ಗ್ರೇಶಿದ್ದರಲ್ಲಿ ಆದ ತಪ್ಪು

June 27, 2011 ರ 10:57 pmಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತಿಮ್ಮಣ್ಣ ಸಣ್ಣ ಪ್ರಾಯದವ.

ಅವಂಗೆ ನಾಲ್ಕು ಜನ ತಮ್ಮಂದಿರು.

ಅವನ ಅಪ್ಪ ದೊಡ್ಡ ಆಸ್ತಿವಂತ.ಆಸ್ತಿ ಇಪ್ಪವಕ್ಕೆ ವಿರೋಧಿಗಳೂ ಹೆಚ್ಚು.ಕೆಲವು ಜನ ಅವನ ಕೆಮಿ ತುಂಬಿಸಿದವು.”ನೋಡು ತಿಮ್ಮಣ್ಣ,ನಿನ್ನ ತಮ್ಮಂದಿರು ಸಣ್ಣವು-ನೀನು ಈಗ ಕೆಲಸ ಮಾಡೆಕ್ಕು,ತಮ್ಮಂದಿರು ಕಲ್ತು ಮೇಲೆ  ಹೋಕು,ಮತ್ತೆ ನಿನಗೆ ಎಂತ ಸಿಕ್ಕುಗು ಮಣ್ಣಾಂಗಟ್ಟಿ?ನೀನು ಮಣ್ಣೇ ತಿನ್ನೆಕ್ಕಷ್ಟೆ.”

“ಆನು ಎಂತ ಮಾಡೆಕ್ಕು?”ತಿಮ್ಮಣ್ಣ ಕೇಳಿದ.

“ನೀನು ಸೀದಾ ಸೀದಾ ಕೇಳು ಅಪ್ಪನ ಹತ್ತರೆ-ನಿನ್ನ ಪಾಲು ತೆಕ್ಕೊ,ಮತ್ತೆ ನೀನೇ  ರಾಜ.”

ಆಗದ್ದವು ಹಾಕಿದ ವಿಷದ ಬಿತ್ತು ಅವನ ಮಂಡೆಲಿ ಬೆಳೆದತ್ತು.

ಸುರು ಆತು ಅಸಹಕಾರ.

ಅಪ್ಪ ಹೇಳಿದ್ದರ ಮಾಡುಲಿಲ್ಲೆ,ಅವು ಹೇಳಿದ ಕಡೆಂಗೆ ಹೋಪಲೆ ಇಲ್ಲೆ.ತೋಟಕ್ಕೆ ಇಳಿವಲೇ ಇಲ್ಲೆ. ಎಲ್ಲಿಗಾದರೂ ತಿರುಗಲೆ ಹೋಪದು.ಮನೆಂದ ಬೇಕಾಷ್ಟು ಪೈಸೆ ತೆಕ್ಕೊಂಬದು.

ಮದುವೆ ಮಾಡಿರೆ ಮಗ ಸರಿ ಅಕ್ಕು ಹೇಳಿ ತಿಮ್ಮಣ್ಣನ ಅಪ್ಪ ಶಂಕರ ಭಟ್ರಿಂಗೆ ಊರವರ ಬಿಟ್ಟಿ ಸಲಹೆ ಸಿಕ್ಕಿತ್ತು.

ಸರಿ,ಕೂಸು ಹುಡುಕ್ಕಿದವು.ಪಾಪದವರ ಮನೆಯ ಕೂಸು ಶಾರದೆ ತಿಮ್ಮಣ್ಣನ ಕೈ ಹಿಡುದತ್ತು.ತಿಮ್ಮಣ್ಣ ರಜಾ ಸರಿ ಆದ-ಹೇಳಿ ಎಲ್ಲರಿಂಗೂ ಕಂಡತ್ತು. ಆದರೆ ಅದು ಬರೀ ಆರು ತಿಂಗಳು ಮಾತ್ರ.

ಮತ್ತೆ ಅದೇ ಕ್ರಮ ಸುರು ಆತು.ಅಪ್ಪ,ಅಮ್ಮ ಇದು ಸೊಸೆಯದ್ದೇ ತಪ್ಪು ಹೇಳಿ ಗ್ರೇಶಿದವು.ಶಾರದೆಯ ಜೀವನವೂ ಕಷ್ಟ ಅಪ್ಪಲೆ ಸುರು ಆತು.ಅದೂ ತಿಮ್ಮಣ್ಣನ ಮಾತಿಂಗೆ ತಾಳ ಹಾಕಿತ್ತು.ಸರಿ,ಮನೆ ಒಂದಾಗಿ ಒಳುದ್ದಿಲ್ಲೆ.

ಶಂಕರ ಭಟ್ರು ಮನಸ್ಸಿಲ್ಲದ್ದ ಮನಸ್ಸಿಂದ ಮಗಂಗೆ ಪಾಲು ಕೊಟ್ಟವು.ಮೋಸ ಮಾಡಿದ್ದವಿಲ್ಲೆ.ಸರಿಯಾಗಿ ಮೂರು ಎಕ್ರೆ ತೋಟ ,ಕಾಡು,ಗುಡ್ಡೆ ಎಲ್ಲಾ ಕೊಟ್ಟವು.ಒಂದು ಮನೆ ಕಟ್ಟಿಸಿ ಕೊಟ್ಟವು.

ತಿಮ್ಮಣ್ಣ ,ಶಾರದೆಯ ಹೊಸ ಸಂಸಾರ ಸುರು ಆತು.

ತೋಟದ ಕೆಲಸಲ್ಲಿ ತಿಮ್ಮಣ್ಣಂಗೆ ಶ್ರದ್ಧೆ ಕಮ್ಮಿ.ಶಾರದೆಯ ಒತ್ತಾಯಕ್ಕೆ ಮಾಡಿಕೊಂಡಿತ್ತಿದ್ದ.ಆಳುಗೊ ಇತ್ತಿದ್ದವು.ಕೆಲಸ ಸರಿಯಾಗಿ ನಡಕ್ಕೊಂಡಿತ್ತಿದ್ದು.ಎರಡು ವರ್ಷ ಒಳ್ಳೆ ಬೆಳೆ ಬಂದು ತಿಮ್ಮಣ್ಣನೂ ಊರಿಲಿ ಒಂದು ಜೆನ ಆದ.

ನಾಕು ವರ್ಷ ಕಳಾತು. ಶಾರದೆ ಹೆರಿಗೆಗೆ ಅಪ್ಪನ ಮನೆಗೆ ಹೋಯೆಕ್ಕಾಗಿ ಬಂತು. ಹೆರಿಗೆಲಿ ತೊಂದರೆ ಆಗಿ , ಶಸ್ತ್ರ ಚಿಕಿತ್ಸೆ ಮಾಡಿ ಮಗುವಿನ ತೆಗೆಕ್ಕಾತು.ಹಾಂಗಾಗಿ ಅದು ನಾಕು ತಿಂಗಳು ಅಲ್ಲಿಯೇ ಇತ್ತು.

ಮನೆಲಿ ತಿಮ್ಮಣ್ಣನದ್ದೇ ಕಾರ್ಬಾರು.ಶಾರದೆ ಬಪ್ಪಾಗ ಮನೆಯ ಅವಸ್ಥೆ ನೋಡಲೆ ಎಡಿಯ.ಕಸವು,ಬಲೆ ತುಂಬಿಕೊಂಡಿತ್ತು.ಅದಾದರೂ ಸಾರ ಇಲ್ಲೆ.ತೋಟಲ್ಲಿ? ಹುಲ್ಲು ,ಬಲ್ಲೆ ಬೆಳದ್ದು.ಗೊಬ್ಬರ ಹಾಕಿ ಆಯಿದಿಲ್ಲೆ. ನೀರು ಹಾಕಿದ್ದನೂ ಇಲ್ಲೆ.”ನಿಂಗೊ ಎಂತ ಮಾಡಿದಿ ಇಷ್ಟು ದಿನ?ಹೀಂಗೊ ತೋಟ ನೋಡುದು?”ಶಾರದೆ ಬಾಯಿ ಮಾಡಿತ್ತು.

ತಿಮ್ಮಣ್ಣ ಹುಳಿ ನೆಗೆ ಮಾಡಿದ-“ನವಗೆ ಎಷ್ಟು ಬೇಕು? ಈಗ ಆಳುಗೊಕ್ಕೆ ಸಂಬಳ ಹೆಚ್ಚಾಯಿದು. ಕೊಟ್ಟು ಪೂರೈಸ. ಕೆಲಸ ಮಾಡಿಸಿರೆ ಹನ್ನೆರಡು ಖಂಡಿ ಅಡಕ್ಕೆ ಅಕ್ಕು.ಏನೂ ಮಾಡಿಸದ್ದರೆ ನಾಕು ಖಂಡಿ ಸಿಕ್ಕುಗು.ಎನಗೆ,ನಿನಗೆ,ಮಗಂಗೆ ಎಷ್ಟು ಬೇಕು? ಸಾಲದೊ ಅದು?”

ಶಾರದೆಗೆ ಮೈ ಹರುಂಕಿಯೊಂಬ ಹಾಂಗೆ ಆತು.ಕೋಪಲ್ಲಿ ಗಂಡನ ಬೈದು ಬಿಟ್ಟತ್ತು.ತಿಮ್ಮಣ್ಣಂಗೆ ಎಂತದೂ ಅನಿಸಿದ್ದಿಲ್ಲೆ.ನೆಗೆ ಮೋರೆಲೇ ಎದ್ದು ಹೋದ ಹತ್ತರಾಣ ಮನೆಗೆ-ಇಪ್ಪತ್ತೆಂಟು ಆಡುಲೆ!

ಇನ್ನು ಇವರ ನಂಬಿರೆ ಆಗ-ಹೇಳಿ ಶಾರದೆಯೇ ಆಳುಗೊಕ್ಕೆ ಹೇಳಿ ಕಳಿಸಿತ್ತು,ಮೈದುನನ ಮೂಲಕ.

ಆಳುಗೊ ಬಂದವು-ಹೀಂಗೆ ಕೆಲಸ ಆತು ನಾಕು ವರ್ಷ. ಮತ್ತೆ ಕಾಲ ಬದಲಾತು.ಆಳುಗೊ ಸಿಕ್ಕುದು ಕಮ್ಮಿ ಆತು.ಶಾರದೆಗೆ ಮತ್ತೆ ಒಂದು ಹೆರಿಗೆ,ನಿತ್ರಾಣ ಎಲ್ಲಾ ಆಗಿ ಅದಕ್ಕೂ ನೋಡಿಯೊಂಬಲೆ ಎಡಿಯ.

ತೋಟ ಅರೂಪ ಆತು.ಸಿಕ್ಕಿದ್ದರ ಕೊಯಿಕ್ಕೊಂಬದು,ತಿಂಬದು- ಹೀಂಗೆ ಮಾಡಿದರೆ ಹೇಂಗೆ?ಶಾರದೆ ಪರಂಚುತ್ತು-ತಿಮ್ಮಣ್ಣ  ಅದರೆದುರು ಬರೀ ಕೆಪ್ಪ.ಅವಂಗೆ ಮೈ ಬಗ್ಗುಸಲೆ ಎಡಿತ್ತಿಲ್ಲೆ.ಕೆಲಸಕ್ಕೆ ಆರೂ ಇಲ್ಲೆ.ಬೀಡಿ ಎಳೆವದು ಜಾಸ್ತಿ ಆಗಿ ಉಬ್ಬಸವೂ ಸುರು ಆಯಿದು.ಅಪ್ಪನ ಹತ್ತರೆ ಪೈಸೆ ಕೇಳುಲೆ ಎಡಿಯ-ಅವ ಆ ಹಕ್ಕಿನ ಎಂದೋ ಕಳಕ್ಕೊಂಡಿದ.

ಒಂದು ದಿನ ಪೇಟೆಲಿ ಅಂಗಡಿ ಬಾಗಿಲಿಲಿ ಬೀಡಿ ಎಳಕ್ಕೊಂಡು ನಿಂದ ತಿಮ್ಮಣ್ಣನ ಒಂದು ಹುಡುಗನ ಬೈಕು ಬಂದು ಗುದ್ದಿ ನೂಕಿ ಹಾಕಿತ್ತು.ಹತ್ತು ದಿನ ಆಸ್ಪತ್ರೆಲಿ ಇದ್ದ ತಿಮ್ಮಣ್ಣ ಹೆಂಡತಿಯನ್ನೂ ಮಕ್ಕಳನ್ನೂ ನಡುನೀರಿಲಿ ಕೈಬಿಟ್ಟು ಹೋದ ಹಾಂಗೆ ಹೋದ.

ಶಾರದೆಯ ಅಪ್ಪನ ಮನೆಯವು ಬಂದವು.ಬೊಜ್ಜ ಆತು.

ಇನ್ನು ಈ ಜಾಗೆಯ ರೂಢಿಕೆ ಕಷ್ಟ  ಹೇಳಿ ತೀರ್ಮಾನಿಸಿದವು.ತೋಟವ ತಿಮ್ಮಣ್ಣನ ಒಬ್ಬ ತಮ್ಮಂಗೇ ಕ್ರಯ ಚೀಟು ಮಾಡಿ ಕೊಟ್ಟತ್ತು-ಶಾರದೆ.ಅವನೂ ಮೋಸ ಮಾಡಿದ್ದ ಇಲ್ಲೆ.ಸರಿಯಾದ ಕ್ರಯವನ್ನೇ ಕೊಟ್ಟ.ಸ್ಪ್ರಿಂಕ್ಲರ್ ಹಾಕಿಸಿ ತೋಟಕ್ಕೆ ಮರು ಜೀವ ಕೊಟ್ಟ.ಸತ್ತು ಹೋದ ಸೆಸಿಗಳ ಕಡುದು ಮಂಗಳ ಸೆಸಿ ಹಾಕಿಸಿದ.

ಶಾರದೆ ಅಪ್ಪನ ಮನೆಗೆ ಹೋತು.ಅದರ ಮಕ್ಕೊ ಕಲಿವಲೆ ಉಶಾರಿ ಇದ್ದ ಕಾರಣ ಅದಕ್ಕೆ ಮತ್ತೆ ರಜಾ ನೆಮ್ಮದಿಯ ಜೀವನ ಸಿಕ್ಕಿತ್ತು.”ಅಪ್ಪನ ಹಾಂಗೆ ತಪ್ಪು ಗ್ರಹಿಕೆಲಿ ಯಾವ ವ್ಯಾಪಾರ,ಕೆಲಸವನ್ನೂ ಮಾಡೆಡಿ…..”ಹೇಳಿ ಅದು ಮಕ್ಕೊಗೆ ಹೇಳಿಕೊಂಡೇ ಇದ್ದತ್ತು.

ಗ್ರೇಶಿದ್ದರಲ್ಲಿ ಆದ ತಪ್ಪು, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಧನ್ಯವಾದ. ನಿಂಗಳ ಬೆಂಬಲ ಹೀಂಗೆಯೇ ಇರಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಮಾಷ್ಟ್ರುಮಾವ°ಅನುಶ್ರೀ ಬಂಡಾಡಿವಿನಯ ಶಂಕರ, ಚೆಕ್ಕೆಮನೆಅಕ್ಷರ°ಎರುಂಬು ಅಪ್ಪಚ್ಚಿವಸಂತರಾಜ್ ಹಳೆಮನೆಜಯಶ್ರೀ ನೀರಮೂಲೆಬೊಳುಂಬು ಮಾವ°vreddhiಡೈಮಂಡು ಭಾವಮುಳಿಯ ಭಾವಸುಭಗಸಂಪಾದಕ°ಶೀಲಾಲಕ್ಷ್ಮೀ ಕಾಸರಗೋಡುಪುತ್ತೂರುಬಾವಜಯಗೌರಿ ಅಕ್ಕ°ವಿಜಯತ್ತೆಚುಬ್ಬಣ್ಣದೀಪಿಕಾಶಾಂತತ್ತೆಅಜ್ಜಕಾನ ಭಾವಸುವರ್ಣಿನೀ ಕೊಣಲೆನೆಗೆಗಾರ°ಶಾ...ರೀಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ