ಗುಲು ಗುಗ್ಗುಲು ಗುಗ್ಗುಲು

ಬೋಜರಾಯನಲ್ಲಿ ಕಾಳಿದಾಸ° ಫೇಮಸ್, ನಮ್ಮ ಬೈಲಿಲಿ ಬೋಸಬಾವ° ಫೇಮಸ್.  ಇಬ್ರೂ ನಮ್ಮ ಬೈಲಿಂಗೆ ಹತ್ರವೆ.

ಬೋಸಬಾವನೂ ಬೈಲಿಲಿ ಕಾಣದ್ದೆ ಕೆಲವು ಸಮಯ ಆತು, ಕಾಳಿದಾಸನೂ ಬೈಲಿಂಗೆ ಬಾರದ್ದೆ ಹಲವು ಸಮಯ ಆತು.

ಅವ° ಮದಲೊಂದರಿ ನಮ್ಮ ಬೈಲಿಂಗೆ ಬಂದಿಕ್ಕಿ ಹೋದ್ದು ನೆಂಪಿದ್ದೋ… – ಇಲ್ಲಿದ್ದು

ಅದ್ಭುತ ಸಾಮರ್ಥಿಗೆ ಇಪ್ಪ ಕವಿ, ಕಾಳಿದಾಸ ಹೇಳಿ ಎಲ್ಲೋರಿಂಗೂ ಗೊಂತಿಪ್ಪದು. ಅವ° ಆಸುಕವಿತೆಗೂ ಫೇಮಸ್,  ಬೋಸುಕವಿತೆಗೂ ಫೇಮಸ್. ಎಲ್ಲದರಲ್ಲಿಯೂ ಒಂದೊಂದು ಚಮತ್ಕಾರಂಗಳ ತೋರ್ಸುತ್ತ° ಅಪ್ಪೋ!

ನಿನ್ನೋ ಓ ಅಲ್ಲಿಗೆ ಹೋಗಿತ್ತೆ ಒಂದು ಜೆಂಬಾರಕ್ಕೆ. ಅಲ್ಲಿ ಇತ್ತಿದ್ದ° ಕಾಳಿದಾಸ°. ಎಂತ ಮಾರಾಯಾ ಹೇಂಗಿದ್ದೆ ಹೇಳಿ ಬೈಲ ಪರವಾಗಿಯೂ ವಿಚಾರ್ಸಿಗೊಂಡೆ. ಮದಾಲಾಣಾಂಗೆ ಇಲ್ಲೆ ಭಾವ°… ಕಾಳಿದಾಸಂಗೂ ಪ್ರಾಯ ಆತು. ತಲೆ ಹಣ್ಣಾದ್ದು, ಗೆಡ್ಡ ಬೆಳಿಯಾದ್ದು ಕಂಡತ್ತು. ‘ಏನೆಡಿತ್ತಿಲ್ಲೆ’ ಹೇದು ಹೇಳಿಗೊಂಡ°, ಅಪರೂಪ ಜೆಂಬ್ರಕ್ಕೆ ಹೋವ್ಸಡ.

ಹೀಂಗೆ ಮಾತಾಡುವಾಗ ಹಳತ್ತೊಂದರ ನೆಂಪು ಮಾಡಿಗೊಂಡ°.

ಏವತ್ರಾಣಾಂಗೆ ಬೋಜರಾಜಂಗೆ ಒಂದಿನ ಪಿಕ್ರು ಎಳಗಿತ್ತಡ. ಸರಿ.., ಕವಿಗೊಕ್ಕೆ ಒಂದು ಸವಾಲು ಬಿಟ್ಟನುದೆಡಾ- ಅಕೇರಿಸಾಲು “ಗುಳುಗುಳು ಗುಗ್ಗುಳು” ಬತ್ತಾಂಗೆ ಪದ್ಯ ಹೇಳಿ ಹೇದು.

ನಮ್ಮ ಬೈಲಿಲಿ ಇತ್ತೀಚೆಗೆ ಸುರುವಾದ ಸಮಸ್ಯಾಪೂರಣ ಸ್ವಾರಸ್ಯದ ಹಾಂಗೆ ಅವ್ವವ್ವು ಬರವಲೆ ಸುರುಮಾಡಿದವು. ಕೆಲವು ಎನ್ನಾಂಗೆ ಕೆಕೆಪೆಕೆಯೂ ಇದ್ದತ್ತು ಬಿಡಿ. ಎಂತಾರು.. ನಮ್ಮ ಬೈಲಿಲಿ ಮುಳಿಯಭಾವ ಅಕೇರಿಗೆ ಬಂದು ರೈಸುತ್ತ ಹಾಂಗೆ, ಈ ಜೆನವೂ ಅಕೇರಿಗೆ ಸಭಗೆ ಬಂದ.

ಚೋದ್ಯ ಹೇಳುವಾಗ ಈ ಜೆನ ಇರ ಸಭೆಲಿ. ಮತ್ತೆ ಬಂದಪ್ಪಗ ಮತ್ತೆ ಮುದದಿಂದ ಹೇಳಿ ಎಂತ ಕತೆ ಹೇದು ಸುರುವಿಂದ ಹೇಳೆಕು. ಇವಂಗೆ. ನಮ್ಮಲ್ಲಿ ಕೆಲವು ಜೆನ ಕೇಳುಗು ಇವ° ಎಂತ ನಿತ್ಯ ಹೊಸ ಮದಿಮ್ಮಾಯನೋ.. ಪ್ರತಿಸರ್ತಿಯೂ ಸಮ್ಮಾನ ಮಾಡ್ಳೆ!!

ಇರ್ಲಿ ಬಿಡಿ ..

ಕಾಳಿದಾಸ, ಆಸುಕವಿ ಹೇಳಿದ ಪದ್ಯ ಏವುದಡಾ ಗೊಂತಿದ್ದೋ…
ಜಂಬೂ ಫಲಾನಿ ಪಕ್ವಾನಿ ಪತಂತಿ ವಿಮಲೇ ಜಲೇ ।
ಕಪಿಕಂಪಿತಶಾಖಾಭ್ಯಃ ಗುಲುಗುಗ್ಗುಲುಗುಗ್ಗುಲು ॥

ಎಲ್ಲೋರು ಕೈತಟ್ಟಿದವಡ. ಹೆಗಲಿಂಗೆ ಶಾಲು ಸಂಮಾನವೂ ಆತು. (ಈ ಸರ್ತಿ ಉಂಗುರ, ಚೈನು ಸಿಕ್ಕಿದ್ದಿಲ್ಲೆಡ ಆತಾ!)

ಆತಿದು…ಇದೀಗ ನಾವಿಲ್ಲಿ ಇಷ್ಟು ಹೇಳಿಕ್ಕಿ ತಳಿಯದ್ದೆ ಕೂದರೆ ಡಾ.ಮಹೇಶಣ್ಣ ಕೇಳದ್ದೇ ಬಿಡುಗೊ ‘ಅಸ್ಯ ಅರ್ಥಃ ಕಃ?’ ಹೇಳಿ.

ಹಾಂಗಾಗಿ ನಿನ್ನೆ ಕಂಡ ಕಾಳಿದಾಸನತ್ರಯೇ ಕೇಳಿಗೊಂಡೆ –

ಯದಾ ಕಪಿಕಂಪಿತ ಶಾಖಾಭ್ಯಃ ಪಕ್ವಾನಿ ಜಂಬೂ ಫಲಾನಿ ವಿಮಲೇ ಜಲೇ ಫತಂತಿ, ತದಾ ಗುಲುಗುಲುಗುಗ್ಗುಲು ಗುಗ್ಗುಲು ಇತಿ ಶಬ್ದಂ ಭವತಿ. ಇತಿ.

[ಕೊಳದ ಬುಡದಲ್ಲಿದ್ದ ಜಂಬೂಮರದ ಗೆಲ್ಲಿನ, ಮಂಗಂಗೊ ಆಡಿಸಿಯಪ್ಪಗ ಅದರಲ್ಲಿತ್ತಿದ್ದ ಪಕ್ವವಾದ ಫಲಂಗೊ ನೀರಿಂಗೆ ಬಿದ್ದು ‘ಗುಳುಗುಳುಗುಗ್ಗುಳು ಗುಗ್ಗುಳು’ ಹೇಳಿ ಶಬ್ದ ಆತು.]

ಯಬ್ಬೋ…ಅವನೇ!! … ಅಪ್ಪೋ!!.

ಚೆನ್ನೈ ಬಾವ°

   

You may also like...

11 Responses

 1. ತೆಕ್ಕುಂಜ ಕುಮಾರ ಮಾವ° says:

  ಯೆಬೇ…ಇದೆಂತರ ಸಮಸ್ಯೆ , ಇದರಂದ ದೊಡ್ದ ದೊಡ್ಡ ಸಮಸ್ಯೆಗೊಕ್ಕೆ ಚೊಕ್ಕ ಪರಿಹಾರ ಎನ್ನತ್ರೆ ಇದ್ದು ಹೇದ ಬೋಸಭಾವ, ಓ ಮನ್ನೆ ಅಕ್ಕನಲ್ಲಿ ಸಮ್ಮಾನಕ್ಕೆ ಬಂದಿಪ್ಪಗ.
  ಅಲ್ಲ, ಆನು ಕಾಳಿದಾಸನ ಪರಿಹಾರ ಓದಿ ಮೂಗಿನ ಮೇಲೆ ಕೈ ಮಡಗಿದ್ದದೆ. ಚೆನ್ನೈಭಾವ ಬಿಡುಸಿ ಅರ್ಥ ವಿವರಣೆ ಕೊಡದ್ದರೆ ಇದು ಅರ್ಥವೇ ಆವುತಿತ್ತಿಲೆ…ಯಬ್ಬೋ..!!!

 2. ಯಬ್ಬೋ 🙂 ಗುಲುಗುಲು ಗುಗ್ಗುಲು.. ಭಾರೀ ಲಾಯ್ಕ ಆಯ್ದು ವಿವರಣೆ.

 3. narayana rao sharma says:

  ವಿವರಣೆ ಭಾರೀ ಖುಶಿ ಕೊಟ್ಟತ್ತು!

 4. ರಘು ಮುಳಿಯ says:

  ಒಳ್ಳೆ ಸ್ವಾರಸ್ಯ ಇದ್ದು ಭಾವ. ಅ೦ದು ಕೊಡಪ್ಪಾನ ಬಿದ್ದ ಶಬ್ದ, ಇ೦ದು ಜ೦ಬುನೇರಳೆ ನೀರಿ೦ಗೆ !

 5. ಗೋಪಾಲ ಬೊಳುಂಬು says:

  ಭೋಜರಾಜನನ್ನೂ ಕಾಳಿದಾಸನನ್ನೂ ಕಂಡಿಕ್ಕಿ ಬಂದ ಚೆನ್ನೈಭಾವ ಧನ್ಯ. ಗುಗ್ಗುರು ಹಿಡುದ ಮನಸ್ಸಿಂಗೆ ಗುಲು ಗುಗ್ಗುಲು ಶ್ಲೋಕ ಕೊಶಿ ಕೊಟ್ಟತ್ತು.

 6. ಶರ್ಮಪ್ಪಚ್ಹಿ says:

  ವಿವರಣೆ ಲಾಯಿಕ ಆಯಿದು.
  ಹೀಂಗಿಪ್ಪ ಸಂಗ್ರಹಂಗೊ ಇದ್ದರೆ ಇನ್ನೂದೆ ಬರಲಿ

 7. ನಮ್ಮ ಕಾಳಿದಾಸ° ಭಯಂಕರ ಅಪ್ಪೋ?
  🙂

 8. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಕಾಳಿದಾಸನ ಸಮಸ್ಯೆಗಳ ಪೂರಣದ ಹಾಂಗೆ ನಮ್ಮ ಬೈಲಿಲೂ ಬತ್ತು ಇದಾ.ಹಳೆ ಸಮಸ್ಯೆಗೊ ಹೀಂಗೆ ಬರುತ್ತಾ ಇರಲಿ.

 9. ಮಾನೀರ್ ಮಾಣಿ says:

  ಹ್ಹೆ ಹ್ಹೆ ಹ್ಹೆ…. ಯೆನ್ನ ತಲೆಗೆ ಹಿಡಿದ ಗೆದ್ದಲು ಬಿಟ್ಟಿತದಾ..ತಲೆ ಪೂರ್ಣ ಈಗ ಗುಲುಗುಗ್ಗುಲುಗುಗ್ಗುಲು ಆವ್ತಾ ಇದ್ದು.. ಲಾಯ್ಕಾಯ್ದು ಭಾವಯ್ಯಾ. ಕಾಳಿದಾಸ೦ಗೆ ಮತ್ತೆ ನಿಮಗೆ ಯೆನ್ನ ಕಡೆಯಿ೦ದ ಒ೦ದು ಮೂಟೆ ಜ೦ಬುನೇರಳೆ.

 10. ಶ್ಯಾಮ says:

  ಜ೦ಬ್ಮೂ ನೇರಳೆ ಹಣ್ಣು ನೀರೀ೦ಗೆ ಬಿದ್ದರೆ ‘ಪುಳು ಪುಳು’ ಹೇಳಿ ಕೇಳ್ತನ್ನೆ!

  • ಚೆನ್ನೈ ಭಾವ° says:

   ಅಂಬಗ ಈಗ ಕೆಮಿ ಸರಿ ಇಲ್ಲದ್ದು ಆರಿಂಗಪ್ಪ !!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *