ಬರದೋರು :   ಅನು ಉಡುಪುಮೂಲೆ    on   21/12/2011    33 ಒಪ್ಪಂಗೊ

ಅನು ಉಡುಪುಮೂಲೆ

ಈಗಾಣ ಕಾಲಲ್ಲಿ ಯಾರಿಂಗೂ ಕೃಷಿ ಬೇಡ ಹೇಳಿ ಆಯಿದು. ಕೆಲಸಕ್ಕೆ ಜೆನ ಸಿಕ್ಕುತ್ತಿಲ್ಲೆ, ನವಗೆ ಮಾಡಿಗೊಂಬಲೆ ಎಡಿತ್ತಿಲ್ಲೆ. ಎಂತ ಮಾಡುದು…? ಎಂಗೊಗೆ ಜಾಗೆ ಇದ್ದು, ನೀರಿಂಗೆ ತೊಂದರೆ ಇಲ್ಲೆ. ಆದರೆ ಕೆಲಸಕ್ಕೆ ಜೆನ ಸಿಕ್ಕುತ್ತೇ ಇಲ್ಲೆ. ಅಜ್ಜಿಗೆ 90 ವರ್ಷ ಆತು. ಅವರ ಚಾಕಿರಿ ಆಯೆಕ್ಕು. ಅತ್ತೆ ಹೆಚ್ಚಾಗಿ ಅಜ್ಜಿಯ ಒಟ್ಟಿಂಗೆ ಇರ್ತವು. ಮಾವಂದೆ ಎನ್ನ ಯಜಮಾನ್ರುದೆ ಮನೆಲಿ ಇಪ್ಪದೇ ಕಡಮ್ಮೆ. (ಹೆಚ್ಚಾಗಿ ಹೋಪಲೆಇರ್ತು.)ಸಣ್ಣ ಮಾವನೋರು ಒಳ್ಳೆ ಬರಹಗಾರರು. ಆದರೆ ಬರವಲೆ ಸಮಯ ಸಿಕ್ಕುತ್ತಿಲ್ಲೆ. ಮನೆಗೆ ಜೆನ ಬಂದುಗೊಂಡು ಇರ್ತವು. ಅವರ ಮಾತಾಡ್ಸಿ ಕಳುಸೆಕ್ಕನ್ನೆ…ಮತ್ತೆ ಸಮಯ ಇಪ್ಪಗ ಮಾವಂಗೆ ಬೇಕಾದ ತಯಾರಿ ಮಾಡೆಕ್ಕಾವುತ್ತು. ಸಣ್ಣ ಅತ್ತೆ ಅಡಿಗೆಯ ಜವಾಬ್ದಾರಿ ತೆಕ್ಕೊಳ್ತವು . ಹೊಲಿಗೆ ಗೊಂತಿದ್ದ ಕಾರಣ ಒಟ್ಟಿಂಗೆ ಹೊಲಿವಲೆ ಇರ್ತು. ಆನು ಒಳುದ ಜವಾಬ್ದಾರಿ ತೆಕ್ಕೊಂಬದು ಮಗನ ಶಾಲೆಗೆ ಬಿಡೆಕ್ಕು (ಎಂಗಳ ವಾಹನಲ್ಲಿ ಬಿಡೆಕ್ಕು. ಬೇರೆ ವಾಹನ ವ್ಯವಸ್ಥೆ ಇಲ್ಲೆ), ಸಾಮಾನು ತಪ್ಪದು, ಆನು ಡೇನ್ಸು ಕ್ಲಾಸ್ಸ್ ಮಾಡ್ತೆ ಅದೂ ಇದ್ದು.ಎಂತ ಮಾಡ್ಲೂ ಸಮಯ ಸಿಕ್ಕುತ್ತಿಲ್ಲೆ. ಸಮಯ ಸಿಕ್ಕುತ್ತಿಲ್ಲೆ ಹೇಳ್ಲೆ ಸಮಯ ಅಂಗಡಿಲಿ ಸಿಕ್ಕುವ ವಸ್ತುವಾ…? ಮಹಾತ್ಮ ಗಾಂಧೀಜಿ ಬಿಡುವಿಲ್ಲದ್ದ ಕೆಲಸ ಇದ್ದರೂ ದಿನಕ್ಕೆ ಅರ್ಧ ಗಂಟೆ ಚರಕಲ್ಲಿ ನೂಲು ತೆಗವ ಕೆಲಸ ಮಾಡಿಗೊಂಡಿತ್ತಿದ್ದವಡ….. ! ಹಾಂಗಿಪ್ಪಗ ಯಾವ ವಿಷಯಕ್ಕೂ ನಾವು ಸಮಯ ಇಲ್ಲೆ ಹೇಳುವ ಮಾತಿನ ಬಳಸುಲೆ ಆಗ.

ಎನಗೆ ಕೃಷಿಲಿ ಆಸಕ್ತಿ ಇದ್ದು, ಆದರೆ ಮಾಡಿ ಗೊಂತಿಲ್ಲೆ. ಮಾವ ಸಲಹೆ ತೆಕ್ಕೊಂಡು ಆನು ಕೃಷಿ ಮಾಡೆಕ್ಕು ಹೇಳಿ ಹೆರಟೆ. ಎನ್ನ ಉತ್ಸಾಹಕ್ಕೆ ಆರೂ ತಣ್ಣೀರೆರಚದ್ದೆ ಎಲ್ಲರು ಒಪ್ಪಿಗೆ ಕೊಟ್ಟವು. ಹಾಂಗೆ ಮನೆ ಹಿಂದಾಣ ತಟ್ಟಿಲಿ ಬಾಳೆ ಸೆಸಿ ನೆಡುಸುದು ಹೇಳಿ ಆತು. ಅಲ್ಲಿ ಹುಲ್ಲು,ಮುಳ್ಳು ತುಂಬಿ ಹೋಪಲೆ ಎಡಿಯ.ಕಾಡು ಕಡಿವಲೆ ಜೆನ ಬೇಕನ್ನೆ .ಎನಗೆ ಕತ್ತಿ ಹಿಡುದು ಗೊಂತೇ ಇಲ್ಲೆ. ಕೊನೆಗೆ ಆರಿಂಗೆಲ್ಲ ದಮ್ಮಯ್ಯ ಹಾಕಿ 4 ಜೆನ ಕೆಲಸದ ಹುಡುಗರ ಬಪ್ಪಲೆ ಮಾಡಿ ಆತು.ಕಾಡು ಕಡಿಸಿ ಆತು. ಬಾಳೆ ಹೊಂಡವೂ ರೆಡಿ ಆತು. ಅಷ್ಟಪ್ಪಗ ಆರೋ ಹೇಳಿದವು ಪಂಚಾಯತಿಂದ ಹೀಂಗೆ ಕೃಷಿ ಮಾಡ್ತವಕ್ಕೆ ಸುಮಾರು ಸವಲತ್ತುಗ ಕೊಡ್ತವು, ಪೈಸೆ ಕೊಡ್ತವು, ಗೊಬ್ಬರ ಕೊಡ್ತವು ಹೇಳಿ . ಧರ್ಮಕ್ಕೆ ಕೊಡುದರ ಬಿಡುದೆಂತಕೆ ಹೇಳಿ ಆನು ಅರ್ಜಿ ಹಾಕಿದೆ.ಅವು ನೆಟ್ಟ ಮೇಲೆ ನೋಡ್ಳೆ ಬತ್ತೆಯ ಮತ್ತೆ ಎಲ್ಲ ಕೊಡುದು ಹೇಳಿದವು. ಅವು ಇಂದು ಬಕ್ಕು ನಾಳೆ ಬಕ್ಕು ಹೇಳಿ ಕಾದಲ್ಲೇ ಬಾಕಿ…! ಎಲ್ಲಿದ್ದವು….? ಪೈಸೆಯೂ ಇಲ್ಲೆ ಗೊಬ್ಬರವೂ ಇಲ್ಲೆ!ಅವು ಕೊಡ್ತವು ಹೇಳಿ ಆನು ಕೃಷಿ ಮಾಡ್ಳೆ ಹೆರಟದೂ ಅಲ್ಲ. ಆನು ಬಾಳೆ ಗಿಡ ನೆಡ್ಸಿದೆ. ಈ ವರ್ಷ ಮಳೆ ಹೆಚ್ಚಾದ ಕರಣ ಸೆಸಿ ನೆಡ್ಸಿ ಒಂದು ತಿಂಗಳಪ್ಪಗ ಕಾಡು ತಿರುಗಿ ತುಂಬಿತ್ತದಾ…..! ಇನ್ನೊಂದರಿ ಕೆಲಸದವಕ್ಕೆ ದಮ್ಮಯ್ಯ ಹಾಕಿ ಬಪ್ಪಲೆ ಮಾಡಿ ಒತ್ತರೆ ಮಾಡ್ಸಿದೆ.ಅದಕ್ಕೆ ಬೇಕು ಬೇಕಾದ ಹಾಂಗೆ ನೀರು,ಗೊಬ್ಬರ ,ಬೂದಿ ಹಾಕಿಗೊಂಡು ಇತ್ತಿದ್ದೆ.ಮಕ್ಕಳ ಸಾಂಕುವ ಹಾಂಗೆ ಸಾಂಕಿದೆ. ಕಣ್ಣಿಂಗೆ ಹಬ್ಬವೋ ಹೇಳ್ತ ಹಾಂಗೆ ಬಾಳೆ ಬೆಳವಲೆ ಸುರು ಆತಿದ. ಆರ ಕಣ್ಣು ತಾಗಿತ್ತೋ ಹೇಳ್ತ ಹಾಂಗಿಪ್ಪ ಸಂಗತಿ ನಡದತ್ತು…………

ಉದಿಯಪ್ಪಗ ಎದ್ದು ಒಂದರಿ ಬಾಳೆ ತೋಟವ ನೋಡುದು ಎನ್ನ ಅಭ್ಯಾಸ. ಆ ದಿನ ನೋಡುಗ ಒಂದು ಬಾಳೆ ಸೆಸಿ ಚಿಂದಿ ಚಿಂದಿ ಆಗಿಗೊಂಡು ಇದ್ದು. ಬೇಜಾರು ಆತು. ಅದು ಹಂದಿ ಬಂದು ಹಾಂಗೆ ಮಾಡಿದ್ದು ಹೇಳಿ ಮಾವ ಹೇಳಿದವು. ಆ ಜಾಗೆಲಿ ಬೇರೆ ಸೆಸಿ ತಂದು ನೆಟ್ಟೆ. ಹಂದಿ ಬಪ್ಪದಕ್ಕೆ ಬೇಕಾಗಿ ತೋಟಲ್ಲಿ ಅಲ್ಲಲ್ಲಿ ಕೆಲವು ಕೋಲು ಊರಿ ಅದಕ್ಕೆ ಬೆಳಿ ಬೆಳಿ ಸಿಮೆಂಟು ಗೋಣಿಯ ನೇಲ್ಸಿದೆ.ಇರುಳು ಆರೋ ಜನಂಗ ಇದ್ದವು ಹೇಳುವ ಭ್ರಮೆಲಿ ಹಂದಿಗ ಬಾರವು ಹೇಳಿ ಮಾವ ಹೇಳಿದವು. ಅದರ ನೋಡಿ ಮರದಿನಂದ ಹಂದಿ ಬಯಿಂದಿಲ್ಲೆ. 2-3 ದಿನ ಕಳುದಪ್ಪಗ ಅದಕ್ಕೆ ಆನು ಮಾಡಿದ ಮೋಸ ಗೊಂತಾತು! ಆ ದಿನ ಇನ್ನೆರಡು ಸೆಸಿ ಲಗಾಡಿ……ಎಂತ ಮಾಡುದು ಹೇಳಿ ಚಿಂತೆ ಶುರು ಆತು.

ಎಂಗಳ ಜಾಗೆಯ ಸುತ್ತು ಪ್ಲಾಂಟೆಷನ್ನಿನವರ ಬೀಜದ ಕಾಡು ಇತ್ತು.ಅಲ್ಲೆಲ್ಲ ಈಗ ರಬ್ಬರ್ ಹಾಕ್ಸಿದ್ದವು. ಹಾಂಗಾಗಿ ಅಲ್ಲಿ ಕಾಡು ಕಡಿದು ಹಂದಿಗೊಕ್ಕೆ ಜಾಗೆ ಇಲ್ಲದ್ದ ಹಾಂಗೆ ಆಯಿದು.ಆಗ ಕಾಂಬದು ನಮ್ಮ ಜಾಗೆ ಅದ…!

ಮೊದಲೆಲ್ಲ ಇಲ್ಲಿ ಸುತ್ತಮುತ್ತ ಹಂದಿ ಬೇಟೆ ಆಡಿಗೊಂಡಿತ್ತಿದ್ದವಡ . ಈಗ ಹಂದಿ ಕೊಲ್ಲುಲಾಗ ಹೇಳಿ ಕಾನೂನು ತಂದವು…!ಹಂದಿಯ ಉಪದ್ರಕ್ಕೆ ಎಂತ ಮಾಡುದು ಕೇಳಿರೆ ಅವರ ಹತ್ತರೆ ಉತ್ತರ ಇಲ್ಲೆ. ಅಂದೆಲ್ಲ ಕೋವಿ ತಂದು ಇರುಳು ಕಾದು ಕೂದು ಗುಂಡು ಹಾಕಿ ಕೊಲ್ಲುತಿತ್ತವಡ . ಎಂಗಳ ಗುರಿಕ್ಕರರಾಗಿದ್ದ ಪಯದ ಪದ್ಮನಾಭ ಭಟ್ರು ಒಂದು ಕಥೆ ಹೇಳುಗು.ಇದು ಲೊಟ್ಟೆ ಕಥೆ ಅಲ್ಲ ನಿಜವಾಗಿ ನಡದ್ದು….!ಅವು ಒಂದರಿ ಎಲ್ಲಿಗೋ ಹೋಗಿ ಬಪ್ಪಗ ಇರುಳಾತಡ. ಅವರ ಮನೆ ಹತ್ತರೆ ಗುಡ್ಡೆಲಿ ಬಂದುಗೊಂಡಿಪ್ಪಗ ಹಂದಿ ಹೇಳಿ ಗ್ರೇಶಿ ಅರೋ ಗುಂಡು ಹಾಕಿದವಡ . 3 ಗುಂಡು ಇವರ ಮೈ ಹೊಕ್ಕತ್ತಡ. ಅವು ಪ್ರಾಣ ಮರ್ಕಲ್ಲಿ ಓಡಿಗೊಂಡು ಮನೆಗೆ ಎತ್ತಿದವಡ. ಮನೆಯವ್ವು ಕೂಡ್ಲೆ ಡಾಕುಟ್ರ ಹತ್ತರೆ ಕರಕ್ಕೊಂಡು ಹೋಗಿ ಮದ್ದು ಮಾಡ್ಸಿದವಡ .ಗುಣ ಆತು. ಆದರೂ ಒಂದು ಗುಂಡು ತೆಗವಲೆ ಎಡಿಯದ್ದೆ ಶರೀರಲ್ಲಿ ಬಾಕಿ ಆಯಿದಡ! ಹಾಂಗಾಗಿ ಎಂಗ ಅವರ ಗುಂಡು ಪಾರ್ಟಿ ಹೇಳಿ ತಮಾಷೆ ಮಾಡ್ಲೆ ಇದ್ದು….

ಹಂದಿ ಉಪದ್ರಕ್ಕೆ ಎಂತ ಮಾಡುದು ಹೇಳಿ ಆನು ಬೇಜಾರಿಲಿ ಇಪ್ಪಗ ಮಗ ಒಂದು ಉಪಾಯ ಮಾಡಿದ. ಅಪ್ಪನ ಹಳೆ ಶರ್ಟ್ ತಂದು ಅದರ ಒಂದು ಕೋಲಿಂಗೆ ಸಿಕ್ಕಿಸಿ ಒಂದು ಮನುಷ್ಯನ ಆಕೃತಿ ತಯಾರಿ ಮಾಡಿದ. ಅವನ ಅತ್ತೆ ಇಂಗ್ಲೆಂಡಿಂದ ತಂದ ಸೊಲಾರ್ ಲೇಂಪಿನ ಆ ಅಂಗಿಯ ಮೇಲೆ ತಲೆ ಇಪ್ಪ ಜಾಗೆಗೆ ಸಿಕ್ಕಿಸಿದ. ಅತ್ತೆ ತಂದದು ಉಪಯೋಗಕ್ಕೆ ಬಂತು. ಅದರ ನೋಡಿ ೧೫ ದಿನ ಹಂದಿ ಬಯಿಂದಿಲ್ಲೆ. ಎಂಗೊಗೆ ಸಮಾಧಾನ ಆತು.

ಆದರೆ ಮೊನ್ನೆ ಉದಿಯಪ್ಪಗ ಎದ್ದು ನೋಡ್ತೆ ಯುದ್ಧಲ್ಲಿ ಸತ್ತು ಬಿದ್ದ ಸೈನಿಕರ ಹಾಂಗೆ ಬಾಳೆ ಗಿಡಂಗ ಅಡ್ಡ ಬಿದ್ದುಗೊಂಡು ಇದ್ದು. ಎಂತ ಮಾಡಲಿ……?

ಹಿಂದೆ ಮಹಾ ವಿಷ್ಣು ಹಿರಣ್ಯಾಕ್ಷ ಹೇಳ್ತ ರಾಕ್ಷಸನ ಕೊಲ್ಲುಲೆ ಸೂಕರನ ರೂಪಲ್ಲಿ ಬಯಿಂದನಡ .ಸೂಕರ ಹೇಳಿರೆ ಹಂದಿ. ಅವನ ವರಾಹ ಅವತಾರ ಹೇಳಿ ಕೊಂಡಾಡ್ತು. ಆದರೆ ಇಂದು ಯಾವುದೋ ರಾಕ್ಷಸ ಹಂದಿಯಾಗಿ ಬಂದು ಬೆಳದು ನಿಂದ ಎಂಗಳ ಬಾಳೆಯ ಸರ್ವನಾಶ ಮಾಡಿತ್ತು!

ಸೆಸಿಯ ಸುತ್ತು ಚೂರಿ ಮುಳ್ಳು ಮಡುಗಿದರೆ ಹಂದಿ ಬಾಯಿ ಹಾಕುತ್ತಿಲ್ಲೆ ಹೇಳಿ ಆರೋ ಹೇಳಿದವು. ಇನ್ನು ಕೆಲಸದ ಹುಡುಗರ ಬಪ್ಪಲೆ ಮಾಡಿ ಮುಳ್ಳು ಮಡುಗುಸೆಕ್ಕು. ಬಾಳೆ ತೋಟಕ್ಕೆ ಕರೆಂಟು ವಯರು ಹಾಕಿ 2- 3 ಬಲ್ಬು ಹಾಕಿ ಇರುಳಿಡೀ ಹೊತ್ಸಿದರೆ ಹಂದಿ ಬಾರ ಹೇಳಿ ಆರೋ ಹೇಳಿದವು. ಆ ಪ್ರಯತ್ನವೂ ಮಾಡ್ತೆ. ಬೆನ್ನು ಬಿಡದ ಬೇತಾಳನ ಹಾಂಗೆ ಹಂದಿ ಎನ್ನ ಬೆನ್ನು ಬಿದ್ದಿದು! ಛಲ ಬಿಡದ ವಿಕ್ರಮಾದಿತ್ಯನ ಹಾಂಗೆ ಅದು ಹಾಳು ಮಾಡಿದ ಸೆಸಿಗಳ ಜಾಗೆಲಿ ಹೊಸ ಸೆಸಿ ನೆಟ್ಟು ಅದು ಬಾರದ್ದ ಹಾಂಗೆ ಅಪ್ಪಲೆ ಹೊಸ ಹೊಸ ಉಪಾಯ ಕಂಡು ಹಿಡಿತ್ತಾ ಇದ್ದೆ…….

ಆರಿಂಗಾದರೂ ಎಂತಾದರೂ ಒಳ್ಳೆ ಉಪಾಯ ಗೊಂತಿದ್ದರೆ ತಿಳಿಸಿ……

33 thoughts on “ಸೂಕರ…..

  1. ಜಯಶ್ರೀಅಕ್ಕ ಧನ್ಯವಾದಗಳು….

    ಚೆನ್ನ ಬೆಟ್ಟಣ್ಣ ಎಂಗಳಲ್ಲಿ ಮಂಗನ ಉಪದ್ರ ಇಲ್ಲೆ. ನಿಂಗೊಗೆ ಕಥೆ ಬೇಕಾದರೆ ಬರವ ಎನೂ ತೊಂದರೆ ಇಲ್ಲೆ. ಆದರೆ ನಿಂಗಳ ಬಾಯಿ ಹರಕೆಯ ಹಾಂಗೆ ಮಂಗಂಗ ಬಪ್ಪದು ಬೇಡ….

  2. ಅನುಪಮಕ್ಕ… “ಛಲ ಬಿಡದ ವಿಕ್ರಮಾದಿತ್ಯನ ಹಾಂಗೆ …” ನಿಂಗಳ ಛಲ ನಿಜವಾಗಿಯೂ ಮೆಚ್ಹೆಕ್ಕಾದೆ… ನಿಂಗಳ ಛಲ ಸಾರ್ಥಕ ಆಗಿ ನಿಂಗೊಗೆ ಕೃಷಿಲಿ ಅದ್ಭುತ ಯಶಸ್ಸು ದೊರಕಲಿ ಹೇಳಿ ಸಾವಿರ ಸಾವಿರ ಒಪ್ಪಂಗೋ… ಶುಭ ಹಾರೈಕೆಗ…

  3. ಅನುಪಮಕ್ಕ,
    ನಿಂಗಳ ಈ ಶುದ್ದಿಲಿ ಒಂದು ಉಪಕಾರ ಆತಿದಾ.. ಕೃಷಿಯ ಅನುಭವ ಇಪ್ಪ ಅಡ್ಕತ್ತಿಮಾರು ಮಾವನ ಅನುಭವಂಗಳ ಈ ಲೆಕ್ಕಲ್ಲಿ ನವಗೆ ತಿಳ್ಕೊಂಬ ಹಾಂಗೆ ಆತು.
    ಇಬ್ರಿಂಗೂ ಧನ್ಯವಾದಂಗೊ.

  4. ಯೇ ಅಕ್ಕಾ, ಬೈಲಿನೋರ ಸಲಹೆಂದ ಹಂದಿ ಉಪದ್ರ ನಿಯಂತ್ರಣಕ್ಕೆ ಬಂತು ಹೇಳಿ ಮಾಡಿಕ್ಕೊಂಬ, ಇನ್ನು ರಜ್ಜ ಸಮಯಲ್ಲಿ ಹಣ್ಣಾಪ್ಪಗ ಮಂಗನ ಉಪದ್ರಕ್ಕೆ ಎಂತ ಮಾಡ್ತಿ ? ಅದನ್ನೂ ಚೆಂದಕ್ಕೆ ಹೀಂಗೆ ಬರೆತ್ತಿರೋ ?

  5. ಶುದ್ದಿಯೂ,ಸಲಹೆಗಳೂ ಭಾರಿ ಲಾಯಿಕ ಆಯಿದು.
    ಅಡ್ಕತ್ತಿಮಾರು ಮಾವನ ಸಲಹೆ ನಮ್ಮ ಕೃಷಿಕರಿ೦ಗೆ ಉಪಯೋಗ ಅಕ್ಕು.
    ಒಳುದ ಸಲಹೆಗೊ ಎನಗೆ ಭಾರೀ ಪ್ರಯೋಜನ ಆತು,ನೆಗೆ ಮಾಡುಲೆ,ಹ್ಹ..ಹ್ಹಾ..

  6. ಅನುಪಮಕ್ಕ ಈ ಶುದ್ದಿ ಬರದ್ದು ಎನಗೆ ಲಾಯಕ ಖುಶಿ ಆಯ್ದು. ಎಂತಕೆ ಕೇಳಿರೆ, ಸಂಗತಿ ಇಪ್ಪದು ಸೂಕರ ಹಾವಳಿ ಆದರೂ ‘ಕೃಷಿ ಜಾಗಗೆ ಹಂದಿ ಉಪದ್ರ ನಿಯಂತ್ರಣಕ್ಕೆ….. ನಿಂಗ್ಳ ಅಭಿಪ್ರಾಯ’ ? ಹೇಳಿ ಒಂದು ಗೆರೆಲಿ ಮುಗುಶಲಾವ್ತದರ ಚೊಕ್ಕಕ್ಕೆ ಸ್ವಾರಸ್ಯವಾಗಿ, ವ್ಯಂಗ್ಯವಾಗಿ, ಕುತೂಹಲವಾಗಿಯೂ ನಿರೂಪಣೆ ಮಾಡಿದ್ದು ಓದುವವಕ್ಕೂ ಖುಶಿ ಕೊಡುತ್ತು ವಿಷಯ ಮಂಡನೆಯೂ ಲಾಯಕ ಆತು. ಆ ಲೆಕ್ಕಲ್ಲಿ ಈ ಒಂದು ಪ್ರತ್ಯೇಕ ಒಪ್ಪ.

    1. (ಕೃಷಿ ಜಾಗಗೆ ಹಂದಿ ಉಪದ್ರ ನಿಯಂತ್ರಣಕ್ಕೆ….. ನಿಂಗ್ಳ ಅಭಿಪ್ರಾಯ’ ? )
      ಹೀಂಗೂ ಹಾಕಲಾವುತ್ತಿತಲ್ಲೋ…? ಚೆ ನವಗೆ ಓಡಿದ್ದೇ ಇಲ್ಲೆನ್ನೇ?

      1. ಓಯಿ,ಎ೦ತ?ಓಡಿದ್ದರೆ ಹ೦ದಿಗಳ ಸುಲಾಭಲ್ಲಿ ಓಡ್ಸುಲಾವ್ತಿತ್ತು ಹೇಳಿಯೊ?

    2. ಚೆನೈ ಬಾವೋ ಧನ್ಯವಾದಗಳು. ಎನ್ನ ಒಂದು ಕೆಟ್ಟ ಅಭ್ಯಾಸ ಎಂತ ಹೇಳಿರೆ ಒಂದು ಗೆರೆ ಇಪ್ಪ ವಿಷಯವ ಒಂದು ಪುಟ ಅಪ್ಪಷ್ಟು ವಿವರ್ಸುದು…….

      ಭೀಮ ಬಕಾಸುರನನ್ನು ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ ಗುದ್ದಿ …………………………………………………………………………………………………………………………………………………………………………………………………………………….ಕೊಂದನು.

      ಸಲಹೆ ,ಪ್ರೋತ್ಸಾಹ ಕೊಟ್ಟ ಎಲ್ಲರಿಂಗೂ ಧನ್ಯವಾದಗಳು…….

  7. ಬಾಳೆ ಕೃಷಿ ಮಾಡ್ಲೆ ಹೆರಟು ಅನುಭವಿಸಿದ ಬಂಙದ ನಿರೂಪಣೆ ಲಾಯಿಕ ಆಯಿದು.
    ಅಡ್ಕತ್ತಿಮಾರು ಮಾವ ಹೇಳಿದ ಕೆಣಿಯ ಆನು ಬೇರೆಯವರ ಮೂಲಕವೂ ಕೇಳಿತ್ತಿದ್ದೆ.
    ಎಲ್ಲರೂ ಇದೇ ಅಭಿಪ್ರಾಯ ಹೇಳಿತ್ತಿದ್ದವು. (ಸ್ವಂತ ಅನುಭವ ಕೃಷಿಲಿ ಇಲ್ಲೆ)

  8. ಇದಾ ಇದೀಗ ಬಂದ ಬೆಶಿ ಬೆಶಿ ಸುದ್ದಿ ……….
    ನೆಗೆಗಾರನ ಕೈಲಿ ಗಾಮಟೆಬೆಡಿ ಕೊಟ್ಟು ಕೂರುಸಿದರಕ್ಕು ಹೇಳ್ತವು ಬೋಚ ದಾಸ..!

      1. ಇದಾ , ಬಟಾಟೆ ಹೇಳಿರೆ ಅವಕ್ಕೆ ಕೋಪ ಬಕ್ಕು – ಗೆಣಂಗಿನ ಪೋಡಿ ಮಾಡೀರೆ ಪರಿಮ್ಮಳಕ್ಕೆ ಹಂದಿಬಕ್ಕು ಎಂತ ಮಾಡ್ಸು ..? ಹೇಳ್ತ ಪೆಂಗಣ್ಣ..

  9. ಈಗಾಣ ಕಾಲಲ್ಲಿ ಬೆಡಿ ಮಡಿಕ್ಕೊಂಬದೇ ದೊಡ್ಡ ತಲೆಹರಟೆ ರಗಳೆ ಆಪತ್ತು. ಮತ್ತೆ ಇನ್ನು ಬೇರೆ ಎಲ್ಯಾರು ಆರಾರು ಬೆಡಿ ಹೊಟ್ಟಿಸಿರೂ ನಮ್ಮಲ್ಲಿಗೆ ಮದಾಲು ಬಕ್ಕು ಪೋಲೀಸು. ಬೇಡ ಇದಾಗ. ಐಬೆಕ್ಸ್.. ಕರೆಂಟು…. ಇದರ ನಂಬಿರೆ ಆತೇ ಇಲ್ಲೆ. ಕರೆಂಟು ಇಲ್ಲದ್ದ ಹೊತ್ತು ನೋಡಿ ಹಂದಿ ಬಂದರೆ? ನಿಂಗೊ ಒರಗಿರೆ?! – ಬೇಡ ಇದಾತಿಲ್ಲೆ. ಮಣ್ಣಿನ ಪಂಜಿಗೋಡೆ ಎಲಿ ಹೆಗ್ಗಣ ಹಂದಿ ಮಾಟೆ ಮಾಡುಗು., ಬೇಡ ಇದೂ ನಡೆಯ.
    ತೋಟದ ಸುತ್ತ… ಎಂತಕೆ … ಜಾಗೆ ಸುತ್ತ ಆರೋ ಎಂಟೋ ಅಡಿ ಎತ್ತರಕ್ಕೆ ಕಲ್ಲಿನ ಗೋಡೆ ಮಾಡಿರೋ°?! ಇಲ್ಲದ್ರೆ ಸುತ್ತ ೬ – ೮ ಅಡಿ ಆಳ ಅಗಲಕ್ಕೆ ಹೊಂಡ ಮಾಡಿರೋ°?. ನವಗೆ ದಾಂಟುಲೆ ಬೇಕಪ್ಪಗ ಮಾತ್ರ ಒಂದು ಹಲಗೆ ಮಡಿಗಿ ತೆಗೆತ್ತ ಹಾಂಗೆ??!. ಕೊಲ್ಲಲಾಗ, ಹಿಡಿವಲಕ್ಕನ್ನೇ… ಮತ್ತೆ ಸಾಂಕಲಕ್ಕನ್ನೇ ಪಾರೆಸ್ಟ್ ಕಾಡಿಲ್ಲಿ!.
    ಅಡ್ಕತ್ತಿಮಾರು ಮಾವ° ಪ್ರಾಯೋಗಿಕ ಹೊಸ ವಿಷಯ ತಿಳಿಸಿದ್ದು ಲಾಯಕ ಆಯ್ದು. ಬಹುಶಃ ಹೆಚ್ಚಿನೋರಿಂಗೂ ಇದು ನೂತನ. ಈ ತಲೆಕಸವಿಂಗೂ ಹಂದಿಗೂ ನಡುವೆ ಇಪ್ಪ ರಹಸ್ಯ ಎಂತ ಹೇಳಿ ಗೊಂತಾಯ್ದಿಲ್ಲೆನ್ನೇ. ಏ…ಪ್ರಸಾದಣ್ಣೋ ನಮ್ಮ ತಲೆ ಇನ್ನು ಧರ್ಮಕ್ಕೆ ಕೊಟ್ಟು ಅದರ ಮೇಗಂದ ನಾವೇ ಮೌಲ್ಯ ಕೊಡುತ್ಸು ಬೇಡ ಅಪ್ಪೋ. ನಮ್ಮ ತಲಗೂ ಇನ್ನು ಬೆಲೆ ಕಟ್ಳೆ ಸುರುಮಾಡೆಕೆ!.

    1. (ತೋಟದ ಸುತ್ತ… ಎಂತಕೆ … ಜಾಗೆ ಸುತ್ತ ಆರೋ ಎಂಟೋ ಅಡಿ ಎತ್ತರಕ್ಕೆ ಕಲ್ಲಿನ ಗೋಡೆ ಮಾಡಿರೋ°?!) – ನಾವು ಒಳ ಹೆರ ಹೋವುತ್ತು ಹೇಂಗೋ……….?
      (ನವಗೆ ದಾಂಟುಲೆ ಬೇಕಪ್ಪಗ ಮಾತ್ರ ಒಂದು ಹಲಗೆ ಮಡಿಗಿ ತೆಗೆತ್ತ ಹಾಂಗೆ??!)-ಹಲಗೆ ಕುಂಬು ಆದರೋ..?
      (ಕೊಲ್ಲಲಾಗ, ಹಿಡಿವಲಕ್ಕನ್ನೇ… ) ಇದಾ ನವಗೆ ಕಾನೂನು ಗೊಂತಿದ್ದು ಹಂದಿಗೆ ಗೊಂತಿರೆಕ್ಕನ್ನೇ…? ಹಿಡಿವಗ ಜಾಗ್ರುತೆ ಆತೋ ದಾಡೆಲಿಯೋಮಣ್ಣೊ ಕುತ್ತಿಕ್ಕುಗು….ಹ್ಮ್ಮ್

      1. ಬಾಳೆ ಬುಡಕ್ಕೆ ತಲೆ ಕಸವು ಹಾಕಿದರೆ ..ಹಂದಿ ಆಹಾರ ಹುದುಕ್ಕುವಾಗ ನೆಲವ ಮೂಸಿ ಗೊಂಡು ಹೋಪದು ಕ್ರಮ ಹಾಂಗೆ ಹೊಪಗ ಅದರ ಮೂಗಿಂಗೆ ತಲೆಕಸವು ಕಂತುತ್ತು …ಮತ್ತೆ ಅದು ಬಂದರೆ ಹೇಳಿ ..!!

        1. ಈ ತಲೆಕಸವಿಂಗೆ ಮೆಣಸಿನಹೊಡಿ ಮಿಕ್ಸ್ ಮಾಡಿರೆ ಹೇಂಗಕ್ಕು? ಇನ್ನಷ್ಟು ಪರಿಣಾಮಕಾರಿ ಆಕ್ಕೋ?

          1. ಮೆಣಸಿನ ಹೊಡಿ? ಎಷ್ಟು ದಿನ ಇಕ್ಕು ಅದು ಮಣ್ಣಿಲ್ಲಿ?? ಇದ್ದರೂ ಅದರ ಮೆಣಸಿನ ಪ್ರಭಾವ ಎಷ್ಟು ದಿನ ಇಕ್ಕು? ಎನ್ನ ಅ೦ದಾಜಿಲಿ, ಹ೦ದಿ ಆಹಾರ ಹುಡುಕ್ಕುವಾಗ ನೆಲವ ಮೂಸಿಗೊ೦ಡು ಹೋಪಗ, ಅದಕ್ಕೆ ತಲೆ ಕಸವಿ೦ದಾಗಿ ಮನುಷ್ಯರ / ಪರಿಚಿತವಲ್ಲದ್ದ ವಾಸನೆ ಸಿಕ್ಕುಗಲ್ಲದಾ.. ಅದರಿ೦ದಾಗಿ ಆದಿಕ್ಕು ಇದು ಪರಿಣಾಮಕಾರಿ ಅಪ್ಪದು.

  10. ಬಾಳೆ ಸೆಸಿಯ ಬುಡಕ್ಕೆ ತಲೆಕಸವು ಹಾಕಿದರೆ ಹಂದಿ ಬತ್ತಿಲ್ಲೆ …ಕುಚ್ಚಿತೆಗೆತ್ತ ಅಂಗಡಿಲಿ ಒಂದು ಗೋಣಿ ಕೊಂಡುಹೋಗಿ ಮದಿಗಿ ಅದು ತೆಗದ ಕುಚ್ಚಿಯ ಅದರಲ್ಲಿ ಹಾಕಿ ತಂದು ಸೆಸಿಯ ಸುತ್ತಲೂ ಹಾಕಿದರೆ ಬಾರೀ ಪ್ರಯೋಜನ ಆವುತ್ತು..ಎನ್ಗಳಲ್ಲಿ ಸುಮಾರು ಜನ ಇದರ ಉಪಯೋಗ ಪಡದ್ದವು..

    1. ಅಡ್ಕತ್ತಿಮಾರು ಮಾವಾ.. ಇದು ಎನಗೆ ಹೊಸ ವಿಷಯ!! ಗೊ೦ತೇ ಇತ್ತಿಲ್ಲೆ.. ಒಳ್ಳೇ ಉಪಾಯ ಹೇಳಿ ಕಾಣ್ತು, ಹ೦ದಿಗೂ ಹಿ೦ಸೆ ಇಲ್ಲೆ, ನಮ್ಮ ಅಗತ್ಯವೂ ನೆಡದುಹೋವ್ತು..
      ಧನ್ಯವಾದ೦ಗೊ..

    2. ಮಾವಾ, ಇದಾರೆ ಸುಲಾಬದ ದಾರಿ ನವಗೂ ಗೊಂತಾತಿದಾ ಧನ್ಯ ವಾದಂಗೊ.

  11. ಸೂಕರ ವಧೆಗೆ ಬೆಡಿಪ್ರಯೋಗ ಒಳ್ಳೆದು . ಮತ್ತೆ ಕರೆಂಟು ಕೊಡುದುದೆ ಅಕ್ಕು. ಎಂಗಳ ಮನೆಯ ಕೆಳ ಇಪ್ಪ ಪೊರ್ಬು ಇರುಳು ಒಂದು ಡಬ್ಬಿ ಕಟ್ಟಿಕ್ಕಿ, ಅದಕ್ಕೆ ಒಂದು ಬಳ್ಳಿಯ ಕಟ್ಟಿ ಮನೆವರೆಗೆ ತಂದು ಕಟ್ಟಿದ್ದವು. ಇರುಳಪ್ಪಗ ಬಳ್ಳಿ ಎಳದರೆ ಡಬ್ಬಿ ಸೌಂಡು ಮಾಡಿಯೊಂಡಿತ್ತು. ಲಾಯ್ಕ ಉಪಾಯ ಮಾತ್ರ..

  12. ೧ ಈಗಾಣ ಕಾಲಲ್ಲಿ ಯಾರಿಂಗೂ ಕೃಷಿ ಬೇಡ ಹೇಳಿ ಆಯಿದು. – ಇದರ ಆನು ಒಪ್ಪುತ್ತಿಲ್ಲೆ
    ೨ ಲಸಕ್ಕೆ ಜೆನ ಸಿಕ್ಕುತ್ತಿಲ್ಲೆ, ನವಗೆ ಮಾಡಿಗೊಂಬಲೆ ಎಡಿತ್ತಿಲ್ಲೆ. ಎಂತಮಾಡುದು…? — ಇದು ನಿಜ
    ಆದರೆ ಪಟ ನೋಡುವಗ ಬಾಳೆ ಗಿಡಕ್ಕೆ ಈಟುನೀರು ಕಮ್ಮಿ ಆದಾಂಗೆ ಕಾಣ್ತನ್ನೇ ….?
    ಆರಿಂಗಾದರೂ ಎಂತಾದರೂ ಒಳ್ಳೆ ಉಪಾಯ ಗೊಂತಿದ್ದರೆ ತಿಳಿಸಿ……
    ೧-ನಮ್ಮ ಕಂಪ್ಯೂಟರಿನ ಬಾಳೆ ತೋಟಲ್ಲಿ ಮಡುಗಿರೋ° ?
    ೨-ಹಂದಿಗೊಕ್ಕೆ ಹೇಳಿ ಬೇರೆ ಜಾಗೆ ತೆಗದು ಕೊಟ್ರೋ°?
    ೩ -ಬಾಳೆ ತೋಟಕ್ಕೆ ಐಬೆಕ್ಸ್ ಬೇಲಿ ಮಾಡಿರೋ …?
    ೪- ಮೊದಲಿಂಗೆ ಪಂಜಿ ಗೋಡೆ ಹೇಳಿ ಮಣ್ಣಿನ ಗೋಡೆ ಕಟ್ಟಿಗೊಂಡು ಇತ್ತಿದ್ದವಿದಾ ಹಾಂಗೆ ನಮ್ಮಲ್ಲಿಯೂ ಕಟ್ಟುಸಿದರೆ ಹೇಂಗಕ್ಕು ?
    ಇದಾ ಕೆಲಸಕ್ಕೆ ಜೆನಸಿಕ್ಕುತ್ತಿಲ್ಲೆ ಹೇಳೀರೆ ಭಾಶೆ ಅರ್ಥ ಆವುತ್ತಿಲ್ಲೆಯೋ ಹೇಳಿ ಬೈದಿಕ್ಕೆಡಿ ಆತೋ ….

    1. ಈಗಾಣ ಕಾಲಲ್ಲಿ ಕೃಷಿ ಹೆಚ್ಚಿನವಕ್ಕೂ ಬೇಡ ಹೇಳಿ ಆಯಿದು . (ಎಲ್ಲರಿಂಗೂ ಅಲ್ಲ). ಮದಲೆಲ್ಲ ಹೆಚ್ಚಿನ ಮನೆಗಳಲ್ಲಿ ಗದ್ದೆ ಬೇಸಾಯ ಇದ್ದತ್ತು. ಅವರವರ ಮನಗೆ ಬೇಕಪ್ಪಷ್ಟು ಅಕ್ಕಿ , ತರಕಾರಿ ಬೆಳೆತ್ತಾ ಇತ್ತಿದ್ದವು. ಈಗ ಎಲ್ಲಿದ್ದು…?
      ತೋಟಕ್ಕೆ ನೀರು ಬಿಡ್ತಾ ಇದ್ದು. ಆನು ೪ ದಿನ ಊರಿಲಿ ಇತ್ತಿದ್ದಿಲ್ಲೆ. ಆ ಸಮಯಲ್ಲಿ ಆದ ಕಾರಣ ತೋಟ ಹಾಂಗೆ ಆದ್ದು ಎಂತ ಮಾಡುದು….

      1. (ತೋಟಕ್ಕೆ ನೀರು ಬಿಡ್ತಾ ಇದ್ದು. ಆನು ೪ ದಿನ ಊರಿಲಿ ಇತ್ತಿದ್ದಿಲ್ಲೆ. ಆ ಸಮಯಲ್ಲಿ ಆದ ಕಾರಣ ತೋಟ ಹಾಂಗೆ ಆದ್ದು ಎಂತ ಮಾಡುದು….)
        ಅದೇ ಅಕ್ಕೋ ಸಮಸ್ಯೆ ಇಪ್ಪದು ಈ ಕೃಷಿ ಹೇಳೀರೇ ಹಾಂಗೆ ಬಿಟ್ಟಿಕ್ಕಿ ಎಲ್ಲಿಯೂ ಹೋತಿಕ್ಕಲೆ ಎಡಿಯ,
        ಅದರ ಏವಾಗಳು ನೋಡಿಗೊಂಡು ಇಪ್ಪಲೆ ಎಡಿಗಾದರೆ ಮಾತ್ರಾ ಅಕ್ಕಷ್ಟೇ. ನೋಡಿಗೊಂಡು ಇದ್ದರೆ “ಸಾವಯವ ಕೃಷಿ” ಇಲ್ಲದ್ದರೆ ಸಾವ__ ಕೃಷಿ ಅಲ್ಲದೋ…?

  13. ಅಕ್ಕೋ.., ೧. ಮನೇಲಿಪ್ಪೋರು ಒಂದೊಂದು ದಿನ ಒಬ್ಬೊಬ್ಬ ಒರಗದ್ದೆ ಇದ್ದು ಓಂದು ಸಣ್ಣ ಕೋಲು-ಡಬ್ಬಿ, ಹಿಡ್ಕೊಂಡು ಕುಟ್ಟಿರೋ°?
    ೨. ಬಾಳೆತೋಟಕ್ಕೆ ಗೂರ್ಖನ ನೇಮಕ ಮಾಡಿರೋ°?
    ೩. ಬಾಳೆತೋಟಕ್ಕೆ ಸುತ್ತ ಬೇಲಿ ಹಾಕಿ ನಾಕು ದೊಡ್ಡ ನಮೂನೆ ನಾಯಿ ಒಳ ಬಿಟ್ಟರೋ°?
    ೪. ಚರ್ಚುಗಂಟೆ ಹಾಂಗಿಪ್ಪದು ಕೆಲವು ಮಡುಗಿ ಅದರ ಬಳ್ಳಿ ತೋಟದ ಸುತ್ತ ಬತ್ತ ಹಾಂಗೆ ಕಟ್ಟಿ ಹಂದಿ ಅದರ ಮೆಟ್ಟಿ ದಾಂಟುವಾಗ ಎಚ್ಚರಿಕೆ ಗಂಟೆ ಬಡಿತ್ತಾಂಗೆ ಮಾಡಿರೋ° ?
    ೫. ಎಲಿಗೂಡು, ಹುಲಿಗೂಡು ಹೇಳಿ ಮಡುಗುತ್ತಾಂಗೆ ಹಂದಿಗೂಡು ಮಾಡಿರೋ°?

    ಇದೆಲ್ಲಾ ನಮ್ಮ ಮನಸ್ಸಿಂಗೆ ಸುಲಭಕ್ಕೆ ತೋರಿದ ಉಪಾಯಂಗೊ – ಪುಕ್ಸಟೆ ಸಲಹೆ. ಹೇಂಗಕ್ಕು ಹೇಳಿ ನಿಂಗೊ ಮಾಡಿ ನೋಡಿ ಹೇಳಿರೆ ಬೈಲಿಂಗೊಂದು ಅಂತೇ ಶುದ್ದಿಯೂ ಆವ್ತು. ಅದೆಲ್ಲ ಇರ್ಲಿ, ನಿಂಗಳ ನೋವಿನ ಅನುಭವ ಕುತೂಹಲವಾಗಿಯೂ ಸ್ವಾರಸ್ಯವಾಗಿಯೂ ಬರದ್ದಿ, ಈ ಬಗ್ಗೆ ಅನುಭವಸ್ತರು ನಿಂಗೊಗೆ ಸಲಹೆ ಉಪಾಯ ಕೊಡಲಿ ಎಂಬುದೀಗ- ‘ಚೆನ್ನೈವಾಣಿ’.

    1. ಏ ಭಾವಯ್ಯ ಇದಾ ಈ ಗೂರ್ಖ ಹೇಳಿ ಬಪ್ಪವು ಎಲ್ಲಿಯಾರು ಬಾಳೆಬುಡಲ್ಲಿ ಬೋಂಬುಮಡುಗೀರೆ ಎಂತ ಮಾಡ್ಸು.. ಕಾವಲೆ ಬಪ್ಪವರ ಕಾವದು ಯಾರೋ ?.
      (ಬಾಳೆತೋಟಕ್ಕೆ ಸುತ್ತ ಬೇಲಿ ಹಾಕಿ ನಾಕು ದೊಡ್ಡ ನಮೂನೆ ನಾಯಿ ಒಳ ಬಿಟ್ಟರೋ°?)
      -ಎಂತ ನಾಯಿ ಓಡ್ತಕ್ಕೋ?

    2. ಚೆನೈ ಬಾವೋ….. ಎಂಗಳಲ್ಲಿ ಈಗಾಗಲೇ ಅಜ್ಜಿ ಇರುಳಿಡೀ ವರಗುತ್ತವಿಲ್ಲೆ. ಅವರ ನೋಡಿಗೊಂಬಲೆ ಒಬ್ಬ ಜಾಗರಣೆ ಮಾಡೆಕ್ಕು. ಅದು ಸರದಿಲಿ ಒಬ್ಬೊಬ್ಬ ನೋಡಿಗೊಂಬದು. ಒಂದು ಕೆಲಸ ಮಾಡ್ಲಕ್ಕು ಅಜ್ಜಿಯನ್ನೇ ತೋಟ ಕಾವಲೆ ಕೂರುಸಿದರೆ ಹೇಂಗೆ……….?

      ಇರುಳು ಆಗಾಗ ತೋಟದ ಕಡೆಂಗೆ ಕಣ್ಣು ಹಾಯ್ಸುಲೆ ಇದ್ದು . ಆದರೆ ಆ ಹಂದಿ ಎಷ್ಟು ಹೊತ್ತಿಂಗೆ ಬತ್ತು ಹೇಳಿ ಗೊಂತೇ ಆವುತ್ತಿಲ್ಲೆ….!

      ಡಬ್ಬಿಯ ಉಪಾಯ ಒಳ್ಳೆದು. ಆಗಾಗ ಡಬ್ಬಿ ಬಡುದು ಶಬ್ದ ಮಾಡಿದರೆ ಆತು.

      1. ಅಕ್ಕೋ, ತೆಂಕ್ಲಾಗಿಯಾಣವು ಕಂಡಾಪಟ್ಟೆ ಗೊರಕ್ಕೆ ಹೊಡೆತ್ತವಡಾ…! , ಅವರ ಬಪ್ಪಲೇಳಿ ಮನೇಲಿಯೇ ಮಾಡಿಗೊಂಡರೆ ಹೇಂಗಕ್ಕು…?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×