Oppanna.com

ಕಾಣದ್ದ ಕೈ-ಬಾಲಂಗೋಸಿ-ಅಥವಾ ಪಶ್ಚಾತ್ತಾಪ

ಬರದೋರು :   ಶರ್ಮಪ್ಪಚ್ಚಿ    on   05/07/2017    13 ಒಪ್ಪಂಗೊ

ಕಾಣದ್ದ ಕೈ-ಬಾಲಂಗೋಸಿ-ಅಥವಾ  ಪಶ್ಚಾತ್ತಾಪಬಡೆಕ್ಕಿಲ ಸರಸ್ವತಿ

ಬಡೆಕ್ಕಿಲ ಸರಸ್ವತಿ ಅತ್ತೆ ಬರದ ಕಾಣದ್ದ ಕೈ ಕಥೆಯ ನಿಂಗೊ ಈ ಮೊದಲು ಓದಿದ್ದಿ. ಅದರ ಮುಂದುವರಿದ ಭಾಗ ಇಲ್ಲಿದ್ದು. ಓದಿ ನಿಂಗಳ ಒಪ್ಪಂಗಳ ಕೊಟ್ಟು ಪ್ರೋತ್ಸಾಹ ಕೊಡಿ.

***

ಈ ಭಯಂಕರ ದುರಂತಲ್ಲಿ ಬದುಕಿದ ಸುಂದರೇಶ, ಸದಾನಂದರ ಮನಃಸ್ಥಿತಿಯ ಊಹೆ ಮಾಡ್ಳೂ ಸಾಧ್ಯ ಆಗ. ಇವು ಇಂಜಿನಿಯರಿಂಗಿಲಿ ಚಿನ್ನದ ಪದಕವನ್ನೇ ಪಡದೊರಾದರೂ ಪ್ರಕೃತಿ, ಜೀವನ ಕಲೆ, ಇವುಗಳಲ್ಲಿ ಕಿಂಡರ್‍ಗಾರ್ಡನ್ ದರ್ಜೆಯೋರು ಹೇಳಿ ಸ್ಪಷ್ಟ ಗೊಂತಾವುತ್ತು. ಕಲ್ಕತ್ತಾ ಖರಗ್ ಪುರಂಗಳಲ್ಲಿ, ನೆರೆ ತೆರೆ ಇಲ್ಲದ್ದ ಸರೋವರದ ಹಾಂಗಿಪ್ಪ ಗಂಗಾನದಿಯ ಹಿನ್ನೀರಿಲಿ ದೋಣಿವಿಹಾರ ಮಾಡಿದ ಹಾಂಗೆ ಹೇಳಿ ಗ್ರೇಶಿದ್ದವು. ಕುದ್ರೋಳಿಯ ಗುರುಪುರ ನೇತ್ರಾವತಿಗೊ ಸಂಗಮ ಆವ್ತಾ ಇಪ್ಪ ಹೊಳೆಗೂ ಗಂಗಾವಿಹಾರಕ್ಕೂ ಅಜಗಜಾಂತರ ಎಂಬ ವಿಷಯದ ಪರಿಜ್ಞಾನ ಅವಕ್ಕೆ ಇರ್ತಿದ್ದರೆ ಇಂಥ ದುಸ್ಸಾಹಸಕ್ಕೆ ಹೋವುತ್ತಿದ್ದವೋ? –ಇನ್ನೊಂದು ಹೊಡೆಲಿ ಅವರವರ ಕ್ಷೇತ್ರಲ್ಲಿ ಬುಧ್ಧಿವಂತರಾಗಿದ್ದ ಸೋದರ ಮಾವಂದ್ರು ಪ್ರಸಿಧ್ಧಿ ಪಡಕ್ಕೊಂಡ ಸರಕಾರೀ ವಕೀಲ ರಾಮರಾಯ ಇವುದೇ ಭೂ, ವಾಯು, ಜಲ ಇವುಗಳ ಪ್ರಕೃತಿ ಸ್ವಭಾವದ ವಿಷಯಲ್ಲಿ ಅನನುಭವಿಗಳೇ ಎಂಬುದು ನಮ್ಮ ಮನಸ್ಸಿಂಗೆ ಕಾಣ್ತು. ಇನ್ನೊಂದು, ಕಾಲಪುರುಷನ ಮಾಯೆಯ ಬಲೆಲಿ ಎಲ್ಲೋರೂ ಮೀನುಗಳೇ ಆಗಿ ಹೋಪದಿದ್ದು. ಇದು ಇನ್ನೂ ಕೆಲವು ಪ್ರಸಂಗಂಗಳಲ್ಲಿ ಅನುಭವಕ್ಕೆ ಬತ್ತು. ಅದಕ್ಕೊಂದು ಉದಾಹರಣೆಯ ಕೊಡ್ತೆ. (ಒಂದು ನಿಮಿಷ-ಎನ್ನ ಪುಳ್ಳಿ “ಎಂತ ಹೀಂಗೆ ದುಃಖದ ಕಥೆ ಹೇಳ್ತೆ” ಹೇಳಿ ಕೇಳ್ತು. ಎಂತ ಮಾಡುದು? ದುಃಖದ ವಿಚಾರಂಗೊ ಮನಸ್ಸಿನ ಮೇಲೆ ಬರೆ ಎಳದ ಹಾಂಗೆ ಶಾಶ್ವತ ಒಳುದು ಹೋವ್ತು, ಮರದೇ ಹೋವ್ತಿಲ್ಲೆ)

ಅಪ್ಪಯ್ಯ ನಾಲ್ಕು ಕೂಸುಗಳಅಪ್ಪ°. ಉಡುಪಿ ಬಸ್‍ಸ್ಟಾಂಡಿಲಿ ಉಪ್ಪಿನಂಗಡಿಗೆ ಹೋಪ ಬಸ್ಸಿಲಿ ಹತ್ತಿ ಕೂಯಿದ°. ಇನ್ನೇನು ಬಸ್ಸು ಹೆರಡಲಾಯಿದು. ಅಷ್ಟಪ್ಪಗ ಅವನ ನೆರೆಕರೆಯ  ಒಬ್ಬ ಕಾರ್ ಡ್ರೈವರ್ ಇವನ ಬಸ್ಸಿಲಿ ನೋಡಿ “ ಬಲೆ ಅಣ್ಣೆರೆ, ಎನ್ನ ಕಾರ್‍ಡ್ ಜಾಗೆ ಉಂಡು, ಬೇಕ ಎತ್ತುಂಡು” ಹೇಳಿ ಅಪ್ಪಯ್ಯನ ಮೇಲಾಣ ಗೌರವ, ಪ್ರೀತಿಂದ ದಿನಿಗೇಳಿತ್ತು. ಇವ° ಒಂದಾರಿ ಬೇಡ ಹೇಳಿದರೂ, ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಬಸ್ಸಿಂದ ಇಳುದು ಕಾರಿಲಿ ಕೂದ°. ಮಾಣಿ ವರೇಗೆ ಕುಶೀಲಿ ಹೋದ°. ರಜ ಮುಂದೆ ಹೋಗಿ ಅಪ್ಪಗಒಂದು ಲಾರಿ ರಭಸಲ್ಲಿ ಬಂದು ಕಾರಿನ ಒಂದು ಹೊಡೆಂಗೆ ಗುದ್ದಿತ್ತು. ಅಪ್ಪಯ್ಯ° ಅಲ್ಲೇ ’ಖಲಾಸ್’! ಎಲ್ಲಾ ಜನ ಸೇರಿದವು ರಜ ಹೊತ್ತಿಲಿ ಅವ° ಹತ್ತಿಕ್ಕಿ ಇಳುದ ಬಸ್ಸೂ ಬಂತು. ಎಂತ ಅನಾಹುತ ನೋಡ್ಳೆ  ಬಸ್ಸಿಂದ ಇಳುದವು. ನೋಡಿದರೆ ಬಸ್ಸಿಂಗೆ ಹತ್ತಿ ಕೂದು ಮತ್ತೆ ಇಳುದು ಕಾರಿಂಗೆ ಹತ್ತಿದೋನೆ!. ಎಲ್ಲೋರ ಕಣ್ಣಿಲಿ ನೀರು. ಆಶ್ಚರ್ಯದ ಸಂಗತಿ ಎಂತ ಹೇಳಿದರೆ, ಕಾರಿಲಿದ್ದ ಒಳುದ ಜೆನಂಗೊಕ್ಕೆ ಒಂದು ಸಣ್ಣ ಗಾಯವೂ ಆಯಿದಿಲ್ಲೆ. ಇದಕ್ಕೆ ಎಂಥ ವ್ಯಾಖ್ಯಾನ ಬರವಲಕ್ಕು? ಯಮರಾಯ ಯಾವ್ಯಾವ ರೂಪಲಿ ಪ್ರತ್ಯಕ್ಷ ಆವುತ್ತಾ ಹೇಳಿ ಆರಿಂಗೂ ಹೇಳುಲೆಡಿಯ. ಇದರಲ್ಲಿ ತಪ್ಪು ಆರಿಂದು? ಪರಮಾತ್ಮನೇ ಹೇಳೆಕ್ಕಷ್ಟೆ

***~~***

ಕಾಣದ್ದ ಕೈ ಇದರ ಮೊದಲಾಣ ಭಾಗ ಇಲ್ಲಿದ್ದು 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

13 thoughts on “ಕಾಣದ್ದ ಕೈ-ಬಾಲಂಗೋಸಿ-ಅಥವಾ ಪಶ್ಚಾತ್ತಾಪ

  1. ನೈಜ ಘಟನಾವಳಿಗಳ ಎಳೆಗೊ ಬಡೆಕ್ಕಿಲ ಅತ್ತೆಯ ಪತ್ತಾಯಂದ ಬತ್ತ ಉದುರುತ್ತಾಂಗೆ, ಉದುರಲಿ. ನಾವೆಲ್ಲಾ ಎಡಿಗಾಷ್ಟು ಬಾಚಿಗೊಂಬೊಂ.

  2. ಶೇಕ್ಸ್ಪಿಯರ್ ನ ದುರಂತ ನಾಟಕದ ಹಾಂಗೆ ಎನ್ನ ಅತ್ತೆ ಬರದ ಘಟನೆಗೊ ದುಃಖದಾಯಕವಾಗಿದ್ದು. ಶೇಕ್ಸ್ಪಿಯರ್ ಂಗೆ ಆದರೆ ಚಾಯ್ಸ್ ಇದ್ದತ್ತು. ಎನ್ನ ಅತ್ತಗೆ ಅದಿಲ್ಲೆ. ಏಕೆ ಹೇದರೆ ಅವು ನೈಜ ಘಟನೆಗೊ.

  3. ಅತ್ತೆಯ ಕತೆ ಓದಿ ಕಣ್ಣು ತುಂಬಿ ಬಂತು.ಅವರ ಅನುಭವದ ಭಂಡಾರಲ್ಲಿ ಇನ್ನೂದೆ ಎಷ್ಟು ಕತೆಗೊ ಹುಗ್ಗಿ ಕೂದೊಂಡಿದ್ದೋ..ಕಾಯ್ತಾ ಇದ್ದೆ..

  4. ಚೆ. ತುಂಬಾ ಬೇಜಾರಾತು. ಹಣೆ ಬರಹ ಹೇಳಿದರೆ ಇದುವೆ.

  5. ಕಾಣದ್ದ ಕೈ ಒಳ್ಳೆ ತಲೆಬರಹ . ಒಪ್ಪ

  6. ವಿಜಯಕ್ಕ ನ ಅಭಿಪ್ರಾಯ ಅಥವಾ ಕಥೆ ಬತ್ತಿಲ್ಲೆ. ಎಂತ ವಿಜಯಕ್ಕ ?ಅಭಿಪ್ರಾಯ ದ ಪುಟಲ್ಲಿ ವಿಜಯತ್ತೆ ಹೇಳಿ ಕಾಂಬ ವಿಜಯಕ್ಕ ನ ಅಭಿಪ್ರಾಯ ಏಕೆ ಬತ್ತಿಲ್ಲೆ?

    1. ಇಂಟರ್ನೆಟ್ ಓಪನ್ ಆವುತ್ತಿಲ್ಲೆ ಶಂಕರಣ್ಣಾ, ಎರಡು ದಿನಂದ . ಇಷ್ಟು ಸಿಕ್ಕೆಕ್ಕಾರೆ ಆನು ಎವಾ ಹೊತ್ಹಿಂದ ಕಾದುಕೂಯಿದೆ ಗೊಂತಿದ್ದೋ ಈ ಲೇಕನ ಓದದ್ದೇ ನಿಂಗಳತ್ರೆ ಪಟ್ಟಂಗಾ.

  7. ನಿಂಗೊ ಅಪ್ಪಯ್ಯ ಹೇಳಿದ್ದು ನಿಂಗಳ ಅಪ್ಪನನ್ನೊ ಹೇಳಿ ಕೆಲವು ಜೆನಕ್ಕೆ ಸಂಶಯ ಬಯಿಂದು ಅತ್ತೆ. ಅಪ್ಪಂಗೆ ಅಪ್ಪಯ್ಯ ಹೇಳುವ ಕ್ರಮ ಇದ್ದು. ಎನಗೆ ಆದರೆ ಗೊಂತಿದ್ದು. ಎಲ್ಲೋರಿಂಗೆ ಗೊಂತಿಲ್ಲೆ. ನಿಂಗೊ ಸಂಶಯ ನಿವಾರಣೆ ಮಾಡುಲಕ್ಕು ಅತ್ತೆ. ಸುರುವಿಂಗೆ ಎನಗೂ ಸಂಶಯ ಬಂತು.

    1. ಅತ್ತೆಯ ಕತೆಗೊ ಇನ್ನು ಬಪ್ಪದರಲ್ಲಿ ಬೇಜಾರು ಸಂಗತಿ ಇಲ್ಲದ್ದ ಹಾಂಗೇ ಇಪ್ಪದು ಇದ್ದು. ರಜಾ ಸಮಯ ಕಾದು ನೋಡಿ

  8. ನಿಜ ಘಟನೆ ಓದಿ ಬೇಜಾರಾತು. ನಮ್ಮ ಹಿರಿಯರು ಈಗ ನಾವಿಪ್ಪಷ್ಟು ಅನುಕೂಲಲ್ಲಿ/ಕುಶಿಲಿ ಇತ್ತಿದ್ದವಿಲ್ಲೆ. ಎಕ್ಕಸಕ್ಕ ಬಡತನವುದೇ ದೊಡ್ಡ ಕೂಡು ಕುಟುಂಬವುದೇ.

  9. ಎಂಗಳ ಶಿವರಾಮ ಕಾದುಕೂದೊಂಡು ಇತ್ತಿದ್ದ ಅತ್ತೆ ನಿಂಗಳ ಕತೆಯ ಓದುಲೆ. ಈಗ ಅವಂಗೆ ಕೊಶಿ ಅಕ್ಕು ‌ .ಘಟನಗೆ ಬೇಜಾರ ಅಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×