“ಕೆಲವರ ಮನಸ್ಸು, ಕಬ್ಬಿಣದ ಗೊಣಸು”-[ಹವ್ಯಕ ನುಡಿಗಟ್ಟು-17]

October 15, 2014 ರ 6:54 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

–ಕೆಲವರ ಮನಸ್ಸು ಕಬ್ಬಿಣದ ಗೊಣಸು—{ಹವ್ಯಕ ನುಡಿಗಟ್ಟು—17}

ಅವನ ಮನಸ್ಸು ಹೇಳಿರೆ ಕಬ್ಬಿಣದ ಗೊಣಸೇ ಸರಿ.’ ಕಡ್ಪ ಮನಸ್ಸಿನವರ ಹಾಂಗೆ ಹೇಳುಸ್ಸು ಕೇಳಿದ್ದೆ ವಜ್ರಾದಪಿ ಕಠೋರಾಣಿ| ಕುಸುಮಾದಪಿ ಮೃದೂಲಾನಿ ಚ | ಹೇಳಿ ಸಂಸ್ಕೃತಲ್ಲಿ ಒಂದು  ನುಡಿಇದ್ದು. ಅಪ್ಪು  ಮನಸ್ಸು ವಜ್ರಕ್ಕಿಂತ  ಗಟ್ಟಿಯೂ ಹೂಗಿಂದ  ಮೃದುವೂ  ಅಪ್ಪಲೆ ಸಾದ್ಯ!. ಆದರೆ  ಪರಿಸ್ಥಿತಿ  ಸತ್ಪರಿಣಾಮಲ್ಲಿ ಆಯೆಕ್ಕು ವಿಪತ್ಪರಿಣಾಮಲ್ಲಿ ಅಪ್ಪಲಾಗಯಿದ!. ಕೆಲವು ಜೆನಕ್ಕೆ ಅಪ್ಪದೇ ಸರೀ ವಿರೋಧ.

ಮನೆಲಿ  ಮಕ್ಕೊ ಲೂಟಿಮಾಡೀರೆ, ಅಬ್ಬೆ-ಅಪ್ಪಂಗೆ, ಅಜ್ಜಿ-ಅಜ್ಜಂಗೆ ಕೋಪ ಬತ್ತಿದ! ಕೋಪಲ್ಲಿ ಉರಿಧರ್ಸಿ ಬೈಗು,ಅದು ರಜ ಹೊತ್ತಿಂಗೇ ಉಳ್ಳೊ!. ಮದಲಿಂಗೆ ಆನು ಸಣ್ಣಾದಿಪ್ಪಗ  ಅಜ್ಜನ ಮನೆಂದ  ಶಾಲಗೆ ಹೋದ್ದಿದ. ಎನ್ನ ಬಾವಂದ್ರು, ಎಂಗೊಲ್ಲ ಸೇರಿ ಏನಾರು  ಪಿಕಲಾಟಿಕೆ  ಮಾಡೀರೆ, ಎನ್ನ ಪುಟ್ಟುಮಾವ..,  “ನೋಡಿ ಮಕ್ಕಳೇ ಅಜ್ಜನ  ತೊಡಿ ಒಟ್ಟೆ [ಹಲ್ಲುಮುಟ್ಟೆ ಕಚ್ಚಿ] ಆದ್ದು ಕಾಣ್ತು” ಹೇಳುಗು,ಅಷ್ಟೊತ್ತಿಂಗೆ ಗಮನಿಸೀರೆ. ಅಜ್ಜ ಕೋಲು ತೆಕ್ಕಂಡು ಬಪ್ಪದು ಕಾಂಗು, ಎಂಗೊ ಕೂಡ್ಳೆ ಅಲ್ಲಿಂದ ಪರಾರಿ!. ಆ  ಕೋಪದ ಮನಸ್ಸು ಮತ್ತೆ  ರಜ ಕಳಿವಗ ಹೂಗಾಗಿ ಬಿಡುಗು.

ಇನ್ನು ಕೆಲವು ಜೆನರ  ಕೋಪ ಇನ್ನೊಬ್ಬರ ಹಾಳು ಮಾಡ್ಳೆ ಬೇಕಾಗಿ ಹುಟ್ಟಿದ ವಿಚಾರಕ್ಕೆ. ಅದು ಮತ್ಸರೀ ಬುದ್ಧಿ. ಇದರಿಂದಾದ ಹಾನಿ, ಕಷ್ಟ-ನಷ್ಟ, ಅಪಮಾನ ಇಂತಿಷ್ಟೇ ಹೇಳಿ ಇರ!. ಆರೋ ಹೇಳಿಕೊಟ್ಟ ಪಿತೂರಿಗೆ ಮಾಲಿದ ಬುದ್ಧಿ; ಹಿತ್ತಾಳೆ ಕೆಮಿ, ಹೀಂಗಿದ್ದ ಕುಟಿಲ,ಕುತಂತ್ರ ಮಾಂತ್ರ.., ಅದರ ತೀವ್ರತೆ ಘೋರ!. ವಾಸ್ತವಲ್ಲಿ  ನಮ್ಮ ಗುರುಪೀಠಕ್ಕೆ ಮಾಡಿದ ಸಹಿಸಲಸದಳ ಅನ್ಯಾಯ!!. ಆರು ಹೇಳಿಕೊಟ್ಟರೂ ನಿಜವಾದ ಗುರುಭಕ್ತರಿಂಗೆ ಇದು ಹುಟ್ಟುಗೋ?.ಇದಕ್ಕೆ ಮಾಂತ್ರ  ’ವಜ್ರಾದಪಿ’ ಹೋಲ್ಸೀರೂ ಸಾಲಲೇ ಸಾಲ!. ಕನಸು-ಮನಸ್ಸಿಲ್ಲಿಯೂ ಗ್ರಹಿಕಗೂ  ಬಾರದ್ದ ಕಲ್ಪನಗೂ ಮೀರಿದ ಕಠೋರ!!!.ಇದರಿಂದಪ್ಪ  ಹಾನಿ  ಹವ್ಯಕ ಸಮಾಜಕ್ಕೇ ಹೊರತು ಶ್ರೀಗುರುಗೊಕ್ಕಲ್ಲ!. ಈಗೀಗ  ಎಂತದೇ ಬರವಲೆ ಹೆರಟರೂ ಅದೇ ಯೋಚನೆ, ಅದೇ ಬೊಟ್ಟಿಂಗೆ ಬತ್ತು. ಅಂತೂ ಸತ್ಯ,ನ್ಯಾಯ ಒಳಿಶಿ  ಕಾಪಾಡೆಕ್ಕು ಹೇಳಿ  ನಮ್ಮೆಲ್ಲರ ಮನಸ್ಸಿನ  ಹೂಗಾಗಿ ಶ್ರೀರಾಮ ದೇವರಿಂಗೆ ಸಮರ್ಪಣೆ ಮಾಡುವೊಂ. ಎಂತ ಹೇಳ್ತಿ?

~~~***~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. shubha lakshmi

    ಒಳ್ಳೆ ಬರಹ ,ಸತ್ಪರಿಣಾಮಲ್ಲಿ ಕಬ್ಬಿಣದ ಗೊಣಸು ಮಾಡೀರೆ ಅಕ್ಕು ಅಲ್ಲೋ

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಪುತ್ತೂರಿನ ಪುಟ್ಟಕ್ಕಅಜ್ಜಕಾನ ಭಾವದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ದೀಪಿಕಾಮಾಲಕ್ಕ°ವಸಂತರಾಜ್ ಹಳೆಮನೆಶರ್ಮಪ್ಪಚ್ಚಿಜಯಶ್ರೀ ನೀರಮೂಲೆಡಾಗುಟ್ರಕ್ಕ°ವಾಣಿ ಚಿಕ್ಕಮ್ಮಚೆನ್ನಬೆಟ್ಟಣ್ಣನೆಗೆಗಾರ°ಚೂರಿಬೈಲು ದೀಪಕ್ಕಗೋಪಾಲಣ್ಣವೇಣೂರಣ್ಣಚುಬ್ಬಣ್ಣಕಳಾಯಿ ಗೀತತ್ತೆಅಕ್ಷರ°ಕಾವಿನಮೂಲೆ ಮಾಣಿಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿಪುತ್ತೂರುಬಾವಕೊಳಚ್ಚಿಪ್ಪು ಬಾವಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ