Oppanna.com

“ಸಾರ್ಥಕ್ಯ ತಂದ ಸಂಸ್ಕಾರೋದಯ”

ಬರದೋರು :   ವಿಜಯತ್ತೆ    on   18/04/2015    4 ಒಪ್ಪಂಗೊ

ಮುಜುಂಗಾವು ವಿದ್ಯಾಪೀಠಲ್ಲಿ ಆದ ಬೇಸಗೆ ಶಿಬಿರ

ಉತ್ತಮ ಸಂಸ್ಕಾರ-ಸಂಸ್ಕೃತಿಯ ನಮ್ಮ ಹೆರಿಯೊವು ನವಗೆ ಬಿಟ್ಟುಹೋಯಿದೊವು. ಈ ಆಸ್ತಿಯ  ಪಾಲಿಸಿಗೊಂಡು ಬರೆಕಾದ್ದು ನಮ್ಮ ಹೊಣೆ. ಹಾಂಗೇ  ಮುಂದಿನ ತಲೆಮಾರಿಂಗೂ ಒಳಿಶಿ ಬೆಳೆಶೆಕ್ಕಾದ್ದು ನಮ್ಮ ಇಂದಿನವರ 011ಕರ್ತವ್ಯ. ಆದರೆ ನಮ್ಮಲ್ಲಿ ಎಂತಾಯಿದೂಳಿರೆ; ಈಗಾಣ ತಲೆಮಾರು ಸತ್ಸಂಸ್ಕೃತಿಯ ತಿಳುಕ್ಕೊಂಬವು ಕಮ್ಮಿ ಆಗಿ; ಗೊಂತಿದ್ದೊವುದೆ ಕಳಕ್ಕೊಂಬವೇ ಹೆಚ್ಚಾಯಿದವು!. ಇದಕ್ಕಾಗಿ ಅಲ್ಲಲ್ಲಿ ಮಕ್ಕಳ ಕೂಡ್ಸಿ ಸಂಪನ್ಮೂಲ ವ್ಯಕ್ತಿಗಳ ಕರೆಶಿ, ಶಿಬಿರ ಮಾಡ್ಸಿ,ಮಕ್ಕೊಗೆ ಬೋದ್ಸಿಕೊಡ್ಳೆ ಹೆರಟಿದೊವು ನಮ್ಮ ಹವ್ಯಕ ಮಾತೃಮಂಡಲದ ಮಾತೆಯರು. ಈ ರೀತಿಯ   ’ಸಂಸ್ಕಾರೋದಯ’ ಶಿಬಿರ ಇತ್ತೀಚಗೆ ಬದಿಯಡ್ಕ ವಿದ್ಯಾಪೀಠಲ್ಲಿ ಮತ್ತೆ ಮುಜುಂಗಾವು ವಿದ್ಯಾಪೀಠಲ್ಲಿಯೂ ಆತು. ಮಾತೃಮಂಡಲದ ಮಹಾಮಾತೆ, ಶ್ರೀಮತಿ ಈಶ್ವರಿ ಬೇರ್ಕಡವು ಈ ಕಾರ್ಯವ ಮುತುವರ್ಜಿಂದ ವಲಯದ ಅಧ್ಯಕ್ಷೆಯರಿಂಗೆ ಹೇಜೀಪು ಮಾಡ್ಸಿದೊವು. ಈ ನಿಮಿತ್ತಲ್ಲಿ ಕುಂಬಳೆ ವಲಯದ ಅಧ್ಯಕ್ಷೆ ಶ್ರೀಮತಿ ಪದ್ಮಾವತಿಯೂ ಗುಂಪೆ ವಲಯದ ಅಧ್ಯಕ್ಷೆ ಕಾವೇರಿಯಮ್ಮನೂ ಸೇರಿಗೊಂಡು ಮುಜುಂಗಾವು ವಿದ್ಯಾಪೀಠಲ್ಲಿ ಒಂದು ಸಂಸ್ಕಾರೋದಯ ಶಿಬಿರ ಕಾರ್ಯಕ್ರಮ ಎಲ್ಲೋರ ಸಕಾಯಲ್ಲಿ ಮೊನ್ನೆ ಎಪ್ರಿಲ್ 7,8,9,ಕ್ಕೆ ಮಡುಗಿಯೊಂಡವು. ಅದಕ್ಕೆ ಪೂರ್ವಭಾವಿಯಾಗಿ ಶಾಲೆಲಿ ಮೀಟಿಂಗೂ ಆತು. “ಹವ್ಯಕ ಮಕ್ಕೊಗಿದ್ದ ಶಿಬಿರ!. ಒಂದು…., ನಲುವತ್ತು  ಮಕ್ಕೊ ಆದರೂ ಕಾರ್ಯಕ್ರಮಕ್ಕೆ ಸೇರೆಕ್ಕಾತು.ರಜೆ ಅಲ್ಲೋ! ಮಕ್ಕೊ ಸೇರೆಕ್ಕನ್ನೆ”! ಹೇಳ್ತ ಚಳಿಲಿ ಪದ್ಮತ್ತಿಗೆ ಮಾತಾಡಿದ್ದಪ್ಪು!. ಒಬ್ಬೊಬ್ಬಂಗೆ ಒಂದೊಂದು ಕೆಲಸ ವಹಿಸೆಡದೊ! ನೋಂದಾವಣೆ ಮಾಡ್ತ ಕೆಲಸ ಎನ ಸಿಕ್ಕಿದ್ದಿದ. ಅದ! ಒಬ್ಬೊಬ್ಬನೇ ಸೇರಿ 78 ಮಕ್ಕೊ ಸೇರುವಗ ಸಂಶಯ ಮಾಯ ಆಗಿ ಎಲ್ಲೋರಿಂಗು ಕೊಶಿ ಆತಿದ!.  ಅಷ್ಟು ಮಾಂತ್ರ ಅಲ್ಲ! ಆ ಮಕ್ಕಳ ಹೆರಿಯೊವೂ ಸೇರಿ ಒಳ್ಳೆ ಅನುಪ್ಪತ್ಯದ ಮನೆಯ ಶೋಭೆಯೇ ಮುಜುಂಗಾವು ಶಾಲೆಲಿ ಮೂರುದಿನ!!

003ಶ್ರೀ ಗುರು ನಿರೂಪಿತದಂತೆ, ಧ್ವಜಾರೋಹಣ ಮಾಡಿ,ಶಂಖ ಊದಿ ಕಾರ್ಯಕ್ರಮ ಸುರುವಪ್ಪದಿದ!. ಉದಿಯಪ್ಪಗ 9-30ಕ್ಕೆ , ಕುಂಬಳೆ ವಲಯದ ವಿದ್ಯಾಪ್ರಧಾನರಾದ ಶ್ರೀಯುತ ಬಾಲಕೃಷ್ಣ ಶರ್ಮ ಸೇಡಿಗುಳಿಯೊವು ಧ್ವಜ ಏರ್ಸಿದೊವು!. ಆನು ಬಿಡುಬೀಸಾಗಿ ಉದ್ದಾಕೆ ಎರಡುಸರ್ತಿ ಸಂತೋಷಲ್ಲಿ ಶಂಖ ಉರುಗಿದೆ. ಮತ್ತೆ ಮಕ್ಕಳ ಸಹಿತ ಎಲ್ಲೋರು ದೀಪಸ್ತುತಿ, ಗುರುವಂದನೆ ಸ್ತುತಿ ಹಾಡಿ ಕಾರ್ಯಕ್ರಮ ಸುರುವಾತು. ಮುಜುಂಗಾವಿನ ನಾರಾಯಣ ಹೆಗಡೆ ಮಾಸ್ಟ್ರು, ಪ್ರಸ್ತಾವನೆ ಮಾಡಿ,ಶ್ರೀಗುರುಗಳ ದಿವ್ಯವೂ ಭವ್ಯವೂ ಆದ ಧ್ಯೇಯೋದ್ಧೇಶಂಗಳ,ನಮ್ಮ ಸಂಸ್ಕಾರಂಗಳ ಬಗ್ಗೆ ಒಂದಷ್ಟು ಹೇಳಿದೊವಿದ.

ಬಳ್ಳಮೂಲೆ ಗೋವಿಂದ ಮಾಸ್ಟ್ರು ಸಂಸ್ಕಾರದ ಬಗ್ಗೆ ಉದಾಹರಣೆ ಕೊಡುತ್ತಾ ಗುರು-ಹಿರಿಯರ “ಪಾದ ಮುಟ್ಟಿ ನಮಸ್ಕರಿಸಿದಲ್ಲಿ ಅವರಲ್ಲಿಪ್ಪ ಸದ್ವಿಚಾರ, ಸದ್ಗುಣಂಗೊ ನವಗೆ ಹರಿದು ಬತ್ತು. ವಿನಯವೇ ವಿದ್ಯೆಗಿಪ್ಪ ಆಭರಣ. ನಮ್ಮಂದಾಗಿ ಬಾಕಿ ಎಲ್ಲೋರೂ ಒಳ್ಳೆಯವರಪ್ಪಲೆ ಆಸ್ಪದ ಕೊಡುವೊಂ”. ಹೇಳಿ ಕೆಲಾವು ಆಚರಿಸುವ ಕ್ರಮಲ್ಲಿಪ್ಪ ತಿರುಳಿನ ತಿಳಿಶಿದೊವಲ್ಲದ್ದೆ ಮಕ್ಕೊಗೆ ಪ್ರಾಣಾಯಾಮ, ಧ್ಯಾನ ಮಾಡುವ ರೀತಿ ಹೇಳಿಕೊಟ್ಟೊವು.

ಮಾತೃ ಪ್ರಧಾನ  ಶ್ರೀಮತಿ ಈಶ್ವರಿ ಬೇರ್ಕಡವು ಮಕ್ಕಳತ್ರೆ “ನಿಂಗೊಲ್ಲೋರೂ ಇಲ್ಲಿ ಕಲ್ತ ಸ್ತೋತ್ರ ಪಾರಾಯಣ, ನಿಯಮ-ನಿಷ್ಠೆಗಳ ಪಾಲಿಸಿಗೊಂಡು;  ಒಪ್ಪಣ್ಣ,ಒಪ್ಪಕ್ಕಂದಿರಾಗಿ. ಮುಂದೆ ನಿಂಗಳೂ ಸಂಪನ್ಮೂಲ ವ್ಯಕ್ತಿಗೊ ಆಯೆಕ್ಕು. 001ನಮ್ಮತನವ ಕಾಪಾಡಿ ಬೆಳೆಶೆಕ್ಕು”. ಹೇಳ್ತ ಎಚ್ಚರಿಕೆ ಮಾತು ಮದಾಲು ಕೊಟ್ಟೊವು.

ಉದ್ಘಾಟಕರಾದ ಬಾಲಕೃಷ್ಣ ಶರ್ಮ  ಕುಂಕುಮ, ಗಂಧ, ವಿಭೂತಿ ಲೇಪನದ ಉದ್ದೇಶ,ಕುಂಕುಮ ಹಾಕುವ ಜಾಗೆ ’ಭ್ರುಕುಟಿ’ ಯ ಮಹತ್ವ ತಿಳಿಶಿದೊವು. ಕಾರ್ಯಕ್ರಮಕ್ಕೆ ಕು|ಅನನ್ಯ ಪೆರಡಾನ ಸ್ವಾಗತ ಮಾಡಿ ಕು|ಅನನ್ಯ ಮರುವಳ ಧನ್ಯವಾದ ಮಾಡಿತ್ತು. ನಮ್ಮ ಮಾಲಕ್ಕ ನಿರೂಪಣೆ ಮಾಡಿದೊವು.

ಮೂರು ದಿನಕ್ಕೂ ಒಟ್ಟಿಂಗೆ ಸಂಪನ್ಮೂಲರಾಗಿ ಸಹಕರಿಸಿದೊವು ವೇ|ಮೂ| ಕೇಶವಪ್ರಸಾದ ಕೂಟೆಲು, ಶ್ರೀಯುತರುಗಳಾದ ಬಳ್ಳಮೂಲೆ ಗೋವಿಂದಣ್ಣ, ಗುರುಮೂರ್ತಿನಾಯ್ಕಾಪು, ಪರಮೇಶ್ವರ ಹೆಬ್ಬಾರ ಸೀತಂಗೋಳಿ, ಶಂಕರಪ್ರಸಾದ ಕುಂಚಿನಡ್ಕ, ಶ್ರೀಮತಿಯರಾದ ವಿಜಯಲಕ್ಷ್ಮೀ ಬೆದ್ರೆಡಿಕಲ್ಲಕಟ್ಟ, ಅನಿತಾ ಉದಯನಾರಾಯಣ ಎಡನಾಡು, ಲಕ್ಷ್ಮಿ ವಿ.ಭಟ್ ಸೂರಂಬೈಲು, ಪ್ರೇಮಲತಾ ಮನ್ನಿಪ್ಪಾಡಿ, ವಿಜಯತ್ತೆ, ಹೀಂಗೆಲ್ಲರೂ ಇದ್ದಿದ್ದೆಯೊಂ.

ಮತ್ತೂ ಎರಡು ಜೆನ ಸೇರಿ, 80 ಜೆನ ಶಿಬಿರಾರ್ಥಿಗೊ ಭಾಗವಹಿಸಿದ್ದ ಈ ಶಿಬಿರ 9.4.2015 ರಂದು ಸಮಾರೋಪಗೊಂಡತ್ತು. ಸಮಾರೋಪ ಸಭಾವೇದಿಕೆಲಿ ಮಹಾ ಮಂಡಲ ಮಾತೃಪ್ರಧಾನರಾದ ಈಶ್ವರಿಯಕ್ಕ ಬೇರ್ಕಡವು, ಶ್ರೀಮತಿ ದೇವಕಿ ಭಟ್ ಪನ್ನೆ, ಪದ್ಮಾವತಿ ಡಿ.ಪಿ.ಭಟ್, ಕಾವೇರಿಯಮ್ಮ, ಶ್ರೀಯುತ ಅಮ್ಮಂಕಲ್ಲು ರಾಮಭಟ್, ಶ್ರೀಸತ್ಯಶಂಕರ ಭಟ್ ಹಿಳ್ಳೆಮನೆ, ಕೇಶವಪ್ರಸಾದ ಎಡೆಕ್ಕಾನ, ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆ ಮಾರ್ಗ, ವಿದ್ಯಾಪೀಠದ ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ, ಉಪಸ್ಥಿತರಿದ್ದಿದ್ದೊವು. ಅಕೇರಿಗೆ ರಸಪ್ರಶ್ನೆಲಿ ಗೆದ್ದವಕ್ಕೆ ನಗದು ಬಹುಮಾನವ ಕುಂಬಳೆಯ ಡಾ|| ಡಿ.ಪಿ.ಭಟ್  ಉದಾರವಾಗಿ ಪ್ರದಾನ ಮಾಡಿದೊವು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗೊಕ್ಕೆ; ಶ್ರೀಮಠಂದ ನೆನಪಿನ ಕಾಣಿಕೆಯಾಗಿ ಪುಟ್ಟ ದೀಪ ಹಾಂಗೂ ಶ್ರೀಗುರುಗಳ ಭಾವಚಿತ್ರವನ್ನೂ ಕೊಟ್ಟಪ್ಪಗ; ದೀಪ ಹಿಡುಕ್ಕೊಂಡು ಮಕ್ಕೊ ಸಾಲಾಗಿ ನಿಂದ ಮಕ್ಕಳ ಮಂದಹಾಸದೊಟ್ಟಿಂಗೆ; ಶಿಬಿರ ಸಂಪನ್ನಗೊಂಡತ್ತು.

4 thoughts on ““ಸಾರ್ಥಕ್ಯ ತಂದ ಸಂಸ್ಕಾರೋದಯ”

  1. ಹರೇ ರಾಮ . ವರ್ತಮಾನ ಓದಿ ಕೊಶಿ ಆತು. ಮುಂದೆಯೂ ಹೀಂಗಿರ್ತ ಕಾರ್ಯಕ್ರಮ ನಡಕ್ಕೊಂಡು ಬರಳಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×