‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 9

May 9, 2013 ರ 11:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಂತೂ ರಮ್ಯ ಕೋಲೇಜಿಂಗೆ ಹೋಪದು ಹೇದು ತೀರ್ಮಾನ ಆತಡ..

ನಾಲ್ಕೈದು ಕೋಲೇಜಿಂದ ಅರ್ಜಿ ತಂದು ತುಂಬ್ಸಿ ಕಳ್ಸಿ ಆಯ್ದಡ..

ರಾಮಜ್ಜನ ಕೋಲೇಜಿಂಗೂ ಅರ್ಜಿ ಕಳ್ಸಿ ಆಯ್ದಡಾ..

ಎಲ್ಲಿ ಸೀಟು ಸಿಕ್ಕುತ್ತು ನೋಡೇಕ್ಕಷ್ಟೆ.

ನಾವು ಶುಭ ಹಾರೈಸಿದ್ದು. ನಿಂಗೊ?

ಅಕ್ಕು., ನೋಡ್ವೋ.. ಮತ್ತೆ ದೇವರು ಮಡಿಗಿದಾಂಗೆ ಆವ್ತತ್ತೆ.  :(
~~

ಇನ್ನು  ಅಡಿಗೆ ಸತ್ಯಣ್ಣನ ಈ ವಾರ ಸುದ್ದಿ ಎಂತರ ಹೇದು ನೋಡುವೋ°  –

 

 1.

ಕುಂಟುಕಾನ ಶಂಭಣ್ಣನಲ್ಲಿ ತಿಥಿಯದಾ ನಿನ್ನೆ..

ಅಡಿಗೆ ಸತ್ಯಣ್ಣನೇ ಹೋದ್ದು. ಸಕಾಯಕ್ಕೆ ರಂಗಣ್ಣನೂ..

ಸತ್ಯಣ್ಣಂಗೆ ಅಡಿಗೆ ತೆರಕ್ಕು ಆದರೆ ರಂಗಣ್ಣಂಗೆ ಟಿ.ವಿಲಿಯೇ ತಲೆ ನಿನ್ನಾಣ ಮಟ್ಟಿಂಗೆ..

ಕಡವಕಲ್ಲು  ನಾಕು ಸುತ್ತು ತಿರುಗುಸುದೂ ಟಿ ವಿ ಹತ್ರೆ ಹೋಗಿ ಬಪ್ಪದು ಇದೇ ಆತು ರಂಗಣ್ಣಂದು..

ಒಳ ಹಸ್ತೋದಕ ಕೊಟ್ಟೊಂಡಿಪ್ಪಗ ರಂಗಣ್ಣ ಬಂದು  ಸತ್ಯಣ್ಣನತ್ರೆ ಹೇದ°.. – ಬಿಜೆಪಿ ಹೋತಡನ್ನೇ ಸತ್ಯಣ್ಣ°!

ಸತ್ಯಣ್ಣ° ಹೇದಾ°.. – ಅದು ಕ್ರಮವೇ ಹಾಂಗಲ್ಲದ ಮತ್ತೆ!. ಅದು ನವಗಾರು ಅಷ್ಟೆ… ಅನುಪ್ಪತ್ಯಕ್ಕೆ ಬಂದನೋ, ಲಾಯಕ ಅಡಿಗೆ ಮಾಡಿ ಕೊಟ್ಟನೋ ಹೇದು ಇದ್ದರೆ  ನಾಕು ಜೆನ ದೆನಿಗೊಂಗು. ಇಲ್ಲದ್ರೆ ಆರುದೆ ಮೂಸವು!!

ರಂಗಣ್ಣಂಗೆ ಬೆನ್ನಿಂಗೆ ಹೊಳ್ಪಿದಾಂಗೆ ಆತು ಒಂದರ್ಯಂಗೆ 😀

2.

ರಮ್ಯ ಎಸ್ಸೆಲ್ಸಿಲಿ ಪಾಸು ಹೇದು ಶುದ್ದಿ ಗೊಂತಾಗಿ ಶಾರದಕ್ಕನ ಅಣ್ಣನ ಮಗ ರಮ್ಯಂಗೆ ಒಂದು ವಾಚು ಗಿಫ್ಟು ಕಳ್ಸಿದನಡ..

ವಾಚು ಹೇದರೆ ಬರೇ ಸಾಮಾನ್ಯ ವಾಚು ಅಲ್ಲ..

ಚಿನ್ನದ ಬಣ್ಣದ್ದು.. ಫಳ ಫಳ ಹೊಳೆತ್ತಡ ಅರಶಿನ ಅರಶಿನ ಆಗಿದ್ದುಗೊಂಡು..

ಚಿತ್ರ ಕೃಪೆ: ವೆಂಕಟ್ ಕೋಟೂರ್
ಚಿತ್ರ ಕೃಪೆ:
ವೆಂಕಟ್ ಕೋಟೂರ್

“ಅಲ್ಪ ರೇಟು ಆದಿಕ್ಕಪ್ಪೋ” – ಹೇಳಿತ್ತು ಶಾರದೆ..

 

ಸತ್ಯಣ್ಣ° ಹೇದಾ° ಮಗಳೊ, ಇದರ ಮನೆ ಎದುರೆ ಇಪ್ಪ ತೆಂಗಿನ ಮರಕ್ಕೆ ಎತ್ತರಲ್ಲಿ ಕಟ್ಟಿ ತೂಗುವೋ. ಲಾಯಕ ಹೊಳತ್ತರ್ಲಿ ಎಲ್ಲೋರಿಂಗೆ ಬೆಣಚ್ಚಿ ಕಾಂಗು! 😀

 

~~

3.

ಅಡಿಗೆ ಸತ್ಯಣ್ಣಂಗೆ ಹಾಸನಲ್ಲಿ ಅನುಪತ್ಯ..

ಅನುಪತ್ಯ ಮುಗುಶಿ ಬಸ್ ಹತ್ತಿದ ಸತ್ಯಣ್ಣ ಘಾಟಿ ಇಳಿವದ್ದೆ ಎರಡು ಬೆರಳು ನೆಗ್ಗಿ ತೋರ್ಸಿ ಕಂಡೆಕ್ಟ್ರನ ದೆನಿಗೊಂಡು ಹೇಳಿದ- “ಕಂಡೆಕ್ಟ್ರೆ … ತುರ್ತು.. ಈ ಬಾಗಿಲು ಒಂದರಿ ತೆಗೆತ್ತೆಯಾ!

ಕಂಡೇಕ್ಟ್ರ ಹೇಳಿತ್ತು  – “ಎಂತಕೆ?! ಅದರ ಹಾಂಗೆಲ್ಲ ತೆಗೆತ್ತ ಕ್ರಮ ಇಲ್ಲೆ ಭಟ್ರೇ”

ಸತ್ಯಣ್ಣಂಗೆ ಪಿಸುರು ಬಂದು ಹೇದ° – ಮತ್ತೆಂತಕೆ ನಿನ್ನಪ್ಪನ ಬೊಜ್ಜಕ್ಕೆ ಹೋಪಲೋ ಇದು ತುರ್ತು ನಿರ್ಗಮನ ಬಾಗಿಲು ಮಡಿಗಿದ್ದಿಲ್ಲಿ!! 😀

 

~~

4.

ವಿಷು ಕಳುದು ಮೌಢ್ಯ ಇತ್ತಿದ್ದ ಕಾರಣ ಅಡಿಗೆ ಸತ್ಯಣ್ಣಂಗೆ ಅನುಪ್ಪತ್ಯ ಇತ್ತಿಲ್ಲೆ ಕೆಲವು ದಿನಕ್ಕೆ..

ರಮ್ಯಂಗೂ ರಿಸಲ್ಟು ಬಂದಾಯೇಕ್ಕಷ್ಟೇ..

ಶಾಲಗೂ ರಜೆ… ಸಂಗೀತ ಕ್ಲಾಸು ಮತ್ತೆಯೂ ಹೋಗ್ಯೊಂಬಲಕ್ಕು..

 “ಬೇಸಗೆ ರಜೆ ಅಲ್ಲದೋ..ನಾವು ಎಲ್ಲೋರು ಏರ್ಕಾಡು ಹಿಲ್ಸ್ಂಗೆ ಒಂದಾರಿ ಟೂರ್ ಹೋಗಿಕ್ಕಿ ಬಪ್ಪೋ” – ಹೇಳಿತ್ತು ಶಾರದೆ.

ಆತಪ್ಪ ಹೇದು ಅಡಿಗೆ ಸತ್ಯಣ್ಣಂಗೂ ಒಪ್ಪಿಗೆ ಆತು..

ನಾಕು ದಿನಾಣ ಟೂರು .. ಎರಡು ದಿನ ಹೋಗಿ ಬಪ್ಪಲೆ ಎರಡು ದಿನ ಅಲ್ಲಿ ತಿರುಗಲೆ.

ಅಲ್ಲಿಗೆ ಹೋಗಿ ಅದು ಇದೂ ಗುಡ್ಡೆ ಕಲ್ಲು ಗುಡಿ ತೋಟ ಕಾಡು ಎಲ್ಲ ನೋಡಿ ಆತು..

ಶಾರದೆಯೂ ಸತ್ಯಣ್ಣನೂ ಬೋಟಿಂಗೂ ಕೂದ್ದಾತು..

ರಮ್ಯ ಪಟ ತೆಗದ್ದೂ ಆತು..

ಒಟ್ಟಾರೆ ಈ ಅನುಪ್ಪತ್ಯ ಕಳುದಕೂಡ್ಳೆ ಟೂರ್  ಹೆರಟ ಗಡಿಬಿಡಿಲಿ ಸತ್ಯಣ್ಣಂಗೆ ಡೈ ಹೊಡವಲೆ ಮರದೇ ಹೋಗಿತ್ತು.

ರಮ್ಯ ತೆಗದ ಪಟಂಗಳ ನೋಡಿಕ್ಕಿ ಸತ್ಯಣ್ಣ ಹೇದಾ° – ಶಾರದೆ, ಇನ್ನು ಆನು ನಿನ್ನೊಟ್ಟಿಂಗೆ ಎಲ್ಲಿಗೂ ಬತ್ತಿಲ್ಲೆ ಆತ.. ತಲೆ ಪೂರ ಬೆಳಿಯಾಗಿ ತೊಂಡನಾಂಗೆ ಕಾಣುತ್ತು. ನಿನ್ನ ಒಂದು ತಲಕಸವೂ ಬೆಳಿ ಆಯ್ದಿಲ್ಲೆ!. ಮುಳಿಯ ಬಾವ° ಈ ಪಟ ನೋಡಿರೆ ಎಂತ ಹೇಳುಗು!! 😀

 

~~

5.

 

ಅಡಿಗೆ ಸತ್ಯಣ್ಣ° ಕಳುದೊರಿಶ ಮೌಢ್ಯಲ್ಲಿ ಬೆಂಗ್ಳೂರು ಹೋಗಿ ಬಂದ್ಸು..

 ಅಳಿಯ° ಅಲ್ಲಿ ಸತ್ಯಣ್ಣನ ದೊಡಾ ಆಸ್ಪತ್ರೆಗೆ ಕರ್ಕೋಂಡೋಗಿ ಮಾಸ್ಟರ್ ಚೆಕ್ ಅಪ್ ಎಲ್ಲ ಮಾಡ್ಸಿ ಕಳಿಸಿತ್ತಿದ್ದ°..

ದೇವರ ದಯಂದ ಆರೋಗ್ಯಕ್ಕೆ ಏನೂ ತೊಂದರೆ ಇಲ್ಲೆ ಸತ್ಯಣ್ಣಂಗೆ..

ಅಂದರೂ ಅಂದು ನರ್ಸ್ ಹೇಳಿತ್ತಿದ್ದು ವರ್ಷ ವರ್ಷ ಬಂದು ನೋಡಿಕ್ಕಿ ಹೋಗಿ ಹೇದು..

ಸತ್ಯಣ್ಣಂಗೆ ಅದೀಗ ನೆಂಪಾತು..

ರಂಗಣ್ಣನತ್ರೆ ಸತ್ಯಣ್ಣ ಹೇದಾ°  – ಹೀಂಗೀಂಗೆ ಬಪ್ಪ ತಿಂಗಳು ಒಂದರಿ ಬೆಂಗ್ಳೂರು ಹೋಗಿ ಬಂದರೆಂತ., ಚೆಕ್ ಅಪ್ ಮಾಡಿದಾಂಗೂ ಆವ್ತು..

ರಂಗಣ್ಣ° ಹೇದಾ°– ಈ ಚೆಕ್ ಅಪ್ ಮಾಡ್ಳೆ ಅಲ್ಲಿಗೆ ಹೋವ್ಸು ಎಂತ್ಸಕೆ. ಪುತ್ತೂರ್ಲಿಯೋ ಕೊಡಯಾಲಲ್ಯೋ ಮಾಡ್ಸಲಾಗದೋ..

ಸತ್ಯಣ್ಣ ಹೇದಾ° – ಅದು ಹಾಂಗಲ್ಲ ರಂಗೋ., ಕಳುದ ಸರ್ತಿ ಬೆಂಗ್ಳೂರು ಹೋದ್ದರ್ಲಿ  ‘ಫೋರ್ಟಿಸ್ ಹಾಸ್ಪಿಟಲ್’ ನರ್ಸುಗೊಕ್ಕಾದರೆ ಎನ್ನ ಒಳ್ಳೆತ ಗುರ್ತ ಆಯ್ದು., ಒಳ ಕರ್ಕೋಂಡೋಗಿ ಕೂರ್ಸಿ ಲಾಯಕ ನೋಡುಗು., ವರ್ಷಕ್ಕೊಂದರಿ ಬಂದು ನೋಡಿಕ್ಕಿ ಹೋಗಿ ಹೈದುದೇ.. , ಎನಗೂ ಒಂದರಿ ಅವರ ನೋಡಿದಾಂಗೆ ಆವ್ತಲ್ಲದಾ!! 😀

 

~~

6.

 

ಅಡಿಗೆ ಸತ್ಯಣ್ಣನ ಹೆಂಡತಿಗೆ ಮದಲು ಚಿಕುನ್ ಗುಣಿಯಾ° ಆಗಿಪ್ಪಗ ಮನೆ ಕೆಲಸ ಮಾಡ್ಳೆ ಎಡಿಗಾಗ್ಯೊಂಡಿತ್ತಿಲ್ಲೆ ಕೆಲವು ಸಮಯಕ್ಕೆ..

ಅಡಿಗೆ ಸತ್ಯಣ್ಣಂಗೂ ಅನುಪ್ಪತ್ಯ ಬಿಟ್ಟಿಕ್ಕಿ ಮನೆಲಿ ಕೂದಿಕ್ಕಲೆ ಎಡಿಗಾಗದ್ದ ಪರಿಸ್ಥಿತಿ..

ಮನೆ ಕೆಲಸಕ್ಕೆ ಹೇದು ಓ ಅತ್ತೆ ದಾರವಾಡ ಕಡೆಯಾಣ ಹೆಣ್ಣೊಂದರ ಮಡಿಕ್ಕೊಂಡ..

ಒಂದಿನ ಎಲ್ಯೋ ಅಡಿಗೆ ಮುಗಿಶಿ ಮನಗೆ ಬೇಗ ಬಂದ ಸತ್ಯಣ್ಣ°, ಹೆಣ್ಣಿನತ್ರೆ ಕೇಳಿದ° – “ನೆಲ ಒರೆಸಿ ಆಗಿದೋ”?

ಆ ಹೆಣ್ಣು ಹೇಳಿತ್ತು – “ನೆಲ ಒರ್ಸಿ ಆಗಿದೆ…, ಇನ್ನು ಗುಡಿಸಬೇಕಷ್ಟೆ”. ! 😀

 

~~

7.

ಅಡಿಗೆ ಸತ್ಯಣ್ಣಂಗೆ ಕಳುದೊರಿಶ ಮಳೆಗಾಲಲ್ಲಿ ಜೋರು ಜ್ವರ..

ಏನ ಮಾಡಿರೂ ಜ್ವರ ಬಿಡ., ಜ್ವರದ ಕಾರಣವೂ ಸಿಕ್ಕ..

ಪೆರ್ಲ ಪುತ್ತೂರು ಕಾಸ್ರೋಡು ಡಾಕುಟ್ರಕ್ಕಳ ಮದ್ದಿಗ್ಗೆ ಜ್ವರ ಬಗ್ಗದ್ದೆ ಸತ್ಯಣ್ಣ ಕೊಡೆಯಾಲ ಆಸ್ಪತ್ರೆಲಿ ಒಂದು ವಾರ ಕೂರೆಕಾಗಿ ಬಂತು..

ಸತ್ಯಣ್ಣಂಗೂ ನಿಲ್ಲದ್ದೆ ಉಪಾಯ ಇಲ್ಲೆ..

ನಾಕು ದಿನ ಅಪ್ಪಗ ಜ್ವರ ಬಿಟ್ಟತ್ತು.. ಅಂದರೆ ಸತ್ಯಣ್ಣಂಗೆ ಆಸ್ಪತ್ರೆ ಬಿಡ್ಳೆ ಆಯ್ದಿಲ್ಲೆ..

ಈ ನಾಕು ದಿನಲ್ಲಿ ಅಲ್ಲಿಯಾಣ ಕೆಲವು ನರ್ಸುಗಳ, ಚಾಕ್ರಿಯೋರ, ದಾಕುದಾರಕ್ಕಳ ಒಳ್ಳೆತ ಗುರ್ತ ಆತು.. ಕುಶಾಲಿಂಗೆ ಲೋಕಾಬಿರಾಮ ಪಟ್ಟಾಂಗವೂ ಸುರುವಾತು..

ಸತ್ಯಣ್ಣನತ್ರೆ ಒಳ್ಳೆತ ಗುರ್ತ ಆದ ಒಂದು ನರ್ಸು ಸತ್ಯಣ್ಣನತ್ರೆ ಒಂದಿನ ಕೇಳಿತ್ತು – ‘ನಂಗೆ ರಾತ್ರೆ ನಿದ್ದೆ ಬರುದಿಲ್ಲ, ಏನಾದ್ರೂ ಹಳ್ಳಿ ಮದ್ದು ಉಂಟಾ? ನಿಮಿಗೆ ಗೊಂತುಂಟ?

ಶ್ಶೆಲಾ! ಎಲ್ಲೋರಿಂಗು ಮದ್ದು ಕೊಡ್ತ ನರ್ಸೆತ್ತಿಗೇ ಹೀಂಗಾತನ್ನೇದು ಗ್ರೇಶಿ ಹೋತು ಸತ್ಯಣ್ಣಂಗೆ..

ಸತ್ಯಣ್ಣ° ಹೇದಾ° “ನರಸಮ್ಮ, ನಿಮ್ಮ ಮನೆ ಅಂಗಳದಲ್ಲಿ ಇರುವ ದಾಸನ ಮರದ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಲೇಪ ಹಾಕಿ  ಮತ್ತೆ ಸ್ನಾನ ಮಾಡಿ ಮಲಕ್ಕೋ..,    ನಿದ್ದೆ ಬಾರದಿದ್ರೆ ಆಮೇಲೆ ಹೇಳು! 😀

 

~~

8.

 

ಅನುಪ್ಪತ್ಯ ಅಡಿಗೆ ಮುಗುಶಿ ಬೇಗ ಹೆರಟ ಸತ್ಯಣ್ಣಂಗೆ ಪೇಟಗೆ ಎತ್ತಿಯಪ್ಪಗ ಒಳ್ಳೆತ ಆಸರು ಆತು..

ಒಂದು ಗೂಡಂಗಡಿಲಿ ಗೋಳಿಸೋಡ ಕುಡುದ ಸತ್ಯಣ್ಣ ಅಂಗಡಿಲಿ ನೇತೊಂಡಿದ್ದ ಬಾಳೆಹಣ್ಣಗೊನೆ ನೋಡಿ ಅದರ ಮುಟ್ಟಿ ತಿರುಗಿಸಿಯೊಂಡಿತ್ತಿದ್ದ° ..

ಅಂಗುಡಿ ಜೆನ ಕೇಳಿತ್ತು – “ಎಂತ ಬೇಕಿತ್ತು ಭಟ್ರೇ?”

ಸತ್ಯಣ್ಣ° ಹೇದಾ° – “ಏನಿಲ್ಲಾ., ಎಲ್ಯಾರು ಜೋಡು ಬಾಳೆಣ್ಣು ಉಂಟೋ ಅಂತ ನೋಡಿದ್ದಷ್ಟೆ., ಒಂದಕ್ಕೊಂದು ಪ್ರೀ ಅಲ್ವಾ, ಅದಿಕ್ಕೆ”! 😀

 

~~

 

9.

 

ಅನುಪ್ಪತ್ಯ ಬಿಡುವು ಇದ್ದ ಒಂದಿನ ಅಡಿಗೆ ಸತ್ಯಣ್ಣನೂ ಶಾರದೆಯೂ ಒಂದಿನ ಕೊಡಯಾಲಕ್ಕೆ ಕುಲ್ಯಾಡಿಕಾರ್ಸ್ಂಗೆ ಹೋಯೇಕು ಹೇದು ಬಸ್ಸು ಹಿಡುದು ಹೋದವು..

ಹಂಪನಕಟ್ಟೆಲಿ ಬಸ್ಸು ಇಳುದ ಸತ್ಯಣ್ಣ-ಶಾರದೆ ಅಲ್ಲಿಂದ ನಡವಲೆ ಸುರುಮಾಡಿದವು..

ಸತ್ಯಣ್ಣ ಬಸ್ಸು ಇಳುದು ಮೆಲ್ಲಂಗೆ ನಡೆತ್ತರ ನೋಡಿ ಒಟ್ಟಿಂಗೆ ಇತ್ತ ಯಜಮಾಂತಿ ಕೇಳಿತ್ತು – “ನಿಂಗೊ ಎಂತ ಇಂದು ಭಾರೀ ನಿಧಾನ, ಏವತ್ತೂ ಎನ್ನ ಬಿಟ್ಟಿಕ್ಕಿ ತುರುತುರು ನಡವಿ!”

ಸತ್ಯಣ್ಣ ಹೇದಾ° – “ಶಾರದೇ., ಓ ಅಲ್ಲಿ ಎಂತ ಬರಕ್ಕೊಂಡು ಇದ್ದು ಹೇದು ನೋಡು ಒಂದರಿ .

                       “Go Slow, Work in Progress”.

                         ನೋಡಿದೆಯಾ? ಗೊಂತಾತಾ?” 😀

~~

10.

ರೂಪತ್ತೆಯ ಒಂದು ತಂಗೆ ಬೆಂಗಳೂರ್ಲಿ ಇರ್ಸು. ಬೈಲ ಅನುಪತ್ಯಕ್ಕೆಲ್ಲ ಅದು ಬಾರದ್ದಿಪ್ಪ ಕಾರಣ ಬೈಲಿಲಿ ಅದರ ಪ್ರಚಾರ ಇಲ್ಲೆ..

ರೂಪತ್ತೆ ಮನೆಲಿ ಅನುಪ್ಪತ್ಯ ಆಗದ್ರೂ ರೂಪತ್ತೆ ತಂಗೆ ಮನೇಲಿ ಅನುಪ್ಪತ್ಯ ಆಗದ್ದೆ ಇರ್ತಿಲ್ಲೆ..

ಕಳುದಸರ್ತಿ ಅಲ್ಲಿ ಸತ್ಯನಾರಾಯಣ ಪೂಜೆ ಪೂಜೆ ಆದ್ದು, ಸತ್ಯಣ್ಣ – ರಂಗಣ್ಣನೇ ಅಡಿಗ್ಗೆ ಹೋದ್ದು..

ರೂಪತ್ತೆ, ರೂಪತ್ತೆ ಪೈಕಿ ಕೆಲವು ಅಕ್ಕಂದ್ರು ಅಂದಲ್ಲಿಗೆ  ಅವು ಹೇಳ್ತ ‘ಮಾಡರ್ನ್’ ನಮೂನೆಲಿ ಬಂದಿತ್ತವು..

ಸತ್ಯಣ್ಣಂಗೆ ಇದೆಲ್ಲ ಹೊಸತ್ತಲ್ಲದ್ದರೂ ರಂಗಣ್ಣಂಗೆ ಇದೆಲ್ಲ ಹೊಸತ್ತೇ..

ಅಡಿಗೆ ಎಲ್ಲ ಆಗಿಕ್ಕಿ ಸತ್ಯಣ್ಣ° ಹಪ್ಪಳ ಹೊರ್ಕೊಂಡು ಇಪ್ಪಗ ರಂಗಣ್ಣ ಸತ್ಯಣ್ಣನತ್ರೆ ಮೆಲ್ಲಂಗೆ ಕೇಟ° – “ಇವೆಂತ್ಸೆಕೆ ಸ್ಲೀವ್ ಲೆಸ್ ಹಾಕುಸ್ಸು?”

ಇದು ಸತ್ಯಣ್ಣನತ್ರೆ ಕೇಳೇಕ್ಕಾದ ಚೋದ್ಯವೋ!, ಪಿಸುರು ಬಾರದ್ದಿಕ್ಕೋ ಸತ್ಯಣ್ಣಂಗೆ!

ಅಂದರೂ ಅದರೆಲ್ಲ ಹೋದಲ್ಲಿ ತೋರ್ಸಿಗೊಂಬಲೆ ಇಲ್ಲೆ ಸತ್ಯಣ್ಣ°..

ಸತ್ಯಣ್ಣ ಹೇದ°- “ಅದು ರಂಗೋ.,  ಡಾಕುಟ್ರಕ್ಕೊ ಕೈಗೆ ಸೂಜಿ ಕುತ್ತೆಕು ಹೇದರೆ ಭಂಙ ಅಪ್ಪಲಾಗ ಅದಾ..”  😀

~~

11.

ವಿಟ್ಲದ ಅಡಿಗೆ ಮುಗಿಶಿಕ್ಕಿ ಅಡಿಗೆ ಸತ್ಯಣ್ಣ°, ರಂಗಣ್ಣ°, ಪುಟ್ಟಣ್ಣ°, ಮುದ್ದಣ್ಣ° ಒಂದೇ ಬಸ್ಸಿಂಗೆ ಹತ್ತಿದವು..

ಎಲ್ಲೋರಿಂಗೂ ಪೆರ್ಲಲ್ಲಿಯೇ ಇಳಿಯೇಕ್ಕಾದ್ದು. ಅವ್ವವ್ವು ಅವರವರ ಟಿಕೇಟು ತೆಕ್ಕೊಂಡವು..

ಪುಟ್ಟಣ್ಣ  ನೂರ್ರುಪ್ಪಾಯಿ ಕೊಟ್ಟರ್ಲಿ ಚಿಲ್ಲರೆ ಕೊಡ್ಳೆ ಕಂಡೆಕ್ಟ್ರನತ್ರೆ ಇತ್ತಿಲ್ಲೆ..

ಇಳಿವಾಗ ಕೇಳಿ ತೆಕ್ಕೊಳ್ಳಿ ಹೇದು ಟಿಕೇಟಿನ ಹಿಂದೆ 83/- ಹೇದು ಗೀಚಿ ಕೊಟ್ಟತ್ತು..

ಪೆರ್ಲಕ್ಕೆ ಎತ್ತಲಪ್ಪದ್ದೆ ರಂಗಣ್ಣಂಗೆ ಇಳಿವಲೆ ಅಂಬೇರ್ಪಾತು ..

ಇಳಿರಿ ಇಳಿರಿ ಪೆರ್ಲ ಬಂತು ಹೇದು ಒಂದೇ ಗಡಿಬಿಡಿ ಮಾಡಿ ಇಳುದಾತು..

ಮತ್ತೆ ನೋಡಿರೆ ರಂಗಣ್ಣಂಗೆ ಆಸರಾಗಿ ತಡೆಯ..

ಎದುರೇ ಇತ್ತಿದ್ದ ಬಂಟನಂಗಡಿಗೆ ಹೋಗಿ ಗೋಳಿಸೋಡ ಕುಡುದ°.. , ಪುಟ್ಟಣ್ಣ° ಕಬ್ಬಿನಾಲಕ್ಕು ಹೇದು ಕಬ್ಬು ಎರಡ ಗಾಣಕ್ಕೆ ತುರ್ಕುಸಲೆ ಹೇದ°..

ಪುಟ್ಟಣ್ಣ° ಪೈಸೆ ಕೊಡ್ಳೆ ಕಿಸಗೆ ಕೈ ಹಾಕಿರೆ ಟಿಕೇಟು ಮಾಂತ್ರ ಇತ್ತಿದ್ದದು..! ಈ ರಂಗಣ್ಣನ ಗಡಿಬಿಡಿಲಿ ಕಂಡೆಕ್ಟ್ರನತ್ರೆ ಚಿಲ್ಲರೆ ತೆಕ್ಕೊಂಬಲೆ ಮರದೇ ಹೋತು..

ಸತ್ಯಣ್ಣ° ರಂಗಣ್ಣಂಗೆ ಎರಡ ಪರಂಚಿದ°, ಕಬ್ಬಿನಾಲ ಪೈಸೆಯೂ, ಮುಂದೆ ಬಣ್ಪುತ್ತಡ್ಕಕ್ಕೆ ಹೋಪಲೆ ಬಸ್ಸಿನ ಪೈಸೆಯೂ ಅವನತ್ರಂದಲೇ ಪೀಂಕುಸಿ ಕೊಟ್ಟ ಅಡಿಗೆ ಸತ್ಯಣ್ಣ° :(

ಬೇಕಾತೋ ರಂಗಣ್ಣಂಗೆ ಆ ಪೊರಿಯೆರ್ಪು 😀
 

~~~ 😀 😀 😀 ~~~

ಅಡಿಗೆ ಸತ್ಯಣ್ಣನ ಬಗ್ಗೆ ನಿಂಗೊ ಎಷ್ಟು ತಿಳ್ಕೊಂಡಿದಿ ?-

ಓದುಗರಿಂಗೆ ಪ್ರಶ್ನೆ –

ಅಡಿಗೆ ಸತ್ಯಣ್ಣನ ದೊಡ್ಡ ಮಗಳ ಹೆಸರು ?

○ ಸೌಮ್ಯ         ○ ರಾಧೆ           ○ ದಿವ್ಯ          ○ ಉಲ್ಲೇಖ ಆಯ್ದಿಲ್ಲೆ

[ಪ್ರಶ್ನೆಯ ಸರಿಯಾಗಿ ಯೋಚಿಸಿ ಉತ್ತರವ ಆಯ್ದು ನಿಂಗಳ ವಿಳಾಸ ಸಹಿತ ಬರದು ಕಳ್ಸಿ, ಫಟ ಕಳ್ಸುದು ಬೇಡ. ಸರಿಯುತ್ತರ ನೀಡಿ ಪ್ರಥಮ ವಿಜೇತರಿಂಗೆ ರಮ್ಯನ ಮದುವೆ ಸಮಯಲ್ಲಿ ಒಂದು ಕೆರ್ಶಿ ಹೋಳಿಗೆ. ದ್ವೀತೀಯ ಸ್ಥಾನ ಪಡದವಕ್ಕೆ ಒಂದು ಕರಡಿಗೆ ಮಿಕ್ಚರು. ಮೂರು ನಾಕು ಹೇಳಿ ಇನ್ನು ಉದ್ದಕ್ಕೆ ಸ್ಥಾನಂಗೊ ಇಲ್ಲೆ.]

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಸತ್ಯಣ್ಣನ ದೊಡ್ಡಮಗಳು ರಾಧೆಯ ಮದುವೆ ಅ೦ದೇ ಕಳುದ್ದಿಲ್ಲೆಯೊ?ಹೇಳಿಕೆ ಬ೦ದ ಹಾ೦ಗೆ ನೆ೦ಪು..

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮಅಜ್ಜಕಾನ ಭಾವಜಯಶ್ರೀ ನೀರಮೂಲೆಪುಣಚ ಡಾಕ್ಟ್ರುಅಕ್ಷರದಣ್ಣಅನು ಉಡುಪುಮೂಲೆಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿದೊಡ್ಡಮಾವ°ರಾಜಣ್ಣಬೋಸ ಬಾವವಿದ್ವಾನಣ್ಣvreddhiಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕವೇಣೂರಣ್ಣಡೈಮಂಡು ಭಾವಕಳಾಯಿ ಗೀತತ್ತೆಶುದ್ದಿಕ್ಕಾರ°ದೇವಸ್ಯ ಮಾಣಿನೆಗೆಗಾರ°ವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಬೊಳುಂಬು ಮಾವ°ವಿಜಯತ್ತೆದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ