“ಗುರುನೆಲೆ ಗಟ್ಟಿ ಹಿಡ್ಕೊಳೆಕ್ಕು”-(ಹವ್ಯಕ ನುಡಿಗಟ್ಟು—9)

“ಗುರುನೆಲೆ ಗಟ್ಟಿ ಹಿಡ್ಕೊಳೆಕ್ಕು” –(ಹವ್ಯಕ ನುಡಿಗಟ್ಟು—9)

ಸಾದಾರಣ ಹತ್ತು-ನಲುವತ್ತು ವರ್ಷ ಹಿಂದೆ ಊರಿಲ್ಲಿ ಒಂದೆರಡು ಮನೆವಕ್ಕೆ; ಕುಲಪುರೋಹಿತರತ್ರೆ ಏವದೋ ಕಾರಣಕ್ಕೆ ಹೋಕುರಕ್ಕಿಲ್ಲದ್ದೆ ಆತು. ಭಟ್ರ ಬೇರೆ ಬದಲಿಸಿದೊವು. “ಛೇ! ಎಂತಾದರೂ ಮನೆತನದ ಪುರೋಹಿತಕ್ಕೆ, ಬೇರೆಯವರ ಮಾಡ್ಳಾವುತಿತಿಲ್ಲೆ” ಶುದ್ದಿ ಗೊಂತಪ್ಪದ್ದೆ ಕೆಲಾವು ಜೆನೆ ಹೆರಿಯೋರು ಹೇಳಿಯೊಂಡವು. ಹಾಂಗೇ ಕೆಲಾವು ವರ್ಷ ಕಳಾತು.

ನಮ್ಮ ಈಗಾಣ ಪರಮಪೂಜ್ಯ ಶ್ರೀಸಂಸ್ಥಾನ ಪೀಠಕ್ಕೆ ಬಂದಪ್ಪಗ ಮಹಾಮಂಡಲ, ವಲಯ,ಸಮಿತಿಗೊ ಹೇಳಿ ರಚನೆ ಆತಿದ. ಶ್ರೀಸಂಸ್ಥಾನ ಊರಿಂಗೆ ಸವಾರಿ ಬಂದಿಪ್ಪಾಗ ವಲಯ, ಗುರಿಕ್ಕಾರಕ್ಕಳ ಸೇರ್ಸಿ ಮೀಟಿಂಗೂ ಮಾಡ್ತವನ್ನೆ!.ಹಾಂಗಿದ್ದ ಸಮೆಲಿ ಎಂತದೋ ಶುದ್ದಿ ವಿಮರ್ಶೆಮಾಡುವಗಳೋ ಈ ಭಟ್ರ ಬದಲಿಸಿದ ವಿಷಯ ಶ್ರೀಗುರುಗೊಕ್ಕೆ ಗೊಂತಾತು!. ಗೊಂತಪ್ಪದ್ದೆ “ಎಂತ..ಹೋಕುರಕ್ಕಿಲ್ಲದ್ದೆ, ಪುರೋಹಿತರ ಬದಲ್ಸಿದ್ದೊ!?. ಈ ಹೋಕುರಕ್ಕಿಲ್ಲೆ ಹೇಳ್ತ ಪ್ರಶ್ನೆಯೇ ಬಪ್ಪಲೆಡಿಯ. ಕುಲ ಪುರೋಹಿತರ ಅಂತೂ ನಮ್ಮ ಕೊಶಿವಾಶಿ ಬದಲುಸಲೇ ಆಗ. ಭಟ್ರ ಪೀಳಿಗೆಲಿಪ್ಪವೆಲ್ಲ ದೂರಲ್ಲಿ ಉದ್ಯೋಗಲ್ಲಿದ್ದವು,ಮುಂದೆ ಪುರೋಹಿತ ವೃತ್ತಿಗೆ ಜೆನ ಇಲ್ಲೇಳಿ ಆದರೆ; ಭಟ್ರ ಒಪ್ಪಿಗೆ ಮೊದಲೇ ಪಡಕ್ಕೊಂಡಿದ್ದು ಅವು ಸೂಚಿಸಿದವರ ಮಾಡಿಗೊಂಬದಕ್ಕೆ ಅಡ್ಡಿ ಇಲ್ಲೆ “. ಹೇಳ್ತ ಆದೇಶವನ್ನೂ ಕೊಟ್ಟಿಕ್ಕಿ; ’ಗುರು’ಹೇಳ್ವದರ,ಅರ್ಥವ್ಯಾಪ್ತಿ ವಿಶಾಲ. ಅಬ್ಬೆ,ಅಪ್ಪ, ಪುರೋಹಿತ,ವಿದ್ಯೆಕಲಿಶುವವ,ದೊಡ್ಡಣ್ಣ,ಸೋದರಮಾವ,ಗೆಂಡನ ಅಥವಾ ಹೆಂಡತಿಯ ಅಪ್ಪ, ನವಗೆ ರಕ್ಷಣೆ ಕೊಡುವವ ಹೀಂಗೇ ಈ ಶಬ್ಧದ ಉಪಯೋಗ ಕೆಲಾವು ವಿಷಯಲ್ಲಿದ್ದು.ಇಷ್ಟು ಜೆನವೂ ನಮ್ಮ ಗುರುನೆಲೆಂದ ನೋಡ್ತವು .ಕುಲಪುರೋಹಿತರು ಹೇಳಿರೆ, ಪೀಠಾಧಿಪತಿ ಸ್ಥಾನಕ್ಕೆ ಸಮ.ಆ ಒಂದು ನೆಲೆ ಸಡಿಲ ಅಪ್ಪಲಾಗ ಗಟ್ಟಿ ಇರೆಕು.” ಹೇಳ್ತ ಉಪದೇಶವನ್ನೂ ಕೊಟ್ಟವು. ಮತ್ತೆ… ಕ್ರಮೇಣ ಆ ಕೂಟಕ್ಕೆ ಅತ್ತಿತ್ತೆ ರಾಜಿ ಆಗಿ ಹೋಕುರಕ್ಕಾತು  ಹೇಳುವೊಂ.

ಅಪ್ಪು.., ಗುರುನೆಲೆಯ ಏವದೇ ಕಾರಣಕ್ಕೂ ನಾವು ಸಡಿಲ ಅಪ್ಪಲೆ ಬಿಡ್ಳಾಗ. ಗುರುಹೆರಿಯೊವು ಹೇಳ್ತ ಹೇಳಿಕೆಮಾತು ಒಳ್ಳೆ ಅರ್ಥಗರ್ಭಿತ ಅಂತರಾಳದ ಮಾತು!. ನಿತ್ಯ-ನೈಮಿತ್ತಿಕಲ್ಲಿ ಸದಾ ಉಪಯೋಗುಸುವ ಮಾತು

.ಎಂತ ಹೇಳ್ತಿ?

~~~***~~~~

ವಿಜಯತ್ತೆ

   

You may also like...

11 Responses

  1. ಹರೇರಾಮ, ಅಪರೂಪಲ್ಲಿ ಉಡುಪುಮೂಲೆ ಅಪ್ಪಚ್ಚಿ ಸಿಕ್ಕಿ ಪ್ರೋತ್ಸಾಹದ ಮಾತಾಡಿದ್ದು ಸಂತೋಷಾತು .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *