Oppanna.com

ಇದೆ೦ಥಾ ಲೋಕವಯ್ಯಾ?

ಬರದೋರು :   ಪುತ್ತೂರಿನ ಪುಟ್ಟಕ್ಕ    on   12/07/2013    21 ಒಪ್ಪಂಗೊ

ಪುತ್ತೂರಿನ ಪುಟ್ಟಕ್ಕ

ಹರೇರಾಮ..
ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್…
ಸೊ೦ಟದ ಬೆಲ್ಟು ಕಟ್ಟಿಕೊ೦ಡು free-way ನಲ್ಲಿ
ಹಾರಿಕೊ೦ಡು exit ನಲ್ಲಿ ಜಾರಿಕೊಳ್ತಾರೊಹೋ…
ಕನ್ನಡ ಸಿನೆಮಾದ ಪದ್ಯ ನೆನಪ್ಪಾತದ..
ಬಯಲಿನವೆಲ್ಲಾ ಹೇ೦ಗಿದ್ದಿ? ಅಜ್ಜ-ಅಜ್ಜಿ,ಮಾವ-ಅತ್ತೆ,ದೊಡ್ಡಪ್ಪ-ದೊಡ್ಡಮ್ಮ,ಅಪ್ಪಚ್ಚಿ-ಚಿಕ್ಕಮ್ಮ,ಅಕ್ಕ-ಭಾವ,ಅಣ್ಣ-ಅತ್ತಿಗೆ,ತಮ್ಮ-ತ೦ಗಿ, ಎಲ್ಲರೂ ಉಶಾರಿದ್ದೀರಾ? ಗುರಿಕ್ಕಾರಣ್ಣ ಎನ್ನ ಕಾಣೆಯಾದವರ ಪಟ್ಟಿಲಿ ಹಾಕಿದ್ದವಡ್ಡ!! ಎಲ್ಲರನ್ನು ನೋಡದ್ದೆ ಪುಟ್ಟಕ್ಕ೦ಗೆ ಬಾರೀ ಅಸಕ್ಕ ಆವ್ತಾ ಇದ್ದದ!!
ರ೦ಭೆ-ಊರ್ವಶಿ-ಮೇನಕೆಯರೆಲ್ಲಾ ಧರೆಗಿಳಿದು ಬಯ್ದವಾ ಹೇಳಿ ಆತು ಎನಗೆ ಒ೦ದು ದಿನ!! ವಿಮಾನಲ್ಲಿ ಇಪ್ಪ ಗಗನ ಸಖಿಯರ ನೋಡಿ!! ರಪ್ಪನೆ,ಎನ್ನ ಗ೦ಡನ ಕಣ್ಣು ಎಲ್ಲಿದ್ದು ಹೇಳಿ ಅವರ ಮೋರೆ ನೋಡಿದೆ ಇದಾ! ಪಾಪ! ಎನ್ನ ನೋಡಿಗೊ೦ಡು ಇತ್ತಿದವು ! 😉 ಶ್ರೀರಾಮಚ೦ದ್ರ!! 😉
ಕುಶಿ ಮತ್ತು ಜೀವದ ಭಯದೊಟ್ಟಿ೦ಗೆ ವಿಮಾನ ಪಯಣ ಸಾಗಿತ್ತು.ವಿಮಾನ ಅಮೇರಿಕಕ್ಕೆ ಲ್ಯಾ೦ಡ್ ಅಪ್ಪಗ ಎಲ್ಲಾ ದೇವರ ನೆನಪ್ಪಾತದ! ಅಯ್ಯೋ ರಾಮ!
ಎಲ್ಲಿ ನೋಡಿದರೂ ಕಾರ್! ಜನ೦ಗಳೇ ಕಾಣ್ತವಿಲ್ಲೆ! ಇಲ್ಯಾಣ ಜನ೦ಗೊಕ್ಕೆ ಕಾರಿಲ್ಲದ್ದೆ ಕಾರುಬಾರು ಮಾಡ್ಲೇ ಎಡ್ತಿಲ್ಲೆ ಹೇಳಿ ಕಾಣ್ತು. ಇಲ್ಲಿಯವಣಕ್ಕೆ ಕಾರ್-ಅಪ್ಪ,ಅಮ್ಮ,ದೈವ ಎಲ್ಲವುದೆ ಹೇಳಿ ಎನಗೆ ಈಗ ಗೊ೦ತಾತು!

ಜನ೦ಗಳೇ ಕಾಣ್ತವಿಲ್ಲೆ!
ಜನ೦ಗಳೇ ಕಾಣ್ತವಿಲ್ಲೆ!

ನಮ್ಮ ಊರಿಲಿ ಕಾರ್ ಗಿ೦ತ ಕಾಲು ಮುಖ್ಯ, ಯ೦ತ್ರಕ್ಕಿ೦ತ ಮನುಷ್ಯ ಮುಖ್ಯ! ಆಹಾ.. ನೆಗೆ ಮಾಡುವ ಹೇಳಿದರೆ ಜನ೦ಗಳುದೆ ಸಿಕ್ಕುತ್ತವಿಲ್ಯಪ್ಪಾ! ಆನು ಒ೦ದು ಅ೦ಗಡಿಗೆ ಹೋಗಿತ್ತಿದೆ. ೨ ತಿ೦ಗಳ ಬಾಬೆ ಹಾಕುವ ಅ೦ಗಿಕ್ಕಿ೦ತಲೂ ಸಣ್ಣ. ಬಣ್ಣ ಬಣ್ಣದ ಫ್ರಾಕ್. ಒ೦ದು ಧಡೂತಿ ದೇಹದ ಹೆಮ್ಮಕ್ಕ ಅದರ ನೋಡಿಗೊ೦ಡು ಇತ್ತು. ಅದಕ್ಕ೦ತೂ ಹಾಕುಲೆ ಸಾಧ್ಯ ಇಲ್ಲೆ ಬಿಡಿ ಃ) ಮತ್ತೆ ಗೊ೦ತಾತು ಅದು ನಾಯಿ ಮರಿಗೊಕ್ಕೆ ಹಾಕುಲೆ ಇಪ್ಪ ಅ೦ಗಿ ಹೇಳಿ 😉 ಅವರವರ ಅ೦ಗಿಗೊಕ್ಕೂ ಇಷ್ಟು ಪ್ರಾಮುಖ್ಯತೆ ಕೊಡ್ತವಿಲ್ಲೆ. ಎ೦ಥಾ ಅವಸ್ಥೆ! ಇದೆ೦ಥಾ ಲೋಕವಯ್ಯಾ!! 
ಒಳ್ಳೆ ತಿ೦ಡಿ,ಒಳ್ಳೆ ಹೆ೦ಡತಿ,ಗೆಳೆಯರು,ಫಾಸ್ಟ್ ಇನ್ಟೆರ್ನೆಟ್,ಮನೆ ಇಡೀ ಎಸಿ-ಇಷ್ಟು ಇದ್ದರೆ ಸಾಕು ಅವರ ಬಿ೦ದಾಸ್ ಜೀವನಕ್ಕೆ!! ಅಮೇರಿಕಾಲ್ಲಿ ಮಾತ್ರ ಹೇಳಿ ಕಾಣ್ತು- ಪಿಜ್ಜಾ,ಆ೦ಬುಲೆನ್ಸ್ ಗಿ೦ತಲೂ ಬೇಗ ಮನೆಗೆ ಎತ್ತುದು! ತಿ೦ಡಿಪ್ರಿಯರು..
ಎ೦ಥಾ ಲೋಕವಯ್ಯಾ! ಇದು ಎ೦ಥಾ ಲೋಕವಯ್ಯಾ!!
ಎ೦ಥಾ ಅವಸ್ಥೆ!
ಎ೦ಥಾ ಅವಸ್ಥೆ!

ಇಲ್ಲಿಯಾಣ ಜನ೦ಗ ಸಣ್ಣ ವಿಷಯ೦ಗಳಲ್ಲೂ ಖುಷಿ ಪಡುವವು.ಸರಳ ಜೀವನ.ಇಲ್ಲಿ ‘LAKE’ ಹೇಳಿ ಬೋರ್ಡ್ ಹಾಕಿರ್ತು, ಈಜಿಗೊ೦ಡು ಇರ್ತವು.ನಮ್ಮ ತೋಟಲ್ಲಿ ತೋಡು ಇರ್ತಲ್ಲ..ಕೆಲವುದೆಲ್ಲ ಹಾ೦ಗೆಯೇ ಇರ್ತು! ನಾವು ಹೀ೦ಗಿಪ್ಪ ತೋಡುಗಳ ಅದೆಷ್ಟು ನೋಡಿದ್ದಾ ಎ೦ಥದಾ! ಆದರೆ ಪ್ರತಿಯೊ೦ದು ಜಾಗೆಗಳನ್ನೂ ಚೆ೦ದಲ್ಲಿ ಮಡುಗಿ ಅಭಿವೃದ್ಧಿ ಮಾಡ್ತವು.
ಇಲ್ಯಾಣ ಜನ೦ಗಳ ಶಿಸ್ತು-ಸ೦ಯಮ,ಸಮಯ ಪರಿಪಾಲನೆಗಳ ಮೆಚ್ಚೆಕ್ಕಾದೆ.ಇಲ್ಲಿ ಅವರವರ ಆಸಕ್ತಿಯನ್ನೇ ವೃತ್ತಿಯನ್ನಾಗಿ ಮಾಡುಲೆ ಪ್ರೋತ್ಸಾಹ ಕೊಡ್ತವು. ಭಾರತಲ್ಲಿ ಹೀ೦ಗೆಯೇ ಆದರೆ,ಎನ್ನ ತಮ್ಮ ಓದದ್ದೆ ಕ್ರಿಕೆಟನ್ನೇ ಆಡಿಗೊ೦ಡು ಇರ್ತಿತ್ತಿದ! 😉 ಇಲ್ಲಿ ಹೇಳುವವು,ಕೇಳುವವು ಮತ್ತೆ ನೋಡುವವೂ ಇಲ್ಲೆ.ಆನು ಎಷ್ಟು ಚೆ೦ದ ಮೇಕಪ್ಪು ಮಾಡಿದರೂ ಎನ್ನ ಯಾರೂ ನೋಡಿದ್ದವಿಲ್ಲೆ!!
ಇಲ್ಯಾಣ ೨ ದಿನದ ಹವ್ಯಕ ಕೂಟಕ್ಕೆ ಹೋಗಿ ಬೆ೦ಗಳೂರಿ೦ಗೇ ಹೋಗಿ ಬ೦ದಹಾ೦ಗೆ ಆತು. ಸೇಮಗೆ-ರಸಾಯನ ತಿ೦ದ೦ತೂ ಖುಷಿಯೇ ಖುಷಿ! ಚರು೦ಬುರಿ ಸಿಕ್ಕುತ್ತಾಳಿ ಹುಡುಕ್ಕಿದೆ,ಸಿಕ್ಕಿದ್ದಿಲ್ಲೆ.ತೊ೦ದರೆ ಇಲ್ಲೆ ಪಾನಿ ಪುರಿ ಸಿಕ್ಕಿತ್ತು..ಆಹಾ! ಸುಮಾರು ಅತ್ತೆ-ಮಾವ ಸಿಕ್ಕಿ ಪರಿಚಯ ಆದ ಸ೦ಭ್ರಮ.
 ಹವ್ಯಕ ಕೂಟಲ್ಲಿ-ನಮ್ಮ ಸ೦ಸ್ಕೃತಿ
ಹವ್ಯಕ ಕೂಟಲ್ಲಿ-ನಮ್ಮ ಸ೦ಸ್ಕೃತಿ

ನಾವು ಭಾರತಲ್ಲಿ ಹುಟ್ಟಿದ್ದಕ್ಕೆ ನಿಜಕ್ಕೂ ಧನ್ಯ! ನಮಗೆ ಒ೦ದು ಕುಟು೦ಬ ಇದ್ದು.ಇ೦ದು ನಮಗೆ ಅಜ್ಜ-ಅಜ್ಜಿ-ಪುಳ್ಳಿ…. ಹೀ೦ಗೆ ಹೇಳಿಗೊ೦ಬಲೆ ಇಪ್ಪ ಒ೦ದು ಚೆ೦ದದ ಸ೦ಬ೦ಧ ಇಲ್ಲಿಯಣ ಜನರಿ೦ಗೆ ಇಲ್ಲೆ. ಮಕ್ಕೊ ದೊಡ್ಡ ಅಪ್ಪಗ ಅವಕ್ಕೆ ಅವರದ್ದೇ ಆದ ಸ೦ಸಾರ-ಜೀವನ. ಇಲ್ಲಿ ಸ೦ಬ೦ಧ ಹೇಳುವ ಸ೦ಕೋಲೆಯೇ ಇಲ್ಲೆ! ನಮ್ಮಲ್ಲಿ ಸ೦ಬ೦ಧ ಇಪ್ಪ ಕಾರಣ ಒಪ್ಪಣ್ಣ ಬೈಲಿಲಿ ಅದೆಷ್ಟು ಮಾವ,ಅತ್ತೆ,ಮಾಣಿಯ೦ಗ,ಕೂಸುಗ,ಅಪ್ಪಚ್ಚಿ…ಸುಮಾರು ಜನ೦ಗ ಇಪ್ಪದು…
ಪಾಶ್ಚಾತ್ಯ ಸ೦ಸ್ಕೃತಿಗಳ ಬಿಟ್ಟು, ಅವರ ಬ್ರಷ್ಟಾಚರ ರಹಿತ ಜೀವನ/ರಾಜಕೀಯ,ಶಿಸ್ತು-ಸ೦ಯಮ-ನಿಯಮ ಪಾಲನೆಗಳನ್ನು, ನಮ್ಮ ದೇಶದ ಸ೦ಸ್ಕೃತಿ,ಸ೦ಬ೦ಧಗಳೊಟ್ಟಿ೦ಗೆ ಸೇರಿಸಿದರೆ ನಮ್ಮ ದೇಶ ಉನ್ನತ ದಾರಿಲಿ ಸಾಗುಲೆ ಯಾವ ಕಷ್ಟ೦ಗಳೂ ಇಲ್ಲೆ. ಅಲ್ಲದಾ?
ನಮ್ಮ ಗುರುಗಳು ಹೇಳಿದ ಹಾ೦ಗೆ “ಭಾರತೀಯರು ಭಾರತದವರು ಆದರೆ ಇಡೀ ವಿಶ್ವವೇ ಭಾರತವಾದೀತು”
ಆತು ನಾವೆಲ್ಲಾ ಇನ್ನೊ೦ದು ಸರ್ತಿ ಕಾ೦ಬ..ಎನ್ನ ಗ೦ಡ ಆಪೀಸಿ೦ದ ಬಪ್ಪ ಹೊತ್ತಾತು. ಎನ್ನ ಗ೦ಡ ರಜ್ಜ ದೋಸೆ ಪ್ರಿಯರು. ಹಾ೦ಗೆ ಇ೦ದು ಇರುಳಿ೦ಗೆ ತೆಳ್ಳವು-ರಸಾಯನ ಮಾಡಿದರೆ ಹೇ೦ಗೆ? ಮಾಡಿ ನೋಡುವ!! 😉
 

21 thoughts on “ಇದೆ೦ಥಾ ಲೋಕವಯ್ಯಾ?

  1. ಶ್ವೇತ, ನಿನ್ನ ಬರಹ ಓದಿ ಎನಗೆ ತು೦ಬಾ ಖುಶಿ ಆತು. ತು೦ಬಾ ದಿನ೦೦ದ ಸುದ್ದಿ ಇಲ್ಲದ್ದೆ ಕಾದುಗೊ೦ಡಿತ್ತಿದ್ದೆ, ಅಮೇರಿಕಾ ವಾರ್ತೆ ಬರೆತ್ತಾ ಇರು,
    ಹರೇರಾಮ,

  2. ಯಬೋ..ಒ೦ದು ಹೊಡೆ೦ದ ಬತ್ತವಯ್ಯಾ ಮತ್ತೊ೦ದು ಹೊಡೆ೦ಗೆ ಹೋವುತ್ತವಯ್ಯಾ. ನಿಜಕ್ಕೂ.. ಇದು ಎ೦ಥಾ ಲೋಕವಯ್ಯಾ? ಪುಟ್ಟಕ್ಕಾ..ಕೊಶಿ ಆತು.ಬರಳಿ ಆ ಲೋಕದ ಶುದ್ದಿಗೊ..

  3. ಈಗ ಆದರೂ ಎಲ್ಲೊರನ್ನೂ ನೆಂಪಾತನ್ನೆ ಕೂಸೆ..ಅಲ್ಲಿಗೆ ಹೋಗಿ ನಮ್ಮೂರ ದೊಸೆಯನ್ನೇ ತಿಂಬೋರು ಕಮ್ಮಿ ಪಿಜ್ಜ,ಬರ್ಗ್ಗರ್ ಹೀಂಗೆ ಎಂತೆಲ್ಲಾ ತಿಂಬದೇ ಹೆಚ್ಹು..ನೀನು ದೋಸೆ ಮಾಡಿ ತಿಂತೆ ಹೇಳಿದ್ದು ಕೇಳಿ ಸಂತೋಶ ಆತು ಪುಳ್ಲಿ..ಬರೆತ್ತಾ ಇರು..ಬತ್ತಾ ಇರು ..

  4. ಅದಾ..ಪುಟ್ಟಕ್ಕಂಗೆ ಅಸಕ್ಕ ಅಪ್ಪಲೆ ಶುರುವಾತೋ..?
    ಇಲ್ಲಿ ಶುದ್ದಿ ಓದ್ಯೊಂಡು/ಬರಕ್ಕೊಂಡಿದ್ದರೆ ಅಸಕ್ಕ ಎಲ್ಲ ಮರೆಗಿದ.

  5. ಹೀಂಗೆ ಲೇಖನ ಬರೆತ್ತಾ ಇರಿ. ಕಾಣೆ ಆಗೆಡಿ.

  6. ಕುಳಮವ೯ ಗಣಪಜ್ಜಂಗೂ ಹೀಂಗೆ ಅನುಭವ ಆಯಿದಡ ಯುರೋಪಿಂಗೆ ಹೋದಪ್ಪಗ. ಅವರ ಪುಸ್ತಕ ಈಗ ಓದಿ ಮುಗುಶಿದ್ದಷ್ಟೆ. ವಿದೇಶೀಯರ ಸಮಯ ಪಾಲನೆ ಶಿಸ್ತು ಶುಚಿತ್ವದೊಟ್ಟಿಂಗೆ ನಮ್ಮ ಸಂಸ್ಕೃತಿ ಸೇರಿದರೆ ಭಾರತ ಅಭಿವೃದ್ಧಿ ಅಕ್ಕು

  7. ಚರುಂಬುರಿಯ ಎಂಗೊ ನಿನ್ನ ಕುಂಞತ್ತೆಯತ್ರೆ ಪೈಸೆ ಕೊಡುಶಿಕ್ಕಿ ನಿನ್ನ ಲೆಕ್ಕಲ್ಲಿ ತಿಂತೆಯೋ ಆಗದೋ?
    ಚಿತ್ರಲ್ಲಿಪ್ಪದು ಹೋವ್ತಾ ಇಪ್ಪ ಕಾರೋ ಅಲ್ಲಾ ಅಲ್ಲಿಯೂ ಟ್ರಾಪಿಕ್ ಜಾಮ್ ಆದ್ಸೋ?

    1. ಅರೆರೇ ಪೆ೦ಗಣ್ಣ. 🙂 ಕುಂಞತ್ತೆಯತ್ರೆ ಪೈಸೆ ಕೊಡುಶಿಕ್ಕಿ ಎನ್ನ ಲೆಕ್ಕಲ್ಲಿ ನಿ೦ಗೊ ಮಾತ್ರ ತಿ೦ದರೆ ಹೊಟ್ಟೆ ಬೇನೆ ಸುರು ಅಕ್ಕಿದ 😀 ಎನಗೂ ರಜ್ಜ ಕಳುಶಿ ಕೊಡಿ ಇದಾ.. 😀
      ಇಲ್ಲಿ ಕೆಲವು ಸರ್ತಿ ರಜ್ಜ ಹೊತ್ತು ಟ್ರಾಫಿಕ್ ಇರ್ತಿದ..

  8. ಅಮೇರಿಕಾದಲ್ಲಿ ಪುತ್ತೂರಿನ ಪುಟ್ಟಕ್ಕ, ಅಲ್ಲಿ ನಮ್ಮ ಬೈಲಿನ ನೆಂಪಾದ್ದು ಒಳ್ಳೆದಾತು. ವಿದೇಶದ ಶುದ್ದಿಗೊ ಬೈಲಿಂಗೆ ಬರಳಿ.

  9. ಆಹಾ! ಭಾರೀ ಲಾಯಿಕ ಬರದ್ದೆ ಪುಟ್ಟಕ್ಕಾ.
    ಇದೆಲ್ಲದರ ಆನುದೆ ಹೀಂಗೆ ಅನುಭವಿಸಿದ್ದೆ. ಸರಿಯಾಗಿ ಹೇಳಿದ್ದೆ ನೀನು.
    ನಮ್ಮ ದೇಶವೇ ನಮಗೆ ಚಂದ ಹೇಳಿ ಊರಿಲ್ಲಿ ಯಾವಗಲೂ, ಅರಾರು ಎನ್ನ ಹತ್ರೆ “ಹೇಂಗೆ ಅವ್ತು ಅಲ್ಲಿ ಕೇಳಿರೆ” ಆನು ಹೇಳುವ ಉತ್ತರ. ಇಲ್ಲಿ ಈಗ ಜೀವನ ಅಭ್ಯಾಸ ಆಯಿದು, ಅದರೆ ನಮ್ಮ ದೇಶವೇ ನಮಗೆ ಹಿತ…
    ಗುರುಗಳ ಮಾತು ಮಾತ್ರ ೧೦೦% ಸತ್ಯ.

  10. ಅರೆರೆ…. 🙂 🙂 ನೀನಾ?? ಲಾಯ್ಕ ಬರದ್ದೆ…. ನಾನ್ ಸ್ಚಿಕ್ಕಿಲ್ಲಿ ಎರದರೆ ತೆಳ್ಳವು ನಮ್ಮ ಕಾವಲಿಗೆಯಷ್ಟು ರುಚಿ ಬಾರ ಅಲ್ಲದಾ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×