Oppanna.com

೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ವಿಜೇತರು

ಬರದೋರು :   ವಿಜಯತ್ತೆ    on   02/11/2012    7 ಒಪ್ಪಂಗೊ

ಬದಿಯಡ್ಕ:

ಪ್ರಥಮ ವಿಜೇತೆಃ  ಕೊಡಗಿನ  ಗೌರಮ್ಮ ಸ್ಮಾರಕ ದತ್ತಿನಿಧಿ ಹಾಂಗೂ ಕೊಡಗಿನ ಗೌರಮ್ಮ ಸ್ಮಾರಕ ಸಮಿತಿಯ ಸಹಯೋಗಲ್ಲಿ ನಡೆತ್ತಾ ಇಪ್ಪ ಸಣ್ಣಕಥಾಸ್ಪರ್ಧೆಲಿ ಈ ಸರ್ತಿ ಶ್ರೀಮತಿ ಜಯಲಕ್ಷ್ಮಿ ಟಿ ಭಟ್ಟ, ಮುಕ್ವೆ, ಹೊಸಮನೆ ಇವು ಬರೆದ ‘ಕಂಕಣ ಬಲ’ ಹೇಳ್ತ ಕಥೆ ಪ್ರಥಮ ಬಹುಮಾನ ಗೆದ್ದುಕೊಂಡಿದು. ಇವು ಹೊಸಮನೆ ತಿರುಮಲೇಶ್ವರ ಭಟ್ಟರ ಹೆಂಡತಿ. ಇವಕ್ಕೆ ಹೋದಸರ್ತಿ ಇದೇ ವೇದಿಕೆಲಿ ಮೂರನೇ ಬಹುಮಾನ ಬಂದಿತ್ತು. ಇವು ಕೆಲವು ವರ್ಷಂದ ಸಾಹಿತ್ಯ ಕ್ಷೇತ್ರಲ್ಲಿ ಬರೆತ್ತಾ ಇದ್ದೊಂಡು ದ್ವಿತೀಯ ತೃತೀಯ ಬಹುಮಾನಂಗೊ ಬಂಯಿಂದು. ಪುತ್ತೂರಿಂದ ಪ್ರಕಟಪ್ಪ ‘ಶಿವಶಾಸನಂ’ ಹೇಳ್ತ ಪತ್ರಿಕೆಲಿ ಇವರ ಲೇಖನ, ಕಥೆ, ಪ್ರವಾಸಕಥನಂಗೊ ಪ್ರಕಟ ಆಯ್ದು.

ದ್ವಿತೀಯ ವಿಜೇತೆಃ ದ್ವಿತೀಯ ಬಹುಮಾನ ಪಡದವು ನಮ್ಮ ಅನುಪಮಾ ಉಡುಪುಮೂಲೆ. ಇವರ ‘ಶರಣರ ಬದುಕು ಮರಣದಲಿ ನೋಡು’ ಹೇಳ್ತ ಕಥೆಗೆ ಬಹುಮಾನ ಬಂದದು. ಇವು ಕಂಪ್ಯೂಟರ್ ಸೈನ್ಸಿಲಿ ಪದವಿ ಪಡೆದವೂ ಸಂಗೀತ ವಿದುಷಿಯೂ ಭರತನಾಟ್ಯ ಪ್ರವೀಣೆಯೂ ಶಿಕ್ಷಕಿಯೂ ಅಲ್ಲದ್ದೆ ನಮ್ಮ ಒಪ್ಪಣ್ಣ ಬಯಲಿನ ಅನು ಉಡುಪುಮೂಲೆ. ಇವು ಶಾಲಾ ಕಾಲೇಜ್ ಕಲಿತ್ತಿಪ್ಪಾಗಲೇ ಪ್ರಬಂಧ, ಭಾಷಣಂಗಳಲ್ಲಿಯೂ ಬಹುಮಾನ ಪಡಕೊಂಡಿತ್ತಿದ್ದವು. ಭರತನಾಟ್ಯ ಪ್ರವೀಣೆಯಾದ ಇವರ ದೆಹಲೀ ಕನ್ನಡ ಸಮ್ಮೇಲನ ಗೌರವ ಸನ್ಮಾನ ಮಾಡಿದ್ದವು. ಬೆಂಗಳೂರಿನ ಒಂದು ಸಂಸ್ಥೆ ‘ಸುವರ್ಣ ಕರ್ನಾಟಕ’ ಹೇಳ್ತ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದ್ದು. ಭರತನಾಟ್ಯ ಜೂನಿಯರ್, ಸೀನಿಯರ್ ಮತ್ತೆ ವಿದ್ವತ್ ಪರೀಕ್ಷೆಗೊಕ್ಕೆ ತೀರ್ಪುಗಾರರಾಗಿ ಇವರ ಆಹ್ವಾನಿಸುತ್ತವು. ಇವು ತನ್ನ ಊರಿಲ್ಲೇ ‘ಲಾಸ್ಯರಂಜಿನೀ ಉಡುಪುಮೂಲೆ’ ನೃತ್ಯಶಾಲೆ ಪ್ರಾರಂಭಿಸಿ ನೂರಾರು ಶಿಷ್ಯರಿಂಗೆ ನೃತ್ಯಾಭ್ಯಾಸ ಕೊಡ್ತವು ಹೇಳ್ವದು ನವಗೊಂದು ಹೆಮ್ಮೆ.

ತೃತೀಯ ವಿಜೇತೆಃ ಮೂರನೇ ಬಹುಮಾನ ಶಿವಮೊಗ್ಗದ ತೀರ್ಥಹೞಿ ತಾಲೂಕಿನ ಶ್ರೀಮತಿ ಹೇಮಾ ಮನೋಹರ್ ಬರೆದ ‘ಹೊಸ ಅಧ್ಯಾಯ’ ಹೇಳ್ತ ಕಥೆಗೆ ಬಯಿಂದು. ಇವು ಪ್ರಸಿದ್ಧ ಸಾಹಿತಿಯೂ ಪತ್ರಿಕೋದ್ಯಮಿಯೂ ಶಿಕ್ಷಕರೂ ಆಗಿದ್ದ ದಿವಂಗತ ವೈ ಮಹಾಲಿಂಗ ಭಟ್ಟರ ಸುಪುತ್ರಿ. ಪ್ರಸ್ತುತ ಕೃಷಿಕರೂ ಸಮಾಜ ಸೇವಕರೂ ಆದ ಶ್ರೀಯುತ ಸಿ. ಕೆ. ಮನೋಹರ ರಾವ್ ಅವರ ಹೆಂಡತಿ. ಶಾಲಾ ಕಾಲೇಜು ದಿನಂಗಳಲ್ಲೇ ನಾಟಕ, ಕಥೆ, ಕವನ ಬರೆಯುವ ಹವ್ಯಾಸ ಬೆಳಸಿಕೊಂಡಿದ್ದಲ್ಲದ್ದೆ ಪತ್ರಿಕೆಗೊಕ್ಕೂ ಬರೆಯುತ್ತಾ ಆಕಾಶವಾಣಿಲೂ ಕಾರ್ಯಕ್ರಮ ನೀಡಿದ್ದವು.

ತೀರ್ಪುಗಾರರುಃ ಕಥಾಸ್ಪರ್ಧೆಗೆ ತೀರ್ಪುಗಾರರಾಗಿ ಸಹಕರಿಸಿದವು ಪ್ರಸಿದ್ಧ ಸಾಹಿತಿಯೂ ನಿವೃತ್ತ ಅಧ್ಯಾಪಕರೂ ಆದ ಶ್ರೀಯುತ ವಿ. ಬಿ. ಕುಳಮರ್ವ. ಇನ್ನೊಬ್ಬರು ಪ್ರಖ್ಯಾತ ಸಾಹಿತಿಯೂ ಅಧ್ಯಾಪಕರೂ ಆದ ಬೇರ್ಕಡವು ಗೋಪಾಲಕೃಷ್ಣ ಭಟ್ ಹಾಂಗೂ ಹೆಸರಾಂತ ಕತೆಗಾರ್ತಿ ಎ. ಪಿ ಮಾಲತಿಯವು. ಇವಕ್ಕೆಲ್ಲರಿಂಗೂ ಧನ್ಯವಾದಂಗೋ.

~~~***~~~

7 thoughts on “೨೦೧೨ನೇ ಸಾಲಿನ ಕೊಡಗಿನ ಗೌರಮ್ಮ ಸ್ಮಾರಕ ಪ್ರಶಸ್ತಿ ವಿಜೇತರು

  1. ಬಹುಮಾನ ವಿಜೇತರಿಂಗೆ ಅಭಿನಂದನೆಗೊ.

    1. ಹರೇ ರಾಮ. ಒಳ್ಳೆ ಕೆಲಸವ ಲಾಯಕಾಗಿ ಮಾಡಿದ್ದಿ. ಅಭಿನ೦ದನಗೊ. ಬಹುಮಾನಿತರಿ೦ಗುದೆ ಧನ್ಯವಾದ೦ಗೊ.

  2. ವಿಜೀತರಿ೦ಗು ಭಾಗವಹಿಸಿದವಕ್ಕು, ತೀರ್ಪುಗಾರರಿ೦ಗು ಶುದ್ದಿಗೆ ಬೈಲಿಲ್ಲಿ ಒಪ್ಪ ಕೊಟ್ಟವಕ್ಕು ಎಲ್ಲರಿ೦ಗು ಧನ್ಯವಾದ೦ಗೊ

  3. ಅಭಿನಂದನೆಗೊ ಎಲ್ಲೊರಿಂಗೂದೆ.

  4. ಹರೇ ರಾಮ. ವಿಜೇತರಿಂಗೆ ವಿಶೇಷ ಅಭಿನಂದೆನೆಗಳು. ಭಾಗವಹಿಸಿದವಕ್ಕೂ ಅಭಿನಂದೆನೆಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×