ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017

ಅರ್ಹ ವಿದ್ಯಾರ್ಥಿಗಳ ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವದು, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಕಾರ್ಯಯೋಜನೆಗಳಲ್ಲಿ ಒಂದು.
ಪ್ರತಿಷ್ಠಾನ ಸುರುವಾದ ಲಾಗಾಯ್ತು (2013 ರಿಂದ) ಪ್ರತಿವರ್ಷವೂ ಆರ್ಥಿಕವಾಗಿ ಹಿಂದುಳಿದ ಹಾಂಗೂ ಕಲಿವಲೆ ಹುಷಾರಿಪ್ಪ ಮಕ್ಕಳ ಗುರುತಿಸಿ ಈ ಸಹಾಯವ ಮಾಡ್ತಾ ಇದ್ದು.
ಇದಲ್ಲದ್ದೆ, ನಾವು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಒಬ್ಬ ವಿದ್ಯಾರ್ಥಿಯ ಹಾಂಗೂ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಒಬ್ಬ ವಿದ್ಯಾರ್ಥಿಯ ಶಾಲಾ ಶುಲ್ಕವನ್ನೂ ಭರಿಸುತ್ತಾ ಇದ್ದು.

ಈ ವರ್ಷದ ವಿದ್ಯಾ ಸಹಾಯ ವಿತರಣೆ ಕಾರ್ಯಕ್ರಮವ, ಮಂಗಳೂರಿನ ಬೋಂದೆಲ್ ಲ್ಲಿ ಇಪ್ಪ ಮುಳಿಯಾಂಗಣಲ್ಲಿ 14/10/2017 ರಂದು ನೆರವೇರಿಸಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಮುಳಿಯ ಕೇಶವಯ್ಯ ಮಾವ ಮತ್ತೆ ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸದಾಶಿವ ರಾವ್ ಇವರ ನಾವು ಆಹ್ವಾನಿಸಿತ್ತು.

ವಿದ್ಯಾ ಸಹಾಯ ವಿತರಣೆ ಮಾಡಿ ಮಾತಾಡಿದ ಶ್ರೀ ಮುಳಿಯ ಕೇಶವಯ್ಯ ಮಾವ, ಮಕ್ಕೊ ಈ ಸಹಾಯವ ಒಳ್ಳೆ ರೀತಿಲಿ ವಿನಿಯೋಗ ಮಾಡಿ, ಸತ್ಪ್ರಜೆಗೊ ಆಯೆಕ್ಕು, ಕೆರೆಯ ನೀರನು ಕೆರೆಗೆ ಚೆಲ್ಲಿ ಹೇಳ್ತ ಹಾಂಗೆ ನಾವು ಸಮಾಜಂದ ಪಡಕ್ಕೊಂಡದರ ಒಂದು ಪಾಲಿನ ಸಮಾಜಕ್ಕೆ ವಾಪಾಸು ಕೊಡುವ ಕರ್ತವ್ಯ ನವಗೆ ಇದ್ದು. ವಿದ್ಯಾಭ್ಯಾಸ ಮುಗುದ ನಂತರ ನಿಂಗೊ ಕೂಡಾ ಹೀಂಗೆ ಅರ್ಹ ವಿದ್ಯಾರ್ಥಿಗಳ ಗುರುತಿಸಿ ಅವಕ್ಕೆ ಸಹಾಯ ಮಾಡಿದರೆ, ಅದುವೇ ಸಮಾಜ ಸೇವೆ ಆವ್ತು ಹೇಳಿ ಮಕ್ಕೊಗೆ ಹಿತವಚನ ನೀಡಿದವು. ನಂತರ ಮಾತಾಡಿದ ಶ್ರೀ ಅರೆಹೊಳೆ ಸದಾಶಿವ ರಾವ್, ಒಪ್ಪಣ್ಣ ನೆರೆಕರೆ ಈ ರೀತಿ ಮಕ್ಕಳ ಗುರುತಿಸಿ ಪ್ರೋತ್ಸಾಹ ಕೊಡ್ತ ಒಳ್ಳೆ ಕಾರ್ಯ ಮಾಡ್ತಾ ಇದ್ದು, ಅವರ ಇದಕ್ಕಾಗಿ ಅಭಿನಂದಿಸುತ್ತೆ. ಸಮಾಜಮುಖಿ ಕಾರ್ಯಕ್ರಮಂಗೊ ಇನ್ನು ಮುಂದೆಯೂ ಹೀಂಗೇ ನಿಂಗಳಿಂದ ಮುಂದುವರಿಯಲಿ ಹೇಳಿ ಹಾರೈಸಿದವು.

ಕಾರ್ಯಕ್ರಮದ ಸುರುವಿಂಗೆ, ವಿದ್ಯಾನಿಧಿ ಸಂಚಾಲಕ ಶ್ರೀಕೃಷ್ಣ ಶರ್ಮ ಹಳೆಮನೆ, ಅತಿಥಿಗಳ ಸಭೆಗೆ ಪರಿಚಯಿಸಿ ಸ್ವಾಗತಿಸಿದವು.

ಸಭೆಲಿ ಹಾಜರಿದ್ದ ಮುಖ್ಯ ಅತಿಥಿಗಳ,  ವಿದ್ಯಾರ್ಥಿಗಳ ಮತ್ತೆ ಅವರ ಹೆತ್ತವರ, ಕಾರ್ಯಕ್ರಮಕ್ಕೆ ವೇದಿಕೆ ಅನುಕೂಲ ಮಾಡಿಕೊಟ್ಟ ಮುಳಿಯ ಕುಟುಂಬಸ್ಥರ ಹಾಂಗೂ ಲಘು ಉಪಾಹಾರದ ವ್ಯವಸ್ಥೆ ಮಾಡಿದ ಅರೆಹೊಳೆ ಸದಾಶಿವ ರಾವ್ ಇವಕ್ಕೆ  ಧನ್ಯವಾದ ಸಮರ್ಪಿಸಿ, ಸಭೆ ಮುಕ್ತಾಯಗೊಂಡತ್ತು.

 

ಕಾರ್ಯಕ್ರಮದ ಪಟಂಗೊ ಇಲ್ಲಿದ್ದು.

 

 

 

ಶರ್ಮಪ್ಪಚ್ಚಿ

   

You may also like...

4 Responses

  1. ಚೆನ್ನೈ ಬಾವ says:

    ಬೈಲ ಆರ್ಥಿಕ ಸಂಪತ್ತು ಇಲ್ಲದ್ದರೂ ಬೈಲ ನೆರೆಕರೆ ಬಂಧುಗಳ ಸಕಾಯ, ಹನಿಗೂಡಿ ಹಳ್ಳ ಹೇಳ್ತಾಂಗೆ ಒಟ್ಟುಗೂಡಿ ಮಾಡುವ ಸಾಮಾಜಿಕ ಕೆಲಸಂಗೊಕ್ಕೆ ಹರೇ ರಾಮ. ಅವರವರ ವೈಯಕ್ತಿಕ ಕೆಲಸಂಗಳೆಡೆಲಿ ಇದನ್ನೂ ಮುತುವರ್ಜಿವಹಿಸಿ ಆಸಕ್ತಿಂದ ಮುಂದುವರ್ಸಿಗೊಂಡು ಹೋಪ ಅಪ್ಪಚ್ಚಿಯ ಟೀಮಿಂಗೆ ಹರೇ ರಾಮ. ನಮೋ ನಮಃ

  2. ಬೊಳುಂಬು ಗೋಪಾಲ says:

    ಹರೇ ರಾಮ

  3. Shyamanna says:

    ಹರೇರಾಮ… ಒಳ್ಳೇದಾಗಲಿ.

  4. ಸಮಾಜ ಮುಖಿಯಾಗಿ ಕೆಲವು ಒಳ್ಳೊಳ್ಳೆ ಕೆಲಸ ಮಾಡ್ತಾ ಬಪ್ಪ ಒಪ್ಪಣ್ಣ ನೆರೆಕರೆ ಪ್ರತಿಷ್ಹಾನವ ಮೆಚ್ಚೆಕ್ಕು. ಹಾಂಗೇ( ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠ ಹೇಳಿ ಆಯೆಕ್ಕು. ಶಾರದಾ ವಿದ್ಯಾಲಯ ಹೇಳಿ ಇದ್ದು ಇದಲ್ಲಿ.)ಮುಜುಂಗಾವು ವಿದ್ಯಾಪೀಠಲ್ಲಿ ಒಬ್ಬಂಗೆ ಕೊಡ್ತಾ ಬಪ್ಪ ಈ ಬಯಲಿನ ಆಡಳಿತ ಕಮಿಟಿಗೆ ಅನಂತಾನಂತ ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *