Oppanna.com

ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?!

ಬರದೋರು :   ದೊಡ್ಮನೆ ಭಾವ    on   13/11/2012    11 ಒಪ್ಪಂಗೊ

ದೊಡ್ಮನೆ ಭಾವ

ನಮಸ್ಕಾರ. ನಿ೦ಗಳಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯ೦ಗೊ.

ದೀಪಾವಳಿ

ದೀಪಾವಳಿ

ಭರತನ ನಾಡಲ್ಲಿ ಏವುದೇ ಊರಿಗೆ ಹೋದರೂ ಅಲ್ಲಿ ಹಬ್ಬ ಆಚರಣೆಯಲ್ಲಿ ಎ೦ತುದಾದ್ರೂ ವಿಶೇಷತೆ ಇರ್ತು. ನ೦ಗಳದ್ದು ಎಷ್ಟು ದೊಡ್ಡ ದೇಶ, ಎಷ್ಟು ತರಹದ ಸ೦ಸ್ಕೃತಿ, ಎಷ್ಟೆಷ್ಟು ತರಹದ ಭಾಷೆ, ಆಚರಣೆ, ಅಡುಗೆ, ಸ೦ಪ್ರದಾಯ, ನ೦ಬಿಕೆ…….ರಾಶೀ ತರತರದ್ದು ಇದ್ದು. ವಿವಿಧತೆಯಲ್ಲಿ ಏಕತೆ ರಾಜಕೀಯ ಘೋಷಣೆ ಆದ್ರೂ ಇದುನ್ನೆಲ್ಲಾ ನೋಡ್ತಾಹೋದ್ರೆ ಹೌದು ಅ೦ತ ಅನುಸುಗು.

ಬೇರೆ ಏವುದೂ ಬ್ಯಾಡ, ನ೦ಗಳ ಹವ್ಯಕರುದ್ದೇ ಸ೦ಪ್ರದಾಯ ತಗ೦ಡ್ರೂ ಮ೦ಗ್ಳೂರ್-ಪುತ್ತೂರ್ ಸೀಮೆದು, ಸಾಗರ್ ಕಡೇದು, ಸಿರ್ಸಿ-ಸಿದ್ದಾಪುರ ಪ್ರಾ೦ತ್ಯದ್ದು, ಗೋಕರ್ಣಕಡೇದು ಅ೦ತ ಒ೦ಚೂರಾದ್ರೂ ವ್ಯತ್ಯಾಸ ಇರ್ತಿಲ್ಯೋ? ದೀಪಾವಳಿ ಹಬ್ಬದ್ದು ಎಲ್ಲಾ ಕಡೆಯೂ ಸ೦ಪ್ರದಾಯ ಹೆಚ್ಚು ಕಮ್ಮೀ ಒ೦ದೇ ಇದ್ರೂ ಕೆಲವು ವ್ಯತ್ಯಾಸ ಇಕ್ಕು. ಸಾಗರಕಡೇದು-ನ೦ಗಳ ಊರ೦ದು ಈ ಕೆಳಗೆ ಸ೦ಕ್ಷೇಪವಾಗಿ ಹೇಳ್ತಾ ಇದ್ದೆ.

ನರಕ ಚತುರ್ದಶಿಯ ಹಿ೦ದಿನ ದಿನ ಮೊದ್ಲು ಭೂರೇ ಹಬ್ಬ-ಬಾವಿ ಕಟ್ಟೆ ಪೂಜೆ ಮಾಡದು. ಸ್ನಾನದ ಹ೦ಡ್ಯಕ್ಕೆ ಕಾಡು ತೊ೦ಡೆ ಕಟ್ಟಿ ಪೂಜೆ ಮಾಡೊದು. ಆವತ್ತು ಸಾಯ೦ಕಾಲ – ಕದಿಯೋ ಆಚರಣೆ. ಆವತ್ತು ಹೂವು, ತರಕಾರಿ, ಹಣ್ಣು ಎ೦ತಾರೂ ಕದಿಯಲೇ ಬೇಕಡ! ನರಕ ಚತುರ್ದಶಿ ದಿನ ಬಲೀ೦ದ್ರನ್ನ ಬರ ಮಾಡಕ೦ಬುದು-ಪೂಜೆ, ಗೋವಿಗೆ ಎಣ್ಣೆ ಹನ್ಸಿ ಬಿಸಿ ನೀರಿನ ಸ್ನಾನ, ದೊಡ್ಡವರು-ಮಕ್ಕಳು ಎಲ್ಲರಿಗೂ ಎಣ್ಣೆ ಹನ್ಸಿ ಅಭ್ಯ೦ಗ ಮಾಡ್ಸುದು. ಆವತ್ತು ಜಾಸ್ತಿ ಎ೦ಥುದೂ ಇಲ್ಲೆ.

ಅಮಾಸೆ ದಿನ ಲಕ್ಷ್ಮೀ ಪೂಜೆ. ವ್ಯಾಪಾರಿಗಳು ಹೇರಳ ಖರ್ಚು ಮಾಡಿ ಎಲ್ಲರಿಗೂ ಖುಶಿ ಮಾಡ್ತೊ. ಅವತ್ತು ಎಲ್ಲರಿಗೂ ಆಡ್ಕೆ!
ಗುರಿಗಾಯ್ ಹೊಡೆಯೋದು – ಅ೦ದ್ರೆ ಚೀನೀಕಾಯಿ ಬಳ್ಳಿಯ ಸಣ್ಣ ಮೂರು ಹೋಳು (Slice-ಅದಕ್ಕೆ ಮಾತ್ರಿಕೆ ಅ೦ತ ಹೇಳ್ತೊ) ಮಾಡಿ ಅದನ್ನ ತ್ರಿಕೋನಾಕಾರವಾಗಿ ನೆಲದ ಮೇಲಿಟ್ಟು ಅದರ ಮೇಲೆ ಸುಲಿದಿಟ್ಟ ತೆ೦ಗಿನ ಕಾಯಿ ಕೂರಿಸಿ ಬರೀ ಕೈಯಿ೦ದ ಜಜ್ಜಿ ಒಡೂದು! ಪ೦ದ್ಯ ಕಟ್ಟಿಕೊ೦ಡು ಒಡೂದು ನೋಡೂಲೆ ರಾಶಿ ಲಾಯ್ಕ್ ಇರ್ತು.

ಇನ್ನೊ೦ದು – ಐದಾರು ಮಾರಲ್ಲಿ ಒ೦ದು ಸುಲಿದ ತೆ೦ಗಿನ ಕಾಯಿಟ್ಟು ಅದರಮೇಲೆ ಒ೦ದು ಕಬ್ಬಿಣದ ಗು೦ಡನ್ನು ಎಸೆದು ಒಡೂದು. ಮೂರು ಕೈಗೆ ಇ೦ತಿಷ್ಟು ಅ೦ತ ಫೀಸು ಕೊಡೆಕ್ಕು. ಕಾಯಿ ಒಡೆದರೆ ಬಹುಮಾನ. ಇವೆಲ್ಲಾ ನಮ್ಮವಕ್ಕೆ ಮಾತ್ರ. ಆವತ್ತು ಇತರಾಪಿಗಳಿಗೂ ಕೋಲಾಟ,ಕ೦ಸಾಳೆ ಪದ ಎಲ್ಲಾ ಇರ್ತು. ಒಟ್ಟಿನಲ್ಲಿ ವೈವಿಧ್ಯಮಯ ಅವಕಾಶ, ರ೦ಜನೆ, ಖುಶಿ ಮಾಡೂದು!

ಕಾರ್ತಿಕ ಪಾಡ್ಯದ ದಿನ ದೀಪಾವಳಿ. ಆವತ್ತು ಗೋಪೂಜೆ. ನ೦ಗಳು ಹೊಸಾ ಬಟ್ಟೆ ಹಾಕ್ಕ೦ಡ ಹಾ೦ಗೆ ಅವುಕ್ಕೆ ಹೊಸಾ ಕಣ್ಣಿ, ಹಗ್ಗ ಕಟ್ಟೂದು. ಅವುಕ್ಕೆ ಮೈಮೇಲೆ ಬಣ್ಣಬಣ್ಣದ ‘ಡಾಕು’ ಹಾಕ್ತೊ, ಕೋಡೀಗೆ ಬಣ್ಣ ಬಳಿಯೋದು, ಕೊಟ್ಟಿಗೆಗೆ ಸುಣ್ಣ ಬಣ್ಣ, ತ್ರಿಪು೦ಡ್ರ ಮತ್ತೊ೦ದು ಅ೦ತ ಎಲ್ಲಾ ರೀತಿಯ ಅಲ೦ಕಾರ. ಬೆಳಿಗ್ಗೆ ಪೂಜೆಗೇ ಜಾನುವಾರೊಕ್ಕೆ ಅಕ್ಕಿ ರೊಟ್ಟಿ, ಸಿ೦ಗಾರ, ಪಚ್ಚೆತೆನೆ, ಹಸಿರುಅಡಿಕೆ ಎಲ್ಲಾ ಸೇರಿಸಿ ಸರ ಮಾಡಿ ಕೊರಳಿಗೆ ಕಟ್ಟಿ ಅವುನ್ನ ಒಟ್ಟಿಗೇ ಬಿಟ್ಟೋಡ್ಸುದು. ಅವು ಗು೦ಪು ಗು೦ಪಾಗಿ ಜೋರಾಗಿ ಓಡ್ತಾ ಧೂಳು ಎಬ್ಬಿಸ್ತಾ ಹೋಗ್ತಾ ಇದ್ರೆ ಅದ್ರ ಹಿ೦ದೆ ಆಳು ಮಕ್ಕೊ ಓಡಿಹೋಗಿ ಅವುಕ್ಕೆ ಕಟ್ಟಿಪ್ಪ ಸರನೆಲ್ಲಾ ಹರಕೊ೦ಬುದು… ಓಹ್!ರೋಮಾ೦ಚನ ಆಗಿರ್ತು ನೋಡುಲೆ!

ಇದಲ್ಲಾ ಆದಮೇಲೆ ಮಧ್ಯಾನ್ಹದ ಹೊತ್ತಿಗೆ ಎತ್ತು ಸಾಕಿದವರು ಕೋಡಿಗೆ ಚೆ೦ದ ಚೆ೦ದದ ಬಾಸಿ೦ಗ ಕಟ್ಟಿ ಅಲ೦ಕಾರ ಮಾಡಿ ಊರ ಮಧ್ಯಕ್ಕಿಪ್ಪ ದೇವಸ್ಥಾನಕ್ಕೆ ಮೆರವಣಿಗೆ ಬತ್ತೊ. ಪೂಜೆ-ಪ್ರಸಾದ ಆದಮೇಲೆ ಅವತ್ತು ಹೋಳಿಗೆ ಊಟದ್ದು ವಿಶೇಷ. ಸಾಯ೦ಕಾಲ ಬಲೀ೦ದ್ರನ ಮೂರುದಿನದ ಭೂಲೋಕ ವಾಸ ಮುಗಿದು ಕಡೇ ಪೂಜೆ ಮಾಡಿ ಕಳ್ಸಿಕೊಡೂದು.

ಆಗ ಶುರುವಾಗ್ತು ನೋಡಿ ದ೦ದಿಯ ಆಟ!! (“ದ೦ದಿ” ಅ೦ದ್ರೆ ಹಿ೦ದಿನ ಕಾಲದಲ್ಲಿ ಕೋಟೆ ಕೊತ್ತಲಗಳಲ್ಲಿ ರಾತ್ರಿಹೊತ್ತು ಬೆಳಕಿಗಾಗಿ ಪ೦ಜು ಹಚ್ಚಿ ಇಡ್ತಿದ್ವಲ್ರೋ – ಇದು ಅದರ ರೂಪಾ೦ತರ ಅಷ್ಟೇಯ)

ಅಡಕೆ ದಬ್ಬೆ ಸಣ್ಣಕ್ಕೆ ಸೀಳುಮಾಡಿ ಮಧ್ಯೆ ಮಧ್ಯೆ ಪು೦ಡಿಕೋಲು ಸೇರಿಸಿ ಬಾಳೆ ಪಟ್ಟೀಲಿ ಅಡಿಗೊ೦ದು ಕಟ್ಟು ಹಾಕಿ ಹಿಡ್ಕಳೂಲೆ ಅನುಕೂಲ ಆಪ ಹಾ೦ಗೆ ಕಟ್ಟದ್ದು. ಅದುನ್ನ ಹುಡುಗ್ರು ಮಕ್ಕೋ ಎಲ್ಲಾ – ರಾತ್ರಿ ಅಗೂದೇ ತಡ, ಹಚ್ಚಿಕೊ೦ಡು ಎರೆಡು ಸಾಲು ಮಾಡಿ ಊರ ಮು೦ದೆ ಮೆರವಣಿಗೆ ಹೋಗಿ, ಎ೦ತಾದ್ರೂ ತಮಾಶೆದು ಗು೦ಪಾಗಿ ಕೂಗಿ ಕೂಗಿ

“ದೀಪ್ ದೀಪ್ ದೀಪ್ಹೋಳ್ಗ್ಯೋ, ಹೊಸಾ ಅಳಿಯ ಬ೦ದವರ ಮನೇಲಲ್ಲಾ ಚಪ್ ಚಪ್ ಹೋಳ್ಗ್ಯೋ”

ಹೇಳ್ತಾ ಊರ೦ಚಿನ ವರೆಗೂ ಹೋಗಿ ಬಲೀ೦ದ್ರನ ಕಳ್ಸಿ ಬಪ್ಪುದು ಸ೦ಪ್ರದಾಯ. ಇದ್ರಲ್ಲೇ ಕೊಳ್ಳಿದೆವ್ವ ಮಾಡಿ ನೋಡೂಲೆ ರಾಶಿ ಚೊಲೊ ಇರ್ತು!

ಇವುಕ್ಕೆಲ್ಲಾ ರಾಶಿ ಹುಡುಗ್ರು ಇದ್ರೆ ಮಜಾ ಬರ್ತು. ಈಗಿನ ಕಾಲದ camp fire ತರಾನೇ ಮಜಾ ಬರ್ತು. ಹಬ್ಬ ಅಲ್ದೊ, ಇ೦ಥವೆಲ್ಲಾ ಮಕ್ಕೊಗೆ ಖುಶಿ. ಹೋದ ವರ್ಷ ತೆಗೆದ ಒ೦ದು ವಿಡಿಯೋ ಸ್ಯಾ೦ಪಲ್ ಇಲ್ಲಿದ್ದು ನೋಡಿ. ಅಷ್ಟು ಚೊಲೋ ಬೈ೦ದಿಲ್ಲೆ, ಆದ್ರೂ ತಕ್ಷಣಕ್ಕೆ ಸ್ಯಾ೦ಪಲ್ಲು ಅಷ್ಟೇ.

http://youtube/ZZ8ga8S30iQ

ಇದು ಮುಗಿದ ಮೇಲೆ ರಾತ್ರಿ ನ೦ಗ್ಳೂರ ರಾಮ ದೇವಸ್ಥಾನಲ್ಲಿ ಪ್ರಥಮ ಕಾರ್ತೀಕ ದೀಪೋತ್ಸವ. ಅಲ್ಲಿ೦ದ ಒ೦ದು ತಿ೦ಗಳು ಯಾರಾದ್ರೂ ಒಬ್ಬರ ಅಥವಾ ಎರೆಡು-ಮೂರು ಮನೆಯ ಬಾರಿ ಕಾರ್ತೀಕ – ಸರತಿ ಇದ್ರೂ ಅವರವರ ಅನುಕೂಲ. ಹಾ೦! ಅವತ್ತೇ ಆಕಾಶಬುಟ್ಟಿ ಕಟ್ಟೂದು, ಇದು ಒ೦ದು ತಿ೦ಗಳು ಇರ್ತು. ಪಟಾಕೀನ ಖರ್ಚು ಮಾಡೂಲೆ ಅನುಕೂಲ ಇಪ್ಪೋರು ಮೂರೂ ದಿನವೂ ಕಾಲದ ಮಿತಿ ಇಲ್ದೆ ಅಲ್ಲಲ್ಲಿ ಹೊಡೇತ.

ಮಧ್ಯರಾತ್ರಿ ಕಳೆದ ಮೇಲೆ ಒ೦ದು ಗು೦ಪು ಮಾಡಿಕೊ೦ಡು “ಹಬ್ಬಾ ಹಾಡೋದು/ಆಡೋದು” ಅ೦ತ,

“ನಾವು ಬ೦ದೇವ, ನಾವು ಬ೦ದೇವ. ನಾವು ಬ೦ದೇವ ಶ್ರೀ ಶೈಲ ನೋಡಲಿಕ್ಕ, ಸ್ವಾಮಿ ಸೇವಾ ಮಾಡಿ ಮು೦ದೆ ಹೋಗಲಿಕ್ಕ, ಅರೆ ಗೀಯ, ಗೀಯ ಗಾಗಿಯ ಗೀಯ”

ಮು೦ತಾದ ಹಾಡು ಹೇಳಿ ರ೦ಜಿಸೋದು. ಇದು ಮೊದಲೆಲ್ಲಾ ಒಕ್ಕಲಿನೋರು ಮಾಡ್ತಿದ್ದೊ. ಈಚೆಗೆ ನಮ್ಮೋರೂ ಶುರು ಹಚ್ಕ೦ಡಿದೋ, ಈಗೀಗ ಹೆಣ್ಣುಮಕ್ಕೋ ಕೂಡಾ ಹಬ್ಬ ಆಡ್ತೊ! ನಮ್ಮೊವು ಬ೦ದಾಗ ರೈತಾಪಿ ಭಾಷೆಯನ್ನೇ ಮಾತಾಡಿ ತಮಾಷೆ ಮಾಡ್ತೊ, ಅದೊ೦ಥರಾ ಮನರ೦ಜನೆ.

ಇದರೆದ್ದೆಲ್ಲಾ ಮಜಾ ತೆಕ್ಕೋಳಕ್ಕು ಅ೦ದ್ರೆ ನಾವೂ ಸ೦ಪೂರ್ಣ ಭಾಗಿ (involve) ಆಗೊ, ಇಲ್ಲಾ೦ದ್ರೆ ಅದರ ಸೊಗಡು ಅರ್ಥ ಆಗ್ತಿಲ್ಲೆ.

ನಿ೦ಗಳು ಇದನ್ನ ಓದಿದಮೇಲೆ ಉತ್ತರಿಸಿದ್ರೆ ಎನಗೆ ನಿ೦ಗಳ ಕಡೆಯ ಸ೦ಪ್ರದಾಯದ ಪರಿಚಯ ಆಗ್ತು, ನಿ೦ಗಳ ಕಡೇಯೂ ಹೀಗೇ ಇದ್ದೊ? ತಿಳಿಸಿ ಆತೊ?

11 thoughts on “ನ೦ಗಳ ಊರ ದೀಪಾವಳಿ ಹ್ಯಾ೦ಗಿರ್ತು ಗೊತ್ತಿದ್ದೊ?!

  1. ಪೇಟೆಯ ಕೃತಕ ಆಚರಣೆಯ ಎಡಕ್ಕಿಲಿ ದೀಪಾವಳಿ ಹಬ್ಬದ ಸಹಜ ಸು೦ದರ ಆಚರಣೆಗಳ ಓದಿ ಕೊಶಿಯಾತು ದೊಡ್ಮನೆ ಭಾವ.ವ್ಯತ್ಯಾಸ ತು೦ಬಾ ಇದ್ದರೂ ಗೌಜಿಯೋ ಗೌಜಿ..

  2. ಅಪ್ಪುಗೋಪಾಲ ಭಾವಾ, ನ೦ಗ್ಳೂರ ದೀಪಾವಳಿಗೆ ರಾಶಿ ವೈಶಿಷ್ಟತೆ ಇದ್ದು ಅ೦ತ ಈಗೀಗ ಗೊ೦ತಾಗ್ತಾ ಇದ್ದು, ಬೇರೆ ಕಡೇ ನೋಡಿದಮೇಲೆ! ಆದರೆ ಅದನ್ನ ಆಚರಣೆ ಮಾಡೋ ಭಾಗ್ಯ ಹೊರಗಡೆ-ನಗರಕ್ಕೆ ಬ೦ದಿರೊ ಎ೦ಗೊಗೆ ಇಲ್ಲೆ. ಬೆ೦ಗ್ಳೂರ ಸಿಟಿಜನ್ ಶಿಪ್ ತೆಕ್ಕೊ೦ಡ ಮೇಲೆ ಬರೀ ಪಟಾಕೀದೇ ಸದ್ದು ಅಷ್ಟೆ. ಇನ್ಮೇಲೆ ಪಟಾಕೀನೂ ನಿಲ್ಸೂ ಹುನ್ನಾರ ನಡಿತಾ ಇದ್ದು ಬುದ್ಧಿ ಜೀವಿಗಳಿ೦ದ………?
    ಈಗೀಗ ಕೆಲವು ಬೇರೆ ಬೇರೆ ಕಲಸದ ಒತ್ತಡಗಳಿ೦ದ ಬೈಲುಕಡೆ ಬಪ್ಪೂಲೆ ಆಯ್ದಿಲ್ಲೆ, ಮತ್ತೆ ಸಿಗುವ. ತಡವಾದ್ರೂ ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ೦ಗೊ.

  3. ದೊಡ್ಮನೆ ಭಾವ, ದೀಪಾವಳಿ ಎಲ್ಲ ಮುಗುದ ಮೇಲೆ ನಿನ್ನ ಶುದ್ದಿ ಓದಿದೆ. ರಜಾ ತಡವಾತು. ನಿಂಗಳ ಊರ ದೀಪಾವಳಿ ತುಂಬಾ ವ್ಯತ್ಯಾಸ ಇದ್ದು. ಒಳ್ಳೆ ಗಮ್ಮತ್ತಿನ ದೀವಾವಳಿ ಆಚರಣೆ ನಿಂಗಳದ್ದು. ಜವ್ವನಿಗರೆಲ್ಲ ಸೇರಿರೆ ಭಾರೀ ರೈಸಲಕ್ಕು. ಪಟಾಕಿ ಬೇರೆ ಬೇಕು ಹೇಳಿ ಇಲ್ಲೆ. ನಿಂಗಳ “ದಂದಿ” ಎಂಗೊಗೆ ಇಲ್ಲಿ ಎಂಗಳ ಊರಿಲ್ಲಿ “ದೊಂದಿ”. ಇಲ್ಲಿ ಈಗ ದೊಂದಿ ಒತ್ತೆಕ್ಕೋಲಕ್ಕೊ, ದೈವಕ್ಕೋ ಮಾಂತ್ರ ಸೀಮಿತ ಆಯಿದು. ದೀಪಾವಳಿ ಸಂತೋಷ ಬೈಲಿಲ್ಲಿ ಹಂಚಿಕೊಂಡದಕ್ಕೆ ಧನ್ಯವಾದಂಗೊ.

  4. ನಂಗಳ ಊರಿಲಿ ನಾವು ಭಾವಂದ್ರೆಲ್ಲ ಸೇರ್ಕೊಂಡ್ರೆ ‘ಪಟಾಕಿ’ ಹೊಡಿವ ಕ್ರಮ ಇದ್ದು. – ಬಾಯಿ ಪಟಾಕಿ ಬೇರೆಂತಲ್ಲ.

    1. ಹೌದು…. ಶಬ್ದ ಮಾಡೋ ಪಟಾಕಿ ಒ೦ತರಾ ಚೊಲೋ ಇರ್ತು, ಬಾಯಿಪಟಾಕಿ ಇನ್ನೊ೦ತರಾ ಲಾಯ್ಕಿರ್ತು. ಒಟ್ಟಿನಲ್ಲಿ ಹಬ್ಬ ಅ೦ದ್ರೆ ಯಾವ್ದೊ ಒ೦ದ್ರೀತೀಲಿ ಖುಶಿ ಮಾಡೂದು, ನ೦ಗಳಕಡೆ ಭಾವ೦ದ್ರ ಜತೆ ಮಾವ೦ದ್ರೂ ಸೇರ್ಕ೦ಡು ಪಟಾಕಿ ಹೊಡೇತ!

      ನಿ೦ಗಳ ತಮಾಶೆಗೆ ಧನ್ಯವಾದ.

  5. ದೊಡ್ಮನೆ ಭಾವಾ,
    ಊರಿಂದ ಊರಿಂಗೆಆಚರಣೆ ಹೇಂಗೆ ಬೇರೆ ಬೇರೆ ರೀತಿ ಇರ್ತು ಹೇಳಿ ಗೊಂತಾತು.
    ನಿಂಗಳ ಆಚರಣೆಯ ವಿವರ ಓದುವಾಗ, ಎಂಗೊಗೆ ಎಲ್ಲವೂ ಹೊಸತು ಅನ್ಸಿತ್ತು.
    ಧನ್ಯವಾದಂಗೊ

    1. ದೊಡ್ಮನೇ ಬಾವಾ,
      ಹರೇ ರಾಮ; ಒ೦ದು ಸರ್ತಿ ಮಾವನ ಮನಗೆ ಹೋಗ್ಬ೦ದಷ್ಟು ಕೊಶಿಯಾಗೊತು.ನಿಮ್ಮ ಶಿರಶಿ ನೀರ್ನಳ್ಳಿಯ ಹೊನ್ನೆಗದ್ದೆ ಎನ್ನ ಮಾವನ ಮನೆ. ಹೀ೦ಗಾಗಿ ಆ ಕಡೆ ದೀಪಾವಳಿ ಹಬ್ಬ ನೋಡಿದ್ದೆ. ಈ ವರ್ಷ ಎನ್ನ ಆಯಿ ತೀರಿಹೋತು. ಅದಕ್ಕೆ ಈ ಬಾರಿ ನಮ್ಮಲ್ಲಿ ಯಾವ ಹಬ್ಬವೂ ಇಲ್ಲೆ. ನಿಮ್ಮ ಸಕಾಲಿಕ ಈ ಲೇಖ್ನ ಓದಿ ಬಾಳ ಕೊಶಿ ಆಗೋತು! ಧನ್ಯವಾದದ ಸ೦ಗಡ ಒ೦ದು ಒಳ್ಳೆ ಒಪ್ಪ .

    2. ಉಡುಪುಮೂಲೆ ಮಾವಾ, ನಿ೦ಗಳ ಪ್ರೀತಿ ಪೂರ್ವಕ ನುಡಿಗೆ ಧನ್ಯವಾದ.
      ನಿ೦ಗಳ ಆಯಿ ತೀರಿಹೋದ್ದು ಕೇಳಿ ಬೇಸರ ಆತು. ಹಬ್ಬವೂ ಇಲ್ಲೆ ದೀಕ್ಷೆ ಅಲ್ದಾ.
      ಎನ್ನ ಕಥೆಯೂ ಹೆಚ್ಚೂಕಡಿಮೆ ಹಾ೦ಗೇ ಆಯ್ದು, ಎನ್ನ ಅಪ್ಪಯ್ಯ 2012ರ ಜನೇವರಿಲಿ ಹೋಗಿಬಿಟ್ಟ. ಹಾ೦ಗಾಗೇ ಆನೂ ಊರಿಗೆ ಹೋಗ್ದಲೆ ಈ ಕಾ೦ಕ್ರೀಟ್ ಕಾಡು ಬೆ೦ಗ್ಳೂರಲ್ಲೇ ಕೂತು ಹೋದವರ್ಷದ್ದು ನೆನಪು ಮಾಡಿಕೊಳ್ತಾ ಬರೇತಾ ಇದ್ದೆ.
      ನಿ೦ಗಳ ಪ್ರೋತ್ಸಾಹಕ್ಕೆ ಪುನಃ ಧನ್ಯವಾದ.

    3. ಶರ್ಮಪ್ಪಚ್ಚಿ, ನಮಸ್ಕಾರ೦ಗೊ.
      ಅಪ್ಪು, ಆಚರಣೆಯಲ್ಲಿ ಕೆಲವು ವ್ಯತ್ಯಾಸ ಇದ್ದು. ಬಹುಶಃ ಅದು ನಮ್ಮ ದೇಶದ ಹುಟ್ಟುಗುಣ!
      ನಿ೦ಗಳು ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ

  6. ಈ ಸಮಯದಲ್ಲಿ ಕದ್ಕೋಬೇಕಾದ್ರೆ ನಿಮ್ಮೂರಿಗೇ ಬರ್ಬೇಕಯ್ಯ!. ನಂಗೋ ಶಿವರಾತ್ರಿಗೆ ಮಾತ್ರ ಕದೀಲೆ ಹೋಪದು.

    ನಮ್ಮೂರಾಗೆ ಇಷ್ಟೆಲ್ಲ ಗೌಜಿ ಕಂಡಿದಿಲ್ಲೆಪ್ಪ! . ನರಕ ಚತುರ್ದಶಿಗೆ ಎಣ್ಣೆಹಚ್ಚಿ ಸ್ನಾನ, ಅಮಾಸೆಗೆ ಹೊಸ ಅಳಿಯಂಗೆ ಉಂಗಿಲಪ್ರದಾನ, ಹಳೆ ಅಳಿಯ ಹೋದ್ರೆ ಸೇಮಗೆ ರಸಾಯನ, ಪಾಡ್ಯಕ್ಕೆ ಲಕ್ಷ್ಮೀಪೂಜೆ – ತುಳಸೀ ಪೂಜೆ, ಗೋಪುಜೆ, ಬಲೀಂದ್ರಪೂಜೆ. ಲಕ್ಕೀ ಮಕ್ಕಗೆ ಪಟಾಕಿ.

    ಇನ್ನು ಈ ಊರಾಗೆ… ಕಿಕ್ಕಿರಿದ ಜನಸಂದಣಿ ಅಂಗಡಿಂದ ತೆಕ್ಕೊಂಡ್ಬಂದ ಹೊಸ ಅಂಗಿ.. (ತೂತಿದ್ರೆ ನಿಮ್ ಗ್ರಾಚಾರ!), ಮನೆಮನೆಂದ/ಗೆ ಸ್ವೀಟ್, ಆಮೇಲೆ ಪಟಾಕಿ ಪಟಾಕಿ ಪಟಾಕಿ ಇಲ್ಲಾಂದ್ರೆ ಹೇಗೂ ಉಂಟಲ್ಲ ಟಿವಿ!!.

    ದೊಡ್ಮನೆ ಭಾವ., ನಿಂಗಳ ಊರ್ಲಿ ದೀಪಾವಳಿ ಗೌಜಿ ಶುದ್ಧಿ ಓದಿ ಕೊಶಿ ಆತಿದಾ. ಸುಮಾರು ವಿಷ್ಯ ಸಿಗ್ತು. ಖಂಡಿತಾ ಧನ್ಯವಾದ ಹೇಳೆಕೆ ನಿಂಗೊಗೆ ಇದಕ್ಕೆ.

    ನಮ್ಮೂರ್ಲಿ ದೀಪಾವಳಿ ಹೇಗೆ ಹೇಳ್ವ ಶುದ್ದಿ ಒಪ್ಪಣ್ಣ ಬಾವ ಓ ಆಚ ವೊರ್ಶ ಹೇಳಿದ್ದವಿದಾ –

    https://oppanna.com/oppa/balindra-baleendra-hariyo-hari

    https://oppanna.com/oppa/tv-budalli-deepavali

    1. ಮು೦ದಿನ ಸಲ ಬೂರೇ ಹಬ್ಬಕ್ಕೆ ಕದೂಲೆ ನಿ೦ಗೋ ನಮ್ಮಲ್ಲಿಗೆ ಬನ್ನಿ, ನ೦ಗೋ ಶಿವರಾತ್ರಿಗೆ ನಿ೦ಗೋ ಊರಿಗೆ (ಕದೂಲೆ) ಬರ್ತೊ!
      ದೀಪಾವಳಿಗೆ ನ೦ಗಳ ಕಡೆ ’ದೊಡ್ಡ ಹಬ್ಬ’ ಅ೦ತ ಹೇಳ್ತೊ. ನಿಜ ಹೇಳೆಕ್ಕೂ ಅ೦ದ್ರೆ ಗಣೇಷನ ಹಬ್ಬವೇ ದೊಡ್ಡ ಹಬ್ಬ. ಪಟಾಕಿ ಹೊಡೂದೂ ಆವಾಗ್ಲೇ ಜಾಸ್ತಿ. ಇತ್ತೀಚೆಗೆ ಬೇರೆಕಡೆ ನೋಡ್ತಾ ದೀಪಾವಳಿಗೆ ನಮ್ಮೂರಲ್ಲೂ ಪಟಾಕಿ ಶುರು ಹಚ್ಕ೦ಡಿದ್ದೊ.

      ಚೆನ್ನೈಭಾವಾ, ನಿ೦ಗಳು ಕೊಟ್ಟ ಲಿ೦ಕ್-ಶುದ್ದಿ ನೋಡಿದೆ. ಒಪ್ಪಣ್ಣ ಚೊಲೋಗೆ ಬರದ್ದ. ಆಚರಣೆಯಲ್ಲಿ ಕೆಲವು ವ್ಯತ್ಯಾಸ ಇದ್ದು.
      ನಿ೦ಗಳು ಓದಿ ಆತ್ಮೀಯತೆಯಿ೦ದ ಮಾತಾಡಿದ್ದಕ್ಕೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×