Oppanna.com

ಅಪಶಕುನ!!!

ಬರದೋರು :   suhaa...s suhas    on   09/04/2011    14 ಒಪ್ಪಂಗೊ

ಅಂತೂ ಇಂತೂ ನಮ್ಮ ಸುಕುಮಾರಂಗೆ ಅವನಪ್ಪನ ಸಾಹಸಂದ ಒಂದು ಕೆಲಸ ಹೇಳಿ ಸಿಕ್ಕಿತ್ತು . ಅಪ್ಪ ಆ ದಿನ ರಾತ್ರಿ, ಮಗನ ಹತ್ರಕ್ಕೆ ದಿನುಗೋಳಿ ಮಕ್ಕಳಾಟಿಕೆ ಬಿಟ್ಟುಇನ್ನಾದರೂ ತಿದ್ದಿಗೊ ಮಗನೇ  ಹೇಳಿ ಹೇಳಿದವು . ಇಷ್ಟು ದಿನ ಅಪ್ಪನ ಮಾತಿನ ಎಡದ ಕಿವಿಲಿ ಕೇಳಿ , ಬಲದ ಕಿವಿಲಿ ಬಿಡ್ತಾ ಇದ್ದ ಮಾಣಿ ಇಂದು ಯಾಕೋ ಗಂಭೀರವಾಗೇ ತೆಕ್ಕೊಂಡ°.

ಮಾರನೇ ದಿನ ಉದಿಯಪ್ಪಗ, ಸುಕುಮಾರ ಜ್ಞಾನೋದಯ ಆದವನ ಹಾ೦ಗೆ  ೫.೦೦ ಗಂಟೆಗೇ ಎದ್ದು ನಿತ್ಯದ ಕೆಲಸ ಮುಗುಶುಲೆ ಹೇಳಿ ಹೆರಟ°.ಹಾಂಗೆ ಮಿ೦ದಿಕ್ಕಿ ಮಡಿಲಿ ದೇವರಿಗೆ ಕೈ ಮುಕ್ಕೊಂಡಿಪ್ಪಗ ದೇವರ ತಲೆ ಮೇಲಿದ್ದ ಹೂಗು ಎಡದ ಹೊಡೆಂಗೆ ಬಿದ್ದತ್ತು , ಆಗ ಗಂಟೆ ೬.೦೦ ಆಗಿದ್ದತ್ತು. ರೂಮಿಂಗೆ ಹೋಗಿ ಹೊಸ ಪ್ಯಾಂಟು ಶರ್ಟು ಹಾಕಿಯೊಂಡು ಅಮ್ಮಂಗೆ ತೋರುಶುಲೆ ಹೇಳಿ ಹೆರ ಬಂದ, ಹಾಂಗೆ ಬಂದೊಂಡಿಪ್ಪಗ ಪಚಾಕ್ ಹೇಳಿ ಅವನ ಎಡ ಭುಜದ ಮೇಲೆ ಒಂದು ಹಲ್ಲಿ ಬಿದ್ದತ್ತು. ” ಛೆ ಹಾಳಾದ್ದು , ಶರ್ಟ್ ಎಲ್ಲಾ ಹಾಳು ಮಾಡಿತ್ತು” ಹೇಳಿ ಹಲ್ಲಿಗಿಷ್ಟು  ಉಗುದು , ಹಿಡಿಸೂಡಿ ತೆಕ್ಕೊಂಡು ಅದರ ಕೊಲೆ ಮಾಡಿ ಬೇರೆ ಅಂಗಿ ಹಾಕಿಯೊಂಡು ಬಂದ°.

ಸುಕುಮಾರ ತಿಂಡಿ ತಿಂದು  ಆಫೀಸಿಂಗೆ ಹೆರಟಪ್ಪಗ ಗಂಟೆ ೮.೦೦ ಆಗಿದ್ದತ್ತು , ಮನೆಯ ಹಿರಿಯರಿಂಗೆಲ್ಲ ನಮಸ್ಕಾರ ಮಾಡಿ ಹೆರ ಬಂದೊಂಡಿಪ್ಪಗ ಎಲ್ಲಿದ್ದತ್ತೊ, ಒಂದು ಕರೀ ಪುಚ್ಚೆ ಅಡ್ಡ ಬಂದತ್ತು . ಉದಿಯಪ್ಪಗಂದ ಆದ ಘಟನೆ ಎಲ್ಲ ನೋಡಿಯೊಂಡಿದ್ದಿದ್ದ ಕಮಲಜ್ಜಿ ಸುಕುಮಾರಂಗೆ ಸ್ವಲ್ಪ ಹೊತ್ತು ಕೂಪಲೆ ಹೇಳಿತು.ಯಾರ ಮಾತಿಂಗೂ ಕಿವಿ ಕೊಡದ ಸುಕುಮಾರ ಬಸ್ ಸ್ಟಾಂಡಿನತ್ರಂಗೆ ಓಡಿದ.

ಸುಕುಮಾರನ ಗಡಿಬಿಡಿಗೂ ಕಾರಣ ಇದ್ದತ್ತು, ಅವನ ಆಫೀಸಿನತ್ರಂಗೆ ಹೋಪಲೆ ಅವನ ಊರಿಂದ ಇದ್ದದು ಒಂದೇ ಬಸ್, ಅದೂ ೮.೧೫ ಕ್ಕೆ ಹೇಂಗೊ ಓಡಿಯೊಂಡು ಬಂದು ಬಸ್ಸಿಂಗೆ ಹತ್ತಿಯೇ ಬಿಟ್ಟ°. ಬಸ್ ಹೆರಟು ೫.೦೦ ನಿಮಿಷ ಆಗಿತ್ತಷ್ಟೇ ಒಂದು ತಿರುವಿಲ್ಲಿ  ಎದುರಿಂದ ಯಮಕಿಂಕರನಂಗೆ ಬಂದ ಲಾರಿಯವ° , ಬಸ್ಸಿನ ಎದುರಿಲ್ಲಿ ಹೋಗಿಯೊಂಡಿತ್ತಿದ್ದ ಕಾರಿಂಗೆ ಗುದ್ದಿ , ಮುದ್ದೆ ಮಾಡಿ , ಬಸ್ಸಿನ ಎದುರಿಂಗೆ ತಂದು ಮಡುಗಿದ°. ಕಾರಿಲ್ಲಿದ್ದವರ ಸ್ಥಿತಿ ನಿ೦ಗಳೆ ಊಹೆ ಮಾಡಿಯೊಳಿ, ಎದುರು ಸೀಟಿಲ್ಲಿ  ಕೂದೊಂಡಿತ್ತಿದ್ದ ಸುಕುಮಾರಂಗೆ ಆಗ ಪ್ರಾಣ ಬಾಯಿಗೆ ಬಂದಾಗೆ ಆಗಿದ್ದತ್ತು. ಹೇಂಗೊ ಸುಧಾರಿಸಿಯೊಂಡು ಕಣ್ಣು ಮುಚ್ಚಿ ಕೂದ°.

ಅನಿರೀಕ್ಷಿತ ದುರ್ಘಟನೆ೦ದಾಗಿ ವಾಹನ ಸ೦ಚಾರ ಅವ್ಯವಸ್ಥೆ ಆದ ಕಾರಣ  ಬಸ್ಸಿಂದ ಇಳುದ ಸುಕುಮಾರ ಸ್ವಲ್ಪ ಮುಂದೆ ಬಂದು ಆಟೊ ಮಾಡಿಯೊಂಡು, ಆಫೀಸಿ೦ಗೆ ಬಂದ°. ತನ್ನ ಉದ್ಯೋಗ ನೇಮಕಾತಿ ಕಾಕದವ  ಸ್ವಾಗತಕಾರಿಣಿಗೆ ತೋರಿಸಿದ. ಅವು  ಸ್ವಲ್ಪ ಹೊತ್ತು ಕೂಪಲೆ ಹೇಳಿದವು. ಆಗ ಅವಕ್ಕೆ ಎಲ್ಲಿಂದಲೊ ಒಂದು ಫೋನು ಬಂತು. ಮಾತಾಡಿಗೊ೦ಡಿದ್ದ ಸ್ವಾಗತಕಾರಿಣಿಯ ಮೋರೆಲಿ ಹೆದರಿಕೆಯ ಸುನಾಮಿ ಕಂಡ ಹಾ೦ಗಾತು ಸುಕುಮಾರ೦ಗೆ. ಕಾರಣ ಕೇಳಿದಾಗ ಅವು ಹೇಳಿದ್ದು ” ಪೋಲೀಸು ಸ್ಟೇಷನಿ೦ದ ಕಾಲ್ ಮಾಡಿದ್ರು, ನಮ್ ಬಾಸ್ ಅವ್ರು ಕಾರ್ ಅಪಘಾತದಲ್ಲಿ  ತೀರ್ಕೊಂಡ್ರಂತೆ !!”.

14 thoughts on “ಅಪಶಕುನ!!!

    1. ಅಣ್ಣಾವ್ರ ಆಶೀರ್ವಾದ ಇದ್ದರೆ ಒಳ್ಲೆದೇ ಆವುತ್ತು…

  1. ಸಣ್ಣದಾದರೂ ಚೊಕ್ಕಕೆ ಆಸಕ್ತಿಲಿ ಓದುಸಿತ್ತು ಈ ಕಥೆ.
    ಹಲ್ಲಿ ಬಿದ್ದವನ ಅವಸ್ಥೆ ಹೀ೦ಗಾತು,ಹಾ೦ಗಾರೆ ಆ ಬೋಸ್ ನ ಮೈ ಮೇಲ೦ಗೆ ದೊಡಾ ಹೆಗ್ಳನೇ ಬಿದ್ದಿತ್ತೋ ಎ೦ತ ಕರ್ಮವೋ !

  2. ಹಲ್ಲಿ ಬಿದ್ದರೆ ಹಲ್ಲಿಗೆ ಮರಣ ಹೇಳಿ .. ಭವಿಷ್ಯ ಬರದ್ದವೋ ಹೇಳಿ ————ಪಂಚಾಗಲ್ಲಿ…{ ಹಲ್ಲಿ ಪತನ ಪಲಲ್ಲಿ}

    1. ಮರಣ ಆರಿಂಗೆ ಹೇಳಿಯೂ ಯಾವಾಗ ಹೇಳಿಯೂ ಬರದ್ದವೇ ಇಲ್ಲೆ . ಛೆ ಒಟ್ಟಾರೆ ಕನ್ಫ್ಯೂಸ್ ಪಾ..

  3. ಹಾಂಗೆಂತೂ ಇಲ್ಲೆ…ಆನು ಮೊದಲೇ ಹೇಳಿದಂಗೆ ಇನ್ನು ಮುಂದೆ ಆನು ಬರವದೆಲ್ಲ ಕಾಲ್ಪನಿಕ…ಎಡೆ ಎಡೆಲಿ ಎನ್ನ ಅನುಭವಂಗಳ ಬರೆತ್ತೆ…

  4. ತೂತಣ್ಣ ಜೀವನಲ್ಲಿ ಕೆಲಸಕ್ಕೆ ಸೇರುವಲ್ಲಿವರೇಗೆ ಒಳ್ಳೆತ ಪೆಟ್ಟು ತಿಂದಿದವೋ ಹೇದೂ ಆವ್ತಪ್ಪ.
    ಅಂಗಿ ಗುಬ್ಬಿ ಹಾಕುವಾಗ ಮೇಗೆ ಕೆಳ ಆಯ್ದಿಲ್ಲೆ? ಪಾಂಟ್ ಹಾಕುವಾಗ ಝಿಪ್ ತುಂಡಾಯ್ದಿಲ್ಲೇ ?? ಚೆರ್ಪು ಭಾರ ತುಂಡಾಯ್ದಿಲ್ಲೆ??. ಅದೇಕೆ ನಿಂಗಳ ಬಸ್ಸು ಹೆರಟು ರಜಾ ದೂರ ಹೋದಪ್ಪಗ ಟಯರು ಪಂಚರ್ ಆಗದ್ದು?!

    ಕಾರಿನಡಿಲಿ ಇದ್ದದು ಅವ್ವು ಹೇಳಿಯಪ್ಪಗ ಇದಾ ಎದೆ ಧಸ್ಸಕ್ಕ್ ಹೇಳಿತ್ತಿಲ್ಲಿ.

    ಶಕುನ ಫಲ – ಪರಿಹಾರ ಬಗ್ಗೆ ತಿಳುದವು ಇಲ್ಲಿ ಬರದರೆ ಇದೀಗ ಇನ್ನೂ ಒಪ್ಪ ಅಕ್ಕು ತೂತಣ್ಣನ ಈ ಕೈಂಕರ್ಯ.

    ಮಾಡಿದಷ್ಟು ಚೊಕ್ಕ ಆಯ್ದು ತೂತಣ್ಣ. ಒಪ್ಪ.

  5. ಕಥೆ ಒಪ್ಪ ಆಯಿದು.
    {ಉದಿಯಪ್ಪಗಂದ ಆದ ಘಟನೆ ಎಲ್ಲ ನೋಡಿಯೊಂಡಿದ್ದಿದ್ದ ಕಮಲಜ್ಜಿ ಸುಕುಮಾರಂಗೆ ಸ್ವಲ್ಪ ಹೊತ್ತು ಕೂಪಲೆ ಹೇಳಿತು…}
    ಹಿರಿಯೋರ ಮಾತು ತಿರಸ್ಕಾರ ಮಾಡಿದರೆ ನಮಗೇ ಆಪತ್ತು ಬಪ್ಪದು… ಅವು ನಮ್ಮ ಒಳ್ಳೆಯದಕ್ಕೆ ಅಲ್ಲದಾ ಹೇಳುವದು.

    1. ಹಿರಿಯರ ಅನುಭವ ನಮ್ಮ ಪ್ರಾಯಕ್ಕೆ ಸಮ… ಅವು ಏನೇ ಹೇಳಿರೂ ಅದಕ್ಕೊಂದು ಅರ್ಥ ಇರ್ತು…ಅಲ್ಲದೊ?

  6. ವಿಚಿತ್ರ ತಿರುವಿನ ಕತೆ. ಒಳ್ಳೇ ನಿರೂಪಣೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×