Oppanna.com

ನಿಂಗಳೂ ಜಾಣ ಅಪ್ಪಿರೋ?

ಬರದೋರು :   ಜಾಣ    on   23/08/2012    15 ಒಪ್ಪಂಗೊ

ಒಂದಾನೊಂದು ಕಾಲಲ್ಲಿ…

ನಮ್ಮ ಭರತಖಂಡದ ಉತ್ತರಭಾಗಲ್ಲಿ ಆವಂತಿ ಮತ್ತೆ ಕೌಶಾಂಬಿ ಹೇಳ್ತ ಹೆಸರಿನ ಎರಡು ನೆರೆಕರೆಯ ದೇಶಂಗೊ ಇತ್ತು. ಈ ಎರಡೂ ದೇಶಂಗೊ ಸುಖ ಸಮೃದ್ಧಿಲಿ, ಪರಸ್ಪರ ಅನ್ಯೋನ್ಯತೆಲಿ ಇತ್ತಿದ್ದವು.

ಹೀಂಗಾಗಿಪ್ಪಗ ಒಂದು ದಿನ…

ಆವಂತಿ ದೇಶದ ಒಂದು ರಾಜದೂತ ಕೌಶಾಂಬಿಗೆ ಬಂತು.

ಒಂದು ದೇಶದ ರಾಜದೂತಂಗೊ ಇನ್ನೊಂದು ದೇಶಕ್ಕೆ ಅಂತೇ ನೇರಂಪೋಕಿಂಗೆ ಹೋಪ ಕ್ರಮ ಇಲ್ಲೆ. ಏನಾರು ಕಾರ್ಯ ಇದ್ದರೇ ಹೋಕಷ್ಟೆ.

ಅಂಬಗ ಈ ರಾಜದೂತ ಎಂತಕೆ ಬಂದದು??

* * *

ಆವಂತಿ ದೇಶದ ರಾಜಂಗೆ ಒಂದು ಸಮಸ್ಯೆ ಎದುರಾಯಿದು.

ಅವ° ಆ ದೇಶದ ಗುರುಕುಲಂಗಳಲ್ಲಿ ಕಲಿತ್ತಾ ಇಪ್ಪ ಎಲ್ಲ ವಿದ್ಯಾರ್ಥಿಗೊಕ್ಕೆ ಒಂದೊಂದು ತೊಲೆ ತೂಕದ ಚಿನ್ನದ ಪಾವಲಿಗಳ ಕೊಡುದು ಹೇಳಿ ತೀರ್ಮಾನ ಮಾಡಿತ್ತಿದ್ದ°. ಪಾವಲಿಗಳ ತೆಯಾರು ಮಾಡ್ತ ಕೆಲಸವ ಹತ್ತು ಜೆನ ಆಚಾರಿಗೊಕ್ಕೆ ಕಂತ್ರಾಟು ವಹಿಸಿಕೊಟ್ಟಿತ್ತಿದ್ದ°. ಈ ಆಚಾರಿಗಳಲ್ಲಿ ಏವದೋ ಒಂದು ಆಚಾರಿ ತಾನು ಮಾಡ್ತ ಪಾವಲಿಲಿ ಒಂದು ಗುಲುಗುಂಜಿಯಷ್ಟು

ಚಿನ್ನ ಕಮ್ಮಿಮಾಡಿ ಕದಿತ್ತಾ ಇದ್ದು ಹೇಳಿ ರಾಜಂಗೆ ಸಂಶಯ ಬಂತು.

ಕಳ್ಳ ಆಚಾರಿಯ ಹಿಡಿವಲೆ ಬೇಕಾಗಿ ರಾಜ° ಅವರ ಎಲ್ಲೋರನ್ನೂ ಬರುಸಿ ಪ್ರತಿಯೊಬ್ಬ ಆಚಾರಿ ಮಾಡಿದ ಪಾವಲಿಗಳ ತೂಗಿನೋಡ್ಲೆ ಏರ್ಪಾಡು ಮಾಡಿದ°.

ರಾಜ° ಹೀಂಗೆ ತೀರ್ಮಾನ ಮಾಡಿಯಪ್ಪದುದೆ ಆಚಾರಿಗಳ ಹಾಂಕಾರ ಎಳಗಿತ್ತು!

ಅವು -“ಎಂಗೊ ಮಾಡಿದ ಪಾವಲಿಗಳ ಪ್ರತ್ಯಪ್ರತ್ಯೇಕ ತೂಗಿನೋಡ್ಲೆ ಎಂಗೊ ಒಪ್ಪುತ್ತಿಲ್ಲೆಯೊ°. ನಿಂಗೊಗೆ ತಾಕತ್ತು, ಬುದ್ಧಿವಂತಿಕೆ ಇದ್ದರೆ ಎಂಗೊ ಎಲ್ಲೊರು ಮಾಡಿದ ಪಾವಲಿಗಳ ಒಟ್ಟಿಂಗೇ ತಕ್ಕಡಿಗೆ ಹಾಕಿ; ಎಂಗಳ ಪೈಕಿ ಆರು ಮಾಡಿದ ಪಾವಲಿಲಿ ತೂಕ ಕಮ್ಮಿ ಇಪ್ಪದು ಹೇಳುದರ ಕಂಡುಹಿಡಿಯಿರಿ” ಹೇಳಿ ಸವಾಲು ಹಾಕಿದವು!!

ರಾಜಂಗೆ ‘ಅಯ್ಯನ ಮಂಡೆ..’ ಹೇಳಿ ಆತು.  ಇದು ಸುಲಬಲ್ಲಿ ಬಗೆಹರಿವ ಮಟ್ಟಿನದ್ದಲ್ಲ ಹೇಳಿ ಅವಂಗೆ ಅಂದಾಜಿ ಆತು.

ಆಸ್ಥಾನಲ್ಲಿಪ್ಪ ಮಂತ್ರಿಯಕ್ಕಳ ಹತ್ತರೆ ರಾಜ° ಸಮಸ್ಯೆಯ ಹೇಳಿದ. ಅವೆಲ್ಲರೂ ಬೋಚಂಗಳ ಹಾಂಗೆ ತಲೆತಗ್ಗುಸಿ ಕೂದವು. ಊರಿಲ್ಲಿ ಆರಾರು ಈ ಸಮಸ್ಯೆಗೆ  ಪರಿಹಾರ ಕೊಡುಗೋ ಹೇಳ್ತ ಆಶೆಲಿ ರಾಜ° ಡಂಗುರ ಸಾರುಸಿದ°.

ಊಹೂಂ… ಏನೂ ಪ್ರಯೋಜನ ಆಯಿದಿಲ್ಲೆ..

“ಶ್ಶೆಲ! ಈ ಆಚಾರಿಗಳ ದಿಸೆಂದಾಗಿ ಮರ್ಯಾದಿ ಹೋಪ ಪರಿಸ್ಥಿತಿ ಬಂತನ್ನೇ!” ಹೇಳಿ ಆವಂತಿಯ ರಾಜಂಗೆ ಬೇಜಾರಾತು. ಅಷ್ಟಪ್ಪಗ ಅವಂಗೆ ಕೌಶಾಂಬಿಯ ನೆಂಪಾತು..ಅಲ್ಯಾಣ ರಾಜ° ಇವನ ಒಳ್ಳೆಯ ಚೆಙಾದಿಯೂ  ಆದಕಾರಣ ಈ ಸಮಸ್ಯೆಗೆ ಪರಿಹಾರ ಹುಡ್ಕಲೆ ಸಹಾಯ ಮಾಡುಗು ಹೇಳ್ತ ವಿಶ್ವಾಸ ಬಂತು. ಹಾಂಗೆ ದೂತನ ದೆನಿಗೇಳಿ  “ಕೌಶಾಂಬಿಲಿ ಈ ಸಮಸ್ಯೆಯ ಪರಿಹಾರ ಮಾಡುವ  ಬುದ್ಧಿವಂತಂಗೊ ಆರಾದರೂ   ಇದ್ದವೋ ನೋಡಿ;  ಇದ್ದರೆ ಕರಕ್ಕೊಂಡೇ ಬಾ”  ಹೇಳಿ ಕೌಶಾಂಬಿಗೆ ಅಟ್ಟಿದ°.

* * *

ಆವಂತಿಯ ದೂತ  ಕೌಶಾಂಬಿಯ ರಾಜನತ್ರೆ ಬಂದು  ‘ಹೀಂಗೀಂಗೆ ಸಂಗತಿ’ ಹೇಳಿ ಎಲ್ಲವನ್ನೂ ವಿವರುಸಿತ್ತು.

ಈ ಸಮಸ್ಯೆಯ ಪರಿಹಾರ ಮಾಡ್ಲೆ ಅತ್ಯಂತ ಬುದ್ಧಿಶಾಲಿ ಆದವಂಗೆ ಮಾಂತ್ರ ಎಡಿಗಷ್ಟೇ ಹೇಳಿ ಕೌಶಾಂಬಿ ರಾಜಂಗೂ ಗೊಂತಾತು. ಹೇಂಗೇಂಗಿಪ್ಪವರನ್ನೋ ಮಣ್ಣ ಆವಂತಿಗೆ ಕಳುಗಿ ಪುಸ್ಕ ಅಪ್ಪದರಿಂದ ಸರಿಯಾದ ಸಾಮರ್ತಿಕೆ ಇಪ್ಪವರನ್ನೇ ಹುಡ್ಕಿ ಅಲ್ಲಿಗೆ ಕಳುಗೆಕ್ಕು ಹೇಳಿ ರಾಜ° ನಿರ್ಧಾರ ಮಾಡಿದ°. ಹಾಂಗೆ ತನ್ನ ದೇಶದ ಕಡುಜಾಣನ ಆಯ್ಕೆ ಮಾಡ್ಲೆ ಬೇಕಾಗಿ ಒಳ್ಳೆತ ಉಷಾರಿ ಇಪ್ಪ ಎಲ್ಲಾ ಜೆವ್ವನಿಗರ ಬರುಸಿ ಅವಕ್ಕೆ ಒಂದು ಪರೀಕ್ಷೆ ಮಡುಗಿದ°.

ಒಂದು ತಕ್ಕಡಿಯನ್ನೂ 12 ಒಂದೇ ರೀತಿಯ ನಾಣ್ಯಂಗಳನ್ನೂ ತರುಸಿದ. ಆ ನಾಣ್ಯಂಗಳಲ್ಲಿಯೂ ಒಂದು ನಾಣ್ಯ ತೂಕಲ್ಲಿ ರಜಾ ಕಮ್ಮಿ ಇದ್ದು! ತೂಕದ ಕಲ್ಲುಗಳ ಉಪಯೋಗ ಮಾಡದ್ದೆ; ಕೇವಲ ಮೂರು ಸರ್ತಿ ತಕ್ಕಡಿ ಉಪಯೋಗುಸಿ ತೂಕ ಕಮ್ಮಿ ಇಪ್ಪ ಖೋಟಾ ನಾಣ್ಯ ಏವದು ಹೇಳಿ ಕಂಡುಹಿಡಿಯೆಕ್ಕು.

ರಾಜ° ಆಸ್ಥಾನಕ್ಕೆ ಬರುಸಿದ ಬುದ್ಧಿವಂತ ಜೆವ್ವನಿಗರು ಎಲ್ಲೊರೂ- ಒಬ್ಬ° ಹೊರತು- ಈ ಸಮಸ್ಯೆಗೆ ಉತ್ತರ ಕಂಡುಹಿದಿವಲೆ ಎಡಿಗಾಯಿದಿಲ್ಲೆ. ಆ ಜಾಣರ ಜಾಣ ಆಗಿಪ್ಪ ಜೆವ್ವನಿಗ ಮಾಂತ್ರ ಚಕಚಕನೆ ತೂಗಿ ಮೂರೇ ಮೂರು ಸರ್ತಿಲಿ ತೂಕ ಕಮ್ಮಿ ಇಪ್ಪ ನಾಣ್ಯವ ಹುಡುಕಿ ಕೊಟ್ಟ°.

ರಾಜಂಗೆ ತುಂಬ ಕೊಶಿ ಆಗಿ ಆವಂತಿಯ ರಾಜದೂತನ ಒಟ್ಟಿಂಗೆ ಈ ಜಾಣ ಜವ್ವನಿಗನ ಕಳುಸಿದ.

ನಮ್ಮ ಜಾಣ ಜೆವ್ವನಿಗ ಆವಂತಿಗೆ ಹೋಗಿ ಬಹಳ ಎಳುಪ್ಪಲ್ಲಿ ಪಾವಲಿಯ ತೂಕ ಕಮ್ಮಿ ಮಾಡ್ತ ಆಚಾರಿಯ ಹಿಡುದು ಕೊಟ್ಟ.

* * *

ಈಗ ನಿಂಗೊಗೆ ಎನ್ನ ಪ್ರಶ್ನೆ.

1) ಹನ್ನೆರಡು ನಾಣ್ಯಂಗಳ ಪೈಕಿ ತೂಕ ಕಮ್ಮಿ ಇಪ್ಪ ಒಂದು ನಾಣ್ಯವ ತೂಕದ ಕಲ್ಲು ಇಲ್ಲದ್ದೆ ಕೇವಲ ಮೂರು ಸರ್ತಿ ತಕ್ಕಡಿಯ ಉಪಯೋಗುಸಿ ಕಂಡುಹಿಡುದ್ದು ಹೇಂಗೆ?

2) ಹತ್ತು ಆಚಾರಿಗಳ ಪೈಕಿ ಗುಲುಗಂಜಿ ತೂಕದಷ್ಟು ಚಿನ್ನವ ಕದ್ದುಗೊಂಬ ಆಚಾರಿ ಆರು ಹೇಳಿ ಜಾಣ° ಪತ್ತೆಮಾಡಿದ್ದದು ಹೇಂಗೆ?

* * *

ಈ ಪ್ರಶ್ನೆಗೊಕ್ಕೆ ಉತ್ತರ ಕಂಡುಹುಡುಕಿ ನಿಂಗಳೂ ಜಾಣ ಅಪ್ಪಿರೋ?

15 thoughts on “ನಿಂಗಳೂ ಜಾಣ ಅಪ್ಪಿರೋ?

    1. ಪವನಜ ಮಾವಾ ಅದ್ಭುತ ಪ್ರೆಸೆ೦ಟೇಶನ್. ಅದ್ಭುತ ವಿಚಾರಗಳು. ನಿ೦ಗೋ ಕೊಟ್ಟ ಸಮಸ್ಯೆಗಳಲ್ಲಿ ಮೊದಲ ನಾಲ್ಕಕ್ಕೆ ಉತ್ತರ ಸಿಕ್ಕಿತು. ಎರಡೆನೆಯದ್ದು ಮೊದಲೇ ಗೊತ್ತಿತ್ತು ;).. ನಾಲ್ಕನೇದು ಜಾಣಣ್ಣ ಕೊಟ್ಟ ಸಮಸ್ಯೆಯ ಹಾ೦ಗೇ ಇದ್ದು. ಐದನೇಯದಕ್ಕೆ ಬಾಕಿ ಆಯ್ದೆ. ತಲೆ ಕೆರೆದು ಉರಿ ಶುರುವಾತು. 🙁

      ಧನ್ಯವಾದ ಮಾವ ಹ೦ಚಿಕೊ೦ಡದ್ದಕ್ಕೆ. ಹೀ೦ಗಿಪ್ಪದು ಬತ್ತಾ ಇರಲಿ….

  1. ಜಾಣಾ…ಎಲ್ಲಿಗೆ ಹೋದೆ?

  2. ಮೊದಲ ಪ್ರಶ್ನೆಗೆ ಉತ್ತರ ಹೀ೦ಗೆ
    ೧) ೧೨ ನಾಣ್ಯವನ್ನು ಎರಡು ಪಾಲು ಮಾಡವು. ತಕ್ಕಡಿಯಲ್ಲಿ ೬-೬ ಹಾಕಿ ತೂಗವು. ಯಾವುದು ಕಮ್ಮಿ ತೂಗ್ತೋ ಆ ೬ ನಾಣ್ಯವ ತಗಳವು
    ೨) ಮತ್ತೆ ೩-೩ ರ೦ತೆ ತೂಗವು . ಕಡಿಮೆ ಇಪ್ಪ ಮೂರು ನಾಣ್ಯವ ತಗಳವು
    ೩) ಈಗ ಯಾವ್ದಾರೂ ಎರಡು ನಾಣ್ಯ ತೆಕ್ಕೊ೦ಡು ಒ೦ದರ ಕಿಸೆಯಲ್ಲಿ ಮಡುಗವು. ಆ ಎರಡು ನಾಣ್ಯವ ತಕ್ಕಡಿಯಲ್ಲಿ ಆಚೆ ಒ೦ದು ಈಚೆ ಒ೦ದು ಹಾಕಿ ತೂಗಿದ್ರೆ ಕಡಿಮೆ ಇಪ್ಪ ನಾಣ್ಯ ಯಾವುದು ಹೇಳಿ ಗುತ್ತಾಗ್ತು. ಅದೇನಾರೂ ಸಮ ಸಮಾ ತೂಗಿರೆ ಕಿಸೆಯಲ್ಲಿಪ್ಪ ನಾಣ್ಯವೇ ಕಮ್ಮಿ ತೂಕದ್ದು ಹೇಳಿ ನಿರ್ಧಾರ ಮಾಡ್ಳಕ್ಕು..
    ಇದಾ ಮೂರೇ ಸರ್ತಿ ತಕ್ಕಡಿ ಉಪಯೋಗಿಸದ್ದು 🙂

    ಎರಡನೇ ಪ್ರಶ್ನೆಗೆ ಉತ್ತರಃ
    ಮೊದಾಲು ಎಲ್ಲ ಆಚಾರಿಗಳ ಸಾಲಲ್ಲಿ ನಿಲ್ಸಿ ಎಲ್ಲರಿಗೂ ಒ೦ದೊ೦ದು ನ೦ಬರು ಕೊಡವು. ಹಾಜರಿ ಸ೦ಖ್ಯೆ ಇದ್ದ೦ಗೇಯಾ. ೧ ರಿ೦ದ ೧೦. ನ೦ಬರ್ ೧ ಆಚಾರಿಯಿ೦ದ ಒ೦ದು ನಾಣ್ಯ, ನ೦ಬರ್ ೨ ಆಚಾರಿಯಿ೦ದ ೨ ನಾಣ್ಯ ಹೀ೦ಗೆ ತೆಗತ್ತಾ ಹೋಗವು.. ನ೦ಬರ್ ಹತ್ತನೇ ಆಚಾರಿಯಿ೦ದ ೧೦ ನಾಣ್ಯ. ಒಟ್ಟಿಗೇ ಎಲ್ಲ ನಾಣ್ಯವ ತಕ್ಕಡಿಗೆ ಹಾಕವು (ಈಗ ತೂಕದ ಕಲ್ಲು ಉಪಯೋಗಿಸ್ಲಕ್ಕು ಅಲ್ಲದಾ?). ಪ್ರತಿಯೊ೦ದು ನಾಣ್ಯದ ತೂಕವೂ ನಮಗೆ ಗೊತ್ತಿದ್ರೆ ಒಟ್ಟೂ ತೂಕ ಎಷ್ಟು ಹೇಳಿ ಗೊತ್ತಾಗ್ತು ಅಲ್ಲದಾ. ಆ ಒಟ್ಟೂ ತೂಕಕ್ಕೆ ಎಷ್ಟು ಗುಲಗ೦ಜಿಯಷ್ಟು ತೂಕ ಕಮ್ಮಿ ಇದ್ದು ಹೇಳಿ ಗೊತ್ತಾದರೆ ಆ ಕಳ್ ಸುಳ್ ಆಚಾರಿ ಸಿಕ್ಕಾಕ್ಕ೦ಡ ಹೇಳಿಯೇ ಅರ್ಥ.

    ಅ೦ದ್ರೆ ನ೦ಬರ್ ೧ ಆಚಾರಿ ನಾಣ್ಯ ಕಮ್ಮಿ ತೂಕದ್ದಾಗಿದ್ದರೆ ಒಟ್ಟೂ ತೂಕದಲ್ಲಿ ಒ೦ದು ಗುಲಗ೦ಜಿ ತೂಕ ಕಮ್ಮಿ ಬತ್ತು,, ಹಾ೦ಗೇ ಐದನೇಯವ ಆಗಿದ್ದರೆ ೫ ಗುಲಗ೦ಜಿ ತೂಕ ಕಮ್ಮಿ ಬತ್ತು… ೮ ನೇಯವ ಆಗಿದ್ದರೆ ೮ ಗುಲಗ೦ಜಿ ತೂಕ ಕಮ್ಮಿ.

    ಎಲ್ಲಾ ಮುಗದಮೇಲೆ ಆ ಕಿಸೆಯಲ್ಲಿಟ್ಟ ನಾಣ್ಯ ವಾಪಾಸ್ ಕೊಡವು ಹಾ ಮರೆಯಡಿ.. 😉

    ಇದು ಸರಿಯಿದ್ದೋ ಜಾಣಣ್ಣಾ ???

      1. ಅಂಬಗ ಮಾನೀರ್ ಮಾಣಿ ಹುಶಾರಿ ಮಾಣಿ

  3. ಅಲ್ಲ, ಈ ಜಾಣ ಪ್ರಶ್ನೆ ಕೇಳಿಕ್ಕಿ ಎತ್ತ ಹೋಯಿದ, ಉತ್ತರ ಹೇಳದ್ದೆ.?
    ಜೋಯಿಸಜ್ಜನ ಹತ್ತರೆ ಪ್ರಶ್ನೆ ಮಡೆಗೆಕ್ಕಕ್ಕೋದು..

  4. ಒಬ್ಬೊಬ್ಬ ಒಂದೊಂದೇ ಪಾವಲಿ ಮಾಡುದು,ತಕ್ಕಡಿಯ ಮೂರು ಸಲ ಉಪಯೋಗಿಸುದು ಅಲ್ಲದೊ? ಹಾಂಗಾರೆ ಎರಡ್ನೆದಕ್ಕೂ ಉತ್ತರ ಹೇಳುಲಕ್ಕು.

  5. ಒಹೋ ಬೋದಾಳ ಭಾವ೦ದು ನ೦ದು ಒ೦ದೇ ರಾಶಿ ನಕ್ಷತ್ರ ಇರವು ಹೆಚ್ಚಾಗಿ.. ನ೦ಗೂ ಉತ್ತರ ಗೊತ್ತಾತು.. ಮೊದಲನೆಯದು ಸಸಾರ ಇದ್ದು..
    ಒಬ್ಬ ಆಚಾರಿಯಿ೦ದ ಎಷ್ಟು ನಾಣ ತಗಳ್ಳಕ್ಕು ? ಎಷ್ಟು ಬೇಕಾದರೂ ತಗಳ್ಳಕ್ಕು ಅ೦ದರೆ ಎರಡನೆಯದ್ದು ಸಸಾರಕ್ಕೆ ಹತ್ತಿರ ಇದ್ದು.. ನಾಳೆ ಇದೇ ಸಮಯಕ್ಕೆ ಉತ್ತರ ಹೇಳ್ತೆ.. ಅಲ್ಲಿಯವೆಗೆ ಹನಿ(ರಜ್ಜ) ನಿ೦ಗಳ ಕೂದಲೂ ಉದುರಲಿ.. 😉

  6. ಯೆನಗೆ ಗೊಂತಾತು… ಯೆನಗೆ ಗೊಂತಾತು… ಹೇಳೆಕ್ಕಾ…..?

  7. ಓಯೆ,
    …{ಅವೆಲ್ಲರೂ ಬೋಚಂಗಳ ಹಾಂಗೆ ತಲೆತಗ್ಗುಸಿ ಕೂದವು} – ನಮ್ಮ ಬೋಚಬಾವ ಹೀಂಗೆ ತಲೆತಗ್ಗಿಸಿ ಕೂರ.
    ಇದಕ್ಕೆ ಉತ್ತರ ಹೇಳೆಕ್ಕಾರೆ ಅವನೇ ಆಯೆಕ್ಕಟ್ಟೇ, ನಮ್ಮ ತಲೆಗೆ ಹೋವುತ್ತಿಲೆ.
    ಶುರುವಾಣ ಪ್ರಶ್ನೆಗೆ ಉತ್ತರ ಅಂದಾಜಿ ಆತು, ಮಾಂತ್ರ ಸರಿಯೋ ತಪ್ಪೋ ಹೇಳುಲೆ ನಾವೆಂತ ಹೋಸ್ಟೆಲಿಲಿ ಇದ್ದುಗೊಂಡು ದೊಡ್ಡ ಕೋಲೆಜಿಲಿ ಕಲಿತ್ತೋ ಅದಕ್ಕೆ.

  8. ಸುರುವಾಣ ಪ್ರಶ್ನೆಗೆ ಉತ್ತರ ಬಹುಸುಲಭ. ಎರಡ್ನೆದಕ್ಕೆ ತಲೆ ಓಡ್ತಿಲ್ಲೆನ್ನೇ !

  9. ಸಾಧಾರಣ ನೇರ್ಪಕ್ಕೆ ಕೇಳಿರೇ ಕೆಲವು ಸರ್ತಿ ಹಲವು ವಿಷಯಂಗೊ ನವಗೆ ಅರಡಿತ್ತಿಲ್ಲೆ. ಮತ್ತಿನ್ನು ಹೀಂಗೆಲ್ಲ ಕೇಳಿರೆ ..! ಆನೆಂತ ದೊಡ್ಡಜ್ಜನ ಪುಳ್ಳಿಯೋ.

    ಉಮ್ಮಾ.. ಹೊಸಮನೆ ಅಜ್ಜನತ್ರೆ ಕೇಳಿರೆ ಗೊಂತಾವ್ತೋ ನೋಡೆಕು. ಃ))))

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×