Oppanna.com

ಡಿಮ್ – ಡಿಪ್ !!!!

ಬರದೋರು :   ಅಕ್ಷರ°    on   28/11/2011    33 ಒಪ್ಪಂಗೊ

ಅಕ್ಷರ°
ಹೀಂಗೆ ಕೂದುಕೊಂಡಿಪ್ಪಗ ಒಂದು ಆಲೋಚನೆ ಹೊಳತ್ತು.. ಬೈಲಿಂಗೆ ಹಾಕ್ವ ಹೇಳಿ ಕಂಡತ್ತು…
ಇರುಳು ವಾಹನ ಚಲಾಯಿಸುವಾಗ, ಎದುರಿಂದ ವಾಹನ ಬಂದರೂ ಹೆಚ್ಚಿನವು ಹೆಡ್‍ಲೈಟ್‍ನ ಡಿಮ್ ಮಾಡ್ತವಿಲ್ಲೆ… ಇದರಿಂದ ಎದುರಿಂದ ಡ್ರೈವ್ ಮಾಡಿಕೊಂಡಿತ್ತವನ ಕಣ್ಣಿಂಗೆ ನಮ್ಮ ಹೆಡ್‍ಲೈಟ್ ಕುಕ್ಕಿ, ಅವಂಗೆ ವಾಹನದ ಮೇಲೆ ಹಿಡಿತ ತಪ್ಪಿದರೆ ಅದೇ ಅಪಘಾತಕ್ಕೆ ಕಾರಣ ಆವ್ತು. ಇರುಳು ಅಪ್ಪ ಅಪಘಾತಂಗಳಲ್ಲಿ ವರಕ್ಕು ಬಪ್ಪ ತೊಂದರೆಯ ನಂತರದ ಸ್ಥಾನಲ್ಲಿ ಈ ಲೈಟ್‍ನ ಕಾರಣವೇ ಪ್ರಮುಖವಾಗಿ ಕಾಣ್ತು. ಇದಕ್ಕೆ ಪರಿಹಾರವಾಗಿ ಎಂತಕೆ ಹೆಡ್‍ಲೈಟ್ ಸೆನ್ಸರ್‌ನ ಅಳವಡಿಸುಲಾಗ?!! ಎದುರಿಂದ ಈ ಸೆನ್ಸರ್‌ನ ಮೇಲೆ ಲೈಟ್ ಬಿದ್ದಪ್ಪಗ ತನ್ನಿಂತಾನೇ ನಮ್ಮ ವಾಹನ ಹೆಡ್‍ಲೈಟ್ ಡಿಮ್ ಅಪ್ಪ ಹಾಂಗೆ ಮತ್ತೆ ಪುನಃ ಸೆನ್ಸರ್‌ನ ಮೇಲೆ ಲೈಟ್ ಬೀಳುದು ನಿಂದ ಕೂಡಲೇ ಡಿಪ್ ಅಪ್ಪ ಹಾಂಗೆ ವ್ಯವಸ್ಥೆ ಮಾಡಿದರೆ, ಡ್ರೈವ್ ಮಾಡುವವಂಗೂ ಸರ್ತಿ ಸರ್ತಿ ಡಿಮ್-ಡಿಪ್ ಮಾಡುವ ಕೆಲಸವೂ ಇರ್ತಿಲ್ಲೆ.. ಡಿಮ್-ಡಿಪ್ ಮಾಡುಲೆ ಉದಾಸಿನ ಇಪ್ಪ ಬೇಜವಾಬ್ದಾರಿಯುತ ಚಾಲಕರಿಂದಾಗಿ ಅಪ್ಪ ಅಪಘಾತಂಗಳ ಸಂಖ್ಯೆಯೂ ಕಡಮ್ಮೆ ಅಕ್ಕು… ಅಲ್ದ??!!
ಎನಗೆ ಗೊಂತಿಪ್ಪ ಪ್ರಕಾರ ಭಾರತಲ್ಲಿ ಹೀಂಗಿಪ್ಪ ವ್ಯವಸ್ಥೆ ಇಲ್ಲೆ… ಇದ್ದರೂ ಬಹುಷಃ ಎಲ್ಯೋ ತುಂಬಾ ದುಬಾರಿ ಕಾರುಗಳಲ್ಲಿ ಇದ್ದೋ ಏನೋ.. ಆದರೆ ಬಹುತೇಕ ಮಧ್ಯಮ ವರ್ಗದ ಕಾರುಗಳಲ್ಲಿ ಇಲ್ಲೆ.. ಬೈಲಿಲಿಪ್ಪವರಲ್ಲಿ ಆರಿಂಗಾದರೂ ಮಾಡ್ಲೆ ಸಾಧ್ಯ ಆವ್ತಾದರೆ, ಅಥವಾ ನಿಂಗಳ ಗೆಳೆಯರಾದರೂ ಮಾಡುವವರಿದ್ದರೆ ಅವಕ್ಕೆ ಹೇಳಿ ಹೀಂಗಿಪ್ಪ ಒಂದು ಸೆನ್ಸರ್ ಮಾಡುವ ಮತ್ತು ಕಾರುಗಳಲ್ಲಿ ಅಳವಡಿಸುವ ಪ್ರಯತ್ನ ಮಾಡ್ಲಕ್ಕು….. ಎಂಜಿನಿಯರಿಂಗ್ ಕಲಿತ್ತಾ ಇಪ್ಪವಕ್ಕುದೇ ಇದರ ಮಾಡ್ಲೆ ಸಾಧ್ಯ ಇದ್ದು ಹೇಳಿ ಎನಗೆ ಕಾಣ್ತು.. ಬಹುಷಃ ಇದು ಅವಕ್ಕೊಂದು ಪ್ರಾಜೆಕ್ಟ್‍ನ ವಿಷಯವಾಗಿಯೂ ತೊಕೊಂಬಲಕ್ಕೋ ಏನೋ!!
ನಿಂಗ ಎಂತ ಹೇಳ್ತಿ???!!

33 thoughts on “ಡಿಮ್ – ಡಿಪ್ !!!!

  1. ಯೆಬ್ಬೆ …… ಇದಕ್ಕೆ ಇಂಜಿನೀರುಗೋ ಎಂಥಕ್ಕೆ ? ಎನ್ನ ಹಾಂಗಿಪ್ಪ ಬೋದಾಳನೂ ಪರಿಹಾರ ಕಂಡು ಹಿಡಿಗು. ಹಳತ್ತು ಬೆಟ್ರಿ ಗಂಟೆಯ ಸೆನ್ಸಾರ್ಇನ ತಂದು ಸಿಕ್ಕುಸಿರಾತು. irulu ಸಂಗೀತ ಬಾರ್ಸದ್ದ haange ಮಾಡುವ ವಸ್ತು ಅದು ಎಲ್ಲಾ kelasa madtu.

  2. ಸರಿಯಾದ ವಿಷಯ ಹೌದು .. ವಾಹನಗಳು ಒಂದೊಂದೂ ಒಂದೊಂದು ಬಗೆಯ ಹಾಗೇ ಎತ್ತರ ತಗ್ಗ ಿರ್ತು , ಹಾಂಗಾಗಿ ಇದು ಒಂದು ಸವಾಲಿನ ವಿಷಯವೇ ಹೌದು..>

  3. ಅಕ್ಷರ ಸಹ ನಿಜ ಅಕ್ಷರ ನ ಮಾತುಗೊ…ಎಲ್ಲೋರು(ಮುಖ್ಯವಾಗಿ ಇ೦ಜಿನಿಯರುಗೊ) ಆಲೋಚನೆ ಮಾಡೆಕ್ಕಾದ ಸ೦ಗತಿ

  4. ಪ್ರತಿದಿನ ಆನೂ ಈ ಸಮಸ್ಯೆಯ ಎದುರುಸುತ್ತಾ ಇದ್ದೆ. ಆದರೆ ಅಕ್ಷರನ ಯೋಚನೆ ಬಯಿ೦ದಿಲ್ಲೆ !
    ವಾಹನದ ಸ್ಟೇರಿ೦ಗು ತಿರುಗುಸುಲೆ ಕಲ್ತರೆ ಸಾಲ,ಸಹ ಜೀವನದ ಅನುಭವವೂ ಬೇಕು,ಮಾರ್ಗಲ್ಲಿ.ಅಲ್ಲದೋ?

  5. ಅಕ್ಷರ ಪ್ರಸ್ತಾಪ ಮಾಡಿದ ವಿಷಯ ನಿಜಕ್ಕೂ ಉತ್ತಮವಾಗಿದ್ದು.
    ಇದು ಸ್ವತ: ಎನ್ನ ಅನುಭವವೂ ಅಪ್ಪು.
    ನಾವು ಸಣ್ಣಾಗಿಪ್ಪಗಾಣ ಕಾಲಲ್ಲಿ ವಾಹನದ ಹೆಡ್ ಲೈಟ್ ಗಳ ಮೇಗಾಣ ಅರ್ಧಭಾಗಕ್ಕೆ ಮಸಿ ಉದ್ದಿ ಕಪ್ಪುಮಾಡಿ ಈ ರಗಳೆಯ ತಪ್ಪುಸಿಂಡು ಇದ್ದಿದ್ದವು. ಈಗಾಣವಕ್ಕೆ ಇದು ಏಕೆ ಅರ್ಥ ಆವುತ್ತಿಲ್ಲೆ ಹೇದು ಎನ ಅರಡಿತ್ತಿಲ್ಲೆಪ್ಪ.

    1. ಅಟೋಮೆಟಿಕ್ ಡಿಮ್ – ಡಿಪ್ ಅಪ್ಪ ಹಾಂಗಿಪ್ಪ ವ್ಯವಸ್ಥೆ ಬೇಗ ಬಂದರೆ ಒೞೆದು…

    2. ಸುಭಗಣ್ಣ ಹೇಳಿದ್ದು ಪ್ರಾಯೋಗಿಕ ವಿಷಯ.
      ಮೊದಲು ಚ೦ದ್ರನಲ್ಲಿಗೆ ಹೋಪಲೆ ಬೇಕಾಗಿ ಅಮೇರಿಕದ ವಿಜ್ನ್ಹಾನಿಗೊ ತಯಾರಿ ಮಾಡಿ೦ಡಿಪ್ಪಗ ಒ೦ದು ತೊ೦ದರೆ ಬ೦ತಾಡ. ಅಲ್ಲಿ ಭೂಮಿಲಿ ಇಪ್ಪ ಹಾ೦ಗೆ ಗುರುತ್ವಾಕರ್ಷಣೆ ಇಲ್ಲದ್ದ ಕಾರಣ ನಮ್ಮ ಪೆನ್ನುಗಳ ಉಪಯೋಗಿಸಿ ಬರವಲೆ ಎಡಿಯ ಅಲ್ಲದೊ? ಅದಕ್ಕೆ ಎ೦ತ ಮಾಡುವದು ಹೇಳಿ ಇರುಳು ಹಗಲು ತಲೆಬೆಶಿ ಮಾಡಿ ಕೋಟಿಗಟ್ಳೆ ಖರ್ಚಿ ಮಾಡಿ ಗುರುತ್ವಾಕರ್ಷಣೆ ಇಲ್ಲದ್ದಲ್ಲಿಯುದೆ ಬರವಲೆ ಆವ್ತ ಪೆನ್ನು ಕ೦ಡುಹಿಡುದವಾಡ.
      ನಮ್ಮ ಡಾಮಹೇಶಣ್ಣ ಇತ್ತಿದ್ದರೆ, ‘ಒ೦ದು ಪೆನ್ಸಿಲು ಉಪಯೋಗಿಸಿರೆ ಸಾಲದೋ!!??” ಹೇಳಿ ಹೇಳಿಕೊಡ್ತಿತವಾಯ್ಕು. ಅಲ್ಲದೋ ಸುಭಗ ಭಾವಾ..

  6. ಓಯ್ ..ಇದಾರು ! ಕಾಣೆ ಆದವರ ಲಿಸ್ಟಿಲಿ ಇದ್ದವು ಒಬ್ಬೊಬನೆ ಬೈಲಿಂಗೆ ಇಳಿವದು ಒಳ್ಳೆ ಸಂಗತಿ.
    ೧) ಒಂದು ವಿಷಯ ಇಲ್ಲಿ ಹೇಳೆಕ್ಕಾವುತ್ತು. ಹೆಡ್ ಲೈಟುಗೊಕ್ಕೆ ಇಂತಿಷ್ಟೆ ವ್ಯಾಟಿನ ಬಲ್ಬು ಹಾಕೆಕ್ಕು ಹೇಳಿ ಕಾನೂನು ಇದ್ದು. ಟ್ರಕ್ಕಿನವು ಇದರ ಪಾಲುಸುತ್ತವಿಲ್ಲೆ. ಡಿಮ್ – ಡಿಪ್ ಮಾಡ್ತ ಕ್ರಮ ಇಲ್ಲೆ. ದೊಡ್ಡ ರೇಟಿಂಗಿನ ಬಲ್ಬು ಹಾಕಿ ಎದುರಂದ ಬಪ್ಪ ಸಣ್ಣ ವಾಹನಂಗೊಕ್ಕೆ ಉಪದ್ರ ಮಾಡ್ತವು.
    ೨) ಈ ವಿಷಯಲ್ಲಿ ೨೦೦೧ ರಲ್ಲಿ Ministry of surface Transport ನವು – “Auto Dipper” device ಹಾಕುವ ಕಾನೂನು ತಪ್ಪ ಯೋಚನೆ ಮಡಿತ್ತಿದ್ದವು. ಎರಡು ಕಂಪೆನಿಯವು ಹೀಂಗಿಪ್ಪ Device ( Electronic controler) propose ಮಾಡಿತ್ತಿದ್ದವು.ಮಿನಿಸ್ತ್ರಿಯವು,ವಾಹನ ತಯಾರಕರು, Device ತಯಾರಿಸುವವು ಸೇರಿ ಇದರ ಕೂಲಂಕುಷವಾಗಿ ಪರೀಕ್ಷೆ(Road trials) ಮಾಡಿದ್ದು. ಈ ಕೆಲಸಲ್ಲಿ ಆನು ಭಾಗಿಯಾಗಿತ್ತಿದ್ದೆ. (VRDE – Vehicle Reasearch & Development Establishment, Ahmadnagar).ಇದು ದ್ರೈವರ್ ಗೊಕ್ಕೆ ಸಹಕಾರಿ ಅಪ್ಪದರಂದ ಹೆಚ್ಚು ಅಪಾಯಕಾರಿ ಹೇಳಿಯೂ ಪರೀಕ್ಷೆಲಿ ಕಂಡು ಬಯಿಂದು. ಹಾಂಗಾಗಿ, ಇದು ಅಳವಡಿಕೆಗೆ ಬಯಿಂದಿಲೆ. – ಬೇರೆ ಎಲ್ಲಿಯೂ Auto Dipper ವೆವಸ್ತೆ ಇಲ್ಲೆ.
    ೩)ಈಗಾಣ ಕೆಲವು ದೊಡ್ಡ ಕಾರುಗಳಲ್ಲಿ Auto (Head Light Intensity) Controler ಅಳವಡಿಕೆ ಮಾಡ್ತವು. ಅದರಲ್ಲಿಪ್ಪ ಲೈಟುಗೊ LED/Neon ತಂತ್ರಜ್ಞಾನದ್ದು. ಇದರಲ್ಲಿ ಲೈಟು “ಡಿಮ್- ಡಿಪ್” ಅಪ್ಪಲಿಲ್ಲೆ. ಈಗಾಣ ನಮ್ಮ Filament ಇಪ್ಪ bulb ಲಿ ಇದರ ಅಳವಡಿಸಿರೆ ಬಲ್ಬು ನಾಕು ದಿನಕ್ಕೂ ಬಾರ.
    ಈ ತಂತ್ರಜ್ಞಾನ ಸಣ್ಣ ವಾಹನಂಗೊಕ್ಕೆ ಅಳವಡಿಕೆ ಅಪ್ಪ ಹಾಂಗೆ ಮುಂದೆ ಬೆಳೆಗು.

    1. ಏ, ಮಾವ… 🙂
      ಇದಾ.. ಹೀ೦ಗೆಲ್ಲಾ ಹೇಳಿರೆ ನವಗೆ ಒ೦ದೂ ತಲಗೆ ಹೋಗ.. 😛
      ನಿ೦ಗೊ ಹೇಳಿದ್ದೆಲ್ಲಾ ಮಾಡಿರೆ, ಕಡೇ೦ಗೆ ಲೈಟು ಹೋತ್ತುಗೋ ಅಲ್ಲ ನ೦ದುಗೋ?? 😀
      ಉಮ್ಮಪ್ಪಾ.. 😉

    2. ಕುಮಾರ ಮಾವ, ಡ್ರೈವರ್‍ ಗೊಕ್ಕೆ ಎಂತಕೆ ಉಪದ್ರ ಆವ್ತು?? ಬೇಡದ್ದಿಪ್ಪಗಳೂ ಡಿಮ್ – ಡಿಪ್ ಅಪ್ಪ ತೊಂದರೆ ಇದ್ದ???

      ಓಹ್, ಎಲ್.ಇ.ಡಿ. ಬಲ್ಬುಗ ಈ ತೊಂದರೆ ತಪ್ಸುಲೇ ಬಂದದಾ?? ಕೆಲವು ಕಾರುಗಳಲ್ಲಿ ಅದರ ನೋಡಿದ್ದೆ… ಅದರಲ್ಲಿ ಬೆಳ್ಚಿ ಲಾಯ್ಕ ಇರ್ತು… ಃ) ಃ) ಮತ್ತೆ ಎದುರಿಂದ ಬಪ್ಪ ವಾಹನಕ್ಕೆ ಉಪದ್ರ ಆಗದ್ದ ಹಾಂಗೆಯೂ ಇದ್ದು….. ಃ) ಃ)

  7. ಒಳ್ಳೆ ಸಲಹೆ ಇದು. ಹಾಂಗೇ ಬೈಕಿನ ಲೈಟು ಇನ್ನೂ ರಜ ಹೆಚ್ಚು ಬೆಣಚ್ಚು ಬತ್ತಾಂಗೆ ಮಾಡಿರೆ ಒಳ್ಳೆದಿತ್ತು. ಈಗ ಇಪ್ಪದು ಸಾಕಾವ್ತಿಲ್ಲೆ ಹೇಳಿ.

    1. ಏ ಭಾವಾ ಕನ್ನಡ್ಕ ಹಾಕ್ಯೋಳಿ ಆಗದೊ? 😉

      1. ವೈಪರು ಇಪ್ಪ ಕನ್ನಡ್ಕ ಸಿಕ್ಕುತ್ತೋ ಗಣೇಶಣ್ಣ, ನಿಂಗಳತ್ಲಾಗಿ.

        1. ವರ್ಷಲ್ಲಿ ೫ ನಿಮಿಷ ಮಳೆ ಬ೦ದರೆ ಭಾಗ್ಯ ಹೇಳ್ತ ಹಾ೦ಗಿಪ್ಪ ಊರಿಲ್ಲಿ ವೈಪರು ಎ೦ತಕೆ ಕುಮಾರ ಮಾವಾ..

      2. ಓಹ್… ಕನ್ನಡಕಲ್ಲಿ ಲೈಟ್ ಇಪ್ಪದು ಸಿಕ್ಕುತ್ತೋ ಅಲ್ಲಿ.! ಅಂಬಗ ಎರಡು ಇರ್ಲಿ ಪೆರ್ವದಣ್ಣೋ. ಒಂದು ಎನಗೂ ಇನ್ನೊಂದು ಬೋಚಬಾವಂಗೂ!!

        1. ಚೆ, ಆನು ನಿ೦ಗಳ ಬೈಗಳು ತಿನ್ನದ್ದೆ ಸುಮಾರು ದಿನ ಆತನ್ನೆ ಹೇಳಿ ಪರ೦ಚಾಣ ಕೇಳ್ಳೆ ಬೇಕಾಗಿ ಹಾ೦ಗೆ ಒಪ್ಪ ಕೊಟ್ಟದಲ್ಲದೊ ಅಪ್ಪಚ್ಚಿ, ನಿ೦ಗೊ ಎನ್ನ ಸೋಲಿಸಿದಿರನ್ನೆ!! 😉

          1. ಅಲ್ಲ ಗಣೇಶಭಾವಾ… ‘ಕೆಲವು ಜೆನ’ರ ಹೆಡ್ಡಿಂಗೆ ಬಿದ್ದ ಲೈಟಿನ ಬೆಣಚ್ಚು ಪ್ರತಿಫಲನ ಆಗಿ ಆ ಲೈಟು ಹಾಕಿದವನ ಕಣ್ಣಿಂಗೇ ಬಿದ್ದು ಎಕ್ಕಸಕ್ಕ ಆವ್ತಡ ಒಂದೊಂದಾರಿ..ಅಪ್ಪೋ..? 😉

        2. ಮದಲಿಂಗೆ ಬೋಂಟೆಗೆ ಹೋಪಗ ತಲೆಲಿ ಲೈಟು ಮಡಿಕ್ಕೊಂಡು ಹೋಕ್ಕು. ಈಗ ಹಾಂಗಿಪ್ಪದು ಎಲ್ಲಿ ಸಿಕ್ಕುಗು ಹೇಳಿ ಸುಭಗಣ್ಣನ ಹತ್ತರೆ ವಿಚಾರ್ಸಿರೆ ಗೊಂತಕ್ಕು.

          1. ಏ, ಅಪ್ಪಚ್ಚಿ.. ENT ಮಾ೦ತ್ರ ಅಲ್ಲಾ..
            ಈ ಹಲ್ಲು ತೆಗೆತ್ತಾ ಡಾಗುಟ್ರುಸಾನು ಮಡುಗುತ್ತವು.. 😉

          2. ಬೋಚ ಬಾವನ ಹಲ್ಲು ತೆಗವಲೆ ಲೈಟು ಬೇಕಾಗ ಅಲ್ಲದೋ……?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×