶ್ ಹೇದರೆ ಬ್ರೈನ್ ತೊಳವಲೆಡಿಗೋ?! 😀

ಉಮ್ಮ., ನವಗರಡಿಯ.  ಈ ಚೋದ್ಯಂಗಳ ಇದಾ ನಿಂಗೊಗೇ ಅತ್ಲಾಗಿ ಬಿಟ್ಟೆ  😀
~~

ಅಡಿಗೆ ಸತ್ಯಣ್ಣನ ಇಂದ್ರಾಣ ಮರ್ಜಿ ಕಂಡಪ್ಪಗ ‘ಎಂತ ಸತ್ಯಣ್ಣ ನಿನ್ನೆ ಸರಿ ಒರಗಿದ್ದಿಲ್ಲ್ಯೋ ನಿಂಗೊ?! ಹೇದು ಕೇಟೆ ಆನು.
ಸತ್ಯಣ್ಣ° ಹೇದ° – ಎಲ್ಲಿಂದ ಬಾವ° ಒರಕ್ಕು ಬತ್ಸು. ಇರುಳು ವಾಸ್ತು ಬಲಿ ಮುಗುದು ಊಟ ಎಲ್ಲ ಅಪ್ಪಗ ಗಂಟೆ ಮೂರು ಆಯ್ದು.
ಮತ್ತೆ ಈ ಜೆವ್ವನಿಗರು ಇಸ್ಪೇಟು ಆಡ್ಳೆ ಕೂದವು. ನಾವು ಓ ಆ ಕರೆಲಿ ಹಸೆ ಬಿಡುಸಿ ಚುರುಟಿರೂ ಕೂದ ಕಳಂದ ಬೊಬ್ಬೆ ಜೋರು ಕೇಟುಗೊಂಡಿತ್ತಡ –

“ರಾಣಿಯ ಕಡಿವದು, ಕಳ್ಳನ ಬಿಡುದು, ತುರ್ಪು ಹೆರಮಾಡುದು..”  ಹೀಂಗಿರ್ಸ ಮಾತುಗಳ ಕೇಟು ಹೆದರಿದ ಸತ್ಯಣ್ಣಂಗೆ ಒರಕ್ಕೇ ಬಯಿಂದಿಲ್ಲೇಡ. 😀
ಸರಿ ಅಂಬಗ, ಇನ್ನೊಂದರಿ ಕಾಂಬೋ ಹೇದು ನಾವೂ ಚಾಂಬಿತ್ತಲ್ಲಿಂದ 😀
~~
ಎಣುಸಿ ನೋಡಿರೆ ಇಲ್ಲಿಗಂಗೆ ಅಡಿಗೆ ಸತ್ಯಣ್ಣಂದು ಅರ್ಧ ಸೆಂಚಿರಿ ಆತಿದ 😀
 

😀 😀 😀   ***  😀 😀 😀

12 thoughts on “'ಅಡಿಗೆ ಸತ್ಯಣ್ಣ°' – 50 (ಅರ್ಧ ಸೆಂಚುರಿ)

  1. ಸತ್ಯಣ್ಣ ಅರ್ಧ ಸೆಂಚುರಿ ಬಾರುಸಿದ್ದು ಕಂಡಪ್ಪಗ ಅವ ಮಾಡಿದ ಗೋಬಿ ಮಂಚೂರಿ ತಿಂದ ಹಾಂಗಾತು.
    ಸಂಸ್ಕೃತ ಶಬ್ದ ರೈಸಿದ್ದು. ಸತ್ಯಣ್ಣನ ಚೋದ್ಯಂಗಳೂದೆ ರೈಸಿದ್ದದ. ನಾಯಿಗೆ ನಾಕು ಕಾಲಿದ್ದರುದೆ ಮಿಸ್ಸುಡು ಕಾಲು ಕೊಡ್ಳೆ ಎಡಿಯ ನಿಜ, ಆದರೆ ಅದಕ್ಕೆ ಕಾಲು ಬಂದಪ್ಪಗ ಕಾಲು ಎತ್ತಲೆ ಎಡಿಗಾನೆ ಸತ್ಯಣ್ಣ ??

  2. Ardha shathaka bhaarisida satyannange abhinandanego. Eecha hodenda adakke kaaranakartha raada Chennai Bhaava ngu abhinandanego. Supper aaigi batta iddu. Heenge munduvariyali… (y)

  3. ಸತ್ಯಣ್ಣ ಅರ್ಧಶತಕ ಬಾರಿಸಿದ್ದು ಕುಶಿ ಆತು ಭಾರೀ ಲಾಯ್ಕ ಆಯಿದು. ಚೆನ್ನೈ ಭಾವ ಇದರ ಕನ್ನಡಲ್ಲೂ ಬರೆಕ್ಕು.

  4. ಚಿನ್ನದ ವಿಶೇಷಾಂಕಕ್ಕೆ ಚೆನ್ನುಡಿಯ ಶುಭಾಶಯಂಗೊ.

  5. ಅರ್ಧ ಸೆಂಚುರಿಗೆ ಸತ್ಯಣ್ಣ ಸವ್ಟು ನೆಗ್ಗಿ ಹಿಡುದ ಚಿತ್ರ ಬಿಡುಸಲೆಡಿಯದೋ? ಹರೇ ರಾಮ.

  6. ಅರ್ಧ ಸೆಂಚುರಿಯೋ..? ಅಂಬಗ ಸತ್ಯಣ್ಣನಲ್ಲಿ ಪಾಚದಡಿಗೆಯೊ ಇಂದು. ಶಾರದಕ್ಕ ಅಂತೆ ಬಿಡ ಅಪ್ಪೋ..?

  7. ಅ೦ತೂ ಇ೦ತೂ, ಆಡಿ ಕೂಡೀ ಸತ್ಯಣ್ಣ ೫೦ ರ ಸ೦ಭ್ರಮಲ್ಲಿಪ್ಪದಕ್ಕೆ ಒ೦ದು ಅಭಿನ೦ದನೆ. ಹಾಸ್ಯ ಕೊಶಿಯಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×