ಟಂಟಂ ಟಟಂಟಂ ಟಟಟಂಟ ಟಂಟಃ

August 9, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದೆಂತ ಅಳಿಕೆ ಪಡಿಬಾಗಿಲ್ಲಿಲಿ ಆ ಪಾರೆಕ್ಕಲ್ಲು ಕುಟ್ಟುತ್ತದೋ, ಅಲ್ಲಾ, ಬಳ್ಳಾರಿಲಿ ರೆಡ್ಡಿ ಸಹೋದರರ ಗಣಿಗಾರಿಕೆಯೋ ಹೇಳಿ ಗ್ರೇಶಿದಿರೋ? ಉಮ್ಮಾ, ಅನೂ ಸುರೂವಿಂಗೆ ಅದನ್ನೇ ಗ್ರೇಶಿದ್ದು. ಅಲ್ಲಾ., ಛೆಲಾ..! ಇದೆಂತ ಹಿಡಿದತ್ತು ಇವಂಗೆ ಇಂದು ಹೇಳಿ ಗ್ರೇಶಿದಿರೋ., ಉಮ್ಮಾ, ಎನಗೂ ಸುರುವಿಂಗೆ ಅದೇ ಗ್ರೇಶಿಹೋತು. ಹೋಗಲಿ ಬಿಡಿ.

ನಿಂಗೊಗೆ ‘ಕಾಳಿದಾಸ’ನ ಗೊಂತಿದ್ದೋ? ಉಮ್ಮಾ ಎನಗೊಂತಿಲ್ಲೇ. ಇಲ್ಲೇ ಹೇಳ್ಳೆ ಎಡಿಯಾ. ಒಬ್ಬ ಕಾಳಿದಾಸ° ಇದ್ದ ಅದಾ, – ನಮ್ಮ ಚುಬ್ಬಣ್ಣ ಭಾವನ ಆಪ್ಪೀಸಿನ ಹತ್ರೆ ಇಪ್ಪ ನಾಯರ್ ಟಿ.ಸ್ಟಾಲಿಲಿ ನಿತ್ಯ ಟಿ. ಎರಶುತ್ತ ಜೆನ – ಕಾಳಿದಾಸ. ಇದು ಅದು ಅಲ್ಲ. ಅದರ ಹಿಡ್ಕೊಂಡು ನವಗೆಂತಾಗೆಡ ಇಲ್ಲಿ ಅಪ್ಪೋ. ನಮ್ಮ ಹೀರೋ ಈ ಕಾಳಿದಾಸ° ಇದ್ದನ್ನೇ… ಇವ ನಮ್ಮ ಡಾ|| ಮಹೇಶಣ್ಣಂಗೆ ತೀರ ಹತ್ರೆ ದೋಸ್ತಿ. ಅಷ್ಟಪ್ಪಗ ಮುಳಿಯಭಾವ° ಹೇಳುಗು- ‘ಅವ್ವು ಎನಗೂ ಹತ್ರೆ’. ವೇಣೂರಣ್ಣ ಎನಗೂ ಗೊಂತಿದ್ದೂ ಹೇಳುಗು ಅಷ್ಟಪ್ಪಗ. ಇವಷ್ಟು ಜೆನಕ್ಕೆ ಗೊಂತಿಪ್ಪ ಈ ಮಹಾನ್ ಕಾಳಿದಾಸನ ಪೂರ್ತಿ ಗೊಂತಿಲ್ಲದ್ರೂ ಮಹಾನ್ ಕವಿ ಹೇಳುವಷ್ಟಾದರೂ ನವಗೆಲ್ಲರಿಂಗೂ ಅರಡಿಗು. ಅದಾ, ನೆಗೆಗಾರಣ್ಣಂಗೆ ನೆಗೆ ನೆಗೆ ಬಪ್ಪಲೆ ಸುರುವಕ್ಕಿದಾ – ಅಪ್ಪಪ್ಪು ಎನಗೆ ಅವನ ಕೆಲವು ಶ್ಲೋಕಂಗೊ ಬಾಯಿಪಾಠ ಬತ್ತು ಹೇಳಿ.!

ಅಪ್ಪು., ಈ ಮಹಾಕವಿ, ಕಾಶೀ ನಗರ ಮಹಾರಾಜ ಬೋಜರಾಜನ (ಬೋಸ ಬಾವನ ಅಲ್ಲ!) ಆಸ್ಥಾನ ಕವಿ. ಮಹಾ ಮೇಧಾವಿ. ಅವನ ಬಗ್ಗೆ ಹೇಳಿದಷ್ಟೂ ಕಮ್ಮಿಯೇ. ನಿಂಗೊಗರಿಡಿವಷ್ಟೂ ಎನಗರಡಿಯ. ಬಿಡಿ. ಬೋಜರಾಯನ ಆಸ್ಥಾನಲ್ಲಿ ಹಲವು ಕವಿ, ಪಂಡಿತಂಗೊ ಇತ್ತಿದ್ದವು. ನಮ್ಮಲ್ಲಿ ಇಪ್ಪ ಹಾಂಗೆ ಕೆಲವು ಪೆದಂಬಂಗೊ, ಗರ್ವಿಗೊ ಅಲ್ಲಿಯೂ ಇತ್ತಿದ್ದವು, ಅಂಬಗಂಬಗ ಅಲ್ಲಿ ವಾದ, ಚರ್ಚೆ, ಗೋಷ್ಟಿ ನಡಗು , ರಾಜ ಸನ್ಮಾನ ಕೊಡುಗು ಇತ್ಯಾದಿ ನಾವು ಓದಿ ತಿಳುದ್ದದು ಅಲ್ಲದೋ. ಇರಲಿ ಚಿಂತಿಲ್ಲೆ.

ಇಂತಿರಲು ಒಂದಿನ ರಾಜ, ಈ ಮಹಾ ಮಹಾ ವಿದ್ವಾನ್ ಪಂಡಿತಂಗೊ ಇಪ್ಪ ರಾಜ° ಸಭೆಲಿ ಒಂದು ಸವಾಲು ಬಿಟ್ಟನಡ° – “ಆನು ಹೇಳುವ ಕ್ರಮಲ್ಲಿ ಪದ್ಯ ರಚಿಸಿದವಂಗೆ ವಿಶೇಷ ಸನ್ಮಾನ ಮಾಡುತ್ತೆ. ಮಹಾ ಕವಿ ಹೇಳಿ ಒಪ್ಪುತ್ತೆ”. ರಾಜ° ಸಭೆಲಿ ಸುತ್ತಲೂ ನೋಡಿದ°. ಎಲ್ಲೋರು ಇತ್ತಿದ್ದವು. ಒಬ್ಬ ಇನ್ನೊಬ್ಬನ ಮೋರೆ ನೋಡ್ಳೆ ಸುರುಮಾಡಿದವು. ಗಹಿ ಗಹಿಸಿ ನೆಗೆ ಮಾಡಿಯೊಂಡವಡಾ- ಈ ಪಡಪ್ಪೋಸಿ ರಾಜ° ಹೇಳುತ್ಸು ಇಷ್ಟೇಯೋ ಹೇಳಿ. ಅಂದರೂ ಪಕ್ಕನೆ ಉತ್ತರ ಹೇಳ್ಳೆ ಆರಿಂಗೂ ಎಡಿಗಾತಿಲ್ಲೆ. ಆದರೇ, ಕಾಳಿದಾಸ ಅಂದು ಸಭೆಲಿ ಗೈರು ಹಾಜರಿ. ರಾಜ° ಒಂದಿನ ಸಮಯಾವಕಾಶವನ್ನೂ ಕೊಟ್ಟ° ಎಲ್ಲೋರಿಂಗು. ಮರುದಿನ ಸಭೆ ಸೇರಿಯಪ್ಪಗಳೂ ಕಾಳಿದಾಸನ ರಜೆ ಎ ಕ್ಷ್ತ್ಟೆನ್ಶನ್ ಆಗಿತ್ತು. ರಾಜ° ಉತ್ತರಕ್ಕೆ ಮತ್ತೂ ಒಂದಿನ ಅವಕಾಶ ಕೊಟ್ಟನಡ. ಮರುದಿನ ಸಭೆ ಸೇರಿತ್ತು. ಎಲ್ಲೋರು ಉಪಸ್ಥಿತರಿತ್ತಿದ್ದವು. ಕಾಳಿದಾಸನೂ ಬಂದ°. ನೋಡಿರೇ ಎಲ್ಲೋರು ತಲೆ ತಗ್ಗಿಸಿ ಕೂದೊಂಡಿತ್ತಿದ್ದವು. ಕಾಳಿದಾಸ° ರಜೆಲಿ ಇತ್ತಿದ್ದವ° ಈಗಷ್ಟೇ ಬಂದದಿದಾ. ಅವಂಗೆ ಎಂತರ ಸಂಗತೀ ಹೇಳಿ ಅರ್ಥ ಆಗದ್ದೆ ರಾಜನ ಹತ್ರೆ ವಿಷಯ ಎಂತರ ಹೇಳಿ ಕೇಳಿದನಡ. ರಾಜ° ನಡದ ಕತೆ ಹೇಳಿದ. ಅಕೇರಿಯಾಣ ಸಾಲು ‘ಟಂಟಂ ಟಟಂಟಂ ಟಟಟಂಟ ಟಂಟಃ’ ಬಪ್ಪ ಬಪ್ಪ ಹಾಂಗೆ ಪದ್ಯ ರಚಿಸೆಕು ಹೇಳಿ ಸವಾಲು. ಬಾಕಿದ್ದ ಪಂಡಿತಂಗೊ ಉತ್ತರುಸಲೆ ಎಡಿಗಾಗದ್ದೆ ಕಾಳಿದಾಸನನ್ನೇ ನೋಡ್ಳೆ ಸುರುಮಾಡಿದವಯ್ಯ ಸಭೆಲಿ. ನಿಂಗೊಗೆ ಗೊಂತಿದ್ದನ್ನೇ ನಮ್ಮ ಜೆನ ಹೆಂಗಿಪ್ಪ ಕಿಲಾಡಿ. ತೆಗದು ಬಿಟ್ಟ ನೋಡಿ-

“ರಾಜಾಭಿಷೇಕೇ ಮದವಿಹ್ವಲಾಯಾಃ
ಹಸ್ತಾತ್ ಚ್ಯುತೋ ಹೇಮಘಟೋ ಯುವತ್ಯಾಃ |
ಸೋಪಾನಮಾರ್ಗೇಣ ಕರೋತಿ ಶಬ್ದಂ
ಟಂಟಂ ಟಟಂಟಂ ಟಟಟಂಟ ಟಂಟಃ” ||

ಯುವರಾಜನ ಪಟ್ಟಾಭಿಶೇಕ ಸುದ್ದಿ ಕೇಳಿದ ಅರಮನೆಲಿಪ್ಪ ಯುವತಿಯೋರ್ವಾಕಗೆ ಮದಬಂದು (ಎಂತಕೆ ಹೇಳಿ ಚೋದ್ಯ ಇಲ್ಲೇ ಆತೋ!) ಸೊಂಟಲ್ಲಿ ಸ್ವರ್ಣ ಕುಂಭ ಇರಿಸಿ ಕೆರೆಂದ ನೀರು ತೆಕ್ಕೊಂಡು ಸೇಳೆಮಾಡಿಗೊಂಡು ಮೆಟ್ಟಲೇರಿ ಬಪ್ಪಗ ಸೊಂಟಂದ ಕೊಡ ಜಾರಿ ಮೆಟ್ಟಿಲಿಂಗೆ ಬಿದ್ದು – ‘ಟಂಟಂ ಟಟಂಟಂ ಟಟಟಂಟ ಟಂಟಃ’ ಹೇಳಿ ಶಬ್ಧ ಆತು.

ಓಯಿ, ಹೇಂಗೆ ನಮ್ಮ ಮೂಪರು? ಇನ್ನು ಮಾತಿದ್ದೋ!!

ತೆ.ಕುಮಾರಣ್ಣಾ, ಒಂದಾರಿ ರಾಗ, ಸ್ವರ ಹಾಕಿ ಗಟ್ಟಿಗೆ ಓದಿ ನೋಡಿಕ್ಕಿ ಆತೋ.

ಟಂಟಂ ಟಟಂಟಂ ಟಟಟಂಟ ಟಂಟಃ, 5.0 out of 10 based on 3 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕವಿ ರತ್ನ ಕಾಳಿದಾಸ, ಹಾಸ್ಯ ರತ್ನ ತೆನಾಲಿ ರಾಮಕೃಷ್ಣ ಇವರ ಬಗ್ಗೆ ಕೇಳಿದಷ್ಟೂ ಮತ್ತೆ ಮತ್ತೆ ಕೇಳೆಕ್ಕು ಹೇಳುವ ಭಾವನೆ ಬತ್ತು.
  ಒಂದೊಳ್ಳೆ ಘಟನೆಯ ನಿರೂಪಿಸಿದ್ದಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: +1 (from 1 vote)
 2. ಸುವರ್ಣಿನೀ ಕೊಣಲೆ
  Suvarnini Konale

  ಸಣ್ಣಾದಿಪ್ಪಗ ಕೇಳಿದ ಕಥೆ ಇದು, ಮತ್ತೆ ನೆಂಪುಮಾಡಿಗೊಂಬಲೆ ಸಹಾಯ ಮಾಡಿತ್ತು ನಿಂಗಳ ಶುದ್ದಿ :) ಇನ್ನೊಂದೆರಡು ಕಥೆ ನೆಂಪಾವ್ತು ಕಾಳಿದಾಸನ ಬಗ್ಗೆ, “ಕ ಖ ಗ ಘ” ಹೇಳಿ ಅಕೇರಿಯಾಣ ಸಾಲು ಬಪ್ಪ ಹಾಂಗೆ ಭೋಜರಾಜ ಕೊಟ್ಟ ಪ್ರಶ್ನೆಗೆ ಕಾಳಿದಾಸ ಹೇಳಿದ ಸಾಲುಗಳೂ ಲಾಯ್ಕಿದ್ದು, ಬುದ್ಧಿವಂತಿಕೆ ಕಾಳಿದಾಸಂದು :)

  [Reply]

  ವೇಣೂರಣ್ಣ

  ವೇಣೂರಣ್ಣ Reply:

  ಸುವರ್ಣಿನಿ ಅಕ್ಕಾ,

  ಅದು ಭೋಜರಾಜ ಸಭೆಲಿ “ಕ ಖ ಗ ಘ” ಬಪ್ಪ ಹಾಂಗೆ ಶ್ಲೋಕವ ರಚಿಸಿ ಹೇಳಿ ಸವಾಲು ಹಾಕಿಯಪ್ಪಗ ಕಾಳಿದಾಸ ರಚಿಸಿದ ಶ್ಲೋಕ ಹೇಳಿ ಹೇಳ್ತವು.
  ಅದು ಹೀಂಗೆ ಇದ್ದು

  ಕಾ ತ್ವಂ ಬಾಲೆ? ಕಾಂಚನಮಾಲಾ
  ಕಸ್ಯಾ ಪುತ್ರಿ ? ಕನಕಲತಾಯ
  ಹಸ್ತೇ ಕಿಂತೇ? ತಾಲೀಪತ್ರಂ
  ಕಾವಾ ರೇಖಾ ? ಕ ಖ ಗ ಘ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಇದರೊಟ್ಟಿಂಗೆ ಕ ಖ ಗ ಘ ಸ್ವಾರಸ್ಯವ ನೆನಪಿಸಿ ಹಂಚಿದ್ದಕ್ಕೆ ಸು.ಅಕ್ಕಂಗೂ , ವೇಣೂರಣ್ಣಂಗೂ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಕತೆ(ಅಲ್ಲ ಇತಿಹಾಸ) ಲಾಯಿಕ ಆಯಿದು.. ಅಷ್ಟಾವಧಾನಿ(ಯಾರು ಹೇಳಿ ಗೊತ್ತಿಲ್ಲೆ) ಇಡ್ಲಿ, ಸಾಂಬಾರು, ವಡೆ ಮತ್ತು ಚಟ್ನಿ ಬಪ್ಪ ಹಾಂಗೆ ಶಿವ ಸ್ತುತಿ ರಚನೆ ಮಾಡಿದ್ದು ನೆನಪಾತು.

  ಹೇ ಸಾಂಬಾರುದ್ರ,
  ಚಟಚಟ ನಿಟಿಲ ನೇತ್ರನೇ,
  ಈ ಜಗತ್ತಿನೆಲ್ಲೆಡೆ ನೀನಿರುವಡೆ,
  ನಾ ಕಾಲೆಲ್ಲಿ ಇಡ್ಲಿ?

  [Reply]

  ಪುಟ್ಟಬಾವ°

  ಪುಟ್ಟಭಾವ ಹಾಲುಮಜಲು Reply:

  ಇದು ಸೂಪರ್ ಆಯ್ದು,…..

  [Reply]

  VA:F [1.9.22_1171]
  Rating: 0 (from 0 votes)
  ಹಳೆಮನೆ ಅಣ್ಣ

  ಹಳೆಮನೆ ಅಣ್ಣ Reply:

  ಅಷ್ಟಾವಧಾನಿ ಆರ್. ಗಣೇಶನೇ. ಬೇರೆ ಆರೂ ಅಲ್ಲ.

  [Reply]

  ಓಣಿಯಡ್ಕ ಕಿಟ್ಟಣ್ಣ

  ಓಣಿಯಡ್ಕ ಕಿಟ್ಟಣ್ಣ Reply:

  ಆದಿಕ್ಕು.. ಅವು ಶತಾವಧಾನಿಗೊ. ಹಾಂಗಾಗಿ ಸ್ವಲ್ಪ ಸಂಶಯ..

  [Reply]

  VN:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಕಾಳಿದಾಸನ ಜಾಣ್ಮೆಯ ಕಥೆ, ಚೆನ್ನೈ ಭಾವನ ಹಾಸ್ಯ ಶೈಲಿ ಒಟ್ಟಿಂಗೆ ಮ್ಶೇಳೈಸಿ ಅದ್ಭುತವಾಗಿ ಬಂತು. ಕೊಡಪ್ಪನ ಉರುಳಿದ ಶಬ್ದವನ್ನೇ ಶ್ಲೋಕಕ್ಕೆ ಹೊಂದುಸಿದ ಕಾಳಿದಾಸನ ಬುದ್ದಿವಂತಿಕೆಯ ಕಥೆಗೊ ನೆಂಪು ಮಾಡಿದಷ್ಟು ಮತ್ತೂ ಚೆಂದ. ಒಪ್ಪದ ರೂಪಲ್ಲಿ ಒಳ್ಳೊಳ್ಳೆ ಶ್ಲೋಕಂಗೊ, ಪದ್ಯಂಗೊ ಹೆರ ಬತ್ತಾ ಇದ್ದು. ಕಿಟ್ಟಣ್ಣನ ಪದ್ಯ ಎನಗೆ ಹೊಸತ್ತಾಗಿ ಕಂಡತ್ತು. ಶಿವಸ್ತುತಿ ಲಾಯಕಾಯಿದು. ವೆಂಕಟ ರಾಜ ಪುಣಿಂಚಿತ್ತಾಯ ಬರದ ಹಲವು ಕಾಯಿ ಪಲ್ಲೆಗಳ ಸೇರುಸಿದ ಹೀಂಗೇ ಇಪ್ಪ ಒಂದು ಪದ್ಯ ಇದ್ದು. ಸರೀ ಎನಗೆ ನೆಂಪು ಬತ್ತಿಲ್ಲೆ. ಕಳ್ಳ ಕಾಕರು ನುಗ್ಗೆ ಕಾಯಿ, ಸೋರೆ ಕಾಯಿ …. ಭಾವಯ್ಯ, ನೆಂಪು ಮಾಡಿದ್ದಕ್ಕೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಭಾರೀ ಲಾಯಿಕಾಯಿದು ಭಾವ.

  [Reply]

  VN:F [1.9.22_1171]
  Rating: 0 (from 0 votes)
 6. ಮಂಗ್ಳೂರ ಮಾಣಿ

  A1

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಶರ್ಮಪ್ಪಚ್ಚಿ, ಕಿಟ್ಟಣ್ಣ, ಬೊಳುಂಬು ಮಾವ, ಪುಟ್ಟ ಭಾವ, ತೆ.ಕು., ಮಂಗ್ಳೂರ ಭಾವಂಗೂ ಧನ್ಯವಾದ. ಶುದ್ದಿಯ ಅನುಭವಿಸಿ ಓದಿದಿ ಹೇಳಿ ಸಂತೋಷ ಆತಿದಾ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  :)

  [Reply]

  VA:F [1.9.22_1171]
  Rating: 0 (from 0 votes)
 7. ಹಳೆಮನೆ ಅಣ್ಣ

  ಟಂಟಂಟ ಟಂಟಂ….
  ಇದರ ೬ನೇ ಕ್ಲಾಸಿಲ್ಲಿ ಸಂಸ್ಕೃತ ಕಲುಶುತ್ತ ಪಾರ್ವತಿ ಟೀಚರ್ ರಾಗವಾಗಿ ಹೇಳಿ ಕೊಟ್ಟದು ನೆನಪಾತು.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಎನಗೂ ಇದರ ಒಂದಿಕ್ಕೆ ಒಬ್ಬ ಭಾಷಣಲ್ಲಿ ಅದರ ರಾಗಲ್ಲಿ ಹೇಳುವದರ ಕೇಳಿ ಬರವಲೆ ಎಳಕ್ಕ ಬಂದದು. ರಾಗಲ್ಲಿ ಹೇಳಿರೇ ಸ್ವಾರಸ್ಯ ಇಪ್ಪದು ಇದರಲ್ಲಿ ಅಪ್ಪೋ ಹಳೆಮನೆ ಅಣ್ಣಾ. ಒಪ್ಪಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 8. ಗಣೇಶ ಪೆರ್ವ
  ಗಣೇಶ

  ಲಾಯ್ಕಿದ್ದು ಚೆನ್ನೈ ಭಾವಾ.. ಒಪ್ಪ೦ಗೊ. ಆದರೆ ಆನು ೯ನೆ ಕ್ಲಾಸಿಲ್ಲಿ ಕಲಿತ್ತಾ ಇಪ್ಪಗ ಇದರ ಕಲ್ತದು ಚೂರು ವ್ಯತ್ಯಾಸ ಇದ್ದತ್ತೋ ಹೇಳಿ ಕಾಣ್ತು..
  ರಾಜಾಭಿಷೇಕೇ ಮದವಿಹ್ವಲಾಯಾಃ
  ಹಸ್ತಾಚ್ಯುತೋ ಹೇಮಘಟಸ್ತರುಣ್ಯಾಃ
  ಸೋಪಾನಮಾಸಾದ್ಯ ಕರೋತಿ ಶಬ್ದ೦
  ಟ೦ಟ೦ಟಟ೦ಟ೦ ಟಟಟ೦ಟಟ೦ಟ೦.
  ಹೇಳಿ ಎನ್ನ ನೆ೦ಪು..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಂದ್ರಾಣ ಶ್ಲೋಕ ಈಗ ಬದಲಿಸಿ ಬಿಟ್ಟವೋ ಹೇಂಗೆ ?!
  ಮುಖೋದ್ಗತ ಪಾಠಂಗೊ ಅಲ್ಲನ್ನೇ ಗಣೇಶಣ್ಣಾ ಇದೆಲ್ಲಾ. ಶಂಕರಾಚಾರ್ಯರ ಶ್ಲೋಕಂಗಳೇ, ಭಗವದ್ಗೀತೆ , ವೇದ ಮಂತ್ರಂಗಳೇ ಪುಸ್ತಕಂದ ಪುಸ್ತಕಕ್ಕೆ ಕೆಲವು ಶಬ್ಧಂಗೊ ಪಾಠಾಂತರ ವ್ಯತ್ಯಾಸ ಇರ್ತಲ್ಲದೋ. ಮೂಲಕಥೆ ಚ್ಯುತಿ ಆಗದ್ದೆ, ಶ್ಲೋಕವೂ ವಿವರಣೆಯೂ ಸರಿ ಇದ್ದೋ . ಅದು ಸಾಕನ್ನೇ.

  ನಿಂಗೊ ಹೇಳಿದಾಂಗೆ , ‘ಹಸ್ತಾಚ್ಯುತೋ ಹೇಮಘಟಸ್ತರುಣ್ಯಾಃ ಸೋಪಾನಮಾಸಾದ್ಯ ಕರೋತಿ ಶಬ್ದ೦ ಟ೦ಟ೦ಟಟ೦ಟ೦ ಟಟಟ೦ಟಟ೦ಟ೦’ ಆದರೆ, ಅರ್ಥ ವಿವರಣೆ ಬೇರೆಯೇ ರೀತಿ ಕೊಡೆಡದೋ?! ತರುಣ್ಯಾಃ ಹಸ್ತಾತ್ ಚ್ಯುತಃ ಹೇಮ ಘಟಃ , ಸೋಪಾನೇ ಆಸಾದ್ಯ ಶಬ್ದಂ ಕರೋತಿ । ಈಗ ಕಃ / ಕಾ ಶಬ್ದಂ ಕರೋತಿ ಹೇಳಿ ಪ್ರಶ್ನೆ ಬತ್ತು, ತರುಣ್ಯಾಃ ಘಟೇನ ಶಬ್ದಂ ಹೇಳಿ ಉತ್ತರಿಸೆಕ್ಕಾವ್ತು. ಹಸ್ತಾತ್ ಚ್ಯುತಃ ಹೇಮಘಟಃ ಕಿಮರ್ಥಂ ಸೋಪಾನೇ ಆಸಾದಯತಿ ಹೇಳಿಯೂ ಚೋದ್ಯ ಬತ್ತು. ಇದಕ್ಕಿಂತ ಕೊಡ ಜಾರಿ ಮೆಟ್ಟಿಲಿಂಗೆ ಬಿದ್ದಪ್ಪಗ – ‘ಟಂಟಂ ಟಟಂಟಂ ಟಟಟಂಟ ಟಂಟಃ’ ಶಬ್ಧ ಆತು ಹೇಳಿ ಹೇಳಿರೇ ಅಲ್ಲದೋ ಚಂದ. ಬೇಜಾರಿಲ್ಲೆನ್ನೆ!

  [Reply]

  ಗಣೇಶ ಪೆರ್ವ

  ಗಣೇಶ Reply:

  ಚೆ ಚೆ!! ಎ೦ತ ಬೇಜಾರು ಚೆನ್ನೈ ಭಾವಾ.. ಇದಕ್ಕೆಲ್ಲ ಬೇಜಾರು ಮಾಡಿರೆ ಮತ್ತೆ ಬಾಕಿಪ್ಪದಕ್ಕೆ ಎಲ್ಲ ಎ೦ತ ಮಾಡೆಕು!!!
  ಆನು ಮೇಲೆ ಹೇಳಿದ್ದದು ತಪ್ಪಾಗಿಪ್ಪಲೂ ಸಾಕು.. ೧೬ ವರ್ಷ ಮೊದಲು ಕಲ್ತದರ ನೆ೦ಪು ಬ೦ದ ಹಾ೦ಗೆ ಬರದ್ದಲ್ಲದೋ.. ಎ೦ತದೇ ಆದರೂ ಒಳ್ಳೇ ಶ್ಲೋಕ..

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  :) അദ് ശെരി..

  ಗಣೇಶ ಪೆರ್ವ

  ಗಣೇಶ Reply:

  !!!!!!!????? ഇത് കൊള്ളാമല്ലോ!!!???
  ಆದರುದೆ ಇಲ್ಲಿ ಬೇಡ ಹೇಳಿ ಎನ್ನ ಅಭಿಪ್ರಾಯ ಮ೦ಗ್ಳೂರಣ್ಣಾ.. ಅಲ್ಲದ್ರೆ ಗುರಿಕ್ಕಾರ್ರು ಬಡಿಗೆ ತೆಕ್ಕೊ೦ಡು ಬಕ್ಕು.. ಹಾ… 😉

  ಮುಳಿಯ ಭಾವ

  ರಘು ಮುಳಿಯ Reply:

  ಓಯಿ, ಗಣೇಶ ಭಾವನೂ ಮ೦ಗ್ಳೂರು ಮಾಣಿಯೂ ಇದೆ೦ತರ ಬಯ್ಕೊ೦ಡದೋ ? ಟ೦ಟ೦ ಶ್ಲೋಕಕ್ಕೆ ಬಡಿಗೆ ಎ೦ತಕೆ??

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಹೆ ಹೆ ಹೆ ಹೆ :):):):)

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುನೆಗೆಗಾರ°ಅಜ್ಜಕಾನ ಭಾವಸುವರ್ಣಿನೀ ಕೊಣಲೆಪುಣಚ ಡಾಕ್ಟ್ರುಪೆರ್ಲದಣ್ಣಅನುಶ್ರೀ ಬಂಡಾಡಿಸಂಪಾದಕ°ವಿದ್ವಾನಣ್ಣಪವನಜಮಾವಹಳೆಮನೆ ಅಣ್ಣಮಂಗ್ಳೂರ ಮಾಣಿಅಕ್ಷರದಣ್ಣಕೊಳಚ್ಚಿಪ್ಪು ಬಾವವಾಣಿ ಚಿಕ್ಕಮ್ಮಪಟಿಕಲ್ಲಪ್ಪಚ್ಚಿಜಯಶ್ರೀ ನೀರಮೂಲೆಚೆನ್ನೈ ಬಾವ°ಅಡ್ಕತ್ತಿಮಾರುಮಾವ°ಶುದ್ದಿಕ್ಕಾರ°ಜಯಗೌರಿ ಅಕ್ಕ°ತೆಕ್ಕುಂಜ ಕುಮಾರ ಮಾವ°ಪುತ್ತೂರುಬಾವಯೇನಂಕೂಡ್ಳು ಅಣ್ಣಪೆಂಗಣ್ಣ°ದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ