Oppanna.com

ಗಂಟು ಬೇನೆ-Osteoarthritis[OA]

ಬರದೋರು :   ಸುವರ್ಣಿನೀ ಕೊಣಲೆ    on   14/11/2011    20 ಒಪ್ಪಂಗೊ

ಸುವರ್ಣಿನೀ ಕೊಣಲೆ

ಕಾಣೆ ಆದವರ ಹುಡ್ಕಿಗೊಂಡು ಹೋಗಿ ಎನಗೇ ದಾರಿ ತಪ್ಪಿತ್ತು ! ಆದರೂ ಕೆಲವು ಕಾಣೆ ಆದವ್ವು ಸಿಕ್ಕಿದವು ! ಇನ್ನು ಕೆಲವು ಪಟಂಗಳಲ್ಲಿ ಕಾಂಬಲೆ ಸಿಕ್ಕಿದವ್ವು ಹೇಳುದೇ ಖುಷಿಯ ವಿಷಯ ! ದಾರಿ ಹುಡುಕ್ಕಿಗೊಂಡು ಬೈಲಿಂಗೆ ಬಂದು ಎತ್ತುಲೆ ರಜ್ಜ ಸಮಯ ಬೇಕಾತು. ಇಲ್ಲಿಗೆ ಎತ್ತಿ ಬಚ್ಚಿತ್ತು, ಶ್ರೀ ಅಕ್ಕ ಲಾಯ್ಕದ ಪಾನಕ ಮಾಡಿಕೊಟ್ಟವದ…ಬಚ್ಚಲು ಕಳತ್ತು, ಆದರೆ ನಡಕ್ಕೊಂಡು ಬಂದ ಕಾರಣ ಕಾಲುಬೇನೆ ಇದ್ದತ್ತು….ರಜ್ಜ ಹೊತ್ತು ಮನುಗಿ ರೆಸ್ಟ್ ಮಾಡಿಯಪ್ಪದ್ದೆ ಬೇನೆ ಕಮ್ಮಿ ಆತು. ಆದರೆ ಕೆಲವು ಜೆನಕ್ಕೆ ಕಾಲು ಬೇನೆ ಬಂದರೆ ರೆಸ್ಟು ಮಾಡಿರೆ ಕಮ್ಮಿ ಆವ್ತಿಲ್ಲೆ ! ಅದರಲ್ಲಿಯೂ ಪ್ರಾಯ ಆದೋರಿಂಗಂತೂ ಮೊಳಪ್ಪಿಲ್ಲಿ ಒಂದು ಬೇನೆ ಬಪ್ಪದು, ನಡವಲೂ ಎಡಿಯ, ನಿಂಬಲೂ ಎಡಿಯ, ಎಂತೋ ವಾತ ಹೇಳಿ ಬಂಡಾಡಿ ಅಜ್ಜಿ  ಹೇಳುಗು. ಪ್ರಾಯ ಅಪ್ಪಗ ಬಪ್ಪದಡ. ಅಜ್ಜಿಯಕ್ಕೊ ಎಣ್ಣೆ ಕಿಟ್ಟುದು ಎಲ್ಲರೂ ಕಂಡಿಕ್ಕು ! ಆದರೆ ಈಗಾಣ ಕಾಲಲ್ಲಿ ಈ ವಾತದ ಮೊಳಪ್ಪು ಬೇನೆ ಬಪ್ಪದು ಮುದುಕರಿಂಗೆ ಮಾಂತ್ರ ಅಲ್ಲ ! ಸಣ್ಣ ಪ್ರಾಯದವಕ್ಕೂ ಬತ್ತು, ಅದಕ್ಕೆ ಕಾರಣಂಗೊ ಸುಮಾರಿದ್ದು. ನಮ್ಮ ಬೈಲಿನವಕ್ಕೂ, ನೆರೆಕರೆಯೋರಿಂಗೂ ಈ ಸಮಸ್ಯೆ ಇಪ್ಪಲೂ ಸಾಕು, ಅಥವಾ ಅವಕ್ಕೆ ಬೇಕಾದವಕ್ಕೆ ತೊಂದರೆ ಇಪ್ಪಲೂ ಸಾಕು, ಹಾಂಗಾಗಿ ಅದರ ಬಗ್ಗೆ ರಜ್ಜ ಮಾಹಿತಿ. ಸಣ್ಣ ಸಮಸ್ಯೆಯ ಸಮಸ್ಯೆ ಹೇಳಿ ಅರ್ಥ ಮಾಡಿಗೊಂಡು ಅದು ದೊಡ್ಡ ಸಮಸ್ಯೆ ಅಪ್ಪದರ ತಡವಲಕ್ಕು !

ಸಣ್ಣಾದಿಪ್ಪಗ ಆಡುವಗ ಓಡುವಗ ಬೀಳುದು ಸಾಮಾನ್ಯ, ಅದೇ ರೀತಿ ಮೊಳಪ್ಪಿಲ್ಲಿ, ಕೈಲಿ ಗಾಯದ ಗುರ್ತು ಇಪ್ಪದು ಸಾಮಾನ್ಯ, ಎರಡು ದಿನ ಬೇನೆ ಇಕ್ಕು ಆಟದ ಮಧ್ಯೆ ಅದರ ನೆಂಪೆಲ್ಲಿ, ಅಲ್ಲದಾ? ಆದರೆ ಈಗ ಹಾಂಗಲ್ಲನ್ನೇ? ಇಂದು ನಾವು ಶರೀರದ ಗಂಟುಗೊಕ್ಕೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಮಾತಾಡುವ, ಇದಕ್ಕೆ ‘osteoarthritis’ ಹೇಳಿ ವೈದ್ಯಕೀಯವಾಗಿ ಹೇಳುತ್ತವು. ಕನ್ನಡಲ್ಲಿ ಸಂಧಿವಾತ’ ಹೇಳಿ ಹೇಳುತ್ತವು.

  • 80%  ಜನಂಗಳಲ್ಲಿ ಈ ಸಮಸ್ಯೆ ಇದ್ದರೂ ಕೂಡ ಲಕ್ಷಣಂಗೊ ಕೇವಲ 26-30%  ಜನರಲ್ಲಿ ಮಾಂತ್ರ ಕಂಡು ಬಪ್ಪದು.
  • ಸಾಮಾನ್ಯ 30ರಿಂದ 65 ವರ್ಷ ಪ್ರಾಯಲ್ಲಿ ಇದು ಶುರು ಆವ್ತು.
  • ಇದು ಸಾಮಾನ್ಯವಾಗಿ ಪ್ರಾಯ ಅಪ್ಪಗ ಬಪ್ಪದಾದರೂ ಕೂಡ ಕೆಲವು ಸರ್ತಿ ಬೇರೆ ಕಾರಣಂದಾಗಿ ಈ ಸಮಸ್ಯೆ ಶುರು ಅಪ್ಪದೂ ಇದ್ದು.
  • ಪ್ರಾಯ ಅಪ್ಪಗ ಎಲ್ಲರಿಂಗೆ ಬರೆಕು ಹೇಳಿ ಏನೂ ಇಲ್ಲೆ. ಬಂದರೂ ಕೂಡ  ಇಂತಹದ್ದೇ ಕಾರಣ ಹೇಳಿ ಏನೂ ಇರ್ತಿಲ್ಲೆ. ಕೆಲವು ಗಂಟುಗಳಲ್ಲಿ ಬೇನೆ
  • ಡಯಾಬಿಟೀಸ್, ಅತಿಬೊಜ್ಜು ಇತ್ಯಾದಿ ಸಮಸ್ಯೆ ಇದ್ದೋರಿಂಗೆ ಸಂಧಿವಾತ ಬಪ್ಪ ಸಾಧ್ಯತೆಗೊ ಹೆಚ್ಚು.
  • ಕೆಲವು ಸರ್ತಿ ಒಒಂದೇ ಗಂಟಿನ ಹೆಚ್ಚಿಗೆ ಬಳಕೆ ಮಾಡಿದ್ದರಿಂದಲೂ ಸಮಸ್ಯೆ ಬಕ್ಕು, ಉದಾಹರಣೆಗೆ ಕೆಲವು ಆಟಗಾರರಿಂಗೆ, ನಿಂದುಗೊಂಡು ಪಾಠ ಮಾಡಿದೋರಿಂಗೆ ಇತ್ಯಾದಿ.
  • ಅಥವಾ ಪೆಟ್ಟು ಬೀಳುದರಿಂದಲೂ ಶುರು ಅಪ್ಪ ಸಾಧ್ಯತೆಗಳನ್ನೂ ಬಿಡುವ ಹಾಂಗೆ ಇಲ್ಲೆ.
  • ಹೆಮ್ಮಕ್ಕೊಗೆ ಮೊಳಪ್ಪು ಮತ್ತೆ ಕೈಯ ಗಂಟುಗಳಲ್ಲಿ ಈ ಬೇನೆ ಅಪ್ಪದು ಹೆಚ್ಚು, ಗಂಡುಮಕ್ಕೊಗೆ ಸೊಂಟದ ಎಲುಬುಗಳಲ್ಲಿ ಹೆಚ್ಚಿಗೆ.

ಎಂತರ?:

ಗಂಟುಗಳ ಕೆಲಸ ಸುಲಭ ಅಪ್ಪಲೆ ಗಂತುಗಳಲ್ಲಿ ಎರಡು ಎಲುಬುಗಳ ಮಧ್ಯಲ್ಲಿ ಕಾರ್ಟಿಲೇಜ್ ಹೇಳ್ತ ಅಂಶ ಇರ್ತು. ಇದು ಎಲುಬುಗಳ ಮಧ್ಯದ ಘರ್ಷಣೆಯ ಕಮ್ಮಿ ಮಾಡ್ತು, ಅಲ್ಲದ್ದೆ ಭಾರ ಹೊರುವ ಗಂಟುಗಳಲ್ಲಿ, ದೇಹದ ಭಾರ ಸಮವಾಗಿ ಇನ್ನೊಂದು ಎಲುಬಿಂಗೆ ಬೀಳುವ ಹಾಂಗೆ ಮಾಡ್ತು, ಅಲ್ಲದ್ದೆ shock absorber ನ ಹಾಂಗೆ ಕೆಲಸ ಮಾಡ್ತು.

  • ಈ OA  ಹೇಳ್ತ ಸಮಸ್ಯೆಲಿ ಈ ಕಾರ್ಟಿಲೇಜಿನ ಭಾಗ ತನ್ನ ಸಾಮರ್ಥ್ಯ ಕಳಕ್ಕೊಳ್ತಾ ಹೋವ್ತು,
  • ಗಂಟುಗಳಲ್ಲಿ ಇಪ್ಪಂತಹ ದ್ರವ, ಇದು ಎಣ್ಣೆಯ ಹಾಂಗೆ ಕೆಲಸ ಮಾಡ್ತು, ಕಮ್ಮಿ ಆವ್ತು.
  • ನಿಧಾನಕ್ಕೆ ಎಲುಬುಗಳ ಮಧ್ಯೆ ಘರ್ಷಣೆ ಉಂಟಪ್ಪಲೆ ಶುರು ಆವ್ತು.
  • ನವಗೆ ಹೆಚ್ಚಾಗಿ ಇದು ಕಾಂಬಲೆ ಸಿಕ್ಕುದು ಮೊಳಪ್ಪಿನ ಗಂಟಿಲ್ಲಿ.

ಲಕ್ಷಣಂಗೊ:

  • ಗಂಟಿಲ್ಲಿ ಬೇನೆ, ಆ ಗಂಟಿನ ಚಲನೆ ಮಾಡಿಯಪ್ಪಗ ಬೇನೆ ಹೆಚ್ಚಾವ್ತು.
  • ಕಾಲಿನ ಗಂಟಾದರೆ, ಹೆಚ್ಚು ನಡದಪ್ಪಗ, ಮೆಟ್ಲು ಹತ್ತಿ ಇಳುದು ಮಾಡಿಯಪ್ಪಗ ಬೇನೆ ಹೆಚ್ಚಾವ್ತು.
  • ಮೊಳಪ್ಪಿಲ್ಲಿ ಹೆಚ್ಚಾಗಿ ಕಂಡು ಬಪ್ಪದರಿಂದ, ಶರೀರದ ಭಾರ ಅದರ ಮೇಲೆ ಬಿದ್ದು ಹೆಚ್ಚಿಗೆ ಬೇನೆ ಆವ್ತು. ದೇಹದ ತೂಕ ಹೆಚ್ಚಿದ್ದೊರಿಂಗೆ ಇನ್ನೂ ಹೆಚ್ಚಿನ ಸಮಸ್ಯೆಯೇ.
  • ಸಮಸ್ಯೆ ಇಪ್ಪ ಗಂಟಿನ ಮಡುಸುಲೆ ಕಷ್ಟ ಅಪ್ಪದು, ಒಂದು ಮಿತಿಂದ ಹೆಚ್ಚಿಗೆ ಬಗ್ಗುಸುಲೆ ಎಡಿತ್ತಿಲ್ಲೆ.
  • ಸಮಸ್ಯೆಗೊ ಜೋರಿಪ್ಪಗ ಗಂಟಿನ ಭಾಗ ಬೀಗುತ್ತು,ಗಂಟಿನ ಸುತ್ತಲೂ ಕೆಂಪಾವ್ತು.
  • ವಿಶ್ರಾಂತಿ ಮಾಡಿಯಪ್ಪಗ ಬೇನೆ ಕಮ್ಮಿ ಆವ್ತು. ಆದರೆ ಚಲನೆ ಕೊಟ್ಟಪ್ಪಗ, ಭಾರ ಹಾಕಿಯಪ್ಪಗ ಮತ್ತೆ ಬೇನೆ ಆವ್ತು.

ಕಂಡುಹಿಡಿವಲೆ X-ray ಮಾಡ್ಸಿರೆ ಗೊಂತಾವ್ತು, ಗಂಟಿಲ್ಲಿ ಎರಡು ಎಲುಬುಗಳ ಮಧ್ಯೆ ಇರೆಕ್ಕಾದ ಅಂತರ ಕಮ್ಮಿ ಆಗಿರ್ತು, ಈ ಮೂಲಕ ಇದರ ಕಂಡು ಹಿಡೀವಲೆ ಎಡಿತ್ತು.

ಪರಿಹಾರ:

  • ಗಂಟುಗಳಲ್ಲಿ ಬೇನೆ ಇದ್ದರೆ ನಿರ್ಲಕ್ಷ್ಯ ಮಾಡದ್ದೆ ಅದರ ಬಗ್ಗೆ ಗಮನ ಕೊಟ್ಟು, ಅದು ಎಂತರ ಹೇಳುದರ ತಿಳ್ಕೊಂಡು ಪರಿಹಾರ ಕಂಡುಗೊಳ್ಳಿ
  • ಇದು ತುಂಬಾ ತೀವ್ರ ಹಂತಕ್ಕೆ ಎತ್ತಿದ್ದರೆ ಪುನಃ ಮೊದಲಾಣ ಹಾಂಗೆ ಮಾಡುದು ಅಸಾಧ್ಯ, ಆದರೆ ಚಿಕಿತ್ಸೆಯ ಮೂಲಕ ತಕ್ಕಮಟ್ಟಿಂಗೆ ಬೇನೆ ಕಮ್ಮಿ ಮಾಡಿ, ನಿತ್ಯಾಣ ಕೆಲಸಲ್ಲಿ ತೊಂದರೆ ಆಗದ್ದ ಹಾಂಗೆ ಮಾಡ್ಲಕ್ಕು, ಆದರೆ ಸಂಪೂರ್ಣ ಸರಿ ಅಪ್ಪದು ಚಮತ್ಕಾರ.
  • ಗಂಟಿಂಗೆ ಯಾವುದೇ ರೀತಿಯ ಪೆಟ್ಟಾದರೆ ಅದಕ್ಕೆ ಸರಿಯಾದ ಚಿಕಿತ್ಸೆ ತೆಕ್ಕೊಳ್ಳೆಕು.
  • ಆಟಗಾರರು ಅಥವಾ ಗಂಟಿಂಗೆ ಒತ್ತಡ ಬೀಳ್ತ ಕೆಲಸಲ್ಲಿ ಇಪ್ಪೋರು ಅದರ ಬಗ್ಗೆ ಎಚ್ಚರಿಕೆ ವಹಿಸೆಕ್ಕು, ಅದಕ್ಕೆ ಬೇಕಾದ ರೀತಿಯ ಚಪ್ಪಲಿ ಇತ್ಯಾದಿ ಬಳಕೆ ಮಾಡಿರೆ ಉತ್ತಮ.
  • ದೇಹದ ತೂಕ ಹೆಚ್ಚಿಗೆ ಇಪ್ಪೋರು, ಮೊದಲು ತೂಕ ಇಳುಶಿಗೊಳ್ಳೆಕು, ತೂಕ ಸರಿ ಇಪ್ಪೋರು ಅದು ಹೆಚ್ಚಾಗದ್ದ ಹಾಂಗೆ ನೋಡಿಗೊಳ್ಳೆಕು.
  • ಗಂಟಿಂಗೆ ಹೆಚ್ಚಿಗೆ ಒತ್ತಡ ಬೀಳದ್ದ ಹಾಂಗೆ ನೋಡಿಗೊಳ್ಳೆಕು, ಯಾವುದೇ ರೀತಿಯ ಆಘಾತ ಆ ಗಂಟಿಂಗೆ ಆಗದ್ದ ಹಾಂಗೆ ನೋಡಿಗೊಳ್ಳೆಕು.
  • ಆಹಾರಲ್ಲಿ ವೈದ್ಯರು ಹೇಳ್ತ ಬದಲಾವಣೆಗಳ ಮಾಡುಲೆ ಮರೆಯಡಿ.
  • ಕಾಲಿನ ಗಂಟಿಲ್ಲಿ ಬೇನೆ ಇದ್ದರೆ, ಅದಕ್ಕೆ ಬೇಕಾಗಿಯೇ ಇಪ್ಪಂತಹ ಚಪ್ಪಲಿಯ ಬಳಕೆಯ ಮರೆಯಡಿ.
  • ಬೇನೆ ಇಪ್ಪಗ ಬೇನೆಗೆ ಮದ್ದು ತೆಕ್ಕೊಂಬ ಅಗತ್ಯ ಇದ್ದರೆ ತೆಕ್ಕೊಳ್ಳಿ, ಆದರೆ ಒಟ್ಟಿಂಗೆ ಗಂಟಿನ ಸುತ್ತಲಾಣ ಸ್ನಾಯುಗೊಕ್ಕೆ ಶಕ್ತಿ ಕೊಡುವ ಹಾಂಗಿದ್ದ ವ್ಯಾಯಾಮಂಗಳ ನಿತ್ಯವೂ ತಪ್ಪದ್ದೇ ಮಾಡೆಕು. [ಇದರ ನಿಂಗಳ ವೈದ್ಯರೇ ನಿಂಗೊಗೆ ಕಲುಶುಗು ಅಥವಾ ಫಿಸಿಯೋಥೆರಪಿಯವ್ವೂ ಹೇಳಿಕೊಡುಗು.]
  • ಬೇನೆಗೆ ಎಂತಾರು ಎಣ್ಣೆ ಅಥವಾ ಮುಲಾಮು ಕಿಟ್ಟುದರಿಂದ ಬೇನೆ ರಜ್ಜ ಕಮ್ಮಿ ಆದರೂ ಕೂಡ ಚಿಕಿತ್ಸೆಯ ಅಗತ್ಯ ಖಂಡಿತಾ ಇದ್ದು.
  • ಇದು ಪೂರ ಗುಣ ಆಗದ್ದ ಕಾರಣ ಚಿಕಿತ್ಸೆಯೇ ಬೇಡ ಹೇಳ್ತ ತಪ್ಪು ನಿರ್ಧಾರ ತೆಕ್ಕೊಳ್ಳೆಡಿ 🙂 ಚಿಕಿತ್ಸೆ ತೆಕ್ಕೊಳ್ಳಿ, ಪೂರ ಕಮ್ಮಿ ಅಪ್ಪಂತಹ ಕೆಲವು ಜನಂಗಳಲ್ಲಿ ನಿಂಗಳೂ ಇಕ್ಕು !!

ಗಂಟು ಬೇನೆಗಳಲ್ಲಿ ಬೇರೆ ಬೇರೆ ವಿಧಂಗೊ ಇದ್ದರೂ ಕೂಡ  OA  ಸಾಮಾನ್ಯವಾಗಿ ಕಾಂಬಲೆ ಸಿಕ್ಕುವ ಒಂದು ಸಮಸ್ಯೆ, ಎಲ್ಲಾ ಗಂಟು ಬೇನೆಗಳೂ OAಯೇ ಆಗಿರೆಕ್ಕು ಹೇಳಿ ಇಲ್ಲೆ, ಆದರೆ ಹೆಚ್ಚಿಗೆ ಗಂಟಿನ ಬೇನೆ ಹೆಚ್ಚಿಗೆ ದಿನ ಇದ್ದರೆ ಸುಮ್ಮನೆ ನಿರ್ಲಕ್ಷ್ಯ ಮಾಡೆಡಿ. ನಿಂಗಳ ಆರೋಗ್ಯವ ಲಾಯ್ಕಕ್ಕೆ ನೋಡಿಗೊಳ್ಳಿ 🙂

-ನಿಂಗಳ

ಸುವರ್ಣಿನೀ ಕೊಣಲೆ

20 thoughts on “ಗಂಟು ಬೇನೆ-Osteoarthritis[OA]

  1. molappu bene ,,,,,, adu kalina himmadi bene joraadaru bappadidda

    kelavu halli maddugo urli heludara madi
    kammi agadde homiopathi dr hingeli helidavu

    adu ondee kalindu jasthi ,,irulu orakkili ,,,udyappaga eddu 1 hejje hakulavthille nimsha kalu nelalli
    madudugudulire thumbaa kastavthu,,,,

    mathe thumbaa bachchiappaga sujili kuthidaange himmadi bene shuru avthu

    identharindakka,,,,,
    helthiroo

  2. ಅತ್ಯಗತ್ಯವಾದ ಮಾಹಿತಿ..ಅದರಲ್ಲಿಯುದೆ ನಮ್ಮವಕ್ಕೆ ಮನೆಲಿ ಇಪ್ಪವಕ್ಕೆ ಗಂತು ಬೇನೆ ಹೇಳಿ ಸುಮ್ಮನೆ ಕೂಪವಕ್ಕೆ ಇದರ ಮುಟ್ಟುಸೆಕ್ಕು..ಇದರಿಂದಾಗಿ ಬಪ್ಪ ಸಮಸ್ಯೆಗಳ ನಿಲ್ಲ್ಸೆಕ್ಕು..ಮದ್ದು ಯೋಗ ಅಯುರ್ವೇದ ಸಾಕು..

  3. ಗಂಟು ಬೇನೆ ಬಗ್ಗ್ಗೆ ಒಳ್ಳೆ ಮಾಹಿತಿ ಕೊಟ್ಟ ಲೇಖನ.
    Osteoporosis ಮತ್ತೆ ಇದಕ್ಕೆ ಎಂತಾರೂ ಸಂಬಂಧ ಇದ್ದಾ?

  4. ತುಂಬಾ ಮಾಹಿತಿ ಇಪ್ಪ ಲೇಖನ. ಗಂಟುಬೇನೆಯ ಬಗ್ಗೆ ಚೆಂದಕೆ ವಿವರಿಸಿದ್ದಿ. ಧನ್ಯವಾದಂಗೊ.

    1. ಧನ್ಯವಾದ 🙂
      ಕೆಲವು ವ್ಯಾಯಾಮಂಗೊ ಗಂಟುಬೇನೆಗೆ ಹೇಳಿಯೇ ಇಪ್ಪದು, ಇದರೆಲ್ಲ ನಿತ್ಯವೂ ಮಾಡೆಕಾವ್ತು.
      ಬೇರೆ ಬೇರೆ ಗಂಟುಗೊಕ್ಕೆ ಬೇರೆ ಬೇರೆ ವ್ಯಾಯಾಮ, ಆಸನಂಗೊ ಇದ್ದು.
      ಆದರೆ ಯಾವುದೇ ವ್ಯಾಯಾಮ ಮಾಡುವಗ ಬೇನೆ ಇದ್ದರೆ ಮಾಡುಲಾಗ.

  5. ಒಳ್ಳೆಯ ಲೇಖನ/ಮಾಹಿತಿ ಸುವರ್ಣಿನಿ. ಈಗಿಗ ಹೆಚ್ಚಿನವಕ್ಕೆ(ಮಧ್ಯಪ್ರಾಯ ಆದವಕ್ಕೆ) ಇಪ್ಪದು. ಕಡೆಗಣಿಸುತ್ತವು. ಹೆಚ್ಚಾದ ಮತ್ತೆಯೇ ಅದಕ್ಕೆ ಬೇಕಾದ ಏರ್ಪಾಡು ಮಾಡ್ಲೆ ಹೆರಡುವದು.

    1. ಧನ್ಯವಾದ, ಮೊದಲೆಲ್ಲ ಮುದುಕರಿಂಗೆ ಬಂದುಗೊಂಡಿದ್ದ ಸಮಸ್ಯೆಗೊ ಎಲ್ಲವೂ ಈಗ ಸಣ್ಣ ಪ್ರಾಯಲ್ಲಿಯೇ ಬತ್ತು, ಕೆಲವರು ನಿರ್ಲಕ್ಷ್ಯ ಮಾಡ್ತವು …ಇದರಿಂದ ಮುಂದೆ ಹೆಚ್ಚಿನ ಸಮಸ್ಯೆ ಅನುಭವಿಸೆಕಾವ್ತು..
      ಈಗಾಣ ಜೀವನ ಶೈಲಿಂದಾಗಿ ಹೆಚ್ಚಿನ ಸಮಸ್ಯೆಗೊ ಬತ್ತು..

  6. ಲೇಖನ ಲಾಯಕ ಆಯಿದು… ಹಲವು ಸಮಸ್ಯೆಗೊಕ್ಕೆ, ಬೇನೆಗೊಕ್ಕೆ, ರೋಗಂಗಕ್ಕೆ ನಮ್ಮ ಮನಸ್ಸೇ ಕಾರಣ ಹೇಳುದರ ಆನು ಹರೇ ರಾಮದ ಸಹಾಯಂದ ಕಲ್ತುಗೊಂಡೆ…

    1. ಅಪ್ಪು ಅಕ್ಕ…. ಹೆಚ್ಚಿನ ಸಮಸ್ಯೆಗಳ ಮೂಲ ನಮ್ಮ ಮನಸ್ಸು 🙂 ಮನುಷ್ಯನ ಮನಸ್ಸೇ ಹಾಂಗೆ… ಸಮಸ್ಯೆಯ ಮೂಲವೂ ಅದುವೇ…ಪರಿಹಾರವೂ ಅದುವೇ !!

      1. ಗುರುಗಳ ಮಾರ್ಗದರ್ಶನಲ್ಲಿ(ಹರೇ ರಾಮ) ಆ ಮನಸಿನ ಹೆಚ್ಚು ಹೆಚ್ಚು ಬಳಸುಲೇ ಪ್ರಯತ್ನ ಮಾಡುತ್ತಾ ಇದ್ದೆ… ನಾವೆಲ್ಲಾ ಒಂದು ಚೂರು ಪ್ರಯತ್ನ ಮಾಡಿರೆ ಕೆಲವು ಸಮಯಲ್ಲಿ ಹೆಚ್ಚಿನ ಮೆಡಿಸಿನ್ ಕಂಪೆನಿಗ ಮುಚ್ಹೆಕ್ಕಕ್ಕು… ಇಷ್ಟೊಂದು ಅಗಾಧ ಶಕ್ತಿಯ ಮನಸಿನ ಇಷ್ಟು ಸಮಯ ಬಳಸಿದ್ದಿಲ್ಲೆನ್ನೇ ಹೇಳಿ ಅನ್ನಿಸುತ್ತು…

  7. ಒಳ್ಳೇ ಲೇಖನ, ಧನ್ಯವಾದ೦ಗೊ. ಕೆಲವು ರೀತಿಯ ಗ೦ಟುಬೇನೆಗೊಕ್ಕೆ ದಿನಾಗಳೂ ವಜ್ರಾಸನಲ್ಲಿ ಕೂದರೆ ಒಳ್ಳೇ ಗುಣ ಸಿಕ್ಕುತ್ತು.

    1. ಮೊಳಪ್ಪಿನ, ಪಾದದ ಗಂಟುಗಳ ಬೇನೆ ಇಪ್ಪಗ ವಜ್ರಾಸನಲ್ಲಿ ಕೂಬಲಾಗ.
      ಬೇರೆ ಸುಮಾರು ಸಮಸ್ಯೆಗೊಕ್ಕೆ ವಜ್ರಾಸನ ಉಪಕಾರಿ. ವಜ್ರಾಸನದ ಬಗ್ಗೆ ಮೊದಲೊಂದರಿ ಬರದಿತ್ತಿದ್ದೆ.

  8. ಸಣ್ಣಕೆ ಗಂಟು ಬೇನೆ ಅಲ್ಲದೋ ಹೇಳಿ ತಪಾಸಣೆ ಮಾಡದ್ದೆ ಗೆಂಟು ಹಿಡ್ಕೊಂಡು ಕೂದರೆ ಅರ್ಗೆಂಟು ಅಪ್ಪಗ ಎಲ್ಲಾ ಗೆಂಟು ಬೇನೆ ಸುರುವಕ್ಕು ಹೇಳಿ ತಿಳುವಳಿಕೆ ಮತ್ತು ಎಚ್ಚರ ಮಾಹಿತಿ ಕೊಟ್ಟದು ಲಾಯಕ ಆಯ್ದು ಹೇಳಿ ಹೇಳ್ವದು – ‘ಚೆನ್ನೈವಾಣಿ’

    1. ಧನ್ಯವಾದ, ಅಪ್ಪು.. ತುಂಬಾ ಜನ ಹೀಂಗೆಯೇ ಮಾಡ್ತವು..ಗಂತು ಬೇನೆ ಮಿತಿ ಮೀರಿದ ಮೇಲೆ ಡಾಕ್ಟ್ರ ಹತ್ತರೆ ಹೋಪದು. ಅಲ್ಲದ್ದೆ ವಿಶ್ರಾಂತಿಯೂ ತೆಕ್ಕೊಳ್ತವಿಲ್ಲೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×