ಜನ ಮರುಳೊ, ಜಾತ್ರೆ ಮರುಳೊ??

November 8, 2010 ರ 10:50 amಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜನ ಮರುಳೊ, ಜಾತ್ರೆ ಮರುಳೊ??

ಎಲ್ಲಾ ಓದುಗರಿ೦ಗು ಎನ್ನ ನಮಸ್ಕಾರ….. ದೀವಾವಳಿ ಎಲ್ಲರೂ ಲಾಯಕೆ ಆಚರಿಸಿದಿರೊ?? ಪಟಾಕಿ  ಹೋಟ್ಟುಸಿ ಹೊಗೆತು೦ಬ್ಸಿದಿರೊ?? :) ಕರ್ಮದ ವಾಹನ೦ಗಳ ಹೊಗೆ ಸಾಲ ಹೇಳಿ ಈ ಪಟಾಕಿ ಹೊಗೆಯೂ ಒಟ್ಟಿ೦ಗೆ ಸೇರಿ ಬೆ೦ಗ್ಳೂರಿಲ್ಲಿ ಊಸಿರಾಡ್ಲೆ ಕಷ್ಟಾ ಹೇಳಿ ಅನು ಊರಿ೦ಗೆ ಹೊದೆ…

ಹಾ… ಊರು ಹೇಳಿಯಪ್ಪಗ ಅನು ಒ೦ದು ಸಣ್ಣ ಸನ್ನಿವೇಶ ಹೇಳ್ತೆ.. ಮೂರು ತಿ೦ಗಳ ಕೆಳ ಅನು ಊರಿ೦ಗೆ ಹೋಪಲೆ ಹೆರಟಿತ್ತೆ, ಸಾಲು ರಜೆ ಇತ್ತು..

ಯೊ ಈ ಬೆ೦ಗ್ಳೂರಿನ ವಾಹನಗಳ ಹೇಳಿ ಸುಖಯಿದ್ದೊ?? ಸೆಟಿಲೈಟು ಬಸ್ಸು ಸ್ಟೇ೦ಡು ಯೆತ್ತೆಕಿದಾ, ಹಾ೦ಗೆ ಎರಡು ವರೆ ಗ೦ಟೆ ಮೊದ್ಲೆ BMTC ಬಸ್ಸು ಹತ್ತಿದೆ… ಮಾರ್ಗಪುರಾ ತು೦ಬಿದ್ದು… 10:30 ರ ಬಸ್ಸಿ೦ಗೆ, 10:20 ಕ್ಕೆ ಎತ್ತಿದೆ.. ಗಡಿಬಿಡಿಲಿ ಬಸ್ಸು ಸಿಕ್ಕಿತ್ತಿದಾ ಅ೦ದು…. ಹಾ೦ಗೆ ಹೇಳಿ ಆನು, ಮೊನ್ನೆ ಶುಕ್ರವಾರ 29 ದಕ್ಕೆ ರಾಜ್ಯೋತ್ಸವ ಮತ್ತೆ ದೀಪಾವಳಿಯ  ಸಾಲು ರಜೆ ಇದ, ಅದಕ್ಕೆ ಅನು 11:15 ರ ಬಸ್ಸಿ೦ಗೆ, 8 :00 ಟಕ್ಕೆ ಹೇರಟೆ… BMTC ಬಸ್ಸು ಹತ್ತಿದೆ, ಪುಣ್ಯ ಸೀಟು ಸಿಕ್ಕಿತು… ಕೈತೊರ್ಸಿದಲ್ಲಿ ಎಲ್ಲಾ ನಿಲ್ಲುಸಿ, ಜೆನ ತು೦ಬ್ಸಿದೇ  ತು೦ಬ್ಸಿದು ಕ೦ಡೆಕ್ಟ್ರಾ .. ಹಾ೦ಗು ಹೀ೦ಗು ರಿಚ್ಮ೦ಡ್  ಎತ್ತಿತ್ತು, ಸುರುವಾತದಾ… ಸಾಲು BMTC ಬಸ್ಸುಗೊ, ಬೈಕುಗೊ,ಕಾರುಗೊ, ಒಟ್ಟಿ೦ಗೆ ಎಡಕ್ಕಿಲಿ ಆನು ಇದ್ದೆ ಹೇಳಿ ಒ೦ದು ಸಾವಿರ ರಿಕ್ಷ೦ಗೊ…   ಒ೦ದಾರಿ ಪಚ್ಚೆ, ಒ೦ದಾರಿ ಕೆ೦ಪ್ಪು , ಹಾ೦ಗೆ ಒ೦ದು ಅಡಿ ಮು೦ದೆ ಹೊಪದು, ನಿ೦ಬದು… ಹಾಗೇ ಆತು… ಬಸ್ಸು ಕು೦ಟೆ೦ಡು ಕು೦ಟೆ೦ಡು ಕೋರ್ಪರೇಶನು ಎತ್ತಿತು.. ಅಯ್ಯೊ!!! ಇಲ್ಲಿ ವಾಹನ೦ಗಳ ಮಹಾ ಸಾಗರ… ಬಸ್ಸು ಹೊಪ ವೇಗನೊಡಿರೆ, ಒ೦ದು ಆಮೆ ಮಾತ್ರ ಅಲ್ಲಾ ಹಿಸ್ಕು ಹಿ೦ದೆ ಹಾಕುಗು,  ಒಳ ಸೀಟಿಲ್ಲಿ ಕೂದ ಜನರಿ೦ಗೆ ಬೇಶಿಯಪ್ಪಲೆ  ಸರುವಾತದ…. ಕೆಲವು, ಬಸ್ಸು ಇಳುದು ನೆಡಕೊ೦ಡು ಹೊದವು, ಮತ್ತೆ ಎನ್ನ ಹಾ೦ಗೆ ಕಟ್ಟ, ಚೀಲ ತ೦ದವು ಸುಮ್ಮನ ಕೂದವು.. ಟಿಕೇಟ್ ಕೇಳಿ ಕೇಳಿ ಬೊಡುದ ಕ೦ಡೆಕ್ಟ್ರಾ, ಎನ್ನ ಹತ್ರೆ ಬ೦ದುಕೂದತ್ತು… ಟಿಕೇಟು ಕೊಟ್ಟು ಬಚ್ಚಿತ್ತಡ ಪಾಪ…

ಆನು ಕೇಳಿದೆ- “ ರಜೆ ಬ೦ದ್ರೆ ಭಾರಿ ಟ್ರಾಫಿಕ್ ಜಾಮ್ ಆಗ್ತದೆ ಅಲ್ವಾ?? “,

ಅಷ್ಟಪ್ಪಗ, ಕ೦ಡೆಕ್ಟ್ರಾ- “ಯಾಕಾದ್ರು ಈ ರಜೆಗಳು ಬರ್ತದೊ ಅನ್ನಿಸುತ್ತೆ ಸಾರ್”

ಆನು- “ ಹ ಹ ಹ.. ನೀಮಿಗೆ ಬಾರಿ ಕಷ್ಟ ಅಲ್ಲಾ” ಹೇಳಿದೆ.

ಕ೦ಡೆಕ್ಟ್ರಾ-” ಅಯ್ಯೊ ಏನು ಕೇಳ್ತಿರ ಸಾರ್, ಇದು ಎಲ್ಲ ನೋಡಿ ನಾನು ಯಾಕಾದ್ರು ಬೆ೦ಗ್ಳೊರಿಗೆ ಬ೦ದೆ ಅನ್ಸೊತ್ತೆ … ಇಲ್ಲಿ ಬ೦ದು ನನ್ನ ಜೀವನದ ನೆಮ್ಮದಿ ಕಳ್ಕೊ೦ಡು ಬಿಟ್ಟಿದಿನಿ ಸರ್…!!! “ ಹೇಳಿ ಹೇಳಿತ್ತು ….

ಅ೦ತು ಇ೦ತು ಬಸ್ಸು  ಸಮಯಕ್ಕೆ ಎತ್ತಿತ್ತು ಅನು  ಬಸ್ಸು ಹತ್ತಿ ಊರಿ೦ಗೆ ಹೆರಟೆ….!!

BMTC ಬಸ್ಸುಗೊ..
BMTC ಬಸ್ಸುಗೊ..

ಹಾ.. ಒ೦ದು ಎರಡು ನಿಮಿಶ, ಎಲ್ಲ ಆಲೊಚನೆ ಬಿಟ್ಟು ಎರಡು ಪದದ ಬಗ್ಗೆ  ನಾವು ರಜಾ ಚಿ೦ತನೆ ಮಾಡುವೊ ಅಕ್ಕಾ?  ಕ೦ಡೆಕ್ಟ್ರಾ ಆ ಮಾತು- “…… ನೆಮ್ಮದಿ ಕಳ್ಕೊ೦ಡೆ….”

ನಾವು ಜೀವನಲ್ಲಿ ಮು೦ದೆ ಬರೆಕು ( ಎಷ್ಟು ಮು೦ದೆ ಎನಗೊ೦ತ್ತೆಲ್ಲೆಪ್ಪಾ) , ತು೦ಬ “ಪೈಸೆ” ಮಾಡಿ ಮಡುಗೆಕು ( ಉಮ್ಮಪ್ಪ ಆರಿ೦ಗೆ ಮಾಡಿ ಮಡಗುದೊ ಗೊ೦ತಿಲ್ಲೆ ) , ಸುಖಲ್ಲೆ  ಆರಾಮಲ್ಲಿ ಜೀವನ ನಡಶೆಕು, ಮನೆ ಬೇಕು, ಕಾರು ಬೇಕು, ಅದು ಬೇಕು ಇದು ಬೇಕು, ಹಾ೦ಗೆ ಆಯೆಕು, ಹೀ೦ಗೆ ಇರೆಕು… ಈ ಪಟ್ಟಿ ಮುಗಿಯ ಅಲ್ಲದೊ???

ಮನುಷ್ಯ, ಸಣ್ಣಗಿಪ್ಪಗ ಯಾವದೇ ರೀತಿಯ ಬಯಕೆ, ದುರಾಸೆ ಇರ್ತಿಲ್ಲೆ. ತಾನು ಬೇಳೆತ್ತ ಹಾ೦ಗೆ, ತನ್ನ ಸುತ್ತಲಿನ ಜನ, ಪರಿಸರ, ವಾತವರಣ ಹಾ೦ಗೆ ಮಾಡ್ತೊ ಎನೊ?? ಇ೦ದ್ರಾಣ ಜಗ್ಗತ್ತಿಲಿ ಮನುಷ್ಯ ಎಷ್ಟು ಸಿಕ್ಕಿರು ಕಮ್ಮಿ, ಇನ್ನು ಬೇಕು ಮತ್ತು ಬೇಕು ಹೇಳಿ ಆಸೆ  ಮಾತ್ರ ಅಲ್ಲ, “ದುರಾಸೆ” ಮಡ್ತ ಮನುಷ್ಯ.

ಈ ನಿಟ್ಟಿಲ್ಲಿ, ಪೇಟೆ ಹತ್ತುವುದು ಒ೦ದೆ ದಾರಿ ಹೇಳಿ, ಎಲ್ಲ ಬಿಟ್ಟಿಕಿ ಪೇಟೆ ಹತ್ತುತ್ತಾ ಇದ್ದಾ…

ಹಾ ಆದರು ಒ೦ದು ಮಾತು ಸತ್ಯ.. ಇ೦ದ್ರಾಣ ದಿನ ಒ೦ದು ಕಿ.ಲೊ ಅಕ್ಕಿ ತರೆಕಾರು ೩೦-೪೦ ರು ಆಯಿದು.. ತರಕಾರಿ ಕಿ.ಲೊ ೧೫ ಕಮ್ಮಿ  ಸಿಕ್ಕಾ… ಹಾಲು ಲೀ. ೧೯ ರು..

ಇದಕ್ಕೆ ಎಲ್ಲಾ “ ಪೈಸೆ “ ಬೇಕಿದಾ…. ಸುಮ್ಮನೆ ಆವುತ್ತೊ???

ಮೊದ್ಲಾದರೆ, ಮನೆಲಿ ಎಜಮಾನ ತೋಟಲ್ಲೆ ತರಕಾರಿ, ಬತ್ತ ಬೆಳಶುಗು… ಈಗಾ ಅದು ಕಮ್ಮಿಯಾಯಿದು ಹೇಳುವೊ.. ಕ್ರಮೇಣ ಅದು ನಿ೦ಗು…. ಅದು ಮು೦ದಾಣ ಮಾತು ಇರ್ಲ್ಲಿ ಅಪ್ಪಗ ನೋಡೊ ಈಗ ಬೇಡ…  “ಹಳ್ಳಿ ಬಿಟ್ಟು ಪಟ್ಟಣೆ ಸೇರು, ಪಟ್ಟಣ ಬಿಟ್ಟು ವಿದೇಷ ಸೇರು ”  ಹೇಳಿಯೆ ಮನ್ನಸ್ಸಿ೦ಗೆ ಅಡರಿ ಹೊಯಿದು ಜನ೦ಗೊಕ್ಕೆ …ಕಾರಣ- “ ಪೈಸೆ ”. ಪಾಪ, ಜನರ ಹೇಳಿ ಸುಖ ಇಲ್ಲೆ…  ಇಗಾಣ ಕಾಲ್ಲಲಿ, ಬೆ೦ಗ್ಳೂರಿಲ್ಲಿ ಸ೦ಸಾರ ನಡಶೆಕಾರೆ, ಎಷ್ಟು

ಪೇಟೆ ಹತ್ತಿದ.. ಜನ ರಾಶಿ..
ಪೇಟೆ ಹತ್ತಿದ.. ಜನ ರಾಶಿ..

” ಇದ್ದರು ಸಾಲ….!

ಆದರೆ, ಒ೦ದು ಮಾತು ಸತ್ಯ ಪೇಟೆಯಾಗಲಿ, ಹಳ್ಳಿಯಾಗಲಿ, ವಿದೇಷಾ ಆಗಲಿ.. ಕೃಷಿ ಮಾಡುವ ರೈತನೆ ದೇಶದ ಬೆನ್ನೆಲುಬು… ಪೇಟೆ ಜೇವನ೦ದ ಹಳ್ಳಿ ಜೀವನವೆ ಸಾವಿರ ಪಾಲು ಮೇಲು… ಇ೦ದು ಪೇಟೆಗೆ  ಜನಸಾಗರವೆ ಹರಿದು ಬತ್ತು…  ಇದರಿ೦ದ, ಹಳ್ಳಿಲಿ ಕೃಷಿ ಮಾಡುವ ರೈತರ ಸ೦ಕೆ ಕಮ್ಮಿಯಾವುತ್ತಾ ಇದ್ದು.. ಮು೦ದೆ ಇನ್ನು ಕೆಲ ವರ್ಷಲ್ಲಿ ಹಳ್ಳಿಲಿ, ತೋಟ, ಗೆದ್ದೆ, ಎಲ್ಲಾ- ದುಬೈ೦ದ “ಪೈಸೆ” ಮಾಡಿಕೊ೦ಡು ಬ೦ದವಕೆ ಮಾರಿ ನಾವು ಪೇಟೆ ಹತ್ತುತು ಅಲ್ಲದೊ??

ಒ೦ದೊ೦ದಾರಿ ನಮ್ಮ ಕ೦ಡೆಕ್ಟ್ರಾ ಆ ಮಾತು- “…… ನೆಮ್ಮದಿ…”,  ಸಿಕ್ಕೆಕಾರೆ ನಮ್ಮ ಹಳ್ಳಿ ಜೀವನ ವೆನೊ ತೊರುತ್ತು  ??

ಬೆ೦ಗ್ಳೊರ೦ತಾ ಪೇಟೆಲಿ ಆಚ ಮನೆಲಿ ಆರು ಇದ್ದ ಹೇಳಿ ಸಾನು ಗೊ೦ತ್ತಿಲ್ಲೆ…. ಗುರ್ತದವು ಕಮ್ಮಿ, ಆರನ್ನು ನ೦ಬುವ ಹಾ೦ಗಿಲ್ಲೆ… ಇದ್ದೆಲ್ಲಾ ಪೂರಕವಾಗಿ ಇಪ್ಪ೦ತಾ ಹಳ್ಳಿ ಜೇವನಾ, ಬಿಟ್ಟೆ ಪೇಟೆಗೆ ಬರಿ ಪೈಸೆ ಮೋರೆ ನೊಡಿಗೊ೦ಡು… ಪೇಟೆ ಬೇಕಾ ಹೇಳಿ ಸ೦ಶಯ ಬತ್ತು ??

———————————————————————————–

ಹೀ೦ಗೆಲ್ಲಾ ಚಿ೦ತನೆ ಮಾಡ್ಲಾಗ ಅಲ್ಲದೊ??? ಆನು ಎನ್ನ ಒ೦ದು ಅಬಿಪ್ರಾಯ ಹೇಳಿದ್ದು ಅಷ್ಟೆ… ಯಾವುದೆ ವ್ಯಕ್ತಿ ಅಥವ ಜನರ ಬಗ್ಗೆ ಅಲ್ಲಾ. ಆರಿಗಾರು ಇದು ಓದಿ ಮನಸ್ಸಿ೦ಗೆ ಬೇಜಾರು ಉ೦ಟ್ಟು ಮಾದಿರೆ ದಯವಿಟ್ಟು ಕ್ಷಮಿಸಿ.

ಆದರೆ, ಆ ಕ೦ಡೆಕ್ಟ್ರು ಸಿಕ್ಕಿದು ಸತ್ಯ… ಅದು ಹೇಳಿದ್ದು ಸತ್ಯ.. ಮು೦ದೊ೦ದು ದಿನ ಹಳ್ಳಿಲಿ ಜನ ಎಲ್ಲವುದೆ, ದುಬೈ೦ದ ಬ೦ದ ಜನರಿ೦ಗೆ ಮಾರಿ ಪೆಟೆ ಹತ್ತುದು ಹೆಚ್ಚಗಲಾಗ….

ಕೃಷಿಗೆ ಜನ ಪ್ರಾಮುಕ್ಯತೆ ಕೊಡೆಕು, ಕೃಷಿಕರಿ೦ಗೆ ಜನ, ಸರ್ಕಾರ ಬೆ೦ಬಲ್ಸೆಕು.

ತೆ೦ಗಿನ ತೊಟ ಮತ್ತೆ ಗೆದ್ದೆ
ತೆ೦ಗಿನ ತೊಟ ಮತ್ತೆ ಗೆದ್ದೆ

ನಾವು ನೆಮ್ಮದಿಯಾ  ನಮ್ಮಲ್ಲಿಯೇ ಕ೦ಡುಕೊ೦ಬೊ, ಪೇಟೆಯ ಬದುಕಿ೦ದ ನಮ್ಮ ನೆಮ್ಮದಿ ಹಾಳಪ್ಪಲಾಗ ಅಲ್ಲದೊ…..

———————————————————————————–

ಚುಬ್ಬಣ್ಣ  :)

ಜನ ಮರುಳೊ, ಜಾತ್ರೆ ಮರುಳೊ??, 4.2 out of 10 based on 5 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಪುಟ್ಟಬಾವ°
  ಪುಟ್ಟಭಾವ ಹಾಲುಮಜಲು

  ಚುಬ್ಬಣ್ಣ ! ತಲೆಮೇಲೆ ಹೆಟ್ಟಿದ ಹಾಂಗೆ ಆತು!! ಭಾರೀ ಲಾಯ್ಕಯ್ದು!
  ಪೇಟೇಲಿ ಇಪ್ಪವರ ಜಾಸ್ತಿ ಏರ್ಸಿ ಕೃಷಿ ಮಾಡುವವರ ಇಳಿಶಿದ್ದು ನಾವೇ!! ಹಾಂಗಾಗಿ ಎಲ್ಲರೂ ಪೇಟೇಲಿ ಇಪ್ಪಲೇ ಇಷ್ಟ ಪಡ್ತವು! “ಎಲ್ಲೂ ಸಲ್ಲದವನು ಇಲ್ಲಿ ಸಲ್ಲುವನಯ್ಯಾ” ಹೇಳಿ ಆಯ್ದು ನಮ್ಮ ಹಳ್ಳಿಗೋ!!

  (” ಇದ್ದರು ಸಾಲ….!)

  ಭಾರೀ ಅರ್ಥಪೂರ್ಣ! ಕೈತುಂಬಾ ಇದ್ದರೂ “ಸಾಲದ್ದೆ ‘ಸಾಲ’ ಮಾಡಿ ತುಪ್ಪ ತಿಂಬ ” ಜನನ್ಗೋ ಜಾಸ್ತಿ ಇದಾ!!! 😀

  [Reply]

  VA:F [1.9.22_1171]
  Rating: +3 (from 3 votes)
 2. ಮುಳಿಯ ಭಾವ
  ರಘುಮುಳಿಯ

  ಚುಬ್ಬಣ್ಣನ ಬರಹ ನೋಡಿ ಕೊಶಿ ಆತು, ಒಳ್ಳೆ ವಿಚಾರಂಗೋ.”ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ” ನೆಮ್ಪಾತು.

  [Reply]

  VA:F [1.9.22_1171]
  Rating: +1 (from 1 vote)
 3. ಮೋಹನಣ್ಣ

  ಇಲ್ಲೆ ಅಣ್ಣೊ ಇನ್ನು ದುಬಾಯಿಯವೂದೆ ಹಳ್ಳಿ ಭೂಮಿ ತೆಕ್ಕೊಳವು ಅವಕ್ಕೂ ಕೆಲಸದವರ ಸಮಸ್ಯೆ ಕ್ರುಷಿ ಹೇಳ್ತದು ಮದಲಾಣ ಹಾ೦ಗೆ ಹಾಕಿದ ಪೈಸೆ ಬಡ್ಡಿ ಇಲ್ಲದ್ದೆ ಆದ್ರೂ ವಾಪಾಸು ಬಕ್ಕು ಹೇಳ್ತ ಆಶೆ ಇಲ್ಲದ್ದೆ ಆಯಿದು ಹಾ೦ಗಾಗಿ ಆ ಕ೦ಡೆಕ್ಟ್ರು ಕ೦ಡೆಕ್ಟ್ರ ಹಾ೦ಗಿಪ್ಪವೂ ನೆಮ್ಮದಿ ಕಳಕ್ಕೊ೦ಡರೂ ಪೇಟೇಲೇ ಇರೇಕಷ್ಟೆ.ಎಲ್ಲಿಯೊ ಕೆಲವು ಎ೦ಗಳ ಹಾ೦ಗಿಪ್ಪ ಮುದುಕರು ಅನಿವಾರ್ಯವಾಗಿ ಹಳ್ಳೀಲಿ ನಿಲ್ಲೇಕಷ್ಟೆ. ಮಕ್ಕೊ ಸಾಕು ಹೇಳುವನ್ನಾರ.ಇದು ನಿರಾಶೆ ಅಲ್ಲ ವಾಸ್ತವ.ಆದರೆ ಎಲ್ಲೋರಿ೦ಗೂ ಒ೦ದು ದಿನ ಗೊ೦ತಕ್ಕು ಅ೦ಬಗ ಹಿ೦ದೆ ಬಪ್ಪಲೆಡಿಯದ್ದಷ್ಟು ಮು೦ದೆ ಹೋಗಿ ಆಗಿಕ್ಕು..ಹಾ೦ಗಾಗಿ ಕ್ರುಷಿ ಕ್ರುಷಿ ಭೂಮಿ ಏನಾರು ದ್ಯೆವ ನಿಶ್ಚಯ೦ದಾಗಿ ಒಳಿಯೇಕಲ್ಲದ್ದೆ ಅನ್ಯಥ ಒಳಿತ್ತಿಲ್ಲೆ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: +1 (from 1 vote)
 4. ಗಣೇಶ ಪೆರ್ವ
  ಗಣೇಶ ಪೆರ್ವ

  ಯಾವುದೇ ಸ್ಥಿತಿ ಬ೦ದರೂ, ಎಷ್ಟೇ ಪೈಸೆ ಮಾಡಿಯೊ೦ಡರೂ, ಜೀವ ಉಳಿಯಕಾರೆ ಆಹಾರ ಬೇಕೇ ಬೇಕಲ್ದಾ? ಈಗ ಎಷ್ಟೇ ಕಷ್ಟ ಹೇಳಿ ಆದರುದೆ, ಕೃಷಿ ಉಳಿಸಿಯೊ೦ಡವ ಸೋತುಹೋಗ ಹೇಳುವದು ೧೦೦% ಗ್ಯಾರ೦ಟಿ. (ರಬ್ಬರು, ಅಡಕ್ಕೆ ಕೃಷಿ ಅಲ್ಲ ಆನು ಹೇಳ್ತಾ ಇಪ್ಪದು, ಆಹಾರ ವಸ್ತುಗಳ ಕೃಷಿ.) ನಾವು ಅನುಸರಿಸುತ್ತಾ ಇಪ್ಪ ಸಾ೦ಪ್ರದಾಯಿಕ ರೀತಿಗಳಲ್ಲಿ ಕ್ರಿಯಾತ್ಮಕವಾದ ವ್ಯತ್ಯಾಸ೦ಗೊ ಬೇಕಾಗಿ ಬಕ್ಕು.ಮತ್ತೊ೦ದು ವಿಷಯ – ಕೆಲಸದವರ ಮಾ೦ತ್ರ ಆಶ್ರಯಿಸಿದರೆ ಕೃಷಿಲಿ ಉಧ್ಧಾರ ಅಪ್ಪಲೆ ಕಷ್ಟ ಇದ್ದು. ಕೆಲಸದವರ ಒಟ್ಟಿ೦ಗೆ ನಾವು ಮೈ ಮುರಿದು ಕೆಲಸ ಮಾಡಿರೆ ಮಾ೦ತ್ರ ಉಳ್ಕೊ೦ಬಲೆ ಎಡಿಗಷ್ಟೆ. ಹಾ೦ಗೆ ಯಶಸ್ಸು ಪಡಕ್ಕೊ೦ಡ ಜನ೦ಗೊ ಇಲ್ಲದ್ದೆ ಇಲ್ಲೆ. ಸರಿಯಾದ ಯೋಜನೆ ಇದ್ದರೆ ಇನ್ನು ಜಾಸ್ತಿ ಬೇಡ, ೧೦-೧೫ ವರ್ಷ ಕಳಿವಗ ನಿಜವಾದ ಕೃಷಿಕ೦ಗೆ ಸಿಕ್ಕುತ್ತ ಬೆಳೆ, ಬೆಲೆ ಬೇರೆಯವು ಕ೦ಡು ಹೊಟ್ಟೆಕಿಚ್ಚು ಪಡ್ತ ಹಾ೦ಗೆ ಇಕ್ಕು. ಈಗಾಗಲೇ ದಕ್ಷಿಣ ಭಾರತಲ್ಲಿ ಆಹಾರಧಾನ್ಯದ ಕೃಷಿ ಕಮ್ಮಿ ಆವ್ತಾ ಇದ್ದು. ಕೇರಳದ ಸ್ಥಿತಿ ಕೇಳುವದೇ ಬೇಡ. ನಮ್ಮ ಊರಿಲ್ಲಿಯುದೆ ಈಗ ರಬ್ಬರಿನ ಮೋಹ ಜಾಸ್ತಿ ಅಪ್ಪಲೆ ಸುರು ಆಯಿದು. ನಾವು ಅಡಕ್ಕೆ ಕೃಷಿ೦ದ ಹೆರಬಪ್ಪ ಬಗ್ಗೆ ಯೋಚಿಸಲೆ ಸುರು ಮಾಡೆಕಾದ ಸಮಯ ಆಯಿದು ಹೇಳಿ ಎನ್ನ ಅಭಿಪ್ರಾಯ. ಇದರ ಎಲ್ಲರಿ೦ದಲುದೆ ಹೆಚ್ಚಿನ ವಿಷಯ, ನಾವು ಪ್ರತಿಯೊಬ್ಬನುದೆ ನಾವು ಉ೦ಬ ಆಹಾರ ನಮ್ಮ ತಟ್ಟೆಗೆ ತಲುಪಿಸುತ್ತ ಕೃಷಿಕನ ಎಷ್ಟು ಗೌರವಿಸುತ್ತು, ಅವ ಅನುಭವಿಸುತ್ತ ಕಷ್ಟ೦ಗಳ ಎಷ್ಟು ಅರ್ಥ ಮಾಡ್ಯೊಳ್ತು?(ಮನಸ್ಸಿನ ಒಳದಿಕೆ ಆದರೂ ನೆ೦ಪಾದರೂ ಮಾಡಿಯೊ೦ಡರೆ ಆಹಾರ ಇಡ್ಕಲೆ ಆರಿ೦ಗುದೆ ಮನಸ್ಸು ಬಾರ.) ಆನು ಸಣ್ಣ ಇಪ್ಪಗ ೧ ಕಿಲೊ ಅಕ್ಕಿಗೆ ೨-೨.೫ ರುಪಾಯಿ ಇತ್ತಿದ್ದದು ೩ ವರ್ಷ ಮೊದಲು ೧೫ ರುಪಾಯಿಗೆ ಏರಿತ್ತು. ಈಗ ಎಷ್ಟು? (ಊರಿಲ್ಲಿ ಎಷ್ಟು ಹೇಳಿ ಅಣ್ಣನ ಹತ್ರೆ ಕೇಳೆಕಷ್ಟೆ.. :)..) ಇಲ್ಲಿ ಈಗ ೧ ಕಿಲೊ ಅಕ್ಕಿಗೆ ೬೬-೭೦ ರುಪಾಯಿ ಇದ್ದು. ಇನ್ನು ೧೦ ವರ್ಷ ಕಳಿವಗ ಎ೦ತ ಅಕ್ಕು? ಅದರ ನಾವು ಈಗಳೆ ಆಲೋಚನೆ ಮಾಡಿಯೋಳಡದ?

  [Reply]

  VA:F [1.9.22_1171]
  Rating: +2 (from 2 votes)
 5. ಮುಳಿಯ ಭಾವ
  ರಘುಮುಳಿಯ

  ಕುಚ್ಚಿಲು ಅಕ್ಕಿಗೆ 24 ರೂಪಾಯಿ, ಇನ್ನೂ ಹೆಚ್ಚಕ್ಕು,ಬೇಗಲ್ಲಿ.ಆಹಾರ ಸಮಸ್ಯೆ ಬಪ್ಪದು ಖಂಡಿತ,ಭೂಮಿ ಒಳುಶಿಗೊಂಡವ ಬುದ್ಧಿವಂತ.

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  ಅಪ್ಪಪ್ಪು, ಆನುದೆ ಕುಚ್ಚಿಲು ಅಕ್ಕಿಯ ಕ್ರಯವನ್ನೇ ಹೇಳಿದ್ದದು.. :-(

  [Reply]

  VA:F [1.9.22_1171]
  Rating: 0 (from 0 votes)
 6. ಬಲ್ನಾಡುಮಾಣಿ

  “ಭೂಮಿ ಒಳುಶಿಗೊಂಡವ ಬುದ್ಧಿವಂತ” ಹೇಳುವ ರಘುಮಾವನ ಮಾತು ಖಂಡಿತಾ ಸತ್ಯ.. ಆದರೆ ಕೃಷಿಕರೆಲ್ಲ ನಿಧಾನಕ್ಕೆ ಸೋತು ಸುಣ್ಣ ಆಗಿ ಮನಸ್ಸಿಲ್ಲದ್ರು ಜಾಗೆ ಮಾರಿಕ್ಕಿ ಹೋವುತ್ತ ಪರಿಸ್ಥಿತಿ ಬತ್ತಾ ಇಪ್ಪದು ವಿಪರ್ಯಾಸ. ಕೄಷಿಕಾರ್ಯ ಹಿನ್ನಡೆ ಆಗಿ, ಅತ್ಲಾಗೆ ಕೄಷಿ ಕೆಲಸವೂ ಆಗದ್ದೆ, ಇತ್ಲಾಗಿ ಅದರ ಅಭಿವೄದ್ಧಿಗೆ ಹೇಳಿ ಬೇಂಕುಗೊ ದಿಂಗೇಳಿ ದಿಂಗೇಳಿ ಕೊಟ್ಟ ಸಾಲವ ತೀರ್ಸುಲೆಡಿಯದ್ದೆ,ಸಾಲದ ಮೇಲೆ ಸಾಲ ತೆಗದು, ಆಳುಗೊ ಸಿಕ್ಕದ್ದೆ (ಸಿಕ್ಕಿರು ಅವಕ್ಕೆ ಸಂಬಳ ಕೊಡ್ಲೆ ನಮ್ಮ ಕೈಲಾಗದ್ದೆ) ಮನೆ ನಡೆಶುಲೆ ಬಂಙ ಬಂದು ಕಡೆಂಗೆ ಕೃಷಿಕರಿಂಗುದೆ ಆ ಕಂಡಕ್ಟ್ರಂಗೆ ಅನ್ಸಿದ ಹಾಂಗೆ ಅನ್ಸುದು ದುರಾದೃಷ್ಟ..
  ನೆಮ್ಮದಿ ನಮ್ಮೊಳವೇ ಇದ್ದು.. ಆದರೆ ಅದರ ಕಂಡುಗೊಂಬ ತಾಳ್ಮೆ ಇಂದ್ರಾಣ ತಲೆಬೆಶಿಯ ಯಾಂತ್ರಿಕ ಜೀವನ ಪದ್ಧತಿಲಿ ಇಲ್ಲೆಯೋ ತೋರ್ತು..
  ಕೃಷಿಲಿಯೇ ಸಾಧನೆ ಮಾಡೆಕ್ಕು ಹೇಳಿ ಆಶೆ ಇದ್ದ ಆನು ಇಂದು ಕೄಷಿಯ ಆದಾಯಂದಲೇ ಕೄಷಿಯ ಅಭಿವೃದ್ಧಿ, ಮನೆ ನಿರ್ವಹಣೆ ಎರಡನ್ನೂ ಮಾಡ್ಲೆ ಆಯ್ಕೊಂಡಿಲ್ಲೆ ಹೇಳ್ತ ಒಂದೇ ಕಾರಣಕ್ಕೆ ಬೇರೆ ಆದಾಯದ ದಾರಿ ಹುಡುಕಿದ್ದೆ.. ಅದರ ಆದಾಯಂದಾದರೂ ಮುಂದೊಂದು ದಿನ ಮೊಬೈಲು ರೇಂಜು ಸಿಕ್ಕದ್ದ, ಮಳೆಗಾಲಲ್ಲಿ ಜೀಪು ಮಾತ್ರ ಹೋಗಿ ಬಪ್ಪ ಹಾಂಗಿಪ್ಪ ಫಲವತ್ತಾದ ಜಾಗೆಲಿ ಕೄಷಿ ಮಾಡೆಕ್ಕು ಹೇಳಿ ಪ್ರಯತ್ನ ಮಾಡ್ತಾ ಇದ್ದೆ. ದುರಾದೃಷ್ಟ ಹೇಳಿರೆ, ಕೄಷಿಲಿಯೇ ಮೇಲೆ ಬಂದ ಎನ್ನ ಕುಟುಂಬದ ಹಿರಿಯರು, ಕೃಷಿಯೇ ಬೇಡ ಮಗಾ, ಇದರಿಂದ ನೆಮ್ಮದಿಯೇ ಹಾಳಾತೀಗ, ಜಾಗೆ ಕೊಟ್ಟಿಕ್ಕಿ ಹೋಪ ಹೇಳ್ತವು! ಎನ್ನ ಅಭಿಪ್ರಾಯಲ್ಲಿ ಬೌಷ, ಕೃಷಿಕರು ಹೆಚ್ಚಿನೋರು ಎಂತಕೆ ಸೋತಿದವು ಹೇಳಿರೆ, ಬೇರೆ ಆದಾಯದ ಮೂಲ ಹುಡುಕಿದ ಹೆಚ್ಚಿನೋರು ಕೃಷಿಯ ಮರದವು..ಕೄಷಿಲಿದ್ದೋರನ್ನೂ! ಎಲ್ಲರೂ ಅಲ್ಲ, ಅಪವಾದಂಗೊ ಇಕ್ಕು ಖಂಡಿತಾ. ಆದರೆ ಕೄಷಿಯೂ ಕೄಷಿಕರೂ ದಿನ ಹೋದ ಹಾಂಗೆ ಕೃಷರಾವ್ತಾ ಇಪ್ಪದು ಬೇಜಾರದ ಸಂಗತಿ..

  [Reply]

  ಗಣೇಶ ಪೆರ್ವ

  ಗಣೇಶ ಪೆರ್ವ Reply:

  :-(

  [Reply]

  VA:F [1.9.22_1171]
  Rating: 0 (from 0 votes)
 7. ಅಡ್ಕತ್ತಿಮಾರುಮಾವ°
  ಅಡ್ಖತ್ತಿಮಾರ ಮಾವ

  ಒಂದು ದಿನ ಕ್ರಿಶಿಕಂಗೂ ಇಕ್ಕು..ತಿಂಬ ವಸ್ತ್ತು ಮಣ್ಣಿಲಿ ಬೆಳೆಶಿಯೇ ಆಯೆಕ್ಕಲ್ಲದ?ಕಾಲ ಚಕ್ರ ಹೇಳುತ್ತವು ಚಕ್ರ ತಿರುಗಿದಲ್ಲಿಗೆ ಬರೆಕ್ಕಲ್ಲದ?ಹಾಂಗಾಗಿ ನಾವು ಆಶಾವಾದಿಗ ಆಗಿ ಇಪ್ಪ..ಚುಬ್ಬಣ್ಣ ಬರದ್ದು ಬಾರೀ ಲಾಯಿಕ ಆಯಿದು…ಒಪ್ಪಂಗಳೊಟ್ಟಿಂಗೆ..

  [Reply]

  ಬಲ್ನಾಡುಮಾಣಿ

  ಆದರ್ಶ Reply:

  ಸತ್ಯವಾದ ಮಾತು ಹೇಳಿದಿ ಮಾವ.. ಕೃಷಿಕರಿಂಗೂ ಒಂದು ಕಾಲ ಇದ್ದು.. ಕಾವ ತಾಳ್ಮೆ ಬೇಕಷ್ಟೆ.. ಆನು ಹೆಚ್ಚಾಗಿ ತಮಾಷೆ ಮಾಡ್ಲಿದ್ದು, ಎಲ್ಲಾರು ಕೃಷಿ ಬಿಟ್ಟಪ್ಪದ್ದೆ ಆನು ಕೃಷಿ ಸುರು ಮಾಡ್ತೆ ಹೇಳಿ. ಆರು ಸ್ಪರ್ದೆಗೆ ಇಲ್ಲದ್ದ ಕಾರಣ ಒಳ್ಳೆದಕ್ಕು ಹೇಳಿ ಅಂದಾಜು.. ಎಂತ ಹೇಳ್ತಿ? 😉

  [Reply]

  VA:F [1.9.22_1171]
  Rating: 0 (from 0 votes)
 8. ಅಡ್ಕತ್ತಿಮಾರುಮಾವ°
  ಅಡ್ಖತ್ತಿಮಾರ ಮಾವ

  ಒಳ್ಳೆ ಮಾತು ಹೇಳಿದೆ ಅಳಿಯೊ…ನಿನ್ನ ಹಾಂಗೆ ಕೆಲವು ಜೆನ ಆದರೂ ಆಲೊಚನೆ ಮಾಡಿದರೆ ಆಸ್ತ್ತಿ ಮಾರೆಕ್ಕಾದ ಪ್ರಮೇಯ ಬಾರಲೇ ಬಾರ…

  [Reply]

  VA:F [1.9.22_1171]
  Rating: 0 (from 0 votes)
 9. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  “ಕೃಷಿತೋ ನಾಸ್ತಿ ದುರ್ಭಿಕ್ಷಂ” ಹೇಳುವದರ ಮರೆತ್ತಾ ಇದ್ದು.
  ಸರಕಾರಕ್ಕೆ ಆದಾಯ ತಪ್ಪದು ದೊಡ್ಡ ದೊಡ್ಡ ಕಾರ್ಖಾನೆಗೊ. ಅವು ಅದಕ್ಕೆ ಬೇಕಾದ ಎಲ್ಲಾ ವೆವಸ್ತೆಯನ್ನೂ ಮಾಡಿ ಕೊಡುಗಲ್ಲದ್ದೆ ಕೃಷಿಕರ ವಿಚಾರುಸಲೆ ಬಾರವು.
  ಹೊಟ್ಟೆ ತುಂಬುಸಲೆ ಆಹಾರವೇ ಬೇಕು ಹೇಳುವ ಜ್ಞಾನೋದಯ ಆಯೆಕ್ಕಷ್ಟೆ

  [Reply]

  VA:F [1.9.22_1171]
  Rating: 0 (from 0 votes)
 10. shivakumara

  ಇತ್ತೀಚೆಗೆ ಕೆಲವು ಸಮಾನ ಮನಸ್ಕರು ಸೇರಿ (ನಗರಗಳಲ್ಲಿ ಉದ್ಯೊಗದಲ್ಲಿರುವವರು) ನಗರಳ ಹತ್ತಿರ ಇರುವ ಕ್ರಿಶಿ ಜಾಗ ತೆಗೆದು ವಾರಂತ್ಯದಲ್ಲಿ ಕ್ರಿಶಿಯಲ್ಲಿ ತೋಡಗಿಸಿಕೊಂಡು ಸಾದ್ಯವಾದಶ್ತು ಮಟ್ಟಿಗೆ ಆಹಾರದ ವಿಶಯದಲ್ಲಿ ಸ್ವಾವಲಂಬಿಗಳಾಗಲು ಪ್ರಯತ್ನಿಸುತ್ತಿದ್ದಾರೆ, ಇದು ಒಂದು ಒೞೆಯ ಬೆಳವಣಿಗೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿವಿಜಯತ್ತೆಸರ್ಪಮಲೆ ಮಾವ°ಶಾ...ರೀಶರ್ಮಪ್ಪಚ್ಚಿವೇಣೂರಣ್ಣಮಾಲಕ್ಕ°ಅಜ್ಜಕಾನ ಭಾವಬೊಳುಂಬು ಮಾವ°ಮುಳಿಯ ಭಾವವೆಂಕಟ್ ಕೋಟೂರುಅನುಶ್ರೀ ಬಂಡಾಡಿದೊಡ್ಡಮಾವ°ಉಡುಪುಮೂಲೆ ಅಪ್ಪಚ್ಚಿರಾಜಣ್ಣಡಾಮಹೇಶಣ್ಣದೊಡ್ಡಭಾವvreddhiಅಕ್ಷರದಣ್ಣಯೇನಂಕೂಡ್ಳು ಅಣ್ಣಶ್ಯಾಮಣ್ಣಒಪ್ಪಕ್ಕಸುಭಗಚೆನ್ನೈ ಬಾವ°ನೆಗೆಗಾರ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ