ಕಂಡದ್ದೆಲ್ಲ ಬೇಕು ಕುಂಡಿ ಬಟ್ಟಂಗೆ..

ಇಂದು ಆದಿತ್ಯವಾರ. ರಜೆ ಅಲ್ಲದೋ ನಿಂಗೊಗೆ – ಹೇಳಿತ್ತು ಉಷಕ್ಕ.
ಅಪ್ಪು. ಎಂತಾಯೇಕು ಅದಕ್ಕೆ – ಯಾವತ್ರಾಣ ಹಾಂಗೆ ಕೇಟ° ಕೇಚಣ್ಣ.
ಎಂತಿಲ್ಲೆ..,  ಹೊತ್ತೋಪಗ ಎಲ್ಲ್ಯಾರು ಹೆರ ಹೋಗ್ಯಂಡು ಬಪ್ಪನೋ –  ಉಷಕ್ಕನ ವಾರವಾರದ ರಾಗ.
ಉಷಕ್ಕ ಹೇಳುವದು, ಕೇಚಣ್ಣ ಕೇಳುವದು ಇದು ವಾರ ವಾರ ಇಪ್ಪದೇ. ಆದರೆ ವಾರವಾರವೂ ಕೇಚಣ್ಣಂಗೆ ಅವನ ಎಂತಾರು ಕೆಲ್ಸ ಇದ್ದೇ ಇರ್ತು. ಹೆಂಡತಿಯ ಕರ್ಕ್ಕೊಂಡು ತಿರುಗಲೆ ಹೋಪಲ ಒಂದು ಆದಿತ್ಯವಾರವೂ ಪುರುಸೊತ್ತಪ್ಪಲಿಲ್ಲೆ. ಸರಿ., ಇಂದು ಬೇರೆ ಎಲ್ಲವನ್ನೂ ರದ್ದು ಪಡಿಸಿ ಹೆಂಡತಿಯೊಟ್ಟಿಂಗೆ ಪೇಟಗೆ ತಿರುಗಲೆ ಹೋಪದು ಹೇಳಿ ಗಟ್ಟಿ ಮನಸ್ಸಿಲ್ಲಿ ನಿಘಂಟು ಮಾಡಿ ಆತು.
ಇದಾ ಹೊತ್ತೋಪಗ ಐದು ಗಂಟಗೆ ಹೆರಟಾಯೆಕು. ತಡವು ಮಾಡಿರೆ ಆತಿಲ್ಲೆ. ಬೇಗ ಬಂದಿಕ್ಕಿ ಮತ್ತೆ ಎನ ಕೆಲಸ ಇದ್ದು. ಕಂಡೀಶನ್ ಆತು. ಉಷಕ್ಕಂಗೆ ಗೊಂತಿಲ್ಲ್ಯೋ ಈ ಕೇಚಣ್ಣಂಗೆ ಎಂತರ ಕೆಲಸ ಇಪ್ಪದು. ಅಪೀಸು ಬಿಟ್ಟಿಕ್ಕಿ ಮನಗೆ ಬಂದ್ರೆ ಮತ್ತೆ ಕಂಪ್ಯೂಟರೇ ಪ್ರಪಂಚ. ಎಂತರ ಕುಟ್ಟಿಗೊಂಡು ಇರ್ತವೋ ಅದರಲ್ಲಿ ಹಾಂಗೊಂದು. ಹ್ಮ್ಮ್..

ಕೇಚಣ್ಣಂಗೆ ಹೆರಡ್ಳೆ ಎಂತಾಯೇಕು. ಕಾಲಿಂಗೂ ಕೈಗೂ ಸುರ್ಕೊಂಡು ಆಗಳೇ ರೆಡಿ. ಆತೋ, ಆತೋ, ಹೆಮ್ಮಕ್ಕಳ ಒಟ್ಟಿಂಗೆ ಹೆರಡುಸ್ಸು ಹೇಳಿರೆ ರಾಮಾ.. ಎಷ್ಟು ಹೊತ್ತು ..ಎಷ್ಟು ಹೊತ್ತು. ಉಷಕ್ಕಂಗೆ ಇದು ಬೇಜಾರ ಏನೂ ಇಲ್ಲೆ. ಏವತ್ತೂ ಕೇಳಿ ಕೇಳಿ ಅಭ್ಯಾಸ ಆಯ್ದು. ಅದು ಕೇಳದ್ರೆ ಈ ಜನ ಮನೇಲಿ ಇದ್ದನೋ ಇಲ್ಲ್ಯೋ ಹೇಳುವದೇ ಅನುಮಾನ ಹೇಳ್ವಷ್ಟು ಅಭ್ಯಾಸ ಆಯ್ದು.

ಇಲ್ಲೇ ಕೂಡಿ ಅಲ್ಲೇ ಕೂಡಿ ಹೇಳಿ ಅತ್ತಿತ್ತೆ ನೋಡಿಗೊಂಡು ಶಾಪಿಂಗ್ ಸೆಂಟರ್ ಒಳ ಹೊಕ್ಕಿತ್ತು. ನಾಕೈದು ಬಗೆ ಉಷಕ್ಕಂಗೆ ಬೇಕಾದ್ದರ ತೆಗದೂ ಆತು. ಅಷ್ಟಪ್ಪಗ ಆಚ ಅಂಗಡಿಲಿ ಕರಪತ್ರ ಅಂಟಿಸಿಯೊಂಡೂ ಕರಪತ್ರ ಹಂಚಿಯೊಂಡೂ ಕಂಡತ್ತು. ಎಂತರ ನೋಡಿಕ್ಕಿವೋ ಹೇಳಿ ಹತ್ರೆ ಹೋತು. ಕರಪತ್ರ ಒಂದು ಇವರ ಕೈಗೂ ಸಿಕ್ಕಿತ್ತು.

‘ಚಪಾತಿಕಲ್ಲು’ ಅಲ್ಲ, ಚಪಾತಿ ಮಾಡುವ ಮೆಶಿನು. ಉಂಡೆ ಅದರಲ್ಲಿ ಮಡುಗಿ ಒತ್ತಿರೆ ಆತು. ಲಟ್ಟುಸುತ್ತ ಕೆಲಸ ಇಲ್ಲೆ , ಅರ್ಚುತ್ತ ಕೆಲಸ ಇಲ್ಲೆ. ಬಹುಪಯೋಗಿ. ಚಪಾತಿ ಮಾಡ್ಳೂ ಆವ್ತು, ಪೂರಿ ಮಾಡ್ಳೂ ಆವ್ತು. ಎಂತಕೆ ಹಲಸಿನಕಾಯಿ ಅಪ್ಪಗ ಹಪ್ಪಳ ಮಾಡ್ಳೂ ಉಪಯೋಗ ಮಾಡ್ಳಕ್ಕು ಹೇಳಿ ವರ್ಣಿಸಿತ್ತು – ಅಂಗಡಿ ಜೆನ. ಉಷಕ್ಕ ನಾಲ್ಕೈಂದು ಸತ್ತಿ ಮುಟ್ಟಿ ಮುಟ್ಟಿ ನೋಡಿತ್ತು. ಓಯಿ., ಇದರ ತೆಗವನೋ..? ಸುಲಬ ಇದ್ದು. ದಿನಾ ತೆಳ್ಳವು ಮಾಡ್ತದಕ್ಕೆ ಒಂದೊಂದರಿ ಚಪಾತಿ ಪೂರಿ ಹೇಳಿ ಮಾಡ್ಳಕ್ಕನ್ನೆ ಸುಲಬಲ್ಲಿ ಇದು ಇದ್ದರೆ. ಈ ಬೇಸಗೆಲಿ ಸೆಕಗೆ ಅಡಿಗೆ ಕೋಣೆಲಿ ಬೆಗರು ಹರ್ಶಿಗೊಂಡು ಲಟ್ಟುಸ್ಯೋಂಡು ಕೂಬಲೂ ಎಡಿತ್ತಿಲ್ಲೆ.  ಹಾ°.. ಅಪ್ಪು ಕಂಡತ್ತು ಕೇಚಣ್ಣಂಗೆ. ಸರಿ., ಚಪಾತಿ ಪೂರಿ ಮಾಡಿಕೊಡ್ತರೆ ಏಕೆ ಆಗದ್ದೆ., ಇರ್ಲಿ ಹೇಳಿ ತೀರ್ಮಾನ ಆತು. ಎಷ್ಟು ರೇಟು ಕೇಳಿರೆ – ‘ಮೂರುಸಾವಿರದ ಆರ್ನೂರು’  ಭಟ್ರೆ, ನಿಮಿಗೆ ಬೇಕಾದರೆ ನೂರು ರೂಪಾಯಿ ಡಿಸ್ಕೌಂಟು ಮಾಡಿ ಮೂರುಸಾವಿರದ ಐನ್ನೂರಕ್ಕೆ ಮಾಡಿ ಕೊಡುವ ಹೇಳಿತ್ತು ಅಂಗಡಿ ಜೆನ. ಹೋ.. ಎನ್ನ ನೋಡಿ ನೂರು ರೂಪಾಯಿ ಕಮ್ಮಿ ಮಾಡಿತ್ತನ್ನೆ , ಇರ್ಲಿ ಅಂಬಗ ಹೇಳಿ ಪೇಕು ಮಾಡಿ ಬಿಲ್ಲು ಹಾಕ್ಸಿ ಆತು. ಅಷ್ಟು ಪೈಸೆ ನಗದು ಕೈಲಿ ಹಿಡ್ಕೊಂಡಿರ್ತೋ ಎಂತ ಸಾಮಾನ್ಯ ಆರಾರು ಯೇವತ್ತೂ ! , ಅಂದರೂ, ಇದ್ದನ್ನೆ ಉದ್ದುತ್ತ ಕಾರ್ಡು. ಅದರಂದಲ್ಲೆ ಪೈಸೆ ಕಟ್ಟಿ ಆತು, ಮನಗೆ ಹೊತ್ತೊಂಡು ಬಂದು ಆತು. ಇದು ನಡದ್ದದು ನಿನ್ನೆ ಮನ್ನೆ ಅಲ್ಲ, ಮೂರುವರ್ಷ ಮದಲೆ. ಈ ವರೇಗೆ ಅದರಲ್ಲಿ ಚಪಾತಿ ಮಾಡಿದ್ದದು ಒಂದು ಸರ್ತಿ. ಮತ್ತೆ ಅದರ ಅದೇ ಪೆಟ್ಟಿಗೆಲಿ ಪೇಕು ಮಾಡಿ ಮೇಗೆ ಅಟ್ಟಲ್ಲಿ ಮಡಿಗಿದ್ದು.
“`

ಆಚ ವರ್ಷ ಹೀಂಗೆ ಒಂದರಿ ಪೇಟಗೆ ಹೋದಿಪ್ಪಗ, ಒಂದಿಕ್ಕೆ ಡಿಸ್ಕೌಂಟು ಸೇಲ್ ಹೇಳಿ ಕಂಡತ್ತು . ಐದು ಸಾವಿರಕ್ಕೆ ಎರಡು ಪಟ್ಟೆ ಸೀರೆ. ಹೋ..ಪಟ್ಟೆ ಸೀರೆ. ಅಲ್ಪ ಪೈಸೆ ಕೊಟ್ಟು ತೆಗವದಕ್ಕಿಂತ ಎಲ್ಯಾರು ಮದುವೆ, ಉಪ್ನಾನ, ಪೂಜೆಗೊಕ್ಕೆ ಹೋಪಲೆ ಹೀಂಗಿರ್ತ್ಸು ಇದ್ದರೆ ಸಾಕು, ಒಳ್ಳೆದು ಹೇಳಿ ತೆಗದತ್ತು, ಮನಗೆ ತಂತು. ಮನೆ ಕೆಲಸ  ಇತ್ಯಾದಿಯಿಂದಾಗಿ ಅದರೊಂದರಿ ಬಿಡುಸಿ ನೋಡ್ಳೂ ಪುರುಸೊತ್ತಾಯ್ದಿಲ್ಲೆ ಉಷಕ್ಕಂಗೆ ಇಂದಿನವರೇಂಗೆ.
““

ಕಳುದ ವರ್ಷ ಒಂದಿನ ಬಾಗಿಲ ಬೆಲ್ ಬಡುದತ್ತು. ಮಧ್ಯಾಹ್ನ ಊಟದ ಸಮಯ. ಆರಪ್ಪ ಹೇಳಿ ಬಾಗಿಲು ತೆಗದು ನೋಡಿರೆ ಎಂತದೋ ಒಂದು ನಳ್ಳಿ ಪೈಪಿಂಗೆ ಸಿಕ್ಕುಸುತ್ತದಡ. ಅದರ ಕಿಚನ್ ಪೈಪಿಲ್ಲಿ ಸಿಕ್ಕಿಸಿರೆ ಶುದ್ಧನೀರು ಬತ್ತದಡ. ಕಮ್ಮಿ ಬೆಲೆಯೂ. ಬರೇ ನೂರೈವತ್ತು ರೂಪಾಯಿ. ಇರ್ಲಿ ಅಂಬಗ ಹೇಳಿ ತೆಕ್ಕೊಂಡ ಕೇಚಣ್ಣ. ನೋಡಿರೆ.., ಆ ತೆಗದು ಮಡುಗಿದ್ದು ಇಂದುದೇ ಇದ್ದು ಅವರ ಡೈನಿಂಗ್ ಟೇಬಲ್ ಮೇಗೆ ಒಂದರಿ ಸಾನ ಬಿಡುಸಿ ನೋಡದ್ದೆ.

ಹೀಂಗೆ ಲೆಕ್ಕ ಹಾಕಿ ನೋಡಿರೆ, ಅತ್ತಿತ್ತೆ ಹೋಗಿ ಬಪ್ಪಗ, ಮನೆ ಬಾಗಿಲಿಂಗೆ ಬಂದದರ, ಸಂತೆಲಿ ತೆಕ್ಕೊಂಡ ಎಷ್ಟು ಸಾಮಾನುಗೊ ಇದ್ದೋ ಎಂತ್ಸೋ ಅವರ ಮನೇಲಿ ಪುಸ್ತಕಂದ ಹಿಡುದು ವಸ್ತ್ರಂಗೊ ಸಹಿತ ಚಪಾತಿ ಕಲ್ಲಿನ ವರೇಂಗೆ.

ಅಂಗಡಿಲಿ ಕಾಂಬಗ ಚಂದ ಕಾಣುತ್ತು. ಮನೇಲಿ ಮಾಡ್ಳೆ ಸಮ ಆವ್ತಿಲ್ಲೆ. ಅಂಬಗ ಹಾಂಗಿರ್ತ್ಸರ ಮನೆ ತಂದು ಮಡುಗಿ ಡೆಡ್ ಇನ್ವೆಷ್ಟುಮೆಂಟು ಮಾಡುತ್ಸದು ಎಷ್ಟು ಔಚಿತ್ಯವೋ. ಪೈಸೆ ಆರದ್ದೇ ಆಗಿರಲ್ಲಿ ದಂಡ ದಂಡವೇ ಅಲ್ಲದೋ.

‘ಚೆನ್ನೈವಾಣಿ’ – ಕಂಡದ್ದೆಲ್ಲ ಬೇಕು ಕುಂಡಿಬಟ್ಟಂಗೆ.. ಹೇಳಿ ಮಾಡಿರೆ, ಪೈಸೆ ಅಂತೇ ಹಾಳು ಮಾಡ್ಳಕ್ಕಷ್ಟೆ.

ಚೆನ್ನೈ ಬಾವ°

   

You may also like...

11 Responses

  1. geekay yeskay says:

    ಆನುದೆ ಒನ್ದು ಚಪಾತಿ ಮೆಶೀನು ತೆಗದರೂ.. ನೊದ್ಸೀಗ.. ಸುರುಟಿ ಅಟ್ಟ್ಟಲ್ಲಿ ಮಡಗಲಾದರು ಅಕ್ಕನ್ನೆ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *