ಬರದೋರು :   ಕಾವಿನಮೂಲೆ ಮಾಣಿ    on   09/08/2012    13 ಒಪ್ಪಂಗೊ

ಕಾವಿನಮೂಲೆ ಮಾಣಿ
Latest posts by ಕಾವಿನಮೂಲೆ ಮಾಣಿ (see all)

ಎಷ್ಟೋ ತಿಂಗಳು ಆದ ಮೇಲೆ ಮತ್ತೆ ಬರಿಯುಕೆ ಕೂತಿದ್ದೇನೆ….. ಪ್ರತಿ ಲೇಖನದ ಮಧ್ಯೆಯೂ ತುಂಬಾ ದಿನದ ಅಂತರ…. ಇಷ್ಟೊಂದು ದಿನಲ್ಲಿ ಅನುಭವಿಸಿದ ಕಷ್ಟ ಸುಖಂಗಳು, ಕಲ್ತ ಜೀವನದ ಪಾಠಗಳು ಎಲ್ಲವೂ ಕಣ್ಣ ಮುಂದೆ ಬಂದು ಕೊಣಿತ್ತಾ ಇದ್ರೆ ಮಾತ್ರ ಮನದ ಭಾವಗಳು ಅಕ್ಷರ ರೂಪಕ್ಕೆ ಇಳಿಯುಕೆ ಸಾಧ್ಯ 🙂 ಮನುಷ್ಯನ ದೇಹ, ಮನಸ್ಸು ಎಷ್ಟು ವಿಚಿತ್ರ ಹೇಳಿರೆ, ನಂಬುಕೆ ಸಾಧ್ಯ ಆಗುದಿಲ್ಲ….. ಮನುಷ್ಯನ ಮೆದುಳು ಯಾವ ಕಂಪ್ಯೂಟರ್ಗೂ ಕಮ್ಮಿ ಇಲ್ಲ…. ನಮ್ಮ ಜೀವಮಾನದ ಪೂರ್ತಿ ಘಟನಾವಳಿಗಳ ಕಂಪ್ಯೂಟರ್ಲಿ ದಾಖಲಿಸಿ ಇಟ್ಟುಕೊಳ್ಳುಕೆ ಎಷ್ಟು ಜಿಬಿ ಹಾರ್ಡ್ ಡಿಸ್ಕ್ ಇದ್ರೂ ಸಾಲ್ದು, ಆದ್ರೆ ನಮ್ಮ ಮೆದುಳಿಲಿ ಅದೆಲ್ಲವೂ ಡಿಟ್ಟೋ ದಾಖಲಾಗಿರ್ತೆ 🙂 ದಿನ ಕಳುದು ಹೋಗ್ತೆ, ಜನ ಅಳುದು ಹೋಗ್ತಾವೆ ಆದ್ರೆ ನೆನಪ್ಪು ಮಾತ್ರ ಶಾಶ್ವತ ಆಲ್ವಾ ???

****************

ಬದುಕಿನ ಓಟ ಎಷ್ಟು ವೇಗವಾಗಿ ಆಗ್ತೆ ಹೇಳಿರೆ ಅದ್ರ ಎದುರು ಒಲಿಂಪಿಕ್ಸ್ ಲಿ ಚಿನ್ನ ಗೆದ್ದ ಓಟಗಾರನೂ ಸೋಲುವೇಕು 🙂 ಕಣ್ಣು ಮುಚ್ಚಿ ತೆಗಿಯುವಷ್ಟ್ರ ಒಳಗೆ ಎಲ್ಲಿಂದ ಎಲ್ಲಿಗೋ ಹೋಗಿರ್ತೆ 🙂 ಮೊನ್ನೆ ಇತ್ತ ಗಿರಿನಗರ ಮಠಲ್ಲಿ ಕೇಳಿದ ತಾಳಮದ್ದಲೆ ನೆನಪ್ಪಾಗ್ತೆ 🙂 ನಳ ದಮಯಂತಿ ಪ್ರಸಂಗ 🙂 ದಮಯಂತಿಯ ಪುನರ್ ಸ್ವಯಂವರಕ್ಕೆ ನಳ ಬಾಹುಕನ ವೇಷಲ್ಲಿ ಋತುಪರ್ಣನ ಒಟ್ಟಿಗೆ ರಥಲ್ಲಿ ಹೋಗ್ತಾ ಇರುವಾಗ, ಋತುಪರ್ಣ ಮಹಾರಾಜನ ಅಂಗವಸ್ತ್ರ ಹಾರಿ ಹೋಗ್ತಂತೆ. “ಬಾಹುಕ ಒಂದು ಕ್ಷಣ ರಥ ನಿಲ್ಸು, ಕೆಳಗಿಳಿದು ನನ್ನ ಅಂಗವಸ್ತ್ರ ತೆಕ್ಕೊತ್ತೇನೆ” ಹೇಳಿ ಋತುಪರ್ಣ ಹೇಳಿಯಾಗುವಾಗ ಬಾಹುಕ ಹೇಳ್ತಾನಂತೆ, “ನಾವು ಆ ಅಂಗವಸ್ತ್ರ ಬಿದ್ದ ಜಾಗೆಂದ ಎಷ್ಟೋ ಯೋಜನ ದಾಟಿ ಮುಂದೆ ಬಂದಾಗಿಯೇದೆ”. ನಮ್ಮ ಎಲ್ಲರ ಬದುಕು ಕೂಡಾ ಹಾಂಗೆ ಹೇಳಿ ಅನ್ಸುತ್ತೆ 🙂 “ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ನಾವು ಕಳ್ಕೊಂಡಿದ್ದೇವೆ, ಅದು ಮತ್ತೆ ಬೇಕು” ಹೇಳಿ ನವುಗೆ ಅನ್ಸುವ ಹೊತ್ತಿಗೆ ನಾವು ತುಂಬಾ ದೂರ ಹೋಗಿ ಆಗಿರ್ತೆ 🙁 ಮತ್ತೆ ಅದ್ರ ಪಡ್ಕೊಳ್ಳುಕೆ ಸಾಧ್ಯವೇ ಇಲ್ಲದ್ದಷ್ಟು ದೂರ !!!!!

ನಳನ ವಿಷಯ ಬಂದಾಗ ನನಿಗೆ ಮತ್ತೆ ನನ್ನ ಅಜ್ಜನ ನೆನಪ್ಪಾಗ್ತೆ….. ನಾನು ಸಣ್ಣಾಗಿರುವಾಗ ಪ್ರತಿ ದಿನ ಅಜ್ಜ ನನಿಗೆ ಕಥೆ ಹೇಳ್ತಾ ಇತ್ತಿದ್ರು…. ರಾಮಾಯಣ, ಮಹಾಭಾರತದ ಕತೆಗಳೇ ಜಾಸ್ತಿ….. ನಳನ ಕತೆಯನ್ನೂ ಹೇಳಿತ್ತಿದ್ರು ಅಜ್ಜ….. ಅಜ್ಜನ ಕಥೆ ಹೇಳುವ ರೀತಿಯೇ ಚಂದ 🙂 ಮುಖ್ಯ ಕತೆಯೊಟ್ಟಿಗೆ ಬರುವ ಉಪಕತೆ, ಪಾತ್ರ ವರ್ಣನೆ, ಪ್ರತಿಯೊಂದು ಪಾತ್ರವೂ ಕಣ್ಣಿಗೆ ಕಟ್ಟುವ ಹಾಂಗೆ ಕತೆ ಹೇಳ್ತಿದ್ದದ್ದು ಹೆಂಗೆ ಮರಿಯುಕೆ ಸಾಧ್ಯ ? ರಾಮಾಯಣ ಅಥವಾ ಮಹಾಭಾರತ ಕತೆ ಶುರುವಾಯ್ತು ಹೇಳಿರೆ ಸಾಕು, ತಿಂಗಳಾನುಗಟ್ಟಲೆ ನನಿಗೆ ಅದೆ ಗುಂಗು 🙂 ಅಜ್ಜ ಹೋದಲ್ಲಿ ಬಂದಲ್ಲಿ ಎಲ್ಲಾ “ಕತೆ ಹೇಳಿ ಅಜ್ಜಾ” ಹೇಳಿ ಅಜ್ಜನ ಬೆನ್ನ ಹಿಂದೆಯೇ ಇರ್ತಿದ್ದೆ 🙂 ಅಜ್ಜ ಚಿಟ್ಟೆಲಿ ಕೂತು ಅಡಿಕ್ಕೆ ಸಜ್ಜಿ ಮಾಡುವಾಗ ನಾನೂ ಅಲ್ಲಿಯೇ ಕೂತುಕೊಂಡು ಕತೆ ಕೇಳುದು 🙂 ಅಡಿಕ್ಕೆ ರಾಶಿಗೆ ಕೈ, ಕಾಲು ಹಾಕಿ ಆಟ ಆಡುದು, “ನಾನೂ ಅಡಿಕ್ಕೆ ಸಜ್ಜಿ ಮಾಡ್ತೇನೆ” ಹೇಳಿ ಅಜ್ಜನ ಹತ್ರ ಹಠ ಮಾಡುದು, ಎಲ್ಲವೂ ನೆನಪಾಗ್ತಾ ಅದೆ 🙂

ಅದೆಲ್ಲವೂ ಈಗ ಮುಗುದು ಹೋದ ಮಾತು 🙁 ರಥಂದ ಹಾರಿ ಹೋದ ಋತುಪರ್ಣನ ಶಾಲಿನ ಹಾಂಗೆ…. ಮತ್ತೆಂದೂ ಸಿಕ್ಕದ್ದೇ ಇರುವಂಥದ್ದು 🙁 ಬಾಲ್ಯದ ಆ ಖುಷಿಯ ದಿನಗಳಂದ ಬಹು ಯೋಜನ ದೂರ ಬಂದು ಬಿಟ್ಟಿದ್ದೇನೆ 🙁 ಮನೆ ಬಿಟ್ಟು ಈ ಮಹಾನಗರಲ್ಲಿ ಬಂದು ಕೂತ ಮೇಲಂತೂ, ಎತ್ತ ಹೋಗ್ತಾ ಇದ್ದೇನೆ, ಯಾವ ವೇಗಲ್ಲಿ ಕಳೆದು ಹೋಗ್ತಾ ಇದ್ದೇನೆ ಹೇಳಿಯೇ ಗೊತ್ತಾಗ್ತಾ ಇಲ್ಲ 🙁 “ಪರಿವರ್ತನೆ ಜಗದ ನಿಯಮ” ಹೇಳುವ ಮಾತು ಹೇಳಿಕೊಂಡು ಸಮಾಧಾನ ಮಾಡಿಕೊಳ್ವೇಕು, ಅಷ್ಟೇ 🙁

****************

ನನ್ನ ಬದುಕ್ಕಿಲಿ ಕೃತ್ತಿಕಾ ಬಂದದ್ದು, ನಮ್ಮ ಮದುವೆ ಆದ್ದು, ನಾವಿಬ್ರೂ ಒಂದು ಸಣ್ಣ ಬಾಡಿಗೆ ಮನೆಲಿ ಇದ್ದದ್ದು, ನಮ್ಮ ಪ್ರೀತಿ, ಜಗಳ, ಕೋಪ, ತಮಾಷೆ ಎಲ್ಲಾ ಒಂದು ಮಿಂಚಿನ ಹಾಂಗೆ ಬಂದು ಹೋಯ್ತು….. ಮದುವೆ ಆಗಿ ಒಂದು ವರ್ಷ ಆಗುವಾಗಲೇ ಒಂದು ಪುಟ್ಟು ಬಾಬೆಯೂ ಆಯ್ತು 🙂 ಆ ಬಾಬೆಗೆ ಮೂರು ತಿಂಗಳೂ ಆಯ್ತು 🙂 ನಾನು ಒಬ್ಬನೇ ಇಲ್ಲಿ ಇದ್ದೇನೆ 🙁 ಬಾಬೆ ನೋಡ್ವೇಕು ಹೇಳಿ ಕಾಣ್ತೆ…. ಅದ್ರ ಒಟ್ಟಿಗೆ ಆಟ ಆಡ್ವೆಕು ಹೇಳಿ ಕಾಣ್ತೆ…. ಆದ್ರೆ ಅದಿಕ್ಕೆ ಇನ್ನೂ ಮೂರು ತಿಂಗಳು ಕಾಯುವೇಕು…. ಕೃತ್ತಿಕಾ, ಬಾಬೆ ಕರ್ಕೊಂಡು ಇಲ್ಲಿಗೆ ಬರುದು ಅಕ್ಟೋಬರ್ ಲಿ…. ಅಲ್ಲಿವರೆಗೂ ನಾನು ಮತ್ತೆ ಬ್ರಹ್ಮಚಾರಿ !! ಕಾಲದ ನಾಗಾಲೋಟಲ್ಲಿ ಈ ಮೂರು ತಿಂಗಳು ಮೂರು ನಿಮಿಷದ ಹಾಂಗೆ ಹಾರಿ ಹೋಗ್ತೆ 🙂
****************

ಮಳೆ ಇಲ್ಲ 🙁 ಯಾಕೋ ಈ ವರ್ಷ ಮಳೆ ಭಾರೀ ಕೈ ಕೊಟ್ಟದೆ…. ಬೆಂಗಳೂರಿಲಿ ಅಂತೂ ಮಳೆಯೇ ಇಲ್ಲ 🙁 (ನಮ್ಮಂಥವೆಲ್ಲಾ ಬೆಂಗಳೂರಿಲಿ ಬಂದು ಝಾಂಡಾ ಊರಿರುವಾಗ ಮಳೆ ಆದರೂ ಹೇಂಗೆ ಬಂದೀತು ???) ಮಳೆಯ ಹಿತ ಅನುಭವಿಸುವೇಕು ಹೇಳಿ ಯಾಕೋ ತೀರಾ ಅನ್ಸಿದಾಗ ನಾನು ಹೊರಟೇಬಿಟ್ಟೆ ಮೂಡಿಗೆರೆಗೆ 🙂 ನನ್ನ ಫ್ರೆಂಡ್ ಹರೀಶ “ನಾನೂ ಬರ್ತೀನೋ” ಹೇಳಿಯಾಗುವಾಗ ಇಲ್ಲ ಹೇಳಿ ಹೇಳುಕೆ ಆಗಲ್ಲ… ಇಬ್ರೂ ಹೊರನಾಡು ಬಸ್ ಹತ್ತಿ ಹೊರಟಾಯ್ತು 🙂 ರಾತ್ರೆ ಬಸ್ಸಿಲಿ ನಿದ್ದೆಯೇ ಬರಲ್ಲ 🙁 ಮೂಡಿಗೆರೆಗೆ ಹೋಗ್ತಾ ಇರುವ ಖುಷಿಗೋ ಅಥವಾ ಕಾಲೇಜ್ ನ ಗೇಟಿನ ಎದುರು ಇಳಿಯುಕೆ ಮೊದಲೇ ಬಾಗಿಲಿನ ಹತ್ರ ಹೋಗಿ ಡ್ರೈವರಿಗೆ ರಿಕ್ವೆಸ್ಟ್ ಮಾಡುವೇಕು ಹೇಳುವ subconscious ಮನುಗುಕೆ ಬಿಡಲ್ವೋ ಗೊತ್ತಿಲ್ಲ 😛 ಅಂತೂ ಬೆಳಿಗ್ಗೆ 4 ಘಂಟೆಗೆ ತೋಟಗಾರಿಕಾ ಕಾಲೇಜ್ ನ ಹಾಸ್ಟೆಲ್  ತಲಪಿ ಆಯ್ತು 🙂 ನನ್ನ ಇನ್ನೊಬ್ಬ ಫ್ರೆಂಡ್ ಅಕ್ಷಯ್ ಅಲ್ಲಿ ನವುಗಿಬ್ರಿಗೂ ಮನುಗುಕೆ ವ್ಯವಸ್ತೆ ಮಾಡಿ ಆಗಿತ್ತು…. ಸಣ್ಣಕ್ಕೆ ಮಳೆ ಹನಿ ಬೀಳ್ತಾ ಇತ್ತು…. ರಗ್ಗು ಹೊದ್ದು ಮನಿಗಿರೂ ನಿದ್ದೆ ಬರ್ತಾ ಇರಲ್ಲ 🙂 ಮೂಡಿಗೆರೆ ಕಾಲೇಜ್ ಲಿ ಕಳುದ ಆ ನಾಲ್ಕು ವರ್ಷ ಕಣ್ಣ ಮುಂದೆ ಹಾಂಗೆ ಕಾಡ್ತಾ ಇತ್ತು…. ಮೂಡಿಗೆರೆಯ ಮಳೆ, ಚಳಿ, ಗಾಳಿ, ಜನ, ಸಂಸ್ಕೃತಿ ಎಲ್ಲವೂ ನೆನಪ್ಪಾಗ್ತಾ ಇತ್ತು 🙂

ಪಿಯುಸಿ ಮುಗುಸಿ CET ಬರ್ದು ಆದ ಮೇಲೆ “ಮುಂದೆಂತ ?” ಹೇಳುವ ಪ್ರಶ್ನೆ ಎದುರಾದಾಗ ನನ್ನ ಆಯ್ಕೆ Horticulture ಆಯ್ತು…. ವೆಟೆರಿನೆರಿ ಮಾಡ್ವೆಕು ಹೇಳಿ ಆಸೆ ಇದ್ರೂ ಸೀಟ್ ಸಿಕ್ಕುವಷ್ಟು ಮಾರ್ಕು ಇರಲ್ಲ 🙁 ಸರಿ, ಬಿ.ಎಸ್ಸಿ. ತೋಟಗಾರಿಕೆ ಕೋರ್ಸ್ ತೆಕ್ಕೊಂಡು ಮೂಡಿಗೆರೆ ಕಾಲೇಜ್ ಸೆಲೆಕ್ಟ್ ಮಾಡಿಯೂ ಆಯ್ತು…. ಪಿಯುಸಿಲಿ ಎರಡು ವರ್ಷ ಹಾಸ್ಟೆಲ್ ಲಿ ಇದ್ದು ಅಭ್ಯಾಸ ಆಗಿದ್ದ ಕಾರಣ ಮನೆ ಬಿಟ್ಟು ಒಬ್ಬನೇ ಇರುಕೆ ಹೆದ್ರಿಕೆ ಅಂತೂ ಇರಲ್ಲ…. ಆದ್ರೂ ಘಟ್ಟದ ಮೇಲೆ, ಹೆಂಗೋ ಏನೋ ? ಊಟ ತಿಂಡಿ ಸರಿ ಅಡ್ಜಸ್ಟ್ ಆಗದ್ರೆ ಹೇಂಗೆ ಹೇಳುವ ಸಣ್ಣ ಆತಂಕ ನನಿಗೂ, ಮನೆಯವಕ್ಕೂ ಇದ್ದೆ ಇತ್ತು…. ಆದ್ರೆ ಬಿ.ಎಸ್ಸಿ. ಮುಗುಸಿ ಹೊರಡುವಾಗ ಮೂಡಿಗೆರೆ ಬಿಟ್ಟು ಬರುಕೆ ಮನಸ್ಸೇ ಇರಲ್ಲ 🙁 ಕಣ್ಣೀರು ಹಾಕಿ ಹೊರಟವು ಎಷ್ಟು ಜನವೋ ? ನಾನಂತೂ ಕರ್ಚೀಪು ಚೆಂಡಿ ಮಾಡಿತ್ತಿದ್ದೆ 🙁

ಡಿಗ್ರಿ ಮುಗುಸಿ ನಾಲ್ಕು ಐದು ವರ್ಷ ಕಳುದು ಮತ್ತೆ ನಾವು ಕಲ್ತ ಕಾಲೇಜಿಗೆ, ಆ ಊರಿಗೆ ಹೋಗುವ ಖುಷಿ ಅದೆ ಅಲ್ಲಾ ? ಅದ್ರ ಅಕ್ಷರಕ್ಕೆ ಇಳುಶುದು ಕಷ್ಟ ಸಾಧ್ಯ…. ಅದ್ರ ಅನುಭವಿಸಿಯೇ ತಿಳ್ಕೊಳ್ವೆಕಷ್ಟೇ…. ಅದೇ excitement ಲಿ ಬೆಳಿಗ್ಗೆ ಎದ್ದು ಹಾಸ್ಟೆಲ್ ಇಂದ ಸೀದಾ ಕಾಲೇಜ್ ಇಗೆ ಹೋದೆ…. ತುಂಬಾ ಬದಲಾವಣೆ ಎಂತ ಆಗಿರಲ್ಲ 🙂 ಒಂದೊಂದು ಕ್ಲಾಸ್ ರೂಮಿಗೂ ಹೋಗಿ ಫೋಟೋ ತೆಕ್ಕೊಂಡೆ 🙂 ಕೈಲಿ ಇದ್ದ ಕ್ಯಾಮೆರಾ 14 ಮೆಗಾ ಪಿಕ್ಸೆಲ್, 4 ಜಿಬಿ ಮೆಮೊರಿ 🙂 ಆದ್ರೆ ನಾಕು ವರ್ಷ ನಾನು ಅಲ್ಲಿ ಓಡಾಡಿ ಅನುಭವಿಸಿದ ಕ್ಷಣಂಗಳ ಸೆರೆ ಹಿಡುದ್ದು ಸಾವಿರಾರು ಮೆಗಾ ಪಿಕ್ಸೆಲ್ ನ ನನ್ನ ಕಣ್ಣು ಮತ್ತೆ unlimited ಜಿಬಿ ಮೆಮೊರಿ ಇರುವ ಮೆದುಳು 🙂 ಪಿರಿಪಿರಿ ಮಳೆಯ ಮಧ್ಯೆಯೇ ಕೊಡೆ ಹಿಡ್ಕೊಂಡು ಕಾಲೇಜ್ ಸುತ್ತ ಒಂದು ಸುತ್ತು ಹಾಕಿದೆ….

*********************
ನಮ್ಮ ಕಾಲೇಜ್ ಇರುದು ಒಂದು ಎತ್ತರದ ಗುಡ್ಡೆಯ ಮೇಲೆ. ಸುತ್ತಲೂ ಪಶ್ಚಿಮ ಘಟ್ಟದ ಹೊದಿಕೆ….. ಕಾಲೇಜ್ ನ ಎದುರು ನಿತ್ತು ನೋಡಿರೆ ಹಸಿರೋ ಹಸಿರು 🙂 ಹಿಂದೆಯೂ ಕಾಡು…. ಸ್ವಲ್ಪವೇ ದೂರಲ್ಲಿ ಪೂರ್ಣಚಂದ್ರ ತೇಜಸ್ವಿಯ ತೋಟ 🙂 ಹಾಂ…. ತೇಜಸ್ವಿ ಹೆಸರು ಹೇಳಿಯಾಗುವಾಗ ಒಂದು ಘಟನೆ ನೆನಪ್ಪಾಗ್ತೆ…. ನಮ್ಮ ಕಾಲೇಜ್ ನ ನೆರೆಕರೆಲಿಯೇ ತೇಜಸ್ವಿ ಇದ್ರೂ ಅವರ ಭೇಟಿ, ಒಡನಾಟ ನವುಗೆ ಅಷ್ಟಕ್ಕಷ್ಟೇ 🙁 ಒಂದು ಸರ್ತಿ ಕಾಲೇಜ್ ನ ಯಾವುದೋ ಒಂದು ಸಮಾರಂಭಕ್ಕೆ (Freshers Welcome party ಗೆ ಹೇಳಿ ನೆನಪ್ಪು) ಅವರ ಅತಿಥಿಯಾಗಿ ಕರಿಯುಕೆ ನಾನು ಫ್ರೆಂಡ್ಸ್ ಒಟ್ಟಿಗೆ ಹೋಗಿತ್ತಿದ್ದೆ ಒಂದು ಸರ್ತಿ…..  ಮೊದಲೆ ಅನುಮತಿ ಇಲ್ಲದ್ದೆ ಅವರ ತೋಟಕ್ಕೆ ಹೋದ್ರೆ ಬೈದು ಕಳ್ಸುತ್ತಾವೆ ಹೇಳಿ ಗೊತ್ತಿದ್ದೂ ಧೈರ್ಯ ಮಾಡಿ ಗೇಟಿನ ಒಳಗೆ ಹೋಗಿ ಆಯ್ತು…. ಮನೆಲಿ ಇತ್ತಿದ್ವು ತೇಜಸ್ವಿ…. ಹೀಂಗೆ ಹೀಂಗೆ ಕಾರ್ಯಕ್ರಮ ಅದೆ, ನೀವು ಬರ್ವೇಕು ಹೇಳಿ ಕೇಳಿಕೊಂಡಾಗುವಾಗ, “ಅಯ್ಯೋ ಇಂಥಾ ಕಾರ್ಯಕ್ರಮಗಳಿಗೆಲ್ಲಾ ನನ್ನನ್ನ ಯಾಕೆ ಕರೀತೀರಿ ಮಾರಾಯಾ ?? ಅದೂ ಅಲ್ಲದೆ ನಾವು ಆ ತಾರೀಕಿಗೆ ಮದ್ರಾಸಿಗೆ ಹೋಗ್ತಾ ಇದ್ದೇವೆ, ಬೇಜಾರು ಮಾಡ್ಕೋಬೇಡಿ” ಹೇಳಿ ನೆಗೆ ಮಾಡಿದ್ವು…. ಸರಿ ಹೇಳಿ ನಾವು ಹೊರಡುವಾಗ “ಅದೆಂಥದೋ ಒಂದು ಶಬ್ದ ಬರ್ತಾ ಇರ್ಥದಲ್ಲಾ ನಿಮ್ಮ ಕಾಲೇಜ್ ಇಂದ ??? ಎಂತ ಅದು ?? ಯಾವಾಗ ನಿಲ್ಲತ್ತೆ ???” ಹೇಳಿ ಕೇಳಿದ್ವು. ( ಯೂತ್ ಫೆಸ್ಟಿವಲ್ ಗೆ ಹೇಳಿ ನಮ್ಮ ಕಾಲೇಜ್ ಲಿ ಡೊಳ್ಳು ಕುಣಿತ ಪ್ರಾಕ್ಟೀಸ್ ಮಾಡ್ತಾ ಇತ್ತಿದ್ವು…. ದಿನಾ ಬೈಸಾರಿ ಹತ್ತು ಜನ ಹುಡುಗರು ಒಟ್ಟಿಗೆ “ಓ ಹೊಯ್” ಹೇಳಿ ಬೊಬ್ಬೆ ಹಾಕಿಕೊಂಡು ಡೊಳ್ಳು ಬಾರ್ಸುದು ತೇಜಸ್ವಿಗೆ ಕಿರಿ ಕಿರಿ ಅನ್ಸಿತ್ತೋ ಏನೋ ?? ) ನಾವು ಕ್ಷಮೆ ಕೇಳಿ, ಯೂತ್ ಫೆಸ್ಟಿವಲ್ಲಿಗೆ ಪ್ರಾಕ್ಟೀಸ್ ಮಾಡ್ತಾ ಇದ್ದೇವೆ ಹೇಳಿ ವಿವರ್ಸಿ ಆಗುವಾಗ “ಸರಿ, ಆದಷ್ಟು ಬೇಗ ಮುಗ್ಸಿ ಮಾರಾಯಾ” ಹೇಳಿ ಕಿರು ನೆಗೆ ಮಾಡಿದ್ವು :)ಅದೇ ಮೊದಲು, ಅದೇ ಕೊನೆ ನಾವು ತೇಜಸ್ವಿ ಮನೆಗೆ ಹೋದ್ದು….. ಮತ್ತೆ ಅವಾಗ ಇವಾಗ ಮೂಡಿಗೆರೆಲಿಯೋ, ಹ್ಯಾಂಡ್ ಪೋಸ್ಟಿಲಿಯೋ ಹಿಂದಾಣ ಸೀಟ್ ಇಲ್ಲದ್ದ ಹಳೇ ಲ್ಯಾಂಬಿ ಸ್ಕೂಟರಿಲಿ ತಿರಿಗಿಕೊಂಡಿದ್ದ ತೇಜಸ್ವಿಯ ದೂರಂದ ನೋಡಿ ಖುಷಿ ಪಟ್ಟದ್ದೆ ಹೆಚ್ಚು 🙂

*********************
ಮತ್ತೆ ಹಳೇ ನೆನಪ್ಪುಗಳ ಎಲ್ಲಾ ಕಣ್ಣಿಲಿ ತುಂಬುಸಿಕೊಂಡು ಮನಸ್ಸು ಹಗುರ ಮಾಡಿಕೊಂಡು, ಕಾಲೇಜ್ ಗೇಟ್ ದಾಟಿ ಹೊರಗೆ ಹೋದೆ…… ಮೊದಲು ಹೇಂಗೆ ಇತ್ತೋ ಹಾಂಗೇ ಅದೇ ಆ ಜಾಗೆ….. ರಾಜಣ್ಣನ ಕ್ಯಾಂಟೀನ್ಲಿ ಕಾಪಿ ಕುಡುದು, ಶ್ರೀಕಾಂತ್ ನ ಅಪ್ಪ ಸುಬ್ಬೇಗೌಡರ ಅಂಗಡಿಗೆ ಹೋಗಿ ಗೌಡ್ರ ಹತ್ರ ಮಾತಾಡಿ ಹೊರಟೆ… ಆಚೆ ಮತ್ತೊಂದು ಸಣ್ಣ ಅಂಗಡಿ, ಅಲ್ಲಿ ಇತ್ತಿದ್ದ ಅಶ್ರಫ್ ನ  ಎಸ್.ಟಿ.ಡಿ. ಬೂತ್ ಮಾತ್ರ ಈಗ ಇಲ್ಲ 🙁 ಪ್ರತಿಯೊಬ್ಬನ ಕೈಲೂ ಮೊಬೈಲು ಬಂದ ಮೇಲೆ ಎಸ್.ಟಿ.ಡಿ. ಬೂತ್ ಯಾರಿಗೆ ಬೇಕು ??? ಒಂದು ಕಾಲಲ್ಲಿ ನಾವು ಅಲ್ಲಿ ಕ್ಯೂ ನಿತ್ತುಕೊಂಡು ಮನೆಗೋ, ಹುಡುಗಿಯರ ಹಾಸ್ಟೆಲ್ ಗೋ ಫೋನ್ ಮಾಡಿಕೊಂಡು ಇದ್ದದ್ದು ನೆನಪ್ಪಾಗಿ ನೆಗೆ ಬಂತು 🙂 ಹಾಂಗೇ ಮುಂದೆ ಹೋದ್ರೆ ಬಷೀರ್ ನ  ಸಣ್ಣ ದಿನಸಿ ಅಂಗಡಿ, ಹರೀಶನ ಕಟ್ಟಿಂಗ್ ಶಾಪ್ 🙂 “ಬುಕ್ಕಾ ಎಂಚ ಉಲ್ಲಾರ್ ??” ಅದೇ ಮುಗ್ಧ ನೆಗೆ ಮಾಡಿ ಬಷೀರ್ ಮಾತಾಡಿಯಾಗುವಾಗ ಮೂಡಿಗೆರೆ, ಇಲ್ಲಿಯಾಣ ಜನ ಬದಲಾಗಲ್ಲ ಹೇಳಿ ಕಂಡು ಖುಷಿಯಾಯ್ತು 🙂 ಹರೀಶನ ಹತ್ರ ಶೇವಿಂಗ್ ಮಾಡ್ಸಿಕೊಂಡು ತಿರುಗಿ ಹಾಸ್ಟೆಲಿಗೆ ಬಂದು ಫ್ರೆಂಡ್ಸ್ ಹತ್ರ ಎಲ್ಲಾ ಮಾತಾಡಿ ಒಟ್ಟಿಗೆ ಕಾಮನ್ ಬಾತ್ರೂಮಿಲಿ ಮಿಂದು ಹೊರಟದ್ದೂ ಆಯ್ತು :)ಮತ್ತೆ ರಾಜಣ್ಣನ ಕ್ಯಾಂಟೀನ್ಲಿ ತಿಂಡಿ ಕಾಪಿ ಮಾಡಿ, ಹ್ಯಾಂಡ್ ಪೋಸ್ಟ್ ವರೆಗೆ ರಿಕ್ಷ ಹತ್ತಿ ಹೋದ್ರೆ ಅಲ್ಲಿ ಸಿಕ್ಕಿದ್ದು ಆಟೋ ಗಣೇಶಣ್ಣ. ಅದೇ ನೆಗೆ, ರಿಕ್ಷಾ, ಹಳೇ ನೋಕಿಯಾ ಹ್ಯಾಂಡ್ ಸೆಟ್, ಉಹುಂ ಚೇಂಜ್ ಆಗಲೇ ಇಲ್ಲ 🙂

************************
ಧರ್ಮಸ್ಥಳ ಬಸ್ ಹತ್ತಿ ಚಾರ್ಮಾಡಿ ಕಡೆ ಹೊರಟಾಯ್ತು ನಾನು, ಹರೀಶ್, ಅಕ್ಷಯ್ 🙂 ಬಿದರಹಳ್ಳಿ ದಾಟಿ ಹೊರಟ್ಟಿ, ಬಡವನದಿಣ್ಣೆ, ಬಗ್ಗಸಗೋಡು, ಬಣಕಲ್, ಕೊಟ್ಟಿಗೆಹಾರ ಹೀಂಗೆ ದಾರಿ ಉದ್ದಕ್ಕೂ ಹಸಿರು, ಗದ್ದೆ ಹೂಡುತ್ತಾ ಇದ್ದ ಜನ, ನೇಜಿ ನೆಡ್ತಾ ಇದ್ದ ಹೆಂಗಸರು 🙂 ಲೇಟ್ ಆದ್ರೂ ಸ್ವಲ್ಪ ಮಳೆ ಬಿದ್ದ ಕಾರಣ ಜನ ಕೃಷಿ ಕೆಲಸ ಶುರು ಮಾಡಿತ್ತಿದ್ವು 🙂 ಕೊಟ್ಟಿಗೆಹಾರ ಬಸ್ ಸ್ಟ್ಯಾಂಡ್ ಲಿ ಕಾಪಿಗೆ ನಿಲ್ಸಿದ್ವು…. ಬಸ್ ಕಿಟ್ಕಿಲಿ ಹೊರಗೆ ನೋಡಿರೆ ಪೂರ್ತಿ ಮೋಡ ಮುಚ್ಚಿ ಕಸ್ತಲೆ ಆಗ್ಯೆದೆ 🙂 ತುಳಸಿ ತೈಲ, ಟೊಪ್ಪಿ ಮಾರಿಕೊಂಡು ಬರುವ ಹುಡುಗರು, ಆರೇಳು ವರ್ಷ ಮೊದಲು ಹೇಂಗೆ ಇತ್ತೋ ಹಾಂಗೇ ಅದೇ ಈಗಲೂ 🙂 ಅಲ್ಲಿಂದ ಹೊರಟು ಘಾಟಿ ಪ್ರವೇಶ ಮಾಡಿತ್ತು ಬಸ್ 🙂 ಖುಷಿ ಆಗ್ತಾ ಅದೆ, ಅದೆಷ್ಟು ವರ್ಷದ ಮತ್ತೆ ಬರ್ತಾ ಇದ್ದೇನೆ ಈ ಜಾಗೆಗೆ ???ಮಲಯ ಮಾರುತ ಗೆಸ್ಟ್ ಹೌಸ್ ಕಳುದು ಮುಂದೆ ಹೋದ್ರೆ ಜೇನುಕಲ್ಲು ಅಣ್ಣಪ್ಪ ಸ್ವಾಮಿ ದೇವಸ್ಥಾನ…. ಘಾಟಿಲಿ ಹೋಗುವ ಎಲ್ಲಾ ವಾಹನಗಳೂ ಅಲ್ಲಿ ನಿಲ್ಲಿಸಿ ಪೂಜೆ ಮಾಡಿಯೇ ಮುಂದೆ ಹೋಗುದು 🙂 ಬಸ್ ನಿಲ್ಸಿದ ಕೂಡ್ಲೇ ನಾವು ಮೂರೂ ಜನ ಇಳುದ್ವು…. ಪಿರಿಪಿರಿ ಮಳೆ ಸ್ವಲ್ಪ ಸ್ವಲ್ಪವೇ ಜೋರಾವುಕೆ ಶುರು ಆಯ್ತು…. ಬಸ್ ಹೊರಟ ಮೇಲೆ ನಾವು ನದಿಯುಕೆ ಶುರು ಮಾಡಿದ್ವು…. ಸೋಮನಕಾಡು ದಾಟಿ ಇನ್ನೂ ಮೂರುನಾಕು ಕಿಲೋಮೀಟರ್ ಹೋದ್ರೆ ಅಲ್ಲಿ ಒಂದು ವ್ಯೂ ಪಾಯಿಂಟ್ ಅದೆ… ಅಲ್ಲಿವರೆಗೆ ನಡ್ಕೊಂಡು ಹೋಗಿ ಸಣ್ಣ ಸಣ್ಣ ಜಲಪಾತದ ಅಡಿಲಿ, ಮೋಡಗಳ ಮಧ್ಯೆ ನಿತ್ತುಕೊಂಡು ಬೇರೆ ಬೇರೆ ಪೋಸ್ ಕೊಟ್ಟು ಫೋಟೋ ತೆಕ್ಕೊಂಡು ಆಯ್ತು 🙂 ಮತ್ತೆ ವಾಪಸ್ ಜೇನುಕಲ್ಲು ಮಾರ್ಗವಾಗಿ ಕೊಟ್ಟಿಗೆಹಾರದವರೆಗೆ ನಮ್ಮ “ದಂಡ”ಯಾತ್ರೆ 🙂 ಮಳೆ ಜೋರಾಯ್ತು….. ತೆಕ್ಕೊಂಡು ಬಂದ ತಿಂಡಿ ಎಲ್ಲಾ ಖಾಲಿ ಆವುಕೆ ಶುರು ಆಯ್ತು…. ಆ ಗಾಳಿ ಮಳೆಗೆ ಸುಮಾರು 18 -20 ಕಿಲೋಮೀಟರ್ ನಡುದು ನಡುದು ಸಾಕಾಯ್ತು 🙂

ಹಳೇ ನೆನಪ್ಪುಗಳ ಮತ್ತೆ ಕೆದಕ್ಕಿಕೊಂಡು ಮೂರೂ ಜನ ಮನಸ್ಸು ಹಗುರ ಮಾಡಿಕೊಂಡೆವು 🙂

ಕಾಲೇಜ್ ಲಿ ಇರುವಾಗ ಸುಮಾರು ಸರ್ತಿ ಒಬ್ಬೊಬ್ಬನೇ ಟ್ರೆಕಿಂಗ್ ಬಂದಿತ್ತಿದ್ದೆ ಇಲ್ಲಿಗೆ…. ಬಿದಿರುತಳ ಹೇಳುವ ಒಂದು ಅಜ್ಞಾತ ಹಳ್ಳಿಗೂ ಹೋಗಿತ್ತಿದ್ದೆ 🙂 ಮಳೆ, ಗಾಳಿ, ಚಳಿ ಮನಸ್ಸಿನ ಹಗುರ ಮಾಡಿತ್ತು 🙂 ಮಲಯ ಮಾರುತ ಮುದ ಕೊಟ್ಟತ್ತು…..

ಕೊಟ್ಟಿಗೆಹಾರಂದ ಬಸ್ ಹತ್ತಿ ಹ್ಯಾಂಡ್ ಪೋಸ್ಟ್ ತಲುಪ್ಪಿ ನಡ್ಕೊಂಡು ಹಾಸ್ಟೆಲಿಗೆ ಬಂದು ಮತ್ತೊಂದು ಸರ್ತಿ ನೀರು ಕಾಸಿ ಮಿಂದೂ ಆಯ್ತು….. ಫ್ರೆಂಡ್ ಹರೀಶ ಬಾಡಿಗೆಗೆ ಇದ್ದ ಮನೆಗೆ ಹೋಗುವ ಹೇಳಿ ನಾವಿಬ್ರೂ ಹೊರಟ್ವು….. ಕ್ಯಾಂಟೀನ್ ರಾಜಣ್ಣನ ಹಳೆ ಮನೆಲಿ ಹರೀಶ ಬಾಡಿಗೆಗೆ ಇತ್ತಿದ್ದ ಮೊದಲು…. ರಾಜಣ್ಣನ ಅಮ್ಮ, ಹಣ್ಣು ಹಣ್ಣು ಮುದುಕಿ ಅಲ್ಲಿ ಇತ್ತು….. ಮೂರ್ಸಂಜೆಲಿ ನಮ್ಮ ಕಂಡು ಶುರುವಿಗೆ ಗುರ್ತ ಸಿಕ್ಕದ್ರೂ ಮತ್ತೆ ತುಂಬಾ ಖುಷಿಪಟ್ಟತ್ತು ಅಜ್ಜಿ…. ಒತ್ತಾಯ ಮಾಡಿ ರೊಟ್ಟಿ ಚಟ್ನಿ ತಿನ್ಸಿ ಚೆಂದಲ್ಲಿ ಮಾತಾಡಿತ್ತು….. ಆ ಪ್ರೀತಿ ನೋಡಿಯಾಗುವಾಗ ಮನಸ್ಸಿನ ಮೂಲೇಲಿ ನಾವು ಎಂತದೋ ಒಂದು ಕಳ್ಕೊಂಡಿದ್ದೇವೆ ಹೇಳುವ ಭಾವ 🙁

ರಾತ್ರಿ ಬಸ್ ಹತ್ತಿ ಮತ್ತೆ ಬೆಂದಕಾಳೂರಿಗೆ ವಾಪಸ್ 🙁 ಮರುದಿನ ಮತ್ತೆ ಆಫೀಸ್ ಗೆ ಹೋಗ್ವೇಕಲ್ಲಾ ????

*********************

ಬದುಕು ಓಡುವ ವೇಗವೇ ಹಾಂಗೆ…… ಕಾವಿನಮೂಲೆಲಿ ಹುಟ್ಟಿದ ಒಬ್ಬ ಮಾಣಿಯ ಮುಂಡುಗಾರು ಶಾಲೆ, ಬಾಳಿಲ ಶಾಲೆ, ಸುಳ್ಯ ರೋಟರಿ ಶಾಲೆ, ರಾಮಕುಂಜ ಕಾಲೇಜ್, ಮೂಡಿಗೆರೆ ತೋಟಗಾರಿಕಾ ಕಾಲೇಜ್ ಎಲ್ಲಾ ಕಡೆ “ಹಳೆ ವಿದ್ಯಾರ್ಥಿ” ಮಾಡಿ, ಚಿಕ್ಕಮಗಳೂರು, ಕೆಮ್ಮಣ್ಣು ಗುಂಡಿಯ ಕಾಫಿ ಡೇ ಕಂಪನಿಲಿ, ಮೂಡಿಗೆರೆಯ ಪ್ಲಾಂಟ್ ಹೆಲ್ತ್ ಕ್ಲಿನಿಕ್ ಲಿ ಕೆಲಸ ಮಾಡ್ಸಿ, ಮತ್ತೆ ಎಂ.ಎಸ್ಸಿ. ಪ್ರವೇಶ ಪರೀಕ್ಷೆ ಬರ್ಸಿ, ಬೆಂಗ್ಳೂರಿಲಿ ಕೃಷಿ ವಿಶ್ವವಿದ್ಯಾಲಯಲ್ಲಿ ಎರಡು ವರ್ಷ ಮತ್ತೆ ಓದುಸಿ, ಶೋಭಾ ಡೆವಲಪರ್ಸ್ ಲಿ ಕೆಲಸಕ್ಕೆ ಸೇರ್ಸಿ, ದೂರದ ಡೆಲ್ಲಿಗೆ ಕರ್ಸಿಕೊಂಡು ಸಮಕ್ ಲ್ಯಾಂಡ್ ಸ್ಕೇಪ್  ಹೇಳುವ ಇನ್ನೊಂದು ಕಂಪನಿಲಿ ಕೆಲಸ ಮಾಡ್ಸಿ, ‘ಉತ್ತರ ಭಾರತ’ ಹೇಳಿರೆ ಎಂತ ಹೇಳಿ ಪಾಠ ಹೇಳಿಕೊಟ್ಟು ಮತ್ತೆ ಬೆಂಗ್ಳೂರಿಗೆ ಕರ್ಸಿ, ಮದುವೆ ಮಾಡ್ಸಿ, ಲೀಲಾ ಪ್ಯಾಲೇಸ್ ಲಿ ಚಾಕ್ರಿ ಮಾಡ್ಸಿ, ಅದೂ ಬೇಡ ಹೇಳಿ ಟೋಟಲ್ ಎನ್ವಿರೊಂಮೆಂಟ್ ಹೇಳುವ ಈ ಕಂಪೆನಿಗೆ ತಂದು ಹಾಕಿ, ಕೈಗೆ ಒಂದು ಪುಟ್ಟು ಬಾಬೆಯ ಕೊಟ್ಟು  “ಬದುಕು ಹೇಳಿರೆ ಇದೇ” ಹೇಳುವ ಬಾಲ(ಳ)ಪಾಠ ಕಲ್ಸಿದ, “ಇಷ್ಟೇ ಅಲ್ಲ ಇನ್ನೂ ಅದೆ” ಹೇಳುವ ಎಚ್ಚರಿಕೆಯನ್ನೂ ಕೊಟ್ಟ ಬದುಕಿನ ಈ “ಪಯಣ” ಇನ್ನೆಲ್ಲಿಗೆ ಕರ್ಕೊಂಡು ಹೋಗ್ತೋ ???? “ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ” ಆಲ್ವಾ ????

13 thoughts on “ಪಯಣ 4

  1. ಲಾಯ್ಕಾಯಿದು ಲೇಖನ. 10 ಲೇಖನಕ್ಕಾಗುವಷ್ಟು ಸುದ್ದಿಯನ್ನು ಒಂದೇ ಲೇಖನದಲ್ಲಿ ಹೇಳಿಬಿಟ್ಟಿರಿ. ಇದು ಹೊಗಳಿಕೆಯೂ ಹೌದು. ವಿವರವಾಗಿ ಬರೆಯಲಾವುತ್ತಿತ್ತನ್ನೆ ಹೇಳುವ ಭಾವವೂ ಹೌದು !

    ಋತುಪರ್ಣನ ಶಾಲಿನ ಕತೆ ಬಾರೀ ಲಾಯ್ಕಾಯಿದು. ಇಬ್ಬರೂ ಹೆರೆಟದ್ದು ದಮಯಂತಿಯ ಎರಡನೆ ಸ್ವಯಂವರಕ್ಕೆಯನೇ ? ಇಬ್ಬರಿಂಗೂ- ಒಬ್ಬರಿಂಗಿತ ಮತ್ತೊಬ್ಬರಿಂಗೆ ಅಲ್ಲಿಗೆ ತಲುಪಿಕೊಂಬ ಅವಸರ ! ಹಾಂಗೆ ಶಾಲು ತಪ್ಪಲೆ ವಾಪಾಸು ಹೋಪಷ್ಟು ವ್ಯವಧಾನ ಇಬ್ಬರಿಂಗೂ ಇದ್ದಿರ…. ಅಲ್ಲದೋ ?

  2. ಎನಿಗೆ ಒಂದು ಡೌಟು. ಬಾಹುಕ ಋತುಪರ್ಣನ ಡ್ರೈವರ್ ಆಗಿಪ್ಪಾಗ ಕಾರು ಓಡ್ಸುತ್ತಾ ಇಪ್ಪಾಗ ಶಾಲು ಹಾರಿತ್ತಾಡ, ಒಂದು ಕ್ಷಣಲ್ಲೇ ಅದು ೬೪ ಯೋಜನ ದೂರ ಎತ್ತಿತ್ತಾಡ. ಋತುಪರ್ಣ ಶಾಲು ಹೆರ್ಕಿಯೊಂಬಾ ಹೇಳುವಗ ಬಾಹುಕ ಯೇಕೆ ನಿಲ್ಸಿದ್ದಾಯಿಲ್ಲೆ ಗಾಡಿ? ಹೇಂಗೂ ಅಷ್ಟು ಸ್ಪೀಡು ಹೋವುತ್ತನ್ನೆ, ಅದೇ ಸ್ಪೀಡಿಲಿ ವೊಪಾಸು ಬಂದು ಹೆರ್ಕಿಯೊಂಬಲಾವ್ತಿತ್ತು. ಪಾಪ ಗೆನಾ ಶಾಲಡ….. 🙂

    1. ಬೋದಾಳಣ್ಣಾ….. ನಿಂಗಳ ಸಂಶಯಕ್ಕೆ ಉತ್ತರಿಸುವಷ್ಟು ಮಂಡೆ ಇಲ್ಲೆ ಎನಗೆ ಎಂತ ಮಾಡುದು ???? ಆದರೂ ಎನ್ನ ಪ್ರಕಾರ ಹೀಂಗೆ ಆದಿಕ್ಕು ಹೇಳಿ ಕಾಣ್ತು…..

      ೧. “ನಿಲ್ಸು” ಹೇಳಿ ಹೇಳಿದ ಕೂಡ್ಲೇ ನಿಲ್ಸಿದರೆ ಅಷ್ಟು ಸ್ಪೀಡಿಲಿ ಹೋಗ್ಯೊಂಡು ಇದ್ದ ಗಾಡಿ ಮೊಗಚ್ಚದಾ ???? ನಿಧಾನಕ್ಕೆ ಬ್ರೇಕು ಹಾಕೆಡದಾ ????
      ೨. ಹೆಚ್ಚಿನಂಶ ಆ ಗಾಡಿಗೆ ‘ಡಿಸ್ಕೋ’ ಬ್ರೇಕು ಇತ್ತಿಲ್ಲೆ 🙁 ಹಾಂಗಾಗಿ ನಿಲ್ಸುವಾಗ ಅಷ್ಟು ದೂರ ಹೋಗಿ ಆಗಿತ್ತು 🙂
      ೩. ಅಷ್ಟು ಪೀಡಿಲಿ ಹೊಪಗ ಗಾಳಿ ಶಬ್ದಂದಾಗಿ ಬಾಹುಕಂಗೆ ಋತುಪರ್ಣ “ನಿಲ್ಸು” ಹೇಳಿ ಹೇಳಿದ್ದು ಕೇಳಿರ 🙁
      ೪. ಹಿಂದೆ ಹೋಪಲೆ ಗಾಡಿಗೆ ಲಿವರ್ಸು ಗೇರು ಇದ್ದಿರ 🙁
      ೫. ಹಾಂಗಿಪ್ಪ “ಗೆಣ” ಶಾಲು ಋತುಪರ್ಣನ ಹತ್ತರೆ ತುಂಬಾ ಇತ್ತಡ….. “ಹೋದರೆ ಹೋಗಲಿ” ಹೇಳಿ ಮತ್ತೆ ಎಸ್ಸಿಲೆಟರು ಒತ್ತುಲೆ ಹೇಳಿದ ಅಡ ಋತುಪರ್ಣ 🙂
      ೬. ದಮಯಂತಿಯ ಮರು ಸ್ವಯಂವರಕ್ಕೆ ಮೊದಲೇ ಲೇಟ್ ಆಗಿತ್ತು, ಇನ್ನು ಶಾಲು ಹುಡ್ಕಿಕೊಂಡು ಟೈಮ್ ವೇಸ್ಟ್ ಮಾಡುದು ಬೇಡ ಹೇಳಿ ಹಾಂಗೆ ಮುಂದೆ ಹೋದ್ದಾಯಿಕ್ಕು……
      ೭. ಲಾಸ್ಟ್ ಪಾಯಿಂಟ್ ಎಂತ ಹೇಳಿರೆ, ಋತುಪರ್ಣ & ಬಾಹುಕ ಇಬ್ಬರಿಂಗೂ ಬೋದಾಳನಷ್ಟು “ಮಂಡೆ” ಇದ್ದಿರ !!!!!!!!!!

  3. ಹಂತ ಹಂತ ವಾದ ಪಯಣದ ಶುದ್ದಿ ತುಂಬಾ ಲಾಯಿಕಕೆ ಮೂಡಿ ಬಯಿಂದು.
    ನೆನಪುಗಳ ಮೆಲುಕು ಹಾಕುವದು ಮಧುರ ಅನುನಭವ ಕೊಡ್ತು.
    ತುಂಬಾ ಕೊಶಿ ಕೊಡ್ತು ಕೆಲವು ಸಾಲುಗೊಃ
    [ಮನುಷ್ಯನ ಮೆದುಳು ಯಾವ ಕಂಪ್ಯೂಟರ್ಗೂ ಕಮ್ಮಿ ಇಲ್ಲ…] [ಬದುಕಿನ ಓಟ ಎಷ್ಟು ವೇಗವಾಗಿ ಆಗ್ತೆ ಹೇಳಿರೆ ಅದ್ರ ಎದುರು ಒಲಿಂಪಿಕ್ಸ್ ಲಿ ಚಿನ್ನ ಗೆದ್ದ ಓಟಗಾರನೂ ಸೋಲುವೇಕು] [“ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ನಾವು ಕಳ್ಕೊಂಡಿದ್ದೇವೆ, ಅದು ಮತ್ತೆ ಬೇಕು” ಹೇಳಿ ನವುಗೆ ಅನ್ಸುವ ಹೊತ್ತಿಗೆ ನಾವು ತುಂಬಾ ದೂರ ಹೋಗಿ ಆಗಿರ್ತೆ]

  4. ಋತುಪರ್ಣನ ಶಾಲಿನ ಹಾಂಗಿಪ್ಪ ಕಾಲ, ಒಳ್ಳೆ ಕಲ್ಪನೆ. ಮಾಣಿಯ ಪಯಣ, ಅವನ ಜೀವನದ ಹಲವು ಘಟ್ಟಂಗಳ ತೋರುಸಿಕೊಟ್ಟತ್ತು. ಹಿಂದಾಣ ಸುಂದರ ನೆಂಪುಗಳ ಅಂಬಗಂಬಗ ಅಗಿವಲೆ ನಿಜವಾಗಿಯೂ ಒಳ್ಳೆದಾವುತ್ತು. ಶುದ್ದಿಯ ಕಡೆಂಗೆ, ಇಡೀ ಪಯಣವ ಒಂದೇ ವಾಕ್ಯಲ್ಲಿ ಕೊಟ್ಟದು ಲಾಯಕಾತು.

  5. ಒಳ್ಳೆದಾಯಿದು… ನಿಂಗಳ ಅನುಭವ ಓದುಲೇ ಖುಷಿ ಆವುತ್ತು.

    “ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ನಾವು ಕಳ್ಕೊಂಡಿದ್ದೇವೆ, ಅದು ಮತ್ತೆ ಬೇಕು” ಹೇಳಿ ನವುಗೆ ಅನ್ಸುವ ಹೊತ್ತಿಗೆ ನಾವು ತುಂಬಾ ದೂರ ಹೋಗಿ ಆಗಿರ್ತೆ ಮತ್ತೆ ಅದ್ರ ಪಡ್ಕೊಳ್ಳುಕೆ ಸಾಧ್ಯವೇ ಇಲ್ಲದ್ದಷ್ಟು ದೂರ !!!!!

    ಇದನ್ನೇ ಇನ್ನೊಂದು ರೀತಿಲ್ಲಿ ಹೇಳುದಾದರೆ:
    “ಯಾವುದೋ ಒಂದು ವಸ್ತುವಿನ ಅಥವಾ ವ್ಯಕ್ತಿಯ ಅಥವಾ ಒಂದು ಒಳ್ಳೆಯ ಸನ್ನಿವೇಶವ ಬೇಕು ಹೇಳಿ ಕನಸು ಕಂಡರೆ” ಅದು ಸಿಕ್ಕುವ ಹೊತ್ತಿಗೆ ಅದು ನಮಗೆ ಬೇಡವಾಗಿರುತ್ತು… ಅಥವಾ ಅನುಭವಿಸುವ ಸ್ಥಿತಿಲಿ ನಾವು ಇರುತ್ತಿಲ್ಲೇ.

    ಅದ್ದರಿಂದ
    “ಸಂಪೂರ್ಣ ವರ್ತಮಾನಲ್ಲಿ ಬದುಕುವುದೇ ಸುಖ ಜೀವನದ ವಿಧಾನ.”

  6. ಪಯಣ 4- ಮಂಗಳೂರು ಸಿಟಿ ಬಸ್ ಪಯಣದ ಹಾಂಗೆ ಲಾಯಕ ಆಯ್ದು. ಹಲವು ಸ್ವಾರಸ್ಯಂಗೊ.

    […ಪ್ರತಿ ಲೇಖನದ ಮಧ್ಯೆಯೂ ತುಂಬಾ ದಿನದ ಅಂತರ…] … [ ನಾನು ಒಬ್ಬನೇ ಇಲ್ಲಿ ಇದ್ದೇನೆ 🙁 ] ಅಂತರಕ್ಕೆ ಕಾರಣವೂ ಅರ್ಥ ಆತು. :V

  7. ಎಂತ ಮಾರಾಯ ಇದು…??? ಲೇಖನಲ್ಲಿ ಇಡೀ ಉಂಡ್ಳಕಾಳೇ ಕಾಣ್ತು….??? ಎನಗೆ ಓದುಲೇ ಭಾರೀ ಕಷ್ಟ ಆವ್ತು ಹೀಂಗಾದರೆ (ಆಶೆಲಿ). ಬಾಯಿಲಿ ನೀರು ಅರಿವಲೆ ಸುರು ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×