ಚೆನ್ನೈ ಭಾವನ ರಸ ಪ್ರಶ್ನೆ – ೨

ರಸ ಪ್ರಶ್ನೆ ಹೇಳಿರೇ ಒಂದು ಸಣ್ಣಕೆ ಕುಶಾಲು ಅಲ್ಲದೋ. ಕೆಲವರಿಂಗೆ ರಸವೂ ಕೆಲವರಿಂಗೆ ನೀರಸವೂ ಅಪ್ಪು. ಅದರ ಎಸರು ಪ್ರಶ್ನೆ ಹೇಳಿ ನಮ್ಮ ಬೈಲಿಲಿ ದೆನಿಗೊಳ್ಳೆಕು ಹೇಳಿ ಅದ್ವೈತ ಕೀಟ ಮಾವ ಕಳುದ ಸರ್ತಿ ಅಪೀಲು ಹಾಕಿತ್ತವಿದಾ. ಎಸರು ಪ್ರಶ್ನೆ ಹೇಳಿಯಪ್ಪಗ ಪಕ್ಕನೆ ತಲಗೆ ಹೋಗ ಹೇದು ಒಂದು ಆಕ್ಷೇಪವೂ ಎಡೆಲಿ ಇದ್ದ ಕಾರಣ ಎಸರು ಪ್ರಶ್ನೆ ಯಾನೆ ರಸ ಪ್ರಶ್ನೆ ಹೇಳಿ ಎಡೆಕ್ಕಾಲ ತೀರ್ಮಾನ ಹೇಳುವನೋ ಇದರ ಈ ಸರ್ತಿಯಂಗೆ!.

ಈಗ ಸಂಗತಿ ಎಂತ ಹೇಳಿರೆ, ಕೆಳ ಒಂದು ವಾಕ್ಯ ಇದ್ದು ನೋಡಿ. ಅದರ ಟೈಪು ಮಾಡುವಾಗ ಕರೆಂಟು ಹೋಗಿ ಸೇವ್ ಅಪ್ಪಗ ತಟಪಟ ಆಗಿ ಚದುರಿ ಹೋತು. ನಿಂಗೊ ಒಂದರಿ ಅದರ ಸರಿಮಾಡಿ ಹೇಳಿಕ್ಕುತ್ತಿರೋ?!

ಆತೋ ಹಿಡುದು ಕೊಡದ್ದೇ ಹೋದರೆ ಎನ್ನ ಆನು ತಿರುಗುಸಲಕ್ಕು ಶುದ್ದಿ ಬೈಲಿಂಗೆ ಒಪ್ಪ ಕೆಮಿ ಓದಿಕ್ಕಿ ಬಂದು”.

ಬೇಗ ಬರದು ತಿಳಿಸಿಕ್ಕಿ ಆತೋ.  ನಿಂಗಳ ಕಾಯ್ತಾ ಇದ್ದವು ಗುರಿಕ್ಕಾರ್ರು ಸಂಮಾನಕ್ಕೆ.

ಚೆನ್ನೈ ಬಾವ°

   

You may also like...

36 Responses

 1. ದೀಪಿಕಾ says:

  ಆತೋ ತಿರುಗುಸಲಕ್ಕು ಹಿಡುದು ಕೆಮಿ ಎನ್ನ ಹೋದರೆ ಕೊಡದ್ದೇ ಒಪ್ಪ ಓದಿಕ್ಕಿ ಶುದ್ದಿ ಬಂದು ಬೈಲಿಂಗೆ ಆನು..
  ಇದರ ಯಾವ ಹೊಡೆ೦ದ ಓದುದು ಹೇಳಿ ಆನು ಹೇಳೆ 😉

  • ಚೆನ್ನೈ ಭಾವ says:

   ನಿಂಗೊ ಹೇಳಿದ್ದು ಗುರಿಕ್ಕಾರ್ರಿ೦ಗೆ ಗೊಂತಾತು. ಎರಡು ಸೌಟು ಸಾಬಕ್ಕಿ ಪಾಚ ನಿಂಗೊಗೇ.

 2. Sumana Bhat Sankahithlu says:

  ಎನಗೆ ಗೊಂತಾತು, ಇಲ್ಲಿ ಬರವಲಕ್ಕಾ?

 3. Sumana Bhat Sankahithlu says:

  ಉತ್ತರ ಎನಗೆ ಗೊಂತಾತು … ಇಲ್ಲಿ ಅದರ ಬರವಲಕ್ಕಾ?

  • ಚೆನ್ನೈ ಭಾವ says:

   ನಿಂಗೊ ಇಷ್ಟು ಹೇಳಿಯಪ್ಪಗ ಎಂಗೊಗೂ ಗೊಂತಾತಿದಾ. ಇಲ್ಲಿ ಬರೆಯದ್ರೂ ಅಡ್ಡಿ ಇಲ್ಲೆ., ಆಚಿಗೆ ಬರೆಯದ್ದೆ ಹೋಗದ್ದಾಂಗೆ ಇದು ನೆಂಪು ಬೇಕಿದಾ.

 4. Sumana Bhat Sankahithlu says:

  ಅಲ್ಲ ಅದು ತಪ್ಪು ಆಗಿ ೨ ಸರ್ತಿ ಕಳ್ಸಿ ಹೋದ್ದು, ಅದರ ಉದ್ದುಲೆ ಹೇಂಗೆ ಹೇಳಿ ಗೊಂತಿಲ್ಲೆ.
  ನಿಂಗೊ ಆಚಿಗೆ ಬರೆಯದ್ದೆ ಹೋಗದ್ದಾಂಗೆ ಇದು ನೆಂಪು ಬೇಕಿದಾ ಹೇಳಿದ್ದು ಎಂತರ ಹೇಳಿ ಅರ್ತ ಆತಿಲ್ಲೆನ್ನೆ? ಕ್ಷಮಿಸೆಕ್ಕು.

  • ಚೆನ್ನೈ ಭಾವ says:

   ಎಂತಿಲ್ಲೆ ಸುಮನಕ್ಕ. ಇದರ ಉತ್ತರ ಇಲ್ಲಿ ಹೇಳದ್ರೂ ಅಡ್ಡಿ ಇಲ್ಲೇ. ಬಾಕಿ ಸುದ್ದಿ ಓದಿಕ್ಕಿ ಒಪ್ಪ ಕೊಡದ್ದೆ ಹೋಪಗ ಈ ಉತ್ತರ ನೆಂಪಿಲ್ಲಿ ನಿಂಗೊಗೆ ನಿಂಗಳೆ ಪ್ರಯೋಗ ಮಾಡ್ಳೆ ನೆಂಪು ಇರಲಿ ಹೇಳಿ. ಅಷ್ಟೇ !!

 5. ತೆಕ್ಕುಂಜ ಕುಮಾರ says:

  ಒಂದು ಶುದ್ದಿಯನ್ನಾರು ನೇರ್ಪಕ್ಕೆ ಹೇಳ್ಳೆ ಅರಡಿಯದೋ ನಿಂಗೊಗೆ..ಹೇಂ.. ನಿಂಗಳ ಕೆಮಿ ಹಿಡುದು ನುಳ್ಳಿ ನುಳ್ಳಿ , ಕಿಳ್ಳಿ ಕಿಳ್ಳಿ ಮಾಡೆಕ್ಕು ಹೇಳಿ ಆನು ಗ್ರೇಶಿರೂ ಊಹೂಂ..ಬೇಡ.
  ಭಾವಯ್ಯ, ನಿಂಗಳ ಕೆಣಿ ಲಾಯಿಕ್ಕಿದ್ದು ಹೇಳಿ ಒಂದು ಒಪ್ಪ ಕೊಡದ್ದೆ ಎಡಿಯ.

  • ಚೆನ್ನೈ ಭಾವ says:

   ಇದು ಲಾಯಕ್ಕಾಯ್ದೀಗ ನಿಂಗೊ ಒಪ್ಪ ಮಡುಗಿದ್ದು. ಧನ್ಯವಾದ ಕುಮಾರಣ್ಣ. ಸಲಹೆ ಸಹಿತ ಪ್ರೋತ್ಸಾಹಿಸುತ್ತಾ ಇರಿ.

 6. Suvarnini Konale says:

  🙂 ಒಪ್ಪ ಶುದ್ದಿ ಬರದಪ್ಪಗ ಒಪ್ಪಕೊಡದ್ದೆ ಹೋಪಲೆ ಆರಿಂಗೂ ಮನಸ್ಸಾಗ 🙂

  • ಚೆನ್ನೈ ಭಾವ says:

   ಅಂಬಗ ಒಪ್ಪ ಕೊಡದ್ದೇ ಇಪ್ಪ ಶುದ್ದಿಗೊ ?!! ….. ನಾವೇ ಅರ್ಥ ಮಾಡಿಕ್ಕೊಳ್ಳೆಕ್ಕಾಯ್ಕು.!!
   ಅಕ್ಕು ಅಕ್ಕು…. ಅರ್ಥ ಆತು.

 7. ಶರ್ಮಪ್ಪಚ್ಚಿ says:

  ಚೆನ್ನೈ ಭಾವನ ಹೊಸ ಲೇಖನ “ಒಪ್ಪ ಕೊಡದ್ದ ಬೆಪ್ಪ” ನಿರೀಕ್ಷೆ ಮಾಡ್ಲಕ್ಕಾ?

 8. Sumana Bhat Sankahithlu says:

  ಸರಿ ಸರಿ ಈಗ ಗೊಂತಾತು ….
  ಅದಪ್ಪು ಓದಿದ ಶುದ್ಧಿಗೆ ಒಪ್ಪ ಕೊಡೆಕು ಅಲ್ಲದಾ?

 9. ಚೆನ್ನೈ ಭಾವ°,

  ನಿಂಗಳ ರಸಪ್ರಶ್ನೆ ಲಾಯ್ಕಾಯಿದು. ಈ ಕಾರ್ಯಕ್ರಮ ನಿಂಗೋ ಗುರಿಕ್ಕಾರ್ರ ಕೈಲಿ ಮಾಡ್ಸುದು ಹೇಳಿ ಹೇಳಿದಿ.
  ನಿಂಗೊ ಬರದ್ದದು ಆರಿಂಗೆ ಇಪ್ಪದು?
  ಅದರ ಓದಿದ ಪ್ರತಿಯೊಬ್ಬಂಗೂ ಇಪ್ಪದಾ… ಅಲ್ಲ, ಬರದ ನಿಂಗೋಗೆ ಇಪ್ಪದಾ? 😉

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *