“ಒಂದುಕಡುದರೆ ಮತ್ತೆರಡು ನೆಡಿ” (ಮುಜುಂಗಾವಿಲ್ಲಿ ವನಜೀವನ ಯಜ್ಞ)

July 2, 2014 ರ 9:15 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

‘’ಒಂದು ಕಡುದರೆ ಮತ್ತೆರಡು ನೆಡಿ’’—(ಮುಜುಂಗಾವಿಲ್ಲಿ ವನಜೀವನ ಯಜ್ಞ)

ನಮ್ಮ ಉಸಿರಿಪ್ಪದೇ ಹಸಿರಿಂದಾಗಿ. ಕಾಡು ಇಲ್ಲದ್ದಲ್ಲಿ ನಾಡೂ ಇಲ್ಲೆ. ಮುಜುಂಗಾವು ವಿದ್ಯಾಪೀಠ  ಜನ್ಮ ತಾಳಿದಲ್ಲಿಂದ ಶ್ರೀಗುರುಗಳ ಆದೇಶಾನುಸಾರ ವನಜೀವನ ಯಜ್ಞವೂ ಗರುಗಟ್ಳೆ(ನಿಗದಿತ)ಯಾಗಿ ನೆಡದು ಬತ್ತಾಇದ್ದು.ಪ್ರತಿ ವರ್ಷ ಜೂನ್ ತಿಂಗಳಿಲ್ಲಿ ಅಪ್ಪ ಈ ಕಾರ್ಯಕ್ರಮಕ್ಕೆ, ಮುಖ್ಯ ಅಭ್ಯಾಗತರಾಗಿ ಕಾಡು ಸಂರಕ್ಷಣಾಧಿಕಾರಿಗಳ ದೆನಿಗೇಳುವ ಕ್ರಮ.  ಈ ಸಂದರ್ಭಲ್ಲಿ ಶಾಲಾ ಮಕ್ಕೊಗೂ ಸಿಬ್ಬಂದಿ ವರ್ಗಕ್ಕೂ ಗಿಡಂಗಳ ಕೊಡುತ್ತಾ ಇದ್ದು. ಈ ಗೆಡುಗೊ ಒಂದಷ್ಟು ಪಂಚಾಯತು ವತಿಂದ ಬತ್ತಾ ಇದ್ದತ್ತು. ಆದರೆ  ಇವಾರಿ ಕರ್ನಾಟಕ ಕಾಡು ಸಂರಕ್ಷಣಾ ಇಲಾಖೆ, ಪಂಜಿಕಲ್ಲಿಂದ ಗೆಡುಗೊ ಬಂತು.ಇಮಾಮಿ ಕಂಪೆನಿಯ  ಗ್ರಾಮಾಭಿವೃದ್ಧಿ ಯೋಜನೆ ವತಿಂದ ಇದು ವಿತರಣೆ ಆತು.ತೆಂಗಿನ ಸೆಸಿ ನಾಲ್ಕು, ಎಡನಾಡು ವಲಯದ ಗುರಿಕ್ಕಾರರಾದ ಕಾವೇರಿಕಾನದ ಶ್ರೀಯುತ ಶಂಕರಭಟ್ಟರ ಕೊಡುಗೆಯಾದರೆ; ಬೇರೆ ಕೆಲವು ಗಿಡಂಗಳ ತಂತ್ರಿಗಳಾದ ಮುಜುಂಗಾವಿನ ಶ್ರೀಯುತ  ಎ.ಪಿ. ಜನಾರ್ಧನ ಕೊಟ್ಟವು.ಒಟ್ಟಾರೆಯಾಗಿ  150ಕ್ಕೂ ಮೇಲ್ಪಟ್ಟು ಗೆಡುಗೊ ಬಂದಿತ್ತಾಗಿ ನೆಡ್ಳೆ ಆಸಕ್ತಿ ಇಪ್ಪ ಎಲ್ಲ ಮಕ್ಕೊಗೂ ವಿತರಣೆ ಮಾಡಿ ಆತು.ಈ  ವರ್ಷ ಈ ಕಾರ್ಯಕ್ರಮ ಮೊನ್ನೆ 28/6/2014  ರಂದು ಕಳಾತು.ಇದಕ್ಕೆ ಅಭ್ಯಾಗತರಾಗಿ,ವಿಶ್ರಾಂತ ಅಧ್ಯಾಪಕ ಶ್ರೀಯುತ ಬಾಲಕೃಷ್ಣಶರ್ಮ,ಸೇಡಿಗುಳಿಯವು ಬಂದು ಮಕ್ಕೊಗೆ; ’ವನಜೀವನ ಯಜ್ಞ’ ಹೇಳಿರೆಂತರ?ವನಸ್ಪತಿಂದಪ್ಪ ಉಪಕಾರ, ಪರಿಣಾಮವಾಗಿ ಮಳೆ-ಬೆಳಗೆ ಅಪ್ಪ ಪ್ರಯೋಜನ,ಮರಗಳಿಂದ ವಾತಾವರಣಕ್ಕಪ್ಪ,ಸತ್ಪರಿಣಾಮ, ಹೀಂಗಿದ್ದರವಿವರಣೆಕೊಟ್ಟು ಮಾತಾಡಿದೊವು. ವೇದಿಕೆಲಿದ್ದ ,ಜ್ಯೋತಿಷಿಗಳಾದ ಚಂದ್ರಶೇಖರ ಭಟ್ ಮಡ್ವ, ಶ್ರೀಯುತಶ್ಯಾಮರಾಜದೊಡ್ಡಮಾಣಿ,  ಮುಖ್ಯೋಪಾಧ್ಯಾಯರಾದ  ಶ್ರೀಯುತ ಶ್ಯಾಂಭಟ್  ದರ್ಭೆ ಮಾರ್ಗ ಇವೆಲ್ಲ ಈ ವಿಷಯಲ್ಲಿ ಮಾತಾಡಿದೊವು.

ವಿದ್ಯಾರ್ಥಿ ಕೌಶಿಕ್ ಪ್ರಾರ್ಥನೆ, ಸ್ಮಿತಾ ಮಾತಾಶ್ರೀ  ಸ್ವಾಗತ,ಶ್ರೀಮತಿ ಗಾಯತ್ರಿ ಮಾತಾಶ್ರೀ ನಿರೂಪಣೆ, ವಿದ್ಯಾಮಾತಾಶ್ರೀ ಧನ್ಯವಾದ ಮಾಡಿ, ವೇದಿಕೆಯ ಕಾರ್ಯಕ್ರಮ ಮುಗುಶಿಕ್ಕಿ , ಶಾಲೆಯ ಆವರಣಲ್ಲಿ ;ತೆಂಗಿನಗೆಡು,ನೆಲ್ಲಿ. ಸಂಪಗೆ, ತೇಕ ಮೊದಲಾದ ಸೆಸಿಗಳನ್ನೂ ನೆಡುವದರೊಟ್ಟಿಂಗೆ  ’ವನಜೀವನ ಯಜ್ಞ’  ಅಂದಿಂಗೆ ಸಂಪನ್ನ ಆತು.

~~~***~~~

mujungavu vanajeevana gida neduvadumujungavu vanajeevana sabhaa

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹರೇ ರಾಮ

  [Reply]

  VN:F [1.9.22_1171]
  Rating: 0 (from 0 votes)
 2. ಸುಭಗ

  ಅನುಸರಣೀಯ ಕಾರ್ಯಕ್ರಮ.
  ಈ ಗೆಡುಗಳ ನೆಟ್ಟ ಪುಟ್ಟು ಮಕ್ಕಳೂ ಗೆಡುಗಳೊಟ್ಟಿಂಗೇ ಬೆಳದು ಶ್ರೀಗುರುಗಳ ಸಂಕಲ್ಪವ ಸಾಕಾರ ಮಾಡಲಿ ಹೇಳಿ ಹಾರೈಕೆ.
  ಕಾರ್ಯಕ್ರಮದ ಸಮಗ್ರ ವರದಿ ಕೊಟ್ಟ ವಿಜಯತ್ತೆಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಶ್ಯಾಂಭಟ್ ದರ್ಬೆಮಾರ್ಗ.

  ವಿಜಯತ್ತಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 4. Laxmisha Shankaramoole

  ಫಸ್ಟಾಯಿದು ದೊಡ್ಡತ್ತೆ. ಈಗ ಮುಜುಂಗಾವು ವಿದ್ಯಾಪೀಠ ಒಳ್ಳೆ ಇಂಪ್ರ್ವೂವಾಯಿದು. ಶ್ರೀಗುರು ಅನುಗ್ರಹಂದ ವನಜೀವನ ಯಜ್ಞವೂ ಶಾಲೆಯೂ ಅಭಿವೃದ್ಧಿಯಾಗಿ ಬೆಳಗಿ ಬರಲಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣಯೇನಂಕೂಡ್ಳು ಅಣ್ಣಮಂಗ್ಳೂರ ಮಾಣಿಪೆರ್ಲದಣ್ಣಅನಿತಾ ನರೇಶ್, ಮಂಚಿಉಡುಪುಮೂಲೆ ಅಪ್ಪಚ್ಚಿವಿಜಯತ್ತೆದೊಡ್ಡಮಾವ°ಮುಳಿಯ ಭಾವಶೇಡಿಗುಮ್ಮೆ ಪುಳ್ಳಿಚುಬ್ಬಣ್ಣಜಯಗೌರಿ ಅಕ್ಕ°ಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ಅಕ್ಷರ°ವಾಣಿ ಚಿಕ್ಕಮ್ಮಕಾವಿನಮೂಲೆ ಮಾಣಿಕಜೆವಸಂತ°ದೀಪಿಕಾಗೋಪಾಲಣ್ಣಶೀಲಾಲಕ್ಷ್ಮೀ ಕಾಸರಗೋಡುರಾಜಣ್ಣಕೊಳಚ್ಚಿಪ್ಪು ಬಾವವಸಂತರಾಜ್ ಹಳೆಮನೆವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ