ಸೂಕರ…..

December 21, 2011 ರ 11:32 pmಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗಾಣ ಕಾಲಲ್ಲಿ ಯಾರಿಂಗೂ ಕೃಷಿ ಬೇಡ ಹೇಳಿ ಆಯಿದು. ಕೆಲಸಕ್ಕೆ ಜೆನ ಸಿಕ್ಕುತ್ತಿಲ್ಲೆ, ನವಗೆ ಮಾಡಿಗೊಂಬಲೆ ಎಡಿತ್ತಿಲ್ಲೆ. ಎಂತ ಮಾಡುದು…? ಎಂಗೊಗೆ ಜಾಗೆ ಇದ್ದು, ನೀರಿಂಗೆ ತೊಂದರೆ ಇಲ್ಲೆ. ಆದರೆ ಕೆಲಸಕ್ಕೆ ಜೆನ ಸಿಕ್ಕುತ್ತೇ ಇಲ್ಲೆ. ಅಜ್ಜಿಗೆ 90 ವರ್ಷ ಆತು. ಅವರ ಚಾಕಿರಿ ಆಯೆಕ್ಕು. ಅತ್ತೆ ಹೆಚ್ಚಾಗಿ ಅಜ್ಜಿಯ ಒಟ್ಟಿಂಗೆ ಇರ್ತವು. ಮಾವಂದೆ ಎನ್ನ ಯಜಮಾನ್ರುದೆ ಮನೆಲಿ ಇಪ್ಪದೇ ಕಡಮ್ಮೆ. (ಹೆಚ್ಚಾಗಿ ಹೋಪಲೆಇರ್ತು.)ಸಣ್ಣ ಮಾವನೋರು ಒಳ್ಳೆ ಬರಹಗಾರರು. ಆದರೆ ಬರವಲೆ ಸಮಯ ಸಿಕ್ಕುತ್ತಿಲ್ಲೆ. ಮನೆಗೆ ಜೆನ ಬಂದುಗೊಂಡು ಇರ್ತವು. ಅವರ ಮಾತಾಡ್ಸಿ ಕಳುಸೆಕ್ಕನ್ನೆ…ಮತ್ತೆ ಸಮಯ ಇಪ್ಪಗ ಮಾವಂಗೆ ಬೇಕಾದ ತಯಾರಿ ಮಾಡೆಕ್ಕಾವುತ್ತು. ಸಣ್ಣ ಅತ್ತೆ ಅಡಿಗೆಯ ಜವಾಬ್ದಾರಿ ತೆಕ್ಕೊಳ್ತವು . ಹೊಲಿಗೆ ಗೊಂತಿದ್ದ ಕಾರಣ ಒಟ್ಟಿಂಗೆ ಹೊಲಿವಲೆ ಇರ್ತು. ಆನು ಒಳುದ ಜವಾಬ್ದಾರಿ ತೆಕ್ಕೊಂಬದು ಮಗನ ಶಾಲೆಗೆ ಬಿಡೆಕ್ಕು (ಎಂಗಳ ವಾಹನಲ್ಲಿ ಬಿಡೆಕ್ಕು. ಬೇರೆ ವಾಹನ ವ್ಯವಸ್ಥೆ ಇಲ್ಲೆ), ಸಾಮಾನು ತಪ್ಪದು, ಆನು ಡೇನ್ಸು ಕ್ಲಾಸ್ಸ್ ಮಾಡ್ತೆ ಅದೂ ಇದ್ದು.ಎಂತ ಮಾಡ್ಲೂ ಸಮಯ ಸಿಕ್ಕುತ್ತಿಲ್ಲೆ. ಸಮಯ ಸಿಕ್ಕುತ್ತಿಲ್ಲೆ ಹೇಳ್ಲೆ ಸಮಯ ಅಂಗಡಿಲಿ ಸಿಕ್ಕುವ ವಸ್ತುವಾ…? ಮಹಾತ್ಮ ಗಾಂಧೀಜಿ ಬಿಡುವಿಲ್ಲದ್ದ ಕೆಲಸ ಇದ್ದರೂ ದಿನಕ್ಕೆ ಅರ್ಧ ಗಂಟೆ ಚರಕಲ್ಲಿ ನೂಲು ತೆಗವ ಕೆಲಸ ಮಾಡಿಗೊಂಡಿತ್ತಿದ್ದವಡ….. ! ಹಾಂಗಿಪ್ಪಗ ಯಾವ ವಿಷಯಕ್ಕೂ ನಾವು ಸಮಯ ಇಲ್ಲೆ ಹೇಳುವ ಮಾತಿನ ಬಳಸುಲೆ ಆಗ.

ಎನಗೆ ಕೃಷಿಲಿ ಆಸಕ್ತಿ ಇದ್ದು, ಆದರೆ ಮಾಡಿ ಗೊಂತಿಲ್ಲೆ. ಮಾವ ಸಲಹೆ ತೆಕ್ಕೊಂಡು ಆನು ಕೃಷಿ ಮಾಡೆಕ್ಕು ಹೇಳಿ ಹೆರಟೆ. ಎನ್ನ ಉತ್ಸಾಹಕ್ಕೆ ಆರೂ ತಣ್ಣೀರೆರಚದ್ದೆ ಎಲ್ಲರು ಒಪ್ಪಿಗೆ ಕೊಟ್ಟವು. ಹಾಂಗೆ ಮನೆ ಹಿಂದಾಣ ತಟ್ಟಿಲಿ ಬಾಳೆ ಸೆಸಿ ನೆಡುಸುದು ಹೇಳಿ ಆತು. ಅಲ್ಲಿ ಹುಲ್ಲು,ಮುಳ್ಳು ತುಂಬಿ ಹೋಪಲೆ ಎಡಿಯ.ಕಾಡು ಕಡಿವಲೆ ಜೆನ ಬೇಕನ್ನೆ .ಎನಗೆ ಕತ್ತಿ ಹಿಡುದು ಗೊಂತೇ ಇಲ್ಲೆ. ಕೊನೆಗೆ ಆರಿಂಗೆಲ್ಲ ದಮ್ಮಯ್ಯ ಹಾಕಿ 4 ಜೆನ ಕೆಲಸದ ಹುಡುಗರ ಬಪ್ಪಲೆ ಮಾಡಿ ಆತು.ಕಾಡು ಕಡಿಸಿ ಆತು. ಬಾಳೆ ಹೊಂಡವೂ ರೆಡಿ ಆತು. ಅಷ್ಟಪ್ಪಗ ಆರೋ ಹೇಳಿದವು ಪಂಚಾಯತಿಂದ ಹೀಂಗೆ ಕೃಷಿ ಮಾಡ್ತವಕ್ಕೆ ಸುಮಾರು ಸವಲತ್ತುಗ ಕೊಡ್ತವು, ಪೈಸೆ ಕೊಡ್ತವು, ಗೊಬ್ಬರ ಕೊಡ್ತವು ಹೇಳಿ . ಧರ್ಮಕ್ಕೆ ಕೊಡುದರ ಬಿಡುದೆಂತಕೆ ಹೇಳಿ ಆನು ಅರ್ಜಿ ಹಾಕಿದೆ.ಅವು ನೆಟ್ಟ ಮೇಲೆ ನೋಡ್ಳೆ ಬತ್ತೆಯ ಮತ್ತೆ ಎಲ್ಲ ಕೊಡುದು ಹೇಳಿದವು. ಅವು ಇಂದು ಬಕ್ಕು ನಾಳೆ ಬಕ್ಕು ಹೇಳಿ ಕಾದಲ್ಲೇ ಬಾಕಿ…! ಎಲ್ಲಿದ್ದವು….? ಪೈಸೆಯೂ ಇಲ್ಲೆ ಗೊಬ್ಬರವೂ ಇಲ್ಲೆ!ಅವು ಕೊಡ್ತವು ಹೇಳಿ ಆನು ಕೃಷಿ ಮಾಡ್ಳೆ ಹೆರಟದೂ ಅಲ್ಲ. ಆನು ಬಾಳೆ ಗಿಡ ನೆಡ್ಸಿದೆ. ಈ ವರ್ಷ ಮಳೆ ಹೆಚ್ಚಾದ ಕರಣ ಸೆಸಿ ನೆಡ್ಸಿ ಒಂದು ತಿಂಗಳಪ್ಪಗ ಕಾಡು ತಿರುಗಿ ತುಂಬಿತ್ತದಾ…..! ಇನ್ನೊಂದರಿ ಕೆಲಸದವಕ್ಕೆ ದಮ್ಮಯ್ಯ ಹಾಕಿ ಬಪ್ಪಲೆ ಮಾಡಿ ಒತ್ತರೆ ಮಾಡ್ಸಿದೆ.ಅದಕ್ಕೆ ಬೇಕು ಬೇಕಾದ ಹಾಂಗೆ ನೀರು,ಗೊಬ್ಬರ ,ಬೂದಿ ಹಾಕಿಗೊಂಡು ಇತ್ತಿದ್ದೆ.ಮಕ್ಕಳ ಸಾಂಕುವ ಹಾಂಗೆ ಸಾಂಕಿದೆ. ಕಣ್ಣಿಂಗೆ ಹಬ್ಬವೋ ಹೇಳ್ತ ಹಾಂಗೆ ಬಾಳೆ ಬೆಳವಲೆ ಸುರು ಆತಿದ. ಆರ ಕಣ್ಣು ತಾಗಿತ್ತೋ ಹೇಳ್ತ ಹಾಂಗಿಪ್ಪ ಸಂಗತಿ ನಡದತ್ತು…………

ಉದಿಯಪ್ಪಗ ಎದ್ದು ಒಂದರಿ ಬಾಳೆ ತೋಟವ ನೋಡುದು ಎನ್ನ ಅಭ್ಯಾಸ. ಆ ದಿನ ನೋಡುಗ ಒಂದು ಬಾಳೆ ಸೆಸಿ ಚಿಂದಿ ಚಿಂದಿ ಆಗಿಗೊಂಡು ಇದ್ದು. ಬೇಜಾರು ಆತು. ಅದು ಹಂದಿ ಬಂದು ಹಾಂಗೆ ಮಾಡಿದ್ದು ಹೇಳಿ ಮಾವ ಹೇಳಿದವು. ಆ ಜಾಗೆಲಿ ಬೇರೆ ಸೆಸಿ ತಂದು ನೆಟ್ಟೆ. ಹಂದಿ ಬಪ್ಪದಕ್ಕೆ ಬೇಕಾಗಿ ತೋಟಲ್ಲಿ ಅಲ್ಲಲ್ಲಿ ಕೆಲವು ಕೋಲು ಊರಿ ಅದಕ್ಕೆ ಬೆಳಿ ಬೆಳಿ ಸಿಮೆಂಟು ಗೋಣಿಯ ನೇಲ್ಸಿದೆ.ಇರುಳು ಆರೋ ಜನಂಗ ಇದ್ದವು ಹೇಳುವ ಭ್ರಮೆಲಿ ಹಂದಿಗ ಬಾರವು ಹೇಳಿ ಮಾವ ಹೇಳಿದವು. ಅದರ ನೋಡಿ ಮರದಿನಂದ ಹಂದಿ ಬಯಿಂದಿಲ್ಲೆ. 2-3 ದಿನ ಕಳುದಪ್ಪಗ ಅದಕ್ಕೆ ಆನು ಮಾಡಿದ ಮೋಸ ಗೊಂತಾತು! ಆ ದಿನ ಇನ್ನೆರಡು ಸೆಸಿ ಲಗಾಡಿ……ಎಂತ ಮಾಡುದು ಹೇಳಿ ಚಿಂತೆ ಶುರು ಆತು.

ಎಂಗಳ ಜಾಗೆಯ ಸುತ್ತು ಪ್ಲಾಂಟೆಷನ್ನಿನವರ ಬೀಜದ ಕಾಡು ಇತ್ತು.ಅಲ್ಲೆಲ್ಲ ಈಗ ರಬ್ಬರ್ ಹಾಕ್ಸಿದ್ದವು. ಹಾಂಗಾಗಿ ಅಲ್ಲಿ ಕಾಡು ಕಡಿದು ಹಂದಿಗೊಕ್ಕೆ ಜಾಗೆ ಇಲ್ಲದ್ದ ಹಾಂಗೆ ಆಯಿದು.ಆಗ ಕಾಂಬದು ನಮ್ಮ ಜಾಗೆ ಅದ…!

ಮೊದಲೆಲ್ಲ ಇಲ್ಲಿ ಸುತ್ತಮುತ್ತ ಹಂದಿ ಬೇಟೆ ಆಡಿಗೊಂಡಿತ್ತಿದ್ದವಡ . ಈಗ ಹಂದಿ ಕೊಲ್ಲುಲಾಗ ಹೇಳಿ ಕಾನೂನು ತಂದವು…!ಹಂದಿಯ ಉಪದ್ರಕ್ಕೆ ಎಂತ ಮಾಡುದು ಕೇಳಿರೆ ಅವರ ಹತ್ತರೆ ಉತ್ತರ ಇಲ್ಲೆ. ಅಂದೆಲ್ಲ ಕೋವಿ ತಂದು ಇರುಳು ಕಾದು ಕೂದು ಗುಂಡು ಹಾಕಿ ಕೊಲ್ಲುತಿತ್ತವಡ . ಎಂಗಳ ಗುರಿಕ್ಕರರಾಗಿದ್ದ ಪಯದ ಪದ್ಮನಾಭ ಭಟ್ರು ಒಂದು ಕಥೆ ಹೇಳುಗು.ಇದು ಲೊಟ್ಟೆ ಕಥೆ ಅಲ್ಲ ನಿಜವಾಗಿ ನಡದ್ದು….!ಅವು ಒಂದರಿ ಎಲ್ಲಿಗೋ ಹೋಗಿ ಬಪ್ಪಗ ಇರುಳಾತಡ. ಅವರ ಮನೆ ಹತ್ತರೆ ಗುಡ್ಡೆಲಿ ಬಂದುಗೊಂಡಿಪ್ಪಗ ಹಂದಿ ಹೇಳಿ ಗ್ರೇಶಿ ಅರೋ ಗುಂಡು ಹಾಕಿದವಡ . 3 ಗುಂಡು ಇವರ ಮೈ ಹೊಕ್ಕತ್ತಡ. ಅವು ಪ್ರಾಣ ಮರ್ಕಲ್ಲಿ ಓಡಿಗೊಂಡು ಮನೆಗೆ ಎತ್ತಿದವಡ. ಮನೆಯವ್ವು ಕೂಡ್ಲೆ ಡಾಕುಟ್ರ ಹತ್ತರೆ ಕರಕ್ಕೊಂಡು ಹೋಗಿ ಮದ್ದು ಮಾಡ್ಸಿದವಡ .ಗುಣ ಆತು. ಆದರೂ ಒಂದು ಗುಂಡು ತೆಗವಲೆ ಎಡಿಯದ್ದೆ ಶರೀರಲ್ಲಿ ಬಾಕಿ ಆಯಿದಡ! ಹಾಂಗಾಗಿ ಎಂಗ ಅವರ ಗುಂಡು ಪಾರ್ಟಿ ಹೇಳಿ ತಮಾಷೆ ಮಾಡ್ಲೆ ಇದ್ದು….

ಹಂದಿ ಉಪದ್ರಕ್ಕೆ ಎಂತ ಮಾಡುದು ಹೇಳಿ ಆನು ಬೇಜಾರಿಲಿ ಇಪ್ಪಗ ಮಗ ಒಂದು ಉಪಾಯ ಮಾಡಿದ. ಅಪ್ಪನ ಹಳೆ ಶರ್ಟ್ ತಂದು ಅದರ ಒಂದು ಕೋಲಿಂಗೆ ಸಿಕ್ಕಿಸಿ ಒಂದು ಮನುಷ್ಯನ ಆಕೃತಿ ತಯಾರಿ ಮಾಡಿದ. ಅವನ ಅತ್ತೆ ಇಂಗ್ಲೆಂಡಿಂದ ತಂದ ಸೊಲಾರ್ ಲೇಂಪಿನ ಆ ಅಂಗಿಯ ಮೇಲೆ ತಲೆ ಇಪ್ಪ ಜಾಗೆಗೆ ಸಿಕ್ಕಿಸಿದ. ಅತ್ತೆ ತಂದದು ಉಪಯೋಗಕ್ಕೆ ಬಂತು. ಅದರ ನೋಡಿ ೧೫ ದಿನ ಹಂದಿ ಬಯಿಂದಿಲ್ಲೆ. ಎಂಗೊಗೆ ಸಮಾಧಾನ ಆತು.

ಆದರೆ ಮೊನ್ನೆ ಉದಿಯಪ್ಪಗ ಎದ್ದು ನೋಡ್ತೆ ಯುದ್ಧಲ್ಲಿ ಸತ್ತು ಬಿದ್ದ ಸೈನಿಕರ ಹಾಂಗೆ ಬಾಳೆ ಗಿಡಂಗ ಅಡ್ಡ ಬಿದ್ದುಗೊಂಡು ಇದ್ದು. ಎಂತ ಮಾಡಲಿ……?

ಹಿಂದೆ ಮಹಾ ವಿಷ್ಣು ಹಿರಣ್ಯಾಕ್ಷ ಹೇಳ್ತ ರಾಕ್ಷಸನ ಕೊಲ್ಲುಲೆ ಸೂಕರನ ರೂಪಲ್ಲಿ ಬಯಿಂದನಡ .ಸೂಕರ ಹೇಳಿರೆ ಹಂದಿ. ಅವನ ವರಾಹ ಅವತಾರ ಹೇಳಿ ಕೊಂಡಾಡ್ತು. ಆದರೆ ಇಂದು ಯಾವುದೋ ರಾಕ್ಷಸ ಹಂದಿಯಾಗಿ ಬಂದು ಬೆಳದು ನಿಂದ ಎಂಗಳ ಬಾಳೆಯ ಸರ್ವನಾಶ ಮಾಡಿತ್ತು!

ಸೆಸಿಯ ಸುತ್ತು ಚೂರಿ ಮುಳ್ಳು ಮಡುಗಿದರೆ ಹಂದಿ ಬಾಯಿ ಹಾಕುತ್ತಿಲ್ಲೆ ಹೇಳಿ ಆರೋ ಹೇಳಿದವು. ಇನ್ನು ಕೆಲಸದ ಹುಡುಗರ ಬಪ್ಪಲೆ ಮಾಡಿ ಮುಳ್ಳು ಮಡುಗುಸೆಕ್ಕು. ಬಾಳೆ ತೋಟಕ್ಕೆ ಕರೆಂಟು ವಯರು ಹಾಕಿ 2- 3 ಬಲ್ಬು ಹಾಕಿ ಇರುಳಿಡೀ ಹೊತ್ಸಿದರೆ ಹಂದಿ ಬಾರ ಹೇಳಿ ಆರೋ ಹೇಳಿದವು. ಆ ಪ್ರಯತ್ನವೂ ಮಾಡ್ತೆ. ಬೆನ್ನು ಬಿಡದ ಬೇತಾಳನ ಹಾಂಗೆ ಹಂದಿ ಎನ್ನ ಬೆನ್ನು ಬಿದ್ದಿದು! ಛಲ ಬಿಡದ ವಿಕ್ರಮಾದಿತ್ಯನ ಹಾಂಗೆ ಅದು ಹಾಳು ಮಾಡಿದ ಸೆಸಿಗಳ ಜಾಗೆಲಿ ಹೊಸ ಸೆಸಿ ನೆಟ್ಟು ಅದು ಬಾರದ್ದ ಹಾಂಗೆ ಅಪ್ಪಲೆ ಹೊಸ ಹೊಸ ಉಪಾಯ ಕಂಡು ಹಿಡಿತ್ತಾ ಇದ್ದೆ…….

ಆರಿಂಗಾದರೂ ಎಂತಾದರೂ ಒಳ್ಳೆ ಉಪಾಯ ಗೊಂತಿದ್ದರೆ ತಿಳಿಸಿ……

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅನುಪಮಕ್ಕ,
  ನಿಂಗಳ ಈ ಶುದ್ದಿಲಿ ಒಂದು ಉಪಕಾರ ಆತಿದಾ.. ಕೃಷಿಯ ಅನುಭವ ಇಪ್ಪ ಅಡ್ಕತ್ತಿಮಾರು ಮಾವನ ಅನುಭವಂಗಳ ಈ ಲೆಕ್ಕಲ್ಲಿ ನವಗೆ ತಿಳ್ಕೊಂಬ ಹಾಂಗೆ ಆತು.
  ಇಬ್ರಿಂಗೂ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಜಯಶ್ರೀ ನೀರಮೂಲೆ
  jayashree.neeramoole

  ಅನುಪಮಕ್ಕ… “ಛಲ ಬಿಡದ ವಿಕ್ರಮಾದಿತ್ಯನ ಹಾಂಗೆ …” ನಿಂಗಳ ಛಲ ನಿಜವಾಗಿಯೂ ಮೆಚ್ಹೆಕ್ಕಾದೆ… ನಿಂಗಳ ಛಲ ಸಾರ್ಥಕ ಆಗಿ ನಿಂಗೊಗೆ ಕೃಷಿಲಿ ಅದ್ಭುತ ಯಶಸ್ಸು ದೊರಕಲಿ ಹೇಳಿ ಸಾವಿರ ಸಾವಿರ ಒಪ್ಪಂಗೋ… ಶುಭ ಹಾರೈಕೆಗ…

  [Reply]

  VA:F [1.9.22_1171]
  Rating: 0 (from 0 votes)
 3. ಅನು ಉಡುಪುಮೂಲೆ

  ಜಯಶ್ರೀಅಕ್ಕ ಧನ್ಯವಾದಗಳು….

  ಚೆನ್ನ ಬೆಟ್ಟಣ್ಣ ಎಂಗಳಲ್ಲಿ ಮಂಗನ ಉಪದ್ರ ಇಲ್ಲೆ. ನಿಂಗೊಗೆ ಕಥೆ ಬೇಕಾದರೆ ಬರವ ಎನೂ ತೊಂದರೆ ಇಲ್ಲೆ. ಆದರೆ ನಿಂಗಳ ಬಾಯಿ ಹರಕೆಯ ಹಾಂಗೆ ಮಂಗಂಗ ಬಪ್ಪದು ಬೇಡ….

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ಡಾಮಹೇಶಣ್ಣಅನು ಉಡುಪುಮೂಲೆಕಾವಿನಮೂಲೆ ಮಾಣಿಪುತ್ತೂರುಬಾವರಾಜಣ್ಣನೆಗೆಗಾರ°ಅನುಶ್ರೀ ಬಂಡಾಡಿಕಳಾಯಿ ಗೀತತ್ತೆಡೈಮಂಡು ಭಾವಸುಭಗದೇವಸ್ಯ ಮಾಣಿಮುಳಿಯ ಭಾವಕಜೆವಸಂತ°ಎರುಂಬು ಅಪ್ಪಚ್ಚಿಪಟಿಕಲ್ಲಪ್ಪಚ್ಚಿದೊಡ್ಡಮಾವ°ಪವನಜಮಾವಬಟ್ಟಮಾವ°ಶ್ರೀಅಕ್ಕ°ವಿದ್ವಾನಣ್ಣಕೇಜಿಮಾವ°ಕೊಳಚ್ಚಿಪ್ಪು ಬಾವನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ