Oppanna.com

ಅತೀಂದ್ರಿಯ ಶಕ್ತಿಯ ತೋರಿಸಿ ಕೊಟ್ಟ ಒಂದು ಪ್ರಸಂಗ

ಬರದೋರು :   ಗೋಪಾಲಣ್ಣ    on   04/12/2011    7 ಒಪ್ಪಂಗೊ

ಗೋಪಾಲಣ್ಣ

ಈ ನೈಜ ಘಟನೆಯ ಆನು ನೋಡಿದ್ದಿಲ್ಲೆ.ಕೇಳಿದ್ದು.
ಇದು ನಡೆದ್ದು ಆನು ಹುಟ್ಟುವಂದ ಸುಮಾರು ೮-೧೦ ವರ್ಷ ಮೊದಲೆ.ಹೇಳಿದರೆ ೧೯೫೫ರ ಸುಮಾರಿಂಗೆ ಆದಿಕ್ಕು.
ಎನ್ನ ಅಪ್ಪ [ ಶೇಡಿಗುಮ್ಮೆ ಕೃಷ್ಣ ಭಟ್ರು]ಭಾಗವತಿಕೆ ಮಾಡಿಕೊಂಡಿತ್ತಿದ್ದವು.ಅವರದ್ದು ಹಳೆ ಸಾಂಪ್ರದಾಯಿಕ ಶೈಲಿಯ ಭಾಗವತಿಕೆ.ಪದ್ಯವ ತುಂಬಾ ತಾರ ಸ್ಥಾಯಿಲಿ ಹೇಳುಗು.
ಅವು,ಗೆಳೆಯರು ಎಲ್ಲಾ ಸೇರಿ ಮನೆಯ ಹತ್ತರೆ[ಕುಂಬಳೆಲಿ] ದೇವಿ ಮಹಾತ್ಮೆ ಆಟ ಆಡಿದವು.ಆ ಆಟಲ್ಲಿ ಒಬ್ಬಂಗೆ ರಕ್ತೇಶ್ವರಿಯ ವೇಷಕ್ಕೆ ಸರಿಯಾಗಿ ತೆಂಗಿನ ಮಡಲಿನ ತಿರಿ ಕಟ್ಟಿ ,ದೈವದ ಹಾಂಗೆ ವೇಷ ಮಾಡಿಸಿದ್ದವಾಡ.
ವೇಷ ಕಟ್ಟಿ ಪ್ರವೇಶ ಆದಪ್ಪಾಗ ವೇಷಧಾರಿಗೆ ನಿಜವಾಗಿ ಆವೇಶವೇ ಬಂತಡ!ಅದ್ಭುತವಾದ ,ಭಯಾನಕ ದೃಶ್ಯ ! ವೇಷಧಾರಿ ದೊಂದಿಯ ತನ್ನ ಹೊಟ್ಟೆಗೆ ಹಿಡುಕ್ಕೊಂಡತ್ತಡ- ಮತ್ತೆ ಶೈತ್ಯೋಪಚಾರ,ಮದ್ದು ಮಾಡೆಕ್ಕಾಗಿ ಬಂತು.
ಇದೇಕೆ ಹೀಂಗಾತು?ಹೇಳಿ ವಿಚಾರ ಮಾಡಿದ ಎನ್ನ ಅಪ್ಪ ವೇಷಕ್ಕೆ ತಿರಿ ಕಟ್ಟಿ ಅಣಿ ಮಾಡಿ ಕೊಟ್ಟ ಮನುಷ್ಯನ ಹತ್ತರೆ ಕೇಳಿದವು.
ಆ ಜನ ಪರಿಚಿತನೇ-ನಿಜವಾಗಿ ಭೂತ ಕಟ್ಟುವ ಜನವೇ-ಹೆದರಿಕೊಂಡು ವಿನಯಲ್ಲಿ ಹೇಳಿತ್ತಡ-“ಆಟಕ್ಕೆ ವೇಷಕ್ಕಾಗಿ ತಿರಿ ಕಟ್ಟುವಾಗ ಒಂದೆರಡು ತಿರಿಯ ತಪ್ಪಿಸಿ ಮಡುಗೆಕಾತು-ಆನು ಸಮಾ ಮಡುಗಿ ಕಟ್ಟಿದೆ.[ಹೇಳಿದರೆ ಭೂತ ಕಟ್ಟುವಾಗ ಕಟ್ಟುವ ಹಾಂಗೆ]ಹಾಂಗಾಗಿ ಈ ರೀತಿ ಆತು…ಹೇಳಿ ಕಾಣುತ್ತು”.
ಎನ್ನ ಅಪ್ಪ ಆ ಜನದ ಕಾರ್ಯ ಶ್ರದ್ಧೆಯ,ದೇವಿಯ ಮಹಿಮೆಯ ಬಗ್ಗೆ ಹೇಳಿಕೊಂಡಿತ್ತಿದ್ದವು.ಆಗಾಗ ಈ ಘಟನೆಯ ನೆನಪು ಮಾಡಿಕೊಂಡಿತ್ತಿದ್ದವು.

ಅಪ್ಪಂಗೆ ದೇವಿಯ ಮೇಲೆ ನಂಬಿಕೆ ಇತ್ತು-ಗೊಂದಲ ಇತ್ತಿಲ್ಲೆ.ಅವು ಈಗ ಇಲ್ಲೆ.೧೯೮೨ರಲ್ಲಿ ಸ್ವರ್ಗಸ್ಥರಾಯಿದವು.
ಆದರೆ ನಾವು ಈಗಾಣವು-ನಮಗೆ ವಿಚಾರವಾದ,ನಾಸ್ತಿಕತೆ ಎಲ್ಲಾ ಕೇಳಿ ಗೊಂತು.ದೇವರು,ದೈವ ಭೂತ ಎಲ್ಲಾ ಒಂದು ಪರಿಧಿಯ ವರೆಗೆ ಮಾತ್ರ ನಂಬುದು-ಮತ್ತೆ ನಾವು ಸಯನ್ಸು ಹೇಳಿದ್ದರ ನಂಬುವವು.
ಎನಗೆ ಈಗಲೂ ಆಶ್ಚರ್ಯ ಆವುತ್ತು-ಇದು ಹೇಂಗಾತು ಹೇಳಿ.ತಿರಿಯ ಸರಿಯಾಗಿ ಕಟ್ಟಿದ್ದು ವೇಷಧಾರಿಗೆ ಗೊಂತಿಲ್ಲೆ,ಭಾಗವತರಾದ ಅಪ್ಪಂಗೆ ಗೊಂತಿಲ್ಲೆ.
ಆದರೆ ವೇಷಧಾರಿಗೆ ಆವೇಶ ಬಂದದು ಸತ್ಯ. ಅದು ಚೆಂಡೆಯ ಪೆಟ್ಟಿನ ಶಬ್ದಕ್ಕೊ?ಏರು ಪದ್ಯದ ಸ್ಥಾಯಿಯ ಕೇಳಿಯೊ? ಆ ಮನುಷ್ಯ ಪಾತ್ರಲ್ಲಿ ತಾದಾತ್ಮ್ಯ ಹೊಂದಿದ್ದಕ್ಕೊ?ಅಥವಾ ಭೂತ ಕಟ್ಟುವವು ತಿರಿಯ ಕ್ರಮಪ್ರಕಾರ ಕಟ್ಟಿ ಕೊಟ್ಟದಕ್ಕೊ?
ಅದರ ಕಂಡವು ಈಗಲೂ ಇದ್ದವು.ಆರಿಂಗೂ ಅದರ ಇದೇ ಕಾರಣಕ್ಕೆ ಹೀಂಗೆಆತು ಹೇಳಿ ಹೇಳುಲೆ ಎಡಿಯ.
ಇದು ಅತೀಂದ್ರಿಯವಾದ ಶಕ್ತಿ ಹೇಳಿ ತಿಳಿದ್ದೆ ಆನು.ಕೆಲವರು ಇದರ ಗೇಲಿ ಮಾಡುಗು ಹೇಳಿ ಆನು ಈ ವರೆಗೆ ಎಲ್ಲಿಯೂ ಇದರ ಬರೆದ್ದಿಲ್ಲೆ.
ದೇವಿ ಮಹಾತ್ಮೆಯ ಕತಾರೂಪಲ್ಲಿ ಒಪ್ಪಣ್ಣ.ಕಾಮ್ ಲಿ ಬರೆವಾಗ ಇದರ ಬರೆಯೆಕ್ಕು ಹೇಳಿ ಅನಿಸಿತ್ತು.
ಇದು ದೇವಿಯ ಮಹಿಮೆ ಹೇಳಿ ಆಸ್ತಿಕರು ಹೇಳುಗು.ಬರೇ ಆಕಸ್ಮಿಕ ಹೇಳಿ ಕೆಲವರು ತಳ್ಳಿ ಹಾಕುಗು.ಎಲ್ಲವೂ ಅವರವರ ತೀರ್ಮಾನಕ್ಕೆ ಬಿಟ್ಟದು.
ಆದರೆ ಈ ಘಟನೆ ನಮಗೆ ತಿಳಿಯದ್ದ ವಿಷಯ ಲೋಕಲ್ಲಿ ಇದ್ದು ಹೇಳಿ ತೋರಿಸಿಕೊಡುತ್ತು,ಯಾವುದನ್ನೂ ನಾವು ಸಸಾರ ಮಾಡುಲೆ ಎಡಿಯ ಹೇಳಿ ನಮ್ಮ ಎಚ್ಚರಿಸುತ್ತು ಹೇಳಿ ಎನ್ನ ಅಭಿಪ್ರಾಯ.

7 thoughts on “ಅತೀಂದ್ರಿಯ ಶಕ್ತಿಯ ತೋರಿಸಿ ಕೊಟ್ಟ ಒಂದು ಪ್ರಸಂಗ

  1. ಭೂತ ಕಟ್ಟಿಯಪ್ಪಗ ಆವೇಶ ಬಪ್ಪದು ಒಂದು ಅತೀಂದ್ರಿಯ ಶಕ್ತಿಯೇ ಸರಿ.ಭೂತ ಕಟ್ಟುವಾಗ ಮೈಮೇಲೆ ಬಪ್ಪದು ಹೇಳ್ತವನ್ನೆ ಅದು ಯಾವಾಗ ಬೇಕಾದರೂ ಬತ್ತಾ…? T.V. ಲಿ ಭೂತದ ಕೋಲವ ಸ್ಟುಡಿಯೋಲ್ಲಿ ರೆಕಾರ್ಡ್ ಮಾಡಿ ಪ್ರಸಾರ ಮಾಡಿತ್ತಿದ್ದವು . ಆಗ ಎನಗೆ ಸಂಶಯ ಬಂತು. ಅದು ಒಂದು ನಂಬಿಕೆ. ಹಾಂಗೆ ಸ್ಟುದಿಯೋದಲ್ಲಿ ರೆಕಾರ್ಡ್ ಮಾಡುದು ಸರಿಯಾ…..?ಭೂತ ನರ್ತನವ ಜಾನಪದ ನ್ರಿತ್ಯದ ಸಾಲಿಂಗೆ ಸೇರ್ಸುತ್ತವು . ಸರಿಯಾ…?ಆನು ಎನ್ನ ಸಂಶಯ ನಿವಾರಣೆಗೆ ಕೆಳ್ತಾ ಇಪ್ಪದು…….

  2. ಗೋಪಾಲಣ್ಣ,
    ನಿಂಗ ಗೊಂತಿಪ್ಪ ಸತ್ಯವ ಬರದ್ದದು ತುಂಬಾ ಖುಷಿ ಆತು… ಅತೀಂದ್ರಿಯ ಶಕ್ತಿ ಅಂದೂ ಇತ್ತು, ಇಂದೂ ಇದ್ದು , ಎಂದೆಂದೂ ಇರುತ್ತು… ನಾವು ಅದರ ಕಂಡುಗೊಲ್ಲೆಕ್ಕಾರೆ ನಮಗೆ ಜ್ಹಾನ ಬೇಕು ಅಷ್ಟೇ… ಗೇಲಿ ಮಾಡುಗೋ ಹೇಳಿ ಗ್ರೆಷಿ ನಾವು ಸತ್ಯವ ಹೇಳದ್ದೆ ಕೂರೆಕ್ಕಾದ ಯಾವುದೇ ಅವಶ್ಯಕತೆ ಇಲ್ಲೇ… ಗೇಲಿ ಮಾಡುವವಕ್ಕೆ ಆ ಜ್ಹಾನ ಇಲ್ಲೇ ಹೇಳಿ ಅವರ ಕ್ಷಮಿಸಿ ಬಿಟ್ಟರೆ ಆತು…

  3. ಸತ್ಯವಾದ ಮಾತು! “ಪ್ರತ್ಯಕ್ಷಮಲ್ಪಂ ಅನಲ್ಪಮಪ್ರತ್ಯಕ್ಷಮಸ್ತಿ”

  4. [ಯಾವುದನ್ನೂ ನಾವು ಸಸಾರ ಮಾಡುಲೆ ಎಡಿಯ ಹೇಳಿ ನಮ್ಮ ಎಚ್ಚರಿಸುತ್ತು ] – ಇದುವೇ ನಮ್ಮ ಒಪ್ಪ.

    1. “ಬೈಲ ದನಗಳೂ, ಹತ್ಟಿಂದ ಬಂದ ದನಗಳೂ ಎಲ್ಲ ಶುದ್ದ ತಳಿಯವೇ… ಒಂದರಿ ಪೆರ್ಚಿ ಹಾಂಗೆ ಕಂಡರೂ ಹೆದರೆಕ್ಕಾದ ಯಾವುದೇ ಅವಶ್ಯಕತೆ ಇಲ್ಲೇ… ಎಲ್ಲ ದನಗಳೂ ಒಟ್ಟು ಸೇರಿ ಗೋಮೂತ್ರ,ಗೋಮಯಗಳಿಂದ ಬೈಲಿನ ಶುದ್ದಗೊಳಿಸಿ, ಕಸವೆಂತಾರೂ ಇದ್ದರೆ ಅದನ್ನೂ ಮೇದು, ಅಮೃತಾನ್ನವ ಕೊಡೆಕ್ಕು…” ಹೇಳಿ ಮೊನ್ನೆ ಬೊಚ ಭಾವಂಗೆ ಅಶರೀರವಾಣಿ ಕೇಳಿದ್ದಡ…

  5. Devi mahatmeli mahishasurana, chanda mundara kondappaga kumbala kaayi odavadu avesha kammi madle heli kanuttu

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×