ಕೂಸುಗಳೇ ಇಲ್ಲೆಡ. ಇದ್ದರೂ….!!

ಪ್ರಾಯಕ್ಕೆ ಬಂದ ಎಲ್ಲ ಮಾಣಿಯಂಗವಕ್ಕೆ ಈಗ ಒಂದೇ ಸಮನೆ ‘ಮದುವೆ’ದೇ ತಲೆಬೇನೆ. ಕೂಸುಗಳೇ ಇಲ್ಲೆಡ. ಇದ್ದರೂ ಅವರ ಏರ್ಪಾಡು ದೊಡ್ಡದಡ.. ನಮ್ಮ ಆರು ಒಪ್ಪುತ್ತವು.. ಒಪ್ಪಿರೂ ಅವರ ನಿರೀಕ್ಷೆ ಎಂತೆಲ್ಲ ಇದ್ದೋ ಏನೋ.. ಇತ್ಯಾದಿ. ಮಾಣಿಯಂಗಳ ಸಂಕಷ್ಟ ಹೇಳ್ಳೆಡಿಯ. ಎನ್ನ ಆತ್ಮೀಯ ಗೆಳೆಯ/ಮಾಣಿ ಫೋನಿಲಿ ಕಷ್ಟ ಹೇಳಿಗೊಂಡ.
ಅವಂದೇ ಮಾತಿಲಿ ನಿಂಗ ಕೇಳಿ :-
‘ಮೊನ್ನೆ ನೆರೆಕರೆಲಿ ಒಂದು ಪೂಜೆಗೆ ಹೋದ್ದು ಭಾವಾ…ಹಲವಾರು ವಿಶಯಂಗಳ ಎಡೆಲಿ, ಮದುವೆ ವಿಷಯವೂ ಬಂತು. ಅದಲ್ಲೊಂದು ಕಥೆ. ಕೂಸಿನ ಅಪ್ಪತೀರಿ ಹೋಯಿದವು, ಮನೇಲಿ ಅಜ್ಜಿ,ಅಬ್ಬೆ, ಒಂದು ತಂಗೆ ಮಾತ್ರ. ಗೆಂಡು ಮಕ್ಕೊ ಹೇಳಿ ಆರೂ ಇಲ್ಲೆ. ಆ ಕೂಸಿನ ಅಜ್ಜಿಯೂ ಅತ್ಲಾಗಿಯೋ ಇತ್ಲಾಗಿಯೋ ಹೇಳಿ ಇದ್ದು.. ಉಸಿರು ಕಟ್ಟುದು, ಸೊಂಟಬೇನೆ, ಬಿಪಿ, ಶುಗರು ಇತ್ಯಾದಿ ಪೂರ ಇದ್ದು. ಕುಟುಂಬಕ್ಕೆ ಸದ್ಯ ಗುರುಗಳ ಮುಷ್ಠಿ ಅಕ್ಕಿ ಯೋಜನೆಯೇ ದಾರಿ. ಇತ್ಲಾಗಿ ರಮಣಜ್ಜನ ಮಗ ಬಟ್ಟತ್ತಿಗ್ಗೆ ಹೋಪದು. ಅವನೂ ಚಿಲ್ಲರೆ ಅಲ್ಲ. ಅಕ್ಕಿ,ತೆಂಗಿನ ಕಾಯಿ, ವಸ್ತ್ರಂದ ಹಿಡುದು ಎಲ್ಲ ಸೇರಿ ತಿಂಗಳಿಂಗೆ 10-50 ಸಾವಿರ ಸಂಪಾದನೆ ಬೇಡ ಬೇಡ ಹೇಳಿರೂ ಇದ್ದು. ಸರಿ ಆ ಕೂಸಿನ ಕೇಳುವ ಹೇಳಿ.. ಕೇಳಿಯೂ ಆತು. ‘ಎಬೆ.. ಅವನ ಬಟ್ಟ ಬೇಡಲೇ ಬೇಡ..’ ಕೂಸು ಕಡ್ಡಿ ತುಂಡು ಮಾಡಿದಾಂಗೆ ಹೇಳಿತ್ತು. ಇದು ಒಂದು ಕಥೆ.

ಇನ್ನೊಂದು ಕೆಳಾಣ ಮನೆ ಶಂಕರಜ್ಜಂದು. ಶಂಕರಜ್ಜ ಹೇಳಿರೆ ಗೊಂತಾತೋ.. ಅವ ಮದಲಿಂಗೇ ಹೆಸರು ಮಾಡಿದವು. ಅಂದ್ರಾಣ ಕಾಲಲ್ಲೇ ಅಮೆರಿಕ,ಯುರೋಪ್ ಹೇಳಿ ಊರಿಡೀ ತಿರುಗಿ ಕೈತುಂಬ ಸಂಪಾದನೆ ಮಾಡಿ, ನಮ್ಮ ಊರೇ ಚೆಂದ ಹೇಳಿ ಇಲ್ಲೇ ಇದ್ದವು. ಅವಕ್ಕೆ ಮಾಣಿ ಕೂಸು ಹೇಳಿ ಎಲ್ಲವೂ ಆಗಿ ಒಬ್ಬನೇ ಮಗ. ವೃತ್ತಿಲಿ ಕನ್ನಡ ಮಾಟ್ರ. ಪ್ರಾಯ ತುಂಬಿದ ಅವಂಗೆ ಒಂದು ಕೂಸಿನ ಜಾತಕ ನೋಡಿದವು. ಭಾರೀ ಚೆಂದಕೆ ಹೊಂದಾಣಿಕೆ. ಶೇ.70 ಆವ್ತು. ಕೂಸಿನ ಕಡೆಯವು, ನಮ್ಮ ಕೂಸಿನ ಕೊಡುವ ಮನೆ ಹೇಂಗಿದ್ದು ಹೇಳಿ ಅಳದು ತೂಗಿ ಎರಡೆರಡು ಸರ್ತಿ ಮಾಣಿಯ ಮನೆ ನೋಡಿಕ್ಕಿ, ಅವಲಕ್ಕಿ, ಸಜ್ಜಿಗೆ, ಸಾಟು ತಿಂದು ಹೋಗಿ ಅಕ್ಕು ಹೇಳಿಯೂ ಆಯ್ದು. ಆದರೆ.. ಒಂದು ಷರತ್ತು ಹಾಕಿದ್ದವು.. ಅದಕ್ಕೆ ಶಂಕರಜ್ಜ ಕಂಗಾಲು. ಕೂಸು ಪುತ್ತೂರಿಲಿ ಎಮ್ಮೆಸ್ಸಿ ಮಾಡ್ತಾ ಇದ್ದು, ಕಲ್ತಾದ ಮೇಲೆ ಕೆಲಸಕ್ಕೆ ಹೋಯೆಕ್ಕನ್ನೆ, ಅದಕ್ಕೊಂದು ಬಿಡಾರ ಆಯೆಕ್ಕಲ್ದಾ ಭಾವ ಹೇಳಿ ಕೂಸಿನ ಕಡೆಯವ್ವ ಪಿಡಿ ತೆಗದ್ದವು. ಪಾಪ ಶಂಕರಜ್ಜ ಎಂತ ಹೇಳುಗು..? ಕಾಸರಗೋಡಿಲಿ ಬೇಕಾದಷ್ಟು ಆಸ್ತಿ ಪಾಸ್ತಿ, ತೋಟ ಇಪ್ಪವು, ಅದೂ ಒಬ್ಬನೇ ಮಗ ಬದಿಯಡ್ಕ ಹತ್ತೆರೆ ಉದ್ಯೋಗಿ.. ಮತ್ತೆ ಪುತ್ತೂರಿಲಿ ಬಿಡಾರ.. ಶಂಕರಜ್ಜ ದೃಢ ನಿರ್ಧಾರ ಮಾಡಿದವು.. ನವಗೆ ಆ ಕೂಸು ಬೇಡ..!!

ಆನು ಮನಸ್ಸಿಲ್ಲಿಯೇ ಜಾನ್ಸಿಗೊಂಡೆ, ಮದಲಿಂಗೆ ಪೂಜೆಗೆ ತೆಂಕ್ಲಾಗಿ ಹೋದವು ಎರಡು ಮೊರು ಮದುವೆ ಅಕ್ಕಡ. ಅದೊಂದು ಕಾಲ ಇದೊಂದು ಕಾಲ.. ಆದರೂ ಎನ್ನ ಚಿಂತೆ ಅದಲ್ಲ.. ಎನಗೆ ಮದುವೆ ಆಯೆಕ್ಕಾರೆ ಆನು ನೆಮ್ಮದಿಯ ಲೆಕ್ಚರಿಂಗ್ ಕೆಲಸ ಬಿಡೆಕಕ್ಕೋ, ನೆಮ್ಮದಿ ಹೋಪ ಬೆಂಗ್ಳೂರಿಲಿ ಕಿಷ್ಕಿಂಧೆ ಹಾಂಗಿಪ್ಪ ರೂಮಿಲಿ ಕೂರೆಕಕ್ಕೋ.. ಅಪ್ಪ ಅಮ್ಮನ ಕಥೆ ಎಂತದು..?’

ಅವ ಮಾತಾಡ್ತಾ ಇತ್ತಿದ್ದ… ಎನಗೆ ತಿರುಗಿ ಮಾತಾಡ್ಲೆಡಿಗಾತಿಲ್ಲೆ.. ಭಾವಾ.. ಆನು ಇನ್ನೊಂದರಿ ಮಾತಾಡ್ತೆ ಹೇಳಿ ಫೋನ್ ಮಡುಗಿದೆ..!!

ಈಚ ಭಾವ

   

You may also like...

5 Responses

 1. ಅಪ್ಪು, ನಿಂಗ ಬರದ್ದು ಸರಿ.. ಎಂತ ಮಾಡುದು ಕಾಲಕ್ಕೆ ?

 2. ಶೇಡಿಗುಮ್ಮೆ ಪುಳ್ಳಿ says:

  ಈಚ ಭಾವಾ ,
  ಸಂಗತಿ ಅಪ್ಪಾದ್ದೇ, ಉತ್ತರ ಹೇಳುಲೆ ನವಗರಡಿಯ – ಈಗಾಣ ಕೂಸುಗಳೇ ಹೇಳೆಕಷ್ಟೆ .

 3. ವೆಂಕಟಕೃಷ್ಣ.ಕೆ.ಕೆ. says:

  ಅತ್ತೆಗೊಂದು ಕಾಲ ಸೊಸೆಗೊಂದು ಕಾಲ..
  ಆರೋ ಮಾಡಿದ್ದದರ ಆರೋ ಉಂಬ ಸಮಯ…

 4. jayashree.neeramoole says:

  ಕಾಲಾಯ ತಸ್ಮೈ ನಮಃ. ಸದ್ಯಲ್ಲೇ ಸಜ್ಜನರಿಂಗೆ ಒಳ್ಳೆ ಕಾಲ ಬಕ್ಕು ಹೇಳಿ ಆಶಿಸುವ… ಸಾಧ್ಯವಾದಷ್ಟು ಗೋವಿನ ಉಳಿವಿಂಗಾಗಿ ಹೋರಾಡುವ… ಕಾಮಧೇನು ಗೋಮಾತೆ ನಮ್ಮ ಕಣ್ಣೆದುರು ಸಂತೃಪ್ತಿಲ್ಲಿ ಓಡಾಡುವ ಕಾಲ ಬಂತು ಹೇಳಿ ಆದರೆ ನಮ್ಮೆಲ್ಲರ ಕಷ್ಟ ಪರಿಹಾರ ಆದ ಹಾಂಗೆ…

 5. ರಘು ಮುಳಿಯ says:

  ದೂರದ ಬೆಟ್ಟ ಹಸಿರು ಕಾ೦ಬದಲ್ಲದೋ?
  ಸಮಸ್ಯೆ ಎಲ್ಲಾ ಜಾಗೆಲಿ ಇರ್ತು,ಊರಿಲಿ ಒ೦ದಾದರೆ ಪೇಟೆಲಿ ಇನ್ನೊ೦ದು.
  ಆದರೆ ನಮ್ಮ ಸಮಾಜಕ್ಕೆ ಬ೦ದ ಈ ಸಮಸ್ಯೆಗೆ ಕಾಲವೇ ಪರಿಹಾರ ಕೊಡೆಕ್ಕಷ್ಟೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *