ಖರ ಬಂತು

April 3, 2011 ರ 12:24 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಖರ ಹೇಳ್ವ ವತ್ಸರ
ಬಂತು ಬಂತು ನೋಡಿರಿ
ಬೆಶಿಲು ಖಾರ ಬೇಕು ಈಗ
ಬದುಕು ಖಾರ ಮಾತ್ರ ಆಗ!

ಕತ್ತೆ ,ಕೆಲಸ ,ಸಹನೆ  ,ಕಷ್ಟ
ಆರಿಂಗಿಕ್ಕು ಅದರ ಇಷ್ಟ?
ಮರವಲಕ್ಕೊ ನಾವು ಕತ್ತೆ
ಕುದುರೆ ಕತೆಯ ನೀತಿ ಪಾಠ?

ಹಾಸ್ಯ ಮಾಡಲಕ್ಕೊ ನಾವು
ಬಾಯಿ ಸತ್ತ ಪ್ರಾಣಿ ಮುಖವ?
ಬೇವು ಇರಲಿ ಬೆಲ್ಲ ಇರಲಿ
ಎಷ್ಟೆ ಕಷ್ಟ,ಪೀಡೆ ಬರಲಿ

ಎದುರು ಬಂದರದರ ತಡೆವೊ
ಹಿಂದೆ ಹೋದರದರ ತುಳಿವೊ
ಮುಂದೆ ಹೋಪವಕ್ಕೆ ಒಂದು
ಸ್ಫೂರ್ತಿ ಅಲ್ಲೊ ಕತ್ತೆ ಇಂದು?

ಎಷ್ಟು ಹೀನ ಬೈಗಳನ್ನು
ಕೇಳಿ ಸಹಿಸಿದಂತ ಜೀವ!
ಬೆಳ್ಳಿ ವರ್ಷಕಿದರ ಹೆಸರು
ನೋಡಿ ಎಷ್ಟು ಮುಖ್ಯ ಭಾವ!

ಖರ ಬಂತು , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ಹೊಸ ವರ್ಶದ ಸುರುವಿಂಗೆ ಸೊಗಸಾದ ಪದ್ಯ. ಲಾಯಕಾಯಿದು. ಕತ್ತೆಯನ್ನೇ ಹೊಗಳಿ,ಮಾದರಿಯಾಗಿ ತೆಕ್ಕೊಂಡು ಬರದ್ದರಲ್ಲಿ ಹೊಸತನ ಇದ್ದು. ಗೋಪಾಲಣ್ಣ , ಬೆಳ್ಳಿ ವರ್ಷಕಿದರ ಹೆಸರು ನೋಡಿ ಎಷ್ಟು ಮುಖ್ಯ ಭಾವ ಹೇಳ್ತ ಗೆರೆಯ ಬಗ್ಗೆ ರಜ್ಜ ವಿವರಣೆ ಕೊಟ್ರೆ ಒಳ್ಳೆದಿತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಗೋಪಾಲಣ್ಣ,
  ಖರ ಹೇಳಿರೆ ಕತ್ತೆ ಹೇಳುವ ಅರ್ಥ ಇಪ್ಪದರ ಹಿನ್ನೆಲೆಲಿ ಬರದ ಈ ಕವನ ತು೦ಬಾ ಚೆ೦ದಕೆ ಸಕಾಲಲ್ಲಿ ಮೂಡಿದ್ದು.ಅರುವತ್ತು ಸ೦ವತ್ಸರ೦ಗಳಲ್ಲಿ ಇಪ್ಪತ್ತೈದನೆಯದು ಹೇಳುವದೂ ಸೂಕ್ಶ್ನಲ್ಲಿ ಬಯಿ೦ದು.
  ಕಷ್ಟ೦ಗಳ ಧೈರ್ಯಲ್ಲಿ ಎದುರಿಸಿ ಇಷ್ತ೦ಗಳ ಪ್ರೀತಿಲಿ ಸ್ವೀಕರಿಸಿ ಜೀವನ ಮು೦ದುವರಿಯಲಿ.ಶುಭಾಶಯ೦ಗೊ.

  [Reply]

  VA:F [1.9.22_1171]
  Rating: +1 (from 1 vote)
 3. ಗೋಪಾಲಣ್ಣ
  Gopalakrishna BHAT S.K.

  ಧನ್ಯವಾದ. ಕತ್ತೆ ಎಲ್ಲರ ಹೀನಾಯಕ್ಕೆ,ಅಲಕ್ಷ್ಯಕ್ಕೆ ಈಡಾದ ಪ್ರಾಣಿ.ಆದರೆ ೨೫ನೇ ಸಂವತ್ಸರಕ್ಕೆ ಇದರ ಹೆಸರು ಇಪ್ಪದು ಮುಖ್ಯ ಅಲ್ಲದೊ ಭಾವ?
  ಬೊಳುಂಬು ಮಾವನ ಪ್ರಶ್ನೆಗೆ ರಘು ಅಣ್ಣ ಉತ್ತರ ಬರದ್ದವು.ಆನು nODiddu ಈಗ.

  [Reply]

  VA:F [1.9.22_1171]
  Rating: 0 (from 0 votes)
 4. ಖರ ಸಂವತ್ಸರ ಖಾರ ಆಗದ್ರೆ ಸಾಕು. ಅಲ್ಲದ್ದೇ ಜಪಾನಿಲ್ಲಿ ತ್ಸುನಾಮಿ ಬಂದು ಪೂರ ಹೋಯಿದಡ. ಬುರುಡೆ ಬ್ರಹ್ಮ ಜೋಯಿಶಂ ಟೀವಿಲಿ ಬಂದು ಎಂತೆಲ್ಲ ಹೇಳಿ ಮನುಷ್ಯರ ಹೆದರ್ಸುತ್ತಾ ಇದ್ದಂ.

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  Gopalakrishna BHAT S.K.

  ಖಂಡಿತ ಪ್ರಳಯ ಆವುತ್ತಿಲ್ಲೆ ಈಗ. ಅದೆಲ್ಲಾ ಬುರುಡೆ.
  ಆರೂ ಹೆದರೆಕ್ಕು ಹೇಳಿ ಇಲ್ಲೆ.
  ಭೂಕಂಪ,ತ್ಸುನಾಮಿ ,ನೆರೆ ಎಲ್ಲಾ ಸಾಧಾರಣ ಪ್ರಾಕೃತಿಕ ವಿದ್ಯಮಾನಂಗೊ.ಮೊದಲೂ ಆದ್ದದು ಇದ್ದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಶುದ್ದಿಕ್ಕಾರ°ಮುಳಿಯ ಭಾವಮಾಷ್ಟ್ರುಮಾವ°vreddhiಸುವರ್ಣಿನೀ ಕೊಣಲೆದೊಡ್ಡಮಾವ°ಬೊಳುಂಬು ಮಾವ°ವೇಣೂರಣ್ಣಸಂಪಾದಕ°ಪುತ್ತೂರಿನ ಪುಟ್ಟಕ್ಕಬಂಡಾಡಿ ಅಜ್ಜಿಜಯಶ್ರೀ ನೀರಮೂಲೆಕಾವಿನಮೂಲೆ ಮಾಣಿಶ್ರೀಅಕ್ಕ°ದೇವಸ್ಯ ಮಾಣಿದೊಡ್ಮನೆ ಭಾವಕೆದೂರು ಡಾಕ್ಟ್ರುಬಾವ°ಶರ್ಮಪ್ಪಚ್ಚಿದೀಪಿಕಾರಾಜಣ್ಣವೆಂಕಟ್ ಕೋಟೂರುಯೇನಂಕೂಡ್ಳು ಅಣ್ಣಚೂರಿಬೈಲು ದೀಪಕ್ಕಶ್ಯಾಮಣ್ಣಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ