ಡಿಮ್ – ಡಿಪ್ !!!!

ಹೀಂಗೆ ಕೂದುಕೊಂಡಿಪ್ಪಗ ಒಂದು ಆಲೋಚನೆ ಹೊಳತ್ತು.. ಬೈಲಿಂಗೆ ಹಾಕ್ವ ಹೇಳಿ ಕಂಡತ್ತು…
ಇರುಳು ವಾಹನ ಚಲಾಯಿಸುವಾಗ, ಎದುರಿಂದ ವಾಹನ ಬಂದರೂ ಹೆಚ್ಚಿನವು ಹೆಡ್‍ಲೈಟ್‍ನ ಡಿಮ್ ಮಾಡ್ತವಿಲ್ಲೆ… ಇದರಿಂದ ಎದುರಿಂದ ಡ್ರೈವ್ ಮಾಡಿಕೊಂಡಿತ್ತವನ ಕಣ್ಣಿಂಗೆ ನಮ್ಮ ಹೆಡ್‍ಲೈಟ್ ಕುಕ್ಕಿ, ಅವಂಗೆ ವಾಹನದ ಮೇಲೆ ಹಿಡಿತ ತಪ್ಪಿದರೆ ಅದೇ ಅಪಘಾತಕ್ಕೆ ಕಾರಣ ಆವ್ತು. ಇರುಳು ಅಪ್ಪ ಅಪಘಾತಂಗಳಲ್ಲಿ ವರಕ್ಕು ಬಪ್ಪ ತೊಂದರೆಯ ನಂತರದ ಸ್ಥಾನಲ್ಲಿ ಈ ಲೈಟ್‍ನ ಕಾರಣವೇ ಪ್ರಮುಖವಾಗಿ ಕಾಣ್ತು. ಇದಕ್ಕೆ ಪರಿಹಾರವಾಗಿ ಎಂತಕೆ ಹೆಡ್‍ಲೈಟ್ ಸೆನ್ಸರ್‌ನ ಅಳವಡಿಸುಲಾಗ?!! ಎದುರಿಂದ ಈ ಸೆನ್ಸರ್‌ನ ಮೇಲೆ ಲೈಟ್ ಬಿದ್ದಪ್ಪಗ ತನ್ನಿಂತಾನೇ ನಮ್ಮ ವಾಹನ ಹೆಡ್‍ಲೈಟ್ ಡಿಮ್ ಅಪ್ಪ ಹಾಂಗೆ ಮತ್ತೆ ಪುನಃ ಸೆನ್ಸರ್‌ನ ಮೇಲೆ ಲೈಟ್ ಬೀಳುದು ನಿಂದ ಕೂಡಲೇ ಡಿಪ್ ಅಪ್ಪ ಹಾಂಗೆ ವ್ಯವಸ್ಥೆ ಮಾಡಿದರೆ, ಡ್ರೈವ್ ಮಾಡುವವಂಗೂ ಸರ್ತಿ ಸರ್ತಿ ಡಿಮ್-ಡಿಪ್ ಮಾಡುವ ಕೆಲಸವೂ ಇರ್ತಿಲ್ಲೆ.. ಡಿಮ್-ಡಿಪ್ ಮಾಡುಲೆ ಉದಾಸಿನ ಇಪ್ಪ ಬೇಜವಾಬ್ದಾರಿಯುತ ಚಾಲಕರಿಂದಾಗಿ ಅಪ್ಪ ಅಪಘಾತಂಗಳ ಸಂಖ್ಯೆಯೂ ಕಡಮ್ಮೆ ಅಕ್ಕು… ಅಲ್ದ??!!
ಎನಗೆ ಗೊಂತಿಪ್ಪ ಪ್ರಕಾರ ಭಾರತಲ್ಲಿ ಹೀಂಗಿಪ್ಪ ವ್ಯವಸ್ಥೆ ಇಲ್ಲೆ… ಇದ್ದರೂ ಬಹುಷಃ ಎಲ್ಯೋ ತುಂಬಾ ದುಬಾರಿ ಕಾರುಗಳಲ್ಲಿ ಇದ್ದೋ ಏನೋ.. ಆದರೆ ಬಹುತೇಕ ಮಧ್ಯಮ ವರ್ಗದ ಕಾರುಗಳಲ್ಲಿ ಇಲ್ಲೆ.. ಬೈಲಿಲಿಪ್ಪವರಲ್ಲಿ ಆರಿಂಗಾದರೂ ಮಾಡ್ಲೆ ಸಾಧ್ಯ ಆವ್ತಾದರೆ, ಅಥವಾ ನಿಂಗಳ ಗೆಳೆಯರಾದರೂ ಮಾಡುವವರಿದ್ದರೆ ಅವಕ್ಕೆ ಹೇಳಿ ಹೀಂಗಿಪ್ಪ ಒಂದು ಸೆನ್ಸರ್ ಮಾಡುವ ಮತ್ತು ಕಾರುಗಳಲ್ಲಿ ಅಳವಡಿಸುವ ಪ್ರಯತ್ನ ಮಾಡ್ಲಕ್ಕು….. ಎಂಜಿನಿಯರಿಂಗ್ ಕಲಿತ್ತಾ ಇಪ್ಪವಕ್ಕುದೇ ಇದರ ಮಾಡ್ಲೆ ಸಾಧ್ಯ ಇದ್ದು ಹೇಳಿ ಎನಗೆ ಕಾಣ್ತು.. ಬಹುಷಃ ಇದು ಅವಕ್ಕೊಂದು ಪ್ರಾಜೆಕ್ಟ್‍ನ ವಿಷಯವಾಗಿಯೂ ತೊಕೊಂಬಲಕ್ಕೋ ಏನೋ!!
ನಿಂಗ ಎಂತ ಹೇಳ್ತಿ???!!

ಅಕ್ಷರ°

   

You may also like...

33 Responses

  1. ಅಪ್ಪನ್ನೇ…
    ಸರಿ ಅಣ್ಣ ಹೇಳಿದ್ದು.

  2. ಯಲ್ಲಾಪುರ ಪ್ರಶಾಂತ says:

    ಸರಿಯಾದ ವಿಷಯ ಹೌದು .. ವಾಹನಗಳು ಒಂದೊಂದೂ ಒಂದೊಂದು ಬಗೆಯ ಹಾಗೇ ಎತ್ತರ ತಗ್ಗ ಿರ್ತು , ಹಾಂಗಾಗಿ ಇದು ಒಂದು ಸವಾಲಿನ ವಿಷಯವೇ ಹೌದು..>

  3. ಬೋದಾಳ says:

    ಯೆಬ್ಬೆ …… ಇದಕ್ಕೆ ಇಂಜಿನೀರುಗೋ ಎಂಥಕ್ಕೆ ? ಎನ್ನ ಹಾಂಗಿಪ್ಪ ಬೋದಾಳನೂ ಪರಿಹಾರ ಕಂಡು ಹಿಡಿಗು. ಹಳತ್ತು ಬೆಟ್ರಿ ಗಂಟೆಯ ಸೆನ್ಸಾರ್ಇನ ತಂದು ಸಿಕ್ಕುಸಿರಾತು. irulu ಸಂಗೀತ ಬಾರ್ಸದ್ದ haange ಮಾಡುವ ವಸ್ತು ಅದು ಎಲ್ಲಾ kelasa madtu.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *