“ಪರಿವರ್ತನೆ” ಕೊಡಗಿನ ಗೌರಮ್ಮ 2011: ಪ್ರಥಮ ಸ್ಥಾನ ಪಡೆದ ಕಥೆ-೨ನೇ ಭಾಗ

ಪರಿವರ್ತನೆ (ಮುಂದಿನ ಭಾಗ)

2011ನೇ ಸಾಲಿನ “ಕೊಡಗಿನ ಗೌರಮ್ಮ ಕಥಾಸ್ಪರ್ದೆ”ಯ ಪ್ರಥಮ ಬಹುಮಾನಿತ ಕತೆ
ಶಿರೋನಾಮೆ:
“ಪರಿವರ್ತನೆ”

ಕತೆಗಾರ್ತಿ: ಲಲಿತಾಲಕ್ಷ್ಮಿ ಎನ್. ಭಟ್, ಯಶೋಧಾಮ , ಹೊನ್ನೆಗುಂಡಿ, ಸಿದ್ದಾಪುರ


ಈ ಕತೆಯ ಮೊದಲನೆ ಭಾಗ ಇಲ್ಲಿದ್ದು.

ಗಂಡ-ಹೆಂಡ್ತಿ ಕಣ್ಣೀರಲ್ಲೇ ದಿನ ಕಳ್ದ. ಮುಂದೆಂತ ಮಾಡುದೂ ಆಚೀಚೆ ಮನೆಯೋರೆಲ್ಲಾ “ಮಗ್ಳಿಗೆಂತ ರಜೆಯಾ? ನಮ್ಮನೆ ತಮ್ಮಂಗೆಲ್ಲಾ ಈಗ ರಜಿಲ್ಯಡ. ಎಂತ ಆರಾಮಿಲ್ಯಾ? ” ಹೇಳಿ ಕೇಳುಲೆ ಶುರುಮಾಡ್ದ. ಕಡೆಗೆ ಮಗಳ ಹತ್ರ ಆ ಹುಡುಗನ ಫೋನ್ ನಂಬರ್ ಕೊಡು, ನಾ ಮಾತಾಡ್ತೆ ಅಂದ್ರೆ ಸುತಾರಾಂ ಫೋನ್ ನಂಬರ್ ಕೊಟ್ಟಿದ್ದಿಲ್ಲೆ. ಅಂವ ಎಂತ ಕಲ್ತಿದ್ದ ಕೇಳ್ದ್ರೆ “ಅವ ಇಂಜಿನಿಯರ್, ತಿಂಗ್ಳ ೨೦೦೦೦ ಪಗಾರು” ಅಂತು. ನೋಡು ಮುಸ್ಲಿಂರವ, ಅವಾದ್ರೂ ಇಂಜಿನಿಯರ್ ಮುಗಿಸಿದ್ದ. ನೀನು ಸರಿಯಾಗಿ ಓದು ಮುಗಿಸು, ನೌಕರಿಗೆ ಸೇರ್ಕ, ಕಡೆಗೂ ಹೀಂಗೆ ವಿಚಾರ ಇದ್ರೆ ದೇವ್ರ ಮಾಡ್ದಾಂಗೆ ಆಗ್ತು ಅಂದ್ರೂ ಕೇಳಿದ್ದಿಲ್ಲೆ. ಈಗ್ಲೆ ಮದ್ವೆ ಮಾಡೂ ಹೇಳಿ ಹಟ ಮಾಡ್ತು. ಊಟ ತಿಂಡಿ ಬಿಡ್ತು, ಸತ್ಕತ್ತೆ ಹೇಳೀ ಹೆದ್ರಸ್ತು. “ಅವ್ನ ಹತ್ರ ಅಂವ ಯಾವ ಕಂಪೆನಿಲಿ ಇದ್ದ ಹೇಳಿ ಕೇಳು. ನಂಗ ನಿನ್ನ ಕೈ ಬಿಟ್ರೂ ನೀ ಬದ್ಕುಲಾಗ್ತೋ ಇಲ್ಯ ಹೇಳಿ ಖಾತ್ರಿ ಮಾಡ್ಕತ್ತ” ಅಂದಾಗ ಅಂವ ಬೆಂಗ್ಳೂರಲ್ಲಿ ವಿಪ್ರೋ ಕಂಪೆನಿಲಿ ಇದ್ದ ಅಂತು. “ಸರಿ ನಿಂಗೆ ಬೆಂಗ್ರ್ ಗುತ್ತಿದ್ದು, ನಿನ್ನ ಹಡೆದು ಬೆಳಸಿದ ತಪ್ಪಿಗೆ ಕಡೆದಾಗಿ ಇದೊಂದು ಮಾಡು. ಅಂವ ಇಂಜಿನಿಯರಿಂಗ್ ಮುಗಿಸ್ದ ಸರ್ಟಿಫಿಕೇಟ್ ಒಂದ್ಸಲ ಕೇಳು. ಅಂವ ಯಾವ ಕಂಪೆನೆಲಿದ್ದ್ನೋ ಅಲ್ಲಿಗೇ ಹೋಗಿ ವಿಚಾರ ಮಾಡ್ಕಂಡ್ ಬಪ್ಪೊ” ರಾಮು ಹೇಳ್ದಾಗ ಪದ್ಮ ಅರೆಮನಸ್ಸಿನಿಂದ ಒಪ್ಕಂಡು ಅಂವಂಗೆ ಫೋನ್ ಮಾq ಕೇಳ್ದ್ರೆ ಸರ್ಟಿಫಿಕೇಟಲ್ಲ ಕಂಪೆನಿಯೋರೆ ತೆಕಂಜ ಅಂದ್ನಡ. ಸರಿ ಕಂಪೆನಿ ಯಾವ್ದು ಎಲ್ಲಿದ್ದು ಕೇಳ್ದ್ರೆ “ನಿಂಗೆ ನನ್ನ ಮೇಳೆ ವಿಶ್ವಾಸ ಇಲ್ವಾ? ಪ್ರೀತಿ ಇಲ್ವಾ? ನಿಂಗಾಗಿ ನಾನೂ ಸರ್ವಸ್ವವನ್ನೂ ತ್ಯಾಗ ಮಾಡ್ಲಿಕ್ಕೆ ರೆಡಿ ಇದ್ದೀನಿ, ಆ ಕಂಪೆನಿ ಅಲ್ದೆಹೋದ್ರೆ ನೂರಾರು ಕಂಪೆನಿ ಈಗಂದ್ರೆ ಈಗ ನನ್ನ ನೌಕರಿಗೆ ತೆಕೊಳ್ತಾರೆ” ಅಂದ್ನಡ. “ಆಯಿ ಅವ್ನ ಮನ್ಸನ ನಾ ನೋಯಿಸ್ಲೇ ತಯಾರಿಲ್ಲೆ, ಪಾಪ, ನಂಗಾಗಿ ಸರ್ವಸ್ವನೂ ತ್ಯಾಗ ಮಾಡುಲೆ ತಯಾರಿದ್ದ ಅಂವ” ಮಗಳ ಸಮರ್ಥನೆ. ಕಡೆಗೆ ರಾಮು, ನೀನು ಅವ್ನ ಕಂಪೆನಿ ಅಡ್ರೆಸ್ ತಕೋ ಅಲ್ಲೇ ಹೋಗಿ ನೋಡ್ಕಂದ್ ಬಪ್ಪೊ ಅಂದ.

ಗೆಳೆಯನ್ನ ನೋಡು ಆಸೆಗೆ ಗೆಳೆಯನ ಕಾಡಿ ಕಂಪೆನಿ ಅಡ್ರೆಸ್ ತಕಂಡ್ತು. ಅಪ್ಪ ಮಗ್ಳು ಬೆಂಗ್ಳೂರಿಗೆ ಹೋಗಿ ವಿಚಾರ್ಸ್ದ. ಯಾರನ್ನೆಲ್ಲಾ ವಿಚಾರ್ಸ್ದಾಗ ಆ ಹೆಸ್ರಿನ ಕಂಪೆನಿಯೇ ಇಲ್ಲೆ ಹೇಳಿ ಗುತ್ತಾತು. ಅಂವ ಹಿಂದೆ ಹೇಳಿದೆ ಅವ್ನ ಕಾಲೇಜಿಗೆ ಹೋಗಿ ವಿಚಾರ ಮಾಡ್ದಾಗ ಅಂವ ಸೆಕೆಂಡ್ ಇಯರ್ ಪಿಯುಸಿಲೇ ಫೇಲ್ ಆಜ ಹೇಳಿ ಗುತ್ತಾಟು.

ಪದ್ಮಂಗೆ ಈಗ ಒಂಥರಾ ಗಡಬಡೆ ಶುರುವಾತು. ಅಪ್ಪ, ಆಯಿ ಇನ್ನೊಂದ್ ಮಾತು ಅಂದ. “ನೋಡು ಅಂವ ನಿನ್ನ್ ಕೈಲಿ ಸುಳ್ಳು ಹೇಳಿದ್ದ ಹೇಳಿ ನಿಂಗೂ ಗೊತ್ತಾತಲೀ? ಅಂವ್ನ ಹತ್ರ ಇನ್ನೊಂದ್ ಮಾತು ಕೇಳು. ನಿಂಗಾಗಿ ಸರ್ವಸ್ವನೂ ತ್ಯಾಗ ಮಾಡ್ತೆ ಹೇಳಿದ್ನಲೀ? ಹಾಂಗಿದ್ರೆ ಅವ್ನೇ ಹಿಂದೂ ಆಗ್ಲಿ, ನಂಗೋನೇ ಅವಂಗೊಂದು ನೌಕರಿ ಕೊಡ್ಸ್ತ. ನೀ ಅವ್ನನ್ನೇ ಮದ್ವೆ ಆಯ್ಕಂಡು ಸುಖವಾಗಿರ್ಲಕ್ಕು. ”

ಪದ್ಮಂಗೆ ಮತ್ತೆ ಆಶೆಯಾತು. ಇದು ಒಳ್ಳೆ ಉಪಾಯ ಅಂತು. ತಾ ಹೇಳಿದ್ರೆ ಕುಶಿಯಿಂದ ಒಪ್ಕತ್ತ. ಒಪ್ಕಳಗಿದ್ದೇ ಎಂತಾ ಮಾಡ್ತ? ಪದ್ಮ ಅಂವಂಗೆ ಫೋನ್ ಮಾಡ್ತು. ಎಷ್ಟು ಸಲ ಫೋನ್ ಮಾಡಿದ್ರು ಎತ್ತಿದ್ನಿಲ್ಲೆ. ಕಡೆಗೊಂದ್ಸಲ ಫೋನ್ ಎತ್ತಿ “ಏನೂ? ನಾನು ಆಚೆ ಇದ್ದೆ, ಸ್ವಲ್ಪ ವೇಟ್ ಮಾಡಿದ್ರೆ ಆಗ್ತಿರ್ಲಿಲ್ವಾ? ” ಅಂವ್ನ ಪ್ರಶ್ನೆಗೆ ಇವಳ ಪ್ರಶ್ನೆ “ನಂಗಾಗಿ ಸರ್ವಸ್ವನೂ ತ್ಯಾಗ ಮಾಡ್ತೀನಿ ಅಂದಿದ್ಯಲ್ವಾ ನಾನೂ ನಿಂಗಾಗಿ ಸರ್ವಸ್ವನೂ ತ್ಯಾಗ ಮಾಡ್ತೀನಿ ಅಂದಿದ್ನಲ್ವಾ? ನೀನೂ ನಂಗಾಗಿ ಇಷ್ಟು ಮಾಡ್ಲೇ ಬೇಕು ಡಿಯರ್ ನೀನು ಹಿಂದೂ ಧರ್ಮಕ್ಕೆ ಮತಾಂತರ ಮಾಡ್ಕಂಡ್ರೆ ನನ್ನ ಅಪ್ಪ ಅಮ್ಮ ನಿಂಗೆ ನೌಕರಿನೂ ಕೊಡ್ಸಿ ನಿನ್ನ್ ಜೊತೆ ನನ್ನ ಮ್ಯಾರೇಜ್ ಮಾಡ್ತಾರಂತೆ. ಬಂದ್ಬಿಡೋ ಪುಟ್ಟಾ ಒಕೆನಾ?” ಆ ಕಡೆಯಿಂದ ಸ್ವಲ್ಪ ಹೊತ್ತು ಮಾತಿಲ್ಲೆ. ನಂತ್ರ ಅಂವ ಹೇಳ್ದ “ನೋಡು ನೀ ನಮ್ಮ ಧರ್ಮಕ್ಕೆ ಬಂದ್ರೆ ನಾವಿಬ್ರೂ ಸುಖವಾಗಿರ್ಲಿಕ್ಕಾಗತ್ತೆ. ಇದನ್ನ ನಾನು ನಿಂಗೆ ಮೊದ್ಲಿಂದ ಹೇಳಿದಿನಿ, ಈಗೆಂತ ಹೊಸ ಮಾತು ಹೇಳ್ತಿದ್ದೀ! ಆದ್ರೆ ನಾನು ಹ್ಯಾಗೆ ನನ್ನ ಧರ್ಮ ಬಿಡ್ಲಿಕ್ಕಾಗತ್ತೆ? ನಾನು ನಮ್ಮ ಅಪ್ಪ ಅಮ್ಮನ ಮನಸು ನೋಯಿಸ್ಲಿಕ್ಕೆ ಹ್ಯಾಗಾಗುತ್ತೆ? ನೀ ಬಂದ್ಬಿಡು, ನಾನು ಚಾಂದ್ ನೀ ನನ್ನ ಚಾಂದನೀ. ಒಂದಾಗಿ ಚೆಂದಾಗಿ ಇರೋಣ. ಸತ್ರೂ ನಾನು ನನ್ನ ಧರ್ಮ ಬಿಡ್ಲಾರೆ.””

ಅವ್ನ ಉತ್ತರಕ್ಕೆ ಪದ್ಮಾ ನಿರುತ್ತರೆ. ಬಣ್ಣದ ಮಾತಿಗೆ ಮರುಳಾಗಿ ಮೆಟ್ಟಿಲಿಲ್ಲದ ಏಣಿ ಏರಿದ್ದ ಪದ್ಮಾ ಒಂದೇ ಸಲ ಕುಸ್ದು ಪಾತಾಳ ಸೆರ್ತು. ಅಂದ್ರೆ ನಂಗಾಗಿ ಸರ್‍ವಸ್ವನೂ ತ್ಯಾಗ ಮಾಡ್ತೆ ಹೇಳ್ದವಂಗೆ ವಂದ್ಸಲ ತನ್ನ ಧರ್ಮ ಬಿಡ್ತೆ ಹೇಳುಲಾಗ್ತಿಲ್ಲೆ ಹೇಳಾದ್ರೆ ಅವ್ನ ಪ್ರೀತಿ ಯಾವ ಮಟ್ಟದ್ದು? ಧರ್ಮಕ್ಕಾಗಿ ತನ್ನ ಬಿಡುಲೂ ತಯಾರಾಜ್ನಲಿ? ನಾನಾದ್ರೂ ನನ್ನ ಧರ್ಮ ಬಿಡುಲೆ ತಯಾರಾಗಿದ್ದೆ. ಅಪ್ದೆಂತದು? ಇಂಥವನ ಮಾತಿಗಾ ನಾ iಳ್ಳ್ ಬಿದ್ದದ್ದು! ನನ್ನ ಅಪ್ಪ ಅಮ್ಮ ಎಂತ್ಃಆ ದೇವರಂಥ ಜನ. ನಾನೇ ಪಾಪಿ, ಅಕ್ಳ ಕಷ್ಟ ನೋಡೂ ಕಲ್ಲಾದೆ. ನಿತ್ಯ ಹೋರಾಟ ಮಾಡಿ ನಂಗಾಗಿ ತಂಗ್ಳ ಜೀವ ತೆಯ್ದ. ತೆಳ್ಕಳಗಿದ್ದೇ ಯಾರ್ದೋ ಸುಳ್ಳು ಭರವಸೆಗೆ ಸೋತೆ. ಮಾಣ್ಸ ತಿಂಬೋ ಹುಡ್ಗ- ಅಪ್ಪ ಅಮ್ಮನ ಬಿಡುಲೆ ತಯಾರಾಯ್ದ್ನಿಲ್ಲೆ. ಉನ್ನತ ಸಂಸ್ಕಾರ, ಸಂಸ್ಕೃತಿ ಹೊಂದಿ ಹವ್ಯಕ ಬ್ರಾಹ್ಮಣರ ಮನೇಲಿ ಹುಟ್ದ ನಾನು ಅಪ್ಪ ಅಮ್ಮನ ತಿರಸ್ಕಾರ ಮಾಡ್ದೆ. ಅಂವ್ನ ಮಾತು ಕೆಳ್ಕಂಡು ಅಪ್ಪ ಅಮ್ಮ ನನ್ನ ಒಳ್ಳೆದಕ್ಕಾಗಿ ಮಾಡಿದ್ದೆಲ್ಲವಕ್ಕೂ ವಿರುದ್ಧವಾಗೇ ಅರ್ಥ ಹಚ್ದೆ; ಎಷ್ಟ್ ಸಲ ಕೇಳ್ದ್ರೂ ಅಂವಂದ್ ಒಂದೆ ಉತ್ತರ. “ನೀ ಮುಸ್ಲಿಂ ಆದ್ರೆ ನಮ್ಮಿಬ್ಬರ ಮದ್ವೆ, ಇಲ್ಲದಿದ್ರೆ ಇಲ್ಲ” ಗೆಳ್ಯೆನ ಕಳ್ಕಂಡ ನೋವು ವಂದ್ಬದಿಗೆ, ಅಪ್ಪ ಅಮ್ಮಂಗೆ ಬೆಜಾರ್ ಮಾಡ್ದೇ ಹೇಳು ನೋವು ವಂದ್ಬದಿಗೆ. ಅಪ್ಪ ಅಮ್ಮನ ತಪ್ಪು ತಿಳ್ಕಂಡು ತಿರಸ್ಕಾರ ಮಾಡ್ದೇ ಹೇಳು ಬೇಜಾರಲ್ಲಿ ಪದ್ಮ ಮರುಗ್ತು, ಕೊರ್ಗ್ತು, ನನ್ನೀ ತಪ್ಪನ್ನೂ ದೇವ್ರೂ ಕ್ಷಮಿಸಲಾರ “ನಾನು ಬೇಕು ಅಂತಾದ್ರೆ ನನ್ನ ಧರ್ಮಕ್ಕೆ ಬಾ, ಇಲ್ದಿದ್ರೆ ನೀನುಂಟು ನಿನ್ನ ಧರ್ಮ ಉಂಟು” ರೇಗ್ತಾ ಸಿಟ್ಟಿನಿಂದ ಹೇಳ್ದ ಅಂವ್ನ ಮಾತೇ ಪದ್ಮಂಗೆ ಮತ್ತೆ ಮತ್ತೆ ಕೇಳ್ತು. ಎಂಥಾ ತಪ್ಪು ಮಾಡ್ದೆ, ನಂಗಾಗಿ ನನ್ನ ಅಪ್ಪ ಅಮ್ಮ ನಂಗ್ಳ ಸಾಮರ್ಥ್ಯ ಮೀರಿ ಹೋರಾಡ್ದ. ಅಕೊಕೆ ನೋವಲ್ದೆ ಇನ್ನೆಂಥ ಕೊಟ್ಟೆ? ಹಗ್ಲೂ ರಾತ್ರಿ ನಂಗಾಗಿ ಜೀವ ತೇಯ್ದ. ಅಕೊ ಬೈದದ್ದು ನನ್ನ್ ಒಳಿತಿಗೆ ಹೆಳಿ ತಿಳ್ಕಂಞ್ನಿಲ್ಯಲಿ? ಅಕೊ ಬೈದಾಗ ಅವ್ನ ಹತ್ರ ಹೇಳ್ಕೊಟ್ಟೆ. ಇದೇ ಸಂದರ್ಭ ಹೇಳಿ ಅವ್ನೂ ಅಪ್ಪ ಆಯಿ ವಿರುದ್ಧ ನಂಗೆ ಹೇಳ್ಕೊಟ್ಟ. ಅಂವ್ನ ಮಾತು ಕೇಳ್ಕಂಡು ನಾ ಹುಟ್ಟುಲೆ ಕಾರಣಾದ ನನ್ನ ಬೆಳಸಿ ನಂಗೊಂದು ಜೀವ್ನ ಕೊಟ್ಟ, ಸಮಾಜಲ್ಲಿ ಸ್ಥಾನಮಾನ ಕೊmಟ ಅಪ್ಪ ಆಯಿಗ್ ಮೋಸ ಮಾಡಿದ್ನಲೀ? ನಾ ಮಾಡ್ದ ತಪ್ಪಿಗೆ ಅಕೊ ಎಲ್ಲರೆದ್ರಿಗೆ ಸಣ್ಣಾದ. ತಂಗಿ ಬದ್ಕಿಗೂ ಕಷ್ಟಾತು. ನಾ ನೌಕರಿ ಮಾಡಿ ನನ್ನ ಅಪ್ಪಂಗೆ ಕೈ ಜೋಡ್ಸಿ ತಂಗೀಗೆ ಒಳ್ಳೇ ಶಿಕ್ಷಣ್ ಕೊಡ್ಸಕಾಗಿತ್ತು. ಮರ್ಯಾದಿದ್ದ ಯಾರ ಮನೆ ಮಕ್ಕಳಾದ್ರೂ ಹಾಂಗೇ ಮಾಡ್ತಿದ್ವಲೀ? ಅಪ್ಪ ಆಯಿ ನೋಯ್ಸಿದ್ರೆ, ಅಕ್ಳ ವಿಶ್ವಾಸಕ್ಕೆ ದ್ರೋಹ ಮಾಡ್ದ್ರೆ ನಂಗೆ ಒಳ್ಳೆದಾಗ್ತಾ? (ಛಿ ಸುಡ್ಲಿ ನನ್ನಂಥ ಮಗ್ಳು ಅಪ್ಪ ಆಯಿಗೆ ಮೋಸ ಮಾಡುವ ಮಗ್ಳು ಯಾರಿಗೂ ಹುಟ್ಟುದು ಬೇಡ) ನಾ ದೊಡ್ಡ ಡಾನ್ಸರ್ ಆದ್ರೆ ನಾ ಪ್ರಸಿದ್ಧ ಆಗಿ ತನ್ನ ಕೈ ತಪ್ಪೋತು ಹೇಳಿ ನಂಗೆ ಅಂವ ಡಾನ್ಸ್ ಮಾಡುಲೇ ಬಿಟ್ಟಿದ್ದ್ನಿಲ್ಯಲೀ? ಇತ್ಲಗೆ ಅಪ್ಪ ಆಯಿ ಡಾನ್ಸ್ ಮಾಡು, ಪ್ರಾಕ್ಟೀಸ್ ಮಾಡೂ ಅಂಬೊ. ಅತ್ಲಗೆ ಅಂವ ಬೇಡಾ ಅಂಬ. ಇದೆರಡ್ರ ದ್ವಂದ್ವಲ್ಲಿ ಯಾವ್ದೂ ಸರಿ ಆಗಗಿದ್ದೆ ಕಡೆಗೂ ಅವ್ನ ಮಾತಿಗೇ ಬೆಲೆ ಕೊಟ್ಟು ಅಪ್ಪ ಆಯಿಗೆ ನೋವು ಕೊಟ್ನಲೀ? ” ಪದ್ಮಾನ ವಿಚಾರ ನಿಲ್ಲದೇ ಹರಿvತ್ತು. ನೋವು ಅಪರಾಧ ಭಾವ ಕ್ಷಣಕ್ಕೊಂದ್ಸಲ ಚುಚ್ದಾಗ ಅಪ್ಪ ಆಯಿ ಹತ್ರ ಹೋಗಿ, “ಅಪ್ಪ ಆಯಿ ನಂದ್ ತಪ್ಪಾತು, ನನ್ನ ಕ್ಷಮಿಸಿ, ನಿಂಗ್ಳ ಹೊಟ್ಟೇಲಿ ಹುಟ್ಟೂ ಯೋಗ್ಯತೆಯೂ ನಂಗಿಲ್ಲೆ, ಸರ್ವಾಪರಾಧ ಆತು ಜೀವಮಾನ್ದಲ್ಲಿ ನಿಂಗ ಹಾಕ್ದ ಗೆರೆ ದಾಟ್ತ್ನಿಲ್ಲೆ ಇನ್ನು. ನಿಂಗ ಎಂತಾ ಹೇಳ್ದ್ರೂ ನನ್ನ ಒಳ್ಳೇದಕ್ಕೇ ಹೇಳಿ ಅರ್ಥ ಆತು ನಂಗೆ ನಂದು ತಪ್ಪಾತು, ತಪ್ಪಾತು” ಕಾಲಿಗೆ ಬಿದ್ದು ಪದ್ಮಾ ಬೋರಾಡಿ ತೀಡ್ತಿದ್ರೆ ಪಾಮು ಶರಾವತಿ ಕuಲಿ ಮಗ್ಳ ವೇದನೆಗಾಗಿ ನೋವಿನ ಕಣ್ಣೀರು, ಮಗ್ಳ ಪರಿವರ್ತನೆಗಾಗಿ ಸಂತೋಷದ ಕಣ್ಣೀರು ಒಟ್ಟೊಟ್ಟಾU ಮಗ್ಳನ್ನು ಗಟ್ಟಿ ಹಿಡ್ಕಂಡು ಸಮಾಧಾನ ಮಾಡ್ದೋ. ಮಗ್ಳಿಗೆ ಹೊಸ ಜನ್ಮ ಬಂದಂತೆ ಬಾಯಿಗೆ ತುತ್ತು ಇಟ್ಟು ಮುದ್ದು ಮಾಡ್ದೊ, ಪ್ರೀತಿಯ ಪರಾಕಾಷ್ಟೆ ಮಗಳ್ ಮೇಲೆ. ಸತ್ಯಾಸತ್ಯವನ್ನು ತೆಳ್ಕಂಬ ತಾಕತ್ತು ತಂಗ್ಳ ಮಗ್ಳಿಗಿದ್ದು ಹೇಳುವ ಆನಂದ ರಾಮು ಶರಾವತಿಯನ್ನು ಆನಂದದ ಕಡಲಲ್ಲಿ ತೇಲಿಸ್ತು. ಇಬ್ರೂ ಗುರುಗಳ ಪೊಟೋಕ್ಕೆ ಕೈ ಮುಗದ್ದೇ ಮುಗದ್ದು. ದೇವ್ರಿಗೆ ಹೇಳ್ಕಂಡ ಹರ್ಕೆ ಎಲ್ಲಾ ತೀರ್ಸ್ದ. ಅಪ್ಪ ಅಮ್ಮಂಗೆ ಈಗ ನಡೆವ ನಡೆಯಲ್ಲಿ ಹೆಮ್ಮೆ, ಗತ್ತು. ಮಗ್ಳ ಪರಿವರ್ತನೆ ಅಗಾಧ ಸಂತೋಷ ತಂದಿತ್ತು.

******

ಇಂದು ಪದ್ಮಾ ಕುಂದಾಪುರದ ಜಮೀನ್ದಾರರ ಒಬ್ಬನೇ ಮಗ, ಇಂಜಿನಿಯರ್ ಮನೋಜನ ಮನೆಯೊಡತಿ, ಮನದೊಡತಿ. ಪುಟ್ಟ ಅನಿರುದ್ಧನ ಅಮ್ಮ. ಕಾರು ಬಂಗ್ಲೆ ಸರ್ವ ಶ್ರೀಮಂತಿಕೆ ಇದ್ದೂ ಅತ್ಯಂತ ಸರಳರಾದ ಶ್ಯಾಮರಾಯರು-ಮುಕಾಂಬಿಕಮ್ಮನ ಮುದ್ದಿನ ಸೊಸೆ. ಅಂತರಾಷ್ಟ್ರೀಯ ಮಟ್ಟದ ಭರತನಾಟ್ಯ ಕಲಾವಿದೆ. ವಿದೇಶಕ್ಕೂ ಹೋಗ್ಬರ್ತಾನೇ ಇರ್ತು. ಮನೇಲಿ ಇದ್ರ ಡಾನ್ಸಿಗೆ ಗಂಡಂದೇ ಪೂರ ದೇಖರೇಖಿ. ಅತ್ತೆಮಾವನ ಪೂರ್ಣ ಬೆಂಬಲ. ತಂಗಿ ವಂದನಾನ ತಮ್ಮನೆಲೇ ಇಟ್ಕಂದು ಉಜಿರೆಲಿ ಬಿ.ಇ ಓದಿಸ್ತಿದ್ದು. ರಾಮು ಶರಾವತಿ ಎಂಟು ದಿನಕ್ಕೆ ಹದಿನೈದು ದಿನಕ್ಕೆ ಪದ್ಮಾನ ಮನೆಗೆ ಬಂದು ಮೊಮ್ಮಗನ ಆಡಿಸ್ಕಂಡು ಹೋಗ್ತೋ. ದೇವರ ದಯೆ ಗುರು ಕರುಣೆಯಿಂದ ಎಲ್ಲಾ ಸರಿ ಆತು.

~~~ ***~~~~

ವಿಜಯತ್ತೆ

   

You may also like...

5 Responses

 1. ಪರಿವರ್ತನೆಯಾಗಿ ಸುಂದರ ಜೀವನ ನೆಡಶಿತ್ತಾನೆ ಕೂಸು. ಸಮಾಜಕ್ಕೆ ಒಳ್ಳೆ ಸಂದೇಶ ಕೊಡ್ತಾ ಇಪ್ಪ ಕಥೆ.

 2. ಹರೀಶ್ ಕೇವಳ says:

  ಕೊಡಗಿನ ಗೌರಮ್ಮನ ಕಥೆ ಹೇಳ್ಟಿರಾ ಆರದರೂ…

 3. ತೆಕ್ಕುಂಜ ಕುಮಾರ ಮಾವ° says:

  ಕತೆ ಇಷ್ಟ ಆತು.

 4. ಚೆನ್ನೈ ಭಾವ° says:

  ಪರಿವರ್ತನೆ ಲಾಯಕ ಆಯ್ದು.

 5. ಶರ್ಮಪ್ಪಚ್ಚಿ says:

  ಕತೆಯ ಅಂತ್ಯ ಲಾಯಿಕ ಆಯಿದು.
  ಪ್ರೇಮಕ್ಕೆ ತಿರುಗಿ ಅರಾರ ಹಿಂದೆ ಹೋವ್ತವರ ಕತೆ ಈ ರೀತಿ ಅಂತ್ಯ ಆಗಲಿ ಹೇಳುವ ಆಶಯ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *