“ಅಡುಗೆ ಸತ್ಯಣ್ಣ°” ಜೋಕುಗೊ – ಭಾಗ 6

April 18, 2013 ರ 11:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಳುದವಾರ ನಾಣಿ ಎಂತಾದ°, ದಾಸಪ್ಪ ಮಾಸ್ಟ್ರಂಗೆ ಎಂತಾತು.. ಖಂಡಿತಾ ಗೊಂತಿಕ್ಕು. ಮರವಲೆಡಿಗೋ ಶ್ಯಾಮಣ್ಣನ ಕಥೆ-ನಿರ್ದೇಶನ-ಸಂಭಾಷಣೆ-ಛಾಯಾಗ್ರಹಣ-ಚಿತ್ರೀಕರಣ! . ಆದರೆ ಕಳುದವಾರ ಸತ್ಯಣ್ಣ ಎಲ್ಲಿ ಹೋಗಿ ನಿಂದಿದ ಹೇಳಿ ಗೊಂತಿದ್ದೋ?!. ಗೊಂತಿಪ್ಪಲೆ ಅಂವ ಒಂದಿಕ್ಕೆಯೇ ನಿಂಬೋನಲ್ಲ. ಒಂದೊಂದು ದಿನ ಒಂದೊಂದು ಊರ್ಲಿ ಅನುಪತ್ಯ. ಹೋದಲ್ಲಿ ಲಾಯಕ ಅಡಿಗೆ ಮಾಡಿ ಕೊಟ್ಟತ್ತೋ, ಯಥಾನುಶಕ್ತಿ ಯಜಮಾನ ಕೊಟ್ಟದರ ಸಂತೋಷಲ್ಲಿ ಕಿಸೆಲಿ ಹಾಕ್ಯೊಂಡು ಅಲ್ಲಿಂದ ಮತ್ತಾಣ ಅನುಪತ್ಯಕ್ಕೆ ರೆಡಿ.  ಹೀಂಗೊ ಹೋಪಗ ಎಲ್ಯಾರು ಕಂಡ್ರೆ ಆತು. ವಿಷಯ ನಾಲ್ಕೈದು ಸಿಕ್ಕುತ್ತು. ಹಾಂಗೇ ಈ ವಾರ ಸತ್ಯಣ್ಣ ಎಂತ ಹೇಳಿದ ಹೇಳ್ವದರ ಕೂದು ಓದುವೋ ಇಲ್ಲೀಗ.

1.

ಬದಿಯಡ್ಕ ಹೇಳಿರೆ ನಮ್ಮ ಬೈಲಿನ ಒಳವೇ ಇಪ್ಪದು..

ಬದಿಯಡ್ಕ ಆಸುಪಾಸಿನವೂ ನಮ್ಮ ಬೈಲಿನೊಳ ಇದ್ದವು..

aduge satyanna
ಚಿತ್ರ ಕೃಪೆ :
ವೆಂಕಟ್ ಕೋಟೂರ್

ಬದಿಯಡ್ಕಲ್ಲಿ ವರ್ಷ ವರ್ಷ ಗಣೇಶೋತ್ಸವ ನಡವದು ಎಲ್ಲರಿಂಗೂ ಗೊಂತಿಪ್ಪದೇ..

ಆನು ಸಣ್ಣದಿಪ್ಪಗಳೇ ಹತ್ತೊರಿಶಂದ ಮದಲಿಂದಲೇ ನಡಕ್ಕೊಂಡು ಬತ್ತಾ ಇದ್ದು ಹೇದು ಹೇಳೋದು ಕೇಳಿದ್ದೆ. ಈಗಳೂ ಅದೇ ಉತ್ಸಾಹಲ್ಲಿ ನಡೆಶಿಗೊಂಡು ಬತ್ತಾ ಇದ್ದವು . ನವಗೂ ಹೆಮ್ಮೆಯೇ..

ಹೀಂಗೆ ವರ್ಷ ವರ್ಷ ಆಚರಣೆಲಿ ಆ ಊರ ಹಿರಿಯ ಜನಪ್ರಿಯ ಸರಳ ಸಜ್ಜನ ವ್ಯಕ್ತಿಯೊಬ್ಬಂಗೆ ಸಣ್ಣ ಮಟ್ಟಿಂಗೆ ಒಂದು ಸನ್ಮಾನ ಮಾಡುವ ಕಾರ್ಯಕ್ರಮವನ್ನೂ ಮಾಡಿಗೊಂಡು ಬತ್ತಾ ಇದ್ದವು. ಇದೂ ಕೇಳ್ಳೆ ಲಾಯಕ ಇದ್ದು. ನವಗೂ ಹೆಮ್ಮೆಯೇ..

ಮದಲಿಂಗೆ ಅಲ್ಲಿ ಅಡಿಗೆ ವೆಂಕಪ್ಪಜ್ಜ° ಸುಧರಿಕೆ ಮಾಡಿಗೊಂಡಿತ್ತವು.. ಹಲವು ವರ್ಷಂದ.

ಓ.. ಆ ವರಿಶ ಅವು ತೀರಿಹೋದವು. :(

ಆ ವರ್ಷ ಅವಕ್ಕೆ ಅಲ್ಲಿ ಸನ್ಮಾನವೂ ಆಗಿತ್ತಿದ್ದು.

ಅಲ್ಲಿ ಪೂಜೆಗೆಲ್ಲ ಮದಲಿಂಗೆ ಸಂಕಪ್ಪಜ್ಜನೇ. ಎಷ್ಟೋ ವರ್ಷದ ಶ್ರದ್ಧಾಭಕ್ತಿಲಿ ಸೇವೆ ಮಾಡಿಗೊಂಡು ಬಂದಿತ್ತವು..

ಅವ್ವು ಓ.. ಆ ವರಿಶ ತೀರಿಹೋದವು. :(

ಆ ವರ್ಷ ಅವಕ್ಕೆ ಅಲ್ಲಿ ಸನ್ಮಾನವೂ ಆಗಿತ್ತಿದ್ದು.

ನಮ್ಮ ಊರಿಲ್ಲಿ ಇದೀಗ ಸದ್ಯಲ್ಲಿ ಜನಪ್ರಿಯರಾಗಿಪ್ಪೋರು ನಮ್ಮ ಅಡಿಗೆ ಸತ್ಯಣ್ಣನೇ.

ಗಣೇಶೋತ್ಸವ ಸಮಿತಿಯವು ಅಡಿಗೆ ಸತ್ಯಣ್ಣಂಗೆ ಈ ವೊರಿಶ ಸನ್ಮಾನ ಮಾಡುವೋ ಹೇಳಿ ಸರ್ವಾನುಮತದ ತೀರ್ಮಾನ ಆಗಿ ಸತ್ಯಣ್ಣನ ಒಪ್ಪಿಗೆ ಕೇಟವು.

ಆದರೆ ಸತ್ಯಣ್ಣ° ಒಪ್ಪಿದ್ದನಿಲ್ಲೆ. !

ಸತ್ಯಣ್ಣ° ಹೇಳಿದ°- ಎಡಿಯಾ, ಬೇಡ.,  ಮಗಳು ಈಗಷ್ಟೇ ಹತ್ತನೆ. ಇನ್ನು ಕೋಲೇಜಿಂಗೆ ಸೇರ್ಸೆಕು, ಚಪ್ಪರ ಹಾಕೆಕು, ಮದುವೆ ಮಾಡುಸೆಕು…  ಏವುದಕ್ಕೂ ಸಮಯ ಬರ್ಲಿ.. ಮತ್ತೆ ನೋಡುವೋ. 😀

 

~~

2

ಅಡಿಗೆ ಸತ್ಯಣ್ಣ ಈಗ ಎಣ್ಣೆಲೆ ಬೇಕಾಷ್ಟು ಕಾಸುತ್ತನಾದರೂ ಮದಲೆ ಸಣ್ಣದಿಪ್ಪಗ ತಲಗೆ ಎಣ್ಣೆ ಕಿಟ್ಳೂ ಸಿಕ್ಕ..

ಮತ್ತೆ ಅಬ್ಬೆ ಕೊಂಗಾಟ ಮಾಡಿ ಬೆಲ್ಲವೋ ಕಾಯಿಸುಳಿಯೋ ಕೊಟ್ಟು ಮಂಕಡುಸಿ ಎಣ್ಣೆ ಕಿಟ್ಟುವದು..

ಒಂದಿನ  ಮಾಣಿ ಸತ್ಯಣ್ಣ ಅಬ್ಬೆಯತ್ರೆ ಕೇಳಿದಾ – ‘ಎಂತಕ್ಕಬ್ಬೆ ಗಾಂಧಿ ಅಜ್ಜನ ತಲೆಲಿ ಕೂದಲೇ ಇಲ್ಲೆ?!

ಅಬ್ಬೆ ಹೇಳಿತ್ತು – ಅಂವ ಸತ್ಯವಂತ. ಲೊಟ್ಟೆಯೇ ಹೇಳ°.

ಮಾಣಿ ಸತ್ಯಣ್ಣ° – ಹ್ಮ್ಮ್.. ಈಗ ಗೊಂತಾತಬ್ಬೆ – ಕೂಸುಗೊಕ್ಕೆ ಎಂತಕೆ ಉದ್ದ ಕೂದಲಿರುತ್ತು ಹೇದು !!😀

 

~~

3

ಅಡಿಗೆ ಸತ್ಯಣ್ಣಂಗೆ ಈ ವರ್ಷದ ಯುಗಾದಿ ಆಚರಣೆ ದೊಡ್ಡ ಮಗಳ ಮನೆ ಬೆಂಗಳೂರ್ಲಿ..

ಅಳಿಯನುದೆ ಮಾವಗಳುದೆ ಹೊತ್ತೋಪಗ ಪೇಟೆ ತಿರುಗಲೆ ಹೆರಟವು..

ತಿರುಗಿ ರಜಾ ಬಚ್ಚಿಯಪ್ಪಗ ಅಳಿಯ ಮಾವನತ್ರೆ ಹೇದ- ಇದಾ ಇಲ್ಲಿ ಉಡುಪಿ ಬ್ರಾಹ್ಮರ ಹೋಟ್ಳು ಇದ್ದು. ಒಂದು ಕಾಪಿ ಕುಡಿದಿಕ್ಕುವೊ°..

ಅಕ್ಕು ಹೇದು ಇಬ್ರೂ ಹೋಟ್ಳೊಳ ಹೊಕ್ಕಿ ಕಾಪಿ ಕುಡಿವಲೆ ಕೂದವು..

ಅಳಿಯ° ಸಪ್ಲೈಯರನತ್ರೆ ಬೈಟೂ ಕಾಪಿ ಆರ್ಡರ್ ಕೊಟ್ಟ°..

ಕಾಪಿ ಬಂತು..

ಸತ್ಯಣ್ಣ° ಕಾಪಿ ನೋಡಿಕ್ಕಿ ಹೇದ° – ಏ ಅಳಿಯೋ., ಎನಗೆ ಈ ಬೈಟೂ ಅಥವಾ ಬೈತ್ರೀ  ಎಲ್ಲ ಪುಚ್ಚೆ ನಕ್ಕುವಾಂಗೆ ನಕ್ಕಿ ಅಭ್ಯಾಸ ಇಲ್ಲೆ., ನೀನೇ ಕುಡಿದಿಕ್ಕು.

 

ಮನಗೆ ಹೋಗಿ ಸತ್ಯಣ್ಣ ಮಗಳತ್ರೆ ವಿಷಯ ಎಲ್ಲ ಹೇಳಿಕ್ಕಿ ಮತ್ತೆ ಹೇಳಿದ° – “ಅದಕ್ಕೇ ಮಗಾ° ಆನು ಹೇಳಿದ್ದು ಬೆಂಗ್ಳೂರ ಮಾಣಿ ನವಗೆ ಬೇಡ ಹೇದು.” 😀

~~

4.

ಯುಗಾದಿಗೆ ಬೆಂಗ್ಳೂರಿಂಗೆ ಹೋದ ಅಡಿಗೆ ಸತ್ಯಣ್ಣ ಯುಗಾದಿ ಮುಗಿಶಿಕ್ಕಿ ಊರಿಂಗೆ ಐರಾವತ ಬಸ್ ಹತ್ತಿದ°..

 

ಬಸ್ಸಿನೊಳ ಮುಂದಂದ ಹಿಂದೆವರೇಂಗೆ ಹೋಗಿ ನೋಡಿಕ್ಕಿ ವಾಪಸ್ಸು ಬಂದು ಕಂಡೆಕ್ಟರನತ್ರೆ ಕೇಳಿದ ಎಲ್ಲಿ ಉಂಟು ನಮ್ಮ ಸೀಟು ಹೇದು.

 

ಕಂಡೆಕ್ಟರ° – “ನಿಮ್ಮ ಸೀಟು ನಂಬ್ರ ನೋಡಿ ಕುಂತ್ಕೊಳ್ಳಿ” ಹೇತು..

 

ಸತ್ಯಣ್ಣ ಹೇದ° – ಕಂಡೆಕ್ಟ್ರೇ.. ಅಂಗವಿಕಲರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ಹಿರಿಯರಿಗೆ, ಮಹಿಳೆಯರಿಗೆ ಅಂತ ಎಲ್ಲ ಬೋರ್ಡು ಉಂಟು. ಆದ್ರೆ .. ಅಡಿಗೆ ಭಟ್ರಿಗೆ ಅಂತ ಇಲ್ಲಿ ಎಲ್ಯೂ ಕಾಣೂದಿಲ್ಲಲ್ಲ !  😀

~~

5.

ಅನುಪತ್ಯಕ್ಕೆ ಹೋದಲ್ಲಿ ಕೆಲಸ ಮುಗುಶಿ ಅಡಿಗೆ ಕೊಟ್ಟಗೆಲೇ ಲೋಕಾಭಿರಾಮ ಮಾತಾಡಿಗೊಂಡಿತ್ತವು ಅಡಿಗೆ ಸತ್ಯಣ್ಣಂದೆ ರಂಗಣ್ಣನುದೆ..

ಎಡೆಲಿ ರಂಗಣ್ಣ ಸತ್ಯಣ್ಣನತ್ರೆ ಕೇಳಿದ – ಸತ್ಯಣ್ಣ ಟೊಮೆಟೋಕ್ಕೆ ಕನ್ನಡಲ್ಲಿ ಎಂತ ಹೇಳುಸ್ಸು?

ಸತ್ಯಣ್ಣ ಕೇಟ° – ಎಂತಕೆ .., ನಿನಗೆ ಗೊಂತಿಲ್ಯೋ?

ರಂಗಣ್ಣ° – ಇಲ್ಲೆ , ಗೊಂತಿಲ್ಲೆ.

ಸತ್ಯಣ್ಣ° – ತಮಾಟೆ ಹಣ್ಣು.

ರಂಗಣ್ಣ° – ಚೆ., ತಮಾಟೆ ಹಣ್ಣು ಅಲ್ಲ.

ಸತ್ಯಣ್ಣ° ಅಂಬಗ ನಿನಗೆ ಗೊಂತಿದ್ದು ಹೇಳಿ ಆತಿಲ್ಯ. ಮತ್ತೆಂತಕೆ ಎನ್ನತ್ರೆ ಕೇಳಿದ್ದು?  😕

~~

6.

ಅಡಿಗೆ ಸತ್ಯಣ್ಣ ಹೊತ್ತೋಪಗ ಎಲ್ಲಿಗೋ ಅನುಪತ್ಯಕ್ಕೆ ಹೋಪಲೆ ಪೆರ್ಲ ಪೇಟೆ ಅಂಗುಡಿ ಕರೆಲಿ ನಿಂದುಗೊಂಡಿತ್ತಿದ್ದ°.

ಪೆರ್ಲ ಮಗಳ ಮನಗೆ ಬಂದ ಅಡ್ಯನಡ್ಕದ ಬಂಗೇರ° ರಜಾ ಒಳ್ಳೆತ ನೇಂಟಿಕ್ಕಿ ಅಂಗಡಿ ಹತ್ರೆ ಬಂತು..

ಬೆಂಗಳೂರಿಂಗೆ ಮಗಂಗೆ ಫೋನ್ ಮಾಡೇಕು ಹೇಳಿ ಅಂಗಡಿ ಮನುಷ್ಯನತ್ರೆ ಹೇಳಿತ್ತು..

ಆತಪ್ಪ ಹೇಳಿ ಅದರತ್ರಂದ ನಂಬರ ತೆಕ್ಕೊಂಡಿಕ್ಕಿ ಬೆಂಗಳೂರ ಕೋಡ್ ನಂಬ್ರ ಹಾಕಿ ಫೋನ್ ಮಾಡಿ ಕೊಟ್ಟತ್ತು.

ಮಾತಾಡಿತ್ತು ಮಾತಾಡಿತ್ತು ಮಾತಾಡಿತ್ತು…..

ಅಕೇರಿಗೆ ಫೋನ್ ಮಡಿಗಿಕ್ಕಿ ಎಷ್ಟಾತು ಕೇಳಿತ್ತು..

ಅರುವತ್ತೈದು ರೂಪಾಯಿ ಆತು ಹೇಳಿತ್ತು ಅಂಗುಡಿದು..

ಬಂಗೇರಂಗೆ ಒಂದೇಬೆಟ್ಟಿಂಗೆ ಕೋಪ ಬಂತು – “ಅದೇಂಗೆ ಅಷ್ಟು ಅಪ್ಪದು. ಆನೂ ಎಂಗಳ ಅಡ್ಯನಡ್ಕಂದ ಇದೇ ನಂಬರಿಂಗೆ ಫೋನ್ ಮಾಡ್ತೆ. ಇದರಿಂದ ಹೆಚ್ಚು ಮಾತಾಡಿರೂ ಇಷ್ಟಾವ್ತಿಲ್ಲೆ. ನೀ ಎಂತದೋ ತಪ್ಪು ಮಾಡಿದ್ದೆ. ನೀ ಏವ ನಂಬರು ಹಾಕಿ ಕೊಟ್ಟದೆನಗೆ..” ?

ಅಂಗುಡಿದು ಬರದು ತೋರ್ಸಿತ್ತು ಕೋಡ್ ನಂಬ್ರ ಸಹಿತ ಫೋನ್ ನಂಬ್ರವ.

ಬಂಗೇರಂಗೆ ಮತ್ತೂ ಏರಿತ್ತು ಕೋಪ., – “ಅದೆಂತಕೆ ನೀ ಕೋಡು ನಂಬ್ರ ಹಾಕಿದ್ದು. ಆನು ಹೇಳಿದ್ದನೋ ನಿನ್ನತ್ರೆ ಕೋಡು ನಂಬ್ರ ಸೇರ್ಸಿ ಹಾಕಲೆ ? . ನಿನ್ನಷ್ಟಕ್ಕೇ ಎಕ್ಸ್ಟ್ರಾ ನಂಬ್ರ ಹಾಕಿ ಈಗ ಬಿಲ್ಲು ಹೆಚ್ಚು ವಸೂಲು ಮಾಡ್ತಾ ಇದ್ದೆ. ಮೋಸ ಮಾಡ್ತಾ ಇದ್ದೆ..” .

ಏನ ಹೇಳಿರೂ ಕೇಳ., ಒಂದೇ ಲಾಡಾಯಿ.

ಅಷ್ಟಪ್ಪಗ ಬಜಕ್ಕೋಡ್ಳ ಬಂಟ° ಬಂತು ಅಲ್ಲೇ. ಬಜಕ್ಕೋಡ್ಳ ಬಂಟ° ಹೇಳಿರೆ ಒಂದು ನಮೂನೆ ದೊಡ್ಡ ಗುರಿಕ್ಕಾರನೇ ಆ ಊರ್ಲಿ. ಅದರ ಎದುರು ಎಲ್ಲೋರು ಕೈಕಟ್ಟಿ ನಿಂಬೋವ್ವೇ. .

ಅಂಗಡಿ ಸತ್ಯಣ್ಣನೂ ತಳಿಯದ್ದೆ ನೋಡಿಗೊಂಡು ನಿಂದ ಬಂಟ ಎದುರು ಬಂದ ಕಾರಣ..

ಬಂಟ°  ಕೇಳಿತ್ತು ಎಂತರ ಕತೆ ಇದು ನಿಂಗಳದ್ದು ಹೇದು.

ಅಂಗಡಿದು ವಿಷಯ ಹೇಳಿತ್ತು…

ಬಂಗೇರನೂ ಸಂಗತಿ ಹೇಳಿತ್ತು. ಇದು ಕೋಡು ನಂಬ್ರ ಹಾಕಿ ಜೆನರ ಮೋಸ ಮಾಡಿ ವಸೂಲಿ ಮಾಡ್ತಾ ಇದ್ದು. ಇದರ ಅಂತೇ ಬಿಡ್ಳಾಗ…… – ಜೋರು ಜೋರು ಹಾರ್ಲೆ ಸುರುಮಾಡಿತ್ತು.

ಬಂಟ° ಪಳಾರನೆ ಒಂದ ಮಡಿಗಿತ್ತು ಬಂಗೇರನ ಕೆಪ್ಪಟಗೆ..

ಬಂಗೇರಂಗೆ ಬೆಮ್ಮರ ಹೋತು… ಬಾಯಿ ಮುಚ್ಚಿ ತಳಿಯದ್ದೆ ನಿಂದತ್ತು.

‘ಮಡುಗು ಪೈಸೆ’- ಹೇಳಿತ್ತು ಬಂಟ°. , ಬಂಗೇರ ನೂರು ರೂಪಾಯಿ ಮಡಿಗಿತ್ತು.

‘ನಡೆ’ – ಹೇಳಿತ್ತು ಬಂಟ°.

ಬಂಗೇರ° ತಲೆಲಿದ್ದ ಮುಂಡಾಸು ಬಾಯಿಗೆ ಮುಚ್ಚಿಗೊಂಡು ಇನ್ನೊಂದು ಕೈ ಕುಂಡಗೆ ಮಡಿಕ್ಕೊಂಡು ಅಲ್ಲಿಂದ ನಡಾತು. :(

ಅಷ್ಟಪ್ಪಗ ಸತ್ಯಣ್ಣಂಗೆ ಹೋಯೇಕಾದ ಕೆಂಪು ಬಸ್ಸು ಬಂತು.  ‘ಟಿಕೇಟಿಲ್ಲದ್ದ ಮನರಂಜನಾ ಕಾರ್ಯಕ್ರಮ ಹೇಳಿರೆ ಇದಿದಾ..’ ಹೇದು ಬಸ್ಸು ಹತ್ತಿದಾ° 😀

~~

7.

ಅಡಿಗೆ ಸತ್ಯಣ್ಣ° ಹೇಳಿರೆ ಹೋಳಿಗೆ.
ಹೋಳಿಗೆ ಹೇಳಿರೆ ಅಡಿಗೆ ಸತ್ಯಣ್ಣ°. 
ಹೀಂಗೆ ಒಂದು ಹೇಳಿರೆ ಮತ್ತೊಂದು ನೆಂಪು ಅಪ್ಪಲೇ ಬೇಕು. ಅಷ್ಟೂ ಪರಸ್ಪರ   ಭಾರೀ ಫೇಮಸ್..
ಹೀಂಗಿಪ್ಪಗ ಒಂದರಿ ಎಂತಾತು ಕೇಳಿರೆ…-

ಪಾಮುಗುಳಿ  ಮಾಪಜ್ಜ ಪೌರೋಹಿತ್ಯಕ್ಕೆ ಹೋಪದು  ನಿಂಗೊಗೆಲ್ಲಾ ಗೊಂತಿಕ್ಕು. ಜೆಂಬಾರದ ಊಟ ನಿತ್ಯಾ ಉಂಡು ಅವಕ್ಕೆ ಮನೆ ಊಟ ರೆಜ ಚಪ್ಪೆ ಹೇಳಿಯೇ ಅನುಸುವದು..

ಮನೇಲಿ ಒಂದರಿ ಹೋಳಿಗೆ ಮಾಡಿ ತಿನ್ನೆಕ್ಕು ಹೇದು ಆಶೆ ಆತು.
ಹೋಳಿಗೆ ಹೇಳಿರೆ ಸತ್ಯಣ್ಣ°.
ಸತ್ಯಣ್ಣ° ಹೇಳಿರೆ ಹೋಳಿಗೆ.
ಸತ್ಯಣ್ಣ ನ ಬರುಸಿದವು..
“ಇದಾ ಸತ್ಯಣ್ಣ, ಲಾಯಿಕಲಿ ಒಂದೈವತ್ತು  ಹೋಳಿಗೆ ಮಾಡಿ ಕೊಡು” ಹೇದವು ಮಾಪಜ್ಜ°..
ಮಾಪಜ್ಜ೦ಗೆ ಸಕ್ಕರೆ ಆಗ ಹೇದು ಸತ್ಯಣ್ಣ೦ಗೆ ಮಾತ್ರ ಅಲ್ಲ ಊರಿಂಗೆ ಗೊಂತಿದ್ದು..
ಹಾಂಗೆ ಹೋದಲ್ಲೆಲ್ಲಾ ಅವಕ್ಕೆ ಸಕ್ಕರೆ ಹಾಕದ್ದ ಚಾ/ ಕಾಪಿ, ಕೊಡುವದು, ಪಾಯಸ ಕಮ್ಮಿ ಬಡುಸುವದು ಎಲ್ಲಾ ಮಾಡುಗು ಅವರ ಶಿಷ್ಯ ವರ್ಗ..  , ಒಟ್ಟಿಲ್ಲಿ ಚೆಪ್ಪೆ.
ಮಾಪಜ್ಜ ಹೇದವು – “ಇದಾ ಸತ್ಯಣ್ಣ,   ಮೊನ್ನೆ ಕಿಟ್ಟಣ್ಣ ನಲ್ಲಿ ಮಾಡಿದ ಹಾಂಗೆ ಚಪ್ಪೆ ಹೋಳಿಗೆ ಹೇಳಿ ಚಪಾತಿ ಮಾಡಿ ಹಾಕೆಡ” –  ಹೇಳಿ ಜಾಗ್ರತೆ ಹೇಳಿದವು.
“ಆತು ಭಟ್ಟಮಾಂವ°” ಸತ್ಯಣ್ಣ° ಹೋಳಿಗೆ ಮಾಡ್ಳೆ ಮಗ್ನ ಆದ°.  …., ಹೋಳಿಗೆ ರೆಡಿ.
ಬೆಶಿ ಬೆಶಿ ಹೋಳಿಗೆ.
ಸತ್ಯಣ್ಣ° ಹೋಳಿಗೆ ಮಾಡಿ ಬಳುಸಿದ ಮಾಪಜ್ಜಂಗೆ –  ‘ಸಕ್ಕರೆ ಹಾಕದ್ದೆ..,  ಬೆಲ್ಲ ಹಾಕಿ ಕಾಯಿ ಹೋಳಿಗೆ’!.

ಹೆಂಗೆ ಸತ್ಯಣ್ಣನ ಸಮಯ ಪ್ರಜ್ಞೆ?!  😀

~~

8.

ರಮ್ಯಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗುದು ರಜೆ ಈಗ.

ಮನೇಲಿ ಅಂತೇ ಉದಾಸನ ಆವ್ತು..

ನಾಕು ಕುರ್ವೆ ಅಪ್ಪಷ್ಟೆಲ್ಲ ಸತ್ಯಣ್ಣನ ಹಿತ್ತಲಿಲಿ ಇಲ್ಲೆ.

ಅದಕ್ಕೆ ಅಭಿರುಚಿ ಇದ್ದು ಹೇದು ಸಂಗೀತ ಕ್ಲಾಸಿಂಗೆ ಸೇರ್ಸಿ ಆತು..

ಮಗಳು ಕ್ಲಾಸಿಲ್ಲಿ ಎಂತ ಮಾಡ್ತು ಹೇಳಿ ನೋಡ್ಳೆ ಒಂದಿನ ಸತ್ಯಣ್ಣನೂ ರಂಗಣ್ಣನೂ ಮೆಲ್ಲಂಗೆ ಹೋಗಿ ಕಿಟಿಕಿಲಿ ಬಗ್ಗಿ ನೋಡಿದವು..

ಅಲ್ಲಿ ರಮ್ಯಾ ಬಾಕಿ ಮಕ್ಕಳೊಟ್ಟಿಂಗೆ ಕೈಯ ಕಾಲಿಂಗೆ ತಟ್ಟಿಗೊಂಡಿತ್ತು. ಅದು ಲಾಯಕ ಶಬ್ದ ಕೇಳಿಗೊಂಡಿತ್ತಿದ್ದು.

ಅದರ ನೋಡಿ ಸತ್ಯಣ್ಣ° ರಂಗಣ್ಣಂಗೆ ಹೇಳಿದ° –  ರಂಗಣ್ಣೋ°., ನೀನು ವಡೆ ತಟ್ಟುವಾಗಳೂ ಹೀಂಗೇ ಶಬ್ದ ಬತ್ತಪ್ಪೋ ! 😀

~~~~~

 

ಓಯ್.. , ಎಸ್ಸೆಲ್ಸಿ ರಿಸಲ್ಟು ಬಪ್ಪಲಾತೋ.. ?    ರಮ್ಯನ ರಿಸಲ್ಟು ಎಂತಕ್ಕೋ??

 

 ~ ~~ 😀 😀 😀 ~ ~ ~

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಸತ್ಯಣ್ಣನ ಜೋಕುಗೊ ಹೀಂಗೇ ಮುಂದುವರಿಯಲಿ.

  [Reply]

  VA:F [1.9.22_1171]
  Rating: +1 (from 1 vote)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಲೇಖನ ಲಾಯ್ಕ ಬತ್ತಾ ಇದ್ದು ಭಾವಾ.ಹೋಯ್…ನವಗೊಂದು ಜೆಂಬಾರದ ಅಡಿಗ್ಗೆ ಸತ್ಯಣ್ನನ ಕಳುಸಲೆಡಿಗಾ?

  [Reply]

  VN:F [1.9.22_1171]
  Rating: +1 (from 1 vote)
 3. ಪೆರ್ವದಪ್ಪಚ್ಚಿ
  ಪೆರ್ವದಪ್ಪಚ್ಚಿ

  ಚೆನ್ನೈ ಭಾವನ ‘ಅಡಿಗೆ ಸತ್ಯಣ್ಣ’ ಜೋಕುಗೊ ಭಯಂಕರ ರವಸುತ್ತ ಇದ್ದು. ಚೆನ್ನೈ ಭಾವನ ಮಾರಾಪಿಂದ ಒಂದೊಂದೇ ಹೀಂಗೆ ಹೆರಬರಳಿ.

  ರಮ್ಯನ ರಿಸಲ್ಟು ಎಂತ ಆವ್ತೋ. ಕಂಜಿ ಹಾಕುಗೋ?! ಬೇಡ., ಪಾಸಾಗಲಿ ಹೇದು ಹಾರೈಸುತ್ತೆ.

  [Reply]

  VA:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘುಮುಳಿಯ

  ಸತ್ಯ ಹೇಳ್ತೆ,ಸತ್ಯಣ್ಣನ ಹಾಸ್ಯರಸಾಯನ ಭಾರೀ ರುಚಿ ಇದ್ದು.ಎಷ್ಟು ಉ೦ಡರೂ ಹಶು ತಣಿಯದ್ದಷ್ಟು !

  [Reply]

  VA:F [1.9.22_1171]
  Rating: +1 (from 1 vote)
 5. ರಾಮಚಂದ್ರ ಮಾವ°
  a ramachandra bhat

  ಅಡುಗೆ ಸತ್ಯಣ್ಣ ಕಲ್ಪನೆಯ ಜನ ಆಗಿದ್ದರೂ ಅವನ ದಿನಚರಿಲಿ ಅಪ್ಪ ಘಟನೆಗೊ ನಮ್ಮಲ್ಲೂ ಗೊಂತಿಲ್ಲದ್ದೆ ಆವುತ್ತು. ಅವುಗಳ ದಾಖಲಿಸುದಕ್ಕೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿಡಾಮಹೇಶಣ್ಣಹಳೆಮನೆ ಅಣ್ಣಅನುಶ್ರೀ ಬಂಡಾಡಿವಸಂತರಾಜ್ ಹಳೆಮನೆಚೆನ್ನಬೆಟ್ಟಣ್ಣಚೆನ್ನೈ ಬಾವ°ಕೆದೂರು ಡಾಕ್ಟ್ರುಬಾವ°ಗಣೇಶ ಮಾವ°ಸುಭಗನೀರ್ಕಜೆ ಮಹೇಶಮಾಲಕ್ಕ°ಪುಣಚ ಡಾಕ್ಟ್ರುಜಯಶ್ರೀ ನೀರಮೂಲೆಪುತ್ತೂರುಬಾವವೆಂಕಟ್ ಕೋಟೂರುvreddhiಸರ್ಪಮಲೆ ಮಾವ°ದೊಡ್ಡಭಾವಸಂಪಾದಕ°ಜಯಗೌರಿ ಅಕ್ಕ°ಚುಬ್ಬಣ್ಣಮುಳಿಯ ಭಾವಕಳಾಯಿ ಗೀತತ್ತೆಶಾ...ರೀಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ