ಬರದೋರು :   ಅನಿತಾ ನರೇಶ್, ಮಂಚಿ    on   07/08/2014    8 ಒಪ್ಪಂಗೊ

ಅನಿತಾ ನರೇಶ್, ಮಂಚಿ
Latest posts by ಅನಿತಾ ನರೇಶ್, ಮಂಚಿ (see all)

ಬಾಗಿಲು ತಟ್ಟಿದಾಂಗೆ ಆತು..ಈಗ ಆರಪ್ಪಾ ಬಂದದು.. ಉಡುಗಿ ಉದ್ದಿ ಮಾಡುವ ಹೆಣ್ಣು ಆಗಷ್ಟೇ ಬಂದು ಹೋಗಿತ್ತು. ಶಂಕರ ಬಪ್ಪ ಹೊತ್ತಾಯಿದಿಲ್ಲೆ. ಇನ್ನಾರಾದಿಕ್ಕು ಹೇಳಿ ಆಲೋಚನೆ ಮಾಡ್ಯೊಂಡೇ ಬಾಗಿಲು ತೆಗದೆ. ಸಣ್ಣ ಕೂಸೊಂದು ಕೈಲಿ ಎರಡು ಮುಸಂಬಿ, ಒಂದು ಸಣ್ಣ ಪ್ಯಾಕೆಟ್ ಬ್ರೆಡ್ ಹಿಡ್ಕೊಂಡು ನಿಂದಿತ್ತು. ಚೆಂದದ ಕೆಂಪು ಬಣ್ಣದ ಅಂಗಿ ಹಾಕಿ ಒಪ್ಪಕ್ಕನ ಹಾಂಗೆ ತಲೆ ಬಾಚಿ ಎರಡು ಜುಟ್ಟು ಕಟ್ಟಿ ಗೊಂಬೆಯ ಹಾಂಗೆ ಕಂಡುಕೊಂಡಿತ್ತು. ಎನ್ನ ಮೋರೆ ನೋಡಿ ಗಲಿಬಿಲಿ ಆತದಕ್ಕೆ. ಪುನಃ ಹೆರ ಹೋಗಿ ರೂಮ್ ನಂಬರ್ ನೋಡಿ , ಸಾರ್ರೀ ಅಜ್ಜ,ರೂಮ್ ನಂಬರ್ ತಪ್ಪಿತ್ತು..ಇದು ೩೦೮ ಅಲ್ಲದಾ.. ಎನಗೆ ೪೦೮ಕ್ಕೆ ಹೋಯೆಕ್ಕಾದ್ದು.. ಇನ್ನೊಂದು ಸರ್ತಿ ಮೆಟ್ಲು ಹತ್ತಿ ಹೋಯೆಕ್ಕು.. ನಿಂಗೊಗೆ ಎಂತಾದು ಅಜ್ಜ.. ಒಬ್ಬನೆ ಇಪ್ಪದೆಂತಕೆ ನಿಂಗ.. ಅಜ್ಜಿ ಇಲ್ಲೆಯಾ” ಹೇಳಿ ಕೇಳಿತ್ತು.

ಎನಗೂ ಸಣ್ಣ ಕೂಸಿನ ಮಾತು ಕೇಳಿ ಕೊಶಿ ಆತು.. ಅದರ ರಜ್ಜ ಗಿರ್ಗಾಣ್ಸುಲೆ ‘ ಸಧ್ಯಕ್ಕೆ ಆನೊಬ್ಬನೇ ಇಪ್ಪದು. ಅಜ್ಜಿ ಇಲ್ಲೆ.. ಎಂತಕೆ ಹೇಳಿರೆ ಎನಗೆ ಮದುವೆಯೇ ಆಲ್ಲೆ.. ನಿನ್ನ ರೂಮಿಂಗೆ ಆರು ಬ್ರೆಡ್ ಪ್ಯಾಕೆಟ್ ಹಿಡ್ಕೊಂಡು ಬತ್ತವೋ ಅವರ ಅಜ್ಜಿ ಮಾಡಿಕೊಂಬಲಕ್ಕು ಹೇಳಿ ಡಾಕ್ಟ್ರು ಹೇಳಿದ್ದವು.ಈಗ ನೀನೆನಗೆ ಅಜ್ಜಿ ಆವ್ತೆಯಾ ಹೇಳಿ ಕೇಳಿದೆ.
ಅದಕ್ಕದು ಮೋರೆ ದೊಡ್ಡ ಮಾಡಿ ‘ ಎಬ್ಬೀ.. ಆನೆಂತರ ಅಜ್ಜಿ ಅಪ್ಪದು.. ನೋಡಿ ಆನೆಷ್ಟು ಸಣ್ಣ ಇದ್ದೆ. ಎನ್ನದು ಶಾಲೆಗೆ ಹೋಗಿಯೇ ಆಲ್ಲೆ.. ನಿಂಗೆಂತರ ಅಜ್ಜಾ.. ಅಷ್ಟು ಗೊಂತಾವ್ತಿಲ್ಲೆಯಾ.. ಹುಂ.. ಆನೀಗ ಹೋವ್ತೆ.. ಅಮ್ಮ ಕಾದುಕೊಂಡಿಕ್ಕು ಎನ್ನ.. ತಡ ಆದರೆ ಬಯ್ಗು.. ಹೇಳಿ ಹೆರಟತ್ತು.

ಅಕ್ಕು.. ನೀನೆನ್ನ ಅಜ್ಜಿ ಅಪ್ಪದು ಬೇಡ .. ಎನಗೆ ಪುಳ್ಳಿಯಕ್ಕಳೂ ಇಲ್ಲೆ.. ನೀನೆನ್ನ ಪುಳ್ಳಿ ಆಗು ಆತಾ ಹೇಳಿದೆ. ಚೆಂದಕ್ಕೆ ಕಣ್ಣು ಮಿಟುಕ್ಸಿ ‘ ಇದಕ್ಕು ಅಜ್ಜ.. ಇದಾ ಈ ಮುಸುಂಬಿ ನಿಂಗೊಗೆ.. ಎನ್ನ ಅಜ್ಜ ಆದ್ದಕ್ಕೆ ಹೇಳಿ ಬೇಡ ಹೇಳಿರೂ ಕೇಳದ್ದೆ ಒಂದು ಮುಸಂಬಿ ಎನ್ನ ಬೆಡ್ಡಿಲಿ ಮಡುಗಿಕ್ಕಿ ಓಡಿತ್ತು.
ಮನಸು ತುಂಬಿ ಬಂತು. ಮುಸುಂಬಿಯ ಹತ್ತರಾಣ ಟೀಪಾಯಿಲಿ ಮಡುಗಿದೆ.

ಕೋಣೆಯ ಒಳ ಟ್ಯೂಬ್ ಲೈಟಿನ ಬೆಣ್ಚಿ ಇಡೀ ದಿನ ಇರ್ತು. ಹಗಲೋ ಇರೊಳೋ ಹೇಳಿ ಗೊಂತಾಗದ್ದ ಹಾಂಗೆ.. ಅದರೊಟ್ಟಿಂಗೆ ಮಾಡ್ಲೆಂತ ಕೆಲಸ ಇಲ್ಲದ್ದೆ ಬರೀ ಮನುಗಿ ಮನುಗಿ ಆಸ್ಪತ್ರೆಲಿ ಗಂಟೆ ಗೊಂತಾವ್ತಿಲ್ಲೆ ಅಪ್ಪೋ.. ಮಂಚಲ್ಲೇ ಮಡಿಕ್ಕೊಂಡಿಪ್ಪ ವಾಚ್ ತೆಗದು ನೋಡಿದೆ.ಗಂಟೆ ಹತ್ತೂವರೆಯೂ ಆಯ್ದಿಲ್ಲೆ. ..ಆನು ಇಲ್ಲಿಗೆ ಸೇರಿ ನಾಲ್ಕು ದಿನ ಕಳುದತ್ತು.. ಮೊನ್ನೆ ಬೆಣ್ಚಿ ಬಿಡೆಕ್ಕಾರೆ ಇದ್ದಕ್ಕಿದ್ದ ಹಾಂಗೇ ಎದೆ ಹಿಡ್ಕೊಂಡ ಹಾಂಗೆ ಆತು. ರಜ್ಜ ಹೊತ್ತು ಬೋದವೇ ಇತ್ತಿಲ್ಲೆಯೋ ಏನೋ.. ಪುನಃ ಎಚ್ಚರಿಕೆ ಅಪ್ಪಗ ಸರೀ ಉದಿ ಆಗಿತ್ತು. ಬೇನೆ ಹಾಂಗೇ ಇತ್ತು ಹೇಳಿ ಆನೇ ಬಂದು ಇಲ್ಲಿಗೆ ಸೇರಿದ್ದು. ಎನ್ನವು ಹೇಳಿ ಇಪ್ಪ ತಂಗೆಕ್ಕೊಗೆ ತಮ್ಮಂದಿರಿಂಗೆ ಎಲ್ಲೊರಿಂಗು ವಿಷಯ ತಿಳ್ಸಿದೆ.ಹತ್ತರಾಣ ಮನೆಲಿಪ್ಪ ಶಂಕರಂಗೂ ಹೇಳಿದೆ. ಅವ ಪಾಪ ದಿನಾ ಹೊತ್ತೊಪ್ಪಗ ಕೆಲ್ಸ ಮುಗಿಶಿಕ್ಕಿ ಮನೆಗೆ ಹೋಪಗ ಒಂದು ಗಳಿಗೆ ಬಂದು ನೋಡಿಕ್ಕಿ ಎಂತಾರು ಬೇಕಾರೆ ತಂದು ಕೊಟಿಕ್ಕಿಹೋವ್ತ. ಹಾಂಗೆ ಮತ್ತೆ ಇಡೀ ದಿನ ಇಲ್ಲಿ ಕೂದರೆ ಅವಂಗೆ ಅವನ ಕೆಲಸ ಆಗಡದೋ..

ಮತ್ತೆ ಊರಿನೋರು ಆರಾದರು ಪೇಟೆಗೆ ಬಂದವು ಒಂದು ಗಳಿಗೆ ನಿಲ್ಕಿಕ್ಕಿ ಮಾತಾಡಿಕ್ಕಿ ಹೋವ್ತವು.ಕೆಲವು ಜನಂಗೊಕ್ಕೆ ಆನಿಲ್ಲಿಪ್ಪದುದೇ ಖುಶಿ ಹೇಳಿ.. ನಿನ್ನೆ ಆ ಮೇಗಾಣ ಮನೆಯ ಕೇಚಣ್ಣ ಬಂದವ ಎನ್ನ ಹೊಡೆಂಗೆ ಕಣ್ಣು ತಿರುಗ್ಸದ್ದೆ ಸೀದಾ ಬಾತ್ ರೂಮಿಂಗೆ ನುಗ್ಗಿ ಕೆಲಸ ಮುಗ್ಸಿಕ್ಕಿ ಬಂದವ ಎನ್ನ ನೋಡಿ “ಅಪ್ಪೋ ಈಚಣ್ಣ ನೀನು ಇಲ್ಲಿಪ್ಪದು ಲಾಯ್ಕಾತಿದ. ಬಸ್ಸಿಂದ ಇಳಿವಗಳೇ ಅಮಸರ ಆಗಿತ್ತು.ಮಾರ್ಗದ ಕರೆಲೆಲ್ಲಿದೇ ಒಂದು ಉಚ್ಚೊಯ್ವಲೆ ಜಾಗೆ ಇಲ್ಲೆ ನೋಡು. ಇದ್ದಲ್ಲೆಲ್ಲಾ ಬಿಲ್ಡಿಂಗುಗ. ನಿನ್ನ ನೆಂಪಾಗಿ ಕೂಡ್ಲೆ ಇಲ್ಲಿಗೆ ಬಂದೆ ಇದ. ಈ ಶುಗರ್ ಬಂದರೆ ಇದೊಂದು ರಾಮಾಯಣ ಮಾರಾಯ.. ಗಳಿಗ್ಗೆಗ್ಗೊಂದರಿ ಹೋಯೆಕ್ಕಪ್ಪದು. ಇದಾ ಈ ಗೋಣಿ ಚೀಲ ಒಂದು ಇಲ್ಲೆ ಕರೇಲಿ ಮಡುಗುತ್ತೆ ಅಕ್ಕೋ.. ಪೇಟೆಲಿ ರಜ್ಜ ಕೆಲಸ ಇದ್ದು ಅದರ ಮುಗಿಶಿಕೊಂಡು ಬತ್ತೆ. ಆನು ಪೇಟೆಗೆ ಹೆರಟ್ರೆ ಸಾಕು ಮಾರಾಯ ಎನ್ನ ಹೆಂಡತಿದು ಉದ್ದುದ್ದದ ಸಾಮಾನು ಪಟ್ಟಿ ಬತ್ತು. ಅದರೆಲ್ಲಾ ತುಂಬುಸ್ಯೊಂಡು ಹೋಯೆಕ್ಕಾರೆ ಸಣ್ಣ ಚೀಲ ಸಾಕಾವ್ತಿಲ್ಲೆ.ಪೇಟೆಲಿದೆ ಈಗ ಪ್ಲೇಸ್ಟಿಕು ಚೀಲ ಕೊಡ್ತವಿಲ್ಲೆನ್ನೆ ಕರ್ಮ.. ಬಪ್ಪಗ ಬತ್ತೆ ಮಿನಿಯೋ ಚೀಲ ಆರೂ ಕೊಂಡೋತ್ತಿಕ್ಕದ್ದೆ..” ಹೇಳಿ ಹೋದ ಪುಣ್ಯಾತ್ಮ. ಎನ್ನ ಹೇಂಗಿದ್ದೆ ಮಾರಾಯ.. ಹೇಳಿಯೂ ಕೇಳೆಕ್ಕು ಹೇಳಿದೆ ಕಂಡಿದಿಲ್ಲೇಳಿ ಅವಂಗೆ.. ಎಂತ ಜನಂಗೆಲ್ಲ ಇದ್ದವಪ್ಪಾ ದೇವಾ..

ಹ್ಹೋ .. ಟಕ್ ಟಕ್.. ಹೇಳಿ ಮೆಟ್ಟಿನ ಶಬ್ಧ ಕೇಳ್ತು. ಡ್ಯೂಟಿ ಡಾಕ್ಟ್ರ ಬಂದನಾ ಹೇಳಿ.. ಈಗವಂಗೆ ಎಂತ ಹೇಳುದಪ್ಪಾ.. ನಿನ್ನೆಯೇ ಹೇಳಿದ್ದ ‘ನಿಂಗಳ ಒಟ್ಟಿಂಗೆ ಇಪ್ಪಲೆ ಒಂದು ಜನ ಬಪ್ಪಲೆ ಹೇಳಿ .. ಇಲ್ಲದ್ರೆ ಆಸ್ಪತ್ರೆಂದಲೇ ಆಯಾ ಮಾಡಿಕೊಳ್ಳಿ..”

ಹೇಳುಲೆಂತ ಅವಕ್ಕೆ ಸುಲಭ.. ಇಲ್ಲಿ ಎನ್ನ ಒಟ್ಟಿಂಗೆ ನಿಂಬಲೆ ಜನ ಬೇಕನ್ನೆ..ಶಂಕರಂಗೂ ಇರುಳು ನಿಂಬಲೆಡಿಯ. ಪಾಪ ಅವನ ಕಣ್ಣು ಸರಿ ಇಲ್ಲದ್ದ ಮಗಳೊಂದಿಪ್ಪದು ಮನೆಲಿ..ಎನ್ನ ಮನೆಯವಕ್ಕೆ ಈಗ ಆರಿಂಗಾದರೂ ಪುರುಸೊತ್ತಿದ್ದಾ..ಬೇಕಾರೆ ಹೇಳು ಪೈಸೆ ಕಳ್ಸುತ್ತೆಯಾ.. ಸಧ್ಯಕ್ಕೆ ಪುಕುಳಿ ತೊರ್ಸುಲೂ ಪುರ್ಸೊತ್ತಿಲ್ಲದಷ್ಟು ಕೆಲಸ ಇದ್ದಣ್ಣ ಹೇಳಿ ಒಬ್ಬ ತಮ್ಮ ಹೇಳಿರೆ, ಮತ್ತೊಬ್ಬ ಇಪ್ಪದೇ ಹೆರ ದೇಶಲ್ಲಿ. ತಂಗೆಕ್ಕೊಗೆ ಅವರ ಮನೆ ತಾಪತ್ರಯ ಹೇಳಿ ಇದ್ದನ್ನೆ.. ಅಲ್ಲಾ .. ಇದರಲ್ಲಿ ಅವರ ತಪ್ಪೆಂತ ಇಲ್ಲೆ ಹೇಳುವ.. ಕಾಲಕ್ರಮವೇ ಹೀಂಗೆ ಈಗ.
ಹುಂ..ಈಗ ಸಧ್ಯಕ್ಕೆ ಎದ್ದು ಬಾತ್ ರೂಮಿಂಗೆ ಹೋಪದೊಳ್ಳೆದು.. ಡಾಕ್ಟ್ರ ಹೋದ ಮೇಲೆ ಹೆರ ಬಂದರಾತು..

ಡಾಕ್ಟ್ರನ ಅಜನೆ ದೂರ ಆದ ಮೇಲೆ ಮೆಲ್ಲಂಗೆ ಹೆರ ಬಂದೆ. ಬಾತ್ ರೂಮಿಲಿ ಡಾಕ್ಟ್ರ ಹೋದನಾ ಹೇಳಿ ಕೆಮಿಗೊಟ್ಟುಗೊಂಡು ಎಕ್ಕಳ್ಸಿ ನಿಂದು ರಜ್ಜ ಬಚ್ಚಿದ ಹಾಂಗಾತು .. ಹಾಸಿಗೆಲಿ ಮನುಗಿದೆ. ಕಣ್ಣು ಮುಚ್ಚಿರೂ ವರಕ್ಕು ಬೈಂದಿಲ್ಲೆ. ಇಡೀ ದಿನ ಹಾಸಿಗೆಲೆ ಬಿದ್ದುಕೊಂಡಿದ್ದರೆ ವರಕ್ಕು ಬಪ್ಪದಾದರೂ ಹೇಂಗೆ.ಆಗ ಬಂದ ಸಣ್ಣ ಕೂಸಾದರೂ ಬಂದಿದ್ರೆ ಮಾತಾಡ್ಲೆ ಆವ್ತಿತ್ತು. ಇಂದು ಶಂಕರ ಬಂದರೆ ಅವನತ್ರೆ ಪೈಸೆ ಕೊಟ್ಟು ರಜ್ಜ ಚಾಕ್ಲೇಟು ತರ್ಸಿ ಮಡುಗೆಕ್ಕು. ಪಾಪ ಆರಿಂಗೆ ಉಷಾರಿಲ್ಲದದಪ್ಪ.. ಅಷ್ಟು ಸಣ್ಣ ಕೂಸು ಬ್ರೆಡ್ ತೆಕ್ಕೊಂಡು ಹೋದ್ದು ಹೇಳಿ ಆದರೆ ಅದರ ಅಮ್ಮಂಗೆ ಉಷಾರಿಲ್ಲದ್ದದಾ ಹೇಳಿ.. ಛೆ.. ಕೇಳಿಕೆಕ್ಕಾತು ಆಗಳೇ .. ಅಲ್ಲಾ ಎಂತ ಹೆಡ್ದ ಆನು, ಆದರ ಹೆಸರು ಕೂಡಾ ಕೇಳಿದ್ದಿಲ್ಲೆನ್ನೆ….ಮೆಲ್ಲಂಗೆ ಎದ್ದು ರೂಮಿನ ಕರೆಲಿದ್ದ ಸಣ್ಣ ಬಾಲ್ಕನಿಲಿ ಇಪ್ಪ ಕುರ್ಚಿಲಿ ಕೂದೆ..
ಮತ್ತೆ ಆ ಪುಟ್ಟು ಕೂಸಿನ ನೆಂಪಾತು. ಹುಂ.. ಎಲ್ಲವೂ ಕಾಲ ಕಾಲಕ್ಕೆ ಅಪ್ಪ ಹಾಂಗೆ ಆಗಿದ್ದರೆ ಎನಗೂ ಅಷ್ಟು ದೊಡ್ಡ ಪುಳ್ಳಿ ಇರ್ತಿತ್ತು ಈಗ..ಆಗೆಲ್ಲಾ ತಮ್ಮಂದ್ರ ತಂಗೆಕ್ಕಳ ಚೆಂದಕ್ಕೆ ನೋಡಿಕೊಳ್ಳೆಕ್ಕು ಹೇಳುವ ಆದರ್ಶವೇ ಹೆಚ್ಚಾತು.. ಈಗ ಅವಕ್ಕೆಲ್ಲ ಅವರವರದ್ದೇ ಬದುಕು ಇದ್ದು. ಆನು ಬೇಡ ಹೇಳಿ ಅಲ್ಲ..ಆದರೆ ಎನ್ನ ನೋಡಿಕೊಂಬದು ಹೇಳುವ ಜವಾಬ್ಧಾರಿ ಕಷ್ಟದ್ದು ಹೇಳುವ ಆಲೋಚನೆ ಅವಕ್ಕೆಲ್ಲಾ ಇದ್ದು ಹೇಳಿ ಎನಗೆ ಗೊಂತಿದ್ದು.

ಎನ್ನ ತಲೆ ಎಲ್ಲೆಲ್ಲಿಗೆ ಓಡ್ತಿತ್ತೋ ಏನೋ.. ಅಷ್ಟಪ್ಪಗ ಪುನಃ ಬಾಗಿಲು ಶಬ್ಧ ಆತು.

ಊಟ ಬೇಕಾ ಹೇಳಿ ಕೇಳುಲೆ ಬಂದ ಕ್ಯಾಂಟೀನಿನ ಜನದ ಹತ್ತರೆ ಬರೀ ಒಂದು ಲೋಟ ಹಾಲು ತಾ ಸಕ್ಕರೆ ಹಾಕದ್ದೆ ಹೇಳಿ ಹೇಳಿದೆ. ರೂಮ್ ನಂಬರ್ ಮುನ್ನೂರೆಂಟು ಶುಗರ್ ಲೆಸ್ ಹಾಲು ಹೇಳಿ ಬರಕ್ಕೊಂಡತ್ತು. ಆನು ಇಲ್ಲಿಯಾಣವಕ್ಕೆ ಒಬ್ಬ ರೋಗಿ ಮಾತ್ರ. ಇಲ್ಲಿ ಎನ್ನ ಹೆಸರು, ವೃತ್ತಿ ಹೇಳಿರೆ ಎನ್ನ ಗುರ್ತ ಸಿಕ್ಕ. ರೂಮ್ ನಂಬರ್ ಮುನ್ನೂರೆಂಟು ಹೇಳಿರೆ ಸಧ್ಯಕ್ಕೆ ಆನು.. ಎಂತಾ ಅವಸ್ಥೆ ಕಾರುಗೊಕ್ಕೆ ಎಲ್ಲಾ ನಂಬರ್ ಇರ್ತನ್ನೆ ಹಾಂಗೆ ಮನುಷ್ಯರಿಂಗುದೆ ನಂಬರ್.., ರೂಮಿನ ಬಾಗಿಲಿನ ರಜ್ಜ ತೆಗೆದು ಮಡುಗಿ ಮತ್ತೆ ಬಾಲ್ಕನಿಲಿ ಕೂದೆ. ಹೆರಾಣ ತಣ್ಣಂಗೆ ಗಾಳಿಗೆ ಅಲ್ಲೇ ಮಂಪರು..

ಕೋಣೆಯೊಳ ಬಪ್ಪಗ ಕ್ಯಾಂಟೀನಿನ ಜನ ಅದ್ಯಾವಗಳೋ ತಂದು ಮಡುಗಿದ ಹಾಲು ತಣುದು ಕೋಡಿತ್ತು. ಅದರ ಹಾಂಗೆ ಗಂಟಲಿಂಗೆ ಎರಕ್ಕೊಂಡೆ. ಆಗ ಬಂದ ಪುಟ್ಟು ಕೂಸು ನೆಂಪಾತು. ಅದು ಈಗ ವರಗಿಕ್ಕು ಪಾಪದ್ದು ಹೇಳಿ ಎನ್ನಷ್ಟಕ್ಕೇ ಹೇಳಿಕೊಂಡೆ.ಕಣ್ಣು ಮುಚ್ಚಿ ಮನುಗಿದೆ.

ಅಬ್ಬಾ ಇರುಳು ಒಳ್ಳೆ ವರಕ್ಕು. ಸುಮಾರು ದಿನ ಆಗಿತ್ತು. ಶಂಕರ ಬಪ್ಪಗಳೆ ಎಚ್ಚರಿಗೆ ಆದ್ದು..ಅವನತ್ರೆ ಪೈಸೆ ಕೊಟ್ಟು ಚಾಕ್ಲೇಟ್ ತರ್ಸಿ ಮಡುಗಿದೆ. ಎನ್ನ ಕಣ್ಣು ಕೆಮಿ ಎಲ್ಲಾ ಬಾಗಿಲ ಕಡೆಗೆ.. ಆ ಪುಟ್ಟು ಕೂಸು ಪುನಃ ಬಕ್ಕೋ ಬಾರದೋ.. ಆನೇ ಅದು ಹೇಳಿದ ಕೋಣೆಗೆ ಹೋದರೆಂತ ಒಂದರಿ.. ಮೆಟ್ಲು ಹತ್ತುಲೆ ಆಗ ಹೇಳಿದ್ದವು ಡಾಕ್ಟು.. ಹೋದರೆ ಬಯ್ಗಿನ್ನು ..ಮತ್ತೆಂತಾರು ಆದರೆ ಪುನಃ ಇಲ್ಲೇ ಇಪ್ಪ ಶಿಕ್ಷೆ.. ಬೇಡ್ಲೇ ಬೇಡ..

ಹೆರ ರಜ್ಜ ನೆರಳು ಅಡ್ದ ಹೋದ ಹಾಂಗೆ ಆತು. ಬಾಗಿಲ ಕರೇಲಿ ಪುಟ್ಟು ಕೂಸು ನಿಲ್ಕಿಕೊಂಡು ಇತ್ತು.

ಬಾ ಒಳ ಹೇಳಿ ಕೈ ಭಾಷೆ ಮಾಡಿದೆ. ಅದು ಟಕ್ಕನೆ ಒಳ ಬಂದು ಎನ್ನ ಬೆಡ್ಡಿಲಿ ಕೂದು “ಅಜ್ಜಾ ಇಂದು ಎನ್ನ ಅಜ್ಜಿಗೆ ಆಸ್ಪತ್ರೆಂದ ಡಿಸ್ಚಾರ್ಜ್ ಆವ್ತು. ಆದರೆ ಅಪ್ಪಂದೇ ಅಪ್ಪಚ್ಚಿದೇ ಲಡಾ ಮಾಡ್ತಾ ಇದ್ದವು. ನಿನ್ನ ಮನೆಗೆ ಕರ್ಕೊಂಡು ಹೋಗು ನಿನ್ನ ಮನೆಗೆ ಕರ್ಕೊಂಡು ಹೋಗು ಹೇಳಿ.. ಎನಗೆ ಅಷ್ಟಪ್ಪಗ ನಿಂಗಳ ನೆಂಪಾತು. ನಿಂಗೊಗೆ ಅಜ್ಜಿ ಇಲ್ಲೆ ಅಲ್ಲದಾ.. ಎನ್ನ ಪಾಪದ ಅಜ್ಜಿಯ ನಿಂಗ ಕರಕ್ಕೊಂಡು ಹೋಗಿ ಆಗದಾ.. ಆನು ನಿಂಗಳಿಬ್ರನ್ನು ನೋಡ್ಲೆ ನಿಂಗಳ ಮನೆಗೆ ಬತ್ತೆ” ಹೇಳಿ ಹೇಳಿತ್ತು.

ಅಲ್ಲಾ ಈ ಪುಟ್ಟು ಮಕ್ಕಳ ಬಾಯಿಲಿ ಒಂದೊಂದರಿ ದೇವರೇ ಇರ್ತನಾ ಹೇಳಿ. ಎನ್ನ ಮನಸ್ಸಿಲಿ ಇಷ್ಟು ದಿನ ಕಂಡೂ ಕಾಣದ್ದ ಹಾಂಗೆ ಇದ್ದ ವಿಷಯಕ್ಕೆ ಈಗ ಸ್ಪಷ್ಟ ರೂಪ ಬಂತು.

ಈಗ ಎನ್ನ ಮನೇಲಿ ಆ ಪುಟ್ಟು ಕೂಸಿನ ಅಜ್ಜಿ ಇದ್ದು. ಅಜ್ಜಿಯ ಒಟ್ಟಿಂಗೆ ಅವರ ಹಾಂಗೆ, ಎನ್ನ ಹಾಂಗೆ ಇಪ್ಪ ಇನ್ನು ಕೆಲವು ಜನಂಗ ಎನ್ನ ಮನೆಗೆ ಬಯಿಂದವು. ಶಂಕರ ಈಗ ಎಂಗಳ ಮನೆಯ ಮೇಲ್ವಿಚಾರಕ ಆಯ್ದ. ಅವನ ಮಗಳು ಕೂಡಾ ಹಗಲಿಡೀ ಇಲ್ಲಿಯೇ ಎಂಗಳೊಟ್ಟಿಂಗೆ ಇರ್ತು. ಆರಿಂಗಾರು ಉಷಾರಿಲ್ಲದ್ರೆ ಎಲ್ಲಾರು ನೋಡಿಕೊಳ್ತೆಯ. ದಿನಿಗೇಳಿರೆ ಡಾಕ್ಟ್ರ ಬತ್ತ .. ಇನ್ನೆಂತಾಯೆಕ್ಕು ?? ಎಲ್ಲಾ ಒಟ್ಟಿಂಗೆ ಎಡಿಗಾದ ಕೆಲಸ ಮಾಡ್ತೆಯ. ಬೆಳಿಯಾದ ತಲೆ, ಬೊಚ್ಚು ಬಾಯ ಎಲ್ಲರ ಮೋರೆಲಿ ನೆಗೆ ಇದ್ದು. . ಮನೆಯ ಹೆರ ಚೆಂದದ ಪಳ ಪಳ ಹೊಳವ ಬೋರ್ಡು ಬೈಂದು. ಅದರಲ್ಲಿ ‘ಅಜ್ಜನ ಮನೆ’ ಹೇಳಿ ಬರಕ್ಕೊಂಡಿದ್ದು.

ಎನ್ನ ಹಳೇ ರೇಡಿಯೋಲ್ಲಿ ‘ಮಕ್ಕಳಾಟವು ಚೆಂದ, ಮತ್ತೆ ಯೌವನ ಚೆಂದ, ಮುಪ್ಪಿನಲಿ ಚೆಂದ ನರೆಗಡ್ಡ ಜಗದೊಳಗೆ ಎತ್ತಾ ನೋಡಿದರೂ ನಗು ಚೆಂದ’ ಹೇಳಿ ಪದ್ಯ ಬತ್ತಾ ಇದ್ದು.

8 thoughts on “ಅಜ್ಜನ ಮನೆ

  1. ಅಜ್ಜನ ಮನೆ ಬೋರ್ಡ್ ನೋಡಿ ಅಪ್ಪಗ ಕುಶಿ ಆತು. ಆದರೆ ಇಲ್ಲಿ ವಿಸ್ಯನೇ ಬೇರೆ. ಸೆಲ್ಯಾನತ್ತ್.
    ಇರಲಿ .

  2. ಮನಸ್ಸು ತಟ್ಟುವ ನಿರೂಪಣೆ . ಅಜ್ಜನ ಮನೆಗೋ ಈಗ ಜಾಸ್ತಿ ಆವ್ತಾ ಇದ್ದು. ಸಕಾಲಿಕ ಕತೆ.

  3. ಒಳ್ಳೆ ನಿರೂಪಣೆ. ಲಾಯಕ ವಸ್ತು. ಕತೆ ಪಷ್ಟಾಯಿದು.

  4. ಮನಸು ತಟ್ಟುವ ಕಥೆ ಲಾಯ್ಕ ಇದ್ದು ಅನಿತಕ್ಕ

  5. ನಿರೂಪಣಾ ಶೈಲಿ ತುಂಬಾ ಲಾಯ್ಕಿದ್ದು . ಬ್ರಹ್ಮಚಾರಿ ಅಜ್ಜನ ಮನಸ್ಸಿನ ನಿರಾಶೆಯ ನೆರಳಿನ ಮೀರಿ ನಿಂದ ಆಶಾವಾದದ ಅಂತ್ಯ ಕತೆಯ ಮತ್ತೆ ಓದುವ ಹಾಂಗೆ ಮಾಡಿತ್ತು . ಧನ್ಯವಾದ ಅನಿತಕ್ಕ .

  6. “ಅಜ್ಜನ ಮನೆ” ಶುದ್ದಿ ಕಡೇಂಗೆ ವರೆಂಗೆ ಕುತೂಹಲ ಒಳುಸೆಂಡು ಹೋತು. ವಾಸ್ತವ್ಯ ಎಷ್ಟು ಕಠೋರ ಹೇಳುವುದಕ್ಕೆ ಒಳ್ಳೆ ಉದಾಹರಣೆ ಇದು. ಮನಸ್ಸು ತಟ್ಟಿದ ಕಥೆ. ಎಡೆಲಿ ಆಸ್ಪತ್ರೆಗೆ ಕೇಚಣ್ಣ ಬಂದ ಘನ ಕಾರ್ಯ ಕೇಳಿ ನೆಗೆ ಬಂತು ಬೇಜಾರವುದೆ ಆತು. ಅನಿತಕ್ಕಾ, ಸೂಪರ್ ಕತೆ. ನಿಂಗೊ ಅಂದು ಬರದ ಅಜ್ಜಯ್ಯನ ಸ್ವಗತ ಕತೆಯುದೆ ನೆಂಪಾತು.

  7. ವಿಚಾರ ಒಳ್ಳೆದಾಯ್ದು. ಸುಮ್ಮನೆ ಕೂದಪ್ಪಗ ಹೀಂಗೊಂದು ಯೋಚನೆ ಬಪ್ಪಲಿದ್ದು. ಕಾರ್ಯರೂಪಕ್ಕೆ ತಪ್ಪಲೆ ಸುಲಭ ಇಲ್ಲೆ. ಎಲ್ಲಿ ಹೋದರುದೆ ಹೊಂದಾಣಿಕೆಯ ಸಮಸ್ಯೆ ಇದ್ದೇ ಇರ್ತು.

  8. ಆಸ್ಪತ್ರೆ ಲಿ ಅಜ್ಜ ಇಪ್ಪದು ಕೇಚಣ್ಣಂಗೆ ತುಂಬಾ ಅನುಕೂಲ ಆತದಾ… ಹೆರಿಯೋರ ನೋಡಿಗೊಂಬಲೆ ಈಗ ಆರಿಂಗುದೇ ಸಮಯವುದೇ ಇಲ್ಲೆ, ಮನಸ್ಸು ಮೊದಲೇ ಇಲ್ಲೆ . ಮನ ಹಿಂಡುವ ಕತೆ – ವಾಸ್ತವ ವಿಷಯಕ್ಕೆ ಹಿಡುದ ಕನ್ನಡಿ .

    * ಅನಿತಕ್ಕಾ ,ಕತೆ ಲಾಯಕ್ಕಾಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×